-ಅಜಿತ್ ಎಸ್ ಶೆಟ್ಟಿ
ಕೇಸರಿ ಅಂಗಿ, ಕೇಸರಿ ಶಾಲು, ಕೇಸರಿ ಟೋಪಿ , ಕೇಸರಿ ಶೂಗಳು , ಕೇಸರಿ ಬಣ್ಣದ ಸೈಕಲ್ , ಅದಕ್ಕೆ ಕೇಸರಿ ಬಣ್ಣದ ಚಕ್ರಗಳು ,ಕೇಸರಿ ಪೆನ್ ಯಿಂದ ಹಿಡಿದು ಕೇಸರಿ ಬಣ್ಣದ ಮೊಬೈಲ್ ತನಕ ಎಲ್ಲವೂ ಕೆಸರಿನೇ. ಹಿಂದುತ್ವವಾದಿ ಯಾದರೂ ಮನೆಯಲ್ಲಿ ಯಾವದೇ ದೇವರ ಫೋಟೋ ಇಲ್ಲ. ಇರುವದು ಎರಡೇ ಎರಡು ಫೋಟೋಗಳು ಅವರುಗಳೇ ಇವನ ಪಾಲಿಗೆ ದೇವರು. ಆ ಫೋಟೋ ಗಳು ಬೇರೆ ಯಾರದ್ದು ಅಲ್ಲಾ ಮರಾಠ ಸೇನಾಧಿಪತಿ , ಹಿಂದೂ ಹೃದಯ ಸಾಮ್ರಾಟ್ , ಹುಲಿ, ಬಾಳಾ ಸಾಹೇಬ್ ಠಾಕ್ರೆ ಮತ್ತು ಅವರ ಪತ್ನಿ ಮೀನಾ ಅವರದ್ದು . ಅವರನ್ನು ಅರಾಧಿಸುತಿರುವವರು 52 ರ ಹರೆಯದ ಪೂನಾ ಜಿಲ್ಲೆಯ ನಂಗೋನ್ ಎಂಬಲ್ಲಿನ ಮಹಾದೇವ್ ಯಾದವ್. ನಾವು ಇಂಥ ಸಾವಿರಾರು ಠಾಕ್ರೆ ಅಭಿಮಾನಿಗಳನ್ನು ಮಹಾರಾಷ್ಟ್ರದಲ್ಲಿ ನೋಡಬಹುದು .
ಇಂದು ಬಾಳಾ ಸಾಹೇಬ್ ಯನ್ನು “ತಮಿಳು ವಿರೋಧಿ” “ಕನ್ನಡಿಗರ ಪಾಲಿನ ಶತ್ರು ” ಉತ್ತರ ಭಾರತೀಯರು ಮತ್ತು ಗುಜರಾತಿಗಳ ಪಾಲಿಗೆ ಕಂಟಕರಾಗಿದ್ದವರೆಂದು ಬೆರಳೆಣಿಕೆ ಎಷ್ಟು ಇರುವ ಅವರ ವಿರೋಧಿಗಳು ಕರೆಯಬಹುದು . ಆದರೆ ಅದು ಬಾಳಾ ಸಾಹೇಬ್ ಠಾಕ್ರೆ ಯವರ ವ್ಯಕ್ತಿತ್ವದ ಮುಂದೆ ಗೌಣವಾಗುತದೆ . ಠಾಕ್ರೆ ವ್ಯಕ್ತಿತ್ವ ಅಂತಹುದು ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳುತಿದ್ದ . ಎಲ್ಲಿಯೂ ಎಡಬಿಡಂಗಿ ತರ ವರ್ತಿಸುತಿರಲಿಲ್ಲ. ಉದಾಹರಣೆ ಸಮೇತ ಸಮರ್ಥಿಸಿಕೊಳ್ಳುತಿದ್ದರು. ಅದು ಇಂದಿರೆ ಹೇರಿದ ತುರ್ತು ಪರಿಸ್ಥಿತಿಯಿಂದ ಹಿಡಿದು ಹಿಟ್ಲರ್ ಬಗೆಗಿನ ಠಾಕ್ರೆ ಅಭಿಮಾನದವರೆಗೆ. ದೇಶಕ್ಕೆ ಕಳಂಕದಂತಿದ್ದ , ಗುಲಾಮತೆಯ ಪ್ರತೀಕದಂತೆ ಭಾಸವಾಗುತಿದ್ದ ಬಾಬ್ರಿ ಮಸೀದಿ ದ್ವಂಸದಿಂದ, ಭಾರತ-ಪಾಕ್ ಕ್ರಿಕೆಟ್ ಪಂದ್ಯದ ತನಕ. ಎಲ್ಲಿಯೂ ರಾಜಿ ಇರಲಿಲ್ಲ. ಬಾಳಾ ಸಾಹೇಬ್ ಠಾಕ್ರೆ ಒಬ್ಬ ಭಾಷಾಪ್ರೇಮಿಯಾಗಿದ್ದರು ಅಪ್ರತಿಮ ದೇಶಭಕ್ತ, ಒಬ್ಬ ಹುಟ್ಟು ಹೋರಾಟಗಾರ, ಅಂಜದೇ ಅಳುಕದೇ ಯಾರಿಗೂ ತಲೆಬಾಗದೆ ತಾನು ನಂಬಿಕೊಂಡು ಬಂದಿರುವ ತತ್ವ ಸಿದ್ದಾಂತವನ್ನು ಪ್ರತಿಪಾದಿಸುವವ. ತಮ್ಮವರ ಹಕ್ಕಿಗಾಗಿ ಹೋರಾಡಿದ ಧೀಮಂತ ನಾಯಕ. ತನ್ನ ಶಕ್ತಿಯ ಮೇಲೆ, ತನ್ನ ಜನರ ನಂಬಿಕೆ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಅದ್ಬುತ ಮಾತುಗಾರ. ತನ್ನ ನಂಬಿರುವ ತನ್ನ ಜನರ ಭರವಸೆ ಎಂದು ಹುಸಿಗೊಳಿಸದ, ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಸಿಕೊಟ್ಟ “ಸರ್ಕಾರ್” . ಉಳಿದವರಿಗೆ ಸ್ಪೂರ್ತಿಯ ಚಿಲುಮೆ . ಒಬ್ಬ ವ್ಯಂಗ್ಯ ಚಿತ್ರಗಾರ ನಾಗಿ ಬದುಕು ಪ್ರಾರಂಭಿಸಿದ ಬಾಳಾ ಸಾಹೇಬ್ ಠಾಕ್ರೆ ಬೆಳೆದು ಬಂದ ಅವನ ವಿರೋಧಿಗಳು ಮೆಚ್ಚುವಂಥಹುದು . ಅದಕ್ಕೊಂದು ಸಲಾಂ ಹೇಳಲೇ ಬೇಕು. ವಿವಾದಾತ್ಮಕ ವಾಗಿದ್ದರೂ ವರ್ಣರಂಜಿತ ಬದುಕು.
ಸ್ವಾತಂತ್ರ್ಯ ನಂತರ ಅಂದಿನ ಗೃಹಮಂತ್ರಿ ಸರ್ಧಾರ್ ವಲ್ಲಭಭಾಯಿ ಪಟೇಲರು ಭಾಷಾವಾರು ವಿಂಗಡಣೆ ಯಿಂದ ಆಗುವ ಅನಾಹುತ ಮನಗಂಡು ಅದನು ವಿರೋಧಿಸಿದ್ದರು. ಆದರೆ ಪ್ರಧಾನಿ ನೆಹರು ‘ಡೋಂಟ್ ಕೇರ್ ” ಎಂದು ಆ ಪ್ರಸ್ತಾಪ ತಿರಸ್ಕರಿಸಿದರು. ಆ ಸಂದರ್ಭದ ಮಹಾರಾಷ್ಟ್ರ ಏಕೀಕರಣ ಹೋರಾಟದಲ್ಲಿ ಬಾಳಾ ಸಾಹೇಬ್ ಠಾಕ್ರೆ ಮುಂಚೂಣಿ ಪಾತ್ರವಹಿಸಿದರು. ಅಂದಿನ ಬೊಂಬಾಯಿ ಯನ್ನು ರಾಜಧಾನಿಯಾನ್ನಗಿಸಿ ಪ್ರತ್ಯೇಕ ಮಹಾರಾಷ್ಟ್ರ ರಾಜ್ಯ ರಚನೆ ಹೋರಾಟದಲ್ಲಿ ಯುವ ನಾಯಕರಾಗಿ ಬಾಳಾ ಜನಮನ ಗೆದ್ದರು . ಮುಂಬಯಿಗೆ ಗುಜರಾತಿ ಮಾರ್ವಾಡಿಗಳು , ದಕ್ಷಿಣದ ತಮಿಳರೂ , ತುಳುವರು,ಕನ್ನಡಿಗರು ವ್ಯವಹಾರಕ್ಕೆ ಬಂದಿದ್ದರು . ಜೊತೆಗೆ ಉತ್ತರ ಪ್ರದೇಶದ ಭೈಯಾಗಳು , ಬಿಹಾರಿಗಳು. ಕೇರಳದ ಮಲೆಯಾಳಿಗಳು. ಒಟ್ಟಿನಲ್ಲಿ ಮುಂಬಯಿ “ಚೋಟ ಭಾರತವಾಗಿತ್ತು “. ಹೊರರಾಜ್ಯದಿಂದ ಬಂದಿದ್ದ ಮಾಲೀಕರುಗಳೂ , ಕಮ್ಮುನಿಷ್ಟರು , ಕಾರ್ಮಿಕ ಸಂಘಟನೆಗಳು ಬಲವಾಗಿಯೇ ಇದ್ದವು. ಯಾರು ಸ್ಥಳೀಯರಿಗೆ ಉದ್ಯೋಗ ಕೊಡುತೀರಲಿಲ್ಲ. ವ್ಯವಹಾರಿಕವಾಗಿ ಖಾಸಗಿ ಸಂಸ್ಥೆ ಗಳು ಮೂಲ ನಿವಾಸಿಗಳಿಗೆ ಕೆಲಸ ಕೊಡಲು ಅಂಜುತ್ತಾರೆ ಅವರುಗಳು ಎಲ್ಲಿ ಒಗ್ಗಟ್ಟಾಗಿ ಪ್ರತಿಭಟಿಸುವರು ಎನ್ನುವ ಭಯ. ಅದು ಸರ್ವೇ ಸಾಮಾನ್ಯ . ಅಂದಿನ ಪರಿಸ್ಥಿತಿ ಹೇಗಿತ್ತು ಎನ್ನುವದನ್ನು ಮುಂಬೈಯಲ್ಲಿ ನೆಲೆಸಿರುವ ಹಿರಿಯರನ್ನು ಕೇಳಿ ತಿಳಿದುಕೊಳ್ಳಬೇಕು. ಹೀಗೆ ತನ್ನ ನೆಲದಲ್ಲಿ ತನ್ನ ಜನರು ಉದ್ಯೋಗಾವಕಾಶದಿಂದ ವಂಚಿತರಾಗಿ ನಿರರ್ಶಿತರಾಗ ತೊಡಗಿದರೋ ಅವಾಗ ತನ್ನವರ ಹಿತರಕ್ಷಣೆಗೆ ತಾಯಿ ಭವಾನಿಯಾ ಪರಮ ಭಕ್ತರು , ಶಿವಾಜಿಯನ್ನು ತನ್ನ ನಾಯಕನೆಂದು ಪರಿಗಣಿಸಿದ್ದ ಬಾಳಾ ಸಾಹೇಬ್ 1966 ಜೂನ್ 19 ರಂದು ಶಿವಸೇನೆ ಸ್ಥಾಪಿಸಿದರು. ಒಂದು ಪಕ್ಷವನ್ನು ಸ್ಥಾಪಿಸಿ, ಅದನ್ನು ಅಧಿಕಾರದತ್ತವ್ಯುವದು ಸಾಮಾನ್ಯದ ಮಾತಾಗಿರಲಿಲ್ಲ ಮೇಲೆ ಹೇಳಿದಂತೆ ಮಾಲೀಕರುಗಳೂ , ಕಮ್ಮುನಿಷ್ಟರು , ಕಾರ್ಮಿಕ ಸಂಘಟನೆಗಳ ಪ್ರತಿರೋಧ ಬೇರೆ . ಅವರುಗಳ ನಡುವೆ ಶಿವಸೇನೆ ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಿತ್ತು. ನೋಡು ನೋಡುತಿದ್ದಂತೆ ಶಿವಸೇನೆ ಮಹಾರಾಷ್ಟ್ರದಾದ್ಯಂತ ಪ್ರಭಲ ರಾಜಕೀಯ ಶಕ್ತಿಯಾಗಿ ಬೆಳೆಯಿತು .
ಮೊದಮೊದಲು “ಇಡ್ಲಿ-ಸಾಂಬಾರ್ ಬಂದ್ ಕರಾ , ವದ ಪಾವ್ ಚಾಲೂ ಟೇವಾ” “ಲುಂಗಿ ಹಟಾವೋ, ಪುಂಗಿ ಬಜಾವೋ” ಎಂದು ಘರ್ಜಿಸುತ್ತ ‘ಅಮ್ಚಿ ಮುಂಬೈ ” ಎಂದು ಹೇಳುತಿದ್ದರು . ಕಾಲ ಕ್ರಮೇಣ ಮುಂಬೈಯಲ್ಲಿ ನೆಲೆಸಿರುವ ಕನ್ನಡಿಗರ ಮೇಲೆ ಸಹಾನುಭೂತಿ ತೋರಲಾರಂಬಿಸಿದರು. ಭೂಗತ ಪಾತಕಿಗಳಿಂದ ರಕ್ಷಿಸುತ್ತ ಅವರಿಗೆ ಅಭಯದಾತರಾದರು. 1985 ರಲ್ಲಿ ಶಿವಸೇನೆ ಮುಂಬೈ ನಗರ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿದ ನಂತರ ಸಲೀಸಾಗಿ ಮರಾಟಿಗರಿಗೆ ಸ್ವ-ಉದ್ಯೋಗ , ಎಲ್ಲರಿಗೂ ಅರ್ಹತೆಗಾನುಸಾರಾ ಕೆಲಸ ದೊರಕುವಂತೆ ಮಾಡಿದರು. ಮರಾಠಿರ ಹಕ್ಕಿಗಾಗಿ ಸ್ಥಾಪಿತವಾದ ಸೇನೆ ಕ್ರಮೇಣ ಜಿಹಾದಿಗಳು , ಮತಾಂಧರು ಅಮಾಯಕರ ಮೇಲೆ ನಡೆಸುತಿದ್ದ ದಾಳಿ ವಿರೋಧಿಸುತ್ತ ಹಿಂದುತ್ವದ ಪರವಾಗಿ ಕೆಲಸ ಮಾಡಲಾರಂಭಿಸಿತು. ಹಿಂದುತ್ವವಾದಿ ಎಂದರೆ ಠಾಕ್ರೆ ಮುಸ್ಲಿಂ ವಿರೋಧಿ ಯಾಗಿರಲಿಲ್ಲ. “ದಾವುದ್ ನಂತ ವಿದ್ವಂಸಕ ಕೃತ್ಯ ಎಸಗುವ ದೇಶದ್ರೋಹಿ ಗಳ ಪಾಲಿಗೆ ಕಂಟಕರಾದರು. 1993 ರ ಸರಣಿ ಸ್ಪೋಟ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸುಧಾಕರ್ ರಾವ್ ಅವರಿಗೆ ‘ಒಂದೇ ನೀವು ಸರಕಾರಿ ಬಲ ಪ್ರಯೋಗಿಸಿ ದಂಗೆ ನಿಲ್ಲಿಸಿ ಜನರ ರಕ್ಷಣೆ ಮಾಡಿ , ಇಲ್ಲವಾದರೆ ನನ್ನ ಸೈನಿಕರು ಜನರ ಪ್ರಾಣ ಕಾಪಾಡುತ್ತಾರೆ ನೀವು ತೆಪ್ಪಗಿರಿ” ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದರು.
“ಹಿಂದೂ ಆತ್ಮಾಹುತಿ ಬಾಂಬರ್ ಗಳ ಸ್ರಷ್ಟಿಯಿಂದ ಮುಸ್ಲಿಂ ಉಗ್ರರ ದೇಶದ್ರೋಹಿ, ವಿದ್ವಂಸಕ ಕೃತ್ಯ ಮಟ್ಟ ಹಾಕಲು ಸಾದ್ಯವೆಂದರೂ , ನಾನು ಮುಸ್ಲಿಂ ವಿರೋಧಿಯಲ್ಲ ಯಾರು ಜಿಹಾದಿನ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡು ಜನರ ಜೀವನದ ಜೊತೆ ಆಟ ಆಡುತ್ತಾರೋ ಅವರ ವಿರೋಧಿಯೆಂದು ಓರ್ವ ಪತ್ರಕರ್ತರು ಆಗಿದ್ದ ಠಾಕ್ರೆ ಶಿವಸೇನೆಯ ಮುಖವಾಣಿ ಸಾಮ್ನಾ ದಲ್ಲಿ ಬರೆದಿದ್ದರು .
ಹಗರಣವೊಂದರಲ್ಲಿ ಮೇರುನಟ ಅಮಿತಾಬ್ ಹೆಸರು ಕೇಳಿಬಂದಾಗ ಬಿಗ್ ಬಿ ಯನ್ನು ಕರೆಸಿ ನೀವು ಪ್ರಾಮಾಣಿಕವಾಗಿ ಹೇಳಿ ನೀವು ಭಾಗಿನಾ? ಎಂದು ನೆರವಾಗಿ ಕೇಳಿದ್ದರು . ಅಮಿತಾಬ್ ತಾನು ನಿರ್ಧೋಷಿ ಎಂದು ವಿವರಿಸಿದಾಗ, ಠಾಕ್ರೆ
ಪಕ್ಷ ಬೇಧ ಮರೆತು ಅಮಿತಾಬ್ ಬೆಂಬಲಕ್ಕೆ ನಿಂತಿದ್ದರು. ಸೇನೆಯ ಚುಕ್ಕಾಣಿ ನನಗೆ ನೀಡಿ, ಕಾಶ್ಮೀರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸರ್ಕಾರವನ್ನು ಕೇಳಿದರು. ಕೇವಲ ಮರಾಠಿಗರ ಹಿತ ರಕ್ಷಣೆಗೆ ಹೋರಾಡಿದ್ದರೆ ಠಾಕ್ರೆ
“ಹಿಂದೂ ಹೃದಯ ಸಾಮ್ರಾಟ ನಾಗುತಿರಲಿಲ್ಲ . 1984 ರ ಸಿಖ್ಹ್ ದಂಗೆಯಲ್ಲಿ ಸಿಖ್ಹ್ ರಿಗೆ ಅಭಯವಿತ್ತರು. ಇಡಿ ದೇಶಕ್ಕೆ ದೇಶವೇ ಕೈಕಟ್ಟಿ ಕುಳಿತಾಗ 7 ಲಕ್ಷ ಕಾಶ್ಮೀರಿ ಪಂಡಿತರ ವಿದ್ಯಾಭ್ಯಾಸಕ್ಕೆ ಅವರ ರಕ್ಷಣೆಗೆ ನಿಂತಿದ್ದು ಇದೆ ಠಾಕ್ರೆ. ಹಿಂದೂಗಳ ಪವಿತ್ರ ಕ್ಷೇತ್ರ ಅಮರನಾಥ ಯಾತ್ರೆಗೆ ಹೋರಾಡಿದ್ದು ಇದೆ ಮರಾಠ ಸೇನಾಧಿಪತಿ . ರಾಮ ಜನ್ಮ -ಭೂಮಿ ಹೋರಾಟದಲ್ಲಿ ದೇಶವೇ ಸಜ್ಜಾದಾಗ ಮುಂಚೂಣಿ ಯಲ್ಲಿ ಕಾಣಿಸಿಕೊಂಡಿದ್ದು ಇದೆ ಠಾಕ್ರೆ. ತುಳುವ/ಕನ್ನಡಿಗ ದರ್ಶಿನಿ ಹೋಟೆಲ್ ಮಾಲೀಕರಿಂದ ಹಿಡಿದು ದೊಡ್ಡ-ದೊಡ್ಡ ಉದ್ಯಮಿಗಳನ್ನೂ ಭೂಗತ ಲೋಕದ ಪಾತಕಿಗಳ “ಹಫ್ತಾ ವಸೂಲಿ” ಯಿಂದ ಕಾಪಾಡಿ ನೆಮ್ಮದಿಯ ಜೀವನ ನಡೆಸಲು ದಾರಿ ಮಾಡಿಕೊಟ್ಟಿದ್ದು ವನ್ಸ್ ಅಗೈನ್ ಇದೆ ಠಾಕ್ರೆ. ಈ ಇಷ್ಟು ಸಾಕಲ್ಲವೇ ಹಿಂದೂ ಹೃದಯ ಸಾಮ್ರಾಟನಾಗಲು ? ಈ ಎಲ್ಲ ಕಾರಣಕ್ಕೆ ನಮ್ಮ ತುಳುವರು ಠಾಕ್ರೆಗೆ ಪಿಲಿಮಂದೆ ದಾಯೆ ಎಂಬ ಬಿರುದು ಕೊಟ್ಟಿದ್ದು.
ಬೆಳಗಾವಿಯಲ್ಲಿ ಎಂ.ಇ .ಎಸ್. ಪುಂಡಾಟ ಜೋರಾದಾಗ, ಮಹಾರಾಷ್ಟ್ರಕ್ಕೆ ಹೋಗುತಿದ್ದ ಕರ್ನಾಟಕ ಬಸ್ಸುಗಳಿಗೆ ಕಲ್ಲು ಬಿದ್ದಾಗ, ಬೆಳಗಾವಿ ಗಲಾಟೆ ಗರಿಗೆದರಿದಾಗ ಠಾಕ್ರೆ ಹೇಳಿಕೆ ಬಾರಿ ವಿವಾದಕ್ಕೆ ಎಡೆಮಾಡಿ ಕೊಡುತ್ತಿತ್ತು. ಆ ಸಂದರ್ಭ ದಲ್ಲಿ “ಬಾಳಾ ಆಯಿತು” ಠಾಕ್ರೆ ಎಂದು ಕನ್ನಡಿಗರು ಮುನಿಸಿಕೊಂಡಿದ್ದು ಸುಳ್ಳಲ್ಲ. ಆ ಸಂದರ್ಭದಲ್ಲಿ ಠಾಕ್ರೆ ಭಾಷಾ ಪ್ರೇಮದ ಮಾತು ಆಡದಿರುತಿದ್ದರೆ ಇಂದು ಯಾರಿಗೂ ಅವರನ್ನು ದುಷಿಸಲು ಕಾರಣವೇ ಸಿಗುತಿರಲಿಲ್ಲ. ಆದರೆ ಹೆಚ್ಚಿನವರಿಗೆ ತಿಳಿಯದ ವಿಷಯವೇನೆಂದರೆ 1969ರಲ್ಲಿ ವಿ .ಪಿ.ನಾಯಕ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ ಇದೆ ಠಾಕ್ರೆ ಬೆಳಗಾವಿ ವಿಷಯವನ್ನು ಶಾಂತಿಯುತವಾಗಿ ಪರಿಹರಿಸಿ ಎಂದು ಧರಣಿ ಕುಳಿತಿದ್ದರು. ಅವರೆಂದು ಪೂರ್ವಾಗ್ರಹಪೀಡಿತರಾಗಿ ಕನ್ನಡ ದ್ವೇಷಿಯಾಗಿರಲಿಲ್ಲ. “ಕನ್ನಡಿಗರ ಮೇಲೆ ನನಗೆ ಯಾವುದೇ ತೆರನಾದ ದ್ವೇಷವಿಲ್ಲ. ನಮ್ಮಿಬ್ಬಿರ ಅಚಾರ -ವಿಚಾರ ಸಂಸ್ಕ್ರತಿ ಒಂದೇ ತೆರನಾಗಿದೆ. ಹಿಂದಿನಿಂದಲೂ ನಮ್ಮ ನಡುವೆ ಸಾಂಸ್ಕ್ರತಿಕ ಕೊಡು ಕೊಳ್ಳುವಿಕೆ ನಡೆಯುತ್ತಿತ್ತು. ಭಾಷಾವಾರು ರಾಜ್ಯ ರಚನೆ ಬದಲಾಗಿ ಸಾಂಸ್ಕ್ರತಿಕ ವಲಯಗಳ ರಚನೆಯಿಂದ ಭವ್ಯ ರಾಷ್ಟ್ರ ನಿರ್ಮಾಣ ಸಾದ್ಯ ಎಂದು ಭಾವುಕರಾಗಿ ನುಡಿಯುತ್ತಾರೆ. ಠಾಕ್ರೆ ವಿರೋಧಿಗಳು ಅವರ ರಾಷ್ತ್ರಾಭಿಮಾನಕ್ಕೆ ತಲೆದೂಗಲೇ ಬೇಕು .
ಹಿಂದುತ್ವ ಪ್ರತಿಪಾದಿಸುವ ಹಿಂದೂ ಹೃದಯ ಸಾಮ್ರಾಟ ನೊಳಗೊಬ್ಬ ಸಮಾಜವಾದಿ ಇದ್ದ ಅವರೆಂದು ಜಾತಿವಾದಿಯಾಗಿರಲಿಲ್ಲ. ಜಾತಿ ಆಧಾರದಲ್ಲಿ ರಾಜಕೀಯ ಮಾಡಲಿಲ್ಲ. ಸಮಾಜದ ಎಲ್ಲ ವರ್ಗದ ಜನರನ್ನು ಸರಿಸಮನಾಗಿ ನೋಡಿಕೊಂಡಿದ್ದರಿಂದ ಸೇನೆಗೆ ಒಂದು ಜಾತಿಯ , ಪಕ್ಷ ಎನ್ನುವ ಹಣೆಪಟ್ಟಿ ಬರಲಿಲ್ಲ. “ನನಗೆ ಈ ಸಮಾಜದಲ್ಲಿ ಬಡವ ಮತ್ತು ಶ್ರೀಮಂತ ಎಂಬ ಎರಡೇ ಎರಡು ಜಾತಿಗಳು ಕಾಣುತ್ತವೆ. ಬಡವನನ್ನು ಶ್ರೀಮಂತನನ್ನಾಗಿ ಮಾಡಿ . ಆದರೆ ಈ ದೆಸೆಯಲ್ಲಿ ಶ್ರೀಮಂತರ ಮೇಲೆ ದ್ವೇಷ ಕಾರುತ್ತ ಅವರನ್ನು ಬಡವರಾನ್ನಗಿಸಬೇಡಿ.”ಏನ್ನುತಿದ್ದರು. ಈ ಕಾರಣದಿಂದ ಲತಾ, ಸಚಿನ್, ರಜನಿಯಂತವರಿಗೂ ಠಾಕ್ರೆ ಇಷ್ಟವಾದದ್ದು.
ತನ್ನವರ ಬದುಕಿಗಾಗಿ ಹೋರಾಡಿದ ಠಾಕ್ರೆ ಅಸಂಖ್ಯಾತ ಮರಾಠಿಗರಿಗೆ ಸ್ವ-ಉದ್ಯೋಗ , ಸ್ರಷ್ಟಿಸಿ ಸ್ವಾವಲಂಬಿ ಜೀವನ ನಡೆಸಲು ಹೇಳಿಕೊಟ್ಟರು. ಸೇನೆಯಲ್ಲಿ . ರೈಲ್ವೆಯಲ್ಲಿ , ಬ್ಯಾಂಕಿಂಗ್ ವಲಯದಲ್ಲಿ , ವಿಮಾ ಕ್ಷೇತ್ರ, ಹೀಗೆ ಎಲ್ಲ ಕಡೆ ತನ್ನ ರಾಜ್ಯದ ಜನತೆಗೆ ಬದುಕಲು ಒಂದು ದಾರಿ ಮಾಡಿಕೊಟ್ಟರು . ಇಂದು ಒಬ್ಬಠಾಕ್ರೆ ಅಸ್ಸಾಂ , ಹೈದರಬಾದ್ , ಕಾಶ್ಮೀರ ದಲ್ಲಿ ಇರುತಿರುತಿದ್ದರೆ ಅಲ್ಲಿ ಯಾವ ಸಮಸ್ಯೆಗಳು ಉದ್ಭವಿಸುತಿರಲಿಲ್ಲ . ಯಾರು ಆ ಕಡೆ ಚಿಂತಿಸ ಬೇಕಾದ ಪ್ರಮೇಯವೇ ಬರುತಿರಲಿಲ್ಲ ಯಾರು ಒಪ್ಪಲಿ ಬಿಡಲಿ ಎಂದಿಗೂ ತಾನು ನಂಬಿಕೊಂಡು ಬಂದಿದ್ದ ತತ್ವ-ಸಿದ್ದಾಂತ ತಕ್ಕೆ ತಿಲಾಂಜಲಿ ಇಡಲಿಲ್ಲ. ಇದು ಅನೇಕ ಬಾರಿ ಅವರನ್ನು ಒಬ್ಬಂಟಿಯನ್ನಾಗಿ ಮಾಡುತಿತಿತ್ತು. ಅದರೂ ಅವರು ದ್ರತಿಗೆಡಲಿಲ್ಲ. ನೀವು ಅವರನ್ನು ಪ್ರೀತಿಸಿ ಇಲ್ಲ ದ್ವೇಷಿಸಿ , ಅವರ ಅಭಿಪ್ರಾಯ ಒಪ್ಪಿ ಇಲ್ಲ ವಿರೋಧಿಸಿ ಆದರೆ ಅವರನ್ನು ಎಂದಿಗೂ ಮರೆಯಲು , ಕಡೆಗಣಿಸಲು ಸಾದ್ಯವಿಲ್ಲ.
