ವಿಷಯದ ವಿವರಗಳಿಗೆ ದಾಟಿರಿ

Archive for

28
ಸೆಪ್ಟೆಂ

ಜಾತಿವಿನಾಶಕ್ಕಾಗಿ ಜಾತಿಸಂಘಟನೆಗಳೇ?

– ವೀಣಾ. E, ಕುವೆಂಪು ವಿಶ್ವವಿದ್ಯಾನಿಲಯ. 

ಪ್ರಸ್ತುತ ಪ್ರತೀ ಜಾತಿಯೂ ಸಂಘಟನೆಯನ್ನು ಮಾಡಿಕೊಳ್ಳುವ ಪ್ರವೃತ್ತಿ ಕಂಡುಬರುತ್ತಿದೆ. ಈ ಜಾತಿ ಸಂಘಟನೆಯ ರಚನೆಗೆ ಎರಡು ಕಾರಣಗಳನ್ನು ನೀಡಲಾಗುತ್ತದೆ: 1. ಜಾತಿಗಳ ಅಸ್ಮಿತೆ(identity)ಯನ್ನು ಬಲಪಡಿಸಿಕೊಳ್ಳುವುದು. 2. ತಾರತಮ್ಯವನ್ನು ಹುಟ್ಟುಹಾಕುತ್ತಿರುವ ಜಾತಿವ್ಯವಸ್ಥೆಯನ್ನು ನಾಶಮಾಡುವುದು. ಆದರೆ ಮೇಲ್ನೋಟಕ್ಕೇ ಗೋಚರಿಸುವಂತೆ ಇವೆರಡೂ ಕಾರಣಗಳು ಪರಸ್ಪರ ತದ್ವಿರುದ್ಧವಾಗಿವೆ. ಅಂದರೆ ಜಾತಿ ಅಸ್ಮಿತೆಯನ್ನು ಬಲಪಡಿಸಿದರೆ ಜಾತಿವ್ಯವಸ್ಥೆ ನಾಶವಾಗುವುದಿಲ್ಲ. ಜಾತಿವ್ಯವಸ್ಥೆಯನ್ನು ನಾಶಮಾಡಬೇಕೆಂದರೆ ಜಾತಿ ಅಸ್ಮಿತೆಯನ್ನು ಬಲಪಡಿಸುವಂತಿಲ್ಲ. ಏಕೆಂದರೆ, ಜಾತಿಗಳ ಅಸ್ಮಿತೆಯನ್ನು ಗಟ್ಟಿಗೊಳಿಸುವುದು ಹೇಗೆ ಜಾತಿವ್ಯವಸ್ಥೆಯನ್ನು ನಾಶಾಮಾಡಿದಂತಾಗುತ್ತದೆ?

ಜಾತಿಸಂಘಟನೆಗಳ ರಚನೆಗೆ ಒತ್ತುಕೊಡುವ ಈ ಎರಡು ಅಂಶಗಳನ್ನು ಒಂದೊಂದಾಗಿ ಪರಿಶೀಲಿಸುವ. ಮೊದಲನೆಯದಾಗಿ, ಜಾತಿ ಅಸ್ಮಿತೆಯನ್ನು ಬಲಪಡಿಸುವುದು: ಒಂದು ಸಮುದಾಯಕ್ಕೆ ಸೇರಿದ ಹಲವಾರು ಜಾತಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳ ಮೂಲಕ ಗುರುತಿಸಿಕೊಳ್ಳುತ್ತಿವೆ. ಅವುಗಳನ್ನೆಲ್ಲಾ ಒಟ್ಟುಗೂಡಿಸಿ ಒಂದು ಪ್ರಬಲ ಅಸ್ಮಿತೆಯಾಗಿ ಬಲಪಡಿಸಲು ಸಂಘಟನೆಗಳು ಅಗತ್ಯ ಎನ್ನುತ್ತಾರೆ. ಉದಾಹರಣೆಗೆ ನೊಣಬ, ಸಾಧರು, ಪಂಚಮಸಾಲಿ, ಜಂಗಮ ಮುಂತಾದವುಗಳನ್ನು ಲಿಂಗಾಯತ ಎಂದು ಮತ್ತು ಬಿಲ್ಲವರು, ದೀವರು, ಪೂಜಾರಿಗಳು, ಗಮಲ್ಲಾ ಇನ್ನೂ ಕೆಲವು ಜಾತಿಗಳನ್ನು ಈಡಿಗ ಎಂಬ ಒಂದು ಅಸ್ಮಿತೆಯ ಅಡಿಯಲ್ಲಿ ಐಕ್ಯಗೊಳಿಸುವ ಯತ್ನಗಳು ನಡೆದಿವೆ. ಈ ರೀತಿಯಾಗಿ ಬ್ರಾಹ್ಮಣ, ಒಕ್ಕಲಿಗ, ಕುರುಬ, ದಲಿತ ಇತ್ಯಾದಿ ಜಾತಿಗಳು ಸಂಘಟನೆಗಯಾಗುತ್ತಿರುವ ಪ್ರಕ್ರಿಯೆ ಇತ್ತಿಚೆಗೆ ಸಾಮಾನ್ಯ ಎನಿಸಿಬಿಟ್ಟಿದೆ. ಆಯಾ ಜಾತಿಗಳ ವೃತ್ತಿ, ಕತೆ-ಪುರಾಣಗಳು, ಆಚರಣೆಗಳನ್ನು ಆಧಾರವಾಗಿ ಇಟ್ಟುಕೊಂಡು ಹಲವು ಜಾತಿಗಳನ್ನು ಒಂದು ಅಸ್ಮಿತೆಯ ಒಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಈ ಹಲವು ಜಾತಿಗಳು ನಿಜವಾಗಿಯೂ ಒಂದು ಅಸ್ಮಿತೆಗೆ ಬದ್ಧವಾಗಿವೆಯೇ? ಸಂಘಟನೆಗಳು ಇವುಗಳ ಅಸ್ಮಿತೆಯನ್ನು ಬಲಪಡಿಸಲು ಯಶಸ್ವಿಯಾಗಿವೆಯೇ? ಎಂದು ಪರಿಶೀಲಿಸದರೆ ಸಿಗುವ ಉತ್ತರ ಮಾತ್ರ ನಕಾರಾತ್ಮಕವಾಗಿದೆ. ಇದಕ್ಕೆ ಈಡಿಗ ಜಾತಿಸಮುದಾಯ ಒಂದು ದೃಷ್ಟಾಂತವಾಗಿದೆ. ಮತ್ತಷ್ಟು ಓದು »