ವಿಷಯದ ವಿವರಗಳಿಗೆ ದಾಟಿರಿ

ಮೇ 19, 2011

5

ಸಾವಿಗೊಂದು ಸಲಾಮು

‍ನಿಲುಮೆ ಮೂಲಕ

– ವಿಜಯ್ ಹೆರಗು

ಸಾವಿಲ್ಲದ ಮನೆಯ ಸಾಸಿವೆಯ ತಾ ಎಂದ ಬುದ್ಧ
ಮನೆಗಳು ಸಿಕ್ಕವು, ಸಾಸಿವೆಯೂ ಸಿಕ್ಕಿತು
ಸಿಗಲೇ ಇಲ್ಲ ಸಾವಿಲ್ಲದ ಮನೆ

ಹುಡುಕಿ ಅಲೆದಳು ಆ ತಾಯಿ ಬಳಲಿ ಬಸವಳಿವವರೆಗೂ
ಸಾವೆಂಬ ಮಾಯಾವಿ ಕೈಚಾಚದ ಊರು-ಕೇರಿ
ಸಿಗಲೇ ಇಲ್ಲ, ಸಾವೇ ನೀ ಸರ್ವಾಂತರ್ಯಾಮಿ

ಬಡವ ಬಲ್ಲಿದ ಭೇದ ತೋರದ ನಿಜವಾದ
ಸಮಾಜವಾದಿ ನೀನು
ಧನವಂತ-ಧನಹೀನ ಯಾರಾದರೇನು ಬಿಡಲಾರೆ ನೀನು

ಜಾತಿ-ಉಪಜಾತಿಗಳ ಜಾಲದಲ್ಲಿ ನೀನಿಲ್ಲ
ಯಾವ ಧರ್ಮದ ಜನರೋ ನಿನಗದರ ಹಂಗಿಲ್ಲ
ದಾಕ್ಷಿಣ್ಯಗಳಿಂದ ದೂರ ನೀ ಜಾತ್ಯಾತೀತ-ಧರ್ಮಾತೀತ

ನನಗೆ ಅನಿಸುವ ಹಾಗೆ ಸಾವೇ ನೀ ಸಾವಲ್ಲ
ನೀ ಮತ್ತೊಂದರ ಹುಟ್ಟು, ಬರುವವರೆಗೂ
ನೀ ಬಿಟ್ಟುಕೊಡಲಾರೆ ನಿನ್ನ ಬರುವಿಕೆಯ ಗುಟ್ಟು

ಸಾವೇ ನಿನಗಿದೋ ನನ್ನ ಸಲಾಮು
ನಿನಗಿಲ್ಲ ಯಾರದೇ ಅಂಕೆ- ಲಗಾಮು
ಎಲ್ಲೆಡೆ ಕಾಣುತಿದೆ ನಿನ್ನದೇ ಹಸ್ತ- ಕೊಲ್ಲುವ ಕಲೆ ನಿನಗೆ ಕರಗತ

Read more from ಕವನಗಳು
5 ಟಿಪ್ಪಣಿಗಳು Post a comment
  1. Ravi Murnad,'s avatar
    Ravi Murnad,
    ಮೇ 19 2011

    ಚೆನ್ನಾಗಿದೆ ವಿಜಯ್, ಕಾವ್ಯದ ಸ್ವಾಧ ಆಸ್ವಾಧನೆಗೆ ಲಭಿಸುವಂತದ್ದು.ಬರುವ ಕಾರಣವ ಹೇಳದೆ ನಿಶ್ಚಿತವಲ್ಲ ವಸ್ತುವಿನ ಬಗೆಗಿನ ನಿಮ್ಮ ಕಾವ್ಯ ಇಷ್ಟವಾಯಿತು.

    ಉತ್ತರ
  2. shimladkaumesh's avatar
    ಮೇ 19 2011

    ವಿಜಯ್‌… ಚೆನ್ನಾಗಿದೆ ಕವನ… ಪತ್ರಕರ್ತನ ವೃತ್ತಿಯಲ್ಲಿದ್ದಾಗ… ಸಾವು ಹೇಗಿರತ್ತೆ ಎಂಬುದನ್ನು ಅತ್ಯಂತ ಸಮೀಪದಿಂದ ನೋಡಿರುವೆ.. ನೆನಪಾಗುತ್ತಿದೆ ಎಲ್ಲವೂ…

    ಉತ್ತರ
  3. harish athreya's avatar
    ಮೇ 20 2011

    ಆತ್ಮೀಯ
    <>
    ಅದ್ಭುತವಾದ ಸಾಲುಗಳು. ಸಾವು ತನ್ನ ಇರುವಿಕೆಯನ್ನ ತೋರುತ್ತದೆ ಆದರೆ ಬರುವಿಕೆಯ ಗುಟ್ಟನ್ನು ಬಿಟ್ಟುಕೊಡದು. ಹ್ಮ್ !
    ಹರಿ

    ಉತ್ತರ
  4. praveen a hebri's avatar
    praveen a hebri
    ಫೆಬ್ರ 16 2012

    ಚೆನ್ನಾಗಿದೆ ಕವನ

    ಉತ್ತರ

Leave a reply to harish athreya ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments