ಪಾಕಿಸ್ತಾನದ ಭೂಪಟ 17.05.2011ರ ಕನ್ನಡಪ್ರಭದಲ್ಲಿ…
– ಪಿ.ಎಸ್.ರಂಗನಾಥ
ಒಂದು ದೇಶದ ಭೂಪಟ ಅಂದರೆ ಅದರ ಭೌಗೋಳಿಕ ವಿನ್ಯಾಸ ಹಾಗು ಅದರ ಸರಿಹದ್ದು ಗಳನ್ನು ತೋರಿಸುವ ಚಿತ್ರ ಅಂತ ನಮ್ಮೆಲ್ಲರಿಗು ಗೊತ್ತಿರುವ ವಿಷಯ. ಪ್ರತಿಯೊಂದು ದೇಶವೂ ತನ್ನದೇ ಆದ ಒಂದು ನಕ್ಷೆಯನ್ನು ಸಿದ್ದಪಡಿಸಿಕೊಂಡು ಅಂತರಾಷ್ಟ್ರೀಯವಾಗಿ ತನ್ನನ್ನು ಗುರುತಿಸಿಕೊಳ್ಳುತ್ತದೆ. ಸದ್ಯಕ್ಕೆ ನಮ್ಮ ದೇಶಕ್ಕೆ ಬಂದರೆ ನಮ್ಮ ಕೆಲವು ಪ್ರಾಂತ್ಯಗಳು ಪಾಕಿಸ್ತಾನ ಹಾಗು ಚೀನಾದ ವಶದಲ್ಲಿದ್ದರು ನಾವುಗಳು ನಮ್ಮ ದೇಶದ ಗಡಿಯನ್ನು ಹಾಕಿ ನಾವು ಗುರುತಿಸಿಕೊಂಡಿದ್ದೇವೆ ಹಾಗು ಸರಕಾರ ಅದನ್ನು ಒಪ್ಪಿ ಅಧಿಕೃತವಾಗಿ ಮುದ್ರೆ ಹಾಕಿದೆ ಜತೆ ರಾಷ್ಟ್ರದ ಪ್ರಜೆಗಳಿಗೆ ಸಹ ಒಪ್ಪಿಗೆ ಯಾಗಿದೆ. ಯಾವುದೇ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಹಾಗು ರಾಷ್ಟ್ರದ ಮೂಲೆ ಮೂಲೆ ಗಳಲ್ಲಿ ಮುದ್ರಿತವಾಗಿ ಪ್ರಸಾರ ವಾಗುತ್ತಿರುವುದು POK (Pak Occupied Kashmir) ಹಾಗು ಚೈನಾ ಆಕ್ರಮಿತ ಕೆಲ ಭಾಗವನ್ನು ಒಳಗೊಂಡ ಭೂಪಟ ಮಾತ್ರ. ಆದರೆ ಪಾಕಿಸ್ತಾನ POK ಪ್ರಾಂತ್ಯವನ್ನು ತನ್ನ ಅಧಿಕೃತ ನಕ್ಷೆ ಯಾಗಿ ಉಪಯೋಗಿಸುತ್ತಿದೆ. ಅದನ್ನು ನಮ್ಮ ರಾಷ್ಟ್ರದವರು ಒಪ್ಪುವುದಿಲ್ಲ ಹಾಗು ಆ ಪ್ರಾಂತ್ಯ ಪಾಕಿಸ್ತಾನದ ವಶದಲ್ಲಿದ್ದರು ಸಹ ಅದಕ್ಕೆ ಅಂತರಾಷ್ಟ್ರೀಯ ಮನ್ನಣೆ ಇನ್ನು ದೊರಕಿಲ್ಲ. ಅದು disputed area ಅಂತ ಬೇರೆ ದೇಶದವರು dotted / dashed line ನಲ್ಲಿ ತೋರಿಸುತ್ತಾರೆ.
