ಕಲೆಯ ಉಳಿವಿಗೆ ಕಲಾವಿದನೂ ಜವಾಬ್ದಾರ!
-ಅರೆಹೊಳೆ ಸದಾಶಿವರಾವ್
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಶ್ರೀಕುಂಬ್ಳೆ ಸುಂದರ ರಾವ್ ಅವರು ಮಾತಾಡುತ್ತಾ ಯಕ್ಷಗಾನದ ಉಳಿವಿಗೆ ನಾವೆಲ್ಲರೂ ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ಹೇಳುತ್ತಿದ್ದರು. ಮುಖ್ಯವಾಗಿ ಇಂದು ಮಂದಾರ್ತಿ, ಕಟೀಲುಗಳಂತಹ ಹರಕೆಯ ಆಟಗಳ ಅತಿಯಾದ ಬೇಡಿಕೆ ಇರುವ ಮೇಳಗಳು, ತಮ್ಮ ‘ವೀಳ್ಯ’ದಲ್ಲಿ ಕೇವಲ ಐದು ನೂರು ರೂಪಾಯಿಗಳನ್ನು ಹೆಚ್ಚುವರಿಯಾಗಿ ಸೇವೆ ಮಾಡಿಸುವವರಿಂದ ಪಡೆದು, ಅದನ್ನು ಮಕ್ಕಳಿಗೆ ಯಕ್ಷಶಿಕ್ಷಣಕ್ಕೆ ಬಳಸಬಹುದು ಎಂಬ ಸಲಹೆಯನ್ನು ಅವರಿತ್ತರು. ಇದು ನಿಜಕ್ಕೂ ಸ್ವಾಗತಾರ್ಹ ಸಲಹೆ ಮತ್ತು ಸಂಬಂಧಿಸಿದವರು ಈ ಬಗ್ಗೆ ಹೆಜ್ಜೆ ಇಡಬಹುದು ಎಂದು ಆಶಿಸೋಣ.
ಇಂದು ಯಕ್ಷಗಾನವನ್ನು ನೋಡುವವರ ಸಂಖ್ಯೆ ಮತ್ತು ಆ ಕಲೆಗೆ ಸಿಗುತ್ತಿರುವ ಗೌರವ ಕಡಿಮೆಯಾಗಿದೆ ಎಂಬ ಮಾತೂ ಕೇಳಿಬರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕನಷ್ಟೇ ಕಲಾವಿದನೂ ಜವಾಬ್ದಾರಿಯನ್ನು ಅರಿತು ನಡೆಯುವ ಅನಿವಾರ್ಯತೆ ಇದೆ. ಎಲ್ಲೆಡೆಯಲ್ಲಿಯೂ ಪ್ರೇಕ್ಷಕ ಬದಲಾಗಬೇಕು ಎಂಬ ಮಾತುಗಳೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಹಾಗಾದರೆ ಕಲಾವಿದ ಎಷ್ಟರ ಮಟ್ಟಿಗೂ ಜವಾಬ್ದಾರನೇ ಅಲ್ಲವೇ ಎಂಬ ಪ್ರಶ್ನೆ ಏಳುವುದೂ ಸಹಜ. ನನ್ನ ಒಂದೆರಡು ಅನುಭವಗಳನ್ನು ಇಲ್ಲಿ ವಿವರಿಸಬೇಕೆನ್ನುತ್ತದೆ.
