ನಮ್ಮ ನಡುವೆ ಮೊಳಕೆಯೊಡೆಯುತ್ತಿರುವ ಸೆಕ್ಯುಲರ್ ಭಯೋತ್ಪಾದಕರು
– ರೋಹಿತ್ ಚಕ್ರತೀರ್ಥ
ಕನ್ನಡದ ಚಲನಚಿತ್ರ ನಿರ್ದೇಶಕರೊಬ್ಬರು ಉದುರಿಸಿದ ಅಣಿಮುತ್ತುಗಳು ಇವು: “ಭಗತ್‍ಸಿಂಗ್, ಆಜಾದ್ ಮುಂತಾದವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ವ್ಯವಸ್ಥೆ ತನಗಾಗದವರ ಕತ್ತಿಗೆ ನೇಣು ಬಿಗಿಯಲು ಸದಾ ಉತ್ಸುಕವಾಗಿರುತ್ತದೆ. ಒಂದೊಂದು ಕಾಲಕ್ಕೆ ಒಂದೊಂದು ಸರಿ ಅನ್ನಿಸುತ್ತದೆ. ಕಾನೂನು ಯಾವತ್ತೂ ಸಾಪೇಕ್ಷ. ಆಳುವವರ ಮರ್ಜಿಗೆ ತಕ್ಕಂತೆ ನ್ಯಾಯ, ಕಾನೂನು, ಶಿಕ್ಷೆಯ ರೂಪಗಳು ಬದಲಾಗಬಹುದು.” ಈ ನಿರ್ದೇಶಕರು ಇಷ್ಟೆಲ್ಲ ಸಂಶೋಧನೆ ಮಾಡಿದ್ದು ಯಾಕೆಂದರೆ, ಯಾಕೂಬ್ ಮೆಮೊನ್ ಎಂಬ ದೇಶದ್ರೋಹಿಯನ್ನು ಗಲ್ಲಿಗೇರಿಸಬೇಕು ಎಂದು ಸುಪ್ರೀಂ ಕೋರ್ಟು ತೀರ್ಪು ಕೊಟ್ಟಿದ್ದು ಇವರಿಗೆ ಹೃದಯಕ್ಕೆ ಗೀರು ಕೊರೆದಷ್ಟು ನೋವಾಗಿದೆಯಂತೆ. ಅವನನ್ನು ಗಲ್ಲಿಗೇರಿಸಬಾರದು, ಭರತಖಂಡದ ನೂರಿಪ್ಪತ್ತು ಕೋಟಿ ಜನಗಳ ಮಧ್ಯೆ ಅವನೊಬ್ಬ ನಮಗೆ ಭಾರವಾಗುತ್ತಾನೆಯೇ? ಅವನನ್ನು ನೆಮ್ಮದಿಯಿಂದ ಇರಗೊಡಬೇಕು – ಎನ್ನುವುದು ಈ ನಿರ್ದೇಶಕರು ಮತ್ತು ಅವರ ಜೊತೆಗಿರುವ ಹತ್ತಾರು ಬುದ್ಧಿಜೀವಿಗಳ ವಾದ ಮತ್ತು ಅಳಲು. ಅವರ ಮಾತನ್ನು ಮೇಲುಮೇಲಕ್ಕೇ ನೋಡಿ “ಆಹಾ ಎಷ್ಟು ಚೆಂದ ಹೇಳಿದ್ದಾರಲ್ಲವಾ? ಮಾನವೀಯತೆ ಅವರ ಪದಪದಗಳಲ್ಲೂ ಜಿನುಗುತ್ತಿದೆ. ಅಂತಃಕರಣದ ಪ್ರೀತಿ, ಆದರ ಅವರ ಹನಿಹನಿ ರಕ್ತದಲ್ಲೂ ತೊಟ್ಟಿಕ್ಕುತ್ತಿದೆ” ಎಂದು ಭಾವಪರವಶರಾಗಿ ಸೋತುಹೋಗುವವರೂ ನಮ್ಮಲ್ಲಿ ಬಹುಮಂದಿ ಇದ್ದಾರೆ. ಮಹನೀಯರ ಮಾತುಗಳನ್ನು ಸ್ವಲ್ಪ ನಿದ್ದೆಬಿಟ್ಟೆದ್ದು ವಸ್ತುನಿಷ್ಠವಾಗಿ ನೋಡೋಣ.
