ನಿಜವಾದ ಹೀರೋಗಳಿವರು
– ಮಯೂರಲಕ್ಷ್ಮೀ.
ಅವರು ಯುವಕರು… ಅಪ್ರತಿಮ ಧೈರ್ಯ, ಸಾಹಸ ಪ್ರವೃತ್ತಿ, ತೇಜಸ್ಸು ಮತ್ತು ಸದ್ಗುಣಗಳು ಅವರಲ್ಲಿತ್ತು.. ಅವರಲ್ಲಿದ್ದ ನಾಯಕತ್ವ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತ ಜ್ಞಾನದಿಂದ ಅವರು ಏನನ್ನಾದರೂ ಸಾಧಿಸಬಹುದಿತ್ತು.. ಅದು ಬ್ರಿಟಿಷರು ಭಾರತೀಯರನ್ನು ದಾಸ್ಯದಲ್ಲಿಟ್ಟು ಆಳುತ್ತಿದ್ದ ಕಾಲ. ಆ ಮೂವರೂ ಯಾವುದೇ ಅಧಿಕಾರದ ಆಮಿಷಕ್ಕೆ ಒಳಗಾಗಲಿಲ್ಲ, ತಾವೇ ವಿಧಿಸಿಕೊಂಡ ದೇಶರಕ್ಷಣೆಯ ಕಟ್ಟುಪಾಡುಗಳನ್ನು ಮೀರದೆ ಆಂಗ್ಲರಿಂದ ದೇಶವನ್ನು ಮುಕ್ತಗೊಳಿಸಲು ಯಾವ ತ್ಯಾಗವನ್ನಾದರೂ ಮಾಡಲು ಸಿದ್ಧರಾದರು. ಅಂತೆಯೇ ತಮ್ಮ ಪ್ರಾಣವನ್ನೂ ದೇಶಕ್ಕಾಗಿ ಅರ್ಪಿಸಿದರು. ಈ ದೇಶ ಎಂದೂ ಮರೆಯದ ಮರೆಯಲಾಗದ ಯುವಚೇತನರು ಈ ಮೂವರು.. ನಮ್ಮ ಇಂದಿನ ಯುವಶಕ್ತಿಗೆ ನಿಜವಾದ ಮಾದರಿ ಇವರೇ…!
ಸಾವರ್ಕರ್ ಉಗ್ರಗಾಮಿ ಅಂದವರನ್ನು ಇತಿಹಾಸ ಹೇಗೆ ತಾನೆ ಕ್ಷಮಿಸೀತು?
-ಸಂಕೇತ್ ಡಿ ಹೆಗಡೆ, ಸಾಗರ
ಅಹಿಂಸೆಯ ಪ್ರತಿಪಾದಕರಿಗೆ ಸಂಪೂರ್ಣ ಗೌರವದಿಂದ ನಾನೊಂದು ಮೂಲಭೂತ ಪ್ರಶ್ನೆ ಕೇಳಬಯಸುತ್ತೇನೆ. ನಿಮಗ್ಯಾಕೆ ಹಿಂಸೆ ಮತ್ತು ಸ್ವರಕ್ಷಣೆಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ? ಎಂದು. ಹಿಂಸೆ ಅಪ್ರಚೋದಕವಾದ ಕ್ರೌರ್ಯ. ಸ್ವರಕ್ಷಣೆ ಹಿಂಸೆಯಲ್ಲ, ಅದೊಂದು ಅನಿವಾರ್ಯದ ಪ್ರತಿಕ್ರಿಯೆ. ಶಾರ್ಕ್ ಮೀನೊಂದು ಸಣ್ಣ ಮೀನುಗಳನ್ನು ತಿನ್ನಲು ಬಂದರೆ, ಸಣ್ಣ ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಶಾರ್ಕ್ ನ ಮೇಲೇ ದಾಳಿ ಮಾಡುತ್ತವೆ. ಅದು ಹಿಂಸೆಯೇನು? ಅಪರಿಚಿತನೊಬ್ಬ ಬೆಕ್ಕುಮರಿಯೊಂದನ್ನು ಬಲವಂತವಾಗಿ ಎತ್ತಿಕೊಳ್ಳಹೋದರೆ ಪರಚಿ ಹಾಕುತ್ತೆ. ಸುಂದರವಾಗಿ ಕಟ್ಟಿಕೊಂಡ ಜೆನೂಗೂಡಿಗೋ, ಕಷ್ಟಪಟ್ಟು ಕಟ್ಟಿಕೊಂಡ ಇರುವೆ ಗೂಡಿಗೋ ಹೋಗಿ ಒಂದು ಗುದ್ದು ಕೊಡಿ ನೋಡೋಣ. ಸಾಯುವಂತೆ ಕಚ್ಚಿ ಕಳಿಸುತ್ತವೆ. ಇವೆಲ್ಲ ನಿಮಗೆ ಹಿಂಸೆಯಂತೆ ಕಾಣುವುದೇನು? “Struggle For Existence” ಎಂದು ಡಾರ್ವಿನ್ ಹೇಳಿದ್ದು ಇಂಥವಕ್ಕೇ!