ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 26, 2013

92

ಮಹಿಳೆಯರ ಸಮಸ್ಯೆಗಳು – ಒಂದು ನೋಟ

‍ನಿಲುಮೆ ಮೂಲಕ

– ಮು.ಅ ಶ್ರೀರಂಗ, ಬೆಂಗಳೂರು

ವಿಧವೆಯರ ಸಮಸ್ಯೆಗಳುನಮ್ಮ ಬುದ್ಧಿಜೀವಿಗಳು ಸಾಹಿತಿಗಳು ಅದರಲ್ಲೂ ಮುಖ್ಯವಾಗಿ ಸ್ತ್ರೀವಾದಿ ಸ್ತ್ರೀಸಂವೇದನೆ ಎಂಬ ಹೆಸರುಗಳಿಂದ ಪ್ರಸಿದ್ಧರಾಗಿರುವ ಒಂದು ಸಾಕಷ್ಟು ದೊಡ್ಡ ಗುಂಪು ಮಾಡುತ್ತಿರುವ ಒಂದು ಪ್ರಮಾದವೆಂದರೆ,ನಮ್ಮ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂದಿನ ಎಲ್ಲಾ ಸಮಸ್ಯೆಗಳಿಗೆ ಒಬ್ಬ ಊಹಾತ್ಮಕ ಶತ್ರುವನ್ನು ತಂದು ಜನತೆಯ ಮುಂದಿರಿಸಿ,  ಆ ಎಲ್ಲಾ ಸಮಸ್ಯೆಗಳಿಗೂ ಈತನೇ ಕಾರಣ ಎಂದು ದೂಷಿಸುತ್ತಿರುವುದು. ಆ ಊಹಾತ್ಮಕ ಶತ್ರುವೇ “ಮನು”ಮತ್ತು ಆತನ ಹೆಸರಿನಲ್ಲಿದೆ ಎನ್ನಲಾಗುತ್ತಿರುವ “ಮನು ಸಂಹಿತೆ”. ಜತಗೆ ಆತನ ವಂಶಜರಂತೆ ವರ್ತಿಸುತ್ತಿರುವ ಇಂದಿನ ಮೇಲ್ಜಾತಿಗಳು. ಈ ಬುದ್ಧಿಜೀವಿಗಳು ತಮ್ಮ ವಾದಕ್ಕೆ ಪೂರಕವಾಗಿ “ಬ್ರಿಟೀಶ್ ಚರಿತ್ರಕಾರರು”ಬರೆದ “ನಮ್ಮ ಇತಿಹಾಸ”ವನ್ನು ತಮ್ಮ ವಾದಕ್ಕೆ ಸಾಕ್ಷ್ಯ ಎಂಬಂತೆ ತೋರಿಸುತ್ತಿದ್ದಾರೆ.
ಇಂದು ಆಗಾಗ ಚರ್ಚೆಗೆ ವಸ್ತುವಾಗಿರುವ ಎರಡು ವಿಷಯಗಳೆಂದರೆ:-

(೧) ಮಹಿಳೆಯರ  “ಆ ಮೂರುದಿನಗಳ” ಮತ್ತು (೨) “ವಿಧವೆಯರ”ಸಮಸ್ಯೆಗಳು.

ಇಂದು ನಮ್ಮೊಡನಿರುವ ಬಹುಪಾಲು ಮಂದಿ ಪ್ರಗತಿವಾದಿಗಳು,ಪುರೋಗಾಮಿಗಳು ಸ್ತ್ರೀ ವಾದಿಗಳಲ್ಲಿ ಭಾರತದ ಸ್ವ್ವಾತಂತ್ರ್ಯದ  ಆಸುಪಾಸಿನ ಪೀಳಿಗೆಯವರೇ ಜಾಸ್ತಿ. ಈಗ್ಗೆ ೬೦-೭೦ ವರ್ಷಗಳ ಹಿಂದೆ ಮತ್ತು ಅವರುಗಳೇ ಹೇಳುವಂತೆ ಅದಕ್ಕೂ ಹಿಂದೆ ಮಹಿಳೆಯರು “ಆ ಮೂರು ದಿನಗಳನ್ನು”ಹಳ್ಳಿಯಲ್ಲಿನ ವಿಶಾಲವಾದ ದೊಡ್ಡ ಮನೆಯಲ್ಲಿ ಅದಕ್ಕೆಂದೇ ಮೀಸಲಾದ ಒಂದು ಕೋಣೆಯಲ್ಲಿರುತ್ತಿದ್ದುದು ನಿಜ. ಇಂದು ಮೇಲ್ಜಾತಿಗಳಲ್ಲು   ಸಹ  ಆ ಮೈಲಿಗೆಯ ಮೂರು ದಿನಗಳಲ್ಲಿ  ಹಿಂದಿನಂತೆ “ಅಸ್ಪೃಶ್ಯರಾಗಿ” ಕಾಲ ಕಳೆಯುತ್ತಿಲ್ಲ. ಇದಕ್ಕೆ ಬದಲಾದ ಸಾಮಾಜಿಕ ಜೀವನದ ರೀತಿ ನೀತಿಗಳೇ ಕಾರಣ. ಶಿಕ್ಷಣಕ್ಕಾಗಿ ಉದ್ಯೋಗಕ್ಕಾಗಿ ಹಳ್ಳಿಗಳನ್ನು ಬಿಟ್ಟು ಪಟ್ಟಣ ಸೇರಿದ ಮೇಲೆ ನಂತರ ಮದುವೆ ಸಂಸಾರ ಮಕ್ಕಳು ….. ಹೀಗೆ ಈ ಜೀವನ ಚಕ್ರ ತಿರುಗಬೇಕಾದರೆ,ಗಂಡ ಹೆಂಡತಿ ಇಬ್ಬರೂ ದುಡಿಯಲೇ ಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. ಒಂದು ವೇಳೆ ಹೆಂಡತಿ ದುಡಿಯಲು ಹೋಗದೆ ಇದ್ದರೂ ಸಹ ಪಟ್ಟಣದ ಮನೆಗಳಲ್ಲಿ ಪ್ರತ್ಯೇಕವಾಗಿ “ಆ ಮೂರು ದಿನಗಳು”ಕೂರಲು ಜಾಗವೆಲ್ಲಿದೆ?ಜತೆಗೆ ಕೆಲಸಕ್ಕೆ ಹೋಗುವ ಗಂಡನಿಗೆ,ಶಾಲೆಗೆ ಹೋಗುವ ಮಕ್ಕಳಿಗೆ ಹೊತ್ತಿಗೆ ಸರಿಯಾಗಿ ಊಟ-ತಿಂಡಿ ಮಾಡುವವರು ಯಾರು? ಹಿಂದಿನ ಕಾಲದ ರೀತಿಯ ಅವಿಭಕ್ತ ಕುಟುಂಬಗಳ ಕಾಲ ಇದಲ್ಲ. ಇಂದು ಯಾರು ತಮ್ಮನ್ನು  ಸ್ತ್ರೀ ವಾದಿಗಳು,ಸ್ತ್ರೀ ಸಂವೆದನೆಯವರು, ಪ್ರಗತಿಪರರು ಎಂದೆಲ್ಲ ಹೇಳಿಕೊಳ್ಳುತ್ತಿದ್ದಾರೋ  ಅವರೂ ಹಿಂದೆ ತಮ್ಮ ಅಜ್ಜಿ ಮುತ್ತಜ್ಜಿಯರು ಅನುಭವಿಸುತ್ತಿದ್ದ  “ಆ ಮೂರು ದಿನಗಳ”ಅಸ್ಪೃಶ್ಯತೆಯನ್ನು ಸ್ವತಃ ತಮ್ಮ ಮನೆಗಳಲ್ಲಿ(ಮಗಳು ಮೊಮ್ಮಗಳು ಸೊಸೆ,ಇವರುಗಳಿಗೆ ಸಂಬಂಧಿಸಿದಂತೆ) ಆಚರಿಸುತ್ತಿಲ್ಲ

ಇದೇ ರೀತಿ ವಿಧವೆಯರ ಸಮಸ್ಯೆಗಳು ಇಂದು ಹಿಂದ್ದಿದ್ದ ಹಾಗೆ ಇಲ್ಲ. ಈಗ ವಿಧವೆಯರು ಕೇಶ ಮುಂಡನ ಮಾಡಿಸಿಕೊಳ್ಳುತ್ತಿಲ್ಲ,ಕೆಂಪುಸೀರೆ ಉಟ್ಟು ಮನೆಯೊಳಗೇ ಕುಳಿತುಕೊಳ್ಳುತ್ತಿಲ್ಲ . ಅವರೂ ಸಹ ಹೂ ಮುಡಿಯುತ್ತಾರೆ,ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಶುಭ ಸಮಾರಂಭಗಳಾದ ಮದುವೆ. ಗೃಹಪ್ರವೇಶ ಇತ್ಯಾದಿಗಳಿಗೆ ಹೋಗುತ್ತಾರೆ. ಯಾರೂ ಇದನ್ನು ಆಕ್ಷೇಪಿಸಿಲ್ಲ,ಈ ರೀತಿ ಮಾಡಬಾರದೆಂದು ಅಪ್ಪಣೆ ಮಾಡಿಲ್ಲ. ಈ ಎಲ್ಲಾ ವಿದ್ಯಮಾನಗಳ ಅರಿವು ನಮ್ಮ ಪ್ರಗತಿಪರರಿಗೆ ಇದೆ. ತಮ್ಮ ಮನೆಯಲ್ಲಿ,ಸ್ನೇಹಿತರ  ಮನೆಗಳಲ್ಲಿ ,ಅಕ್ಕ ಪಕ್ಕದ ಮನೆಗಳಲ್ಲಿ ನೋಡಿರುತ್ತಾರೆ. ಆದರೆ ಭಾಷಣ ಮಾಡುವಾಗ ಪತ್ರಿಕೆಗಳಿಗೆ ಲೇಖನ ಬರೆಯುವಾಗ ಮರೆಯುತ್ತಾರೆ. ಇದೊಂದು ರೀತಿಯ ಜಾಣ ಮರೆವು! ಹಳ್ಳಿಗಳಲ್ಲಿ ಕೇವಲ ಪೌರೋಹಿತ್ಯವನ್ನೇ ಅವಲಂಬಿಸಿಕೊಂಡು ಬಾಳುತ್ತಿರುವ ಕುಟುಂಬಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಕೆಲವೊಂದು ಹಳ್ಳಿಗಳಲ್ಲಿ  ಬ್ರಾಹ್ಮಣ ಜಾತಿಯ ಕುಟುಂಬಗಳೇ ಇಲ್ಲ. ಇದ್ದ ಅಲ್ಪ ಸ್ವಲ್ಪ ಹೊಲ ಗದ್ದೆ ಮನೆ ಮಾರಿ ಪಟ್ಟಣ ಸೇರಿಕೊಂಡಿದ್ದಾರೆ. ಇಂತಹುದರಲ್ಲಿ ಯಾವುದಾದರು ಒಂದೆರೆಡು ಹಳ್ಳಿಗಳಲ್ಲಿ ಜೀವಿಸುತ್ತಿರುವ ಬ್ರಾಹ್ಮಣ ಕುಟುಂಬಗಳನ್ನು ಉದಾಹರಿಸಿ “ನೋಡಿ ಇಲ್ಲಿ ಈಗಲೂ ಹಿಂದಿನಂತೆಯೇ ಕಟ್ಟುಪಾಡುಗಳಿವೆ”ಎಂದು ಯಾರಾದರೂ ಹೇಳಬಹುದು. ಅದಕ್ಕೆ ವಿರುದ್ದವಾದ ಸಾಕಷ್ಟು ಉದಾಹರಣೆಗಳನ್ನು ನಮ್ಮ ಸುತ್ತಮುತ್ತ ದಿನಾ ನಾವುಗಳು ನೋಡಿರುತ್ತೇವೆ. ಹೀಗಾಗಿ ಆ ಒಂದೆರೆಡು exceptionsಗಳನ್ನೇ ಆಧರಿಸಿ ನಮ್ಮ ಸಮಾಜ ಅದರಲ್ಲೂ ಈ ಬ್ರಾಹ್ಮಣ ಜಾತಿ ಪಾಚಿಗಟ್ಟಿದೆ ಎಂದು ಧಿಕ್ಕಾರ ಹಾಕುವುದು,ದ್ವೇಷಿಸುವುದು ಸರಿಯಾದ ಮಾರ್ಗವೇ ಎಂದು ವಿಚಾರವಂತರು ಒಮ್ಮೆ ಯೋಚಿಸುವುದು ಒಳಿತು.

