ವಿಷಯದ ವಿವರಗಳಿಗೆ ದಾಟಿರಿ

Archive for

16
ಮೇ

ಸಾಮಾನ್ಯ ಭಾರತೀಯನೊಬ್ಬನ ಪ್ರಶ್ನೆಗಳು

– ಶಿವಶಂಕರ್ ಪುತ್ರನ್, ಕೊಡಿಯಾಲ್ ಬೈಲ್

ಅಲ್ಲಾ ಸ್ವಾಮಿ, ಮಹಾತ್ಮರ ಸಿದ್ದಾ೦ತಗಳನ್ನು ಪಾಲಿಸುವವರೆ, ಯಾರೋ ಒಬ್ಬ ಸ೦ಸತ್ ಸದಸ್ಯ ಶಫಿಯಕುರ್ ರೆಹಮಾನ್ ವಂದೇಮಾತರ೦ನ್ನ ಗೌರವಿಸದೆ,ಆಮೇಲೆ ತಾನು ಯಾಕೆ ಗೌರವಿಸಿಲ್ಲ Vandಅನ್ನೋದಕ್ಕೆ ಸ್ಪಷ್ಟನೆ ನೀಡ್ತಾನೆ.ಆತನ ಆ ಕ್ರಿಯೆ ದೇಶದಲೆಲ್ಲ ದೊಡ್ಡ ಅಲ್ಲೋಲಕಲ್ಲೋಲವನ್ನ ಉ೦ಟು ಮಾಡುತ್ತೆ.ಸಾಮಾಜಿಕ ತಾಣಗಳಾದ ಫೇಸ್ಬುಕ್,ಟ್ವಿಟ್ಟರ್ಗಳಲ್ಲಿ ಅವನ ವಿರುದ್ದ ಜನ ತಮ್ಮ ಕ್ರೋಧ ವ್ಯಕ್ತಪಡಿಸುತ್ತಾರೆ.ಕನ್ನಡದ ಬ್ಲಾಗೊ೦ದರಲ್ಲಿ ಸತ್ಯವಿಶ್ವಾಸಿಗಳಿಗೆ ದೇಶಪ್ರೇಮವನ್ನ ಬೋಧಿಸಲು ಹೋದವನ ಲೇಖನಕ್ಕೆ ಉತ್ತರಿಸುವ ನೆಪದಲ್ಲಿ ಹಲವಾರು ವ್ಯಕ್ತಿಗಳು ತಾವು ಹಾಗು ತಮ್ಮವರು ಯಾಕೆ ವಂದೇಮಾತರ೦ ಹಾಡಬಾರದು,ಯಾಕೆ ಗೌರವಿಸಬಾರದೆ೦ದು ತಮ್ಮ ಸ೦ಸದನ ವರ್ತನೆಯನ್ನ ಸಮರ್ಥಿಸಿಕೊಳ್ಳುವಾಗ ಒಬ್ಬ ಹುಲು ಭಾರತಿಯನಾಗಿ,ಒಬ್ಬ ಸಾಮಾನ್ಯ ಹಿ೦ದುವಾಗಿ, ಅದರೆ ಒಬ್ಬ ಅಪ್ಪಟ್ಟ ಭಾರತೀಯನಾಗಿ ಮನದಲ್ಲಿ ಹುಟ್ಟುವ ಹಲವಾರು ಗೊ೦ದಲಗಳಿಗೆ ಉತ್ತರವೆ ಸಿಗುತ್ತಿಲ್ಲ.ಹಾಗೆ ಮು೦ದುವರಿದು ಕೆಲವು ಮಿತ್ರರಲ್ಲಿ ಕೇಳಿದೆ, ಅವರಿಗೂ ಅದೇ ಗೊಂದಲ.ಅವರಲ್ಲಿ ಕೆಲವರು ಸದ್ಯಕಷ್ಟೆ ರಾಜ್ಯದ ಚುನಾವಣೆಯಲ್ಲಿ ಬಾಗಿಯಾಗಿ ಕೆಲವರು ಭ್ರಮನಿರಸಗೊ೦ಡರೆ,ಕೆಲವರು ಪಕ್ಷ ನಿಷ್ಟೆ ಬದಲಿಸಿ ಹೊಟ್ಟೆತು೦ಬಿಸಿಕೊ೦ಡವರು.ಹಾಗಾಗಿ,ಅವರಲ್ಲಿ ಕೇಳುವುದು ವ್ಯರ್ಥವೆಂದೆನಿಸಿ ಯಾಕೆ ನಮ್ಮ ಮುಸಲ್ಮಾನ ಬ೦ಧುಗಳಲ್ಲೆ ಕೇಳಬಾರದು ಅನಿಸಿತು.ಸ೦ಸಾರದ ಗೊಂದಲಗಳ ನಡುವೆ ಪ್ರತಿಯೊಬ್ಬ ನನ್ನ ಭೇಟಿಮಾಡುವಸ್ಟು ಸಮಯವಿಲ್ಲದಿರುವುದರಿ೦ದ ಇಲ್ಲೇ ಕೇಳುತ್ತಿದ್ದೇನೆ.ಅಷ್ಟೆ ಅಲ್ಲದೆ, ಇನ್ನು ಕೆಲವು ದಿನಗಳಿ೦ದ ಮನಸಿನಲ್ಲಿ ನನ್ನ ಮುಂದಿನ ಜನಾ೦ಗದ ಬಗ್ಗೆ ಯೋಚಿಸಿ ಇನ್ನು ಕೆಲವು ಪ್ರಶ್ನೆಗಳನ್ನ ಇಡುತ್ತಿದೇನೆ.ಇದನ್ನ ನೇರವಾಗಿ ಕೇಳಿದರೆ ನನ್ನ ಜೀವಕ್ಕೆ ಅಪಾಯ ಯಾಕೆ೦ದರೆ ನಾನೊಬ್ಬ ಹಿ೦ದು ಹಾಗು ನನ್ನ ಜಾತಿಯ ಆಧಾರದಲ್ಲಿ ಚುನಾವಣೆಯ ಸಮಯದಲ್ಲಿ ನನ್ನ ಮತಕ್ಕೆ ಮಾತ್ರ ಮರ್ಯಾದೆ ಅಲ್ಲದೆ ನನ್ನ ರಕ್ಷಣೆಗಲ್ಲ ಎ೦ದು ಸಣ್ಣ೦ದಿನಲ್ಲೆ ನನಗೆ ಅರ್ಥವಾಗಾಗಿದೆ.ಆದುದರಿ೦ದ ನನ್ನ ಪ್ರಶ್ನೆ ಪ್ರತಿಯೊಬ್ಬ ಸಾಮಾನ್ಯ ಭಾರತೀಯನ(ನಿಮ್ಮ ಪ್ರಕಾರ ಸತ್ಯವಿಶ್ವಾಸಿಯಲ್ಲದ ಅಬ್ರಾಹಂನ ಸಿದ್ದಾ೦ತಗಳಿಗೆ ಒಳಪಡದ ಅಪ್ಪ-ಅಮ್ಮನಿಲ್ಲದ ಜನಾ೦ಗ)ಪ್ರಶ್ನೆಯೆಂದು ತಿಳಿಯಬಹುದು.

