ನೆನಪುಗಳೊಂದಿಗೆ ಯುಗಾದಿ…
– ಗೀತಾ ಹೆಗ್ಡೆ
ಅನೇಕ ಸಲ ನಾವಂದುಕೊಳ್ಳುತ್ತೇವೆ; ಈ ನೆನಪುಗಳು ಇರಲೇಬಾರದು. ಅದರಲ್ಲೂ ಕಹಿ ನೆನಪುಗಳಂತೂ ಪೂರ್ತಿ ಮರೆತು ಹೋಗಬೇಕು. ಬರಿ ಸಿಹಿ ಸಿಹಿ ನೆನಪುಗಳೆ ಇದ್ದರೆ ಸಾಕು. ಎಷ್ಟು ಖುಷಿಯಾಗಿರಬಹುದು. ಛೆ! ಯಾಕೆ ಬರುತ್ತೋ ಈ ನೆನಪು, ಜೀವ ಹೈರಾಣೋಗುತ್ತಿದೆ ಈ ಕೆಟ್ಟ ನೆನಪು. ಮರುಕಳಿಸಬಾರದಿತ್ತು. ಯಾರಲ್ಲೂ ಹೇಳಿಕೊಳ್ಳಲೂ ಆಗೋದಿಲ್ಲ, ಒಬ್ಬನೆ ಅನುಭವಿಸೋಕೂ ಆಗೋದಿಲ್ಲ. ರಾತ್ರಿ ನಿದ್ದೆ ಕೂಡಾ ಕಸಿದುಕೊಂಡುಬಿಡುತ್ತದಲ್ಲಾ. ಹಾಸಿಗೆಯಲ್ಲಿ ನಿದ್ದೆ ಇಲ್ಲದೆ ಹೊರಳಾಟ. ಅಬ್ಬಾ! ಎಷ್ಟು ಶಕ್ತಿ ಇದಕ್ಕೆ. ಮತ್ತಷ್ಟು ಓದು