ಇಂದು ಬದಲಾವಣೆಗೆ ಮುಕ್ತವಾಗಿ ತೆರೆದುಕೊಂಡಿರುವುದು ಇವರುಗಳೇ ಎಂಬುದು ಪ್ರಗತಿಪರರಿಗೆ ಕಹಿ ಎನಿಸಬಹುದಾದ ಸತ್ಯ. ಹೆಂಗಸರ ಕಷ್ಟಗಳನ್ನು ಕುರಿತಂತೆ ಇದುವರೆಗೆ ನಾನು ಒಂದು ಜಾತಿಗೆ ಸೇರಿದವರ ಉದಾಹರಣೆ ಕೊಟ್ಟಿರುವುದಕ್ಕೆ ಕಾರಣ (೧)ಇಂದು ನಮ್ಮ ಪ್ರಗತಿಪರರಿಗೆ,ಜಾತಿವಿನಾಶಕ್ಕೆಕಂಕಣ ಬದ್ಧರಾಗಿರುವವರಿಗೆ ಮೇಲ್ಜಾತಿಗಳು ಕೂಪ ಮಂಡೂಕಗಳಂತೆ ಕಾಣುತ್ತಿರುವು. (೨) ಮೂಢನಂಬಿಕೆ,ಕಂದಾಚಾರ,ಸಂಪ್ರದಾಯಗಳನ್ನು ಈ ಸಮಾಜದಲ್ಲಿ ತುಂಬುತ್ತಿರುವವರು, ಹೇರುತ್ತಿರುವವರು ಅವರುಗಳೇ ಎಂಬ ತಪ್ಪು ಅಭಿಪ್ರಾಯ,ಕಲ್ಪನೆ ಎಲ್ಲಡೆ ಹರಡಿರುವುದು.(೩)ಜಾತಿಗಳು ಉಳಿದಿರುವುದಕ್ಕೆ ಅವರುಗಳೇ ಕಾರಣ ಎಂಬ ಪೂರ್ವಗ್ರಹ (೪) ಆದರೆ ನಿಜ ಸ್ಥಿತಿ ಹಾಗಿಲ್ಲ ಎಂದು ತೋರಿಸಲು  ಅಷ್ಟೇ. ಬೇರೆ ಇನ್ನು ಯಾವ ಉದ್ದೇಶದಿಂದಲೂ ಅಲ್ಲ.

ಚಿತ್ರ ಕೃಪೆ : http://www.dailymail.co.uk

92 ಟಿಪ್ಪಣಿಗಳು Post a comment
 1. Nagshetty Shetkar
  ಸೆಪ್ಟೆಂ 26 2013

  Mr. Sriranga, do you agree that 60-70 years ago women were treated badly in your caste?

  ಉತ್ತರ
  • M.A.Sriranga
   ಸೆಪ್ಟೆಂ 26 2013

   Mr. Shetkar women were not treated badly in our caste;;but our elders followed what their forefathers told. Now we are changed and changing daily. One thing you have to remember is that especially in karnataka our caste has broken so many caste barricades. I am very confident about it. No doubt in it.

   ಉತ್ತರ
   • Nagshetty Shetkar
    ಸೆಪ್ಟೆಂ 26 2013

    ಬ್ರಾಹ್ಮಣ್ಯ ಹೆಂಗಸರಿಗೆ ನರಕ ಸದೃಶ.

    ಉತ್ತರ
    • ಸೆಪ್ಟೆಂ 26 2013

     ಕೆಲವು ಕಡೆ ಗಂಡಸರು ದುಡಿದಿದ್ದನ್ನೆಲ್ಲಾ ಕುಡಿದು ಖರ್ಚು ಮಾಡಿ ಹೆಂಡತಿಗೆ ಹೊಡೆಯುವವರನ್ನು ನೋಡಿದ್ದೇನೆ. ಬಹುಶಃ ಬ್ರಾಹ್ಮಣ್ಯದಿಂದಲೇ ಹೀಗಾಗ್ತಾ ಇರಬಹುದು ಅಲ್ವಾ ?

     ಉತ್ತರ
     • Nagshetty Shetkar
      ಸೆಪ್ಟೆಂ 26 2013

      ಕುಡಿದು ಹೆಂಡತಿಗೆ ಹೊಡೆಯುವವರು ಪಾಪಿಗಳು. ಆದರೆ ಸನಾತನ ಧರ್ಮದ ಹೆಸರಿನಲ್ಲಿ ಹೆಣ್ಣನ್ನು exploit ಮಾಡುವ ವೈದಿಕರು ಮಹಾ ಪಾಪಿಗಳು.

      ಉತ್ತರ
      • ಸೆಪ್ಟೆಂ 27 2013

       ಆಯ್ತು ಶೆಟ್ಕರ್ ರವರೇ, ಸನಾತನ ಧರ್ಮ ಬಿಟ್ಟು ಉಳಿದ ಧರ್ಮ ಅಥವಾ ಯಾವುದೇ ಸಿದ್ಧಾಂತದ ಆಧಾರದ ಮೇಲೆ ಹೆಣ್ಣನ್ನು ಶೋಷಣೆ ಮಾಡುವವರು ಯಾವ ಸಾಲಿಗೆ ಸೇರುತ್ತಾರೆ? ಪಾಪಿಗಳೋ ಅಥವಾ ಮಹಾಪಾಪಿಗಳೋ ?

       ಉತ್ತರ
       • Nagshetty Shetkar
        ಸೆಪ್ಟೆಂ 27 2013

        ಉಳಿದ ಧರ್ಮ ಸಿದ್ಧಾಂತಗಳ ಉಸಾಬರಿ ನಿಮಗೇಕೆ? ಮೊದಲು ನಿಮ್ಮ ಮನೆಯಂಗಳದಲ್ಲಿ ಕೊಳೆಯುತ್ತಿರುವ ಹೇಸಿಗೆಯನ್ನು ಚೊಕ್ಕ ಮಾಡಿ.

        ಉತ್ತರ
        • ಸೆಪ್ಟೆಂ 27 2013

         ಹೌದು ಶೆಟ್ಕರ್ ರವರೇ,ತಪ್ಪಾಯಿತು. ಉಳಿದ ಧರ್ಮ, ಸಿದ್ಧಾಂತಗಳವರು ಪಾಪಿಗಳಾಗಲೀ, ದುಷ್ಪಾಪಿಗಳಾಗಲಿ, ಮಹಾಪಾಪಿಗಳಾಗಲೀ ಅಥವಾ ಪುಣ್ಯವಂತರಾಗಲಿ ನನಗೇಕೆ? ನಾನು ನನ್ನ ಮನೆಯಂಗಳ ಚೊಕ್ಕ ಮಾಡಲು ಪ್ರಯತ್ನಿಸುತ್ತೇನೆ. ನೀವೂ ಸಹ ನಿಮ್ಮ ಮನೆಯಂಗಳ ಚೊಕ್ಕೆ ಮಾಡಲು ಪ್ರಯತ್ನಿಸಿ.

         ಉತ್ತರ
        • ಗಿರೀಶ್
         ಆಕ್ಟೋ 2 2013

         ಉಳಿದ ಧರ್ಮ ಸಿದ್ಧಾಂತಗಳ ಉಸಾಬರಿ ನಿಮಗೇಕೆ? ಮೊದಲು ನಿಮ್ಮ ಮನೆಯಂಗಳದಲ್ಲಿ ಕೊಳೆಯುತ್ತಿರುವ ಹೇಸಿಗೆಯನ್ನು ಚೊಕ್ಕ ಮಾಡಿ

         ಶೆಟ್ಕರ್, ನೀವು ವೈಧಿಕರಲ್ಲದ ಮೇಲೆ ನಿಮಗೇಕೆ ಅವರ ಉಸಾಬರಿ? ನಿಮ್ಮದನ್ನು ನೀವು ತೊಳೆದುಕೊಳ್ಳಿ, ತಾವೇಕೆ ಇನ್ನೂ ವೈಧಿಕರದನ್ನು ತೊಳೆಯುವ ಕಾಯಕದಲ್ಲಿದ್ದೀರಾ?

         ಉತ್ತರ
         • ಆಕ್ಟೋ 8 2013

          ಪ್ರಗತಿಪರರು ಎಂದರೆ ಹೀಗೆಯೇ ಅಲ್ಲವೇ? ಮಾತಿನಲ್ಲಿ ಕಾವಿ ಕೃತಿಯಲ್ಲಿ ಕೋವಿ ! 🙂

          ಉತ್ತರ
    • shivarama
     ಸೆಪ್ಟೆಂ 27 2013

     ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ. ಬ್ರಾಹ್ಮಣ ಕುಟುಂಬಗಳಲ್ಲಿ ಅತಿಯಾದ ಮಡಿವಂತಿಕೆಯ ಆಚರಣೆಗಳಿಂದ ಹೆಂಗಸರ ಮೇಲೆ ಅತಿಯಾದ ಕೆಲಸದ ಒತ್ತಡ ಬೀಳುತ್ತದೆ. ಪುರೊಹಿತಶಾಹೀ ಕಂದಾಚಾರಗಳ ಕಾರಣದಿಂದಾಗಿ ಇಂದು ಹಳ್ಳಿಗಳಲ್ಲಿರುವ ಬ್ರಾಹ್ಮಣ ವರರಿಗೆ ಮದುವೆಯಾಗಲು ವಧುಗಳೇ ಸಿಗದ ಪರಿಸ್ಥಿತಿ ತಲೆದೋರಿದೆ. ಹಳ್ಳಿಯ ಬ್ರಾಹ್ಮಣ ಕುಟುಂಬಗಳಲ್ಲಿನ ಮಡಿ ಮೈಲಿಗೆ, ಕಂದಾಚಾರಗಳ ಪರಿಣಾಮವಾಗಿ ಅತಿಯಾದ, ನಿರಂತರ ಕೆಲಸದ ಒತ್ತಡ ಬೀಳುವ ಕಾರಣ ವಿದ್ಯಾವಂತ ಬ್ರಾಹ್ಮಣ ಯುವತಿಯರಾರೂ ಹಳ್ಳಿಯಲ್ಲಿರುವ ಬ್ರಾಹ್ಮಣ ಯುವಕರನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಹಳ್ಳಿಗಳಲ್ಲಿ ಬ್ರಾಹ್ಮಣ ಜನಾಂಗವೇ ವಿನಾಶದ ಅಂಚಿಗೆ ತಲುಪುತ್ತಿದೆ. ಅದರೂ ಬ್ರಾಹ್ಮಣ ಪುರೋಹಿತಶಾಹಿಗಳು ತಮ್ಮ ಮಡಿ, ಮೈಲಿಗೆ, ಕಂದಾಚಾರಗಳಲ್ಲಿ ಕಿಂಚಿತ್ತೂ ಸುಧಾರಣೆ ತರುವ ನಿಟ್ಟಿನಲ್ಲಿ ಮುಂದೆ ಬರುತ್ತಿಲ್ಲ.

     ಉತ್ತರ
     • ಸೆಪ್ಟೆಂ 27 2013

      ನಿಜ ಶಿವರಾಮ್ ರವರೇ, ಬ್ರಾಹ್ಮಣರನ್ನು ಬಿಟ್ಟು ಉಳಿದವರಲ್ಲಿ ಪೇಟೆಯಲ್ಲಿರುವ ವರಗಳಿದ್ದರೂ ಅವರನ್ನು ಬಿಟ್ಟು ವಧುಗಳು ಹಳ್ಳಿಯಲ್ಲಿರುವ ವರಗಳನ್ನೇ ಮದುವೆ ಆಗುತ್ತಿದ್ದಾರೆ.

      ಉತ್ತರ
      • Nagshetty Shetkar
       ಸೆಪ್ಟೆಂ 27 2013

       ಮಹೇಶ್ ಅವರೇ, ಮಾತಿನ ಚಕಮಕಿ ಏಕೆ? ಒಮ್ಮೆ ಹಳ್ಳಿಗಳಿಗೆ ಹೋಗಿ ಅಲ್ಲಿ ಬ್ರಾಹ್ಮಣ ಕುಟುಂಬಗಳಲ್ಲಿ ಮಡಿ ಮೈಲಿಗೆಯಲ್ಲಿ ನರಳುತ್ತಾ ಜೀವನ ಸವೆಸುತ್ತಿರುವ ಹೆಂಗಸರ ಸ್ಥಿತಿಗತಿಯನ್ನು ಪರಾಮರ್ಶಿಸಿ ಬನ್ನಿ. ಆಗ ನಿಮಗೂ ಅರ್ಥವಾಗುತ್ತದೆ.

       ಉತ್ತರ
       • ಸೆಪ್ಟೆಂ 27 2013

        ಶೆಟ್ಕರ್ ರವರೇ, ನಾನೆಲ್ಲಿ ಮಾತಿನ ಚಕಮಕಿ ಮಾಡಿದೆ ? ನನ್ನ ಮೇಲೆ ನೀವು ಯಾಕೆ ಈ ಆರೋಪ ಮಾಡ್ತಾ ಇದ್ದೀರಾ? ನೀವು ಮತ್ತು ಶಿವರಾಮ್ ರವರು ಹೇಳಿದ್ದನ್ನು ಒಪ್ಪಿಕೊಂಡಿದ್ದು ತಪ್ಪಾ?

