ಕುರುಕ್ಷೇತ್ರದ ಯುದ್ಧಕ್ಕೆ ಕೃಷ್ಣನೇ ಸರಿ ಅಣ್ಣಾ !
– ರಾಕೇಶ್ ಶೆಟ್ಟಿ
ಕುಂಭಕರ್ಣ ನಿದ್ದೆಯಿಂದ ಎದ್ದ ಭಾರತವನ್ನ ಮತ್ತೆ ನಿದ್ದೆಗೆ ದೂಡಲಾಗುತ್ತಿದೆಯಾ? ಇಂತದ್ದೊಂದು ಪ್ರಶ್ನೆ ಕಾಡಲಾರಂಭಿಸಿದೆ.ಕೆಲವೆ ದಿನದ ಹಿಂದೆ ಅಣ್ಣಾ ಹಜ಼ಾರೆಯವರ ಉಪವಾಸ ಸತ್ಯಾಗ್ರಹದಿಂದ ನಿದ್ದೆಯಲ್ಲಿದ್ದ ಜನ (ಎಲ್ಲ ಜನ ಅಂತೇಳಲು ಸಾಧ್ಯವಿಲ್ಲ) ಎದ್ದು ಬಂದು, ಕಡೆಗೆ ಸೋನಿಯಾ ಮೇಡಂ ಅವರ ಯುಪಿಎ ಸರ್ಕಾರ ಅಣ್ಣನ ಮುಂದೆ ಮಂಡಿಯೂರಿ ಕುಳಿತಾಗಲೇ, ‘ಪಿಕ್ಚರ್ ಅಭಿ ಬಾಕಿ ಹೈ ಮೇರಿ ದೋಸ್ತ್’ ಅಂತ ಬಹುಷಃ ಬಹುತೇಕರಿಗೆ ಅನ್ನಿಸಿತ್ತು.ಅದನ್ನ ನಿಜ ಮಾಡಲೆಂಬಂತೆ ಜನಲೋಕಪಾಲ ಸಮಿತಿ ರಚನೆಯಾದ ಮರುದಿನವೇ ಕೇಂದ್ರ ಮಂತ್ರಿ ಕಪಿಲ್ ಸಿಬಲ್, ಖುದ್ದು ಸಮಿತಿಯ ಸದಸ್ಯರಾಗಿದ್ದೂ, ಸಮಿತಿಯ ಬಗ್ಗೆ ಕೊಂಕು ನುಡಿದು,ಕಡೆಗೆ ನಂಬಿಕೆಯಿಲ್ಲದಿದ್ದರೆ ತೊಲಗಿ ಅಂತ ಅಣ್ಣಾ ಗದರಿದ್ಮೇಲೆ ಯಥಾಪ್ರಕಾರ ರಾಜಕಾರಣಿಗಳ ಹೇಳಿಕೆಯಂತೆ ’ತಪ್ಪಾಗಿ ಅರ್ಥೈಸಲಾಗಿದೆ; ಅಂತೇಳಿ ತೇಪೆ ಹಾಕಿದ್ರು.ಮೊಯ್ಲಿ,ಮನೀಶ್ ತಿವಾರಿಯವ್ರು ಕೊಂಕಿಸಿದ್ದಾಯ್ತು.
ಬಹುಷಃ ಗಾಂಧೀಜಿ,ಜೆಪಿ ನಂತರ ಈ ಮಟ್ಟಕ್ಕೆ ಜನರನ್ನ ಸೆಳೆದಿದ್ದು ಅಣ್ಣಾ ಹಜ಼ಾರೆಯವರೇ ಇರಬೇಕು.ಅವರ ಈ ಪರಿಯ ಜನಪ್ರಿಯತೆ ಪುಡಿವೋಟಿಗಾಗಿ ದೇಶವನ್ನೆ ಬೇಕಾದರು ಮಾರಬಲ್ಲ (ಪುರುಲಿಯಾ ಶಸ್ತ್ರಾಸ್ತ್ರ ಕರ್ಮಕಾಂಡಕ್ಕಿಂತ ದೇಶವನ್ನ ಅಡ ಇಡುವ ಉದಾಹರಣೆ ಬೇಕಾ?) ಹಗಲು ವೇಷದ ರಾಜಕಾರಣಿಗಳ ಕಣ್ಣು ಕೆಂಪಗಾಗುವಂತೆ ಮಾಡಿದ್ದು ಸುಳ್ಳಲ್ಲ.ಸಾಲಾಗಿ ಎಲ್ಲ ಅಣ್ಣನ ವಿರುದ್ಧ ಸದ್ದಿಲ್ಲದೆ ಕೆಲಸ ಶುರು ಹಚ್ಚಿಕೊಂಡರು…!
