ವಿಷಯದ ವಿವರಗಳಿಗೆ ದಾಟಿರಿ

Archive for

31
ಆಕ್ಟೋ

ಉಕ್ಕಿನ ಮನುಷ್ಯನಿಗೆ ಸಿಗಲಿ ತಕ್ಕ ಗೌರವ

– ರೋಹಿತ್ ಚಕ್ರತೀರ್ಥ

ಸರ್ದಾರ್ ವಲ್ಲಭಾಯ್ ಪಟೇಲ್1909ರ ಒಂದು ದಿನ. ನ್ಯಾಯಾಲಯದಲ್ಲಿ ಕ್ರಾಸ್ ಎಕ್ಸಾಮಿನೇಶನ್ ನಡೆಯುತ್ತಿದೆ. ನಿರಪರಾಧಿಯೊಬ್ಬ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾನೆ. ವಕೀಲರು ಪಾಟೀಸವಾಲು ಹಾಕುತ್ತಿರುವಾಗಲೇ ಮಧ್ಯದಲ್ಲಿ ಅವರಿಗೊಂದು ಟೆಲಿಗ್ರಾಂ ಬಂತು. ಆ ಕಾಲದಲ್ಲಿ ಯಾರಿಗಾದರೂ ತಂತಿ ಸಂದೇಶ ಬಂತೆಂದರೆ ಅದು ಸಾವಿನ ಸುದ್ದಿಯೆಂದೇ ಲೆಕ್ಕ. ಚೀಟಿಯತ್ತ ಒಮ್ಮೆ ಕಣ್ಣುಹಾಯಿಸಿ, ಕ್ಷಣಕಾಲ ಕಣ್ಣುಮುಚ್ಚಿ ದೀರ್ಘವಾಗಿ ಉಸಿರೆಳೆದು, ಅವರು ಆ ಚೀಟಿಯನ್ನು ತನ್ನ ಕೋಟಿನ ಜೇಬಿನೊಳಗಿಳಿಸಿ ವಾದ ಮುಂದುವರಿಸಿದರು. ಕೊನೆಗೆ ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿ ನಿರಪರಾಧಿಯೆಂದು ಸಾಬೀತಾಯಿತು. ಕೋರ್ಟಿನ ಕಲಾಪಗಳು ಮುಗಿದ ನಂತರ ನ್ಯಾಯಮೂರ್ತಿಗಳು ಟೆಲಿಗ್ರಾಂ ವಿಷಯ ಪ್ರಸ್ತಾಪಿಸಿದಾಗ ವಕೀಲರು, “ಅದು ನನ್ನ ಪತ್ನಿಯ ಸಾವಿನ ಸುದ್ದಿ. ನಾನು ಆ ಕೂಡಲೇ ನ್ಯಾಯಾಲಯದಿಂದ ಹೊರಟುಬಿಡುತ್ತಿದ್ದರೆ ಇಲ್ಲಿ ನಿರಪರಾಧಿಯ ಪರವಾಗಿ ವಾದಿಸುವವರು ಯಾರೂ ಇಲ್ಲದೆ ಅವನು ಶಿಕ್ಷೆಗೆ ಗುರಿಯಾಗುತ್ತಿದ್ದನೇನೋ. ಒಂದು ಪ್ರಾಣ ಹೇಗೂ ಹೋಗಿಯಾಗಿದೆ. ಇಲ್ಲಿಂದ ಹೊರನಡೆದಿದ್ದರೆ ಈ ದಿನ ನಾನು ಎರಡನೇ ಸಾವನ್ನೂ ನೋಡಬೇಕಾಗಿತ್ತಲ್ಲ” ಎಂದರು. ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯುವುದು ಸುಮ್ಮನೇ ಅಲ್ಲ ಎನ್ನುವುದಕ್ಕೆ ಇದೊಂದು ದೃಷ್ಟಾಂತ ಸಾಕು.

ಪಟೇಲರು 1875ನೇ ಇಸವಿ ಅಕ್ಟೋಬರ್ 31ರಂದು ಗುಜರಾತ್‍ನಲ್ಲಿ ಜನಿಸಿದರು. ಪಟೇಲ್ ಸಮುದಾಯದ ಸಂಪ್ರದಾಯದಂತೆ ಹುಡುಗನಿಗೆ 18ರ ಹರೆಯದಲ್ಲೇ ಮದುವೆಯಾಯಿತು. ಕುಟುಂಬ ದೊಡ್ಡದು. ಜೀವನ ನಿರ್ವಹಣೆಗೆ ಶಕ್ತಿಮೀರಿ ದುಡಿಯುವುದು ಅನಿವಾರ್ಯ ಕರ್ಮವಾಗಿದ್ದ ಕಾಲ. ಪಟೇಲರು ಸ್ವಂತ ಪರಿಶ್ರಮದಿಂದ ಓದಿ, ಪದವಿ ಪಡೆದು, ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಹೋಗುವ ಕನಸು ಕಂಡಿದ್ದರು. ಅವರ ಕನಸಿಗೆ ನೀರೆರೆಯುವಂತೆ ಇಂಗ್ಲೆಂಡಿನಿಂದ ವಕೀಲಿ ವ್ಯಾಸಂಗದ ಪ್ರವೇಶಾತಿಯ ಕಾಗದಪತ್ರಗಳೂ ಪ್ರಯಾಣದ ಟಿಕೇಟೂ ಬಂದವು. ಆ ಎಲ್ಲ ದಾಖಲೆಗಳಲ್ಲೂ ಪಟೇಲರ ಹೆಸರನ್ನು ವಿ.ಜೆ. ಪಟೇಲ್ ಎಂದು ನಮೂದಿಸಲಾಗಿತ್ತು. ಆಗ, ಇಂಗ್ಲೆಂಡಿಗೆ ಹೋಗಿ ಕಲಿಯಲು ತನಗೂ ಆಸೆಯಿದೆ ಎಂದು ಸೋದರ ವಿಠಲಭಾಯಿ ಝಾವೆರ್‍ಬಾಯಿ ಪಟೇಲ್ ಮುಂದೆ ಬಂದು ಅಣ್ಣನ ಬಳಿ ಹೇಳಿಕೊಂಡ. ಅಣ್ಣ ವಲ್ಲಭಭಾಯಿ ತಮ್ಮನ ಆಸೆ ಮನ್ನಿಸಿ ಆತನಿಗೆ ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟು ತಾನು ಭಾರತದಲ್ಲೆ ಉಳಿದರು. ವಜ್ರದಂಥ ವ್ಯಕ್ತಿಯ ಮನಸ್ಸು ಹೂವಿನಷ್ಟು ಮೃದುವೂ ಆಗಿತ್ತೆನುವುದಕ್ಕೆ ಈ ಘಟನೆ ಸಾಕ್ಷಿ.