        ಉತ್ತರ
 2. M.A.Sriranga
  ಸೆಪ್ಟೆಂ 27 2013

  Sivaram you must feel happy if brahmins are vanished away. With brahmins their purohitashaahi wiil also go. Why you are feeling so sad?

  ಉತ್ತರ
  • Nagshetty Shetkar
   ಸೆಪ್ಟೆಂ 27 2013

   Mr. Sriranga, ನಮ್ಮ ಆರಾಧ್ಯ ಸರ್ ಅವರು ಬ್ರಾಹ್ಮಣರು ನಾಶವಾಗಲಿ ಅಂತ ಹೇಳಿಲ್ಲ. ಕಾರುಣ್ಯ ಮೂರ್ತಿಗಳಾದ ಶರಣರ ಸಂಪ್ರದಾಯಕ್ಕೆ ಸೇರಿದ ಆರಾಧ್ಯ ಸರ್ ಅವರೇಕೆ ಬ್ರಾಹ್ಮಣರು ನಾಶವಾಗಲಿ ಎಂದು ಬಯಸುತ್ತಾರೆ?! ಬ್ರಾಹ್ಮಣ್ಯ ನಾಶವಾಗಬೇಕು. ಅದರಿಂದ ಬ್ರಾಹ್ಮಣ ಹೆಂಗಸರಿಗೆ ನಿರಾಳವಾಗಿ ಉಸಿರಾಡಲು ಅವಕಾಶ ಸಿಗುತ್ತದೆ.

   ಉತ್ತರ
   • ವಿಜಯ್ ಪೈ
    ಸೆಪ್ಟೆಂ 28 2013

    ಮತ್ತೆ ದ್ವಿಪಾತ್ರಾಭಿನಯದಲ್ಲಿ ಸತ್ಯಸಂಧ ‘ಕಾಯಕಯೋಗಿ’ ಶರಣರು!..ಶೆಟ್ಕರ್ ಸರ್.. ಕನಿಷ್ಟ ಬರೆಯುವಾಗಲಾದರೂ ಬುದ್ಧಿ ಉಪಯೋಗಿಸಿ..ನಿಮ್ಮ ಶರಣಬಾಂಧವ ಆರಾಧ್ಯರಿಗೆ ತಮ್ಮ ಹೆಸರಿನಿಂದಲೇ ಬರೆಯಲು ಹೇಳಿ..ಇಲ್ಲವಾದರೆ ನೀವು ಹೀಗೆ ನಿಮ್ಮವರ ಬಣ್ಣ ಬಯಲು ಮಾಡುತ್ತ ವಿದೂಷಕರಾಗುತ್ತೀರಿ:).

    ಉತ್ತರ
    • Nagshetty Shetkar
     ಸೆಪ್ಟೆಂ 28 2013

     Mr. Vijay, you used fake ids in Avadhi to throw dung at Darga Sir. Aradhya Sir has never thrown dung on any one. He is creating awareness against Vaidik Viruses.

     ಉತ್ತರ
     • ವಿಜಯ್ ಪೈ
      ಸೆಪ್ಟೆಂ 28 2013

      ಹೌದಾ..ನಾನು ಯಾವ ಹೆಸರಿನಲ್ಲಿ ಬರೆದೆ ಅವಧಿಯಲ್ಲಿ? ಇನ್ನೊಂದೇನೆಂದರೆ ಸಾಮಾನ್ಯನಾದ ನನ್ನ ಮತ್ತು ಆಧುನಿಕ ಕಾಯಕಯೋಗಿ, ಶರಣಬಾಂಧವರಾದ ನಿಮ್ಮಗಳ ಮಧ್ಯೆ ತುಲನೆ ಎಳ್ಳಷ್ಟಾದರೂ ಇದೆಯೆ ಗುರುಗಳೆ? ಸತ್ಯಸಂಧ ಕಾಯಕಯೋಗಿ ಶರಣರು , ಸಮಾಜಕ್ಕೆ ಬೆಳಕನ್ನು ತೋರಬೇಕಾದವರು, ಅಂಧಕಾರದಿಂದ ಸಮಾಜವನ್ನು ಬೆಳಕಿನೆಡೆಗೆ ತೆಗೆದುಕೊಂಡು ಹೋಗುವ ಹೊಣೆ ಹೊತ್ತಿರುವವರು . ಉಳಿದವರನ್ನು ಕಾಯಕ ಯೋಗಿಗಳಾಗಿ ಮಾಡುತ್ತಿರುವವರು, ದಿನವಿಡಿ ಸಮಾಜವನ್ನು ಹೊತ್ತುಕೊಂಡು..ರಾತ್ರಿ ಮಲಗುವಾಗಲಷ್ಟೇ ಇಳಿಸುವವರು ಹೀಗೇ ಮಾಡುವುದೇ ಗುರುಗಳೇ ..ಛೆ 😦

      ಉತ್ತರ
      • Nagshetty Shetkar
       ಸೆಪ್ಟೆಂ 29 2013

       Mr. Vijay, who were Annapoorna, Amaresh, Kattimani? You take many names to throw dung at Darga Sir.

       ಉತ್ತರ
 3. Manohar Naik
  ಸೆಪ್ಟೆಂ 27 2013

  ನಾಗಶೆಟ್ಟಿಯವರೆ

  ಶಿವರಾಮ್ ಬರೆದಿರುವುದಕ್ಕೆ ನೀವು ಆರಾಧ್ಯ ಸರ್ ಬರೆದಿದ್ದಾರೆ ಅನ್ನುತ್ತೀರಾ? ಏನಿದು ವಿಚಿತ್ರ?

  ಬ್ರಾಹ್ಮಣ್ಯ ಎಂದರೇನು? ಅದು ನಾಶವಾಗುವುದು ಎಂದರೇನು?

  ಉತ್ತರ
  • ಸೆಪ್ಟೆಂ 27 2013

   ಮನೋಹರ್ ರವರೇ, ಬ್ರಾಹ್ಮಣ್ಯ ಎಂದರೇನೆಂದು ಸರಿಯಾಗಿ ಗೊತ್ತಿಲ್ಲ. ಆದರೆ ಬ್ರಾಹ್ಮಣ್ಯ ನಾಶವಾಗುವುದು ಅಂದರೆ ಶೆಟ್ಕರ್ ರವರ ತರಹ ಇರುವುದು.

   ಉತ್ತರ
  • ಸೆಪ್ಟೆಂ 27 2013

   ಎಲ್ಲ ಜಾತಿ ಧರ್ಮಗಳಲ್ಲೂ ಬ್ರಾಹ್ಮಣ್ಯ ಇದ್ದವರು ಮತ್ತು ಬ್ರಾಹ್ಮಣ್ಯ ನಾಶವಾದವರು ನಿಮಗೆ ಕಾಣಸಿಗುತ್ತಾರೆ.

   ಉತ್ತರ
  • Nagshetty Shetkar
   ಸೆಪ್ಟೆಂ 28 2013

   Brahmanya is the unwritten constitution of India. It denies rights and dignity to all but Brahmins.

   ಉತ್ತರ
   • ಸೆಪ್ಟೆಂ 28 2013

    ಬ್ರಾಹ್ಮಣರನ್ನು ಬಿಟ್ಟು ಉಳಿದಿರುವವರಿಗೆ ಹಕ್ಕು ಮತ್ತು ಗೌರವಗಳನ್ನು ನಿರಾಕರಿಸುವ ಈ ದೇಶದ ಅಲಿಖಿತ ಸಂವಿಧಾನವೇ ಬ್ರಾಹ್ಮಣ್ಯ. ಬ್ರಾಹ್ಮಣ್ಯ ಎನ್ನುವುದು ಎಲ್ಲ ಜಾತಿ, ಧರ್ಮಗಳವರಲ್ಲೂ ಇರಬಹುದು

    ಉತ್ತರ
   • Manohar Naik
    ಸೆಪ್ಟೆಂ 28 2013

    ಲಿಖಿತ ಮತ್ತು ಅಲಿಖಿತ ಎಂಬುದನ್ನು ಎಲ್ಲಾ ವಿಷಯಗಳಿಗೂ ಹೇಳಬಹುದು, ಬ್ರಾಹ್ಮಣ್ಯದ ಕುರಿತು ಅಲಿಖಿತ ಸಂವಿಧಾನ ಎಂದರೆ ಸಾಲುವುದಿಲ್ಲ, ಅದನ್ನು ಬಿಡಿಸಿ ಹೇಳಿ? ಹಕ್ಕು ಮತ್ತು ಘನತೆಗಳನ್ನು ತಿರಸ್ಕರಿಸುವುದೇ ಬ್ರಾಹ್ಮಣ್ಯ ಎಂದು ನೀವು ಹೇಳುವುದಾದರೆ, ಈ ಕೆಳಗಿನ ಸಂಗತಿಗಳು ಬ್ರಾಹ್ಮಣ್ಯವೆ ಹೇಳಿ
    1. ತುರ್ತು ಪರಿಸ್ಥಿಯಲ್ಲಿ ಇಂದಿರಾ ಗಾಂಧಿ ನೀವು ಹೇಳುವ ಎಲ್ಲವನ್ನೂ ಮೊಟಕುಗೊಳಿಸಿದರು ಅದು ಬ್ರಾಹ್ಮಣ್ಯವೆ?
    2.ಬ್ರಾಹ್ಮಣರಿಗೆ ಮೀಸಲಾತಿಯ ಮೂಲಕ ಪ್ರವೇಶ ದೊರಕದಿರುವುದು ಅವರ ಹಕ್ಕನ್ನು ನಿರಾಕರಿಸಿದಂತೆ ಅಲ್ಲವೆ, ಅದು ಬ್ರಾಹ್ಮಣ್ಯವೆ?
    3. ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯ ಮೂಲಕ ಮದ್ಯಮವರ್ಗದವರ ಮೇಲೆ ಬರೆ ಹಾಕಿದ್ದಾರಲ್ಲವೆ, ಅದು ಬ್ರಾಹ್ಮಣ್ಯವೆ?
    4.ಅಂಬೇಡ್ಕರ್ ರವರಿಗೆ ಸಹಾಯ ಮಾಡಿದ ಬಹುತೇಕ ಜನರು ಬ್ರಾಹ್ಮಣರಾಗಿದ್ದರೂ, ಬ್ರಾಹ್ಮಣರಿಗೆ ಅನ್ಯಾಯವಾಗುವಂತೆ ನೋಡಿಕೊಂಡಿದ್ದು ಬ್ರಾಹ್ಮಣ್ಯವೆ?
    5.ಕಾಂಗ್ರೇಸ್ ಸಿ.ಬಿ.ಐ ಅನ್ನು ಬಳಸಿಕೊಂಡು ಪ್ರಬಲವಾಗಿ ಬೆಳೆಯುವ ರಾಜಕೀಯ ಪಕ್ಷಗಳ, ರಾಜಕೀಯ ನಾಯಕರ ಹಕ್ಕುಗಳನ್ನು ಮೊಟಕುಗೊಳಿಸಿರುವು ಬ್ರಾಹ್ಮಣ್ಯವೆ?
    6.ಮತದಾರರಿಗೆ ಹಕ್ಕೇ ಇಲ್ಲವೆಂಬಂತೆ ಅನಂತಮೂರ್ತಿಯಂತ ಸಾಹಿತಿಗಳು ಮಾತನಾಡುತ್ತಿರುವುದು ಬ್ರಾಹ್ಮಣ್ಯವಲ್ಲವೆ?
    7. ವರ್ತಮಾನ ಮತ್ತು ಅವಧಿಯಂತಹ ಬ್ಲಾಗುಗಳಲ್ಲಿ ಅವರಿಗೆ ರುಚಿಸುವ ಅಭಿಪ್ರಾಯಗಳನ್ನು ಮಾತ್ರ ಪ್ರಕಟಿಸಿ, ರುಚಿಸದ ಅಭಿಪ್ರಾಯಗಳನ್ನು ಹಾಕದೇ ಇರುವುದು, ಭಿನ್ನ ಅಭಿಪ್ರಾಯ ಹೊಂದಿರುವವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಮತ್ತು ಘನತೆಯನ್ನು ನಿರಾಕರಿಸಿದಂತೆ ಅಲ್ಲವೆ? ಅದು ಬ್ರಾಹ್ಮಣ್ಯವೆ?
    8. ಇಂಗ್ಲೆಂಡಿನಲ್ಲಿರುವದೂ ಅಲಿಖಿತ ಸಂವಿಧಾನ, ಹಾಗಾದರೆ ಅದೂ ಸಹ ಬ್ರಾಹ್ಮಣ್ಯವೆ?>
    9. ಈ ಹಿಂದಿನ ಪೋಸ್ಟ್ ಗಳಲ್ಲಿ, ದರ್ಗಾರವರ ಬಗ್ಗೆ ಟೀಕಿಸಬಾರದು ಎಂದು ನೀವು ಮತ್ತೊಬ್ಬರ ವಿಮರ್ಶಾ ಸ್ವಾತಂತ್ರವನ್ನು ಹತ್ತಿಕ್ಕಲು ಪ್ರಯತ್ನಸಿದ್ದು ಬ್ರಾಹ್ಮಣ್ಯವೆ?

    ನೀವು ಬ್ರಾಹ್ಮಣ್ಯಕ್ಕೆ ಕೊಡುವ ವ್ಯಾಖ್ಯಾನ ಸತ್ಯ ಎಂದು ನಂಬಿದ್ದರೆ, ಮೇಲೆ ನಾನು ಹೇಳಿದ ಎಲ್ಲಾ ವಾಕ್ಯಗಳು ಬ್ರಾಹ್ಮಣ್ಯವೇ ಆಗುತ್ತವೆ..

    ಉತ್ತರ
    • Nagshetty Shetkar
     ಸೆಪ್ಟೆಂ 28 2013

     Mr. Naik, ನಿಮಗೆ ಲಾಜಿಕ್ ಹೇಳಿಕೊಟ್ಟದ್ದು ಯಾರು?? ಬಾಲಗ್ರಹ ಪೀಡಿತರ ಮೆದುಳು ಟೊಳ್ಳು ಅಂತ ಕಾಣ್ತದೆ!! ನಿಮ್ಮಂತಹವರ ಜೊತೆಗೆ ಪ್ರಾಮಾಣಿಕವಾಗಿ ಸಂವಾದ ನಡೆಸಲು ಹೋಗಿ ದರ್ಗಾ ಸರ್ ಅವಧಿಯಲ್ಲಿ ನಿಮ್ಮಿಂದ ಲೇವಡಿಗೆ ಒಳಗಾದರು. ಆದರೆ ನನಗೆ ನಿಮ್ಮ ತಂತ್ರಗಾರಿಕೆಯ ಅರಿವು ಇದೆ. ನಿಮ್ಮ ಆಟ ನನ್ನ ಹತ್ತಿರ ನಡೆಯೋದಿಲ್ಲ, ಜಾಗ್ರತೆ.

     ಉತ್ತರ
     • ಸೆಪ್ಟೆಂ 28 2013

      ಮನೋಹರ್ ರವರೇ, ಶೆಟ್ಕರ್ ರವರು ನಿಮ್ಮ ಲಾಜಿಕ್ ಬಗ್ಗೆ ಪ್ರಶ್ನೆಯೆತ್ತಿದ್ದಾರೆ ಎಂದರೆ ಅದು ಸರಿಯೇ ಇರುತ್ತದೆ. ನಿಮ್ಮ ಲಾಜಿಕ್ ಸರಿ ಇಲ್ಲದಿದ್ದರೆ ಅದು ನಿಮ್ಮ ತಪ್ಪಲ್ಲ, ಅದು ನಿಮಗೆ ಲಾಜಿಕ್ ಹೇಳಿಕೊಟ್ಟವರ ತಪ್ಪು ಇರಬಹುದು. ಯಾವುದಕ್ಕೂ ನೀವು ಒಮ್ಮೆ ಶೆಟ್ಕರ್ ರವರ ಬಳಿ ಹೊಸದಾಗಿ ಲಾಜಿಕ್ ಕಲಿಯುವದೊಳಿತು. ಶೆಟ್ಕರ್ ರವರಿಗೆ ಪ್ರಶ್ನೆಗಳಲ್ಲಿ ತಂತ್ರಗಾರಿಕೆಯನ್ನು ಕಂಡುಹಿಡಿಯುವ ಬುದ್ಧಿವಂತಿಕೆ ಇದೆ. ಅಂತಹ ಪ್ರಶ್ನೆಗಳಿಗೆ ಅವರಿಂದ ಉತ್ತರ ನಿರೀಕ್ಷಿಸಬೇಡಿ. ಅಂತಹ ಪ್ರಶ್ನೆ ಹಾಕುವವರ ಮೆದುಳು ಟೊಳ್ಳೆಂದೂ, ಬಾಲಗ್ರಹ ಪೀಡಿತರೆಂದೂ ನಿರಾಯಾಸವಾಗಿ ಅವರು ಹೇಳಬಲ್ಲರು. ಇಂಥವರ ಬಳಿ ನೀವು ಪ್ರಶ್ನೆಗಳನ್ನು ಹಾಕಿ ಆಟವಾಡಲು ಹೋಗಬೇಡಿ, ನಿಮ್ಮನ್ನು ಬೆದರಿಸಿ ಓಡಿಸಿಬಿಡುತ್ತಾರೆ. ಜಾಗ್ರತೆ.

      ಉತ್ತರ
     • Manohar Naik
      ಸೆಪ್ಟೆಂ 29 2013

      ಶೇಟ್ಕರ‍್..

      ಬಾಲಗ್ರಹದೋಷ ಪೀಡನೆಯನ್ನು ಆನಂತರ ಹೋಗಲಾಡಿಸುವ, ಮೊದಲು ನಾನು ಕೇಳಿದ ಪ್ರಶ್ನೆಗೆ ಉತ್ತರಿಸಿ, ಬ್ರಾಹ್ಮಣ್ಯ ಎಂದು ನೀವು ಕರೆಯುವ ವಾಖ್ಯಾನಕ್ಕೆ ಸಮೀಪಿಸುವಂತಹ ಉದಾಹರಣೆಗಳನ್ನೇ ನಾನು ನೀಡಿದ್ದೇನೆ, ನಾನು ನೀಡಿದ ಉದಾಹರಣೆ ಏಕೆ ಸರಿಯಲ್ಲ, ಲಾಜಿಕ್ ನಲ್ಲಿರುವ ತೊಂದರೆ ಏನು? ತಿಳಿಸಿ, ಜಾಗ್ರತೆ ಗೀಗ್ರತೆ ಇವೆಲ್ಲಾ ಬಿಟ್ಟುಬಿಡಿ, ಅದಕ್ಕಿಂತ ಹೆಚ್ಚಿನದಾಗಿ ಹೆದರಿಸಲು ಎಲ್ಲರಿಗೂ ಬರುತ್ತೆ, ಭೌದ್ದಿಕ ಚರ್ಚೆ ಮಾಡುವಾಗ ಮೊದಲು ಅದನ್ನು ಮಾಡುವ ಲಾಜಿಕ್ಕನ್ನು ಕಲಿಯಿರಿ,

      ಲಾಜಿಕ್ ನಲ್ಲಿ ಏನು ತೊಂದರೆ ಇದೆ, ಹೇಳಿ ನೋಡುವಾ? ಲಾಜಿಕ್ ನಲ್ಲಿ ಎಷ್ಟು ವಿಧ ಇದೆ, ಅದರಲ್ಲಿರುವ ತೊಂದರೆಗಳೇನು ಎಂಬುದು ನನಗೂ ತಿಳಿದಿದೆ..ಅಂತಹ ಲಾಜಿಕಲ್ ಫ್ಯಾಲಸಿಯನ್ನು ಇಲ್ಲಿ ನಾನು ನಮೂದಿಸಿಲ್ಲ..

      ಉತ್ತರ
      • Nagshetty Shetkar
       ಸೆಪ್ಟೆಂ 29 2013

       Mr. Naik, why should I correct your logic? You should correct it yourself! My concern is about humanity and its problems. Vaidik viruses are making it hard to solve the problems.

       ಉತ್ತರ
 4. vageesh
  ಸೆಪ್ಟೆಂ 27 2013

  ಶೆಟ್ಕರ್ ಅವರೇ ನೀವು ಒಬ್ಬ ಮೂಲಭತವಾದಿ, ಮತಾಂದನಿಗಿಂತ ಕಡಿಮೆಯಿಲ್ಲ. ಯಾಕೆಂದರೆ ನೀವು ಕೂಡ ಒಂದು ಜನಾಂಗವೇ ನಾಶವಾಗಲಿ ಎಂದು ಬಯಸುವಿರೆಂದಾದರೆ ಅದರ ಅರ್ಥ ಏನು ? ಆಗ ಹಿಂದೂ ಮತಾಂಧರು ಎಂದು ಹೇಳುವ ಕನಿಷ್ಟ ನೈತಿಕತೆಯಾದರೂ ನಿಮಗೆ ಬರುತ್ತದೆಯೇ ? ಆತ್ಮಾವಲೋಕನ ಮಾಡಿಕೊಳ್ಳಿ. ಸುಮ್ಮನೆ ಚರ್ಚೆಗೆ ಚರ್ಚೆ ಎಂದು ಬರಬೇಡಿ. ತರ್ಕಬದ್ಧವಾಗಿ ವಾದ ಮಂಡಿಸಿ. ವಾದದಿ ತರ್ಕವಿರಲಿ.

  ಉತ್ತರ
  • Nagshetty Shetkar
   ಸೆಪ್ಟೆಂ 27 2013

   ಅವಲೋಕನ ಮಾಡಿಕೊಳ್ಳಬೇಕಾದವರು ಯಾರು? ಜನಾಂಗ ಅಥವಾ ಜನನಾಂಗ ನಾಶವಾಗಲಿ ಅಂತ ನಾನೆಲ್ಲಿ ಹೇಳಿದೆ? ಬ್ರಾಹ್ಮಣರು ಬ್ರಾಹ್ಮಣ್ಯ ಬಿಟ್ಟು ಕಾಯಕಜೀವಿಗಳಾಗಲಿ ಅಂತ ಹೇಳಿದ್ದು ತಪ್ಪೇ?!!

   ಉತ್ತರ
   • ವಿಜಯ್ ಪೈ
    ಸೆಪ್ಟೆಂ 28 2013

    ಹ್ಮ ಜನನಾಂಗ ನಾಶ ಮಾಡಿಕೊಳ್ಳುವುದು ಅಂದರೆ ಏನೆಂದು ನಿಮ್ಮ ಹಿರಿಯ ಗುರುಗಳಾದ ಆಧುನಿಕ ಚೆನ್ನಬಸವಣ್ಣನವರಿಗೆ ಕೇಳಿ..ಆವರಿಗೆ ಗೊತ್ತಿರುತ್ತದೆ..:). ಮತ್ತೊಂದೇನೆಂದರೆ..ಉಳಿದವರನ್ನೆಲ್ಲ ಕಾಯಕ ಜೀವಿ ಮಾಡಲು ಹೊರಟಿರುವ ನೀವು ಕಾಯಕಜೀವಿಗಳೆ? ನೀವೂ ಕೂಡ ಕಾಯಕಜೀವಿಗಳು ಎಂದಾದಲ್ಲಿ ನಮಗೆ ನಿಮ್ಮ ಮತ್ತು ನಿಮ್ಮ ಉಳಿದ ‘ಶರಣ’ ಬಾಂಧವರ ಕಲ್ಪನೆಯ ‘ಕಾಯಕ’ಜೀವಿಗಳು ಯಾರು ಅನ್ನುವುದು ಸ್ಪಷ್ಟವಾಗುತ್ತದೆ.

    ಉತ್ತರ
  • ಸೆಪ್ಟೆಂ 27 2013

   ವಾಗೀಶ್ ರವರೇ, ಶೆಟ್ಕರ್ ರವರ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ. ಅವರು ಬೇರೆಯವರ ಉಸಾಬರಿ ಮಾಡುವವರಲ್ಲ. ತಮ್ಮ ಮನೆಯಂಗಳದಲ್ಲಿರುವ ಕೊಳೆಯನ್ನು ಚೊಕ್ಕ ಮಾಡುವವರು. ಅವರೂ ಮೊದಲು ಬ್ರಾಹ್ಮಣರೇ ಆಗಿದ್ದರು. ಕಾಯಕ ಜೀವಿಗಳಾಗಿರಲಿಲ್ಲ. ಈಗ ಬ್ರಾಹ್ಮಣ್ಯದ ಕೊಳೆಯಿಂದ ಹೊರಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಅವರು ಬ್ರಾಹ್ಮಣರೇ ಆದುದರಿಂದ ತಮ್ಮವರೇ ಆದ ಬ್ರಾಹ್ಮಣರ ಬಗ್ಗೆ ಅವಲೋಕನ ಮಾಡುತ್ತಾರೆ.

   ಉತ್ತರ
   • M.A.Sriranga
    ಸೆಪ್ಟೆಂ 27 2013

    Mr.Shetkar you please do a survey in your town about brahmins who are working in Govt/private offices/factories etc., and how many are living only with purohita work I believe you may call the first category as kaayakajeevi. Any objections for this?

