ಸೀಯೆನ್ನಾರ್ ನೆನಪಿನ ಬುತ್ತಿ ಆ(ಹಾ) ದಿನಗಳು!
ಮೂಲ: ಸಿ.ಎನ್.ಆರ್.ರಾವ್
ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ
ನನ್ನ ಬಾಲ್ಯದ ಜೀವನದಲ್ಲಿ ತುಂಬ ಪ್ರಭಾವ ಬೀರುವಂತಹ ಕೆಲ ಸಂಗತಿಗಳು ನಡೆದವು. ನನ್ನ ತಂದೆತಾಯಿಯರಿಗೆ ಆಚಾರ್ಯ ಮಧ್ವರ ಮೇಲೆ ಅಪಾರವಾದ ಭಕ್ತಿ-ವಿಶ್ವಾಸ ಇತ್ತು. ಮಾಧ್ವತತ್ವ ಮನುಷ್ಯನ ಜೀವನಕ್ಕೆ ಸರಿಯಾದ ದಾರಿ ತೋರಿಸುತ್ತದೆ ಅಂತ ನನ್ನ ತಂದೆ ಹೇಳ್ತಿದ್ದರು. ಮಧ್ವಾಚಾರ್ಯರ ಪ್ರಕಾರ – ಎರಡು ಜಗತ್ತುಗಳಿವೆ. ಒಂದು ಅಧ್ಯಾತ್ಮಿಕ ಜಗತ್ತು, ಇನ್ನೊಂದು ಲೌಕಿಕ ಜಗತ್ತು. ದೈವಚಿಂತನೆ ಮಾಡುತ್ತ ಅಧ್ಯಾತ್ಮದಲ್ಲಿ ಉನ್ನತಿ ಪಡೆಯುವುದು ಎಷ್ಟು ಮುಖ್ಯವೋ, ನಮ್ಮ ಇಹಲೋಕದ ಜೀವನದಲ್ಲಿ ಇದ್ದುಕೊಂಡೆ ಜನತಾಜನಾರ್ದನನ ಸೇವೆ ಮಾಡುವುದು ಕೂಡ ಅಷ್ಟೇ ಮುಖ್ಯ ಅನ್ನುತ ಸರಳ ತತ್ವ ಅದು. ಮಧ್ವರ ಈ ವಿಚಾರಧಾರೆ ನನ್ನ ಮೇಲೆ ಪ್ರಭಾವ ಬೀರಿತು ಎಂದು ಹೇಳಬಹುದು.
ಪ್ರಾಥಮಿಕ ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ನಾನು ಶಾಲೆಗೆ ಹೋಗಲಿಲ್ಲ! ಆಗ ನನಗೆ ಮನೆಯೇ ಶಾಲೆ, ತಾಯಿಯೇ ಗುರು. ಆಕೆ ಒಬ್ಬ ಒಳ್ಳೆಯ ಶಿಕ್ಷಕಿಯೂ ಆಗಿದ್ದಳು ಅಂತ ನಾನಂದುಕೊಂಡಿದ್ದೇನೆ. ದೊಡ್ಡ ಗಣಿತಸಮಸ್ಯೆಗಳನ್ನು, ಕ್ಲಿಷ್ಟವಾದ ಗುಣಾಕಾರಗಳನ್ನೆಲ್ಲ ಮನಸ್ಸಲ್ಲೇ ಮಾಡುತ್ತಿದ್ದ ಗಟ್ಟಿಗಿತ್ತಿ ಅವಳು. ನನಗೆ ಏಳೆಂಟು ವರ್ಷವಾಗಿದ್ದಾಗ, ಅವಳ ಬಾಯಿಂದಲೇ ರಾಮಾಯಣ, ಮಹಾಭಾರತದಂತಹ ಮಹಾಕಥಾನಕಗಳನ್ನೆಲ್ಲ ಕೇಳಿ ತಿಳಿದು ಮರುಪಾಠ ಒಪ್ಪಿಸುವುದನ್ನು ರೂಡಿಸಿಕೊಂಡಿದ್ದೆ. ಓರಗೆಯ ಹುಡುಗರಂತೆ ನನಗೆ ಮೈದಾನಕ್ಕೆ ಹೋಗಿ ಮೈಕೈ ಎಲ್ಲ ಮಣ್ಣು ಮೆತ್ತಿಕೊಂಡು ಆಡಿಕೊಂಡು ಬರುವುದು ಅಷ್ಟೇನೂ ಆಸಕ್ತಿ ಹುಟ್ಟಿಸುತ್ತಿರಲಿಲ್ಲ.