ಸಮಯ ’ಪ್ರಜ್ಞೆ’ ಎಲ್ಲೆ ಮೀರಿದರೆ ಸಮಾಜ ಸಿಡಿದೇಳಬೇಕಾಗುತ್ತೆ..!
– ಸಂಕೇತ್ ಹೆಗ್ಡೆ
ಮಾನವ ಸಮಾಜ ಕೆಲವು ವ್ಯಕ್ತಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ! ಯೆಸ್, ಅವರೂ ಇದೇ ಪ್ರದೇಶದಲ್ಲಿ ಹುಟ್ಟಿದವರು,ಇದೇ ಗಾಳಿ ಸೇರಿಸಿದವರು, ಇದೇ ಮಣ್ಣಿನಲ್ಲಿ ಬೆಳೆದ ಆಹಾರ ತಿಂದವರು, ನಾವು ಕುಡಿಯುವ H2Oವನ್ನೇ ಕುಡಿದವರು. ಆದರೆ ಅವರಲ್ಲೊಂದು ಅಪೂರ್ವ ‘Character’ ಮೂಡಿರುತ್ತೆ! ಕ್ಷಮಿಸಿ, ಅವರು ಬೆಳೆಸಿಕೊಂಡಿರುತ್ತಾರೆ. ಅದು ನಿಷ್ಕಳಂಕ ವ್ಯಕ್ತಿತ್ವ, ಕೈತೊಳೆದುಕೊಂಡು ಮುಟ್ಟಬೇಕು! ಅಂಥವರು ಜನರಿಗೆ ತೀರಾ ಆಪ್ಯಾಯಮಾನವಾಗಿರುತ್ತಾರೆ. ಅವರು ಜೀವನದಲ್ಲಿ ಯಾರೂ ಸಾಧಿಸದಿದ್ದದ್ದೊಂದನ್ನು ಸಾಧಿಸಿರಬಹುದು, ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರಬಹುದು, ಅಥವಾ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿರಬುಹುದು, ಕೊನೆಗೆ ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿರಬಹುದು! It doesn’t matter, ಜನ ಅವರನ್ನು ಪ್ರೀತಿಸುವುದು ಖಂಡಿತ ಇವ್ಯಾವುದಕ್ಕೂ ಅಲ್ಲ! ಕೇವಲ ಅಂಥವರ ಹೃದಯ ಸಂಪನ್ನತೆಗೆ. ಕಲಾಂ ಸರ್ ಒಮ್ಮೆ ಬಾಯ್ಬಿಟ್ಟು ಹೇಳಿದ್ದರು ” I am not a handsome guy, but I can give my hand-to-some-one who needs help. Beauty is in heart, not in face” ಅಂತ. ಕಲಾಂ ದೇಶ ಬಾಂಧವರ ಕಣ್ಮಣಿಯಾಗಿದ್ದು ತಮ್ಮ ರೂಪದಿಂದಲ್ಲ, ನಡತೆಯಿಂದ. ಕಲಾಂ ತೀರಾ ಪುಟ್ಟ ಮಕ್ಕಳೊಂದಿಗೆ ಕಾಲಕಳೆಯುತ್ತಿದ್ದ ಎಷ್ಟು ಫೋಟೋಗಳು ಬೇಕು? ಕಂದಮ್ಮಗಳು ತಾತನನ್ನು ಹಾಗೆ ಅವರನ್ನು ಸುತ್ತುವರಿಯುತ್ತಿದ್ದವಲ್ಲ, ಅವುಗಳಿಗೆ ರಾಷ್ಟ್ರಪತಿ ಅಂದರೇನು, Rocket Engineer ಅಂದರೇನು ಅಂತ ಬಿಲ್ ಕುಲ್ ಗೊತ್ತಿರುವುದಿಲ್ಲ!
ಬಿಸಿಯೂಟದಲ್ಲಿ ಕೇಸರೀಬಾತು: ಮುಖ್ಯ ಶಿಕ್ಷಕ ಅಮಾನತು!
– ಪ್ರವೀಣ್ ಕುಮಾರ್,ಮಾವಿನಕಾಡು
ಕೋಮಿನಕೋಟೆ: ಕೋಮಿನಕೋಟೆ ತಾಲೂಕಿನ ಊಟೇನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದಲ್ಲಿ ಕೇಸರೀಬಾತು ಪತ್ತೆಯಾಗಿದೆ.ಅನಾಮಧೇಯ ಕರೆಯೊಂದರ ಸ್ಪಷ್ಟ ಮಾಹಿತಿಯ ಮೇರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಶಾಲೆಯ ಮೇಲೆ ದಾಳಿ ನಡೆಸಿ ಸುಮಾರು 8KG ಗೂ ಹೆಚ್ಚು ಕೇಸರೀ ಬಾತನ್ನು ವಶಪಡಿಸಿಕೊಂಡಿದ್ದಾರೆ.ಘಟನೆ ಖಂಡಿಸಿ ಮಕ್ಕಳ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಅಲ್ಲದೆ ತಮಗೆ ನೀಡಲಾಗುತ್ತಿರುವ ಊಟ ಉತ್ತಮ ಗುಣಮಟ್ಟದ್ದೇ ಆಗಿದ್ದರೂ,ಊಟದಲ್ಲಿ ಪದೇ ಪದೇ ಕೇಸರೀಬಾತು ದೊರೆಯುತ್ತಿತ್ತು ಎಂದು ವಿದ್ಯಾರ್ಥಿಗಳು ಆರೋಪಿದ್ದಾರೆ.ಪ್ರಕರಣದ ರೂವಾರಿಗಳನ್ನು ಆದಷ್ಟೂ ಬೇಗ ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಆಡಳಿತ ಹಾಗೂ ಶಾಲಾ ಆಡಳಿತ ಮಂಡಳಿ ಭರವಸೆ ನೀಡಿವೆ.ರಾಜ್ಯ ಕೋಮುವೇದಿಕೆಯ ಪ್ರಮುಖರಾದ ಗಂಜಿ ಕೋಮ್ಲೇಶ್ ಮತ್ತವರ ತಂಡ ಶಾಲೆಯಲ್ಲೇ ಬೀಡುಬಿಟ್ಟಿದ್ದು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದೆ.
“ವಿಧ್ವಂಸಕತೆ”ಯೆಂಬುದು ಪ್ರಗತಿಪರರ ಹುಟ್ಟುಗುಣವೇ?
– ರಾಕೇಶ್ ಶೆಟ್ಟಿ
ಎಲ್ಲಾ ಚುನಾವಣಾ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಬಹುಮತ ಪಡೆದಾಗ,ದಶಕಗಳಿಂದ ನಡೆಸಿಕೊಂಡು ಬರಲಾಗಿದ್ದ “ಮೋದಿ ವಿರೋಧಿ ಕ್ಯಾಂಪೇನ್”ನ ಶವ ಪೆಟ್ಟಿಗೆಗೆ ಅಂತಿಮ ಮೊಳೆ ಬಿದ್ದಿತ್ತು.ಆದರೆ ಅತೃಪ್ತ ಆತ್ಮಗಳೇನು ಸುಮ್ಮನಿರುವ ಪೈಕಿಯೇ? ಅವುಗಳು ಶವಪೆಟ್ಟಿಗೆಯೊಳಗಿಂದಲೂ ಸದ್ದು ಮಾಡುತಿದ್ದವು.ಬಿಜೆಪಿಯ ವೋಟ್ ಶೇರ್ ಇರುವುದು ೩೧% ಮಾತ್ರ,ಇನ್ನು ೬೯% ಎಲ್ಲಿ ಅಂತ.ಪ್ರಗತಿಪರರ ಈ ಲೆಕ್ಕಾಚಾರವನ್ನು,ಕಷ್ಟಪಟ್ಟು ೩೫ ಅಂಕ ಪಡೆದು ಪಾಸ್ ಆದ ವಿದ್ಯಾರ್ಥಿಯೊಬ್ಬನ ಮುಂದೆ ನಿಂತು, “ನೋಡಪ್ಪಾ ನೀನು ತೆಗೆದಿರುವುದು ೩೫ ಮಾತ್ರ,ಇನ್ನು ೬೫ ತೆಗೆದಿಲ್ಲವಾದ್ದರಿಂದ ನೀನು ಪಾಸಾದರೂ,ಫೇಲ್ ಆದಂತೆ ಲೆಕ್ಕ” ಹೇಳಿದರೆ ಕೆನ್ನೆಯೂದುವುದು ಖಚಿತ.ಮೋದಿ ಸರ್ಕಾರದ ವಿರುದ್ಧ ಹೀಗೆ ಶುರುವಾದ ನರಳಾಟ ಮುಂದುವರೆಯುತ್ತಲೇ ಇದೆ.
Of course ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳಿಗೆ ಮನ್ನಣೇ ನೀಡಲೇಬೇಕು.ಕೇಂದ್ರ ಸರ್ಕಾರವನ್ನು ವಿರೋಧಿಸಲೇ ಬಾರದೂ ಅಂತಲೂ ಏನಿಲ್ಲ.ಟೀಕೆ-ಟಿಪ್ಪಣಿಗಳಿರಲೇಬೇಕು.ಆದರೆ ಅವು ಸಕಾರಾತ್ಮಕವಾಗಿದ್ದರೆ ಸಮಾಜದ ಆರೋಗ್ಯಕ್ಕೂ ಒಳ್ಳೆಯದು.ಆದರೆ ನಮ್ಮ ಪ್ರಗತಿಪರರು ತಮ್ಮ “ಪುರಾತನ ಪದ್ಧತಿ”ಯಾದ ನಕಾರಾತ್ಮಕ ಟೀಕಾ ಶೈಲಿಯನ್ನೇ ಮುಂದುವರೆಸಿದ್ದಾರೆ.ಪುರಾತನ ಪದ್ಧತಿ ಎನ್ನಲು ಕಾರಣವಿದೆ.
ಮದರಾಸಿನ ಭಾಷಣವೊಂದರಲ್ಲಿ ಸ್ವಾಮಿ ವಿವೇಕಾನಂದರು,ಅಂದಿನ ಕಾಲದ ಸಮಾಜ ಸುಧಾರಕರ ಕುರಿತು “ಅವರದು ಧ್ವಂಸ ಮಾರ್ಗ.ನನ್ನದು ನಿರ್ಮಾಣ ಮಾರ್ಗ“ ಎಂದಿದ್ದರು.
ಕಾರ್ಗಿಲ್ ವಿಜಯ ದಿನ
– ಮಯೂರಲಕ್ಷ್ಮಿ
ಅವರ ಕನಸುಗಳಲ್ಲಿ ನಾಳಿನ ನೆಮ್ಮದಿಯ ಬದುಕಿಲ್ಲ….
ಅವರ ಮನಸುಗಳಲ್ಲಿ ಬದುಕಿ ಬರುವ ಸುಳಿವಿಲ್ಲ….
ಮರಳಿ ಮನೆಗೆ ಹಿಂದಿರುಗಲೆಂದು ಹೆತ್ತವರ ಆಶಯ..
ಕೊರೆವ ಹಿಮದ ತಮದಲ್ಲಿ ಅಹರ್ನಿಶೆ ಕಾದಾಟದ ಭಯ…
ತ್ಯಾಗ-ಬಲಿದಾನವೇ ಸಾರ್ಥಕತೆಯ ವಿಜಯ!
ಹೌದು, ದೇಶವು ನಿದ್ರಿಸುತ್ತಿರಲು ಸುಂದರ ಭವಿಷ್ಯದ ಕನಸಿಲ್ಲದೆ, ವೈಯುಕ್ತಿಕ ಸುಖದ ಮರೀಚಿಕೆಯ ಸೋಗಿಲ್ಲದೆ, ರಕ್ತಸಿಕ್ತ ದೇಹಗಳಲ್ಲಾಗುವ ಗಾಯಗಳ ಕಿಂಚಿತ್ತೂ ನೋವಿಲ್ಲದಂತೆ ಕ್ಷಣಕ್ಷಣದಲ್ಲೂ ಆಪತ್ತಿನ ಕತ್ತಲೆಯ ಕಂದಕಗಳಲ್ಲಿ ಎಚ್ಚರದಿಂದಿದ್ದು ಗಡಿ ಕಾಯುವ ಅವರೇ ದೇಶದ ನಿಜ ನಾಯಕರು.ನಮ್ಮ ದೇಶದ ಅತ್ಯಧಿಕವೆನಿಸುವ ಆಪತ್ತುಗಳ ಪ್ರವಾಹ ಹರಿದಾಗ,ಭೂಕಂಪವಾದಾಗ, ಗಲಭೆಗಳಾದಾಗ, ನಿರಾಶ್ರಿತರಿಗೆ ನೆರವಾಗಲು ಅವರು ಸದಾ ಸಿದ್ಧ! ಗಡಿಗಡಿಗಳಲ್ಲಿ ಜೀವಭಯವಿಲ್ಲದೆ ಕಣಕಣಗಳಲ್ಲಿ ರಕ್ಷಣೆಯ ಹೊಣೆ ಹೊತ್ತು ನಮ್ಮನ್ನು ಕಾಪಾಡಲು ಧಾವಿಸುವ ಕೊನೆಯ ಆಸರೆಯೇ ಸೈನಿಕರು.
ಬೌದ್ಧಿಕ ದಾಸ್ಯದಲ್ಲಿ ಭಾರತ -ಪುಸ್ತಕ ವಿಮರ್ಶೆ
‘ಒಪ್ಪಿತ ಸತ್ಯ’ಗಳನ್ನು ಪ್ರಶ್ನಿಸುವ ಕೃತಿ
– ಡಾ. ಪ್ರವೀಣ ಟಿ. ಎಲ್. & ಶಿವಕುಮಾರ ಪಿ. ವಿ. ಶಿವಮೊಗ್ಗ
ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಕೃತಿಯು ನಿಲುಮೆ ಪ್ರಕಾಶನದ ಚೊಚ್ಚಲ ಪುಸ್ತಕವಾಗಿ ದಿನಾಂಕ-01-03-2015ರಂದು ಲೋಕಾರ್ಪಣೆಗೊಂಡಿತು. ಈ ಕೃತಿಯು ಬಾಲಗಂಗಾಧರರವರ ವಿಚಾರಗಳ ಕನ್ನಡ ರೂಪಾಂತರವಾಗಿದೆ. ಬಾಲುರವರು ಕಳೆದ ಒಂದು ದಶಕದಿಂದಲೂ ಕನ್ನಡದ ಬುದ್ಧಿಜೀವಿ ವಲಯದಲ್ಲಿ ಚಿರಪರಿಚಿತರು. ಅವರ ಹೀದನ್ ಇನ್ ಹಿಸ್ ಬ್ಲೈಂಡ್ನೆಸ್ ಎಂಬ ಕೃತಿಯು ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಗೊಂಡಿದ್ದು ಸಾಂಸ್ಕೃತಿಕ ವಿಭಿನ್ನತೆ ಹಾಗೂ ಭಾರತೀಯ ಸಮಾಜದ ಕುರಿತ ಜ್ಞಾನದ ಹುಡುಕಾಟಕ್ಕೆ ಹೊಸ ಆಯಾಮಗಳನ್ನು ನೀಡಿದೆ. ಬಹುತೇಕ ಚಿಂತಕರು ಹೇಳುವಂತೆ ಅದು ಇತರ ವೈಜ್ಞಾನಿಕ ಸಂಶೋಧನೆಗಳಿಗೆ ಮಾದರಿ ಎಂಬ ಹೆಗ್ಗಳಿಕೆ ಪಡೆದಿದೆ. ಹಾಗಾಗಿಯೇ ಅದರ ಓದಿಗೆ ಕೆಲವು ಭೌದ್ಧಿಕ ಅಗತ್ಯ ಹಾಗೂ ಪ್ರಯತ್ನಗಳು ಬೇಕಾಗುತ್ತವೆ. ಅಂತಹ ಗಹನವಾದ ಸೈದ್ಧಾಂತಿಕ ವಿಚಾರಗಳಿಗೆ ಸಾಮಾನ್ಯ ಓದುಗರಿಗೂ ಸಹ ಪ್ರವೇಶ ಕಲ್ಪಿಸಿಕೊಡುವಲ್ಲಿ ರಾಜರಾಮ ಹೆಗಡೆಯವರ ಸರಳ ನಿರೂಪಣೆಯ 31 ಚಿಕ್ಕ ಅಂಕಣಗಳ ಪ್ರಸ್ತುತ ಕೃತಿಯು ಯಶಸ್ವಿಯಾಗಿದ್ದು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಮರು ಮುದ್ರಣವನ್ನೂ ಕಂಡಿದೆ.