    ಉತ್ತರ
    • Nagshetty Shetkar
     ಸೆಪ್ಟೆಂ 28 2013

     Mr. Sriranga, please do the survey yourself and tell me how many Brahmins are doing Jadamaali work? How many Brahmins are doing manual labour? How many Brahmins are peons?

     ಉತ್ತರ
     • ಸೆಪ್ಟೆಂ 28 2013

      ಜಾಡಮಾಲಿ ಮತ್ತು ಪ್ಯೂನ್ ಗಳಾದರೆ ಅಥವಾ ದೈಹಿಕ ಶ್ರಮ ಮಾಡಿದರೆ ಮಾತ್ರ ಅವರನ್ನು ಕಾಯಕ ಜೀವಿಗಳು ಅಂತ ಕರೆಯಬಹುದು. ಬೇರೆ ಕೆಲಸ ಮಾಡುವವರು ಕಾಯಕ ಜೀವಿಗಳ ಸಾಲಿಗೆ ಸೇರುವುದಿಲ್ಲ. ಉದಾಹರಣೆಗೆ ಸಾಫ್ಟವೇರ್ ಕೆಲಸ.

      ಉತ್ತರ
   • Nagshetty Shetkar
    ಸೆಪ್ಟೆಂ 28 2013

    Mr. Mahesh, Basavanna was born as a Brahmin. He rebelled against Brahmanya.

    ಉತ್ತರ
    • ಸೆಪ್ಟೆಂ 28 2013

     ಶೆಟ್ಕರ್ ರವರೇ, ನೀವೂ ಬಸವಣ್ಣನವರಂತೆ ಅಲ್ಲವೇ, ಅಂದರೆ ಬ್ರಾಹ್ಮಣನಾಗಿ ಹುಟ್ಟಿದರೂ ಬ್ರಾಹ್ಮಣ್ಯ ಬಿಟ್ಟು ಪ್ರತಿಭಟಿಸುತ್ತಿರುವವರು.

     ಉತ್ತರ
    • Manohar Naik
     ಸೆಪ್ಟೆಂ 28 2013

     ಶೇಟ್ಕರ್

     ಬಂಜಗೆರೆ ಜಯಪ್ರಕಾಶ್ ರವರು ಬಸವಣ್ಣನವರನ್ನು ಮಾದಿಗ ಜಾತಿಯ ಮೂಲ ಅನ್ನುತ್ತಾರೆ

     ಉತ್ತರ
 5. Nagshetty Shetkar
  ಸೆಪ್ಟೆಂ 28 2013

  “ಜನನಾಂಗ ನಾಶ ಮಾಡಿಕೊಳ್ಳುವುದು ಅಂದರೆ ಏನೆಂದು ನಿಮ್ಮ ಹಿರಿಯ ಗುರುಗಳಾದ ಆಧುನಿಕ ಚೆನ್ನಬಸವಣ್ಣನವರಿಗೆ ಕೇಳಿ” Mr. Vijay, what is wrong in Circumcision? Show me one Vachana that speaks against Circumcision? Circumcision is no longer limited to Muslims. It is recommended by doctors all over the world. You people attack Darga Sir unnecessarily.

  ಉತ್ತರ
  • ವಿಜಯ್ ಪೈ
   ಸೆಪ್ಟೆಂ 28 2013

   ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹಿರಿ ಆಧುನಿಕ ಚನ್ನಬಸವಣ್ಣನವರಿಗೆ ಕೇಳಿ ಗೊತ್ತಾಗಬಹುದು ಅಂದರೆ..ನೀವು ವಚನದಲ್ಲಿ ಅದು ಎಲ್ಲಿದೆ ತೋರಿಸಿ ಅಂತೀರಿ!.. ಒಟ್ಟಿನಲ್ಲಿ ಹಿರಿ-ಕಿರಿ-ಮರಿಗಳ ಮಧ್ಯದಲ್ಲಿ ಸಮಾನತೆ ಇದೆ ಅಂತ ಆಯಿತು.:)

   ಉತ್ತರ
 6. ಸೆಪ್ಟೆಂ 28 2013

  ಜನನಾಂಗ ನಾಶ ಮಾಡಿಕೊಳ್ಳುವುದರ ಕುರಿತು ವಚನಗಳಲ್ಲಿ ಯಾವುದೇ ಉಲ್ಲೇಖ ಇಲ್ಲ ಅಂತಾದರೆ ಜನನಾಂಗ ನಾಶ ಮಾಡಿಕೊಳ್ಳುವುದು ಸರಿ ಅಂತಲೇ ಅರ್ಥ. ಇಂಥ ಸತ್ಯವನ್ನು ಹೇಳಿದವರ ವಿರುದ್ಧ ಆಕ್ರಮಣಶೀಲತೆಯನ್ನು ತೋರಿಸುವುದು ಅನವಶ್ಯಕ

  ಉತ್ತರ
  • Nagshetty Shetkar
   ಸೆಪ್ಟೆಂ 28 2013

   “ಜನನಾಂಗ ನಾಶ ಮಾಡಿಕೊಳ್ಳುವುದು ಸರಿ” Mr. Mahesh, you may do what you please.

   ಉತ್ತರ
   • ಸೆಪ್ಟೆಂ 28 2013

    “ನೀವು ಏನು ಬೇಕಾದ್ರೂ ಮಾಡಬಹುದು” ಎಂಬ ಅಪ್ಪಣೆ ಸಿಕ್ತಲ್ಲ, ಇನ್ನು ನಾನು ನನಗೆ ಬೇಕಾದ ಹಾಗೆ ಮಾಡ್ತೇನೆ

    ಉತ್ತರ
    • Nagshetty Shetkar
     ಸೆಪ್ಟೆಂ 29 2013

     Mr. Mahesh, ನೀವು ನಿಮ್ಮ ಜನನಾಂಗ ನಾಶ ಮಾಡಿಕೊಂಡರೆ ಅದಕ್ಕೆ ನೀವೇ ಹೊಣೆ.

     ಉತ್ತರ
     • ಸೆಪ್ಟೆಂ 30 2013

      ಶೆಟ್ಕರ್ ರವರೇ, ಇದೇನಿದು.. ಬಹುಶಃ ನಿಮ್ಮಲ್ಲಿ ಅಂತರ್ಗತವಾದ ಅಪಾರವಾದ ಬ್ರಾಹ್ಮಣ್ಯವೇ ನಿಮ್ಮನ್ನು ಈ ರೀತಿ ಮಾತನಾಡಿಸುತ್ತಿರಬಹುದು. ನನಗೆ ಕಾಯಕ ಜೀವಿಯಾಗುವ ಆಸೆ, ನಿಮ್ಮನ್ನು ಅನುಸರಿಸಲು ಸಾಧ್ಯವಿಲ್ಲ. ದಯವಿಟ್ಟು ಕ್ಷಮಿಸಿ

      ಉತ್ತರ
      • Nagshetty Shetkar
       ಸೆಪ್ಟೆಂ 30 2013

       “ನಿಮ್ಮಲ್ಲಿ ಅಂತರ್ಗತವಾದ ಅಪಾರವಾದ ಬ್ರಾಹ್ಮಣ್ಯ” Mr. Mahesh, what crap! You will never be a Kaayaka Jeevi because you have so much darkness in your heart. You must be the Amaresh who threw dung at Darga Sir on Avadhi, I wouldn’t be suprised. But I will not fall into your trap.

       ಉತ್ತರ
       • ಆಕ್ಟೋ 1 2013

        ಓಹೋ, ನಾನು ಅಮರೇಶನಾದರೆ, ನೀವು ಯಾರು, 15 ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಂತೆಯಲ್ಲಿ ನನ್ನೊಟ್ಟಿಗೆ ಜಗಳವಾಡಿದವರು ಅಂತ ನಾನೂ ಹೇಳುತ್ತೇನೆ. ನಿಮ್ಮಂತಹ ಬ್ರಾಹ್ಮಣ್ಯದ ಕೊಳೆ ತುಂಬಿರುವವರು ಕಾಯಕ ಯೋಗಿಯಾಗಲು ಎಂದೂ ಸಾಧ್ಯವಿಲ್ಲ. ನಿಮ್ಮಲ್ಲಿರುವ ಬ್ರಾಹ್ಮಣ್ಯವನ್ನು ತೊಳೆದುಕೊಂಡು ಬನ್ನಿ

        ಉತ್ತರ
        • Nagshetty Shetkar
         ಆಕ್ಟೋ 1 2013

         Mr. Mahesh, if you are telling the truth, I will accept that you are not Amaresh. I am ready to get rid of Brahmanya if you show me that I have it. Even Darga Sir will get bow to you and get rid of Brahmanya if you demonstrate irrefutably that he has elements of Brahmanya in him. All Sharanas are against Brahmanya.

         ಉತ್ತರ
 7. Manohar Naik
  ಸೆಪ್ಟೆಂ 29 2013

  ಶೇಟ್ಕರ‍್

  ಸಾಧ್ಯವಾದರೆ ನಿಮ್ಮ ಪೂರ್ವಾಗ್ರದ ಆಚೆಗೆ ಒಂದು ಲೋಕ ಇದೆ ಎಂಬುದನ್ನು ಗಮನಿಸಿ
  https://churumuri.wordpress.com/2006/06/01/are-yesterdays-brahmins-todays-dalits/

  ಉತ್ತರ
  • Nagshetty Shetkar
   ಸೆಪ್ಟೆಂ 29 2013

   Mr. Naik, ಪೂರ್ವಗ್ರಹ ದರ್ಗಾ ಸರ್ ಅವರಿಗೆ ನನಗೆ ಖಂಡಿತ ಇಲ್ಲ. ಬ್ರಾಹ್ಮಣರಲ್ಲೂ ಶ್ರಮಜೀವಿಗಲಿದ್ದಾರೆ. ಅವರ ಬಗ್ಗೆ ಗೌರವ ಹಾಗೂ ಕಾಳಜಿ ಇದೆ. ವೈದಿಕಶಾಹಿಯನ್ನು ಪ್ರತಿನಿಧಿಸುತ್ತಿರುವವರ ಬಗ್ಗೆ ಮಾತ್ರ ವಿರೋಧ.

   ಉತ್ತರ
 8. Manohar Naik
  ಸೆಪ್ಟೆಂ 29 2013

  ಶೇಟ್ಕರ‍್

  ಅವಧಿ ಯಲ್ಲಿ ನಾನು ಒಂದಕ್ಷರವೂ ಬರೆದಿಲ್ಲ, ಮತ್ತೆ ಹೇಗೆ ದರ್ಗಾ ನನ್ನಿಂದ ಲೇವಡಿಗೆ ಒಳಗಾಗುತ್ತಾರೆ, ನಾನು ನಿಲುಮೆಯಲ್ಲೇ ಬರೆಯುತ್ತಿರುವುದು ಮೊದಲು, ಏನೋನೋ ಮಾತನಾಡಿ ನಿಮ್ಮ ಮತ್ತು ದರ್ಗಾ ರವರ ಮರ್ಯಾದೆ ತೆಗೆದುಕೊಳ್ಳಬೇಡಿ..

  ಉತ್ತರ
  • Nagshetty Shetkar
   ಸೆಪ್ಟೆಂ 29 2013

   Mr. Naik, ದರ್ಗಾ ಸರ್ ಹಾಗೂ ನನ್ನ ಮರ್ಯಾದೆ ಬಗ್ಗೆ ಅಪಾರ ಕಾಳಜಿ ತೋರಿಸುತ್ತಿರುವ ನೀವು ಅಂದು ಅವಧಿಯಲ್ಲಿ ನಕಲಿ ಹೆಸರಿನಲ್ಲಿ ನಿಮ್ಮ ನಿಲುಮೆ ಬಳಗದ ಮಿತ್ರರು ದರ್ಗಾ ಸರ್ ಅವರ ಮೇಲೆ ಹೊಲಸು ಎರಚಿದನ್ನು ವಿರೋಧಿಸಲಿಲ್ಲ. ಏಕೆ?

   ಉತ್ತರ
   • Nagshetty Shetkar
    ಸೆಪ್ಟೆಂ 29 2013

    Mr. Naik, ಇಲ್ಲಿ ನೋಡಿ ನಿಮ್ಮ ಬಾಲಗ್ರಹ ಪೀಡಿತರ ಸಂಚಿನ ಒಂದು ನಿದರ್ಶನ: “ರಂಜಾನ್ ದರ್ಗಾ ಅವರು ತಮ್ಮ ಐಡಿಯಾಲಾಜಿಗೆ ವಚನಗಳನ್ನೂ ವಚನಕಾರರನ್ನೂ ಫಿಟ್ ಮಾಡಿದ್ದಾರೆ. ಅದು ಬಲವಂತದ ಫಿಟ್ ಆಗಿರುವುದರಿಂದ ಅವರ ವಾದದಲ್ಲಿ ಹೊಡೆದು ಕಾಣುವ ತಪ್ಪುಗಳು, ವೈರುಧ್ಯಗಳು, ಆಭಾಸಗಳು ಇವೆ. ಇವೆಲ್ಲವನ್ನೂ ಅವಧಿಯ ಅನೇಕ ಓದುಗರು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಆದರೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ವಿನಯ ಹಾಗೂ intellectual honesty ದರ್ಗಾ ಅವರಲ್ಲಿ ಕಾಣುತ್ತಿಲ್ಲ. ಅವರು ಮನುಗುಮ್ಮ ಮೊದಲಾದ ಅವೇ ಹಳೆಯ ಪ್ರಗತಿಪರರ ಟಾಕ್ಟಿಕ್ಸ್ ಬಳಸಿ ಬಾಯಿ ಮುಚ್ಚಿಸುವ ಕೆಸರು ಎರಚುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ ಬ್ರಾಹ್ಮಣ ನಿಂದನೆಗೆ ವಚನಗಳನ್ನು ಬಳಸಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ಪ್ರಗತಿಪರ ಎಂದು ಪೋಸು ಕೊಡುವ ಜನರಿಗೆ ವಚನಗಳ ಬಗ್ಗೆ ಗೊತ್ತಿರುವುದು ಎಷ್ಟು ಹಾಗೂ ಶರಣ ಆಧ್ಯಾತ್ಮಿಕ ಸಂಪ್ರದಾಯದ ಬಗ್ಗೆ ಅವರಿಗಿರುವ ಶ್ರದ್ಧೆ ಎಷ್ಟು ಅಂತ ಅನುಮಾನ ಬರುತ್ತದೆ. ಪ್ರಗತಿಪರರು ಭಾವಿಸಿರುವ ಹಾಗೆ ಅವಧಿಯ ಓದುಗರು ಮೂರ್ಖರೇನಲ್ಲ. ಓದುಗರನ್ನು ಏಮಾರಿಸಿಬಹುದು ಅಂತ ಪ್ರಗತಿಪರರು ತಿಳಿದಿದ್ದರೆ ಅವರೇ ಮೂರ್ಖರಾಗುತ್ತಾರೆ!” ಬುದ್ಧಿ ಇರುವ ಸಂಸ್ಕೃತಿ ಇರುವ ಯಾರಾದರೂ ದರ್ಗಾ ಸರ್ ಬಗ್ಗೆ ಹೀಗೆ ಸಾರ್ವಜನಿಕವಾಗಿ ಬರೆಯಬಹುದೆ? ಇದು ನಂಜಿನ ವ್ಯಾಪರವಲ್ಲವೇ? ಬಸವ ತತ್ವ ಪ್ರತಿಪಾದನೆಯು ಬ್ರಾಹ್ಮಣ ನಿಂದನೆಯೇ? ಮನುಸ್ಮೃತಿಯನ್ನೇ ಸಂವಿಧಾನವಾಗಿ ನಾಡಿನ ಸಮಸ್ತ ಜನತೆ ಮೇಲೆ ಹೇರಿದ ಬ್ರಾಹ್ಮಣ್ಯವು ಈ ನಾಡಿನ ಶೂದ್ರಾತಿಶೂದ್ರರಿಗೆ ದಲಿತರಿಗೆ ಬಡವರಿಗೆ ಸ್ತ್ರೀಯರಿಗೆ ಅನ್ಯಾಯ ಮಾಡಿಯೇ ಇಲ್ಲವೇ?! ಬಿಜ್ಜಳನ ಮೂಲಕ ಶರಣರ ಹತ್ಯೆಯನ್ನು ಸನಾತನಿ ಬ್ರಾಹ್ಮಣರು ನಡೆಸಲೇ ಇಲ್ಲವೇ? ವಚನ ಕಟ್ಟುಗಳನ್ನು ನಾಶ ಮಾಡಲು ವೈದಿಕರು ಪಣ ತೊಟ್ಟಿದ್ದು ಸುಳ್ಳೇ? ಸನಾತನಿಗಳ ಚರಿತ್ರೆಯ ಪುಟಗಳಿಂದ ಸತ್ಯವನ್ನು ಹುಡುಕಿ ಹೇಳಿದ ನಮ್ಮ ದರ್ಗಾ ಸರ್ ಅವರು ಶರಣರಷ್ಟೇ ಅಲ್ಲ ಅವರೊಬ್ಬ ಸೂಫಿ ಸಂತ ಕೂಡ. ಅವರಿಗೆ ವಿನಯ ಹಾಗೂ intellectual honesty ಇಲ್ಲವೇ?

    ಉತ್ತರ
    • ಸಹನಾ
     ಸೆಪ್ಟೆಂ 30 2013

     Kanthege bonthe saakshi….. Mr. Shetkar when you yourself could not defend your claims even to quote a single vacana, what ethics you have to speak about intellectual honesty? You cowardly kept on escaping by talking only bulshits and failed to give any evidence for your claims but still you shamelessly speaking about your and Darga’s baseless lies here.
     You are same kind of jumping star as Mr Darga is … DARGA’s and your foolishness already exposed in these forums. It’s more than enough, now you better shut the mouth yourself before people admitting you to the hospital for psychiatric treatment. I really wonder what type of creature you are??? So many times your AJNAANA is exposed here!!!! You don’t seem to be feeling shame or guilty to speak again same kind of lies and baseless arguments, this is called in Accha kannada as ‘BHANDATANA’. What else I can say???

     If you really have self respect then first you give a single vacana about “surplus value” as a evidence to prove your claim that ‘BASAVANNA foresaw MARXISM’. IF NOT YOU MUST BE ASHAMED OF YOURSELF FOR TELLING SUCH LIES again and again in this forum,,,, I think this is enough for now. I am not going to leave you and not spare your baseless and nonsensical bulshits here….

     ಉತ್ತರ
     • Nagshetty Shetkar
      ಆಕ್ಟೋ 1 2013

      Ms. Sahana, Darga Sir answered all your questions on Avadhi. I have answered all your questions on Nilume. I encouraged you to write an open letter to Darga Sir if you have more questions. Yet you make flimsy allegations on me! Regarding, Marx and Basavanna, the similarity in their thinking is obvious to all who have studied Marxism and Vachanas deeply and sincerely. If you merely count words, you get nothing.

      ಉತ್ತರ
      • ಸಹನಾ
       ಆಕ್ಟೋ 1 2013

       Third rate Advice is not a proof for any arguement. Provide the evidence and then argue.

       Simply bulshitting, talking irrelevant nonsenses and third rate advice about on how to read this and that are not the answers Mr. Shetkar. It is merely exposition of aboslute stupidity of yourself (Darga too…!!!). First learn how to answer the question as they are. Then at least attempt to answer. say same to your guru too. Don’t say He has awarded Basavashree so he can say whatever he can. And I or anyone here has to accept it because we didn’t get that award. Such statements are childish. growup first. And stop talking nonsenses, give evidence for your claims..

       ಉತ್ತರ
       • Nagshetty Shetkar
        ಆಕ್ಟೋ 1 2013

        Ms. Sahana, you must not make ad hominem attacks on Darga Sir and me. Please try to be objective in your approach.

        Was it your CSLC scientists who counted jati/kula in Vachanas? Or was it Darga Sir?

        ಉತ್ತರ
        • ಸಹನಾ
         ಆಕ್ಟೋ 1 2013

         “Was it CSLC scientists who counted jati/kula in Vachanas? Or was it Darga…”

         are you mad or what? this is what I call nonsense!!! how come it is an answer or evidence for your claims???

         If you have problem in counting jati kulas in vachanas go and ask them where it is published.

         here you talk sensibly by addressing only to the questions and challanges at your disposal… Don’t be childish by talking irrelevent things.

         I am asking evicences for your claims, you give it, or say I don’t have evidence, that’s it. do not childishly or madly show your finger on something else which is not at discussion, Mr. mini Jumpingstar…………

         ಉತ್ತರ
         • Nagshetty Shetkar
          ಆಕ್ಟೋ 1 2013

          Ms. Sahana, what evidence do you need for untouchability, caste system and social inequality, Brahmnical hegemony, superstitions in the name of sanatana dharma, exploitation of women?

          ಉತ್ತರ
          • ಸಹನಾ
           ಆಕ್ಟೋ 2 2013

           When you don’t have capacity to defend a single statement why are you jumping here and there? Prove your claim first.

    • Manohar Naik
     ಆಕ್ಟೋ 1 2013

     ಶೇಟ್ಕರ್ ರವರೆ
     ಏನಿದು ನಿಮ್ಮ ಪ್ರಲಾಪ?
     <<<<>>>

     ನಾನು ಕೇಳಿದ ಪ್ರಶ್ನೆ ಏನು? ನೀವು ನೀಡುತ್ತಿರುವ ನಿದರ್ಶನವೇನು? ಒಂದಕ್ಕೊಂದು ಸಂಬಂಧವಿಲ್ಲದ ಹಾಗೆ ಕಾಣುತ್ತಿದೆ. ನೀವು ಯಾವುದನ್ನು ಬ್ರಾಹ್ಮಣ್ಯ ಎಂದು ವ್ಯಾಖ್ಯಾನಿಸುತ್ತಿದ್ದೀರೋ ಅದು ಸತ್ಯವೇ ಆದಲ್ಲಿ ನಾನು ನೀಡಿದ 9 ಸಂಗತಿಗಳೂ ಬ್ರಾಹ್ಮಣ್ಯವೇ ಆಗಬೇಕು. ಅವುಗಳಲ್ಲಿ ಯಾವುದಾದರೂ ಬ್ರಾಹ್ಮಣ್ಯ ಅಲ್ಲವೆಂದಾದರೆ ಬ್ರಾಹ್ಮಣ್ಯದ ಕುರಿತು ತಾವು ನೀಡಿರುವ ವ್ಯಾಖ್ಯಾನ ತಪ್ಪಾಗುತ್ತದೆ.

     ಇನ್ನು ದರ್ಗಾ ರವರ ಬಗ್ಗೆ ನೀವು ಹೇಳಿರುವಂತೆ..ನಿಜವಾಗಿಯೂ ಬುದ್ದಿ ಮತ್ತು ಸಂಸ್ಕೃತಿ ಇರುವವರು ಮಾತ್ರವೇ ಸಾರ್ವಜನಿಕವಾಗಿ ಹಾಗೆ ಬರೆಯಲು ಸಾಧ್ಯ. ಬುದ್ದಿ ಇಲ್ಲದವರು ಮಾತ್ರ ನಿಮ್ಮ ಹಾಗೆ ಮಾತನಾಡಲು ಸಾಧ್ಯ. ದರ್ಗಾರವರು ವಿಮಾರ್ಶಾತೀತರೇನಲ್ಲ. ಅವರು ಬರೆದಿರುವುದನ್ನು ಯಾರು ಬೇಕಾದರೂ ವಿಮರ್ಶಿಸಬಹುದು. ದರ್ಗಾರವರನ್ನು ಶರಣ ಸೂಫಿ ಅಷ್ಟೆ ಅಲ್ಲಾ ಫಕೀರ ಎಂದು ಬೇಕಾದರೂ ಗೌರವ ಪ್ರದಾನ ಮಾಡಿ..ಯಾರಿಗೇನು? ಅವರು ಬರೆದಿದ್ದ ಮಾತ್ರಕ್ಕೆ ಅದನ್ನು ವಿಮರ್ಶೆ ಮಾಡಬಾರದು ಎನ್ನುವುದು Intellectual dishonesty ಯಾಗುತ್ತದೆ. ಈಗ ಹೇಳಿ Intellectual dishonesty ಇರುವುದು ತಮಗೋ ಅಥವಾ ತಮ್ಮ ದರ್ಗಾರವರಿಗೊ?

     ಉತ್ತರ
     • Nagshetty Shetkar
      ಆಕ್ಟೋ 1 2013

      Mr Naik, you asked what is Brahmanya. The answer is obvious to all Indians, maybe you are pretending innocence. It is the unwritten constitution of India based on Manu Smriti which has imposed caste system on the people of India with Brahmins at the top of the pyramid and Shoodras and Dalits at the bottom of the pyramid. Brahmanya treats majority of Indians as ಕೀಳು while treating Brahmins as ಮೇಲು. It is based on systematic discrimination. Think of Madesnana and Panktibedha and you can see Brahmanya’s manifestation there.

      ಉತ್ತರ
 9. Manohar Naik
  ಆಕ್ಟೋ 1 2013

  ನಿಲುಮೆ ನನ್ನ ಬಳಗವಲ್ಲ ಶೇಟ್ಕರ್..
  ಆದರೆ ಒಂದಂತೂ ನಿಲುಮೆಯವರ ಕುರಿತು ಅನ್ನಿಸಿದೆ..ಅದೆಂದರೆ ಅವರ ಯಾರಿಗಾದರೂ ಸಗಣಿ ಎರಚಿದರೆ ಅದನ್ನು ಅರ್ಹರ ಮೇಲೆಯೇ ಸರಿಯಾದ ಕ್ರಮದಲ್ಲೇ ಎರಚಿರುತ್ತಾರೆ…ಆ ನಂಬಿಕೆ ಗಟ್ಟಿಯಾಗುತ್ತಿದೆ..