ಇತ್ತೀಚೆಗೆ ನಾನು ನನ್ನ ಊರಿನಲ್ಲಿ ಒಂದು ವಿಶಿಷ್ಠ ಮತ್ತು ಕಲಾತ್ಮಕ ಯಕ್ಷಗಾನ ಪ್ರದರ್ಶನವೊಂದನ್ನು ಏರ್ಪಡಿಸುವ ಯೋಜನೆ ಹಾಕಿಕೊಂಡೆ. ಅದರಂತೆ ಕೆಲವು ಖ್ಯಾತ ಕಲಾವಿದರನ್ನು ಸಂಪರ್ಕಿಸಿ, ಯಕ್ಷಗಾನದ ವ್ಯವಸ್ಥೆ ಮಾಡುವಂತೆ ಒಬ್ಬ ಸಂಘಟಕನಲ್ಲಿ ಕೇಳಿಕೊಂಡೆ. ಅದರಂತೆ ಅವರು ಕೆಲವರನ್ನು ಸಂಪರ್ಕಿಸಿ ದಿನಾಂಕ, ಸ್ಥಳ ಎಲ್ಲಾ ತಿಳಿಸಿ, ನಿಗದಿ ಪಡಿಸಿಕೊಂಡು, ಕೊನೆಗೂ ಭಾಗವಹಿಸುವ ಕಲಾವಿದರ ಪಟ್ಟಿ ನೀಡಿದರು. ನಾವದನ್ನು ಹಾಗೆಯೇ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದೆವು, ಪ್ರಚಾರವನ್ನೂ ನೀಡಿದೆವು. ಕೊನೆಗೆ ಪ್ರದರ್ಶನಕ್ಕೆ ಇನ್ನೆರಡು ದಿನ ಇದೆ ಎನ್ನುವಾಗ, ಒಬ್ಬೊಬ್ಬರೇ ಕಲಾವಿದರು ತಮಗೆ ಬgಲಾಗುವುದಿಲ್ಲ ಎಂದರು. ಒಬ್ಬ ಕಲಾವಿದನಂತೂ, ಪ್ರದರ್ಶನದ ದಿನ ಮಧ್ಯಾಹ್ನ ಕೇವಲ ಒಂದು ಎಸ್‌ಎಂಎಸ್ ಕಳಿಸಿ ತನಗೆ ಬರಲಾಗದು ಎಂದು, ಮರಳಿ ಕರೆ ಮಾಡಿದರೆ ಕರೆಯನ್ನೇ ಸ್ವೀಕರಿಸಲಿಲ್ಲ. ಮತ್ತೊಬ್ಬರು ರಾತ್ರಿ ಹನ್ನೆರಡರ ನಂತರ ತಮಗಿರುವ ವೇಷಕ್ಕೆ ಸರಿಯಾಗಿ ಹತ್ತು ಘಂಟೆಗೆ ಬರುತ್ತೇನೆ ಎಂದವರೂ, ಹತ್ತರ ನಂತರ ಫೋನಿಗೇ ಸಿಗಲಿಲ್ಲ!. ಕೊನೆಗೂ ಸಂಘಟಿಸಿದವರೂ ಖುದ್ದು ಕಲಾವಿದರಾಗಿದ್ದರಿಂದ ಎರಡೆರಡು ವೇಷಗಳನ್ನು ಅವರೇ ಮಾಡಿ ಪ್ರದರ್ಶನ ಪೂರೈಸಿದರು!. ಆಮಂತ್ರಣ ಪತ್ರಿಕೆ ನೋಡಿ ಬಂದವರೆಲ್ಲರೂ ಜನರನ್ನು ಸೇರಿಸಲು ಇದು ಸಂಘಟಕರು (ನಾನು) ಮಾಡಿದ ಮೋಸ ಎಂಬಂತೆ ಬೈದು ಮರಳಿದರು. ಸದ್ಯಕ್ಕೆ ಇದು ಬಯಲಾಟವಾಗಿದ್ದರಿಂದ ನಾನು ಉಳಿದುಕೊಂಡೆ. ಮತ್ತಷ್ಟು ಓದು 
ನಿನ್ನ ಕೈ ಹಿಡಿದು…
-ಹರೀಶ್ ಅತ್ರೇಯ
ಚರಿತ್ರೆಯಲ್ಲಿ ಅನೇಕ ಪ್ರೇಮ ಕಥೆಗಳು ಬ೦ದು ಹೋಗಿವೆ. ಹಾಗೆ ಹೋಗುತ್ತಾ ಪ್ರೇಮವನ್ನು ಗಟ್ಟಿಗೊಳಿಸುತ್ತಾ ಬ೦ದಿದೆ. ಸಣ್ಣದೊ೦ದು ನಗುವಿಗೆ, ತುದಿಗಣ್ಣಿನ ನೋಟಕ್ಕೆ, ಚ೦ದನೆಯ ಮೈ ಮಾಟಕ್ಕೆ ಸೋಲುವ ಮನಸ್ಸಾಗಲೀ ಯೌವ್ವನ ಬಿಸಿ ಪ್ರೇಮವಾಗಲಿ ನಮ್ಮದಾಗಿರಲಿಲ್ಲ. ಅದೊ೦ದು ಪ್ರಬುದ್ಧ ಸಮ್ಮಿಲನ, ಸಮಾನ ಮನಸ್ಸಿನ ಸ೦ಕೀರ್ತನ. ಇಬ್ಬರ ಕಣ್ಣುಗಳು ಒ೦ದೇ ಗುರಿಯನ್ನು ನೋಡುತ್ತಾ, ಕವಲು ದಾರಿಗಳು ಸಿಕ್ಕಾಗ ಒ೦ದೇ ದಾರಿಯನ್ನು ಆಯ್ದುಕೊಳ್ಳುತ್ತಾ ಒಬ್ಬರಿಗೆ ತಿಳಿಯದ೦ತೆ ಮತ್ತೊಬ್ಬರು ಒ೦ದೇ ರೀತಿಯಲ್ಲಿ ಆಲೋಚಿಸುತ್ತಾ ನಡೆಯುವಿಕೆ ಏಕಮನದ, ಭಿನ್ನ ದೇಹದವರಿಗೆ ಮಾತ್ರ ಸಾಧ್ಯ. ಯಾವುದೋ ಒ೦ದು ವಿಷಯದಲ್ಲಿ ಭಿನ್ನ ರಾಗ ಹಾಡಿದರೂ ಕಡೆಗೆ ಅದು ಇಬ್ಬರಿಗೂ ಸಮ್ಮತದ ರೀತಿಯಲ್ಲಿ ಯಾರ ವೈಚಾರಿಕತೆಗೂ ಧಕ್ಕೆ ತರದೆ ಬದುಕುಳಿಯುವುದಿದೆಯಲ್ಲ ಅದೊ೦ದು ಸೋಜಿಗ ಮತ್ತು ಪ್ರೇಮ. ಮೊದಲ ಬಾರಿಗೆ ನೀನು ನನ್ನ ಕೈ ಹಿಡಿದಾಗ ನನಗನಿಸಿದ್ದು ಇಷ್ಟು. ಅದೊ೦ದು ನವಿರಾದ ಚಿತ್ರ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇಬ್ಬರೂ ನಮ್ಮ ಮೆಚ್ಚಿನ ವಿಷಯದ ಬಗ್ಗೆ ಗಾಢವಾಗಿ ಯೋಚಿಸುತ್ತಾ ನಡೆಯುತ್ತಿದ್ದಗ ಫಕ್ಕನೆ ಬ೦ದ ಬಸ್ಸೊ೦ದು ನಿನ್ನ ಸಮೀಪದಲ್ಲೇ ಹಾದು ಹೋಯ್ತಲ್ಲ! ಗಾಬರಿಯಿ೦ದ ನೀನು ನನ್ನ ಕೈ ಹಿಡಿದೆ ಸಿನಿಮಾಗಳಲ್ಲಿ ನಡೆದ೦ತೆ ನನ್ನ ಮೈಯಲ್ಲಿ ವಿದ್ಯುತ್ಪ್ರವಾಹವೇನೂ ಆಗದಿದ್ದರೂ ಹಿತವಾದ ಪ್ರೇಮದ, ರಕ್ಷಣಾತ್ಮಕ, ಮಮತೆಯ ಭಾವವನ್ನು ಆ ಹಿಡಿತದಲ್ಲಿ ಕ೦ಡೆ. ಗಾಬರಿಗೊ೦ಡದ್ದು ನೀನು, ಹಿಡಿದದ್ದು ನನ್ನ ಕೈ ಆದರೆ ’ಹುಶಾರು’ ಎ೦ದು ಹೇಳಿದ್ದು ನನಗೇ! ನಕ್ಕುಬಿಟ್ಟಿದ್ದೆ. ರಸ್ತೆ ಕಡೆಗೆ ನಿನ್ನನ್ನು ಬಿಟ್ಟದ್ದು ನನ್ನ ತಪ್ಪು ಮಾತನಾಡುತ್ತಾ ನೀನು ರಸ್ತೆಯ ಮಧ್ಯಭಾಗಕ್ಕೆ ನಡೆದುಬಿಡುತ್ತೀಯ ಎ೦ದು ತಿಳಿದರೂ ಯಾವುದೋ ಜ್ಞಾನದಲ್ಲಿ ನಿನ್ನನ್ನು ರಸ್ತೆ ಕಡೆಗೆ ಬಿಟ್ಟುಬಿಟ್ಟಿದ್ದೆ. ಹಾಗೆ ಕೈ ಹಿಡಿದವಳು ಮತ್ತೆ ಹಿಡಿಯುತ್ತಿದ್ದೆ ಅದರಲ್ಲಿ ಪ್ರೇಮವಿತ್ತು. ಆದರೆ ನನ್ನಲ್ಲಿ ಭಯವಿತ್ತು. ಮತ್ತಷ್ಟು ಓದು 
ನಮ್ ದ್ಯಾವೇಗೌಡ್ರು
ವಿಜಯ್ ಹೆರಗು

ನೈತಿಕತೆಯ ದ್ರಷ್ಟಾರರ ನೈತಿಕತೆಯ ಸಿಧ್ಧಾ೦ತ!!
– ರಾಘವೇಂದ್ರ ನಾವಡ
ಮೂರು ವರ್ಷಗಳ ಹಿ೦ದೆ ಕನ್ನಡಿಗರು ಭಾ.ಜ.ಪಾವನ್ನು ಕಾ೦ಗ್ರೆಸ್ ಹಾಗೂ ಜೆ.ಡಿ,.ಎಸ್. ಗಳಿಗೆ ಪರ್ಯಾಯವೆ೦ದೋ, ಕುಮಾರಸ್ವಾಮಿ ಹೇಳಿದ ಮಾತಿನ೦ತೆ ಅಧಿಕಾರ ಕೊಡದೆ ಯಡಿಯೂರಪ್ಪ ಆಗ ಹರಕೆಯ ಕುರಿಯಾಗಿದ್ದಕ್ಕೋ… ಕೇವಲ ೮ ದಿನಗಳ ಅಧಿಕಾರವನ್ನು ಮಾತ್ರವೇ ಅನುಭವಿಸಿದರು ಪಾಪ! ಎ೦ಬ ಜನತೆಗೆ ಯಡಿಯೂರಪ್ಪನವರ ಮೇಲಿದ್ದ ಸಹಾನುಭೂತಿಯಿ೦ದಲೋ ಮರು ವಿಧಾನಸಭಾ ಚುನಾವಣೆಯಲ್ಲಿ ಬಾ.ಜ.ಪಾ. ೧೧೦ ಸ್ಥಾನಗಳನ್ನು ಗೆದ್ದು ಪಕ್ಷೇತರರ ಸಹಾಯದಿ೦ದ ಅಧಿಕಾರದ ಗದ್ದುಗೆ ಏರಿತು. ಯಡಿಯೂರಪ್ಪನವರ ಸ೦ಪೂರ್ಣ ಜೀವನವೇ ಸ೦ಘರ್ಷಮಯವೆ೦ದು ಜಾತಕದಲ್ಲಿ ಬರೆದಿದೆಯೇನೋ!! ಅಲ್ಲಿ೦ದ ಇಲ್ಲಿಯವರೆವಿಗೂ ನಮ್ಮ ಮುಖ್ಯಮ೦ತ್ರಿಗಳು ಸರಿಯಾಗಿ ನಿದ್ರೆಯನ್ನೇ ಮಾಡಿರಲಿಕ್ಕೆ ಸಾಧ್ಯವಿಲ್ಲ! ಒ೦ದಲ್ಲಾ, ಒ೦ದು ವಿವಾದಗಳು ಯಡಿಯೂರಪ್ಪನವರ ಬೆನ್ನು ಹತ್ತಿದ ಬೇತಾಳಗಳ೦ತೆ ಹೆಗಲಿಗೇರಿದವು. ಆದರೂ ಅದೃಷ್ಟ ಗಟ್ಟಿಯಿದ್ದುದ್ದಕ್ಕೋ ಏನೋ.. ಅಥವಾ ನಾಡಿನ ಸಮಸ್ತ ಅಧ್ಯಾತ್ಮಿಕ ಸ೦ತರುಗಳ ಆಶಿರ್ವಾದದ ಬಲದಿ೦ದಲೋ ಏನೋ ಇಲ್ಲಿಯವರೆವಿಗೂ ಕುರ್ಚಿಯನ್ನುಳಿಸಿಕೊ೦ಡಿದ್ದಾರೆ.. ಇನ್ನು ಮು೦ದೆ ಅದ್ಯಾವ ದಿವ್ಯ ಹಸ್ತವೂ ಯಡಿಯೂರಪ್ಪನವರ ನೆತ್ತಿಯನ್ನು ನೇವರಿಸಲಾರದು ಎ೦ಬ ಸತ್ಯ ಅರಿವಾಗಿದೆ!
ಈ ಯಡಿಯೂರಪ್ಪನವರು ಹುಟ್ಟಾ “ಮು೦ಗೋಪಿ“ ಎ೦ಬುದು ಸರ್ವವೇದ್ಯ! ಆದರೆ ಅದರ ಜೊತೆಗೆ ಈಗ ಇನ್ನೊ೦ದನ್ನೂ ಸೇರಿಸಿಕೊಳ್ಳೋಣ.. ನಮ್ಮ ಯಡಿಯೂರಪ್ಪನವರಷ್ಟು “ಮಹಾ ಗಡಿಬಿಡಿ ಪುರುಷ “ ಮತ್ತೊಬ್ಬನಿರಲಿಕ್ಕಿಲ್ಲ!! ಎಲ್ಲರನ್ನೂ ಸಮಾನವಾಗಿ ಕರೆದುಕೊ೦ಡು ಹೋಗುವ ಸ್ವಭಾವ ಇವರಿಗಿಲ್ಲವೇ ಇಲ್ಲ. ಎಲ್ಲ್ಲಾ ಹದಿನಾರು ಶಾಸಕರನ್ನು ಅರ್ಹರೆ೦ದು ಸುಪ್ರೀ೦ ಕೋರ್ಟ್ ಅನರ್ಹತೆಯಿ೦ದ ಮುಕ್ತರನ್ನಾಗಿಸಿದ ಕೂಡಲೇ, ಪಕ್ಷದ ಶಾಸಕಾ೦ಗ ಸಭೆಯನ್ನು ಕರೆದು, ಹದಿನಾರು ಶಾಸಕರನ್ನು ಪಕ್ಕದಲ್ಲಿ ಕೂರಿಸಿಕೊ೦ಡು “ಏನ್ರಪ್ಪಾ.. ಏನು ನಿಮ್ಮ ನಿರ್ಧಾರ?“ ಎ೦ದು ಸಮಾಧಾನವಾಗಿ, ವರಿಷ್ಟರ ಸಮ್ಮುಖದಲ್ಲಿ ಅವರನ್ನು ಒಲಿಸಿಕೊ೦ಡಿದ್ದರೆ ಏನಾಗುತ್ತಿತ್ತು? ಅದನ್ನು ಬಿಟ್ಟು, ಹಿ೦ದೆ ಕೊಟ್ಟಿದ್ದ ಅವಿಶ್ವಾಸ ಪತ್ರಗಳನ್ನು ವಾಪಾಸು ತರಲು ರಾಜಭವನಕ್ಕೆ ಕಳುಹಿಸಿಕೊಡುವ ಏರ್ಪಾಟು!ಇವರೆಲ್ಲಾ ಸ೦ವಿಧಾನಾತ್ಮಕವಾಗಿ ಆರಿಸಿ ಹೋದ ಜನಪ್ರತಿನಿಧಿಗಳು ಎ೦ಬುದನ್ನೇ ಮರೆತರೆ ಹೇಗೆ?
ಮತ್ತಷ್ಟು ಓದು 
ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ
ಡಾ|| ಬಿ.ಆರ್. ಸತ್ಯನಾರಾಯಣ
ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ’ ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ ‘ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ’ ಎಂಬ ಲೇಖನದ ಪೂರ್ಣಪಾಠ ಇಲ್ಲಿದೆ. 14.4.11ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಪ್ರಬಂಧದ ಬಗ್ಗೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅದರ ಚಿತ್ರವನ್ನು ಇಲ್ಲಿ ಕಾಣಿಸಿರುತ್ತೇನೆ.

ಅ”ರಾಜಕೀಯ”
ಕರ್ನಾಟಕದ ಮಹಾಜನತೆಯ ದೌರ್ಭಾಗ್ಯಕ್ಕೆ ಅಂತ್ಯವೇ ಇಲ್ಲವೇನೋ ಎನ್ನಿಸುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದೆ. ರಾಜಕೀಯ ರಂಗದ ಅನಿಶ್ಚಿತತೆ, ಅರಾಜಕತೆ ಮತ್ತೊಮ್ಮೆ ತನ್ನ ವಿರಾಟ್ ರೂಪದ ಪ್ರದರ್ಶನ ನೀಡಿದೆ. ಹದಿನಾರು ಶಾಸಕರ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಆಡಳಿತ ಪಕ್ಷ, ವಿರೋಧ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ಸಜ್ಜಾಗಿವೆ.
ನಾನು ಫೋಟೊ ತೆಗೆಯುವ ಆಸೆ-ಭಾಗ ೨
-ಶಿವು.ಕೆ
ಮೊದಲ ಭಾಗದಲ್ಲಿ ನಮ್ಮ ಕಣ್ಣಿಗೆ ಕಾಣುವ ಚಿತ್ರಗಳಿಗೆ ಮೊದಲಿಗೆ ಕೈ ಬೆರಳುಗಳಿಂದ, ನಂತರ ಕ್ಯಾಮೆರದ ವ್ಯೂ ಪೈಂಡರಿನ ಮೂಲಕ ಹೇಗೆ ಚೌಕಟ್ಟುಗಳನ್ನು ಹಾಕಬಹುದು? ಆ ಮೂಲಕ ಕಂಡ ಪುಟ್ಟ ಚಿತ್ರಗಳನ್ನು ನೋಡುತ್ತಲೇ ಮನಸ್ಸಿಗೆ ಲಿಂಕ್ ಮಾಡಿಕೊಂಡು ಆನಂದಿಸಬಹುದು, ಹಾಗೆ ಕ್ಲಿಕ್ಕಿಸಿದ ಫೋಟೊವನ್ನು ನೂರಾರು ಜನರು ನೋಡುವುದರ ಮೂಲಕ ಅವರಿಗೂ ನಿಮ್ಮ ಮನಸ್ಸಿನೊಳಗೆ ಉಂಟಾದ ಸಂತೋಷವನ್ನು ಹಂಚಿಕೊಳ್ಳಬಹುದು ಎನ್ನುವುದನ್ನು ವಿವರಿಸಿದ್ದೆ.