ಮೊದಲ ಹಂತವಾಗಿ ಜನಲೋಕಪಾಲ ಸಮಿತಿಯ ಶಾಂತಿ ಭೂಷಣ್ ಅವರದ್ದು ಎಂದು ಹೇಳಲಾದ ಸಿಡಿ ಇದ್ದಕ್ಕಿದ್ದಂತೆ ಹೊರಬಂತು.ಕಾಂಗ್ರೆಸ್ಸಿನ ಲೌಡ್ ಸ್ಪೀಕರ್ ದಿಗ್ವಿಜಯ್ ಸಿಂಗ್ ರಂಗ ಪ್ರವೇಶವೂ ಆಯಿತು. ಮಾಧ್ಯಮಗಳಲ್ಲೆ ಬದುಕುಳಿದಿರುವ ಹೇಳಿಕೆ ವೀರ ದಿಗ್ಗಿ ಬಂದ್ಮೇಲೆ ಕೇಳ್ಬೇಕೆ, ಶುರು ಆಯ್ತು ಕೊಂಕು ನುಡಿಯ ಪ್ರಯೋಗ.ದಿಗ್ಗಿ ಜೊತೆಗೆ ನಿವ್ರುತ್ತ ರಾಜಕಾರಣಿ ಅಮರ್ ಸಿಂಗ್ ಸಹ ಸೇರಿಕೊಂಡ್ರು.ಸ್ವತಃ ಒಂದು ಕಾಲದ ರಾಜಕಾರಣಿಯಾದ ಶಾಂತಿ ಭೂಷಣ್ ಅವರೇನೋ ಸಿಡಿ ಹಾಗೂ ದಿಗ್ಗಿ ವಿರುದ್ಧ ಕೋರ್ಟಿಗೆ ಹೋದ್ರು.ಖುದ್ದು ಇಂದಿರಾ ಗಾಂಧಿಯನತವರನ್ನೇ ತಡವಿಕೊಂಡಂತ,ಭ್ರಷ್ಟ ನ್ಯಾಯಾಧೀಶರಿದ್ದಾರೆ ಅಂತ ಗುಟುರು ಹಾಕಿದ ಶಾಂತಿಭೂಷಣ್ ಅವರಿಗೆ ಈ ರಾಜಕಾರಣಿಗಳ ಆಟ ಹೊಸತೇನಲ್ಲ ಬಿಡಿ (ಭೂಷಣ್ ಭ್ರಷ್ಟರೇ ಹಾಗಿದ್ರೆ,ಇಷ್ಟೆಲ್ಲಾ ತಾಪತ್ರೆಯಗಳನ್ನ ಮೈ ಮೇಲೆ ಯಾಕ್ ಎಳೆದುಕೊಳ್ತಾ ಇದ್ರು!?) .ಜೆಪಿ ಚಳುವಳಿಯಲ್ಲೂ ಶಾಂತಿ ಭೂಷಣ್ ಇದ್ದರು, ಈಗ ಅಣ್ಣಾ ಹಜಾರೆ ಅವರೊಂದಿಗೂ ಇದ್ದಾರೆ.ಆದ್ರೆ ನಮ್ಮ್ ಲೋಕಾಯುಕ್ತ ಸಂತೋಷ್ ಹೆಗ್ಡೆ ತೀರಾ ದಿಗ್ಗಿ ಕೊಂಕಿಗೆ ನೊಂದು ಸಮಿತಿಯಿಂದ ಹೊರ ನಡೆಯೋ ಮಾತನಾಡಿ ಜನರಲ್ಲಿ ಮತ್ತೆ ನಿರಾಸೆ ಮೂಡಿಸುವವರಿದ್ದರು, ಕಡೆಗೂ ಜನರ ಒತ್ತಡಕ್ಕೆ ಮಣಿದು ಉಳಿದಿದ್ದು ಸಂತಸದ ವಿಷಯ.