ಹುಲಿಯಂತೆ ಬದುಕಿ ರಾಜನಂತೆ ಆಳಿದರು .
* * * * * * * * *
ಸ್ವತಹ ಠಾಕ್ರೆನೆ ಈ ಲೇಖನ ಓದಿದ್ದಿದ್ರೆ ತನ್ನ ಮೈ ಚೂಟಿ ಚೂಟಿ ನೋಡಿಕೊಳ್ಳುತ್ತಿದ್ದರು, ಇದೆಲ್ಲ ಹೌದಾ ? ತಾನೂ ನಿಜವಾಗಿಯೂ ಹೀಗೆಲ್ಲ ಇದೀನಾ ಅಂತ.
>ಇಂದು ಒಬ್ಬಠಾಕ್ರೆ ಅಸ್ಸಾಂ , ಹೈದರಬಾದ್ , ಕಾಶ್ಮೀರ ದಲ್ಲಿ ಇರುತಿರುತಿದ್ದರೆ ಅಲ್ಲಿ ಯಾವ ಸಮಸ್ಯೆಗಳು ಉದ್ಭವಿಸುತಿರಲಿಲ್ಲ >ಇಂದು ಒಬ್ಬಠಾಕ್ರೆ ಅಸ್ಸಾಂ , ಹೈದರಬಾದ್ , ಕಾಶ್ಮೀರ ದಲ್ಲಿ ಇರುತಿರುತಿದ್ದರೆ ಅಲ್ಲಿ ‘ಬೇರೆ’ ಯಾವ ಸಮಸ್ಯೆಗಳು ಉದ್ಭವಿಸುತಿರಲಿಲ್ಲ << ಅಂತ ಆಗಬೇಕಿತ್ತು. ಯಾಕೆಂದರೆ ಠಾಕ್ರೆಯವರು ಇದ್ದರೆ ಅವರೇ ಸಮಸ್ಯೆಯಾಗಿರುತ್ತಿದ್ದರು!, ಆಗ ಬೇರೆ ಯಾವ ಸಮಸ್ಯೆಯೂ ಇರುತ್ತಿರಲ್ಲಿಲ್ಲ..
>>ಒಬ್ಬ ವ್ಯಂಗ್ಯ ಚಿತ್ರಗಾರ ನಾಗಿ ಬದುಕು ಪ್ರಾರಂಭಿಸಿದ ಬಾಳಾ ಸಾಹೇಬ್ ಠಾಕ್ರೆ ಬೆಳೆದು ಬಂದ ಅವನ ವಿರೋಧಿಗಳು ಮೆಚ್ಚುವಂಥಹುದು . ಅದಕ್ಕೊಂದು ಸಲಾಂ ಹೇಳಲೇ ಬೇಕು. ವಿವಾದಾತ್ಮಕ ವಾಗಿದ್ದರೂ ವರ್ಣರಂಜಿತ ಬದುಕು<<
ಮುಂಬೈ ಗಲಭೆಯ ರಕ್ತ ಮೈಗೆ ಅಂಟಿದ ಮೇಲೆ ಬದುಕು "ವರ್ಣರಂಜಿತ"ವೇ ಬಿಡಿ 🙂
ಬಾಳಾಸಾಹೇಬರ ಘನ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಉತ್ತಮ ಲೇಖನ.ನೀವೇ ಹೇಳಿದಂತೆ ಊರಿಗೊಬ್ಬ,ರಾಜ್ಯಕ್ಕೊಬ್ಬ ಠಾಕ್ರೆಗಳ ಅಗತ್ಯವಿದೆ.ಭಯೋತ್ಪಾದಕರು,ಭಯೋತ್ಪಾದಕರ ಬೆಂಬಲಿಗರನ್ನು,ಕೆಲವು sickular,socalled ಪ್ರಗತಿಪರರ ಹಾವಳಿಗಳನ್ನು ಮಟ್ಟಹಾಕಲು “ಸರ್ಕಾರ್” ಮತ್ತೊಮ್ಮೆ ಹುಟ್ಟಿಬರಲಿ….