ಈ ಮೂಲಕ ನೀವು ಹೊರಗಿನವರ ಕಣ್ಣಿಗೆ ಮತ್ತು ನಿಮ್ಮ ಮಟ್ಟಿಗೆ ಛಾಯಾಗ್ರಾಹಕರಾಗಿಬಿಟ್ಟಿದ್ದೀರಿ! ಎಷ್ಟು ಖುಷಿಯ ವಿಚಾರ ಅಲ್ವಾ! ಇದೇ ಖುಷಿಯಲ್ಲಿ ನಾವು ಮುಂದೇನು ಮಾಡುತ್ತೇವೆ ಗೊತ್ತಾ? ಗೆಳೆಯರು, ಮನೆಯವರು, ಹೊರಗಿನವರು ನನ್ನನ್ನು ಛಾಯಾಗ್ರಹಕನೆಂದು ಗುರುತಿಸಿದ್ದಾರೆ ಎಂದುಕೊಂಡು ನಿಮಗರಿವಿಲ್ಲದಂತೆ ನಿಮ್ಮ ಉತ್ಸಾಹ ನೂರ್ಮಡಿಯಾಗಿ ಕಣ್ಣಿಗೆ ಕಂಡಿದ್ದನ್ನೆಲ್ಲಾ ಕ್ಲಿಕ್ಕಿಸತೊಡಗುತ್ತೀರಿ…ಮತ್ತೆ ನೀವು ಕಲಿತ ಚೌಕಟ್ಟು ಹಾಕುವುದು ನಿಯಮವನ್ನು ಚೆನ್ನಾಗಿಯೇ ಪಾಲಿಸಿ ಸಿಕ್ಕಾ ಪಟ್ಟೆ ಫೋಟೊ ತೆಗೆಯಲಾರಂಭಿಸುತ್ತೀರಿ. ಮತ್ತಷ್ಟು ಓದು 
ಮೀಡಿಯಾದ ಅಜ್ಜಿ ಕಥೆಯೂ,ಬುಷ್-ಬಿನ್ ಲಾಡೆನ್ ಎ೦ಬ ಟೆರೆರಿಸ್ಟ್ ಗಳೂ…
(ಒಸಾಮ ಸತ್ತ ಮೇಲೆ,ಎಲ್ಲ ಅಮೇರಿಕಾವನ್ನು ಬಯ್ಯುತ್ತಲೋ,ಒಸಾಮನನ್ನು ಹೊಗಳುತ್ತಲೋ ಬರೆಯುವಾಗ, ಶಿಹಾ ಅವ್ರ ವಿಭಿನ್ನ ಯೋಚನಾ ದಾಟಿಯ ಈ ಬರಹ ನಿಲುಮೆಯ ಓದುಗರಿಗಾಗಿ)
– ಶಿಹಾ ಉಳ್ಳಾಲ್
ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆಯ ಸುದ್ಧಿಯನ್ನು ಜಗತ್ತಿನ ವಿವಿಧ ಚಾನೆಲುಗಳು ವಿವಿಧ ರೀತಿಯಲ್ಲಿ ಪ್ರಸಾರಮಾಡುತ್ತಿದ್ದಾಗ ನಮ್ಮ ಕರ್ನಾಟಕದ ನ೦.1 ಬ೦ಡಲ್ ಬಡಾಯಿ ಸುದ್ದಿ ಚಾನೆಲ್ ಸಹ ಈ ಸುದ್ದಿಯನ್ನು ಯಾಕೋ ಅಜ್ಜಿ ಕಥೆ ಹೇಳುವ೦ತೆ ತೋರಿಸಿತು.
ಇ೦ದಿನ ಮಾಧ್ಯಮ ಕೆಲವೊಮ್ಮೆ ಹೇಗೆ ತಪ್ಪು ಮಾಹಿತಿ ಕೊಟ್ಟು ಜನರನ್ನು ದಾರಿತಪ್ಪಿಸುತ್ತದೆ , ಅಲ್ಲಾರೀ ಮಾಹಿತಿ ಪ್ರಸರಿಸುವಾಗ ಸ್ವಲ್ಪವಾದರೂ ,ಕನಿಷ್ಟ 5ನೇ ತರಗತಿ ಓದುವ ಮಕ್ಕಳಲ್ಲಿರುವರ ಬುದ್ದಿ ಬೇಡವೇ.. ಅದನ್ನು ಇಡೀ ವಿಶ್ವ ನೋಡುತ್ತದೆ ಎ೦ಬ ಅರಿವು ಬೇಡವೇ? ಅಲ್ಲ ಅವರ೦ತೆ ,ನೋಡುವವರು ದಡ್ಡರು ಎ೦ದುಕೊ೦ಡಿದ್ದಾರೆಯೇ ?
ಈ ಚಾನಲ್ ಪ್ರಕಾರ 6 ತಿ೦ಗಳ ಮು೦ಚೆಯೇ ಲಾಡೆನ್ ಇರುವ ಮನೆಯನ್ನು ಅಮೇರಿಕ ನೇವಿ ಸೀಲ್ ಟೀಮ್ ಸಿಕ್ಸ್ (ಸ್ಪೆಶನ್ ಇನ್ವೆಸ್ಟಿ ಕೇಶನ್ ಸೋಲ್ಜರ್) ನೋಡಿದ್ದರಂತೆ . ಅದರ೦ತೆ ಅಮೇರಿಕಾದಲ್ಲಿ ಅದರ ತದ್ರೂಪಿ ಕಟ್ಟಡ ತಯಾರಿಸಿ ಅದರಲ್ಲಿ 6 ತಿ೦ಗಳಿನಿ೦ದ ಲಾಡೆನ್ ಹಿಡಿಯುವ ಬಗ್ಗೆ ರಿಹರ್ಸಲ್ ನಡೆಸಲಾಗಿದೆಯಂತೆ ! ಅಬ್ಬಾ ಎ೦ತಹ ಜೋಕ್ ಅಲ್ವೇ ?
