ವಿಷಯದ ವಿವರಗಳಿಗೆ ದಾಟಿರಿ

Archive for

1
ಮೇ

ವಚನಗಳ ಧ್ವನಿಯನ್ನು ಎಲ್ಲಿ ಹುಡುಕಬೇಕು?

– ರಾಜಾರಾಮ ಹೆಗಡೆ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾನಿಲಯ

{ಡಾ. ಆಶಾದೇವಿಯವರು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬರೆದು ಪ್ರಜಾವಾಣಿಗೆ ಕಳುಹಿಸಿದ್ದ ಅಪ್ರಕಟಿತ ಲೇಖನ}

Vachana Charche           ಡಾ. ಆಶಾದೇವಿಯವರ ಪ್ರತಿಕ್ರಿಯೆಯಲ್ಲಿ ನನ್ನ ವಿಚಾರಗಳ ಕುರಿತು ವ್ಯಕ್ತವಾದ ಎರಡು ಮುಖ್ಯ ಅಭಿಪ್ರಾಯಗಳ ಕುರಿತು ನನ್ನ ಆಕ್ಷೇಪಣೆಯಿದೆ: 1. ನಾವು ಉಲ್ಲೇಖಿಸುತ್ತಿರುವ ಸಂಶೋಧನಾ ವಿಧಾನವೇ ಒಂದು ಕಣ್ಕಟ್ಟು ಅಥವಾ ಮಾಯೆ. ಅದು ಸ್ವಘೋಷಿತ. ಆ ಮೂಲಕ ನಾವು ಕನ್ನಡಿಗರಿಗೆ ಮೋಸಮಾಡುತ್ತಿದ್ದೇವೆ. 2. ಈ ಸಂಶೋಧನೆಯ ಹಿಂದೆ ಒಂದು ಜಾಗತಿಕ ಹುನ್ನಾರವಿದೆ. ಇಂಥ ಹೇಳಿಕೆಗಳನ್ನು ಇದುವರೆಗೆ ನಾವು ನಿರ್ಲಕ್ಷಿಸಿಕೊಂಡು ಬಂದಿದ್ದೆವು. ಆದರೆ ಇಂಥ ಹೇಳಿಕೆಗಳನ್ನು ಸತ್ಯವೆಂಬಂತೆ ಪುನಃ ಪುನಃ ಮಾಡಲಾಗುತ್ತಿರುವುದರಿಂದ ನಾವು ಇದನ್ನು ಗಂಭೀರವಾಗಿ ಎಣಿಸಲೇಬೇಕಿದೆ.

ಆಶಾದೇವಿಯವರೊಂದೇ ಅಲ್ಲ, ನಾವು ಮಂಡಿಸಿದ ವಿಷಯದ ಕುರಿತು ಆಕ್ಷೇಪಣೆಯೆತ್ತುತ್ತಿರುವ ಬಹುತೇಕರು ಇಂಥ ಆರೋಪಗಳನ್ನು ಯಾವುದೇ ಎಗ್ಗಿಲ್ಲದೇ ತಾವು ಕಂಡುಕೊಂಡ ಸತ್ಯವೆಂಬಂತೆ ಹೇಳುತ್ತಿದ್ದಾರೆ. ಅಂದರೆ ನಾವು ಮೋಸಗಾರರು, ವಿದೇಶೀ ಹಣವನ್ನು ಕಬಳಿಸಲಿಕ್ಕೆ ಇಂಥ ಮಾತುಗಳನ್ನು ಹೇಳುತ್ತಿದ್ದೇವೆ, ಪೂರ್ವಾಗ್ರಹ ಪೀಡಿತರು, ನಮಗೊಂದು ಹುನ್ನಾರವಿದೆ, ನಾವು ದಲಿತರ, ಶೋಷಿತರ ವಿರೋಧಿಗಳು, ವಚನಕಾರರು ಯಾವ ಶಕ್ತಿಗಳ ವಿರುದ್ಧ ಹೋರಾಡಿದ್ದರೊ ನಾವು ಅವೇ ಶಕ್ತಿಗಳು, ಇತ್ಯಾದಿ. ಇವು ಸಣ್ಣಪುಟ್ಟ ಆರೋಪಗಳಲ್ಲ ಎಂಬುದನ್ನು ಪ್ರತ್ಯೇಕ ತಿಳಿಸಬೇಕಿಲ್ಲ. ಇದು ಯಾರ ವಿರುದ್ಧ ಯಾರನ್ನು ಎತ್ತಿಕಟ್ಟುವ ಹುನ್ನಾರ ಎಂಬುದು ನನಗೆ ತಿಳಿಯುತ್ತಿಲ್ಲ. ಇದು ಚಾರಿತ್ರ್ಯಹರಣದ ಪ್ರಯತ್ನ. ನಮ್ಮ ಕುರಿತು ಪ್ರಮಾಣಿತ ಸತ್ಯವೋ ಎಂಬಂತೆ ಈ ಆರೋಪಗಳನ್ನು ಅವರು ಸಾರ್ವಜನಿಕವಾಗಿ ಇಡುತ್ತಿದ್ದಾರೆ.  ಮಾಧ್ಯಮವೊಂದರಲ್ಲಿ ಇಂಥ ಗುರುತರ ಆಪಾದನೆಗಳನ್ನು ಮಾಡುವಾಗ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ಅದಿಲ್ಲದ ಹೇಳಿಕೆಗಳು ಮಾನನಷ್ಟಕ್ಕೆ ಸಮನಾಗುತ್ತವೆ. ಹಾಗಾಗಿ ಮೊದಲು ಅದಕ್ಕೆ ಇವರೆಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು, ಇಲ್ಲದಿದ್ದಲ್ಲಿ ಇದು ಕಪೋಲ ಕಲ್ಪಿತ ಹೇಳಿಕೆ ಎಂಬುದಾಗಿ ಸ್ಪಷ್ಟೀಕರಿಸಬೇಕು ಎಂಬುದು ನನ್ನ ಆಗ್ರಹ.