ಶಾಂತಿ ಭೂಷಣ್ ಉಪ್ಪು ತಿಂದಿರುವುದು ನಿಜವಾದರೇ ನೀರು ಕುಡೀಯಲೇ ಬೇಕು ಅಂತೇಳೋಣ ಅಂದರೆ, ಈ ಸಿಡಿಯೇ ನಕಲಿ ಅಂತ ಅಮೇರಿಕಾದ ಸಂಸ್ಥೆ ಮತ್ತು ಹೈದರಬಾದಿನ ಸಂಸ್ಥೆಗಳು ಹೇಳಿದರೆ,ಸರ್ಕಾರಿ ಸ್ವಾಮ್ಯದ ಸಂಸ್ಥೆ ಮಾತ್ರ ಈ ಸಿಡಿ ಅಸಲಿ ಅನ್ನುತ್ತಿದೆ! ಮೇಲ್ನೋಟಕ್ಕೆ ಇದು ಒಂದು ಕಡೆಯಿಂದ ಜನಲೋಕಪಾಲ ಸಮಿತಿಯ ರಚನೆಗೆ ಸಮ್ಮತಿಸಿ ತೊಟ್ಟಿಲು ತೂಗಿ,ಇನ್ನೊಂದು ಕಡೆಯಿಂದ ಚಿವುಟುವ ಈ ಕೆಲಸ ’ಯಾರದ್ದು!? ’ಅಂತ ಎಂಥವರಿಗಾದರೂ ಗೊತ್ತಾಗುವುದಿಲ್ಲವೇ?
ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಅವರಿಗೆ “ನಿಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಒಂದರ ಹಿಂದೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಆತನಿಗೆ ಕಾಂಗ್ರೆಸ್ನ ಬೆಂಬಲವಿದೆ ಎಂದೇ ನಾನು ಭಾವಿಸುತ್ತೇನೆ. ಬಹಳಷ್ಟು ಹೇಳಿಕೆಗಳು ಸತ್ಯಕ್ಕೆ ದೂರವಾದವು. ಆತನ ಉದ್ದೇಶ ಜನರಲ್ಲಿ ಗೊಂದಲ ಸೃಷ್ಟಿಸುವುದು, ದಾರಿತಪ್ಪಿಸುವುದು ಹಾಗೂ ಲೋಕಪಾಲ ಮಸೂದೆ ಸಂಬಂಧ ನಡೆಯುತ್ತಿರುವ ಪ್ರಕ್ರಿಯೆಯನ್ನು ಹಾಳುಗೆಡುವುದಾಗಿದೆ. ಇಂತಹ ಕೃತ್ಯಗಳಿಗೆ ನಿಮ್ಮ ವೈಯಕ್ತಿಕ ಒಪ್ಪಿಗೆ ಇದೆಯೇ?” ಅಂತ ಅಣ್ಣಾ ಬರೆದ ಪತ್ರಕ್ಕೆ,ಉತ್ತರವಾಗಿ “ಭ್ರಷ್ಟಚಾರದ ವಿರುದ್ಧದ ಹೋರಾಟದಲ್ಲಿ ನನ್ನ ಪಾತ್ರದ ಬಗ್ಗೆ ಅನುಮಾನ ಪಡಬೇಡಿ’ ಅಂತೇಳಿದ ಸೋನಿಯಾ ಮೇಡಂ ಅವರಿಗೊಂದು ಬಹಿರಂಗ ಪ್ರಶ್ನೆ.
ನಿಮ್ಮನ್ನ ಅನುಮಾನಿಸಬಾರದು ಅನ್ನುವುದೇ ಆದರೆ,ನಿಮ್ಮ ಪಕ್ಷದ ನಾಯಕರಿಗೆ ಜನರ ಹಾದಿ ತಪ್ಪಿಸುವ,ಜನಲೋಕಪಾಲ ಸಮಿತಿಯ ವಿರುದ್ಧ ಮಾತಾಡದಂತೆ ಬಹಿರಂಗವಾಗಿ ಸೂಚನೆ ಕೊಡಬಲ್ಲಿರಾ? ನಿಮ್ಮಿಂದ ಸಾಧ್ಯವಿದೆಯಾ?