  ಉತ್ತರ
 10. Manohar Naik
  ಆಕ್ಟೋ 1 2013

  ಶೇಟ್ಕರ್

  ನೋಡಿ, ನಾನು ಕೇಳಿದ ಪ್ರಶ್ನೆ ಏನು ನೀವು ಹೇಳುತ್ತಿರುವುದಾದರೂ ಏನು? ನಾನು ಬಳಸಿದ ಲಾಜಿಕ್ ಸರಿ ಇಲ್ಲ ಅಂದಿರಿ? ಹೇಗೆ ಅಂತ ಕೇಳಿದೆ ಅದಕ್ಕೆ ಉತ್ತರ ನೀಡಲಿಲ್ಲ. ನಾನು ನೀಡಿದ ಉದಾಹರಣೆಗಳು ಬ್ರಾಹ್ಮಣ್ಯದ ಕುರಿತು ನೀವು ಕೊಟ್ಟಿರುವ ವ್ಯಾಖ್ಯೆಗಳಿಗೆ ಸರಿಹೊಂದುತ್ತವೆ ಎಂದು ಹೇಳಿದೆ.. ನೀವು ಅದನ್ನು ಬಿಟ್ಟು ಉಳಿದೆಲ್ಲಾ ವಿಚಾರಗಳನ್ನೂ ಮಾತನಾಡುತ್ತಿದ್ದೀರಿ.. ಮನುಸ್ಮೃತಿಯ ಭಾರತದ ಕಾನೂನು ಆಗಿತ್ತೆ? ಈ ಕೆಳಗಿನ ಲೇಖನದ ಕೊಂಡಿಯನ್ನು ನೋಡಿ
  http://cslcku.wordpress.com/2013/09/21/%E0%B2%85%E0%B2%82%E0%B2%95%E0%B2%A3-%E0%B2%B5%E0%B2%B8%E0%B2%BE%E0%B2%B9%E0%B2%A4%E0%B3%81-%E0%B2%AA%E0%B3%8D%E0%B2%B0%E0%B2%9C%E0%B3%8D%E0%B2%9E%E0%B3%86%E0%B2%AF-%E0%B2%B5%E0%B2%BF%E0%B2%B6-19/#more-728

  ಉತ್ತರ
  • Nagshetty Shetkar
   ಆಕ್ಟೋ 1 2013

   Mr. Naik, my task is not to convince Vaidik viruses like you that untouchability exists, caste system exists, caste discrimination exists, superstitions in the name of religion exists, social exploitation exists,.. These are everyday reality for me and for crores of people of India. Do you remember Itkalkaranji? Do you remember Madesnana? My task is to wage war against the evil.

   ಉತ್ತರ
   • Manohar Naik
    ಆಕ್ಟೋ 1 2013

    ನಿಮ್ಮ ಹಣೆಬರಹಕ್ಕೆ ಚರ್ಚೆ ಮಾಡಲು ಬರದಿದ್ದರೂ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಲಾಯಕ್ಕಿದ್ದೀರಿ ಬಿಡಿ..ನೀವು ಪ್ರಾಯಶಃ ಟ್ರೋಜನ್ ವೈರಸ್ ಇರಬಹುದು.. ಇಂತಹ ವಯಕ್ತಿಕ ಕುಹುಕವಲ್ಲವೇ ಪ್ರಗತಿಪರರ ಬಂಡವಾಳ?????ಅಲ್ಲಾರಿ ಮಡೆಸ್ನಾನದಲ್ಲಿ ಅದೇನು ಕಾಣ್ತು ನಿಮಗೆ ಹೇಳಿ…ನಮ್ಮಂಥವರಿಗೆ ಕನ್ವಿನ್ಸ್ ಮಾಡಲು ಸಾಧ್ಯವಿಲ್ಲ ಎಂದಮೇಲೆ ಅಜ್ಞಾನದ ಪ್ರದರ್ಶನ ಯಾಕೆ?

    ಉತ್ತರ
 11. Manohar Naik
  ಆಕ್ಟೋ 1 2013

  ಶೇಟ್ಕರ್

  ಬ್ರಾಹ್ಮಣರು ಎಲ್ಲಾ ಹೇರಿದ್ದಾರೆ ಎನ್ನುತ್ತೀರಲ್ಲಾ? ಅದನ್ನು ಸಾಬೀತು ಪಡಿಸಲು ತಮಗೆ ಸಾಧ್ಯವಿದೆಯೆ? ತಥಾಕಥಿಗಳನ್ನು ಪುನರುತ್ಪಾದಿಸುವುದರಿಂದ ಒಂದೇ ಒಂದು ಆಗಲು ಸಾಧ್ಯ.. ಒಂದು ಸುಳ್ಳನ್ನು ಅಥವಾ ಅಜ್ಞಾನವನ್ನು ನೂರು ಸರಿ ಹೇಳಿದರೆ ಅದುವೇ ಸತ್ಯ ಅಥವಾ ಜ್ಞಾನವಾಗಬಹುದು..ಅದು ಪ್ರಗತಿಪರರಿಗೆ..ಮನುಧರ್ಮಶಾಸ್ತ್ರ ನಿಮ್ಮ ಜೀವನದಲ್ಲಿ ಯಾವ ರೀತಿ ಪ್ರಭಾವ ಬೀರಿದೆ ಎಂದು ಹೇಳುತ್ತೀರಾ? ಅಥವಾ ಬ್ರಾಹ್ಮಣರ ಯಾವ ಪದ್ದತಿಯಲ್ಲಿ ಸ್ಮೃತಿಯ ಪ್ರಭಾವವಿದೆ ಎಂದು ತೋರಿಸಲು ತಾವು ಶಕ್ತರೆ? ಮನುಸ್ಮೃತಿ ಇಲ್ಲಿನ ಕಾನೂನಿನ ಗ್ರಂಥ ಎಂಬುದು ಪಾಶ್ಚಾತ್ಯರ ತಪ್ಪುಗ್ರಹಿಕೆಯಿಂದ ಹುಟ್ಟಿಕೊಂಡ ಕಲ್ಪನೆಯಾಗಿದ್ದು ಅದನ್ನೇ ನಿಜವೆಂದು ನಂಬಿ ಇಂದಿಗೂ ಅದೇ ಧಾಟಿಯಲ್ಲಿ ಮಾತನಾಡುವುದು ಮುಂದುವರೆಯುತ್ತಿದೆ. ನಿಮಗೆ ಜೀವನದಲ್ಲಿ ಯಾವ ಕಾಲಘಟ್ಟದಲ್ಲಿಯಾದರೂ ಮನುಸ್ಮೃತಿ ಪ್ರಭಾವ ಬೀರಿದೆ ಅಂತ ಅನಿಸಿದಿಯಾ? ಹಾಗಿದ್ದರೆ ಹೇಳಿ? ಚರ್ಚೆ ಮಾಡುವ…ಅಂಬೇಡ್ಕರ್ ಪ್ರಣೀತ ಪ್ರಗತಿಪರರ ಮೂಸೆಯಿಂದ ಬರುವ ವಾಕ್ಯಗಳನ್ನೆ ಇಲ್ಲಿ ತಂದು ಒಪ್ಪಿಸುವ ಅಗತ್ಯವಿಲ್ಲ.. ಸಾಧ್ಯವಾದರೆ ತಮಗೆ ಪ್ರಾಮಾಣಿಕವಾಗಿ ಚರ್ಚಿಸಬೇಕು ಅನ್ನಿಸಿದರೆ ತಮ್ಮ ಬದುಕನ್ನು ಅವಲೋಕಿಸಿಕೊಂಡು ವಿಷಯಕ್ಕೆ ಬನ್ನಿ…

  ಉತ್ತರ
  • Nagshetty Shetkar
   ಆಕ್ಟೋ 1 2013

   Who put molten lead in the ears of Shoodras who heard Vedic chants?

   ಉತ್ತರ
   • ಸಹನಾ
    ಆಕ್ಟೋ 1 2013

    ಹೆ… ಹೆ … ಯಡವಟ್ಟಪ್ಪ ಮತ್ತೊಮ್ಮೆ ಸಿಕ್ಕೊಳ್ತು…..

    ಮಿ. ಶೆಟ್ಕರ್ ವೇದಮಂತ್ರಗಳನ್ನು ಕೇಳಿದ ಕಾರಣಕ್ಕೆ ಯಾವ ಶೂದ್ರನ ಕಿವಿಗೆ ಕಾದ ಸೀಸವನ್ನು ಹುಯ್ಯಲಾಯಿತು? ಯಾವ ಪುರಾಣ ಕಥೆ ಅಥವಾ ಚರಿತ್ರೆ (ಅದು ಯಾರಾದರೂ ಬರೆದಿರಲಿ) ಇಂತಹ ಹೆಸರಿನ ಶೂದ್ರನಿಗೆ ವೇಧ ಮಂತ್ರ ಕೇಳಿದನೆಂಬ ಕಾರಣಕ್ಕೆ ಕಾದಸೀಸ ಹುಯ್ದರು ಎನ್ನುವ ಘಟನೆ ಇಂತಹ ಕಡೆ ನಡೆಯಿತು ಎಂದು ಎಲ್ಲಿ ಉಲ್ಲೇಖವಿದೆ ಹೇಳಿ? ಎಷ್ಟು ಸಾವಿರ ವರ್ಷದ ಇತಿಹಾಸದ ಕಾಲಾವಧಿಯನ್ನಾದರೂ ತೆಗೆದುಕೊಳ್ಳಿ, ಆದರೆ ನಿಮ್ಮ ಹೇಳಿಕೆಗೆ ಸಾಕ್ಷಿ ಕೊಡಿ. ಅಷ್ಟೇ??

    (ಮನುಧರ್ಮ ಶಾಸ್ತ್ರದಲ್ಲಿ ಹುಯ್ಯಬೇಕು ಎಂದಿದೆ. ಆದರೆ ನಮ್ಮ ಚರಿತ್ರೆಯಲ್ಲಿ ಹಾಗೆ ಮಾಡಿದ ಒಂದೇ ಒಂದು ಘಟನೆ ಉಲ್ಲೇಖವಿದೆಯೇ? ಇಲ್ಲವೆಂದಾದರೆ ಮನುಧರ್ಮಶಾಸ್ತ್ರವೇ ನಮ್ಮ ಸಮಾಜದ ಕಾನೂನಾಗಿತ್ತೆಂದು ಹೇಗೆ ಹೇಳಲು ಸಾಧ್ಯ? ಸೋ ನೀವು ಹೀಗೆ ನಡೆದ ಘಟನೆಯನ್ನು ಪ್ರೂವ್ ಮಾಡಿಬಿಟ್ಟರೆ ಮನಧರ್ಮಶಾಸ್ತ್ರದ ಬಗೆಗಿನ ನಿಮ್ಮ ದರ್ಗಾರ ವಾದ ಸರಿ ಇಲ್ಲವೇ ಬುರುಡೆ ಎಂದು ಒಪ್ಪಿಕೊಳ್ಳ ಬೇಕಾಗುತ್ತದೆ, ನಿಮ್ಮ ದರ್ಗಾರ ಮಾನ ನೀವು ಸಾಕ್ಷಿ ಒದಗಿಸುವುದರಲ್ಲಿ ಅಡಗಿದೆ. ಪ್ರಾಮಾಣಿಕವಾಗಿ ಪ್ರಯತ್ನಿಸಿ… )

    ಉತ್ತರ
    • Nagshetty Shetkar
     ಆಕ್ಟೋ 1 2013

     Ms. Sahana, if Brahmins detest Manu Smriti, then why don’t you ask Pejawara Swami and other Vaidik leaders to publicly burn Manu Smriti and embrace Dalits? Pejawara Swami should make a Dalit his successor in his Mutth.

     ಉತ್ತರ
     • ಸಹನಾ
      ಆಕ್ಟೋ 1 2013

      Mr jumping star. Don’t jump here and there that is monkeys job. Stick to your statement “Who put molten lead in the ears of Shoodras who heard Vedic chants?” give the historical evidence to prove your claim. Otherwise shame on your coward escapism.

      ಉತ್ತರ
      • Nagshetty Shetkar
       ಆಕ್ಟೋ 2 2013

       Ms. Sahana, if you need evidence please ask Manu’s children who put molten lead into the ears of Shoodras for photos of their victims.

