ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’! (ಲಘು ಹರಟೆ)
– ನಾಗೇಶ ಮೈಸೂರು
ಗುಬ್ಬಣ್ಣ ಅವತ್ಯಾಕೋ ತುಂಬಾ ‘ಖರಾಬ್ ಅಂಡ್ ಗರಂ’ ಮೂಡಿನಲ್ಲಿ ಮರಿ ಹಾಕಿದ ಬೆಕ್ಕಿನ ತರ ಬೀಟ್ ಹೊಡಿತಿದ್ದ ಲಿಟಲ್ ಇಂಡಿಯಾ ಒಳಗಿರೋ ಕರ್ಬಾವ್ ಸ್ಟ್ರೀಟಲ್ಲಿ.. ಅದೂ ಬೆಳ್ಳಂಬೆಳಿಗ್ಗೆ ಯಾರೂ ಓಡಾಡದೆ, ಬರಿ ಪಾರಿವಾಳಗಳು ಮಾತ್ರ ಅಕ್ಕಿಕಾಳು ಹೆಕ್ಕೋ ಹೊತ್ನಲ್ಲಿ..
ಈ ‘ಬೀದಿನಾಮ’ಗಳು ಎಲ್ಲೂ ಕೇಳಿದ ಹಾಗಿಲ್ಲವಲ್ಲ ಅಂತ ಅನ್ಸಿದ್ರೆ ಅದರಲ್ಲೇನು ವಿಶೇಷ ಇಲ್ಲ ಬಿಡಿ – ಯಾಕೆಂದ್ರೆ ಗುಬ್ಬಣ್ಣನ ಠಿಕಾಣೆ ಇರೋದೇ ಸಿಂಗಪುರ ಅನ್ನೋ ಪುಟ್ಟ ‘ರೆಡ್ ಡಾಟ್ನಲ್ಲಿ’. ಸಿಂಗಪುರವೇ ರೆಡ್ ಡಾಟ್ ಆದ ಮೇಲೆ ಇನ್ನು ಅದರಲ್ಲಿರೋ ‘ಲಿಟಲ್ ಇಂಡಿಯಾ’ ಅನ್ನೋ ಮೈಕ್ರೋ ಡಾಟ್ ಕೇಳಬೇಕೆ ? ಸಿಂಗಪುರ ಮ್ಯಾಪಲ್ಲೇ ಲೆನ್ಸ್ ಹಾಕ್ಕೊಂಡು ಹುಡುಕಬೇಕು ಅನ್ನೋ ಹಾಗಿರುತ್ತೆ. ಇನ್ನು ಅದರೊಳಗಿರೊ ‘ಕರ್ಬಾವ್ ಸ್ಟ್ರೀಟ್’ ಅನ್ನೋ ‘ನ್ಯಾನೋ ಡಾಟ್’ ಬಗ್ಗೆ ಹೇಳೊ ಹಾಗೆ ಇಲ್ಲ ಅಂತ ಮೂಗು ಮುರಿಬೇಡಿ. ಸುತ್ತಮುತ್ತಲ ಜಾಗದ ಸಿಂಗಪುರದಲ್ಲಿ ‘ಕಲ್ಚರಲ್ ಹೆರಿಟೇಜ್ ಸೈಟ್’ ಅಂತ ಗುರ್ತಿಸಿರೋದ್ರಿಂದ ಇದೊಂದು ಇಂಪಾರ್ಟೆಂಟ್ ಟೂರಿಸ್ಟ್ ಸ್ಪಾಟ್.. ಅದರ ಪಕ್ಕದಲ್ಲೇ ಮನೆ ಇರೋ ನನಗೆ ‘ರಿಯಲ್ ಎಸ್ಟೇಟ್’ ಪಾಯಿಂಟಿನಿಂದ ಈ ‘ನ್ಯಾನೋ ಡಾಟ್’ ಇನ್ನೂ ತುಂಬಾ ಇಂಪಾರ್ಟೆಂಟು..! ಮತ್ತಷ್ಟು ಓದು