29-ಎಪ್ರಿಲ್-2011 ರ೦ದು “ಕಿಲ್ ಲಾಡೆನ್” ಎಂಬ ಕಡತಕ್ಕೆ ಅಂದರೆ ಲಾಡೆನ್ ನನ್ನು ಎನ್-ಕೌ೦ಟರ್ ಮಾಡಲಿಕ್ಕೆ ಒಬಾಮಾ ಆದೇಶಿಸಿದರ೦ತೆ.ವಿಶ್ವದ ಮೋಸ್ಟ್ ವಾ೦ಟೆಡ್ ಒಬ್ಬ ಟೆರೆರಿಸ್ಟ್ ನನ್ನು 6 ತಿ೦ಗಳ ಮು೦ಚೆ ಆತನ ಇರುವಿಕೆಯ ಸ್ಥಳ ನೋಡಿ ಅಲ್ಲಿಯೇ ಆಗಲೇ ಎನ್ ಕೌ೦ಟರ್ ಮಾಡೂವುದು ಬಿಟ್ಟು ಆತ ಇರುವ ಬಿಲ್ಡಿಂಗ್ ಚಿತ್ರವನ್ನು ಅಮೇರಿಕಾದಲ್ಲಿ ತಯಾರಿಸಿ ಅಲ್ಲಿ ತಾಲಿಮು ನಡೆಸಿ.. ಹೋ……..
ಒಸಾಮ ಸತ್ತ… ಭಾರತ ಬದುಕಿದೆಯಾ!?
– ರಾಕೇಶ್ ಶೆಟ್ಟಿ
ತನ್ನ ಮಕ್ಕಳಿಗೆ ಮಾತ್ರ ’ಜಿಹಾದ್’ನೆಡೆಗೆ ಬರಬೇಡಿ ನನ್ನಾಣೆ ಅಂತೇಳಿ, ಕಂಡೋರ ಮಕ್ಕಳ ಬೆನ್ನ ಹಿಂದೆ ಅವಿತು ಕುಳಿತು ಮನುಶ್ಯರನ್ನ ಹುಳಗಳಿಗಿಂತ ಕಡೆಯದಾಗಿ ಸಾಯಿಸಿದ ಒಸಾಮ ಅನ್ನುವ ಸೈತಾನನೊಬ್ಬ ಸತ್ತರೆ ನಾವ್ಯಾಕೆ ಕುಣಿಯಬಾರದು!? ಕುಣಿದರೇನು ತಪ್ಪು?ಇನ್ನೇನು ಅಳಬೇಕಿತ್ತಾ?
ಒಸಾಮ ಸತ್ತರೆ ನಾವ್ಯಕೆ ಕುಣಿಯಬೇಕು? ಅನ್ನುವ ಬರಹವನ್ನೋದಿದೆ.ಅದರಲ್ಲಿ ’ದೇಶ ಪ್ರೇಮ’ ಅನ್ನುವ ಪದದ ಬಗ್ಗೆಯೂ ಉಡಾಫ಼ೆಯಿದೆ.ದೇಶಪ್ರೇಮ ಅನ್ನುವುದನ್ನ ತಾವು ವಿರೋಧಿಸುವ ಪಕ್ಷ/ಸಂಘಟನೆಯ ಗುತ್ತಿಗೆ ಕೊಡಲಾಗಿದೆಯೆಂಬಂತೆ,ಅವರು ಮಾತ್ರವೇ ದೇಶ ಪ್ರೇಮಿಗಳು ಅಂದುಕೊಂಡು,ಅವರ ಮೇಲಿನ ಅಸಹನೆಯನ್ನ ’ದೇಶ ಪ್ರೇಮಿ’ಗಳು ಅನ್ನುವ ಪದಕ್ಕೆ ಜೋಡಿಸಿ ಮಾತನಾಡಿದ್ದಾರೆ ಲೇಖಕರು.
ನನಗೂ ಸ್ವಲ್ಪ ಕೊಡಿ…
– ಚೇತನ್ ಕೋಡುವಳ್ಳಿ
ಮಾರ್ಚ್ ತಿಂಗಳ ಎಲ್ಲ ವೀಕೆಂಡಲ್ಲೂ ಊರಿಗೆ ಹೋಗಿದ್ದೆ. ಊರಲ್ಲಿ ಮಳೆಗಾಗಿ ಕಾಯ್ತಿದ್ರು. ಈಸಲನಾದ್ರೂ ಚೆನ್ನಾಗಿ ಮಳೆ ಬಂದು ಕಾಫಿ ಚೆನ್ನಾಗಿ ಹೂ ಬಿಡ್ಲಿ ಅಂತಿದ್ರು. ನಾನೂ ಹೋದಾಗಲೆಲ್ಲ ಮಳೆಗೆ ಕಾಯ್ತಿದ್ದೆ, ಜೊತೆಗೆ ಕಾಫಿಯ ಹೂವಿಗೆ ಸಹ. ಹೂವಿನಿದ ತುಂಬಿಕಂಗೊಳಿಸುವ ತೋಟವನ್ನ ನೋಡೋದೇ ಕಣ್ಣಿಗೆ ಹಬ್ಬ, ಎಲ್ಲಿ ಕಣ್ಣು ಹಾಯಿಸಿದರೂ ಬಿಳೀಹೂಗಳದ್ದೇ ರಾಶಿ, ಅಲ್ಲದೆ ಆ ಹೂವಿನ ಘಮಲು, ಆಹಾ ಏನು ಪರಿಮಳ, ದಿನಾ ಪೂರ್ತಿ ಅಲ್ಲೇಕುಳಿತಿರೋಣ ಎಂದನ್ನಿಸುತ್ತದೆ.೨ ವರ್ಷ ಆ ಸೌಭಾಗ್ಯ ಸಿಕ್ಕಿರ್ಲಿಲ್ಲ ಯಾಕಂದ್ರೆ ಹೂವು ಆಗಿದ್ದು ವಾರದ ಮಧ್ಯದಲ್ಲಿ 😦 ವೀಕೆಂಡ್ ಬರೋ ಹೊತ್ತಿಗೆ ಎಲ್ಲ ಹೂವು ಉದುರಿ ಹೋಗಿರ್ತಿತ್ತು.
ಒಂದಿನ ಮೋಡ ಆದ ಹಾಗೆ ಆಗ್ತಿತ್ತು, ದೂರದ ಗಿರಿಯಲ್ಲಿ ಕಪ್ಪನೆಯ ಮೋಡ, ಸ್ವಲ್ಪ ಹೊತ್ತಾದಮೇಲೆ ಮಳೆ. ಇತ್ತ ಕಡೆ ಗಾಳಿ ಬೀಸುತ್ತಿತ್ತು, ಮಳೆಯೂ ಬರುತ್ತಿರುವ ಹಾಗನ್ನಿಸುತ್ತಿತ್ತು. ಎಲ್ಲೋದೂರದ ಆಸೆ, ಇನ್ನೇನು ಕಾಲು ಘಂಟೆಯಲ್ಲಿ ಇಲ್ಲಿಗೆ ಬರತ್ತೆ, ಹೋಗಿ ನೆನೆಯಬಹುದು ಅಂತ.ಆಮೇಲೆ ಮಳೆ ಬಂದ್ರೆ ೩-೪ ದಿನ ಆದ್ಮೇಲೆ ಚಿಗುರು ಬಿಟ್ಟು ಹೂವು ಆಗೋ ಹೊತ್ತಿಗೆ ೧ ವಾರಆಗತ್ತೆ, ಮುಂದಿನ ವಾರ ಬರಬಹುದು ಅಂತ ದೂರದ ಆಸೆ. ದೂರದಲ್ಲಿ ಜೋರಾಗಿಸುರಿಯುತ್ತಿದ್ದ ಮಳೆ ಗಾಳಿ ಬೀಸುತ್ತಿದ್ದಂತೆ ಇತ್ತ ಕಡೆ ಬರ್ತಾ ಇತ್ತು. ಅಲ್ಲೇ ಕಣದಲಿ ನಿಂತುನೋಡುತ್ತಿದ್ದ ನನಗೆ, ಪಕ್ಕದ ಊರಲ್ಲಿ ಹನಿಗಳು ಬಿದ್ದಾಗ ಆದ ಸಂತಸ ಅಷ್ಟಿಷ್ಟಲ್ಲ. ಆದರೆ ಸ್ವಲ್ಪಹೊತ್ತಾದ ಮೇಲೆ ಅಲ್ಲಿ ಬೀಳುವುದೂ ಕಡಿಮೆಯಾಯ್ತು. ಕಾಯುತ್ತಿದ್ದ ನಾನು ಸಪ್ಪೆ ಮೊರೆಹಾಕಿಕೊಂಡು ಮನೆ ಒಳಗೆ ಹೋದೆ.
ಬೆಂಗಳೂರಿಗೆ ಬಂದ ಮಾರನೇ ದಿನ ಅಮ್ಮ ಫೋನ್ ಮಾಡಿ ಮಳೆ ಬಂತು ಅಂದಾಗ ಮೊದಲಿಗೆ ಸ್ವಲ್ಪ ದುಃಖ ಆದರೆ ಮರುಕ್ಷಣವೇ ಖುಷಿ. ಮುಂದಿನ ವಾರ ಹೇಗಿದ್ದರೂ ಯುಗಾದಿಗೆ ಊರಿಗೆಹೋಗಬೇಕು ಆಗ ಇಡೀ ತೋಟ ಸುತ್ತಾಡಿ ಅಲ್ಲಿಯ ಸೊಬಗನ್ನು, ಜೊತೆಗೆ ಸುವಾಸನೆಯನ್ನೂ ಸವಿಯಬಹುದಲ್ಲ ಎಂದೆನಿಸಿತು.






