ಪೇಪರು ಔಟಾಗಿ, ಎಂಟ್ರೆನ್ಸು ಬೇಕಾಗಿ..
– ನಾಗೇಶ ಮೈಸೂರು
ಅದು ಸುಮಾರು ೮೨-೮೩ ರ ಕಾಲ. ನಾವು ಅಗ ಎರಡನೆ ಪೀಯೂಸಿಯಲ್ಲಿ ಓದುತಿದ್ದೆವು. ಆಗಿನ್ನೂ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳಿಗೆ ಪ್ರವೇಶ ಪರೀಕ್ಷೆ ಇರಲಿಲ್ಲ – ಪೀಯೂಸಿ ಅಂಕೆ, ದರ್ಜೆಯ ಮೇಲೆ ಸೀಟು ನಿರ್ಧಾರವಾಗುತ್ತಿದ್ದ ಕಾಲ. ‘ಸೈನ್ಸ್ ತೆಗೆದುಕೊಂಡರೆ ಕೆಲಸ ಸುಲಭ ಸಿಗುತ್ತೆ’ ಅನ್ನುವ ಜನಪ್ರಿಯ ನಂಬಿಕೆಯನುಸಾರ ಪೀಸಿಎಂಬಿ ತೆಗೆದುಕೊಡಿದ್ದ ನನಗಂತೂ ಕೂತಲ್ಲಿ, ನಿಂತಲ್ಲಿ ಅದೇ ಧ್ಯಾನ, ಆತಂಕ, ಕಳವಳ.
ಫೇಲಾಗಿ ಬಿಟ್ಟರೆ ಎಲ್ಲರ ಎದುರು ಮುಖವೆತ್ತಿ ತಿರುಗುವುದು ಹೇಗೆ ಅನ್ನುವುದಕ್ಕಿಂತ, ಸುತ್ತ ಮುತ್ತಲಿನವರೆಲ್ಲ ಇಟ್ಟುಕೊಂಡಿರುವ ‘ಮಹಾ ಬುದ್ಧಿವಂತ, ಗ್ಯಾರಂಟಿ ಎಂಜಿನಿಯರೋ, ಡಾಕ್ಟರೋ ಆಗ್ತಾನೆ’ ಅನ್ನೋ ನಂಬಿಕೆ ಸುಳ್ಳಾಗಿಬಿಟ್ರೆ ಏನು ಕಥೆಯಪ್ಪ ? ಅನ್ನೋ ಅಳುಕೇ ಹೆಚ್ಚಾಗಿ ಕಿತ್ತು ತಿನ್ನುತ್ತಿತ್ತು. ಇನ್ನು ಮಿಕ್ಕಿದ್ದೆಲ್ಲ ಹೇಳುವ ಹಾಗೆ ಇಲ್ಲಾ ಬಿಡಿ – ಬೆಳಗಿನಿಂದ ಕಾಲೇಜು ಕ್ಲಾಸು, ಮುಗಿಯುತ್ತಿದ್ದಂತೆ ಸೈಕಲ್ ಏರಿ ಹೊರಟರೆ ಒಂದು ಕಡೆಯಿಂದ ಟ್ಯೂಶನ್ನಿನ ಪರಿಭ್ರಮಣನೆ.. ಎಂಜಿನಿಯರಿಂಗೋ, ಮೆಡಿಕಲ್ಲೋ ಆನ್ನೋ ಸಂದಿಗ್ದಕ್ಕೆ ಎಲ್ಲಾ ನಾಲ್ಕು ಸಬ್ಜೆಕ್ಟ್ಟಿಗೂ ಟ್ಯೂಷನ್.. ಮನೆಗೆ ಬಂದ ಮೇಲೆ ಮತ್ತೆ ರಿವಿಷನ್, ಸ್ಟಡಿ ನಡುರಾತ್ರಿಯವರೆಗೆ. ಇವಿಷ್ಟು ಬಿಟ್ಟರೆ ಬೇರೆ ಬದುಕೇ ಇಲ್ಲ ಅನ್ನೋ ತರಹದ ಜೀವನ. ಮತ್ತಷ್ಟು ಓದು