ಮತ್ತಷ್ಟು ಓದು »

29
ಆಕ್ಟೋ

ಫತ್ವಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

– ರೋಹಿತ್ ಚಕ್ರತೀರ್ಥ

ಎ.ಆರ್ ರೆಹಮಾನ್ಮಾಜಿದ್ ಮಾಜಿದಿ, ಇರಾನಿನ ಬಹುಪ್ರಸಿದ್ಧ ಚಿತ್ರ ನಿರ್ದೇಶಕ. ಕಲರ್ಸ್ ಆಫ್ ಪ್ಯಾರಡೈಸ್, ಚಿಲ್ಡ್ರನ್ ಆಫ್ ಹೆವನ್-ನಂತಹ ಕಲಾತ್ಮಕ ಚಿತ್ರಗಳ ಮೂಲಕ ಜಗತ್ತಿನೆಲ್ಲ ಚಿತ್ರರಸಿಕರ ಮನಗೆದ್ದ ಹೃದಯವಂತ ಕುಸುರಿ ಕೆಲಸಗಾರ. ಇರಾನಿನ ನೂರಾರು ಕಾನೂನು ಕಟ್ಟಳೆಗಳನ್ನು ಒಪ್ಪಿಕೊಂಡು, ತನ್ನ ತಲೆ ಉಳಿಸಿಕೊಳ್ಳುವ ಸಲುವಾಗಿ ಮಕ್ಕಳ ಚಿತ್ರಗಳ ಮೂಲಕ ಅಲ್ಲಿನ ಕ್ರೌರ್ಯದ ಮುಖಗಳನ್ನು ತಣ್ಣಗೆ ನಮ್ಮೆದುರು ಹಿಡಿದು ದಿಗಿಲುಗೊಳಿಸುವ ಮಾಜಿದಿ ಏಳು ವರ್ಷಗಳ ತಪಸ್ಸಿನ ನಂತರ ಒಂದು ಚಿತ್ರ ಮಾಡಿದ. ಅದರ ಹೆಸರು ಮುಹಮ್ಮದ್: ದ ಗಾಡ್ಸ್ ಮೆಸೆಂಜರ್ (ದೇವರ ದೂತ) – ಎಂದು. ಇಂಥದೊಂದು ಚಿತ್ರ ಮಾಡಿದರೆ ಅರಬ್ ಜಗತ್ತಿನಲ್ಲಿ ಏನೇನು ಪ್ರಳಯಗಳಾಗುತ್ತವೆ ಎನ್ನುವುದು ಆ ಜಗತ್ತನ್ನು ಸೂಕ್ಷ್ಮವಾಗಿ ನೋಡಿದವರಿಗೆ ಗೊತ್ತಿರುತ್ತದೆ. ಹಾಗೆಯೇ ಆಗಿದೆ. ಮುಂಬೈಯ ರಾಝಾ ಅಕಾಡೆಮಿ ಎಂಬ ಸುನ್ನಿ ಸಂಸ್ಥೆ ನಿರ್ದೇಶಕ ಮಾಜಿದಿ ಮತ್ತು ಚಿತ್ರಕ್ಕೆ ಸಂಗೀತ ಕೊಟ್ಟ ಎ.ಆರ್.ರೆಹಮಾನ್ ಇಬ್ಬರ ಮೇಲೂ ಫತ್ವಾ ಜಾರಿಗೊಳಿಸಿದೆ. “ನಮಗೆ ಈ ಚಿತ್ರದ ಶೀರ್ಷಿಕೆಯ ಮೇಲೆಯೇ ತಕರಾರಿದೆ. ಇದನ್ನು ನಾಳೆ ಪ್ರವಾದಿ ಮುಹಮ್ಮದರನ್ನು ವಿರೋಧಿಸುವ ಯಾರು ಬೇಕಾದರೂ ದುರುಪಯೋಗ ಪಡಿಸಿಕೊಳ್ಳಬಹುದು. ಅಲ್ಲದೆ, ಈ ಚಿತ್ರದಲ್ಲಿ ನಟಿಸಿದವರು ತಮ್ಮ ಕೆಲಸಕ್ಕೆ ಸಂಭಾವನೆ ಪಡೆದಿದ್ದಾರೆ. ಮುಹಮ್ಮದರ ಪಾತ್ರ ಮಾಡಿದವರು ನಿಜ ಜೀವನದಲ್ಲಿ ಬೇರೆಯದೇ ರೀತಿಯಲ್ಲಿ ಬದುಕುತ್ತಿರಬಹುದು. ಹಾಗಿರುವಾಗ ಅವರು ಪ್ರವಾದಿಯ ಪಾತ್ರ ಮಾಡುವುದನ್ನು ಒಪ್ಪುವುದು ಹೇಗೆ? ನಾವು ಮುಸ್ಲಿಮರು ಇದನ್ನೆಲ್ಲ ಸಹಿಸಿಕೊಳ್ಳುವುದು ಹೇಗೆ?” ಎಂಬುದು ಅದರ ಸಮಸ್ಯೆ.

ಮತ್ತಷ್ಟು ಓದು »

28
ಆಕ್ಟೋ

ಹಿಂದೂ-ವಿರೋಧಿ ಮಾಧ್ಯಮ: ಸೃಷ್ಟಿ ಮತ್ತು ಸ್ಥಿತಿ

– ಪ್ರೇಮಶೇಖರ

ಪೇಯ್ಡ್ ಮೀಡಿಯಾಪ್ರಕರಣ ೧: ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಸೌದಿ ಅರೇಬಿಯಾದ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಪ್ರಕಟವಾಗುತ್ತದೆ. ಅಚ್ಚರಿಯೆಂದರೆ ಮರುದಿನವೂ ಅದೇ ಲೇಖನ ಮತ್ತೆ ಕಾಣಿಸಿಕೊಳ್ಳುತ್ತದೆ!  ಅದರ ಕೆಳಗೆ ಹೀಗೊಂದು ವಿವರಣೆ: “ನಿನ್ನೆಯ ದಿನ ಸೌದಿ ಅರೇಬಿಯಾವನ್ನು ಕುರಿತು ನೀಡಿದ ವಿವರಣೆಯಲ್ಲಿ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿ.ಶ. ೬೨೨ರಲ್ಲಿ ಓಡಿಹೋದರು. ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು.ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಪತ್ರಿಕೆ ಕ್ಷಮೆ ಯಾಚಿಸುತ್ತದೆ ಹಾಗೂ ಇಂದು ಅದೇ ಲೇಖನವನ್ನು ತಿದ್ದಿ ಪ್ರಕಟಿಸಲಾಗಿದೆ.” ಮರುಪ್ರಕಟವಾಗಿದ್ದ ಲೇಖನದಲ್ಲಿ ಪೈಗಂಬರರು ಮದೀನಾಗೆ ಓಡಿಹೋದ ಬಗೆಗಿನ ಒಂದು ಸಾಲು ಮಾಯವಾಗಿರುತ್ತದೆ.

ಪ್ರಕರಣ ೨: ಕೆಲದಿನಗಳ ನಂತರ ಅದೇ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಲೇಖನವೊಂದು ಪ್ರಕಟವಾಗುತ್ತದೆ.ವಿವೇಕಾನಂದರ ದೈಹಿಕ ಸಮಸ್ಯೆಗಳು,ಬಲಹೀನತೆಗಳ ಬಗ್ಗೆ ಅದರಲ್ಲಿನ ವಿಷಯಗಳಾವುವೂ ಹೊಸದಾಗಿರುವುದಿಲ್ಲ.  ಅವೆಲ್ಲವೂ ಕೊಲ್ಕತಾದ ರಾಮಕೃಷ್ಣ ಮಿಶನ್ ಮತ್ತು ಅಲ್ಮೋರಾದ ಅದ್ವೈತಾಶ್ರಮಗಳ ಪ್ರಕಟಣೆಗಳಲ್ಲೇ ಇವೆ.ಆದರೆ ಲೇಖನದ ಭಾಷೆ, ಕೆಲ ಪದಗಳು ಅಕ್ಷೇಪಾರ್ಹವಷ್ಟೇ ಅಲ್ಲ, ಪತ್ರಿಕೆಯ ಘನತೆಗೂ ಶೋಭೆ ತರುವಂತಿರುವುದಿಲ್ಲ.ಇದರಿಂದಾಗಿ ಹಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆ.ಅದು ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿಯೂ ವ್ಯಕ್ತವಾಗುತ್ತದೆ.ಅದಕ್ಕೆ ಪತ್ರಿಕೆಯ ಪ್ರತಿಕ್ರಿಯೆ? ಒಂದಕ್ಷರದ ಕ್ಷಮಾಯಾಚನೆಯೂ ಇಲ್ಲ!

ಮತ್ತಷ್ಟು ಓದು »

24
ಆಕ್ಟೋ

ಸುಳ್ಸುದ್ದಿ – ಪ್ರಶಸ್ತಿ ವಾಪಸ್ ಪ್ರಹಸನ : ಬೇಸ್ತುಬಿದ್ದ ಸಾಹಿತಿಗಳು

– ಪ್ರವೀಣ್ ಕುಮಾರ್,ಮಾವಿನಕಾಡು

Nilume Sulsuddi - Award Returning Politicsಘಟನೆ ಒಂದು:
ಅವರೊಬ್ಬ ಹಳೆಯ ಸಾಹಿತಿ.ಹಲವಾರು ವರ್ಷಗಳ ಹಿಂದೆ ಅವರಿಗೆ ಎರಡು ಲಕ್ಷ ನಗದಿನ ಜೊತೆಗೆ ಅಕಾಡೆಮಿ ಪ್ರಶಸ್ತಿ ಕೂಡಾ ದೊರಕಿತ್ತು.ಕೆಲ ದಿನಗಳ ಹಿಂದೆ ಟೌನ್ ಹಾಲ್ ಬಳಿ ಅವರನ್ನು ಭೇಟಿಯಾದ ವ್ಯಕ್ತಿಯೊಬ್ಬ,ವಿಚಾರವಾದಿಗಳ ಹತ್ಯೆಯನ್ನು ಖಂಡಿಸಿ, ಅರವತ್ತು ವರ್ಷದಲ್ಲಿ ದೇಶದಲ್ಲಿ ಎಂದೂ ಇಂತಹಾ ಘಟನೆ ನಡೆದಿಲ್ಲ ಎಂದು ಬಿಂಬಿಸುವ ಸಲುವಾಗಿ ಅದೇ ಕಾರಣವನ್ನು ನೀಡಿ ನಿಮಗೆ ನೀಡಲಾದ ಪ್ರಶಸ್ತಿ ಮತ್ತು ಪ್ರಶಸ್ತಿಯ ಜೊತೆ ದೊರೆತ ಹಣವನ್ನು ಅಕಾಡೆಮಿಗೆ ಮರಳಿಸಿದರೆ ಮುಂದೆ ರಚಿಸಲ್ಪಡುವ “ಗಂಜಿ ಗಿರಾಕಿಗಳ ಉದ್ಧಾರ ಸಮಿತಿ”ಗೆ  ನಿಮ್ಮನ್ನೇ ಅಧ್ಯಕ್ಷರಾಗಿಸಲಾಗುವುದು ಮತ್ತು ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡಲಾಗುವುದು ಎಂದು ಪುಸಲಾಯಿಸಿದ್ದಾನೆ.ಪ್ರಮುಖ ಪಕ್ಷವೊಂದರ ಹಿರಿಯ ನಾಯಕನೆಂದು ಹೇಳಿಕೊಂಡಿದ್ದ ಆತನ ಮಾತು ಕೇಳಿ 5 ಪರ್ಸೆಂಟ್ ಬಡ್ಡಿಗೆ ಹಣ ತಂದು ತಮ್ಮ ಬ್ಯಾಂಕ್ ಖಾತೆಗೆ ತುಂಬಿ ಚೆಕ್ ನ ಜೊತೆಗೆ ಪ್ರಶಸ್ತಿಯನ್ನೂ ತೆಗೆದುಕೊಂಡು ಹೋಗಿ ಅಕಾಡೆಮಿಗೆ ಮರಳಿಸಿ ಇಂದಿಗೆ ಹದಿನೈದು ದಿನವಾಯಿತು.ಇದುವರೆಗೂ ಆತನ ಕಡೆಯಿಂದ ಯಾವುದೇ ಸುದ್ದಿಯೂ ಇಲ್ಲ! ಆ ನಾಯಕನ ಮಾತು ಕೇಳಿ ಸಾಲ ಮಾಡಿ ಪ್ರಶಸ್ತಿ ಮರಳಿಸಿದ ಸಾಹಿತಿ ಈಗ,ಅತ್ತ ಹುದ್ದೆಯೂ ಇಲ್ಲ,ಇತ್ತ ಪ್ರಶಸ್ತಿ ಮತ್ತು ಹಣವೂ ಇಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ!!
ಮತ್ತಷ್ಟು ಓದು »

24
ಆಕ್ಟೋ

ಜನಸಾಮಾನ್ಯರಿಗಾಗಿ ಕಾವ್ಯ ಮತ್ತು ಕಾವ್ಯದಲ್ಲಿ ಸರಳತೆ

– ನಾಗೇಶ ಮೈಸೂರು

ಇತಿಹಾಸಕೆಲವೊಮ್ಮೆ ನನಗನಿಸುತ್ತದೆ – ಚಲನಚಿತ್ರ ಗೀತೆಗಳಿಗೆ ಸಿಕ್ಕಷ್ಟು ಹೆಸರು, ಪ್ರಾಮುಖ್ಯತೆ ಒಳ್ಳೆಯ ಕಾವ್ಯ- ಕವಿತೆಗಳಿಗೆ ದೊರಕುತ್ತಿಲ್ಲವೆಂದು. ಎಲ್ಲಾ ಸ್ತರಗಳ ಹೆಚ್ಚು ಮನಸುಗಳನ್ನು ಚಲನಚಿತ್ರ ಗೀತೆಗಳು ತಲುಪುತ್ತದೆ ಎನ್ನುವುದು ನಿರ್ವಿವಾದ. ಆದರೆ ಅವುಗಳ ರೀತಿಯಲ್ಲೆ ಕವನಗಳ ಶ್ರೇಷ್ಠತೆ ಮುಖ್ಯವಾಹಿನಿಗೆ ಮುಟ್ಟುತ್ತಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ.

ಕಾವ್ಯಕ್ಕು ಭಾವಕ್ಕು ಅವಿನಾಭಾವ ಸಂಬಂಧ. ಭಾವ ಜೀವಿಯೊಬ್ಬ ಬರಹಗಾರನಾಗಿರಲಿ, ಬಿಡಲಿ – ಅಂತರಂಗದ ಬಡಿತ ಝೇಂಕರಿಸಿದಾಗ ಸ್ಪುರಿಸುವ ಭಾವನೆ ಪದಗಳಾಗಿ ಹೊರಬಿದ್ದಾಗ ಕಾವ್ಯ ರೂಪದಲ್ಲಿರುವುದೆ ಹೆಚ್ಚು. ಭಾವನೆಯ ನವಿರು ಮತ್ತು ನಾವೀನ್ಯತೆಯನ್ನು ಪರಿಗಣಿಸಿ ಹೇಳುವುದಾದರೆ ಅದು ಕಾವ್ಯ ರೂಪದಲ್ಲಿರುವುದೆ ಸಹಜ ಗುಣ ಧರ್ಮ. ಈ ಭಾವ ಕೆಲವರಲ್ಲಿ ಕ್ಲಿಷ್ಠ ಕವನದ ರೂಪತಾಳಿದರೆ ಮತ್ತೆ ಕೆಲವರಿಗೆ ಸರಳ ಪದ ಕುಣಿತದ ಹಾಡಾಗಬಹುದು. ಮತ್ತಿತರರಿಗೆ ಎರಡು ಅಲ್ಲದ ನಡುವಿನ ಗಡಿಯ ತ್ರಿಶಂಕುವೂ ಆಗಬಹುದು. ಭಾವ ಗಣಿತದಲ್ಲಿ ಗಣನೆಗೆ ಬರುವುದು ಅದು ಆ ಗಳಿಗೆಯಲ್ಲಿರುವ ಮನಸ್ಥಿತಿಗನುಸಾರವಾಗಿ ಅಂಕೆಗಿಲ್ಲದೆ ಪ್ರಸ್ತಾವಗೊಳ್ಳುವ ರೀತಿಯೆ ಹೊರತು ಯಾವುದೆ ನೀತಿ ನಿಯಮಾವಳಿಗೊಳಪಟ್ಟ ನಿರ್ಬಂಧಿತ ಸರಕಲ್ಲ. ಹೀಗಾಗಿ ಅದು ಅದ್ಬುತವೂ ಆಗಿಬಡಿಬಹುದು, ಅನಾಥವೂ ಅನಿಸಿಬಿಡಬಹುದು.

ಇಷ್ಟಾದರೂ ಇಲ್ಲೊಂದು ವಿಲಕ್ಷಣ ವಿಪರ್ಯಾಸವಿದೆ. ಮೇಲ್ನೋಟಕ್ಕೆ ಇದು ಎದ್ದು ಕಾಣಿಸದಿದ್ದರು, ಸ್ವಲ್ಪ ಒಳಹೊಕ್ಕು ಆಳ ನೋಡಿ ಈಜಲು ಬಯಸಿದವರಿಗೆ ಇದು ಚಿರಪರಿಚಿತವೇ ಎನ್ನಬಹುದು. ಇದನ್ನು ಅರ್ಥ ಮಾಡಿಕೊಳ್ಳಲ್ಲು ಒಂದು ಉದಾಹರಣೆಯ ಮುಖೇನ ಯತ್ನಿಸುವುದು ಸೂಕ್ತವೆನಿಸುತ್ತದೆ. ಉತ್ತಮವಾಗಿಯೆ ಬರೆಯುವ ಸಾಮರ್ಥ್ಯವಿರುವ ಉದಯೋನ್ಮುಖ ಕವಿಯೊಬ್ಬ, ತಾನು ಬರೆದುದು ಹೆಚ್ಚು ಜನರಲ್ಲಿ ತಲುಪಲಿ ಎಂಬ ಅಶೆಯಿಂದ ಒಂದು ಪುಸ್ತಕವಾಗಿ ಪ್ರಕಟಿಸಲು ಬಯಸುತ್ತಾನೆ ಎಂದಿಟ್ಟುಕೊಳ್ಳೋಣ. ಅಲ್ಲಿಂದಲೆ ಆರಂಭ ತೊಂದರೆ. ಮೊದಲಿಗೆ ಅದನ್ನು ಪ್ರಕಟಿಸುವ ಇಚ್ಛೆಯಿರುವ ಪ್ರಕಾಶಕ ದೊರಕುವುದೆ ಕಷ್ಟ. ಸಿಗುವವರೆಲ್ಲ ಆ ಕ್ಷೇತ್ರದಲ್ಲಿ ಹೆಸರು ಮಾಡಿರುವವರ ಮೇಲಷ್ಟೆ ಬಂಡವಾಳ ಹಾಕಲು ಸಿದ್ದರಿರುತ್ತಾರೆಯೆ ಹೊರತು, ಹೊಸಬರ ಮೇಲಲ್ಲ. ಎಷ್ಟೊ ಸಲ ಬರೆದವರ ಪ್ರಕಟಿಸಬೇಕೆಂಬ ಹಂಬಲ, ಸ್ವಂತವಾಗಿ ಎಲ್ಲಾ ವೆಚ್ಚ ಭರಿಸಿ ಪುಸ್ತಕವಾಗಿಸುವುದರಲ್ಲಿ ಪರ್ಯಾವಸಾನವಾಗುವ ಪ್ರಕರಣಗಳು ಕಡಿಮೆಯೇನಲ್ಲ. ಆದರೆ ಅಲ್ಲಿಯೂ ಹೆಚ್ಚು ಜನರನ್ನು ತಲುಪೀತೆಂಬ ಆಶಯ ಕೈಗೂಡುವುದೆಂದು ಹೇಳುವಂತಿಲ್ಲ – ಮಾರುಕಟ್ಟೆಗೆ ತಲುಪಿಸುವ ರೀತಿ, ನೀತಿ, ವಿಧಾನಗಳ ಕೊರತೆಯಿಂದಾಗಿ. ಜತೆಗೆ ಕಥೆಯೊ, ಕಾದಂಬರಿಯೊ ಆದರೆ ಪ್ರಕಟಿಸಲು ಯಾರಾದರೂ ಸಿಕ್ಕಿದರೂ ಸಿಗಬಹುದು ; ಆದರೆ ಕಾವ್ಯವೆಂದ ತಕ್ಷಣ ಅರ್ಧಕರ್ಧ ಆಸಕ್ತಿಯೆ ತಗ್ಗಿ ಹೋಗುತ್ತದೆ. ಆ ಕಡಯಿಂದ ಫಕ್ಕನೆ ಬರುವ ಉತ್ತರ – ‘ಈ ದಿನಗಳಲ್ಲಿ ಕಾವ್ಯ, ಕವನ ಕೊಂಡು ಓದುವವರು ಕಮ್ಮಿ’ ಎಂಬುದಾಗಿ.
ಮತ್ತಷ್ಟು ಓದು »

22
ಆಕ್ಟೋ

ವಿಶ್ವಾಕ್ಷರ ಮೀಡಿಯಾದವರಿಗೆ ಎಳೆನಿಂಬೆಕಾಯಿಗಳು ಬೇಕಾಗಿವೆ!

ವಿಶ್ವಾಕ್ಷರ ಮೀಡಿಯಾದವರಿಗೆ ಎಳೆನಿಂಬೆಕಾಯಿಗಳು ಬೇಕಾಗಿವೆ1

 

 

 

 

 

 

 

 

 

 

ಮತ್ತಷ್ಟು ಓದು »

22
ಆಕ್ಟೋ

ಡಾ. ಸೂರ್ಯನಾಥ ಕಾಮತ್ ಸಂದರ್ಶನ

ಸಂದರ್ಶಕ: ವಿಕಾಸ್ ಕಾಮತ್
ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ಡಾ. ಸೂರ್ಯನಾಥ ಕಾಮತ್ಕರ್ನಾಟಕದ ಅತ್ಯಂತ ಪ್ರಮುಖ ಇತಿಹಾಸತಜ್ಞ ಡಾ ಸೂರ್ಯನಾಥ ಕಾಮತ್ ಇನ್ನಿಲ್ಲ. ಕರ್ನಾಟಕದ ಸಮಗ್ರ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದವರು ಕಾಮತರು. ಕರ್ನಾಟಕ ರಾಜ್ಯ ಗೆಝೆಟಿಯರ್‍ನ ಅಧ್ಯಕ್ಷರೂ ಆಗಿದ್ದವರು. ಡಾ. ಕಲ್ಬುರ್ಗಿಯವರ ನಂತರ ಕರ್ನಾಟಕ, ತನ್ನ ಬಹುಪ್ರಮುಖ ಪ್ರಾಜ್ಞನೊಬ್ಬನನ್ನು ಕಳೆದುಕೊಂಡಿದೆ. ಕಳೆದ ಹಲವು ತಿಂಗಳುಗಳಿಂದ ವೃದ್ಧಾಪ್ಯಸಹಜ ಸಮಸ್ಯೆಗಳಿಂದ ಕಾಮತರು ಬಳಲುತ್ತಿದ್ದರು.

ಇಲ್ಲಿ ಪ್ರಕಟವಾಗಿರುವ ಸಂದರ್ಶನ ನಡೆದದ್ದು 2000ನೇ ಇಸವಿಯ ಡಿಸೆಂಬರ್ ಇಪ್ಪತ್ತೊಂದರಂದು. ಕೀಟವಿಜ್ಞಾನಿ ಮತ್ತು ಕನ್ನಡದ ವಿಜ್ಞಾನ ಲೇಖಕರಾಗಿದ್ದ ಡಾ. ಕೃಷ್ಣಾನಂದ ಕಾಮತ ಹಾಗೂ ಇತಿಹಾಸ ತಜ್ಞೆ – ಲೇಖಕಿ ಡಾ. ಜ್ಯೋತ್ಸ್ನಾ ಕಾಮತರ ಪುತ್ರ ವಿಕಾಸ್ ಕಾಮತ್ ನಡೆಸಿದ ಸಂದರ್ಶನ ಇದು. ಸೂರ್ಯನಾಥ ಕಾಮತರು ಕೃಷ್ಣಾನಂದ ಕಾಮತರ ಸಂಬಂಧಿಯಲ್ಲದಿದ್ದರೂ ಅದಕ್ಕೂ ಮೀರಿದ ಬಾಂಧವ್ಯವನ್ನಿಟ್ಟುಕೊಂಡಿದ್ದರು. ಒಂದು ಕಾಲದಲ್ಲಿ ಪತ್ರಕರ್ತರು ಮತ್ತು ಓದುಗರು ಈ ಇಬ್ಬರು ಕಾಮತರ ನಡುವೆ ಗೊಂದಲ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಈ ಗೊಂದಲಗಳ ಬಗ್ಗೆ ಜ್ಯೋತ್ಸ್ನಾ ಕಾಮತರು ಒಂದು ಹಾಸ್ಯಲೇಖವನ್ನೂ ಬರೆದದ್ದುಂಟು. ಜ್ಯೋತ್ಸ್ನಾ ಅವರು ಇತಿಹಾಸ ಸಂಶೋಧನೆಯಲ್ಲಿ ಸಾಕಷ್ಟು ಕೆಲಸ ಮಾಡಲಿಕ್ಕೂ ಸೂರ್ಯನಾಥ ಕಾಮತರ ಒತ್ತಾಸೆ, ಸಹಾಯ ಇದ್ದವು.

***

ವಿಕಾಸ್: ಹಲವು ಸಂದರ್ಭಗಳಲ್ಲಿ ಜನ ನಿಮ್ಮನ್ನು ನನ್ನ ತಾಯಿಯ ಪತಿ ಎಂದೇ ಮಿಸ್ಟೇಕ್ ಮಾಡಿಕೊಂಡಿದ್ದಾರೆ. ಯಾಕೆಂದರೆ ನನ್ನ ತಂದೆಯವರ ಹೆಸರು (ಡಾ. ಕೃಷ್ಣಾನಂದ ಕಾಮತ) ಮತ್ತು ನಿಮ್ಮ ಹೆಸರಿನ ಸಾಮ್ಯ ಜನರಿಗೆ ಗೊಂದಲ ಮೂಡಿಸಿದೆ. ಆಗೆಲ್ಲ ಜನರಿಗೆ, ನೀವಿಬ್ಬರೂ ಬೇರೆಬೇರೆ ವ್ಯಕ್ತಿಗಳು; ಸಂಬಂಧಿಕರಲ್ಲ ಎಂದು ತಿಳಿಹೇಳುವುದೇ ನನಗೆ ದೊಡ್ಡ ಕೆಲಸವಾಗಿಬಿಡುತ್ತದೆ. ಈ ಬಗೆಯ ಅನುಭವ ನಿಮಗೇನಾದರೂ ಆಗಿದ್ದುಂಟಾ?

ಸೂರ್ಯನಾಥ ಕಾಮತ್: (ನಗುತ್ತ) ನಿಮ್ಮ ತಾಯಿ (ಜ್ಯೋತ್ಸ್ನಾ ಕಾಮತ) ಈ ಗೊಂದಲದ ಪ್ರಸಂಗಗಳ ಬಗ್ಗೆಯೇ ಒಮ್ಮೆ ಹಾಸ್ಯ ಲೇಖನವೊಂದನ್ನು ಬರೆದದ್ದುಂಟು. ನಿಮ್ಮ ತಂದೆ, “ಅದ್ಯಾಕೆ ಎಲ್ಲರೂ ನನ್ನನ್ನು ಸೂರ್ಯನಾಥ ಕಾಮತ ಅಂತ ಮಿಸ್ಟೇಕ್ ಮಾಡಿಕೊಳ್ತಾರೆ. ಆದರೆ ಅವರನ್ನು ಕೃಷ್ಣಾನಂದ ಅಂತ ಯಾಕೆ ಯಾರೂ ಮಿಸ್ಟೇಕ್ ಮಾಡಿಕೊಳ್ಳೋದಿಲ್ಲ? ಈ ತೊಂದರೆ ನನಗೆ ಮಾತ್ರ ಬರುವುದು ನ್ಯಾಯವಾ?” ಅಂತ ಕೇಳ್ತಿದ್ದರು. ಅವರೊಮ್ಮೆ ಹಾಗೆ ನನ್ನಲ್ಲಿ ಹೇಳಿ ಒಂದೇ ವಾರದಲ್ಲಿ ನನಗೊಂದು ಪತ್ರ ಬಂತು ರಾಜ್ಯದ ಗಝೆಟಿಯರ್ ಡಿಪಾರ್ಟ್‍ಮೆಂಟಿಂದ. ಅದರಲ್ಲಿ ಡಾ. ಕೃಷ್ಣಾನಂದ ಕಾಮತ, ನಿರ್ದೇಶಕರು, ಕರ್ನಾಟಕ ರಾಜ್ಯ ಗೆಝೆಟಿಯರ್ ಅಂತ ಬರೆದಿದ್ರು ವಿಳಾಸಾನ!

ವಿಕಾಸ್: ನೀವು ಒಬ್ಬ ಶಿಕ್ಷಕನಾಗಿ, ಪತ್ರಕರ್ತನಾಗಿ, ಕಾದಂಬರಿಕಾರನಾಗಿ ಕೆಲಸ ಮಾಡಿದಿರಿ. ಇತಿಹಾಸವನ್ನು ಅಧ್ಯಯನ ಮಾಡಿದಿರಿ. ಮಿಥಿಕ್ ಸೊಸೈಟಿಯಂಥ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಪ್ರಮುಖರು ನೀವು. ದೊಡ್ಡದೊಡ್ಡ ಸರಕಾರೀ ಸಂಸ್ಥೆಗಳನ್ನು, ಇಲಾಖೆಗಳನ್ನು ಮುನ್ನಡೆಸಿದಿರಿ. ಈಗಂತೂ ದೇಶದ ಅತ್ಯಂತ ದೊಡ್ಡ ಸರಸ್ವತೀ ಭಂಡಾರವನ್ನು (ರಾಜಾರಾಮ್ ಮೋಹನ್ ರಾಯ್ ಲೈಬ್ರರಿ, ಕೋಲ್ಕತ) ನಿರ್ದೇಶಕರಾಗಿ ಮುನ್ನಡೆಸುತ್ತಿದ್ದೀರಿ. ನಿಮ್ಮ ಈ ಎಲ್ಲ ಸಾಧನೆಗಳಿಗೆ ಪ್ರೇರಕಶಕ್ತಿ ಯಾವುದು?
ಮತ್ತಷ್ಟು ಓದು »

21
ಆಕ್ಟೋ

ಸೆಕ್ಯುಲರ್ವಾದಿ ಸಂಕಥನದ ವೈರುಧ್ಯಗಳು

e0b2aee0b382e0b2b2e0b2ade0b382e0b2a4e0b2b5e0b2bee0b2a6e0b2bf-e0b2b8e0b386e0b295e0b38de0b2afe0b381e0b2b2e0b2b0e0b2bfe0b2b8e0b2822ಡಾ. ಅಜಕ್ಕಳ  ಗಿರೀಶ ಭಟ್

   ಪ್ರಜಾವಾಣಿಯಲ್ಲಿ ಸೆ.19 ಮತ್ತು 21ರಂದು ಪ್ರಕಟವಾದ ಮುಜಾಫರ್ ಅಸ್ಸಾದಿ ಹಾಗೂ ಆಕಾರ್ ಪಟೇಲ್ ಅವರ ಲೇಖನಗಳನ್ನು ನಾನು ಪ್ರಸ್ತುತ ಭಾರತದ ಸೆಕ್ಯುಲರ್ ಸಾಹಿತ್ಯ ಅಥವಾ ಸಂಕಥನದ ಭಾಗ ಎಂದು ಪರಿಗಣಿಸಿದ್ದೇನೆ. ಇದನ್ನು ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆಯ ವಿದ್ಯಾರ್ಥಿಯಾದ ನಾನು ವಿಮರ್ಶಿಸುವ ನಿಟ್ಟಿನಲ್ಲಿ ಸೆ.26ರ ಪ್ರಜಾವಾಣಿಯಲ್ಲಿ ಕಿರುಲೇಖನ ಬರೆದಿದ್ದೆ. ಇದಕ್ಕೆ ಪ್ರತಿಯಾಗಿ ಡಾ. ಕಿರಣ್ ಎಂ. ಗಾಜನೂರು ಅವರು ಎತ್ತಿದ ಪ್ರಶ್ನೆಗಳಿಗೆ (ಪ್ರಜಾವಾಣಿ ಸೆ.28) ಉತ್ತರವಾಗಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ.

   ನಾನು ಬರೆದ ಕಿರುಲೇಖನದ ಉದ್ದೇಶ ಸೆಕ್ಯುಲರ್ವಾದಿ ಸಂಕಥನದಲ್ಲಿ ಇರುವ ವೈರುಧ್ಯಗಳನ್ನು ತೋರಿಸುವುದಾಗಿತ್ತು. ಸಂಘಪರಿವಾರವನ್ನು ವಿರೋಧಿಸುವ ಭರದಲ್ಲಿ ಸೆಕ್ಯುಲರ್ವಾದಿ ಸಂಕಥನವು ತಾನು ಹೆಣೆದ ಬಲೆಯಲ್ಲಿ ತಾನೇ ಸಿಕ್ಕಿಕೊಳ್ಳುತ್ತ ಕಳೆದ ಕೆಲವು ದಶಕಗಳಲ್ಲಿ ಕೋಮುವಾದ ಮತ್ತು ಮೂಲಭೂತವಾದಕ್ಕೆ ಪರಿಹಾರವನ್ನು ಹುಡುಕುವಲ್ಲಿ ವಿಫಲವಾಗಿದೆ ಎಂದು ಸೂಚಿಸುವುದಾಗಿತ್ತು. ಅಸ್ಸಾದಿಯವರ ಮತ್ತು ಆಕಾರ್ ಲೇಖನಗಳಂತೆಯೇ ಕಿರಣ್ ಅವರ ಬರಹವೂ ಇದೇ ಸಂಕಥನದ ಒಂದು ಭಾಗ. ಕಿರಣ್ ಅವರು ನಾನು ತೋರಿಸಿರುವ ಸಮಸ್ಯೆಗಳನ್ನು ಸ್ಪರ್ಶಿಸದೆ, ಅಸ್ಸಾದಿ ಮತ್ತು ಆಕಾರ್  ಲೇಖನಗಳಲ್ಲಿ ಇರುವ, ನಾನು ಕೂಡ ಒಪ್ಪುವ ವಿಚಾರಗಳನ್ನೇ ಪುನರುಚ್ಚರಿಸಿದ್ದಾರೆ. ಮತ್ತಷ್ಟು ಓದು »

21
ಆಕ್ಟೋ

ಪ್ರಶಸ್ತಿ ಹಿಂತಿರುಗಿಸುವಿಕೆ ಮತ್ತು ಸೆಕ್ಯುಲರ್ ಸಮೂಹ ಸನ್ನಿ

– ರಾಕೇಶ್ ಶೆಟ್ಟಿ

ಸಮೂಹ ಸನ್ನಿದೇಶದಲ್ಲಿ ಪ್ರಶಸ್ತಿ ಹಿಂತಿರುಗಿಸುವಿಕೆಯ ಪರ್ವ ಭರ್ಜರಿಯಾಗಿ ಶುರುವಾಗಿದೆ.ಕಲ್ಬುರ್ಗಿ ಹತ್ಯೆಯನ್ನು ಖಂಡಿಸಿ ಚಂಪಾ ಅವರಿಂದ ರಾಜ್ಯದಲ್ಲಿ ಶುರುವಾಗಿದ್ದು ಈಗ ನಯನತಾರಾ ಸೆಹಗಲ್ ಅವರು ಹಿಂದಿರುಗಿಸುವ ಮೂಲಕ ಸಾಮೂಹಿಕ ಸನ್ನಿಯಂತೆ ಹರಡಲಾರಂಭಿಸಿದೆ.ಇವರೆಲ್ಲಾ ನೀಡುತ್ತಿರುವ ಕಾರಣ “ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ.ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶವಿದೆ.ದಾದ್ರಿ ಹತ್ಯೆಯನ್ನು ವಿರೋಧಿಸಿ,ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ,ಮೋದಿಯ ಮೌನವನ್ನು ವಿರೋಧಿಸಿ,’ ಇತ್ಯಾದಿ ಇತ್ಯಾದಿ ಕಾರಣಗಳನ್ನು ನೀಡಿದ್ದಾರೆ.

ನಿಜಕ್ಕೂ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆಯಾ? ಅಥವಾ ಸೆಕ್ಯುಲರ್ ಗುಂಪು ಸಮೂಹ ಸನ್ನಿಗೊಳಗಾಗಿದೆಯೇ? ಊಹೂಂ.ಸನ್ನಿಗೊಳಗಾಗುವಷ್ಟು ಮುಗ್ದರೇನಲ್ಲ ಇವರು. Mass Hysteria ಸೃಷ್ಟಿಸುವಷ್ಟು ಸಾಮರ್ಥ್ಯವುಳ್ಳ ಜನರಿವರು.2002ರ ಗುಜರಾತ್ ಗಲಭೆಯನ್ನು ನೆನಪು ಮಾಡಿಕೊಳ್ಳಿ.ಆಗ ಜನರು ಈ ಹುಟ್ಟು ಹಾಕಿದ ಸಮೂಹ ಸನ್ನಿಯೇನೂ ಕಡಿಮೆಯದೇ,ಒಬ್ಬ ಮುಖ್ಯಮಂತ್ರಿಯ ಮಿತಿಯಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೆಲ್ಲಾ ಮಾಡಿಯೂ ನರೇಂದ್ರ ಮೋದಿಯವರಿಗೆ ನರಹಂತಕ ಪಟ್ಟ ಕಟ್ಟಿಸಿ,ಆಗಿನ ಪ್ರಧಾನಿ ವಾಜಪೇಯಿಯವರಿಂದಲೂ ’ರಾಜಧರ್ಮ ಪಾಲನೆ’ಯ ಮಾತನ್ನೂ ಆಡಿಸಿಬಿಟ್ಟಿತ್ತು ಈ ಸೆಕ್ಯುಲರ್ ಸಮೂಹ ಸನ್ನಿ. ಹಾಗೆಂದು ಗುಜರಾತ್ ಗಲಭೆಯನ್ನೂ ಸಮರ್ಥಿಸುತ್ತಿಲ್ಲ.ಅದಕ್ಕೂ ಮೊದಲು ಈ ದೇಶ ಅಂತ ಗಲಭೆಯನ್ನೇ ನೋಡಿರಲಿಲ್ಲವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ. ಮತ್ತಷ್ಟು ಓದು »

20
ಆಕ್ಟೋ

ವಿಚಾರವ್ಯಾದಿ ಅಳಿದು ವಿಚಾರವಾದ ಬೆಳೆಯಲಿ

– ಅಮೃತ್ ಜೋಶಿ

ಮಂಡೆ ಮೊಸರುಸಂಶೋಧಕ ಡಾ. ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಯ ದುರದುಷ್ಟಕರ ಪ್ರಕರಣ ಹಾಗೂ “ಭಗವಾನ ಉವಾಚ”ದಿಂದಾಗಿ ಇಡೀ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಿಚಾರವಾದ ಅಥವಾ ಪ್ರಗತಿಪರ ಚಿಂತನೆ- ಈ ಶಬ್ದಗಳ ಅರ್ಥ ಮತ್ತು ವ್ಯಾಪ್ತಿಯ ಬಗ್ಗೆ ಬಿಸಿಬಿಸಿಯಾದ ಮತ್ತೆ ಹಲವಡೆ ಹಸಿಹಸಿಯಾದ ಚರ್ಚೆ ನಡೆಯುತ್ತಿದೆ.

ಬಹಳಷ್ಟು ಚರ್ಚೆಗಳಲ್ಲಿ ಅಥವಾ ವಾದಗಳಲ್ಲಿ ಬೈಗಳ ಅಥವಾ ವಿತಂಡವಾದಗಳ ಮೂಲಕವೇ ತಮ್ಮ ಶ್ರೇಷ್ಟತೆಯನ್ನು ಸಾರಿ ಹೇಳಿಕೊಳ್ಳಬೇಕಾದ ಪರಿಸ್ಥಿತಿಯನ್ನು ನೋಡಿದರೆ ಅದು ಅವುಗಳ ಟೊಳ್ಳುತನವನ್ನು ಎತ್ತಿತೋರುತ್ತದೆ. ವಿಚಾರವಾದ ಅಥವಾ ಪ್ರಗತಿಪರ ಚಿಂತನೆ ತಮ್ಮಿಂದನೇ ಹುಟ್ಟಿಕೊಂಡಿದ್ದು, ಅದು ತಮ್ಮ ಸೈದಾಂತಿಕ ಗುತ್ತಿಗೆ ಎಂದೇ ಅನೇಕ ತಥಾಕಥಿತ ವಿಚಾರವಾದಿಗಳು ಭಾವಿಸಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ವ್ಯವಸ್ಥೆಯನ್ನು ದಿಕ್ಕರಿಸಿ, ಅದರ ವಿರುದ್ಧ ಬಂಡಾಯ ಸಾರುವವನೇ ವಿಚಾರವಾದಿ. ಅವನೇ ಸಮಾಜ ಸುಧಾರಕ, ಅವನೇ ಪ್ರಗತಿಪರ ಚಿಂತಕ ಎಂದು ಈವರೆಗೆ ನಮ್ಮೆಲ್ಲರಿಗೆ ನಮ್ಮ ಶಿಕ್ಷಣ ಪದ್ಧತಿ ಹೇಳಿಕೊಟ್ಟಿರುವ ಗಿಳಿಪಾಠವಾಗಿದೆ.

ಹಾಗಾದರೆ ತನ್ನ ಮನೆ ಸ್ವಚ್ಛವಾಗಿಲ್ಲ ಎಂದು ಮನೆಯಿಂದ ಹೊರಗೆ ನಿಂತು ತನ್ನ ಮನೆಯ ವ್ಯವಸ್ಥೆಯ ಬಗ್ಗೆ ದೋಷಿಸುತ್ತ, ಅವಹೇಳನ ಮಾಡುತ್ತ ಕಾಲ ಕಳೆಯುವವನು ಶ್ರೇಷ್ಟನೋ ಅಥವಾ ಅದೇ ವ್ಯವಸ್ಥೆಯಲ್ಲಿದ್ದು ಆ ಮನೆಯ ಸ್ವಚ್ಛತೆಯ ಬಗ್ಗೆ ಸದಾ ಕಾರ್ಯಮಗ್ನರಾಗಿರುವ ಮನೆಯ ಸದಸ್ಯ ಶ್ರೇಷ್ಟನೋ? ಈ ಹಿನ್ನೆಲೆಯಲ್ಲಿ ವಿಚಾರವಾದಿ, ಪ್ರಗತಿಪರ ಚಿಂತಕ, ಸಮಾಜ ಸುಧಾರಕರನ್ನು ಗುರುತಿಸುವುದೇ ನಿಜವಾದ ಮಾನದಂಡವಾಗಿದೆ.

ಮತ್ತಷ್ಟು ಓದು »