ಮತ್ತಷ್ಟು ಓದು »

1
ಮೇ

ನಾಯಕರಿಗೊಂದು ದಿಕ್ಸೂಚಿ…

– ಮಧುಚಂದ್ರ ಭದ್ರಾವತಿ 

c39ಸ್ವತಂತ್ರ ಪೂರ್ವದ ಹಿಂದೆ ನಡೆದ ಘಟನೆ, 

ಮುಂಬೈ ನಗರದ ರೈಲ್ವೆ ನಿಲ್ದಾಣ, ಬೆಂಗಳೂರಿನಿಂದ ರೈಲು ಬಂದು ನಿಂತಿತ್ತು. ಮೈಸೂರಿನ ದಿವಾನರಾದ ಮಾಧವರಾಯರು ಕಾರ್ಯನಿಮಿತ್ತವಾಗಿ ದೆಹಲಿಗೆ ಹೊರಟಿದ್ದರು. ಮುಂಬೈ ರೈಲ್ವೆ ನಿಲ್ದಾಣದಲ್ಲಿ  ದೆಹಲಿಗೆ ಹೋಗಲು ರೈಲನ್ನು ಬದಲಿಸಬೇಕಿತ್ತು. ದೆಹಲಿಗೆ ಹೊರಡುವ ರೈಲು ಇನ್ನು ಬಂದಿರಲಿಲ್ಲ ಸುಮಾರು ೫ ಘಂಟೆ ರೈಲ್ವೆ ನಿಲ್ದಾಣದಲ್ಲಿ ಕಾಯಬೇಕಿತ್ತು. ಆಗ ಮೈಸೂರಿನ ದಿವಾನರು ಬದಲಿ ರೈಲು ಬರುವ ಒಳಗೆ ಪೇಟೆ ಸುತ್ತಿ ಬರುವ ಯೋಚನೆ ಮಾಡಿ ಹೊರಟು ಹೋದರು.

ಮೈಸೂರಿನ ದಿವಾನರ ಪ್ರಯಾಣವನ್ನು ಪತ್ರಿಕೆಯ ಮೂಲಕ ಅರಿತಿದ್ದ, ಸುಮಾರು ೮೨ ವರ್ಷದ ವ್ಯಕ್ತಿಯೊಬ್ಬರು ದಿವಾನರನ್ನು ಕಾಣಲು ಬಂದರು. ಅವರಿಗೆ ದಿವಾನರು ಇಲ್ಲದಿರುವುದು  ಅವರ ಆಪ್ತಕಾರ್ಯದರ್ಶಿಯಿಂದ ತಿಳಿಯಿತು.  ಅ ೮೨ ವರ್ಷದ ವ್ಯಕ್ತಿಯನ್ನು ಗುರುತಿಸಿದ  ದಿವಾನರ ಆಪ್ತಕಾರ್ಯದರ್ಶಿ ಅವರನ್ನು ದಿವಾನರ ಬೋಗಿಯೊಳಗೆ ಕುಳಿತು ಕೊಳ್ಳಲು ಮನವಿ ಮಾಡಿದರು. 

” ದಿವಾನರು ಇಲ್ಲದಾಗ ಅವರ ಕೋಣೆಯನ್ನು ಪ್ರವೇಶಿಸುವುದು ಉಚಿತವಲ್ಲ ” ಎಂದು ಹೇಳಿ  ನಯವಾಗಿ ತಿರಸ್ಕರಿಸಿದರು ಅ ಹಿರಿಯರು. 

ದಿವಾನರು ದೆಹಲಿಗೆ ಹೊರಡುವ ಮುನ್ನ ಆಂಗ್ಲರ ನೀತಿಯನ್ನು ದಿಕ್ಕರಿಸಿದ ಮೈಸೂರಿನ ಜನತೆ , ಅಂಗ್ಲರ ವಿರುದ್ದ ಪ್ರತಿಭಟನೆಗೆ ಇಳಿದಿದ್ದರು. ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಅಂಚೆ ಕಛೇರಿಗೆ ಬೆಂಕಿ ಹಚ್ಚಿದ್ದರು , ರೈಲ್ವೆ ಕಂಬಿ ಕಿತ್ತರು ,  ಪ್ರತಿಭಟನೆ ಇನ್ನಷ್ಟು  ಉಗ್ರವಾಯಿತು. ಅಗ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡು ಹಾರಿಸಿದರು, ಹಲವಾರು ನಾಗರೀಕರು ಪ್ರಾಣ ತೆತ್ತರು.