ವಿಷಯದ ವಿವರಗಳಿಗೆ ದಾಟಿರಿ

Archive for

27
ಮಾರ್ಚ್

ನಿಮ್ಮ ಮಕ್ಕಳನ್ನು ಗಿಣಿಯಂತೆ ಸಾಕಿ ಪ್ರಗತಿಪರರ ಕೈಗೊಪ್ಪಿಸಬೇಡಿ..

– ಪ್ರವೀಣ್ ಕುಮಾರ್ ಮಾವಿನಕಾಡು

ಆಕೆ ನನಗಿಂತಾ ಎರಡು ಮೂರು ವರ್ಷ ದೊಡ್ಡವಳು. ನನ್ನದೇ ಶಾಲೆಯಲ್ಲಿ ನನ್ನ ಹಿರಿಯ ವಿದ್ಯಾರ್ಥಿಯಾಗಿದ್ದವಳು. ನನ್ನಂತೆಯೇ ನಾಲ್ಕೈದು ಮೈಲಿ ದೂರದಿಂದ ಗದ್ದೆ, ಬಯಲು, ಗುಡ್ಡ, ಹಾಡ್ಯ, ಒಳ ದಾರಿಗಳನ್ನು ದಾಟಿ ಶಾಲೆಗೆ ಬರುತ್ತಿದ್ದಳು. ನನಗೆ ಪಾಠ ಮಾಡಿದ ಶಿಕ್ಷಕರೇ ಆಕೆಗೂ ಪಾಠ ಮಾಡಿದ್ದರು. ಆದರೆ ಆಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ನನಗಿಂತಲೂ ತುಂಬಾ ಚುರುಕಾಗಿದ್ದಳು. ಆದರೆ ನಾನಿನ್ನೂ ಬದುಕಿದ್ದೇನೆ. ಆಕೆ ಪೊಲೀಸರ ಗುಂಡಿಗೆ ಬಲಿಯಾಗಿ ಒಂದು ದಶಕವೇ ಕಳೆದಿದೆ!

ಆ ವರ್ಷ ನಮ್ಮ ಪ್ರೌಢಶಾಲೆಯ ಬೆಳ್ಳಿ ಹಬ್ಬ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಏಳನೇ ತರಗತಿ ಮುಗಿಸಿದ ನಂತರ ಸೇರುತ್ತಿದ್ದುದು ಅದೇ ಪ್ರೌಢಶಾಲೆಗೆ. ಹಾಗಾಗಿ ಹತ್ತಾರು ಹಳ್ಳಿಗಳಲ್ಲೂ ಬೆಳ್ಳಿ ಹಬ್ಬದ ಸಂಭ್ರಮ. ಬೆಳ್ಳಿ ಹಬ್ಬದ ಸಂಭ್ರಮವನ್ನು ಸ್ಮರಣೀಯಗೊಳಿಸಲು ಶಾಲೆಯಿಂದ ವಿದ್ಯಾರ್ಥಿಗಳ ಬರಹಗಳೇ ತುಂಬಿರುವ ಸ್ಮರಣಸಂಚಿಕೆಯೊಂದನ್ನು ಹೊರತರಲಾಯಿತು. ಆ ಸ್ಮರಣಸಂಚಿಕೆಯಲ್ಲಿ ಕೆಲವು ಮಕ್ಕಳು ನಗೆ ಹನಿಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ಮಲೆನಾಡಿನ ಸೊಬಗನ್ನು ವರ್ಣಿಸಿ ಬರೆದಿದ್ದರು. ಕೆಲವು ವಿದ್ಯಾರ್ಥಿಗಳು ಶಾಲೆಯ ಅನುಭವಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಬೆಳಕು ಚೆಲ್ಲುವ ಬರಹಗಳನ್ನು ಬರೆದಿದ್ದರು. ಬುದ್ದಿವಂತೆ ಎಂದು ಗುರುತಿಸಿಕೊಂಡಿದ್ದ ಆಕೆ ಮಾತ್ರ ಬಡತನ, ಶೋಷಣೆ, ಜಮೀನ್ದಾರೀ ಪದ್ಧತಿಯ ಬಗ್ಗೆ ತನಗನ್ನಿಸಿದ ರೀತಿಯಲ್ಲಿ ಹಲವು ಬರಹಗಳನ್ನು ಬರೆದಿದ್ದಳು. ಮತ್ತಷ್ಟು ಓದು »