ಅಮಿತ್ ಷಾ ಲಕ್ಷದ್ವೀಪ ಪ್ರವಾಸ ವಿಸ್ತಾರದ ಮತ್ತೊಂದು ಮಜಲು…
ಸಂತೋಷ್ ಬಿ.ಎಲ್
ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ
ಭಾಜಪ
ವಿಸ್ತಾರ-ವಿಕಾಸ ಬಿಜೆಪಿಗೆ ಒಂದೇ ನಾಣ್ಯದ ಎರಡು ಮುಖಗಳು. ಬಹುಮತದಲ್ಲಿ ನಿಲ್ಲದೇ ಸರ್ವವ್ಯಾಪಿಯಾಗಬೇಕು.. ಸರ್ವಸ್ಪರ್ಶಿಯಾಗಬೇಕು ಎಂಬುದು ಬಿಜೆಪಿಯ ಗುರಿ. ವಿಚಾರ-ವಿಕಾಸ-ಸಂಘಟನೆ ನಮ್ಮ ಬೆಳವಣಿಗೆಯ ಮೂರು ಆಯಾಮಗಳು. ವಿಕಾಸ ಪುರುಷ ನರೇಂದ್ರ ಮೋದಿಯವರ ನೇತೃತ್ವ ವಿಸ್ತಾರ ಪುರುಷ ಅಮಿತ್ ಷಾರವರ ಸಾರಥ್ಯ ಇಂದು ಬಿಜೆಪಿಯನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯುತ್ತಿದೆ. ಪ್ರತೀ ಮನೆ-ಮನವನ್ನು ಮುಟ್ಟುವ ಯೋಜನೆಯೊಡನೆ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಎಂಬ ಗುರಿಯೊಡನೆ ಬಿಜೆಪಿಯ ಯಾತ್ರೆ ಭರದಿಂದ ಸಾಗಿದೆ. ಪಂ.ದೀನದಯಾಳ ಉಪಾಧ್ಯಾಯ ಜನ್ಮಶತಾಬ್ದಿ ವರ್ಷ ಈ ಯಾತ್ರೆಗೆ ಇನ್ನಷ್ಟು ಹುರುಪು ತುಂಬಿದೆ. 3 ಸಾವಿರಕ್ಕೂ ಮಿಕ್ಕಿ 1 ವರ್ಷದ ‘ವಿಸ್ತಾರಕ’ರು ಹಾಗೂ 4 ಲಕ್ಷಕ್ಕೂ ಹೆಚ್ಚು 15 ದಿನ ಸಮಯ ನೀಡುವ ‘ವಿಸ್ತಾರಕ’ರನ್ನು ಹೊರಡಿಸುವುದು ನಮ್ಮ ಗುರಿ. ಆ ಗುರಿಗೆ ಚೈತನ್ಯ ತುಂಬಲು ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾರವರು ಸ್ವತಃ ತಾವು 15 ದಿನ ವಿಸ್ತಾರಕರಾಗಿ ‘ವಿಸ್ತಾರ ಯಾತ್ರೆ’ ಘೋಷಣೆ ಮಾಡಿದರು. ಪಶ್ಚಿಮ ಬಂಗಾಲ, ಓರಿಸ್ಸಾ, ತೆಲಂಗಾಣ, ಲಕ್ಷದ್ವೀಪ ಹಾಗೂ ಗುಜರಾತ್‌ನಲ್ಲಿ 3 ದಿನ ಕೆಲಸ ಮಾಡುವ ಸಂಕಲ್ಪ ಘೋಷಿಸಿದರು. ಈ ಘೋಷಣೆಯೇ ಪಕ್ಷದ ಒಳಗೆ ವಿದ್ಯುತ್ ಸಂಚಾರ ಮೂಡಿಸಿತು. ಮತ್ತಷ್ಟು ಓದು
ಯಶಸ್ಸಿನಿಂದ ಮುನ್ನುಗ್ಗುತ್ತಿರುವ #ಗೋಪ್ರಾಣಭಿಕ್ಷೆ
-ಶಿಶಿರ್ ಅಂಗಡಿ
ಸಾಮೂಹಿಕ ಪ್ರಾರ್ಥನೆ,ಸಮಾಜದ ಸಹಾಕರ ~ ಯಶಸ್ಸಿನಿಂದ ಮುನ್ನುಗ್ಗುತ್ತಿರುವ #ಗೋಪ್ರಾಣಭಿಕ್ಷೆ
ಪ್ರಾರ್ಥನೆ ಅಂದ್ರೆ ನಿಸ್ವಾರ್ಥವಾಗಿ ಒಳ್ಳೆಯ ಕೆಲಸಗಳನ್ನು ಮಾಡೋದು.ಪ್ರಾರ್ಥನೆ ಅಂದ್ರೆ ರಸ್ತೆ ದಾಟಲು ಕಷ್ಟ ಪಡುತ್ತಿರುವ ವೃದ್ಧರಿಗೆ, ಮಕ್ಕಳಿಗೆ ಸಹಾಯ ಮಾಡುವದು.ಪ್ರಾರ್ಥನೆ ಅಂದ್ರೆ ಇನ್ನೊಬ್ಬರಿಗೆ ಹೃದಯಾಂತರಾಳದಿಂದ ಶುಭವನ್ನು ಹಾರೈಸುವುದು.ಸಾಮೂಹಿಕ ಪ್ರಾರ್ಥನೆಗೆ ದೇವರನ್ನೇ ಧರೆಗಿಳಿಸುವ ಶಕ್ತಿ ಇದೆ ಅಂತ ಹೇಳ್ತಾರೆ.ಪ್ರಾರ್ಥನೆ ಎಂದರೆ ದೇವರ ಎದುರಿನಲ್ಲಿ ಬೇಡುವುದು ಎಷ್ಟು ಸರಿಯೋ, ಇನ್ನೊಬ್ಬರಿಗೆ ಒಳಿತು ಬಯಸುವುದು, ಒಳಿತನ್ನು ಮಾಡುವುದು ಕೂಡ ಅಷ್ಟೇ ಸರಿ ಎನ್ನುತ್ತಾರೆ ಬಲ್ಲವರು.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಸಾವಿನಂಚಿನಲ್ಲಿರುವ ಗೋವುಗಳ ಶೋಷನೀಯ ಸ್ಥಿತಿ ಮನಗಂಡು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಕೊಟ್ಟ ಒಂದು ಕರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಗೋಪ್ರೇಮಿಗಳು ದೇಶದ ಉದ್ದಗಲಗಳಿಂದ ದೊಡ್ಡ ಮಟ್ಟದಲ್ಲಿ ಸ್ಪಂದಿಸಿ ಸರಳ ಭೋಜನ – ಸರಳ ಜೀವನದೊಟ್ಟಿಗೆ ವಾರಕ್ಕೆ ಒಂದು ಹೊತ್ತಿನ ಊಟ ಬಿಟ್ಟು ಆ ಹಣವನ್ನು ಗೋಪ್ರಾಣಭಿಕ್ಷೆಗೆ ಸಮರ್ಪಿಸಿದ್ದಾರೆ. ಈ ಮೂಲಕ ಸಾವಿರಾರು ಟನ್ ಮೇವು ಖರೀದಿಗೆ ಸಹಕರಿಸಿದ್ದಾರೆ. ನೂರಾರು ಕಾರ್ಯಕರ್ತರು ಬೆಟ್ಟದ ತಪ್ಪಲಿನಲ್ಲಿ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಾ ದಿನನಿತ್ಯ ಸಮಯಕ್ಕೆ ಸರಿಯಾಗಿ ಗೋವಿಗೆ ಮೇವು ತಲುಪುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #GiveUpAMeal ಅಭಿಯಾನಗಳ ಮೂಲಕ ದೇಶದ ಒಳ ಹೊರಗಿನ ಒಂದು ಮಿಲಿಯನಗೂ ಅಧಿಕ ಜನರನ್ನು ತಲುಪಿದ್ದು ಬಹುಪಾಲು ಜನ ಈ ಅಭಿಯಾನಕ್ಕೆ ತನು-ಮನ-ಧನದ ಸಹಕಾರ ನೀಡಿದ್ದಾರೆ.
ಹಾಗೇಯೆ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳೂ, ನ್ಯೂಸ್ ಪೋರ್ಟಲ್,ಬ್ಲಾಗುಗಳೂ ಕೂಡ ಅಭಿಯಾನದ ಪ್ರತಿಹಂತದಲ್ಲೂ ವಿಷಯಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿವೆ.