ವಿಷಯದ ವಿವರಗಳಿಗೆ ದಾಟಿರಿ

Archive for

21
ಸೆಪ್ಟೆಂ

ಭಾರತೀಯ ಸಂಸ್ಕೃತಿಯಲ್ಲಿ ಎಲ್ಲವೂ ಇತ್ತೆನ್ನುವ ವ್ಯಾಮೋಹವೇಕೆ ?

– ಶಿವಕುಮಾರ ಪಿ.ವಿ. ಕುವೆಂಪು ವಿಶ್ವವಿದ್ಯಾನಿಲಯ. 

    ಭಾರತೀಯ ಸಮಾಜವು ಅನಿಷ್ಟಗಳ ಆಗರವೆಂದು ಜರಿಯುತ್ತಾ ಇಡೀ ಸಮಾಜವನ್ನೇ ಬದಲಾಯಿಸಬೇಕೆಂದು ಪಶ್ಚಿಮದ ಸಮಾಜವನ್ನು ಮಾದರಿಯಾಗಿಟ್ಟುಕೊಳ್ಳುವ ವಾದವು ಒಂದೆಡೆಯಿದೆ. ಇದಕ್ಕೆ ಪ್ರತಿಯಾಗಿ, ಮತ್ತೊಂದೆಡೆ, ಭಾರತದಲ್ಲಿ ಎಲ್ಲವೂ ಇತ್ತು ಎಂದು ಅದರ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಸಾರುವ ವಾದವೂ ಇದೆ. ಆದರೆ, ಈ ಎರಡನೆಯ ವಾದವು ಇಲ್ಲಿನ ಸಾಂಸ್ಕೃತಿಕ ಶ್ರೇಷ್ಠತೆಯನ್ನು ತೋರಿಸುವ ಭರದಲ್ಲಿ ಇಲ್ಲಿನ ಪರಿಕಲ್ಪನೆಗಳನ್ನು ಪಾಶ್ಚಾತ್ಯ ತತ್ವಗಳ ಮೂರನೇ ದರ್ಜೆಯ ನಕಲುಗಳನ್ನಾಗಿ ಮಾಡಿ ಸಾಂಸ್ಕೃತಿಕ ಅನನ್ಯತೆಗೇ ಸಂಚಕಾರ ತರುತ್ತಿದೆ. ಇದನ್ನು ಭಾರತದಲ್ಲಿ ಸೆಕ್ಯುಲರಿಸಂನ ಚರ್ಚೆಯ ಒಂದು ದೃಷ್ಟಾಂತದ ಮೂಲಕ ನೋಡಿದರೆ ಹೆಚ್ಚು ಸ್ಪಷ್ಟವಾಗಬಹುದು.

    ಕೆಲವರು ವಿಶ್ವಕ್ಕೆ ಸೆಕ್ಯುಲರಿಸಂ ಅನ್ನು ಮೊದಲು ಪರಿಚಯಿಸಿದ್ದೇ ಭಾರತ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಅವರ ಪ್ರಕಾರ ಸೆಕ್ಯುಲರಿಸಂ ವಸುದೈವ ಕುಟುಂಬಕಂ, ಸರ್ವೇಜನಾಃ ಸುಖಿನೋ ಭವಂತು ಎಂಬ ರೂಪದಲ್ಲಿ ಬಹಳ ಹಿಂದೆಯೇ ಭಾರತದಲ್ಲಿತ್ತು. ಅದನ್ನು ಯಾವುದೋ ಕಾಲಘಟ್ಟದಲ್ಲಿ ಪಾಶ್ಚಿಮಾತ್ಯರು ತೆಗೆದುಕೊಂಡುಹೋಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಆದರೆ, ಈಗ ಪಾಶ್ಚಿಮಾತ್ಯರ ಸೆಕ್ಯುಲರಿಸಂನ್ನು ಭಾರತದಲ್ಲಿ ಅಳವಡಿಸಿಕೊಂಡಿರುವುದರಿಂದ ನಮ್ಮ ಆಚರಣೆಗಳೆಲ್ಲ ದಮನಕ್ಕೆ ಒಳಗಾಗುತ್ತಿವೆ. ಆದ್ದರಿಂದ ನಮಗೆ ನೈಜ ಸೆಕ್ಯುಲರಿಸಂ ಬೇಕೆಂಬುದು ಅವರ ಕಾಳಜಿ. ಇಂಥ ಹೇಳಿಕೆಗಳನ್ನು ಕೇಳಿದಾಗ ಎರಡು ಪ್ರಶ್ನೆಗಳು ಏಳುತ್ತವೆ: ಸೆಕ್ಯುಲರಿಸಂ ಹಾಗೂ ವಸುದೈವ ಕುಟುಂಬಕಂ, ಸರ್ವೇಜನಾಃ ಸುಖಿನೋ ಭವಂತು ಇವು ಒಂದೇ ಅರ್ಥ ಸೂಚಿಸುತ್ತವೆಯೇ? ಒಂದೇ ಅರ್ಥವನ್ನು ಸೂಚಿಸದಿದ್ದರೆ ತೊಂದರೆಯೇನು?   ಮತ್ತಷ್ಟು ಓದು »