ವಿಷಯದ ವಿವರಗಳಿಗೆ ದಾಟಿರಿ

Archive for

29
ಸೆಪ್ಟೆಂ

ಸಾವಿನ ಮನೆಯಲ್ಲಿ ಲಾಭದ ಲೆಕ್ಕಾಚಾರಗಳು

-ಡಾ. ಪ್ರವೀಣ ಟಿ. ಎಲ್. ಕುವೆಂಪು ವಿಶ್ವವಿದ್ಯಾನಿಲಯ

  ಸಾವಿನ ಮನೆ ನಾರಾಣಪ್ಪನ ಶವಸಂಸ್ಕಾರವನ್ನು ವಿರೋಧಿಸಿದ ಅಗ್ರಹಾರದವರು, ಆತನ ವೇಶ್ಯೆಯಾದ ಚಂದ್ರಿಯು ಆತನಿಗೆ ಸೇರಿದ ಬಂಗಾರವನ್ನು ತೆಗೆದುಕೊಟ್ಟ ತಕ್ಷಣ ಲಾಭದ ಲೆಕ್ಕಾಚಾರದಲ್ಲಿ ತೊಡಗುವ ಸನ್ನಿವೇಶವೊಂದನ್ನು ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿಯವರು ಚಿತ್ರಿಸಿದ್ದಾರೆ. ಅವನು ಬ್ರಾಹ್ಮಣನೇ ಅಲ್ಲ, ವೈದಿಕ ರೀತಿಯ ಶವಸಂಸ್ಕಾರ ಮಾಡುವುದು ಸರಿಯಲ್ಲ ಎಂದವರೆಲ್ಲಾ, ಆತಕ್ಷಣದಿಂದ ಆತನು ಎಲ್ಲರಿಗಿಂತಲೂ ತಮಗೆ ಹತ್ತಿರದ ಸಂಬಂಧಿ ಎಂಬ ವರಸೆಯನ್ನು ಶುರುಮಾಡುತ್ತಾರೆ. ಅಲ್ಲಿ ನಡೆಯುವುದು ಸಾವಿನ ಕುರಿತ ಮರುಕವಲ್ಲ, ಬದಲಾಗಿ ತಮಗಾಗುವ ಲಾಭದ ಲೆಕ್ಕಾಚಾರ. ಇದೇ ಸನ್ನಿವೇಷ ಇಂದು ಕಲ್ಬುರ್ಗಿಯವರ ಹತ್ಯೆಯ ಸುತ್ತ ನಡೆಯುತ್ತಿರುವುದು ಗೋಚರವಾಗುತ್ತಿದೆ. ಅವರ ಹತ್ಯೆಯು ಅಮಾನವೀಯ ಕೃತ್ಯವಾಗಿದ್ದು, ಅದನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕಿದೆ. ಈ ಕುರಿತು ಹಲವು ಲೇಖನಗಳು, ಚರ್ಚೆಗಳು ಈಗಾಗಲೇ ನಡೆದಿವೆ. ಈ ಹತ್ಯೆಯಿಂದ ಕನ್ನಡ ನಾಡಿನ ಚಿಂತನಾ ಪರಂಪರೆಗೆ ಬಹುದೊಡ್ಡ ನಷ್ಟವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಈ ನಷ್ಟದ ನಡುವೆಯೂ ಕೆಲವರು ತಮ್ಮ ಲಾಭದ ಲೆಕ್ಕಾಚಾರದಲ್ಲಿ ಮುಳುಗಿರುವುದು ಕೆಟ್ಟ ಪರಂಪರೆಯೊಂದಕ್ಕೆ ನಾಂದಿಹಾಡುತ್ತಿರುವಂತಿದೆ.

   ಮೊದಲನೆಯದಾಗಿ, ಹತ್ಯೆಯಾದ ತಕ್ಷಣವೇ ಕೆಲವು ಚಿಂತಕರು ಹಾಗೂ ಪ್ರಗತಿಪರ ಸಂಘಟನೆಗಳು ಹಿಂದೂ ಸಂಘಟನೆಗಳೇ ಈ ಕೃತ್ಯವನ್ನು ಎಸಗಿರುವುದೆಂದು ತೀರ್ಪಿಟ್ಟರು. ಕಲ್ಬುರ್ಗಿಯವರ ಜೊತೆ ವೈಮನಸ್ಸಿದ್ದವರೂ ಸಹ ಬಲಪಂಥೀಯರನ್ನು ಹಣಿಯಲು ಈ ಅವಕಾಶವನ್ನು ಬಳಸಿಕೊಂಡರು. ಆ ಮೂಲಕ ಉಗ್ರವಾದಕ್ಕಿಂತ ಹಿಂದೂ ಸಂಘಟನೆಗಳ ಕೃತ್ಯ ಹೀನವಾದುದು ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದರು. ಹಿರಿಯ ಚಿಂತಕರೊಬ್ಬರ ಹತ್ಯೆಯಾಗಿದ್ದರಿಂದ ಕನ್ನಡನಾಡು ದುಃಖತಪ್ತವಾಗಿದ್ದುದು ನಿಜ. ಆದರೆ ಅದನ್ನು ಯಾರು, ಯಾಕಾಗಿ ಮಾಡಿದ್ದಾರೆ ಎಂಬುದು ತನಿಖೆಯ ನಂತರ ತಿಳಿಯಬೇಕಿರುವ ವಿಚಾರ. ಇಂತಹ ಸೂಕ್ಷ್ಮವಿಚಾರಗಳ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಮರೆತು, ವಿರೋಧಿ ಪಂಥದವರ ಮೇಲೆ ಹಾಕಿ ಕೈತೊಳೆದುಕೊಂಡರು. ಅವರ ಈ ಪ್ರತಿಕ್ರಿಯೆಗಳು ಇಡೀ ಪ್ರಕರಣವನ್ನು ಬೇದಿಸಲು ದೊಡ್ಡ ಅಡ್ಡಿಯನ್ನುಂಟು ಮಾಡಿರುವುದು ಈಗಾಗಲೇ ವೇದ್ಯವಾಗಿದೆ. ಮತ್ತಷ್ಟು ಓದು »