       ಉತ್ತರ
       • ಸಹನಾ
        ಆಕ್ಟೋ 2 2013

        ಇದು ಹೇಡಿತನ ಮತ್ತು ಭಂಡತನದ ಪರಮಾವಧಿ!!!!! ಥೂ… ನಿಮ್ಮ ಜನ್ಮಕ್ಕಿಷ್ಟು…. ಬಾಯಿ ತೆರೆದರೆ ಬರೀ ಬುರುಡೇ ಬಿಡೋದೆ ಹವ್ಯಾಸವಾಗಿ ಬಿಟ್ಟಿದೆ ನಿಮಗೆ… ನಿಮ್ಮ ಹೇಳಿಕೆಗಳಿಗೆ ಸಾಕ್ಷಿ ಕೊಡೋ ಯೋಗ್ಯತೆ ಇಲ್ಲದಿದ್ದರೂ ..ಇದೆಂತದ್ರೀ ಸಾಕ್ಷಿಗೆ ಅವರಿವರ ಕಡೆ ಕೈತೋರಿಸೋ ಭಂಡತನ…

        ಉತ್ತರ
       • ಆಕ್ಟೋ 2 2013

        Molten lead was never poured into the ears of shoodras anytime in history.

        ಉತ್ತರ
        • Nagshetty Shetkar
         ಆಕ್ಟೋ 8 2013

         Mr. Bolumbu, why was it then mentioned?

         ಉತ್ತರ
         • ಆಕ್ಟೋ 8 2013

          1. Is there a mention of somebody actually pouring lead into the ears of shoodras for hearing the Vedas?
          2. If yes, where is it mentioned?

          ಉತ್ತರ
       • ಆಕ್ಟೋ 8 2013

        ಎಷ್ಟು ದಿನ ಈ ಊಹಾಪೊಹದ ಪುಂಗಿ ಊದುತ್ತೀರಿ?

        ಉತ್ತರ
        • ಮುಖೇಶ
         ಆಕ್ಟೋ 8 2013

         ಈಗಿರುವ, ಮುಂದೆ ಹುಟ್ಟಲಿಕ್ಕಿರುವ ಹಿರಿಕಿರಿಮರಿಪುಡಿಕುಡಿ ಸಾ(ಸ್ವಾ)ಹಿತಿಗಳೆಲ್ಲರೂ ಪ್ರಗತಿ ಸಾಧಿಸುವವರೆಗೂ ಮಹೇಶ‍್ 😉

         ಉತ್ತರ
        • ವಿಜಯ್ ಪೈ
         ಆಕ್ಟೋ 8 2013

         ನಮ್ಮ ನಾಗಶೆಟ್ಟಿ ಶೆಟ್ಕರ್ ಗುರುಗಳು ಪುಂಗಿ ನುಡಿಸುವವರಲ್ಲ..ಬೇರೆಯವರು ನುಡಿಸಿದ ಪುಂಗಿ ನಾದಕ್ಕೆ ತಲೆಯಾಡಿಸುವವರು!!..ಯು ಶುಡ್ ಸ್ಟಾಪು ಕನಫ್ಯೂಸಿಂಗು…..:)

         ಉತ್ತರ
 12. Manohar Naik
  ಆಕ್ಟೋ 1 2013

  ಅವನ್ಯಾವನೋ ಮನು ಹೇಳಿದ್ರೆ ಕೇಳ್ಕೊಂಡು ಕೂರೋಕೆ ಹಿಂದಿನ ಭಾರತದಲ್ಲಿ ಏನು ಪ್ರಗತಿಪರರಂತ ದಡ್ಡರು ಇದ್ದರು ಅಂದುಕೊಂಡಿದ್ದೀರಾ? ತೋರುಸ್ರಿ ನೋಡುವ ಎಲ್ಲೆಲ್ಲಿ ಕಿವಿಗೆ ಸೀಸ ಹೊಯ್ದಿದಾರೆ ಅಂತ…ಮತ್ತೆ ವಾತ್ಸಾಯನನ ಕಾಮಸೂತ್ರದಲ್ಲಿ ಹಲವಾರು ಭಂಗಿಗಳಿವೆ, ಭಾರತೀಯರು ವಾತ್ಸಾಯನನ ಪುಸ್ತಕದಲ್ಲಿರುವಂತೆ ಮಿಲನ ಮಹೋತ್ಸವ ಮಾಡುತ್ತಾರೆ ಅಂದರೆ ಎಷ್ಟು ಆಭಾಸವೋ ಅಷ್ಟೆ ಆಭಾಸ ಮನುವನ್ನು ಆಧರಿಸಿ ಜೀವನ ನಡೆಸುತ್ತಿದ್ದರು ಎಂಬುದು.. ಕಾಯ್ದ ಸೀಸ ಹೊಯ್ದಿದ್ದು ನಿಜ ಅಂತಾದರೆ ಮುಂದಿನ ನನ್ನ ಪ್ರಶ್ನೆ ಭಾರತೀಯರ ಭಂಗಿಗಳು ಯಾವುವು? ಅಂತ

  ಉತ್ತರ
  • Nagshetty Shetkar
   ಆಕ್ಟೋ 1 2013

   Mr. Naik, now you are showing your true colour. Saffron but not surprising.

   ಉತ್ತರ
   • Siddha
    ಆಕ್ಟೋ 3 2013

    ಮಿ. ಶೆಟ್ಕರ್ ಅವರೇ, ನಿಮ್ಮ ಪೂರ್ಣ ಚರ್ಚೆಯನ್ನ ನೀವೇ ಒಮ್ಮೆ ಅವಲೋಕನ ಮಾಡಿಕೊಳ್ಳಿ. ಏನೋ ಪ್ರಶ್ನೆ ಕೇಳಿದರೆ ಮತ್ತೇನನ್ನೋ ಹೇಳ್ತೀರಲ್ಲ!. ಕನಿಷ್ಟ ನಿಮ್ಮ ಹೇಳಿಕೆಗಳಿಗಾದರೂ ಸರಿಯಾದ ಸಮರ್ಥನೆಗಳನ್ನು ನೀಡಿ. ಇಲ್ಲವಾದರೆ ಓದುಗರಿಗೆ ನೀವು ಹೇಳುವುದು ಒಳ್ಳೆಯ ಕಟ್ಟೆ ಪುರಾಣದಂತೆ ಕಾಣುವುದು. ಕನಿಷ್ಟ ಅದಕ್ಕಾದರು ಒಂದು ನೆಲೆ ಇರುತ್ತದೆ. ನಿಮ್ಮ ಹೇಳಿಕೆಗಳಲ್ಲಿ ಅದೂ ಕಾಣುವುದಿಲ್ಲ. ಒಂದು ಪ್ರಶ್ನೆ ಕೇಳಿದರೆ ಅದೊಂದನ್ನು ಬಿಟ್ಟ್ ಬೇರೆಲ್ಲಾ ಮಾತನಾಡುತ್ತೀರಿ! ಮತ್ತೆ ಅದನ್ನು ಪ್ರಶ್ನೆ ಮಾಡಿದರೆ ಮತ್ತೆ ಯಾವುದೋ ವಿಚಾರ ಪ್ರಸ್ತಾಪಿಸುತ್ತೀರಿ.
    ಮೇಲೆ ಸಹನಾ ಮತ್ತು ಮ, ನಾಯ್ಕರವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಕನಿಷ್ಟ ನಿಮ್ಮ ನೆಲೆಯನ್ನಾದರೂ ಭದ್ರ ಮಾಡಿಕೊಳ್ಳಿ.
    ಅವರು ಕೇಸರಿಯಾದರು ಆಗಿರಲಿ, ಹಳದಿಯಾದರು ಆಗಿರಲಿ. ಅದು ಅವರ ಪ್ರಶ್ನೆಗೆ ಸಮಂಜಸ ಉತ್ತರವಾಗುವುದಿಲ್ಲ.

    ಉತ್ತರ
   • Manohar Naik
    ಆಕ್ಟೋ 3 2013

    Mr. Shetkar

    If I am saffron then you are buffoon… If you can’t answer the question, the final possible step is giving label and categorizing opponents in to some or other group..Shit on your intellectual honesty.. these dadda progressivists are always like this…I think you are not intellectual in fact.. please do not call yourself as an intellectual..

    ಉತ್ತರ
 13. ಗಿರೀಶ್
  ಆಕ್ಟೋ 2 2013

  ಸ್ವಾಮಿ ಕಾಯಕಯೋಗಿಗಳ ತುಂಡುಗಳೆ ತಮ್ಮ ಕ್ಆಯಕವೇನು ಎಂದು ತಿಳಿದುಕೊಳ್ಳಬಹುದೆ? ತಾವು ಯಾವ ಲದ ಗುಂಡಿ ಸ್ವಚ್ಚಗೊಳಿಸುವ ಕಾಯಕ ಮಾಡುತ್ತೀರಾ? ಬ್ರಾಹ್ಮಣರನ್ನು ಕಾಯಕದಲ್ಲಿ ಕೇಳಿಕೊಳ್ಳುವ ತಾವು ಯಾವ ಕಾಯಕ ಎಂದೂ ಹೇಳಿಬಿಡಿ. ನಿಮ್ಮ ಆಣತಿಯಂತೆ ಬ್ರಾಹ್ಮಣರು ನಡೆಯಲಿ.

  ಉತ್ತರ
  • ಡಿಸೆ 17 2013

   ಹೆಣ್ಣು ಮಕ್ಕಳಿಗೆ ಬೆರೆಕಡೆ ಕೆಲಸಮಾಡುವರಿಗೆ ಬಹಳ ತೊಂದರೆ ಕೂಡುತ್ತಾರೆ ಪೂಲಿ ಜನಗಳಿಂದ ಮತ್ತು ಅಧಿಕಾರಿಗಳಿಂದ ತೊಂದರೆಯಾಗುತ್ತಿದೆ ಇದಕ್ಕೆ ಪರಿಹಾರವೆ ಇಲ್ಲ

   ಉತ್ತರ
 14. ಡಿಸೆ 18 2013

  ನಾಗಶೆಟ್ಟಿ ಶೇಟ್ಕರ್ ಅವರ ಪ್ರತಿಕ್ರಿಯೆಗಳನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡಿದರೆ, “ಅತ್ಯುತ್ತಮ ನಗೆ ಪುಸ್ತಕ” ಎಂಬ ಪ್ರಶಸ್ತಿ ಪಡೆದು ಬಿಸಿಬಿಸಿಯಾಗಿ ಖರ್ಚಾಗಿಬಿಡುತ್ತದೆ!
  ಜನಾಂಗ ನಾಶಕ್ಕೆ “ಜನನಾಂಗ ನಾಶ” ಎನ್ನುವುದನ್ನು ಸೇರಿಸಿದ್ದನ್ನು ಓದಿದ ನಂತರ, ನನಗೆ ನಗುವುದನ್ನೇ ತಡೆದುಕೊಳ್ಳುವುದಕ್ಕಾಗುತ್ತಿಲ್ಲ!! 😉

  ಶೇಟ್ಕರ್, ಇತ್ತೀಚೆಗೆ ನಿಮ್ಮ ಪ್ರತಿಕ್ರಿಯೆಗಳೇ ಇಲ್ಲದೆ ‘ನಿಲುಮೆ’ಯ ಲೇಖನಗಳು ಸಪ್ಪೆಯೆನಿಸಲಾರಂಭಿಸಿದೆ. ಆಗಾಗ, ಇಲ್ಲಿ ಬಂದು, ಜನರನ್ನು ರಂಜಿಸುವ ಕಾಯಕವನ್ನು ಮುಂದುವರೆಸಿ.

  ಉತ್ತರ
  • ನವೀನ
   ಡಿಸೆ 18 2013

   ಇಲ್ಲಿ ಮಾತಾಡಿದಷ್ಟೂ ನನ್ನ ಮತ್ತು ನಮ್ಮ ಗುರುಗಳ ಬಂಡವಾಳ ಬಯಲಾಗಬಹುದೇ ಹೊರತೂ ಇನ್ನೇನು ಸಾಧ್ಯವಿಲ್ಲ ಎಂದುಕೊಂಡು ಶೆಟ್ಕರ್ ಸರ್ ತೆಪ್ಪಗಾಗಿರಬಹುದಾದ ಸಾಧ್ಯತೆಗಳಿವೆ

   ಉತ್ತರ
 15. Mukhesh
  ಡಿಸೆ 18 2013

  🙂 :-0 :-0

  ಉತ್ತರ
 16. ಡಿಸೆ 18 2013

  ಅಡ್ಡಾದಿಡ್ಡಿ ಕಮೆಂಟುಗಳ ಕೊಡುವುದರಿಂದ ವಿಷಯದ ಬಗೆಗೆ ಗಮನವೇ ಹೋಗದೆ ಪೇಜ್ ಹಿಟ್ಸ್ ಮಾತ್ರ ಹೆಚ್ಚಾಗುವ ಸಂಭವವಿದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments