ವಿಷಯದ ವಿವರಗಳಿಗೆ ದಾಟಿರಿ

Archive for

18
ಮೇ

ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’

– ರಾಕೇಶ್ ಶೆಟ್ಟಿ

Sidduಮೇ೮ರಂದು ರಾಜ್ಯದ ರಾಜಕೀಯ ಪಂಡಿತರ ಲೆಕ್ಕಾಚಾರಗಳೆಲ್ಲ ತಲೆಕೆಳಕಾಗಿ ಖುದ್ದು ಕಾಂಗ್ರೆಸ್ಸಿಗರೇ ತಮ್ಮ “ಕೈ” ಚಿವುಟಿ ಚಿವುಟಿ ಕನಸೋ ನನಸೋ ಅನ್ನುವಷ್ಟರಲ್ಲಿ ಕಾಂಗ್ರೆಸ್ಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.ಪರಮೇಶ್ವರ್ ಸೋಲಿನಿಂದ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯೂ ಆಗಿಬಿಟ್ಟರು.

ಅತ್ತ ಕಾಂಗ್ರೆಸ್ಸ್ ಗೆದ್ದಿದ್ದೇ ತಡ,ಇತ್ತ ನಮ್ಮ ನಾಡಿನ ಪ್ರಗತಿಪರರು,ಬುದ್ದಿಜೀವಿಗಳು,ಸಾಕ್ಷಿಪ್ರಜ್ನೆಗಳು ಚುನಾವಣಾ ಫಲಿತಾಂಶದ ಬಗ್ಗೆ ಬರೆಯಲು ಕುಳಿತರು ನೋಡಿ. ಶುರುವಾಯ್ತು ಪದಪುಂಜಗಳ ಪಟ್ಟಿ.ಹೆಚ್ಚು ಕಡಿಮೆ ಆ ಎಲ್ಲಾ ಬರಹಗಳೂ ಈ ಧಾಟಿಯಲ್ಲಿದ್ದವು.

“ಸಂಘ ಪರಿವಾರದ ಪುಂಡಾಟಿಕೆಯಿಂದ,ವಿಷಮಯವಾದ ಹಿಂದುತ್ವದ ಅಜೆಂಡಾ,ಮತಾಂಧತೆ ಇತ್ಯಾದಿ ಇತ್ಯಾದಿಗಳಿಂದ ಅಲ್ಪಸಂಖ್ಯಾತರ ಜೀವನ ನರಕವಾಗಿದ್ದ ಕರ್ನಾಟಕ”ವನ್ನು ನೋಡಿ ಸಹಿಸಲಾಗದ ನಾಡಿನ ಪ್ರಜ್ಞಾವಂತ, ಪ್ರಗತಿಪರ,ಸಂವೇದನಾಶೀಲ,ಸಾಕ್ಷಿಪ್ರಜ್ನೆ ಕನ್ನಡಿಗರು ಕಾಂಗ್ರಸ್ ಪರ ನಿಂತರಂತೆ…!

ನಿಜವಾಗಿಯೂ ಕನ್ನಡಿಗರು ಕಾಂಗ್ರೆಸ್ಸ್ ಪರ ಮತ ಚಲಾಯಿಸದರೆ ಅಂತ ನೋಡ ಹೊರಟರೆ, ೬ ಸ್ಥಾನ ಗೆದ್ದ ಕೆ.ಜೆ.ಪಿ ೩೯ ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ,ಬಿ.ಜೆ.ಪಿ ಸುಮಾರು ೩೦ ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ,ಬಿ.ಆಸ್.ಆರ್ ಗೆದ್ದಿದ್ದು ೪ ಸೀಟುಗಳನ್ನು.ಅಂದರೆ ಬಿಜೆಪಿ+ಕೆಜೆಪಿ+ಬಿ.ಆಸ್.ಆರ್ ನಡುವೆ ಮತಗಳು ಚೆಲ್ಲಾಪಿಲ್ಲಿಯಾಗಿರುವುದರಿಂದ ಕಾಂಗ್ರೆಸ್ಸು ಗೆದ್ದಿದೆ.ಬಹುಷಃ ಬಿಜೆಪಿಯಿಂದ ಯಡ್ಯೂರಪ್ಪ ಹೊರಹೋಗದಿದ್ದರೆ ೮೦ರ ಹತ್ತಿರ ಬಂದು ತಲುಪುತಿತ್ತು.ಇನ್ನೂ ಸರಳವಾಗಿ ಹೇಳಬೇಕೆಂದರೆ ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ ಅಷ್ಟೆ.ಗೆಲ್ಲಲ್ಲಿಕ್ಕೆ ಕಾಂಗ್ರೆಸ್ಸ್ ಏನಾದರೂ ವಿರೋಧ ಪಕ್ಷ ಕೆಲಸವನ್ನಾದರೂ ಸರಿಯಾಗಿ ನಿಭಾಯಿಸಿತ್ತೇ? ಇದೊಂತರ ಕೋಗಿಲೆ ಗೂಡಲ್ಲಿ ಕಾಗೆ ಮೊಟ್ಟೆ ಇಟ್ಟ ಹಾಗೆ …!!! ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದು ಸಮರ್ಥ ವಿರೋಧ ಪಕ್ಷದ ಕೆಲಸ ಮಾಡಿದ್ದು ಜೆಡಿಎಸ್,ಗೆದ್ದಿದ್ದು ಕಾಂಗ್ರೆಸ್ಸ್ …!!!

ಇನ್ನು ಬಿಜೆಪಿ ಸೋಲಿಗೆ ಕಾರಣಗಳನ್ನು ದುರ್ಬೀನು ಹಾಕಿಕೊಂಡೇನು ಹುಡುಕಬೇಕಿಲ್ಲ.ಸಾಲು ಸಾಲು ಡಿ-ನೋಟಿಫಿಕೇಷನ್,ಭ್ರಷ್ಟಾಚಾರದ ಹಗರಣಗಳು,ಬ್ಲೂ-ಫಿಲಂ ಕರ್ಮಕಾಂಡ ಅದು ಇದು ಅಂತಲೇ ಪಟ್ಟಿ ಮಾಡಿಬಿಡಬಹುದು.ಇವೆಲ್ಲಕ್ಕೂ ಕಳಶವಿಟ್ಟಂತೆ ಬಿಜೆಪಿಯ ಮಾಸ್ ನಾಯಕ ಯಡ್ಯೂರಪ್ಪರನ್ನು, ಬೆಂಗಳೂರಿನ ತನ್ನ ಕ್ಷೇತ್ರವೊಂದನ್ನು ಬಿಟ್ಟು ಇನ್ನೆಲ್ಲೂ ನಿಂತು ಒಂದು ಸಂಸದನ ಸ್ಥಾನ ಗೆಲ್ಲಲಾಗದ ರಾಷ್ಟ್ರೀಯ ನಾಯಕ(?)ರೊಬ್ಬರ ಕುತಂತ್ರದಿಂದ ಪಕ್ಷ ತೊರೆದು ಹೋಗುವಂತೆ ಮಾಡಿದ್ದು ಮುಖ್ಯ ಕಾರಣ.ಇನ್ನು ದಕ್ಷಿಣ ಕನ್ನಡದಲ್ಲಿ ಹಾಲಾಡಿ,ಯೋಗಿಶ್ ಭಟ್,ನಾಗರಾಜ್ ಶೆಟ್ಟಿ ಅಂತವರ ವಿಷಯದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ನಡೆದುಕೊಂಡ ರೀತಿಯಿಂದ ಮತ್ತು  ಸದಾನಂದ ಗೌಡರನ್ನ ವಿನಾಕಾರಣ ಕುರ್ಚಿಯಿಂದ ಇಳಿಸಿದ್ದು ಬಿಜೆಪಿಗೆ ಮುಳುವಾಯಿತು.

ಮತ್ತಷ್ಟು ಓದು »