ಈ ಪ್ರತ್ಯೇಕತಾ ಭಾವ ಹುಟ್ಟುತ್ತಿರುವುದು ಎಲ್ಲಿಂದ..?
– ಡಾ. ಮೋಹನ್ ತಲಕಾಲುಕೊಪ್ಪ
ನಮ್ಮ ಸಾಗರದ ಸುಹಾನಾ ಅವರ ಸುಶ್ರಾವ್ಯ ಗಾಯನ, ಅದಕ್ಕೆ ತೀರ್ಪುಗಾರರ ಹಾಗೂ ನಿರೂಪಕಿಯ ನಾಟಕೀಯ, ಧಾರ್ಮಿಕ ಹಾಗೂ ಟಿಆರ್ ಪಿ ಪ್ರೇರಿತ ಮಾತುಗಳ ಹಿನ್ನೆಲೆಯಲ್ಲಿ ಈ ಪೋಸ್ಟ್.
ಅಲ್ಲ ಮಾರಾಯರೆ, ಬ್ರಾಹ್ಮಣರು, ಲಿಂಗಾಯಿತರು, ಗೌಡರು, ಕುರುಬರು, ದಲಿತರು, ಜೈನರು, ಸಿಖ್ಖರು, ಬೌದ್ಧರು, ಜಾಟರು ಇತ್ಯಾದಿ ಸಮುದಾಯಗಳು ಇದ್ದ ಹಾಗೆ ಭಾರತದಲ್ಲಿರುವ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಕೂಡಾ ಒಂದೊಂದು ಸಮುದಾಯ, ಅವರಿಗೆ ಎಲ್ಲ ಸಮುದಾಯಗಳಂತೆ, ದೇವರು, ಸಂಪ್ರದಾಯ, ರೀತಿ-ರಿವಾಜು, ಉಡುಗೆ-ತೊಡುಗೆ, ಆಹಾರ ವಿಶೇಷಗಳಿವೆ ಎಂದು ಭಾವಿಸಿದರೆ ಈಗಿನ ಸಮಸ್ಯೆಗಳೆಲ್ಲಾ ಪರಿಹಾರ ಅಂತ ನನಗನ್ನಿಸುತ್ತದೆ. ಅವರು ಎಲ್ಲರಂತೆ ಅಂತ ತಿಳಿದು ವರ್ತಿಸಿದರೆ ಏನು ತೊಂದರೆ? ಅವರಿಗೆ ವಿಶೇಷ ಗಮನವೂ ಬೇಡ. ನಿರ್ಲಕ್ಷ್ಯವೂ ಸಲ್ಲದು. ಸಹಜವಾಗಿ ಮನುಷ್ಯರಂತೆ ಭಾವಿಸಿದರೆ ಏನಾಗುತ್ತದೆ? ಮತ್ತಷ್ಟು ಓದು
ಅಸಹಿಷ್ಣುತೆ, ಅನೈತಿಕತೆ ಮತ್ತು ನಮ್ಮ ಬೌದ್ಧಿಕ ಜಗತ್ತು
– ಎಂ. ಎಸ್. ಚೈತ್ರ
ನಿರ್ದೇಶಕರು, ಆರೋಹಿ ಸಂಶೋಧನಾ ಸಂಸ್ಥೆ.
ಬೆಂಗಳೂರು.
ಧಾರವಾಡದ ಸಾಹಿತ್ಯ ಸಂಭ್ರಮದ ಗೋಷ್ಠಿಯೊಂದರಲ್ಲಿ ಕಲಬುರ್ಗಿಯವರ ಹತ್ಯೆಯನ್ನು ಕುರಿತು ಅಜ್ಜಂಪುರ ಮಂಜುನಾಥ್‍ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಗತಿಪರರ ದಾಂಧಲೆಯನ್ನು ಎದುರಿಸಬೇಕಾಯಿತು. ಈ ಕುರಿತು ಪ್ರಜಾವಾಣಿಯಲ್ಲಿ ಪದ್ಮರಾಜ್ ದಂಡಾವತಿಯವರು (ದಿನಾಂಕ 29 ಜನವರಿ 2017), ನಮ್ಮ ಕನ್ನಡದ ಪ್ರಗತಿಪರ ಬುದ್ಧಿಜೀವಿಗಳು, ಕಲ್ಬುರ್ಗಿಯವರ ಹತ್ಯೆ ಬಲಪಂಥೀಯರಿಂದಲೇ ನಡೆದದ್ದು ಎಂಬ ಬಿಂಬವೊಂದನ್ನು ಕಾಯ್ದಿಟ್ಟುಕೊಳ್ಳುವ ಭರದಲ್ಲಿ ಘಟನೆಯೊಂದರ ಸತ್ಯಾಸತ್ಯತೆ ಮತ್ತು ಅದಕ್ಕೆ ಇರಬಹುದಾದ ವಿವಿಧ ಆಯಾಮಗಳನ್ನು ಮಾತನಾಡಲೂ ಅವಕಾಶ ಕೊಡದೆ, ಅಸಹಿಷ್ಣುಗಳಾಗುತ್ತಿದ್ದಾರೆಂದು ಟೀಕಿಸಿದ್ದರು. ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಸಾಮಾಜಿಕ ಜಾಲತಾಣವೊಂದರಲ್ಲಿ (ಮಾಧ್ಯಮನೆಟ್.ಕಾಂ) ರಾಜೇಂದ್ರ ಚೆನ್ನಿಯವರು ದಂಡಾತಿಯವರ ಮೇಲೆ ತೀವ್ರವಾಗಿ ಹರಿಹಾಯ್ದಿದ್ದಾರೆ. ಚೆನ್ನಿಯವರ ಪ್ರತಿಕ್ರಿಯೆಯು ಕನ್ನಡದ ಬೌದ್ಧಿಕ ಜಗತ್ತಿನ ಕುರಿತು ಏನನ್ನು ಹೇಳುತ್ತಿದೆ ಎಂಬುದನ್ನು ಈ ಲೇಖನ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತದೆ. ಮತ್ತಷ್ಟು ಓದು