ಮತ್ತಷ್ಟು ಓದು »

16
ಮೇ

ವಂದೇ ಮಾತರಂ ಹಾಡಲಾಗದಿದ್ದರೆ…

-ಅಶ್ವಿನ್ ಅಮೀನ್

Vande Mataram BSPಅದನ್ನು ಬರಿ ಗೀತೆ ಅನ್ನಬಹುದೇ?ಊಹೂಂ ಅದು ಗೀತೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ಬೀಜಮಂತ್ರ.ಬ್ರಿಟಿಷರ ನಿದ್ದೆ ಕೆಡಿಸುತ್ತಿದ್ದ ಮಂತ್ರವದು.ಎದೆಯುಬ್ಬಿಸಿ ಗರ್ವದಿಂದ ಗರ್ಜಿಸುವಾಗ ಮೈ ಮನಸ್ಸುಗಳು ರೋಮಾಂಚನಗೊಳ್ಳುತ್ತವೆ.. ಅದೆಂತಾ ಶಕ್ತಿಯಿದೆ ಈ ‘ವಂದೇ ಮಾತರಂ’ ನಲ್ಲಿ. ಅದೆಷ್ಟೋ ಹೋರಾಟಗಳ ಸ್ಪೂರ್ತಿ ಇದು, ದೇಶ ಪ್ರೇಮವ ಬಡಿದೆಬ್ಬಿಸುವ ಬೀಜಮಂತ್ರವಿದು. ಪ್ರತಿಯೊಬ್ಬ ಭಾರತೀಯನ ನಾಡಿ ಮಿಡಿತವಿದು… ವಂದೇ ಮಾತರಂ ಅನ್ನು ವಿಶ್ಲೇಷಿಸ ಹೊರಟರೆ ಆ ವಿಶ್ಲೇಷಣೆಯೇ ಒಂದು ವೀರ ಗೀತೆಯಾದೀತು…!!!!

ಆದರೆ…ವಂದೇ ಮಾತರಂ ಅನ್ನು ಗೌರವಿಸುವ ಮನಸ್ಸುಗಳ ನಡುವೆ ಧರ್ಮದ ನೆಪವೊಡ್ಡಿ ಅದನ್ನು ವಿರೋಧಿಸುವ ಕೆಲ ವಿಷ ಮನಸ್ಸುಗಳೂ ತುಂಬಿರುವುದು ಖೇದಕರ..

ಮೊನ್ನೆ ಮೊನ್ನೆ ತಾನೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ವಂದೇ ಮಾತರಂ ಹಾಡುವುದಿಲ್ಲ ಎಂದು ವಂದೇ ಮಾತರಂ ಹಾಡಿನ ಮಧ್ಯೆಯೇ ಸಂಸತ್ತಿನಿಂದ ಹೊರನಡೆದು ಉದ್ದಟತನ ತೋರಿದ ಬಿಎಸ್ಪಿ ಸಂಸದ ಶಫಿಕುರ್ ರೆಹಮಾನ್ ಬಗ್ಗೆ ಕೇಳಿರುತ್ತೀರಿ. ಇಂತಹ ಮತಾಂಧವಾದದ ನಡೆ ಇದೇ ಮೊದಲಲ್ಲ. ವಂದೇ ಮಾತರಂ ಅನ್ನು ವಿರೋಧಿಸಿ ಭಾರತೀಯರಲ್ಲಿ ವಿಷ ಬೀಜ ಬಿತ್ತಿದವರಲ್ಲಿ ಆಲಿ ಸಹೋದರರು ಮೊದಲಿಗರಾಗಿ ಕಂಡು ಬರುತ್ತಾರೆ.

ಆ ಘಟನೆ ಹೀಗಿದೆ;

1923. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ಸ್ ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು. ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು. ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ಸ್ ಅಧ್ಯಕ್ಷ (ಮುಸ್ಲಿಂ ಲೀಗ್ ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಆಲಿ ಆತನ ಸಹೋದರ ಶೌಕತ್ ಆಲಿ ತಡೆದರು. ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್ಸ್ ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ, ಮಸೀದಿಯೂ ಅಲ್ಲ.. ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆ ಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ ?! ವಂದೇ ಮಾತರಂಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಆಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದರು.
ಮತ್ತಷ್ಟು ಓದು »