ನಾನು ಕಳೆದ ೪ ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತಿದ್ದೀನಿ, ಸಾಮನ್ಯವಾಗಿ ಭಾರತದ ಭೂಪಟ, ರಾಷ್ಟ್ರದ ಲಾಂಛನ, ಭಾವುಟ ಗಳನ್ನು ನೋಡಿ ನನಗೆ ಬಹಳ ಖುಶಿ ಯಾಗುತ್ತೆ. ಯಾವುದಾದರು ಕಛೇರಿ ಗಳಲ್ಲಿ ಹಾಕಿರುವ ಪ್ರಪಂಚದ ಭೂಪಟ ದಲ್ಲಿ ನಮ್ಮ ಭಾರತ ದೇಶವನ್ನು ಗಮನಿಸುವುದು ನನ್ನ ಅಭ್ಯಾಸ, ಒಂದು ವೇಳೆ ಭಾರತದ ಭೂಪಟದಲ್ಲಿ ಏನಾದರು ವ್ಯತ್ಯಾಸ ಗಳಿದ್ದರೆ, ಅಲ್ಲಿರುವ ಭಾರತೀಯ ಸಿಬ್ಬಂದಿ ಯವರ ಗಮನಕ್ಕೆ ತರುವ ಪ್ರಯತ್ನ ಮಾಡಿ ಬದಲಾಯಿಸಲು ಯತ್ನಿಸುವೆ. ಕೆಲವರು ನನ್ನ ವಿಚಾರಕ್ಕೆ ಸಹಮತ ವ್ಯಕ್ತ ಪಡಿಸಿ ವಿಷಾದ ವ್ಯಕ್ತ ಪಡಿಸುದ್ದುಂಟು. ಇನ್ನು ಕೆಲವರು, ಇಲ್ಲಿ ಸಿಗೋದೆ ಇದೇ ಮ್ಯಾಪ್ ಇದು ಬಿಟ್ರೆ ಬೇರೆ ವಿಧಿಯಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತಿದ್ದರು, .
ಕನ್ನಡಪ್ರಭ ೧೭.೦೫.೨೦೧೧ ಪುಟ ೯ರಲ್ಲಿ ಪ್ರಕಟವಾಗಿರುವ ಲೇಖನ “ದಾವುದ್ ನ ಮುಗಿಸುವ ಗುಂಡು ಸಿದ್ಧವಾಗಿಲ್ಲವೇ? ರಲ್ಲಿ ಮುದ್ರಿತವಾಗಿರುವ ಪಾಕಿಸ್ತಾನದ ಭೂಪಟ, ನಮ್ಮ ದೇಶದ ಕಾಶ್ಮಿರದ ಒಂದು ಭಾಗವನ್ನು ಅದರಲ್ಲಿ ಒಳಗೊಂಡಿದೆ.
ಒಂದೇ ನೋಟಕ್ಕೆ ಅದು ಅಷ್ಟು ಸುಲಭವಾಗಿ ಅದು ಗೊತ್ತಾಗುವ ವಿಷಯವಲ್ಲ. ಸ್ವಲ್ಪ ಗಮನವಿಟ್ಟು ಜತೆ ಯಲ್ಲಿ ನಮ್ಮ ಭಾರತದ ಭೂಪಟ ವನ್ನು ನೋಡಿದಾಗ ಗೊತ್ತಾಗುತ್ತದೆ.
ನಮ್ಮ ಸರ್ಕಾರ ಆ ಭಾಗವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುವುದಿಲ್ಲ ಅಂತ ಖಾತ್ರಿಯಾಗಿ ಅದೇ ಅಧಿಕೃತ ಅವರು ತೀರ್ಮಾನಿಸಿದ್ದಾರೆ ಅಂತ ಅನ್ನಿಸುತ್ತೆ…!!!
ಗ್ರಾಫಿಕ್ಸ್ ವಿಭಾಗದ ಸಿಬ್ಬಂದಿಯವರು ಆ ಲೇಖನಕ್ಕೊಂದು ಚಿತ್ರ ಹಾಕಲು ಹೋಗಿ ಮಾಡಿದ ಎಡವಟ್ಟು ಅಂತ ಗೊತ್ತಾಗುತ್ತೆ.
ಈ ಬಗ್ಗೆ ಪತ್ರಿಕೆ ಯವರ ಗಮನಕ್ಕೆ ಬರಲಿ ಎಂದು ಮಿಂಚಂಚೆ ಕಳುಹಿಸಿದೆ, ಆದರೆ ಉತ್ತರವಿಲ್ಲ.
ಬೇರೆ ಯಾರಾದರು ಇಂತಹ ತಪ್ಪುಗಳನ್ನು ಮಾಡಿದ್ದಿದ್ದರೆ ಅದರ ಬಗ್ಗೆ ಒಂದು ದೊಡ್ಡ ಲೇಖನ ಬರೆದು ಅವರ ಮಂಗಳಾರತಿ ಎತ್ತುತಿದ್ದರು, ಇದು ಅವರೇ ಮಾಡಿದ ತಪ್ಪು ಅದಕ್ಕೆ ಸುಮ್ಮನೆ ಕೂತಿದ್ದಾರೆ.
ಸೈನ್ಯದಲ್ಲಿ ನನ್ನ ತಮ್ಮ ಸುರೇಶ ಕಳೆದ್ ೧೫ ವರ್ಷ್ಗಳಿಂದ ಕಾಶ್ಮಿರದ ಗಡಿಯಲ್ಲಿ ಸೇವೆ ಸಲ್ಲಿಸುತಿದ್ದಾನೆ, ಅಪಾರ ರಾಷ್ಟ್ರಭಕ್ತಿ ಯಿರುವ ಅವನು ಇದನ್ನು ನೋಡಿದರೆ ಅವನಿಗೆ ಹೇಗಾಗಬೇಡ. ನಮಗೆ ನಮ್ಮ ದೇಶದ ಬಗ್ಗೆ ಅಭಿಮಾನ ಇದ್ದು ರಾಷ್ಟ್ರದ ಲಾಂಚನ, ಭಾವುಟ ಹಾಗು ಭೂಪಟಗಳನ್ನು ನೋಡುತಿದ್ದರೆ ಪುಳಕಿತಗೊಳ್ಳುತ್ತೀವಿ. ಅಂಥದರಲ್ಲಿ ಇಂಥಹ ಎಡವಟ್ಟುಗಳು ಬೇಸರ ವನ್ನುಂಟು ಮಾಡುತ್ತವೆ. ನನಗೇ ಹೀಗೆನಿಸಿದರೆ ರಾಷ್ಟ್ರಭಕ್ತಿ ಯಿರುವ ಪ್ರತಿಯೊಬ್ಬ ಭಾರತೀಯನಿಗು ಹೇಗನಿಸಬೇಡ.
ಕಾಶ್ಮೀರದ ಕೆಲ ಭೂಭಾಗ ಗಳು ಇನ್ಮುಂದೆ ನಮ್ಮ ಭೂಪಟದಲ್ಲಿ ಕಾಣಿಸಿಕೊಳ್ಳುವುದಿಲ್ಲ ಅಂತ ನಮ್ಮ ಸರ್ಕಾರ ಅಧಿಕೃತ ವಾಗಿ ಘೋಷಿಸಲಿ, ಆಗ ನೋಡ್ತೀವಿ.
ಇಂತಿ ಧನ್ಯವಾದಗಳೊಂದಿಗೆ,





ಅತ್ಯಂತ ಅಗತ್ಯ ಮಾಹಿತಿಯ ಲೇಖನ ಇದು. ತುಂಬಾ ಆಪ್ತತೆಯಿಂದ ಮೆಚ್ಚಿಕೊಳ್ಳುತ್ತೇನೆ ರಂಗನಾಥ್.ನೋಡಿ, ಲಕ್ಷಾಂತರ ಮಂದಿ ಓದುಗರಿಗೆ ಪತ್ರಿಕಾ ಧರ್ಮ ಕೊಡುತ್ತೀರುವ ಕಾಣಿಕೆ ಇದು. ನಮ್ಮ ರಾಷ್ಟ್ರವನ್ನ ಮಾರಾಟ ಮಾಡುತ್ತಿದ್ದಾರೆ.ರಾಷ್ಟ್ರ ದ್ರೋಹ ಅನ್ನೋದಕ್ಕೆ ಇನ್ನೊಂದು ಹೆಸರು.
ಇದೊಂದು ದೊಡ್ಡ ತಪ್ಪೇ ,ಆದರೆ ಮಾನ್ಯ ಗೃಹ ಮಂತ್ರಿ ಚಿದ೦ಬರಮ್ ಮಾಡಿದಸ್ತು ದೊಡ್ಡ ಪ್ರಮಾದವಲ್ಲ…ಇನ್ನೂ ಅವರು ಒಪ್ಪಿಕೊಳ್ಳಲು ತಯಾರಿಲ್ಲ !!!! ದುರದೃಷ್ಟ !!!!
ನಿಮ್ಮ ಬರಹ ಅರ್ಥಪೂರ್ಣವಾಗಿದೆ. ಆದರೂ ಸ್ವಲ್ಪ ಭಾವುಕತೆಗೆ ಇಲ್ಲಿ ವಾಸ್ತವಕ್ಕಿಂತ ಕೈಮೇಲಾಗಿದೆ. ನನ್ನನ್ನೂ ಒಂದು ಪ್ರಶ್ನೆ ಸದಾ ಕಾಡುತ್ತಿದೆ. ಅಕಸ್ಮಾತ್ ಇದೇ ಒಸಾಮ ಬಿನ್ ಲಾಡೆನ್ ಗಿಲ್ಗಿಟ್ ನಗರದಲ್ಲಿ ಸತ್ತಿದ್ದರೆ ನಮ್ಮಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಒಸಾಮನನ್ನು ಭಾರತದಲ್ಲಿ ಕೊಂದುಹಾಕಿದರು ಎಂದೇ? ಅಮೇರಿಕಾ ಭಾರತದ ನೆಲದಲ್ಲಿ ಕಾರ್ಯಾಚರಣೇ ನಡೆಸಿ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದೇ?
ya its imp information