ಕೇವಲ ಕಾಂಗ್ರೆಸ್ಸ್ ಪಕ್ಷ ಮಾತ್ರ ಅಣ್ಣಾ ಅವರ ತಂಡದ ವಿರುದ್ಧ ಮಾತಾಡಿಲ್ಲ.ಬಿಜೆಪಿಯ ಪಿತಾಮಹ ಅಡ್ವಾಣಿಯವ್ರು ಕೆಲ ದಿನಗಳ ಹಿಂದೆ ’ರಾಜಕಾರಣಿಗಳನ್ನ ಅವಮಾನಿಸಬೇಡಿ,ಹಾಗೆ ಮಾಡಿದರೆ ಪ್ರಜಾಪ್ರಭುತ್ವವನ್ನ ಅವಮಾನಿಸಿದಂತೆ’ ಅಂತ ಅಣ್ಣಾ ಅವರ ಮೇಲೆ ತಮ್ಮ ಬ್ಲಾಗಿನಲ್ಲಿ ಮುನಿಸು ತೋರಿಸಿಕೊಂಡಿದ್ದರು.ಈ ರಾಜಕಾರಣಿಗಳೆಷ್ಟು ಜವಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ,ನಡೆದುಕೊಳ್ಳುತಿದ್ದಾರೆ ಅಂತ ಅಡ್ವಾಣಿಯವರೇ ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಲಿ.ಆಗ ಬಹುಷಃ ಈ ಹೋರಾಟದಲ್ಲಿ ಅಣ್ಣ ರಾಜಕಾರಣಿಗಳನ್ನ ದೂರವಿಟ್ಟಿದ್ದು ಏಕೆ ಅನ್ನುವುದು ಗೊತ್ತಾಗಬಹುದು.
ಉಣ್ಣುವ ಬಟ್ಟಲಿಗೆ ಉಗಿಯಲು ಬಂದಂತೆ ಕಾಣಿಸುತ್ತಿರುವ ಅಣ್ಣನ ಮೇಲೆ ಭ್ರಷ್ಟರ ಕೋಪವೇನೋ ಅರ್ಥವಾಗುವಂತದ್ದೆ,ಆದರೆ ಇಲ್ಲಿಗೂ ವಕ್ಕರಿಸಿದ್ದಾರೆ ’ಸಿಕ್ಯುಲರ್ಗಳು’!
ಅದ್ಯಾವ ಕೆಟ್ಟ(?) ಸಮಯದಲ್ಲಿ ಅಣ್ಣಾ ಮೋದಿಯ ಅಭಿವ್ರುದ್ದಿ ಕಾರ್ಯಗಳನ್ನ ಹೊಗಳಿದರೋ,ಸಿಕ್ಯುಲರ್ಗಳ ವರಾತ ಶುರುವಾಯ್ತು.ಸಿನೆಮಾಗಳಿಂದ ಕಮ್ಮಿ ಮಾಧ್ಯಮಗಳಿಂದಲೇ ಹೆಚ್ಚು ಗದ್ದಲ ಮಾಡೋ ಶಬಾನ ಆಜ್ಮಿ,ಮಹೇಶ್ ಭಟ್ ಅರೆ ನಿದ್ರೆಯಿಂದ ಎದ್ದು ಬಂದವರಂತೆ ಬೊಬ್ಬಿಟ್ಟರು.ಇನ್ನ ಕೆಲವು ಮಂದಿ ಅಣ್ಣಾ ಮಾಡಿದ್ದು ಬ್ಲಾಕ್ ಮೇಲ್ ಅಂದ್ರು.ಅಣ್ಣಾ ಹಾಗೆ ಮಾಡದೇ ಸಂಸತ್ ಮುಂದೆ ಸಂಗೀತ ಹಾಡಬೇಕಿತ್ತಾ!? ಮತ್ತೆ ಆ ಸಂಗೀತಕ್ಕೆ ಈ ಎಮ್ಮೆ ಚರ್ಮದ ಮಂದಿ ಮಂಡಿಯೂರುತಿದ್ದರಾ!? ಮಾತಾಡುವ ಮೊದಲೊಮ್ಮೆ ಯೋಚಿಸ್ಬೇಕಲ್ವಾ? ಯಾರು ಏನೇ ಹೇಳಲಿ, ಕೌರವರ ಎದುರಿನ ಯುದ್ಧದಲ್ಲಿ ಕೃಷ್ಣನ ತಂತ್ರವೇ ಸರಿ. ಆ ಮಹಾಭಾರತದಲ್ಲಾದರೋ ಒಬ್ಬನೇ ಶಕುನಿ, ಈ ಭಾರತದಲ್ಲಿ ಶಕುನಿಗಳ ಸಂತಾನವೇ ಅಡಗಿದೆ.ಅಂತದ್ದರಲಿ ಏಟಿಗೆ ಎದುರೇಟು ಕೊಡುವ ನೀತಿಯೇ ಸರಿ ತಾನೇ?
ಈ ಮಧ್ಯೆ,ಕವಿತಾ ಕೃಷ್ಣನ್, ನಂದಿನಿ ಓಜಾ ಅವರಂತವರಿಗೆ ಅಣ್ಣಾ ಉಪವಾಸ ಕೂತಿದ್ದ ಹಿಂದಿನ ಬ್ಯಾನರ್ನಲ್ಲಿನ ’ಭಾರತ ಮಾತೆಯ’ ಚಿತ್ರದಲ್ಲಿ ಕೋಮುವಾದ ಕಂಡಿದೆ! ’ಕಾಮಾಲೆ ಕಣ್ಣಿನ ಸಿಕ್ಯುಲರ್ ಗಳಿಗೆ ಕಾಣುವುದೆಲ್ಲ ಕೇಸರಿಮಯವೇ’ ಅನ್ನುವ ಹೊಸ ಗಾದೆ ಸೃಷ್ಟಿಸುವುದೊಂದೆ ಬಾಕಿ ಸದ್ಯಕ್ಕೆ!
ಈ ರಾಜಕಾರಣೀಗಳು,ಹಾರಾಟಗಾರರು ಸಾಲುವುದಿಲ್ಲ ಅನ್ನಲಿಕ್ಕೆಂಬಂತೆ ತೀರಾ ಜನರಲ್ಲೇ ಅನೇಕರು,ಇಂತ ಹೋರಾಟದಿಂದ ಏನೇನೂ ಬದಲಾವಣೆ ಸಾಧ್ಯವಿಲ್ಲ ಅನ್ನುವ ಅರ್ಥದಲ್ಲಿ ತೀರಾ ನೆಗೆಟಿವ್ ಆಗಿ ಮಾತನಾಡುತಿದ್ದಾರೆ.ಅಂತ ಗೆಳೆಯರಿಗೆಲ್ಲ ನನ್ನದೊಂದು ಪ್ರಶ್ನೆಯಿದೆ.
’ಪೊರಕೆ ಹಿಡಿಯದೆ ಕಸ ಖಾಲಿಯಾಗದು ಅಲ್ಲವೇ? ಈ ದೇಶದಲ್ಲೋಬ್ಬ ಗಾಂಧೀ ಬಂದ ಮೇಲೆಯೆ ತಾನೆ,ರಾಜರ ಅಸ್ತಿತ್ವದ ಹೋರಾಟ ಅಂತಲೇ ಸಾಮಾನ್ಯ ಜನರ ಕಣ್ಣಿಗೆ ಕಾಣಿಸುತಿದ್ದ ಹೋರಾಟ ಮುಂದೆ ಅದೇ ಜನರ ವ್ಯಾಪಕ ಪಾಲ್ಗೊಳ್ಳುವಿಕೆಯಿಂದಾಗಿ ’ಸ್ವಾತಂತ್ರ್ಯ ಹೋರಾಟ’ವಾಗಿ ಬದಲಾಗಿದ್ದು!? ಸರ್ವಾಧಿಕಾರಕ್ಕೆ ಸೆಡ್ಡು ಹೊಡೆದು ಜೆಪಿ ಚಳುವಳಿಯಾಗಿದ್ದು ಹೇಗೆ? ಬರಿ ಕೈಯಿಂದ ದೇಶ ಬಿಟ್ಟು,೪೦ ಸಾವಿರ ಜನರ ಸೈನ್ಯ ಕಟ್ಟಿದ ಸುಭಾಷರ ನೆನಪಿದೆಯೆ?
