ವಿಷಯದ ವಿವರಗಳಿಗೆ ದಾಟಿರಿ

Archive for

19
ಮೇ

ಕೈ ಜಾರುತ್ತಿರುವ ಜಮ್ಮುಕಾಶ್ಮೀರ ; ನೆನಪಾಗುವ ಜಗಮೋಹನ್

– ರಾಕೇಶ್ ಶೆಟ್ಟಿ

ಕಳೆದ 5 ತಿಂಗಳಿನಲ್ಲಿ ಸೇನೆಯ ಮೇಲೆ 7 ದಾಳಿಗಳು ; ಮೇ 2ನೇ ತಾರೀಖು ಇಬ್ಬರು ಭಾರತೀಯ ಯೋಧರ ತಲೆಕಡಿಯಲಾಯಿತು;2 ಬ್ಯಾಂಕುಗಳ ದರೋಡೆ,ಹತ್ಯೆಗಳು; ರಾಜ್ಯ ಸರ್ಕಾರವೇ ಭದ್ರತಾ ದೃಷ್ಟಿಯಿಂದ 40 ಬ್ಯಾಂಕುಗಳಲ್ಲಿ ನಗದು ವ್ಯವಹಾರ ಮಾಡದಂತೆ ಸೂಚಿಸಿದ್ದು; ಸಹೋದರಿಯ ಮದುವೆಗೆಂದು ರಜೆಯಲ್ಲಿ ಮನೆಗೆ ಬಂದಿದ್ದ ಯೋಧನನ್ನು ಅಪಹರಿಸಿ,ಚಿತ್ರಹಿಂಸೆ ನೀಡಿ ಹತ್ಯೆ;ಹುತಾತ್ಮ ಯೋಧನ ಶವಯಾತ್ರೆಯಲ್ಲಿ ಕಲ್ಲು ತೂರಾಟ;ಎನ್ಕೌಂಟರಿನಲ್ಲಿ ಸತ್ತ ಉಗ್ರನ ಶವಯಾತ್ರೆಯಲ್ಲಿ ಪ್ರತ್ಯಕ್ಷವಾದ ಉಗ್ರರಿಂದ ಗಾಳಿಯಲ್ಲಿ ಗುಂಡು,ಪ್ರತೀಕಾರದ ಕೂಗು;ಆಡಳಿತಾರೂಢ ಪಿಡಿಪಿ ಪಕ್ಷದ ಪುಲ್ವಾಮ ಜಿಲ್ಲಾಧ್ಯಕ್ಷನನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಇವೆಲ್ಲ ಘನಂಧಾರಿ ಸಾಧನೆಗಳಾಗಿರುವುದು ಆಗುತ್ತಿರುವುದು ಜಮ್ಮುಕಾಶ್ಮೀರ ರಾಜ್ಯದಲ್ಲಿ.ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಉಗ್ರ ಬರ್ಹಾನ್ ವನಿಯ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರ, Demonetization ಮತ್ತು ಸರ್ಜಿಕಲ್ ಸ್ಟ್ರೈಕ್ ನಂತರ ತಾತ್ಕಾಲಿಕವಾಗಿ ತಣ್ಣಗಾಗಿತ್ತಾದರೂ ಈಗ ಭೀಕರ ಹಂತಕ್ಕೆ ಹೊರಟಿರುವಂತೆ ತೋರುತ್ತಿದೆ.ಜಮ್ಮುಕಾಶ್ಮೀರ ರಾಜ್ಯದಿಂದ ಈಗ ಬರುತ್ತಿರುವ ಸುದ್ದಿಗಳು 90ರ ದಶಕವನ್ನು ಮತ್ತೊಮ್ಮೆ ನೆನಪಿಸುತ್ತಿರುವುದು ಸುಳ್ಳಲ್ಲ. 90ರ ದಶಕದಲ್ಲೂ ಹೀಗೆ ಕಾನೂನು-ಸುವ್ಯವಸ್ಥೆಯೆನ್ನುವುದು ಹಾಳು ಬಿದ್ದು ಹೋಗಿತ್ತು.ಆಗಲೂ ಹೀಗೆ ಉಗ್ರಗಾಮಿಗಳು ಕಾಶ್ಮೀರಿಗಳ ಮನೆಬಾಗಿಲು ತಟ್ಟುತ್ತಿದ್ದರು,ಅನಾಮತ್ತಾಗಿ ಮನೆಯಿಂದ ಎತ್ತಾಕಿಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿದ್ದರು.ಈಗ ಹೊತ್ತಿ ಉರಿಯುತ್ತಿರುವ ದಕ್ಷಿಣ ಕಾಶ್ಮೀರದ ಸ್ಥಿತಿ ಮತ್ತೆ 90ರ ದಶಕಕ್ಕೆ ಹೊರಳಿ ನಿಂತಂತಿದೆ.

ಮತ್ತಷ್ಟು ಓದು »

19
ಮೇ

ಅಂಕಣರಂಗ-೨ : ಡಿ. ವಿ. ಪ್ರಹ್ಲಾದ್ ಅವರ ‘ಹೊಳೆದದ್ದು ತಾರೆ … ಕೆಲವು ಸಂಪಾದಕೀಯಗಳು’ ಪುಸ್ತಕ ಪರಿಚಯ

– ಮು. ಅ ಶ್ರೀರಂಗ ಬೆಂಗಳೂರು

ಹೊಳೆದದ್ದು ತಾರೆ:

pexels-photo-302440ಬೆಂಗಳೂರಿನಿಂದ ಪ್ರಕಟವಾಗುವ ಸಂಚಯ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಡಿ ವಿ ಪ್ರಹ್ಲಾದ್ ಅವರು ಈ ಪುಸ್ತಕದಲ್ಲಿ ‘ನಿಮ್ಮೊಡನೆ’ ಎಂಬ ಶೀರ್ಷಿಕೆಯಲ್ಲಿ ಓದುಗರ ಜತೆ ತಾವು ನಡೆದು ಬಂದ ದಾರಿಯನ್ನು ಈ ರೀತಿ ಹಂಚಿಕೊಂಡಿದ್ದಾರೆ. ‘೧೯೮೭ರಿಂದ ಬರೆದಿರುವ ಸಂಪಾದಕೀಯಗಳಲ್ಲಿ ಆಯ್ದ ಕೆಲವು ಈ ಹೊತ್ತಿಗೆಯ ರೂಪದಲ್ಲಿದೆ. ಮೊದಲ ಸಂಚಿಕೆಯಿಂದಲೂ ಸಂಪಾದಕೀಯ ಆಯಾ ಸಂದರ್ಭಕ್ಕೆ ಪ್ರತಿಸ್ಪಂದನದ ರೂಪದಲ್ಲಿರುತ್ತಿತ್ತು. ಜೆರಾಕ್ಸ್ ಫೋಟೋ ಪ್ರತಿಯ ಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಯ ಮೊದಲ ಬೆನ್ನುಪುಟದಲ್ಲಿ ಒಂದು ಪ್ಯಾರದಷ್ಟು ಬರೆಯಲು ಜಾಗವಿರುತ್ತಿತ್ತು. ಹಾಗೇ ಮೊದಮೊದಲ ಹದಿನಾರು ಪುಟಗಳ ಪ್ರಿಂಟು ಅವತರಣಿಕೆಯಲ್ಲೂ. ‘ಸಂಚಯ’ ಎನ್ನುವ ಗೆಳೆಯರ ಗುಂಪಿನ ಭಾಗವಾಗಿದ್ದ ಈ ಸಾಹಿತ್ಯ ಪತ್ರಿಕೆ ಮೊದಲು ಕೆಲವು ಕಾಲ ಡಿ ವಿ ಪ್ರಹ್ಲಾದ್ ಮತ್ತು ಮಂಡಳಿ ಅಂತ ಪ್ರಕಟಗೊಳ್ಳುತ್ತಿತ್ತು’. ಮಂಡಳಿಗಳು ಮುಗಿದು ಚದುರಿದ ಮೇಲೆ ಪ್ರಹ್ಲಾದರೂ ಸೇರಿದಂತೆ ಉಳಿದವರು ಮೂವರು ಮಾತ್ರ . ‘ಕೊನೆಗೆ ಉಳಿದದ್ದು ಪ್ರಹ್ಲಾದ್ ಅವರೊಬ್ಬರೇ’. ಮತ್ತಷ್ಟು ಓದು »