ಪೀರಾಯರು ಬರೆದ ಕಥೆ – ‘ತ್ರಿಕೋನ’ ( ಮುಂದುವರೆದ ಭಾಗ )
– ಮು. ಅ ಶ್ರೀರಂಗ ಬೆಂಗಳೂರು
ರಾಮಾಚಾರ್ಯರು ಸಂಜೆ ಐದು ಗಂಟೆಗೆ ಆಶ್ರಮದ ಶಾಲೆಯಿಂದ ಬಂದು ತಮ್ಮ ಕೊಠಡಿಯಲ್ಲಿ ಕೂತಿದ್ದರು. ಎಂದಿನಂತೆ ಅಡುಗೆಯವನು ಫ್ಲಾಸ್ಕಿನಲ್ಲಿ ಕಾಫಿ ತಂದು ಅವರ ಟೇಬಲ್ ಮೇಲೆ ಇಟ್ಟು ‘ಆಚಾರ್ಯರೇ ರಾತ್ರಿಗೆ ಏನು ಅಡಿಗೆ ಮಾಡಲಿ’ ಎಂದ.
‘ಬೆಳಗ್ಗೆಯ ಸಾರು ಮಿಕ್ಕಿರಬಹುದು. ಯಾವುದಾದರೊಂದು ಪಲ್ಯ ಮಾಡು ಸಾಕು. ಇವತ್ತು ಚಪಾತಿ ಬೇಡ’.
‘ಆಗಲಿ ಸ್ವಾಮಿ’ ಎಂದು ಅವನು ಕೊಠಡಿಯ ಬಾಗಿಲನ್ನು ಮುಂದಕ್ಕೆ ಎಳದು ಕೊಂಡು ಹೋದ. Read more