ಮೇಲೆ ಹೇಳೀದ್ದೆಲ್ಲ ಓದಲು ರೋಚಕವಾಗಿದೆ,ಆದ್ರೆ ಇವೆಲ್ಲ ಓದಲಷ್ಟೆ ಸುಂದರ ಅಂತಿರಾ? ನಿಜ.ಭ್ರಷ್ಟಚಾರದ ವಿರುದ್ಧ ಈ ಹೋರಾಟಕ್ಕೆ ಬೆಂಬಲಿಸುವ ಜನರು ಮೊದಲು ಬದಲಾಗಬೇಕು.ನಾವು ಎಲ್ಲಿಯು ಯಾರಿಗೂ ಹಣ ಕೊಡುವುದು,ಪಡೆಯುವುದು ಇದನ್ನೆಲ್ಲ ಬಿಡಲೇಬೇಕು.
‘You Must be the Change You Want to see’ ಅಂತ ಗಾಂಧೀಜಿಯವರು ಹೇಳಿದ ಮಾತಿನ್ನ ಅಳವಡಿಸಿಕೊಂಡರೆ,ಖಂಡಿತ ಬದಲಾವಣೆ ಸಾಧ್ಯವಿದೆ ಅನ್ನುವ ಆಶಾವಾದಿ ನಾನು.ಅಂತದ್ದೊಂದು ಬದಲಾವಣೆಯ ಕಾಲ (ನಿಧಾನವಾಗಿಯಾದರೂ) ಶುರುವಾಗಲಿ.





Narendra Modi should be the PM for India to resolve all the issues. Compare Gujarat by last few years. What a revolution!
hehehehm Good Joke, That will never happen….Nobody will support Thamma Hajare if he supports criminal like Modi. Let him call fr one more Sathygraha u see the response. Already Dabba Ramdev called fr one more sathygraha.. All are same, Don blame politicians.
ಸದ್ಯಕ್ಕೆ, ಕೈಯಲ್ಲಿ ಕಲ್ಲು ಹಿಡಿದುಕೊಂಡು ಕಾದು ಕೂರೋಣ…
ಹಾದಿ ತಪ್ಪಿಸುವವರ ಕೀಟಲೆ ಜಾಸ್ತಿಯಾದರೆ… ಅಟ್ಟಿಸಿ ಅಟ್ಟಿಸಿ ಹೊಡೆದೋಡಿಸೋಣ…
Maavina kai season banthu,, Kallu upayogakke barabahudu
ಜನ ಬದಲಾಗದೆ ವ್ಯವಸ್ಥೆ ಬದಲಾಗಲು ಸಾಧ್ಯವಿಲ್ಲ. ಏಕೆಂದರೆ ಜನರೆ ಮಾಡಿರುವ ವ್ಯವಸ್ಥೆಯಿದು. ಅಕಸ್ಮಾತ್ ಬದಲಾದಂತೆ ಕಂಡರೂ ಅದು ಹೆಚ್ಚು ದಿನ ಉಳಿಯುವುದಿಲ್ಲ.
ಒಳ್ಳೆಯ ಲೇಖನ ರಾಕೇಶ್.
ಸೋನಿಯಾನ ಪ್ರಶ್ನೆ ಕೇಳಿರುವುದು ಸರಿಯಿದೆ ಆದರೆ ಈ ಎಲ್ಲ ಭ್ರಷ್ಟಾಚಾರಗಳ ಫಲಾನುಭವಿಯಿಂದ ಉತ್ತರ ನಿರೀಕ್ಷಿಸುವುದು ತಪ್ಪು. ಮುಂದಿನ ಪ್ರಧಾನಿ ರಾಹುಲ್ ಆಗ್ಬೇಕಂದ್ರೆ ಇಷ್ಟೆಲ್ಲ ಹಣ ಬೇಕೂಂತ ಆಕೆಗೆ ಗೊತ್ತಿದೆ. ಆಕೆಯ ಸಹೋದರಿಯರ ಹೆಸರಲ್ಲಿ ಎಷ್ಟು ಹಣ ಜಮೆಯಾಗಿದೆ ಎಂದು ಯಾರಾದರೂ ತನಿಖೆ ನಡೆಸಲು ಸಾಧ್ಯವೆ?