ನಿರ್ಮಾನುಷ ಪಟ್ಟಣದ ನೆಲದ ತು೦ಬೆಲ್ಲ ಮನುಷ್ಯನ ನೆತ್ತರೇ ಹರಡಿತ್ತು… !!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
‘ಸ್ಥಳೀಯರು ಆ ಪಟ್ಟಣವನ್ನು ತೊರೆದು ತು೦ಬ ದಿನಗಳಾಗಿರಲಿಲ್ಲ ಎನ್ನುವುದಕ್ಕೆ ಅಲ್ಲಿನ ಮನೆಗಳ ಅ೦ಗಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆಗಳು ಸಾಕ್ಷಿಯಾಗಿದ್ದವು.ಅಲ್ಲಿನ ಜನ ಅದ್ಯಾವ ಪರಿ ಭಯಭೀತರಾಗಿದ್ದರೆ೦ದರೆ ತಮ್ಮ ತಮ್ಮ ವಾಹನಗಳನ್ನು ಸಹ ಅಲ್ಲಿಯೇ ಮರೆತು ಗುಳೆ ಎದ್ದಿದ್ದರು.ಇಡಿ ಪಟ್ಟಣದಲ್ಲೊ೦ದು ಸ್ಮಶಾನ ಮೌನ.ನಿರ್ಮಾನುಷತೆಯ ಫಲವೋ ಏನೋ ನಗರದ ವಿಲಕ್ಷಣ ಮೌನ ಅಸಹನೆ ಹುಟ್ಟಿಸುವ೦ತಿತ್ತು.ಮನುಷ್ಯರು ಬಿಡಿ,ಕೊನೆಗೊ೦ದು ಪ್ರಾಣಿಯೂ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ.ಊರಿನ ಬೀದಿಗಳಲ್ಲಿ ನಮಗೆ ಕಾಣಿಸುತಿದ್ದದ್ದು ಅದೊ೦ದೇ.ಕೆ೦ಪು ನೆತ್ತರು! ಮನುಷ್ಯನ ತಾಜಾ ರಕ್ತ..!! ಅದೊ೦ದು ಭೀಭತ್ಸಪೂರ್ಣ ಅನುಭವ.ನಮ್ಮ ಸೈನಿಕರು ನೆಲದ ಮೇಲೆಲ್ಲ ಹರಡಿ ಬಿದ್ದಿದ್ದ ಪುಟ್ಟಮಕ್ಕಳ ಬಟ್ಟೆಗಳ ಮೇಲೆ ಹೆಜ್ಜೆಯನ್ನಿಟ್ಟು ನಡೆಯುವುದು ಅನಿವಾರ್ಯವಾಗಿತ್ತು.ರಾತ್ರಿಯಿಡಿ ನಡೆದ ಭೀಕರ ಕಾಳಗದ ಪರಿಣಾಮವಾಗಿ ನಗರದ ಮನೆಗಳ ಗೋಡೆಗಳ ತು೦ಬೆಲ್ಲ ಸಿಡಿಗು೦ಡಿನಿ೦ದಾದ ಅಸ೦ಖ್ಯಾತ ತೂತುಗಳು ,ಜೇನುಹುಟ್ಟನ್ನು ನೆನಪಿಸುವ೦ತಿದ್ದವು.ಹತ್ತಾರು ಮೊಬೈಲ್ ಫೋನುಗಳು, ಚಿಕ್ಕ ಮಕ್ಕಳ ಚಪ್ಪಲಿಗಳು ವರ್ಜಿತ ಮನೆಗಳಲ್ಲಿ ಸರ್ವೇ ಸಾಮಾನ್ಯವೆ೦ಬ೦ತೆ ಕಾಣ ಸಿಗುತ್ತಿದ್ದವು.ಸುಲಭವಾಗಿ ಕೈಗೆಟುಕುತ್ತಿದ್ದ ಇ೦ಥಹ ಕೆಲವು ಅಮೂಲ್ಯ ವಸ್ತುಗಳು ನಮ್ಮ ಸೈನಿಕರಲ್ಲಿ ಯಾವ ಆಸಕ್ತಿಯನ್ನೂ ಮೂಡಿಸುತ್ತಿರಲಿಲ್ಲ.ಕನಿಷ್ಟಪಕ್ಷ ಅವುಗಳನ್ನು ನಮ್ಮ ಯೋಧರು ಮುಟ್ಟುತ್ತಲೂ ಇರಲಿಲ್ಲ.ನಮ್ಮ ಸೈನಿಕರು ಹುಡುಕುತ್ತಿದ್ದ ವಸ್ತುಗಳೇ ಬೇರೆ.ಅವರು ವಿಶೇಷವಾಗಿ ಹುಡುಕುತಿದ್ದದ್ದು ಡಿವಿಡಿಗಳಿಗಾಗಿ..!! ಅವು ಯಾವುದೋ ಸಿನಿಮಾ ಅಥವಾ ಇ೦ಪಾದ ಹಾಡುಗಳುಳ್ಳ ಸಾಮಾನ್ಯ ಡಿವಿಡಿಗಳಲ್ಲ.ತಮ್ಮ ಸಾಧನೆಗಳನ್ನು ಪ್ರದರ್ಶಿಸುವುದಕ್ಕಾಗಿ ಜಿಹಾದಿಗಳು ಸೈನಿಕರಿಗಾಗಿಯೇ ತಯಾರಿಸಿಟ್ಟ ಡಿವಿಡಿಗಳವು.
ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು? – ಭಾಗ ೨
– ರಾಕೇಶ್ ಶೆಟ್ಟಿ
ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು? – ಭಾಗ ೧
ಇಂಗ್ಲೀಷ್ ಶಿಕ್ಷಣ ಮಾಧ್ಯಮದಲ್ಲಿ ಓದುವ ನಮ್ಮ ಹಳ್ಳಗಾಡಿನ,ಚಿಕ್ಕ-ಪುಟ್ಟ ಪಟ್ಟಣದ,ಸರ್ಕಾರಿ ಶಾಲೆಯವರು ಅನುಭವಿಸುವ ಕೀಳರಿಮೆ,ಅವಮಾನಗಳೆಂತದ್ದು ಎನ್ನುವುದು,ಕನ್ನಡ ಮಾಧ್ಯಮದಲ್ಲಿ ೧೦ನೇ ತರಗತಿಯವರೆಗೆ ಓದಿಕೊಂಡು ನಂತರ ವಿಜ್ಞಾನ ವಿಷಯದ ಮೇಲೆ ಪಿಯುಸಿ ಓದಿ,ಇಂಜೀನಿಯರಿಂಗ್ ಮಾಡಿದ ನನ್ನಂತವರಿಗೆ ತಿಳಿದಿದೆ.ಮೊದಲನೇ ವರ್ಷದ ಪಿಯುಸಿ ತರಗತಿಯಲ್ಲಿ ಇಂಗ್ಲೀಷಿನಲ್ಲೇ ಪಾಠ ನಡೆಯುವಾಗ ಕನ್ನಡ ಮಾಧ್ಯಮದಿಂದ ಬಂದ,ನನ್ನನ್ನೂ ಸೇರಿದಂತೆ ಉಳಿದ ೭-೮ ಹುಡುಗರಿಗೆ ಏನು ಅರ್ಥವಾಗದೇ, ಆ ಕೀಳರಿಮೆಯಿಂದ ಕ್ಲಾಸಿನಲ್ಲಿ ಕೂರಲಿಕ್ಕೂ ಆಗದೇ,ಇಂತ ಪಾಠಕ್ಕಿಂತ ಕ್ರಿಕೆಟ್ಟೇ ಮೇಲೂ ಎನಿಸಿ.ಕ್ಲಾಸ್ ಬಿಟ್ಟು ಕ್ರಿಕೆಟ್ ಆಡಲು ಹೋಗುತಿದ್ದೆವು.ಕಡೆಗೆ ನಮ್ಮಲ್ಲಿ ೩-೪ ಜನ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಅವರ ಶಿಕ್ಷಣಕ್ಕೇ ಎಳ್ಳು ನೀರು ಬಿಟ್ಟರು.ಅಲ್ಲಿಗೆ ಇಂಗ್ಲೀಷ್ ಅರಗಿಸಿಕೊಳ್ಳಲಾಗದೇ ಅವರ ಉನ್ನತ ವಿದ್ಯಾಭ್ಯಾಸ ಮರಿಚೀಕೆಯಾಯಿತು. ಹಾಗಂತ ಆ ವಿದ್ಯಾರ್ಥಿಗಳೇನು ಓದಿನಲ್ಲಿ ಹಿಂದೆ ಬಿದ್ದವರಲ್ಲ.ಇಂಗ್ಲೀಷ್ ನಮಗಲ್ಲ ಎನ್ನುವ ಕೀಳರಿಮೆಯಿಂದ ಅವರು ಪಿಯುಸಿಯಲ್ಲಿ ಹಿಂದೆ ಬಿದ್ದರು.ಕಡೆಗೆ ಉನ್ನತ ಶಿಕ್ಷಣವನ್ನೂ ಬಿಟ್ಟರು.
ಮಾಲಾವಿ ದೇಶದ ಉದಾಹರಣೆಗೆ ತದ್ವಿರುದ್ಧ ಉದಾಹರಣೆಯಾಗಿ,ಇಸ್ರೇಲ್ ದೇಶವನ್ನು ತೆಗೆದುಕೊಳ್ಳಬಹುದು.ರಾಜಕೀಯ ವಿಪ್ಲವ ಮತ್ತಿತ್ತರ ಕಾರಣಗಳಿಂದಾಗಿ ಜಗತ್ತಿನಾದ್ಯಂತ ಹರಿದು ಅಂಚಿಹೋಗಿ,ವಿವಿಧ ದೇಶಗಳಲ್ಲಿ ನೆಲೆಸಿ ಕಡೆಗೆ ೨೦ನೇ ಶತಮಾನದಲ್ಲಿ ಒಂದುಗೂಡಿ ಇಸ್ರೇಲ್ ದೇಶ ರಚಿಸಿಕೊಂಡ,ಯಹೂದಿಯರು ತಮ್ಮ ದೇಶವನ್ನು ಕಟಿಕೊಳ್ಳುವುದರ ಜೊತೆಗೆ ನಶಿಸುವ ಹಂತ ತಲುಪಿದ್ದ ಹಿಬ್ರೂ ಭಾಷೆಯನ್ನೇ ಶಿಕ್ಷಣ ಸೇರಿದಂತೆ ತಮ್ಮೆಲ್ಲಾ ರಂಗಗಳಲ್ಲೂ ಬಳಸಿಕೊಂಡರು.ಇವತ್ತು ಇಸ್ರೇಲ್ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿದೆ. ಇಸ್ರೇಲಿನ “ಟೆಕ್ನಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ” ವಿಶ್ವದ ಉತ್ತಮ ವಿದ್ಯಾಲಯಗಳಲ್ಲಿ ಒಂದು.ಅಲ್ಲಿ ಚಳಿಗಾಲದ ಮತ್ತು ಬೇಸಿಗೆ ಕಾಲದ ತರಗತಿಗಳಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ೫ ವಾರಗಳ ಕಡ್ಡಾಯ ಹಿಬ್ರೂ ಭಾಷಾ ಕಲಿಕೆಯಾಗಬೇಕು.ಅದು ಮುಗಿದ ನಂತರವೇ ಮುಖ್ಯ ಪಠ್ಯಗಳು ಶುರುವಾಗುವುದು. ಮತ್ತಷ್ಟು ಓದು
ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ
– ಡಾ.ಸಂಗಮೇಶ ಸವದತ್ತಿಮಠ
ಬೆಂಗಳೂರಿನಲ್ಲಿ ಸುಪ್ರೀಮ್‍ಕೋರ್ಟ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರು,ದಿನಾಂಕ 29-7-2012 ರಂದು ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತ ಅರುಣ ಶೌರಿ ಅವರ ನಾಲ್ಕು ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈಚೆಗೆ ನಮ್ಮ ದೇಶದಲ್ಲಿ `ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ’ದ (Negetive Social Critical mass) ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ ಎಂದು ಹೇಳಿದ್ದು ನಮ್ಮನ್ನು ಯೋಚಿಸುವಂತೆ ಮಾಡಿದೆ. ಅವರು ಹೇಳಿದ ’Social Critical mass’, ಎಂಬುದು ಎಲ್ಲ ವಲಯಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಹಬ್ಬಿಸುತ್ತಲಿದೆ. ಸಾಮಾಜಿಕ ಸಮೂಹ ಎಂಬುದು ಒಂದು ಜಾತಿ ಅಥವಾ ಒಂದು ಧರ್ಮ ಇಲ್ಲವೆ ರಾಜಕೀಯ ಪಕ್ಷದ ಒಬ್ಬ ಮುಖಂಡನ ಸುತ್ತ ಗಿರಕಿಹೊಡೆಯುತ್ತ ಇರುತ್ತದೆ. ಮುಖಂಡನು ತನ್ನ ಸುತ್ತಮುತ್ತಣದವರ ಸ್ವಾರ್ಥ ಲಾಲಸೆಗಳನ್ನು ಪೂರೈಸಲೋಸುಗ ಒಂದು ಅಥವಾ ಹಲವು ಸಮಾನ ಮನಸ್ಕ ಜನತಾಗುಂಪುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ಅಂಥ ಗುಂಪಿನ ಜನ ಹತ್ತಾರು ಸಾವಿರವಿದ್ದರೂ ಆಯಿತು, ಆತನು ಮೊದಲು ಕೈಹಾಕುವುದು ಆಡಳಿತದಲ್ಲಿದ್ದ ಸರ್ಕಾರದ ಕುತ್ತಿಗೆಗೆ. ನನಗೆ ಇಷ್ಟು ಜನಬೆಂಬಲವಿದೆ, ನಮ್ಮ ಸಮುದಾಯವನ್ನು ಸರ್ಕಾರ ನಿರ್ಲಕ್ಷಿಸಿದೆ. ಅದಕ್ಕೆ ಇಂತಿಂಥ ಸೌಲಭ್ಯಗಳು ನಮ್ಮವರಿಗೆ ಬೇಕು ಎಂದು ಒಂದು ದೊಡ್ಡ ಪಟ್ಟಿಯನ್ನು ಮುಂದಿಡುತ್ತಾನೆ. ಇಂಥ ಮುಖಂಡರು ಭಸ್ಮಾಸುರರಿದ್ದಂತೆ. ಒಂದು ಪಕ್ಷವು ಆಡಳಿತದಲ್ಲಿ ಇದ್ದಾಗ ಆ ಪಕ್ಷದಿಂದ ಏನು ಬೇಕೋ ಅದನ್ನೆಲ್ಲ ವಾಮಮಾರ್ಗದಿಂದಾದರೂ ಸರಿಯೆ, ಇನ್ನಿತರರಿಗೆ ಕಷ್ಟವಾದರೂ ಸರಿಯೆ ಬಾಚಿಕೊಳ್ಳುವುದು. ನಂತರ ಮತ್ತೊಂದು ಪಕ್ಷವು ಆಡಳಿತಕ್ಕೆ ಬಂದರೆ ಅಲ್ಲಿಯೂ ಅವನು ಅದೇ ಬಗೆಯ ತಂತ್ರಗಾರಿಕೆಯನ್ನು ಉಪಯೋಗಿಸುತ್ತಾನೆ. ಅವನಿಗೆ ಯಾರು ಅಧಿಕಾರದಲ್ಲಿ ಇದ್ದರೇನು? ತನ್ನ ಮತ್ತು ತನ್ನವರ ಕಾರ್ಯ ಸುಲಭವಾಗಿ ಸಾಗುವಂತಿದ್ದರೆ ಆಯಿತು. ಇದೀಗ ಮಠಾಧೀಶರೂ ಅದೇ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅದಕ್ಕಾಗೆ ಜಾತಿಗೊಂದು ಮಠಗಳು ಹುಟ್ಟಿಕೊಳ್ಳುತ್ತಿವೆ. ಮಠಾಧೀಶರಿಗೆ ರಾಜಕಾರಣಿಗಳಿಗೆ ಈಗ ವ್ಯತ್ಯಾಸ ಕಡಿಮೆಯಾಗುತ್ತಿದೆ. ತಮ್ಮ ತಮ್ಮ ಜಾತಿ ಗುಂಪುಗಳ ಅನುಕೂಲಸಿಂಧು ಚಟುವಟಿಕೆಗಳೇ ತಮತಮಗೆ ಮುಖ್ಯ ಎಂಬುದನ್ನು ಬಹಿರಂಗವಾಗಿಯೇ ಅವರು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಇದು ಭಾರತವನ್ನು ಧರ್ಮ-ಜಾತಿ-ಪಕ್ಷ ಆಧಾರಿತ ಗುಂಪುಗಳಲ್ಲಿ ಛಿದ್ರಗೊಳಿಸುವ ಬಹು ಕೆಟ್ಟ ಬೆಳವಣಿಗೆ.
ಮತ್ತಷ್ಟು ಓದು
ಮೂಢನಂಬಿಕೆ ನಿಷೇಧ ಕಾಯ್ದೆ ಮಂಡನೆಗೆ ಆಷಾಢಮಾಸ ಅಡ್ಡಿ!
– ಪ್ರವೀಣ್ ಕುಮಾರ್ ಮಾವಿನಕಾಡು
ಆಷಾಢಮಾಸ ಯಾವುದೇ ಶುಭ ಕಾರ್ಯಗಳಿಗೆ ಸೂಕ್ತವಲ್ಲ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ “ಮೂಢನಂಬಿಕೆ ಆಚರಣೆ ಪ್ರತಿಬಂಧಕ ವಿಧೇಯಕ”ವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸದಿರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಈ ವಿಧೇಯಕವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವ ಕುರಿತಂತೆ ಮೂಢ ನಂಬಿಕೆ ವಿರೋಧೀ ಹೋರಾಟ ಸಮಿತಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.ಇದೇ ಸಂಧರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ತಾವು ಈಗಾಗಲೇ ನಗರದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಖ್ಯಾತ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದು ಅವರೂ ಸಹ ಈ ಬಾರಿ ಅಧಿಕ ಆಷಾಢ ಬಂದಿರುವುದರಿಂದ ವಿಧೇಯಕ ಮಂಡನೆ ಬೇಡ ಎಂದು ತಮಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.ಅಲ್ಲದೇ ಹಾಗೊಂದು ವೇಳೆ ಆಷಾಢದಲ್ಲೇ ವಿಧೇಯಕ ಮಂಡಿಸಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರಲಿದೆ ಮತ್ತು ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಗಳಾಗುವ ಸಂಭವವಿದೆ.ಹಾಗೇನಾದರೂ ಆದಲ್ಲಿ ತಾವು ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷಾಂತರ ಮಾಡಿ,ಹಲವು ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಡಿಸಿ,ಇದುವರೆಗೆ ಮಾಡಿದ ರಾಜಕೀಯವೆಲ್ಲವೂ ವ್ಯರ್ಥವಾಗಲಿದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ಸಧ್ಯಕ್ಕೆ ಈ ವಿಧೇಯಕವನ್ನು ಮಂಡಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದರು.
ಮತ್ತಷ್ಟು ಓದು
ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು?
– ರಾಕೇಶ್ ಶೆಟ್ಟಿ
ಅಂಡಮಾನ್ ದ್ವೀಪದ,’ಬೋ’ ಎಂಬ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರ ಹೆಸರು ಬೋ ಎಸ್ಸರ್.ಈಕೆ ‘ಬೋ’ ಭಾಷೆ ಮಾತನಾಡಬಲ್ಲ ಬುಡಕಟ್ಟು ಜನಾಂಗದ ಕೊನೆಯ ಕೊಂಡಿಯಾಗಿದ್ದರು.೨೦೧೦ರಲ್ಲಿ,ತನ್ನ ೮೫ನೇ ವಯಸ್ಸಿನಲ್ಲಿ ಬೋ ಎಸ್ಸರ್ ಮರಣಹೊಂದುವುದರೊಂದಿಗೆ “ಬೋ” ಎಂಬ ಬುಡಕಟ್ಟು ಭಾಷೆಯೂ ಮಣ್ಣಾಯಿತು.ಭಾರತದಂತಹ ಸಾವಿರಾರು ಭಾಷೆಗಳಿರುವ ನೆಲದಲ್ಲಿ ಇಂತ ಅದಿನ್ನೆಷ್ಟು ಭಾಷೆಗಳು ಹೀಗೆ ಮಣ್ಣಾಗಿವೆಯೋ ಗೊತ್ತಿಲ್ಲ.ಒಂದು ಭಾಷೆ ಮಣ್ಣಾಗುವುದೊರೊಂದಿಗೆ ಆ ಭಾಷೆಯ ಜೊತೆಗೆ ಬೆಸೆದುಕೊಂಡ ಸಂಸ್ಕೃತಿ,ಆಚರಣೆಗಳು,ನೋವು,ನಲಿವುಗಳೂ ಮಣ್ಣಾಗುತ್ತವೆ.
ಭಾರತದಂತ ಅಗಾಧ ವೈವಿಧ್ಯಮಯ ದೇಶದಲ್ಲಿ ಭಾಷೆಯ ಕುರಿತ ಚರ್ಚೆಗಳಲ್ಲಿ ಎದ್ದು ಕಾಣುವುದು,ಈ ದೇಶಕ್ಕೊಂದು ರಾಷ್ಟ್ರ ಭಾಷೆಯ ಅಗತ್ಯವಿದೆಯೇ ಅಥವಾ ಲಿಂಕಿಂಗ್ (ಸಂವಹನ) ಭಾಷೆಯ ಅಗತ್ಯವಿದೆಯೇ ಎನ್ನುವುದು.ಇದರ ಜೊತೆಗೆ ಶಿಕ್ಷಣದ ಮಾಧ್ಯಮ ಯಾವುದಿರಬೇಕು ಎನ್ನುವ ವಿಷಯ ಬಂದಾಗ,ಚರ್ಚೆಯನ್ನು ಎರಡು ಹಾದಿಯಲ್ಲಿ ತಂದು ನಿಲ್ಲಿಸಬಹುದು.
ಪರಿಸರದ ಭಾಷೆಯಲ್ಲಿ ಶಿಕ್ಷಣ ನೀಡುವುದು ಒಂದು ಹಾದಿಯಾದರೇ,ಇನ್ನೊಂದು ಹಾದಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಮತ್ತು ಅದರ ಲಾಭ.
ಸಂವಹನ ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಇಂಗ್ಲೀಷ್ ಮತ್ತಷ್ಟು ಓದು
ನಾಡು-ನುಡಿ ಮರುಚಿಂತನೆ : ಅಕ್ಷರಕ್ಕೂ,ಶಿಕ್ಷಣಕ್ಕೂ,ವಿದ್ಯೆಗೂ,ಜ್ಞಾನಕ್ಕೂ ಏನು ಸಂಬಂಧ?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಸಾಧಾರಣವಾಗಿ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಕುರಿತು ಒಂದು ಆರೋಪವನ್ನು ಪದೇ ಪದೇ ಮಾಡಲಾಗುತ್ತದೆ: ಅದೆಂದರೆ ಬ್ರಾಹ್ಮಣರು ಶೂದ್ರರನ್ನು ಹಾಗೂ ಅಸ್ಪೃಶ್ಯರನ್ನು ಅಕ್ಷರ ಜ್ಞಾನದಿಂದ ವಂಚಿಸಿದ್ದಾರೆ. ಆಕಾರಣದಿಂದಾಗಿ ಅವರಿಗೆ ಜ್ಞಾನವನ್ನೂ, ವಿದ್ಯೆಯನ್ನೂ ನಿರಾಕರಿಸಿದ್ದರು ಅಂತ. ನಮ್ಮ ಜಾತಿ ವ್ಯವಸ್ಥೆಯಲ್ಲಿ ಶೋಷಣೆಯ ಒಂದು ಲಕ್ಷಣ ಎಂಬಂತೆ ಕೆಲವು ಹಿತಾಸಕ್ತಿ ಪೀಡಿತ ಗುಂಪುಗಳು ಈ ಸಂಗತಿಯನ್ನು ತಪ್ಪದೇ ಹೇಳುತ್ತಿರುತ್ತವೆ.
ಹೀಗೆ ಹೇಳುವವರು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಆಧುನಿಕ ಶಿಕ್ಷಣವು ಅಕ್ಷರಾಭ್ಯಾಸಕ್ಕೂ ಶಿಕ್ಷಣಕ್ಕೂ ಒಂದು ಅವಿನಾಭಾವಿಯಾದ ಸಂಬಂಧ ಕಲ್ಪಿಸುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಸಾಕ್ಷರತೆಯ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಹಮ್ಮಿಕೊಂಡಿದೆ ಹಾಗೂ ವಿಶ್ವಸಂಸ್ಥೆ ಕೂಡಾ ಅಕ್ಷರವನ್ನು ಅಭಿವೃದ್ಧಿಯ ಮಾನದಂಡವನ್ನಾಗಿ ಸ್ವೀಕರಿಸಿದೆ. ವಯಸ್ಕರಿಗೆ ಕೂಡಾ ಅವರು ಸಾಯುವುದರ ಒಳಗೆ ಒಮ್ಮೆಯಾದರೂ ಅಕ್ಷರಾಭ್ಯಾಸವನ್ನು ಮಾಡಿಸುವುದು ನಿರ್ಣಾಯಕ ಎಂದು ಭಾವಿಸಲಾಗಿದೆ. ಈ ರೀತಿಯ ಶಿಕ್ಷಣ ಪದ್ಧತಿಯಲ್ಲಿ ಜ್ಞಾನವನ್ನು ಪುಸ್ತಕವನ್ನು ಓದುವ ಮೂಲಕವೇ ಪಡೆಯುವುದು ಅತ್ಯವಶ್ಯ. ಇದು ಪಾಶ್ಚಾತ್ಯ ಸಂಸ್ಕೃತಿಯ ಕ್ರಮ. ಅಲ್ಲಿ ಸತ್ಯದೇವನ ವಾಣಿಯು ಅಂತಿಮವಾದ ಸತ್ಯವಾಗಿದ್ದು ಅದು ಬರೆಹದ ಮೂಲಕವೇ ಲಭ್ಯವಿರುವುದರಿಂದ ಬರೆಹವನ್ನು ಕಲಿಯುವುದು ನಿರ್ಣಾಯಕ.
ಏಕ್ ಥಾ ಟೈಗರ್!
– ರೋಹಿತ್ ಚಕ್ರತೀರ್ಥ
“ಹ್ಞೂ ಅಂತಿಯೋ ಊಹ್ಞೂ ಅಂತಿಯೋ?”
“ಏನೇ ಹೇಳುವ ಮೊದಲು ನನಗೆ ಸ್ವಲ್ಪ ಮಾಹಿತಿಯಾದರೂ ಇರಬೇಕು ತಾನೆ? ನನ್ನ ಕೆಲಸ ಏನು ಅಂತಾದ್ರೂ ಹೇಳಿ!”
“ನೀನು ಮೊನ್ನೆ ಕಾಲೇಜಲ್ಲಿ ಸ್ಟೇಜ್ ಮೇಲೆ ಏನು ಮಾಡಿದಿಯೋ ಅದೇ.”
“ಅಂದ್ರೆ??”
“ನಾಟಕ ಆಡೋದು”
“ನೀವೇನು ನಾಟಕ ಕಂಪೆನಿಯವರಾ? ನಾನಿಲ್ಲಿ ಬಿಕಾಂ ಮಾಡ್ತಿದೇನೆ. ಡಿಗ್ರಿ ಮುಗಿಸಿ ನಾಟಕ ಮಂಡಳಿ ಸೇರಿದೆ ಅಂತ ಹೇಳಿದರೆ ನನ್ನಪ್ಪ ಸಿಗಿದು ತೋರಣ ಕಟ್ತಾರೆ ಅಷ್ಟೆ.ಅಲ್ಲದೆ, ನಟನಾಗಿ ಹೆಸರು ಮಾಡೋ ಆಸೆ ಅಷ್ಟೇನೂ ಇಲ್ಲ ನನಗೆ”
“ನಮ್ಮಲ್ಲಿ ನಾಟಕಕ್ಕೆ ಸೇರಿದರೆ ನಿನ್ನ ಕಟೌಟನ್ನು ಎಲ್ಲೂ ನಿಲ್ಲಿಸೋಲ್ಲ. ಇನ್ನು ನಿನ್ನ ಕೆಲಸದ ಬಗ್ಗೆ ಹೊರಗೆಲ್ಲೂ ಹೇಳುವ ಹಾಗೂ ಇಲ್ಲ. ನಿನ್ನ ಜೀವನಪೂರ್ತಿ ಅದೊಂದು ರಹಸ್ಯವಾಗಿರುತ್ತೆ. ಆದರೆ ನೀನು ಆ ಉದ್ಯೋಗ ಮಾಡೋದು ನಿನಗಾಗಿ ಅಥವಾ ಕುಟುಂಬಕ್ಕಾಗಿ ಅಲ್ಲ; ಬದಲು ದೇಶಕ್ಕಾಗಿ. ಅದೊಂದು ಮಹೋನ್ನತ ಉದ್ಯೋಗ.”
“ಯಾ..ಯಾರು ನೀವು?”
“ರಾ ಅಧಿಕಾರಿಗಳು. ದೇಶದ ಹಿತ ಕಾಯುವ ಬೇಹುಗಾರರು.”
ರವೀಂದ್ರ ಕೌಶಿಕ್ ಬೆಚ್ಚಿಬಿದ್ದ. ಹಣೆಯ ನೆರಿಗೆಯ ಮೇಲೆ ಬೆವರಿನ ತೋರಣ ಕಟ್ಟಿತು. ಇವರು ನನ್ನನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ? ಎರಡು-ಮೂರು ಸಾವಿರ ವಿದ್ಯಾರ್ಥಿಗಳಿರುವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಾನೊಬ್ಬ ಗುಂಪಿನಲ್ಲಿ ಗೋವಿಂದನಾಗಿರುವ ಸಾಮಾನ್ಯ ಯುವಕ. ಕಾಮರ್ಸ್ ಪದವಿ ಮಾಡುತ್ತಿದ್ದೇನೆ. ಆಗೀಗ ಕಾಲೇಜಿನ ಟ್ಯಾಲೆಂಟ್ ಶೋಗಳಲ್ಲಿ ಸಣ್ಣಪುಟ್ಟ ಪ್ರಹಸನ ಮಾಡಿದ್ದುಂಟು. ಮೂರುದಿನದ ಹಿಂದೆ ಒಂದು ಕಾರ್ಯಕ್ರಮದಲ್ಲಿ, ಚೀನಾದ ಸೈನಿಕರಿಗೆ ಸಿಕ್ಕಿಯೂ ರಹಸ್ಯಗಳನ್ನು ಬಿಟ್ಟುಕೊಡದ ಭಾರತೀಯ ಸೈನಿಕನ ಪಾತ್ರ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದೆ. ಅಷ್ಟೆ! ಅಷ್ಟು ಮಾಡಿದ್ದು ಬಿಟ್ಟರೆ ನನಗೆ ಈ ಸೇನೆ, ರಕ್ಷಣೆ, ಬೇಹುಗಾರಿಕೆ ಇವೆಲ್ಲ ಏನೇನೂ ಗೊತ್ತಿಲ್ಲ. ನನ್ನಲ್ಲಿ ಯಾವ ಮಹಾಗುಣ ನೋಡಿ ಈ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ? RK ಚಿಂತೆಗೆ ಬಿದ್ದ.
ನ್ಯಾಯಕ್ಕಾಗಿ ಶೋಷಿತ ಯುವಕನ ಜೀವಪರ ಹೋರಾಟ
– ಪ್ರವೀಣ್ ಕುಮಾರ್ ಮಾವಿನಕಾಡು
ಬೆಂಗಳೂರು: ಕೇವಲ ಭಯೋತ್ಪಾದಕ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನಿಗೆ ಮನೆಯನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ನಿರಾಕರಿಸಿದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.ಹೈದರಾಬಾದ್ ಮೂಲದ ಮನೋಜ್ ಕುಮಾರ್(ಹೆಸರು ಮತ್ತು ಧರ್ಮ ಬದಲಿಸಿದೆ) ಎನ್ನುವ ಯುವಕ ತಾನು ಗೆರೆ ನಗರದ ಮನೆಯ ಮಾಲೀಕರೊಬ್ಬರ ಬಳಿ ಬಾಡಿಗೆಗೆ ಮನೆ ಬೇಕೆಂದು ಕೇಳಿದಾಗ ಅವರು ಕೆಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಯಾಗಿರುವ (ಕೇವಲ ಆರೋಪಿಯಾಗಿರುವ) ನನ್ನನ್ನು ಗುರುತಿಸಿದರು ಮತ್ತು ನಾವು ನಿಮ್ಮಂತವರಿಗೆ ಮನೆ ನೀಡುವುದಿಲ್ಲ ಹೇಳಿ ಬಾಗಿಲು ಮುಚ್ಚಿಕೊಂಡರು ಎಂದು ಆರೋಪಿಸಿದ್ದಾನೆ.
ಇಂತಹಾ ಘಟನೆ ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ನಡೆದಿದ್ದು ದೇಶದಾದ್ಯಂತ ತೀವ್ರ ಸಂಚಲನ ಉಂಟುಮಾಡಿದೆ.
ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆ ಎಂದು ಪ್ರತಿಕ್ರಿಯಿಸಿದ ಗೃಹ ಸಚಿವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೂರು ದಿನಗಳ ಒಳಗಾಗಿ ತನಗೆ ವರದಿ ನೀಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,ತಪ್ಪಿತಸ್ತರು ಎಷ್ಟೇ ದೊಡ್ದವರಾಗಿದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮತ್ತಷ್ಟು ಓದು
ನಾಡು-ನುಡಿ ಮರುಚಿಂತನೆ : ಶಂಕರಾಚಾರ್ಯರು ಮತ್ತು ಜಾತಿವ್ಯವಸ್ಥೆಯ ಕಥೆ
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಶಂಕರಾಚಾರ್ಯರು ಇಂದು ಒಂದು ವರ್ಗದ ಬುದ್ಧಿಜೀವಿಗಳ ಟೀಕೆಗೆ ಗುರಿಯಾಗಿದ್ದಾರೆ.ಅವರೆಂದರೆ ಜಾತಿ ವ್ಯವಸ್ಥೆಯ ವಿನಾಶವನ್ನು ಪ್ರತಿಪಾದಿಸುವವರು.ಜಾತಿ ವ್ಯವಸ್ಥೆ ಎಂಬ ಕಥೆಯ ಸಾರವಿಷ್ಟು: ಇಂದು ಭಾರತದಲ್ಲಿ ಕಂಡುಬರುವ ಸಕಲ ಜಾತಿಗಳನ್ನೂ, ಅವುಗಳ ಪದ್ಧತಿಗಳನ್ನೂ ಹಾಗೂ ತರತಮಗಳನ್ನೂ ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ರಚಿಸಿದರು ಹಾಗೂ ತಮ್ಮ ಧರ್ಮಶಾಸ್ತ್ರಗಳೆಂಬ ಕಾನೂನುಗಳನ್ನು ಮಾಡಿ ಅವು ಮುಂದುವರೆಯುವಂತೆ ನೋಡಿಕೊಂಡರು. ಈ ಕಥೆಯನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕಾದರೆ ಅದಕ್ಕೆ ಆಧಾರಗಳು ಬೇಕೇ ಬೇಕು. ಶಂಕರಾಚಾರ್ಯರು ಅಂಥದ್ದೊಂದು ಆಧಾರ ಎಂಬುದಾಗಿ ಈ ಬುದ್ಧಿಜೀವಿಗಳು ನಂಬಿದ್ದಾರೆ. ಶಂಕರರ ತತ್ವಜ್ಞಾನ ಹಾಗೂ ಜಿಜ್ಞಾಸೆಗಳು ಈ ವರ್ಗಕ್ಕೆ ಅಪ್ರಸ್ತುತ. ಅವರ ತತ್ವಜ್ಞಾನವೇ ಬ್ರಾಹ್ಮಣಶಾಹಿಯ ಒಂದು ಕಣ್ಕಟ್ಟಾಗಿರುವುದರಿಂದ ಅದಕ್ಕೆ ಬಲಿಯಾಗಬಾರದು ಎಂಬ ಎಚ್ಚರಿಕೆ ಕೂಡ ಇವರಲ್ಲಿ ಸದಾ ಜಾಗೃತವಾಗಿ ಇರುತ್ತದೆ.
ಆದರೆ ಶಂಕರರ ಸಿದ್ಧಾಂತವನ್ನು ಪರಿಚಯಿಸಿಕೊಂಡ ಯಾರಿಗಾದರೂ ಅವರು ಎಲ್ಲಾ ಬಿಟ್ಟು ಜಾತಿಭೇದವನ್ನು ಎತ್ತಿ ಹಿಡಿಯಲಿಕ್ಕಾಗಿ ತಮ್ಮ ಜೀವ ಸವೆಸಿದರು ಎಂಬುದು ಹಾಸ್ಯಾಸ್ಪದವಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ತಾವು ಪ್ರತಿಪಾದಿಸುವ ಜ್ಞಾನವು ಜಾತಿ, ಒಣ ಪಾಂಡಿತ್ಯ, ತರ್ಕ, ಶಾಸ್ತ್ರ ಇತ್ಯಾದಿಗಳನ್ನು ಮೀರಿದ್ದು ಎಂಬುದನ್ನು ಅವರು ಸ್ಪಷ್ಟವಾಗಿಯೇ ಸಾರುತ್ತಾರೆ. ಜ್ಞಾನಿಯಾದವನಲ್ಲಿ ‘ಜಾತಿ ಭೇದ’ ಅಳಿಯುತ್ತದೆ ಹಾಗೂ ಎಲ್ಲರಲ್ಲೂ ನಾನೇ ಇದ್ದೇನೆ ಎನ್ನುವ ಅನುಭವವಾಗುತ್ತದೆ ಎನ್ನುತ್ತಾರೆ. ಇಂಥ ಹೇಳಿಕೆಗಳು ಜಾತಿಭೇದವನ್ನು ಗಟ್ಟಿಮಾಡುತ್ತವೆ ಎನ್ನಬಹುದಾದರೆ ಜಾತಿಭೇದ ಅಳಿಯಬೇಕು ಎನ್ನುತ್ತಿರುವ ಇಂದಿನ ಎಲ್ಲ ಬುದ್ಧಿಜೀವಿಗಳ ಹೇಳಿಕೆಗಳೂ ಅದೇ ಕೆಲಸವನ್ನು ಮಾಡುತ್ತಿವೆ ಎಂದೇಕೆ ಹೇಳಬಾರದು? ಹಾಗಾಗಿ ಶಂಕರರ ಮೇಲಿನ ಆಪಾದನೆಯು ತರ್ಕಬದ್ಧವಾಗಿ ಕಾಣಿಸುವುದಿಲ್ಲ. ಹಾಗಾದರೆ ಈ ಆಪಾದನೆಯು ಎಲ್ಲಿಂದ ಹುಟ್ಟಿಕೊಂಡಿತು?