ವಿಷಯದ ವಿವರಗಳಿಗೆ ದಾಟಿರಿ

Archive for

13
ಮಾರ್ಚ್

ವಾಸನ್ ಐ ಕೇರ್ ಎಂಬ “ಡೋಂಟ್ ಕೇರ್” ಕಂಪೆನಿಯ ಕತೆ

_ ರೋಹಿತ್ ಚಕ್ರತೀರ್ಥ

Vasan-WhenAt60ವಾಸನ್ ಐ ಕೇರ್ – ಹೆಸರು ಕೇಳಿಯೇ ಇರುತ್ತೀರಿ. ಟಿವಿಯಲ್ಲಿ, ಸಿನೆಮಾ ಪರದೆಗಳಲ್ಲಿ, ಮಾಲ್‍ಗಳಲ್ಲಿ, ರಸ್ತೆಬದಿಯ ಆಳೆತ್ತರದ ಹೋರ್ಡಿಂಗ್‍ಗಳಲ್ಲಿ, ಪತ್ರಿಕೆಯ ಪುಟಗಳಲ್ಲಿ – ಹೀಗೆ ಎಲ್ಲೆಂದರಲ್ಲಿ ಇದರ ಜಾಹೀರಾತು ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ನಿಮ್ಮ ಕಣ್ಣುಗಳ ಕಾಳಜಿ ನಾವು ಮಾಡುತ್ತೇವೆ; ಒಮ್ಮೆ ಭೇಟಿ ಕೊಡಿ ಎಂದು ಅವರು ಪ್ರೀತಿಯಿಂದ ಕರೆದದ್ದನ್ನು ಕಂಡು ಖುಷಿಯಾಗಿ ಒಂದೆರಡು ಬಾರಿ ಭೇಟಿ ಇತ್ತಿರಲೂಬಹುದು. ಅಥವಾ ಈ ಲೇಖನವನ್ನು ನೀವು ವಾಸನ್ ಐ ಕೇರ್‍ನಲ್ಲಿ ಪರೀಕ್ಷಿಸಿ ಕೊಂಡ ಕನ್ನಡಕದ ಮೂಲಕವೇ ಓದುತ್ತಿರಲೂಬಹುದು! ಬೆಂಗಳೂರಂಥ ಸಿಟಿಗಳಲ್ಲಿ ಬೀದಿಗೊಂದರಂತೆ ತಲೆ ಎತ್ತಿರುವ ವಾಸನ್ ನೇತ್ರಾಸ್ಪತ್ರೆಗಳು ಕೇವಲ ಮೂರು ವರ್ಷಗಳ ಹಿಂದೆ ಅಪರೂಪವಾಗಿದ್ದವು. ಐದು ವರ್ಷಗಳ ಹಿಂದೆಯಂತೂ ಅವುಗಳ ಹೆಸರನ್ನೇ ಯಾರೂ ಕೇಳಿರಲಿಲ್ಲ. ಈ ಕ್ಲಿನಿಕ್ ಯಾ ಆಸ್ಪತ್ರೆ ಅಷ್ಟೊಂದು ವೇಗವಾಗಿ ಬೆಳೆಯಲು ಏನು ಕಾರಣ? ಇದರ ಹಿಂದಿನ ಪ್ರೇರಕಶಕ್ತಿ ಯಾರು? ಇವನ್ನೆಲ್ಲ ತಿಳಿದುಕೊಳ್ಳಬೇಕಾದರೆ ನಾವು ವಾಸನ್ ಚರಿತ್ರೆಯಲ್ಲಿ ನಡೆದುಹೋಗಿರುವ ಒಂದಷ್ಟು ಘಟನೆಗಳನ್ನು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಂದಹಾಗೆ, 2004ರಿಂದ 14ರವರೆಗೆ ನಮ್ಮ ದೇಶವನ್ನು ಆಳಿಹೋದ ಯುಪಿಎ ಸರಕಾರದ ಹತ್ತುಹಲವು ಹಗರಣಗಳ ಪಟ್ಟಿಯಲ್ಲಿ ವಾಸನ್ ಹೆಸರನ್ನೂ ದೊಡ್ಡದಾಗೇ ಬರೆಯಬೇಕಾಗುತ್ತದೆಂಬ ವಿಷಯ ನಿಮಗೆ ಅಚ್ಚರಿ ಮೂಡಿಸಬಹುದು. ಇಡೀ ಕತೆ ಶುರುವಾಗುವುದು 2007ರಲ್ಲಿ.

ಮತ್ತಷ್ಟು ಓದು »