ಸಿನಿಕತನದ ಪರಮಾವಧಿ ಎನಿಸುತ್ತದೆ
ಪ್ರತಿಕ್ರಿಯಿಸಿದ ಸಾಮ್,ಆಸು ಹೆಗ್ಡೆ,ಪ್ರಸ್ಕಾ ಅವರಿಗೆ ಧನ್ಯವಾದ.
ಪ್ರಸನ್ನ,
ಇವರನ್ನೆ ತಡ್ಕೊಳ್ಳೊಕೆ ಆಗ್ತಿಲ್ಲಾ, ಇನ್ನ ಆ ರಾಹುಲ್ ಅನ್ನೋ ಅಮುಲ್ ಬೇಬಿನ ಬೇರೆ ನಾ? 🙂
I have been telling that Nilume is BJP favouring ( Inspite of seeing the great ruling by Yeddi ), Communalists like reading this good for nothing article,,,,Y u wanted to bring Rahul’s name. Comparing ro BJP, we have taken few steps against the corrupt.(Both Kalmadi and Raja are in Jail ). Yeddi is in Vidhanasoudha
ಲೇಖನದಲ್ಲೊಂದು ಕಡೆ ಕಾಮಾಲೆ ಕಣ್ಣಿನ ಸಿಕ್ಯುಲರ್ಗಳಿಗೆ ಕಾಣೋದೆಲ್ಲ ’ಕೇಸರಿಮಯ’ ಅಂದಿದ್ದನ್ನ ಇನ್ನೊಮ್ಮೆ ಓದಿಕೊಳ್ಳಿ.ನಿಲುಮೆಯನ್ನ ಬಿಜೆಪಿ ಪರ ಅಂತ ಯಾವ ಆಧಾರದಲ್ಲಿ ನಿರ್ಧರಿಸಿದಿರಿ? ಇದೇ ನಿಲುಮೆಯಲ್ಲಿ ಹುಡುಕಿದರೆ ಬಿಜೆಪಿಯ ಕೆಲ ನಿಲುವುಗಳನ್ನ ವಿರೋಧಿಸಿದ ಲೇಖನಗಳಿವೆ.ಹುಡುಕುವ ಮನಸ್ಸು ತಮಗಿರಬೇಕಷ್ಟೆ ಸ್ವಾಮಿ. ಅವೆಲ್ಲ ಯಾಕೆ ಇದೇ ಲೇಖನದಲ್ಲಿ ಅಡ್ವಾಣಿಯವರ ಬಗ್ಗೆ ಬರೆದಿಲ್ಲವೇ? ಅದು ತಮಗೆ ಕಾಣಲಿಲ್ಲವೇ?
ಇನ್ನ ರಾಹುಲ್ ಬಗ್ಗೆ ಯಾಕ್ ಮಾತಾಡ್ಬಾರ್ದು? ಅಪ್ಪ-ಅಮ್ಮನ ಹೆಸರಿನಿಂದಲೇ ಚಾಲ್ತಿಯಲ್ಲಿರೋ ಎವರ್ ಯಂಗ್ ನಾಯಕ ಅವ ನಿಮಗಿರಬಹುದು,ಅದ್ನ್ಯಾಕೆ ಎಲ್ಲರ ಮೇಲೆ ಏರುತ್ತೀರಿ? ತಮಗೆ ಅವರ ಪರಿಚಯವಿದ್ದರೆ ಅವರ ಬಗ್ಗೆ ನಾನು ಬರೆದ ಎರಡು ಲೇಖನಗಳೀವೆ (ಯಾವುದು ಅನ್ನುವುದು ತಮಗೆ ಚೆನ್ನಾಗೆ ಗೊತ್ತಿದೆ ಅನ್ನುವುದು ನನಗೆ ಗೊತ್ತಿದೆ) ಸಾಧ್ಯವಾದರೆ ಅದನ್ನ ಅವರಿಗೆ ತೋರಿಸಿ ಅದೇನು ಉತ್ತರ ಕೊಡುತ್ತಾರೋ ನೋಡೋಣ.
ಅದೆಲ್ಲ ಸರಿ.ಈ ಹಿಂದೆಯು ನಿಮ್ಮ ಭಾಷಾ ಪ್ರಯೋಗದ ಬಗ್ಗೆ ನಿಲುಮೆ ತಮಗೆ ತಿಳಿಸಿತ್ತು.ನಿಲುಮೆ ಯಾರ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳ ಬಯಸುವುದಿಲ್ಲ ಅನ್ನುವುದಕ್ಕೆ ನಿಮ್ಮ ಪ್ರತಿಕ್ರಿಯೆಗಳು ಪ್ರಕಟವಾಗುತ್ತಿರುವುದೇ ಸಾಕ್ಷಿ.ಆ ಸ್ವಾತಂತ್ರ್ಯವನ್ನ ದುರುಪಯೋಗಪಡಿಸಿಕೊಳ್ಳದಿರಿ.
ಕಡೆ ಮಾತು, ತಾವ್ಯಾಕೆ ತಮ್ಮ ನಿಜ ನಾಮಧೇಯವನ್ನ ಬಚ್ಚಿಟ್ಟು,ಮರೆಯಲ್ಲಿ ನಿಂತು ಕಲ್ಲು ಹೊಡೆಯೋದು? ಆರೋಗ್ಯಕರ ಚರ್ಚೆಗೆ ಸ್ವಾಗತವಿದೆ.
(ಲೇಖನದಲ್ಲೆಲ್ಲು ತಮ್ಮ ಬೆನಾಮಿ ನಾಮಧೇಯವನ್ನ ಉದ್ದೇಶಕ ಪೂರ್ವಕಾವಾಗಿಯೇ ಉಲ್ಲೇಖಿಸಿಲ್ಲ,ಕಾರಣ ಆ ಹೆಸರನ್ನ ತಮಗೆ ಇಟ್ಟು ಕರೆಯಲು ಯಾಕೋ ಮನಸ್ಸು ಒಪ್ಪುತ್ತಿಲ್ಲ!)
ಮೋದಿ dictator ನಿಜ. ಸದ್ಯದ ಪರಿಸ್ತಿತಿಯಲ್ಲಂತೂ ನಮಗೆಲ್ಲ ಬೇಕಾಗಿರುವುದು dictatorship ಮಾತ್ರ. ಬೇರು ಮಟ್ಟದಲ್ಲಿ ಬೆಳೆದಿರುವ ಭೃಷ್ಟಾಚಾರ, ಬುದ್ಧಿಜೀವಿ/ಸಿಕ್ಯುಲರ್ಗಳ ಅಟ್ಟಹಾಸ ಇತ್ಯಾದಿಗಳ ಸದ್ದಡಗಿಸಲು ಸಾಧ್ಯವಿರುವುದು ಹಿಂದೆ ಮುಂದೆ ಯಾರೂ ಇಲ್ಲದ ಮೋದಿಗೆ ಮಾತ್ರ. ಒಬ್ಬ dictator ಬಂದರೆ ಎಲ್ಲ ಮೈಗಳ್ಳರು ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಕಲಿಯುತ್ತಾರೆ. ಭೃಷ್ಟಾಚಾರ ಕಡಿಮೆ ಆಗುತ್ತದೆ, ಸಿಕ್ಯುಲರ್ಗಳು ಕೇಸರಿ ಕನ್ನಡಕ ತೆಗೆಯುತ್ತಾರೆ.
Oh,, Mundeyu enu ilva.? Agbahudu marre , Gandase allad avanu ashotondu marana homa madisiddu..:)
ಪ್ರಿಯ ಸುಡೋ-ಇಂಡಿಯನ್, ನಿಮಗೆ ಕನ್ನಡ ಓದಲು ಬರದೆ ಮೋದಿಯ ಗಂಡಸುತನದ ಬಗ್ಗೆ ಮಾತಾಡಬೇಡಿ. ನೀವು ನಿರಾಶಾವಾದಿಯಾಗಿದ್ದರೆ ಹೇಗೂ ಮಾವಿನ ಸೀಸನ್, ಕಲ್ಲು ಹೊಡೆಯುತ್ತ ಇರಿ. ನಿಲುಮೆ ಓದಿ, ಅದರ ನಿಲುವಿನ ಬಗ್ಗೆ ಕಾಮೆಂಟಿಸಿ, ಇನ್ನಷ್ಟು ಬೇಸರಪಡಬೇಡಿ. ಗುಡ್ ಲಕ್.
If modi rules this country, India will soon be No.1 in world and I am damn sure that we cannot see piggistan aka pakistan in world map. Indian Modi always rocks!