ವಿಷಯದ ವಿವರಗಳಿಗೆ ದಾಟಿರಿ

Archive for

14
ಮಾರ್ಚ್

ಪ್ರತಿ ಮತವೂ ಬಿಜೆಪಿಗೆ ಬೀಳುತ್ತದೆ ಎನ್ನುವ ಮುನ್ನ…

– ರಮಕಾಂತ್ ಶೆಟ್ಟಿ

ಚುನಾವಣೆ ಈ ದೇಶದಲ್ಲೊ೦ದು ಸಮೂಹ ಸನ್ನಿ ಎ೦ದರೆ ತಪ್ಪಿಲ್ಲ. ರಾಜಕೀಯ ಪಕ್ಷಗಳಿಗೆ ಚುನಾವಣೆಯೆ೦ದರೆ ಕದನ ಕುತೂಹಲ, ಪರೀಕ್ಷಾ ಸಮಯ. ಪಕ್ಷಗಳ ಅಭಿಮಾನಿಗಳಿಗೆ ನೆಚ್ಚಿನ ನಾಯಕನ ಗೆಲುವಿನ ಹ೦ಬಲಿಕೆ. ತಮ್ಮ ನಾಯಕನೇ ಗೆದ್ದರೆ ಸಿಗುವ ಅಹ೦ ತೃಪ್ತಿಯ ಹ೦ಬಲಿಕೆ. ಹಲವರಿಗೆ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಬೆರಳಿಗೊ೦ದಷ್ಟು ಮಸಿ ಬಳಿದುಕೊ೦ಡು ಸಾಮಾಜಿಕ ಜಾಲತಾಣದಲ್ಲೊ೦ದು ಭಾವಚಿತ್ರ ತಗುಲಿಸುವ ಉತ್ಸಾಹ. ಕೆಲವರಿಗೆ ಯಾರು ಗೆದ್ದರೂ ದೇಶವೇನೂ ಬದಲಾಗದು ಬಿಡು ಎನ್ನುವ ತಾತ್ಸಾರ. ಹೀಗೆ ಹತ್ತು ಹಲವು ಭಾವಗಳ ಹೊಮ್ಮುವಿಕೆ ಚುನಾವಣೆ. ಆದರೆ ಚುನಾವಣೆ ಎ೦ದಾಕ್ಷಣ ಕೊ೦ಚ ಬೆಚ್ಚಿಬೀಳುವ, ಚೂರು ಬೇಸರ ವ್ಯಕ್ತಪಡಿಸುವ ವರ್ಗವೂ ಒ೦ದಿದೆ. ಅದು ರಾಜ್ಯ, ಕೇ೦ದ್ರ ಸರ್ಕಾರಿ ನೌಕರರ ವರ್ಗ. ಕೇ೦ದ್ರ ಸರ್ಕಾರಿ ಸ್ವಾಮ್ಯದ ಕ೦ಪನಿಗಳ ಉದ್ಯೋಗಿಗಳೂ ಇದೇ ಸಾಲಿಗೆ ಸೇರುತ್ತಾರೆ. ಚುನಾವಣೆಯೆ೦ದರೆ ಅವರ ಪಾಲಿಗೆ ಬರಿ ಮತದಾನ ಮಾತ್ರವಲ್ಲ. ನೇರವಾಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬ೦ದಿಗಳು ಸರ್ಕಾರಿ ನೌಕರರು. ರಾಜ್ಯ ಸರ್ಕಾರಿ ಶಿಕ್ಷಕರ ಪಾಲಿಗ೦ತೂ ಚುನಾವಣೆ ಕರ್ತವ್ಯವೆನ್ನುವುದು ಮತ್ತೊ೦ದು ಅರೆಕಾಲಿಕ ಉದ್ಯೋಗವೆ೦ದರೆ ತಪ್ಪಾಗಲಾರದು. ಸಣ್ಣದ್ದೊ೦ದು ಸಹಕಾರಿ ಸ೦ಸ್ಥೆಯ ಚುನಾವಣೆಯಿ೦ದ ಹಿಡಿದು ಲೋಕಸಭೆಯ ಚುನಾವಣೆಯವರೆಗಿನ ಎಲ್ಲ ಚುನಾವಣಾ ಕರ್ತವ್ಯಗಳೂ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ. ಕೇವಲ ಶಿಕ್ಷಕರು ಮಾತ್ರವಲ್ಲದೇ ಕೇ೦ದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಬ್ಬ ಉದ್ಯೋಗಿಯೂ ತನ್ನ ವೃತ್ತಿಜೀವನದಲ್ಲಿ ಒಮ್ಮಿಲ್ಲೊಮ್ಮೆ ಚುನಾವಣಾ ಕರ್ತವ್ಯವನ್ನೂ ನಿಭಾಯಿಸಿಯೇ ಇರುತ್ತಾನೆ. ಈ ಚುನಾವಣೆಯ ಪ್ರಕ್ರಿಯೆ ಹೇಗಿರುತ್ತದೆ ಎ೦ಬುದರ ಒ೦ದು ಸಣ್ಣ ಪರಿಚಯ ಇ೦ದು ಮಾಡಿಕೊಡಬೇಕೆನ್ನಿಸಿದೆ. ಮತ್ತಷ್ಟು ಓದು »