ಭಾರತವು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾಗಿ ಅರವತ್ತಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಆದರೆ ಐರೋಪ್ಯರ ಆಳ್ವಿಕೆಯಿಂದ ಸ್ವತಂತ್ರವಾದರೂ ಸಹ ಅವರ ಚಿಂತನೆಯ ದಾಸ್ಯದಿಂದ ಇನ್ನೂ ಸ್ವತಂತ್ರರಾಗಿಲ್ಲ. ವಸಾಹತು ಪ್ರಜ್ಞೆಯು ನಮ್ಮೆಲ್ಲರನ್ನು ಇನ್ನೂ ಐರೋಪ್ಯರ ದಾಸ್ಯದಲ್ಲಿಯೇ ಬಂಧಿಸಿಟ್ಟಿದೆ ಎಂದು ಈ ಕೃತಿಯು ಪ್ರತಿಪಾದಿಸುತ್ತದೆ. ದಿಗಿಲು ಬಡಿಸುವ ಈ ಹೇಳಿಕೆಯೇ ನಮ್ಮ ಸಮಾಜದ ಕುರಿತ ಈವರೆಗಿನ ಭೌದ್ಧಿಕ ಬೆಳವಣಿಗೆಯ ಬಗ್ಗೆ ಮೂಲಭೂತ ಅನುಮಾನ ಹುಟ್ಟಿಸುತ್ತದೆ. ಇಂತಹ ಹೇಳಿಕೆಗಳು ವಸಾಹತೋತ್ತರವಾದಗಳಲ್ಲಿ ಈಗಾಗಲೇ ಬಂದಿವೆ. ಆದರೆ ಅವುಗಳೂ ಸಹ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಐರೋಪ್ಯ ಚಿಂತನೆಗಳ ಮಿತಿಯಲ್ಲಿ ಬಳಲುತ್ತಿವೆ. ಅಂತಹ ಮಿತಿಗಳನ್ನು ದಾಟುವ ಪ್ರಸ್ತುತ ಕೃತಿಯ ಮೇಲಿನ ಪ್ರತಿಪಾದನೆಯು ಬಹುಮುಖ್ಯವೆನಿಸುತ್ತದೆ. ನಾವು ತೀರಾ ಸಹಜವೆಂಬಂತೆ ಒಪ್ಪಿರುವ ‘ಸತ್ಯ’ಗಳನ್ನು ಪ್ರಶ್ನಿಸಿ ಆ ಭೌದ್ಧಿಕದಾಸ್ಯದ ಸ್ವರೂಪ ಹೇಗಿದೆ? ಅದು ನಮ್ಮ ದಿನನಿತ್ಯದ ಸಮಸ್ಯೆಗಳಾಗಿ ವಿಭಿನ್ನ ರೂಪಗಳಲ್ಲಿ ಹೇಗೆ ಪ್ರವೇಶ ಪಡೆಯುತ್ತದೆ? ಅದರಿಂದಾಗುತ್ತಿರುವ ಅನಾಹುತಗಳೇನು? ಎಂಬುದನ್ನು ಕೃತಿಯಲ್ಲಿನ ಒಂದೊಂದು ಲೇಖನಗಳು ವಿಭಿನ್ನ ಸಮಸ್ಯೆಯನ್ನು ಎತ್ತಿಕೊಂಡು ಎಳೆಎಳೆಯಾಗಿ ಬಿಡಿಸಿಡುತ್ತವೆ. ಅದು ಕೃತಿಯ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಮತ್ತಷ್ಟು ಓದು
ಅನ್ನಭಾಗ್ಯ ಹಸಿದವರಿಗೋ,ರೈತರ ಅಧಃಪತನಕ್ಕೋ?
– ಡಾ. ಪ್ರವೀಣ ಟಿ. ಎಲ್, ಶಿವಮೊಗ್ಗ
ಅನ್ನಭಾಗ್ಯ ಯೋಜನೆಯ ಕುರಿತ ಚರ್ಚೆ ದಿನೇ ದಿನೇ ಕಾವು ಪಡೆಯುತ್ತಿರುವುದು ಸ್ಪಷ್ಟ. ಇಡೀ ಚರ್ಚೆಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಟೀಕಿಸುವವರನ್ನು ಹಸಿದವರ ವಿರೋಧಿಗಳೆಂದೂ, ಬಿ.ಜೆ.ಪಿಯವರೆಂದೂ,ಮೇಲ್ವರ್ಗದ ಜಮೀನ್ದಾರೀ ಮನಸುಗಳೆಂದೂ, ಮಾನವೀಯತೆಯನ್ನು ಮರೆತವರೆಂದೂ ಬಿಂಬಿಸಿ, ವಿಮರ್ಶೆಗಳನ್ನು ಮೂಲೆಗುಂಪುಮಾಡಲಾಗುತ್ತಿದೆ. ಆದರೆ ಈ ಆರೋಪಗಳು ವಿಮರ್ಶೆಯ ತೀಕ್ಷ್ಣತೆಯನ್ನು ಕಡಿಮೆಗೊಳಿಸಬಹುದೇ ವಿನಃ, ‘ಅನ್ನಭಾಗ್ಯ’ದ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.
ಹಸಿದವರಿಗೆ ‘ಅನ್ನ’ ನೀಡುವ ‘ಭಾಗ್ಯ’ ಎಂದು ಬಿಂಬಿಸುತ್ತಿರುವ ಈ ಯೋಜನೆಯು ನಿಜವಾಗಿಯೂ ಹಸಿದವರಿಗೆ, ದುರ್ಬಲರಿಗೆ ಅನ್ನನೀಡುವ ಕೆಲಸವಾಗಿದ್ದರೆ ಭಾರತದ ಯಾರೊಬ್ಬರೂ ವಿರೋಧಿಸುವ ಪ್ರಮೆಯವೇ ಎದುರಾಗುತ್ತಿರಲಿಲ್ಲ. ಏಕೆಂದರೆ, ಹಸಿದವರಿಗೆ, ದುರ್ಬಲರಿಗೆ ಭಿಕ್ಷೆನೀಡಿ ಸಾಕುವ ಸಂಪ್ರದಾಯ ತಲೆತಲಾಂತರಗಳಿಂದಲೂ ನಡೆದುಬಂದಿರುವುದು ನಮ್ಮ ಸಂಸ್ಕೃತಿಯ ವಿಶೇಷಗಳಲ್ಲೊಂದು. ಹಸಿದವರು, ದುರ್ಬಲರು ಮಾತ್ರವೇ ಈ ಯೋಜನೆಯ ಫಲಾನುಭವಿಗಳೇ? ಖಂಡಿತ ಇಲ್ಲ. ಬಿ.ಪಿ.ಎಲ್. ಕಾರ್ಡುದಾರರೆಲ್ಲರೂ ಈ ಯೋಜನೆಗೆ ಅರ್ಹರು. ಈ ಪಡಿತರ ಕಾರ್ಡು ಪಡೆಯುವುದು ‘ಆದಾಯ ಪ್ರಮಾಣ ಪತ್ರ’ ಪಡೆದಂತೆಯೇ. ಲಕ್ಷಾಂತರ ರೂಪಾಯಿ ಆದಾಯವಿದ್ದರೂ 11000/- ಅಥವಾ 15000/- ಎಂದೇ ನಮೂದಾಗುವುದು ಬಹಿರಂಗ ಸತ್ಯ. ಹೀಗಿರುವಾಗ, ನಿಜವಾದ ದುರ್ಬಲರನ್ನು, ಹಸಿದವರನ್ನು ಗುರುತಿಸದೆಯೇ ಈ ರೀತಿಯ ಬೃಹತ್ ಮೊತ್ತದ ಯೋಜನೆಗಳನ್ನು ರೂಪಿಸಿ, ಅನುಷ್ಟಾನಗೊಳಿಸುವುದು ಹಲವಾರು ದುಷ್ಪರಿಣಾಮಗಳಿಗೆ, ದುರುಪಯೋಗಕ್ಕೆ ಕಾರಣವಾಗುತ್ತದೆಯೇ ವಿನಃ ನಿಜವಾದ ಉದ್ದೇಶ ಈಡೇರಲಾರದು.
ಇದು ಬೌದ್ಧಿಕ ಕ್ಷತ್ರಿಯರ ಯುದ್ಧ
– ಚಕ್ರವರ್ತಿ ಸೂಲಿಬೆಲೆ
ಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ ಹಿಂದೂಗಳ ಅವಹೇಳನ ಮಾಡುವ ಅನೇಕ ಪುಸ್ತಕಗಳನ್ನು ಹುಡುಕಿದರು.ಅದರ ಕುರಿತಂತೆ ಇತರ ಹಿಂದೂಗಳಿಗೆ ಗೊತ್ತಿರಲಿಲ್ಲವೆಂದಲ್ಲ.ಆದರೆ ಅವರು ಅದೆಷ್ಟು ಅವಮಾನಿತರಾಗಿದ್ದರೆಂದರೆ ಬಾಯಿ ತೆರೆಯಲಾಗದೇ ಮೌನವಹಿಸಿ ಬಿಟ್ಟಿದ್ದರು.ಶಾಲೆಗಳಲ್ಲಿ ಹಿಂದೂವಾಗಿರುವುದು ಮಗುವೊಂದಕ್ಕೆ ಅತ್ಯಂತ ಕಠಿಣವಾಗಿತ್ತು.ಓರಗೆಯ ಕ್ರಿಶ್ಚಿಯನ್ನರು ಹಿಂದೂ ದೇವ-ದೇವಿಯರನ್ನು ಆಡಿಕೊಂಡು ನಗುವಾಗ ಇವರೆಲ್ಲ ಬರಿಯ ಮೂಕ ಪ್ರೇಕ್ಷಕರಷ್ಟೇ.
ರಾಜೀವ್ ಮಲ್ಹೋತ್ರಾ! ಬ್ರೇಕಿಂಗ್ ಇಂಡಿಯಾ, ಬೀಯಿಂಗ್ ಡಿಫರೆಂಟ್, ಇಂದ್ರಾಸ್ ನೆಟ್ ಗಳ ಮೂಲಕ ಅಮೇರಿಕಾದಾದ್ಯಂತ ಹರಡಿಕೊಂಡಿರುವ ಹಿಂದೂ ವಿರೋಧಿಗಳಿಗ ಸೂಕ್ತ ಉತ್ತರ ಕೊಡುತ್ತಿರುವ ವ್ಯಕ್ತಿ. ಎಡಪಂಥದ ಗಬ್ಬು ಘಾಟಿನಲ್ಲಿಯೇ ಕಾಲದೂಡುತ್ತಿರುವ ಭಾರತದ ಬುದ್ಧಿ ಜೀವಿಗಳ ಆರಾಧ್ಯವೆನಿಸಿದ್ದವರನ್ನೆಲ್ಲ ತನ್ನ ಬೌದ್ಧಿಕ ಗದಾಪ್ರಹಾರದಿಂದ ಝಾಡಿಸಿ ಕೊಡವಿ ಬಿಟ್ಟಿರುವ ಜಟ್ಟಿ ಆತ.