ಮನದ ಕದವನು ತೆರೆದು….
ಎಲ್ಲ ಉದ್ಯೋಗಗಳಿಗೂ “ಡಿಗ್ರಿ” ,”ಸರ್ಟಿಫಿಕೇಟ್”ಗಳ ಅಗತ್ಯವಿದೆ. ಒಂದು ಕವಿತೆ,ಕಥೆ,ಲೇಖನ,ಕಾದಂಬರಿ ಬರೆಯಲು ಇದರ ಅಗತ್ಯವಿಲ್ಲ.ಯಾವುದೇ ಪಠ್ಯ ಪುಸ್ತಕಗಳ ಅಗತ್ಯವೂ ಇಲ್ಲ.ಒಬ್ಬ ಬರಹಗಾರ ಎಲ್ಲೂ ಒಂದು ಕೃತಿಯನ್ನು ಓದಿ,ಆಸಕ್ತಿ ಬೆಳಸಿ ಅದರಂತೆ ಬರೆಯಬೇಕೆನ್ನುವ ಹಂಬಲದಿಂದ ಸಾಹಿತ್ಯ ಪ್ರಪಂಚವನ್ನ ಪ್ರವೇಶಿಸುತ್ತಾನೆ.ಯಾವುದೇ ಆದಾಯ, ಬಡ್ತಿ, ಮಾನ್ಯತೆ ಈ ಒಂದು ಪ್ರಪಂಚದ ” ಪ್ರಾಸ್ಪೆಕ್ಟ್”ನಲ್ಲಿ ಇಲ್ಲ.ಶಾಪ ವಿಮೋಚನೆಯಾಗದ ಅಹಲ್ಯೆಯರು…
– ರೂಪ ರಾವ್,ಬೆಂಗಳೂರು
ರಾಮಾಯಣದ ಸೀತಾ ಸ್ವಯಂವರದ ನಾಟಕದ ತಾಲೀಮು ನಡೆಯುತ್ತಿತ್ತು. 
ಅದರಲ್ಲಿ ಬರುವ ಅಹಲ್ಯಾ ಶಾಪ ವಿಮೋಚನೆಯ ಪ್ರಸಂಗವನ್ನೂ ವೇದಿಕೆಯಮೇಲೆ ತರೋಣ
“ಗೀತಾ ಅಹಲ್ಯಾ ಪಾತ್ರ ನೀನೇ ಮಾಡಬೇಕು .” ಮೇಡಂ ನನ್ನನ್ನು ಈ ಪಾತ್ರಕ್ಕೆ ಕರೆದಾಗ ನಾನು ಕಕ್ಕಾಬಿಕ್ಕಿ, ಜೊತೆಗೆ ಒಮ್ಮೆಗೆ,ಮಾಡಬಾರದೆನಿಸಿತು.
“ಮೇಡಂ ನಾ………….ನು …………ಈ ಪಾರ್ಟ್ ಮಾಡಲ್ಲ. ………” ಹಿಂಜರಿಕೆಯಿಂದಲೇ ನುಡಿದೆ.
“ಯಾಕೆ ಗೀತಾ “? ನನ್ನತ್ತಲೇ ತೀಕ್ಷ್ಣವಾಗಿ ನೋಡುತ್ತಾ
“ಮೇಡಂ iam not happy with Ahalya’s charactor. ತುಂಬಾ ಸಲ ಅನ್ಕೂಂಡಿದ್ದೀನಿ ಯಾಕೆ ಈ ಪಂಚ ಮಹಾ ಕನ್ನಿಕೆಯರ ಹೆಸರಲ್ಲಿ ಅಹಲ್ಯಾ ಹೆಸರು ಸೇರಿದೆ ಅಂತ?”
“ಯಾಕಮ್ಮಾ”? ಮತ್ತೆ ಪ್ರಶ್ನೆ ಎಸೆದರು.
” ಹಾಗಲ್ಲ ಮೇಡಂ ಗಂಡ ಇರದಿದ್ದಾಗ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದವಳು. ಅಸಲಿಗೆ ಆ ಕಥೆಯೇ ಬೇಕಿರಲಿಲ್ಲ .ರಾಮನ ಔನ್ನತೆಯನ್ನ ಎತ್ತಿ ತೋರೋದಿಕ್ಕೆ ಈ ಕತೆ ಸೇರಿಸಿದ್ದಾರೆ ಅಷ್ಟೇ.
“ಸರಿ.ಆಯ್ತು,ನಿನಗೆ ಯಾವ ಪಾತ್ರ ಬೇಕೋ ಅದನ್ನೇ ಚೂಸ್ ಮಾಡು.ಆದರೂ ಪಾತ್ರಕ್ಕಿಂತ ಪಾತ್ರಧಾರಿಯ ಆ ಪಾತ್ರದಲ್ಲಿ ಹೇಗೆ ಇನ್‌ವಾಲ್ವ್ ಆಗ್ತಾನೆ ಅನ್ನೋದು ಮುಖ್ಯ. ಮತ್ತೆ ಪುರಾಣದಲ್ಲಿ ಕೇಳಿದ ಕಥೆಯನ್ನ ಆ ನೆಲೆಯಲ್ಲಿಯೇ ನೋಡುವುದಕ್ಕಿಂತ ಒಂದು ವಿಭಿನ್ನ ನೆಲೆಯಲ್ಲಿ ನೋಡಿದರೆ ಪಾತ್ರ ಇಂಟರೆಸ್ಟಿಂಗ್ ಆಗಿರುತ್ತೆ. ಅಹಲ್ಯಾ ಜೀವನದಲ್ಲಿ ನಿಜಕ್ಕೂ ಏನು ನಡೆದಿರಬಹುದು ಅನ್ನೋದನ್ನ ಯೋಚಿಸಿದರೆ ಆ ಪಾತ್ರ ನಿಜಕ್ಕೂ ತುಂಬಾ ಕಾಂಪ್ಲಿಕೇಟೆಡ್ ಅನ್ಸುತ್ತೆ. “ಮೇಡ್ಂ ಒಂದೇ ಸಲಕ್ಕೆ ಒಪ್ಪಿ, ಜೊತೆಗೇ ನನ್ನ ಮನಸಲ್ಲಿ ಅಲೆಯನ್ನು ಎಬ್ಬಿಸಿದರು.
ಮತ್ತಷ್ಟು ಓದು 
ಅಟ್ಲಾಂಟಿಕ್ ಸಾಗರ ಸಮ್ಮುಖದಲ್ಲಿ….
– ಅಮಿತಾ ರವಿಕಿರಣ್
”ದೇಶ ಸುತ್ತು ಕೋಶ ಓದು” ಅನ್ನೋ ಗಾದೆ ಮಾತು ನನಗೇ ಬಹಳ ಇಷ್ಟಾ….ಯಾಕಂದ್ರೆ ಅದರಲ್ಲಿ ತಿರುಗಾಟ ಇಷ್ಟಾ ಪಡೋರ್ ಬಗ್ಗೆ ಒಂದು ಒಲುಮೆ ಇದೆಯಲ್ಲ ಅದಕ್ಕೆ….!!ಬಾಲ್ಯದಿಂದಲೂ ನನಗೇ ತಿರುಗಾಟ ಅತಿ ಪ್ರಿಯವಾದ ವಿಷಯ ಶಾಲೆಯ ಟ್ರಿಪ್ಪ್ ಗಳನ್ನೂ ನಾ ಯಾವತ್ತು ಮಿಸ್ ಮಾಡಿಲ್ಲ…ಅದರ ನಂತರ ಸಂಗೀತ ನನ್ನ ವೃತ್ತಿ ಆಯಿತು ಅಲ್ಲಿ ಸ್ಪರ್ಧೆ…ಇಲ್ಲಿ ಕಾರ್ಯಕ್ರಮ ಅಂತ ಬರೀ ತಿರುಗಾಟ ನಡೆಸಿದ್ದೆ… ,ಕೆ ಎಸ್ಸ್ ಆರ್ ಟಿ ಸಿ ಬಸ್ಸು ಅಂದರೆ ನನ್ನ ಎರಡನೇ ತವರು ..ಕಾಲೇಜ್ ಗೆ ಹೋಗಿದ್ದು ಧಾರವಾಡ್ ದಲ್ಲಿ..ಮೊದಲಿಗೆ ಕರ್ನಾಟಕ ಕಾಲೇಜ್ ಸಂಗೀತ ವಿದ್ಯಾಲಯ ,,,,ಆಮೇಲೆ ಕರ್ನಾಟಕ ವಿಶ್ವ ವಿದ್ಯಾಲಯ…ನನ್ನೂರಿಂದ ೭೬ ಕಿ ಮಿ ದೂರದಲ್ಲಿದ್ದರು ನಾ ದಿನ ಓಡಾಡಿಯೇ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದ್ದು….
ಎಂಥಾ ಮರುಳಯ್ಯಾ ಇದು…
– ಚಾಮರಾಜ ಸವಡಿ
ತುಂಬ ದಿನಗಳ ಹಿಂದೆ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಸಂದರ್ಶನವೊಂದರಲ್ಲಿ ಹೇಳಿದ ಮಾತೊಂದು ನೆನಪಾಗುತ್ತಿದೆ. ಓದುಗರನ್ನು ಈ ಪರಿ ಸೆಳೆಯುವಲ್ಲಿ ನೀವು ಯಶಸ್ವಿಯಾಗಿದ್ದು ಹೇಗೆ? ಎಂಬಂರ್ಥದ ಪ್ರಶ್ನೆಗೆ ಯಂಡಮೂರಿ ಉತ್ತರ: ಅವರ ದೌರ್ಬಲ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ.
ಇವತ್ತು ನಮ್ಮ ಸುತ್ತಮುತ್ತ ನಡೆಯುತ್ತಿರುವ ಹಲವಾರು ವಿಷಯಗಳನ್ನು ನೋಡಿದಾಗ ನನಗೆ ಈ ಮಾತು ಪದೆ ಪದೆ ನೆನಪಿಗೆ ಬರತೊಡಗಿದೆ.
ಸ್ವಾಮಿಗಳು, ಕಪಟ ಜ್ಯೋತಿಷಿಗಳು, ಬಹುತೇಕ ರಾಜಕಾರಣಿಗಳು, ಟಿವಿಗಳು, ಪತ್ರಿಕೆಯವರು, ಸರ್ಕಾರಿ ನೌಕರರು, ವಕೀಲರು, ವೈದ್ಯರು- ಹೀಗೆ ನೀವು ಯಾವುದೇ ರಂಗ ನೋಡಿದರೂ ಸಾಕು, ಯಂಡಮೂರಿ ಹೇಳಿದ ಮಾತು ಸತ್ಯ ಎಂಬುದು ಸ್ಪಷ್ಟವಾಗುತ್ತ ಹೋಗುತ್ತದೆ. ಪ್ರತಿಯೊಬ್ಬರೂ ಜನರ ದೌರ್ಬಲ್ಯ ಹಾಗೂ ಅನಿವಾರ್ಯತೆಗಳನ್ನೇ ಬಳಸಿಕೊಳ್ಳುವವರು. ಎಲ್ಲೋ ಒಬ್ಬಿಬ್ಬರು ಪುಣ್ಯಾತ್ಮರು ಇರಬಹುದು. ಆದರೆ, ಬಹುತೇಕರ ಜೀವನ ನಡೆಯುತ್ತಿರುವುದೇ ಜನರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದರಿಂದ.
ಸಾಮಾನ್ಯ ವ್ಯಕ್ತಿಯಂತೆ ಓಡಾಡಿಕೊಂಡವ ಕಾವಿ ಬಟ್ಟೆ ಧರಿಸಿದ ಕೂಡಲೇ ಆತ ಸ್ವಾಮೀಜಿಯಾಗಿಬಿಡುತ್ತಾನೆ. ಕಿಂಚಿತ್ತೂ ವಿಚಾರ ಮಾಡದೇ ಆತನ ಕಾಲಿಗೆ ಬೀಳಲು ಜನ ಹಾತೊರೆಯತೊಡಗುತ್ತಾರೆ. ಖಾಲಿ ಓಡಾಡಿಕೊಂಡವ, ಒಂದಕ್ಕೆರಡು ಪಟ್ಟು ಹಣ ಕೊಡುತ್ತೇನೆ ಎಂದ ಕೂಡಲೇ ಸಾಲ ಮಾಡಿ ಹಣ ಕೊಡಲು ಜನ ಮುಂದಾಗುತ್ತಾರೆ. ಜ್ಯೋತಿಷಿಗಳು ಹೇಳಿದಂತೆ ನಡೆದುಕೊಳ್ಳುವವರು, ಜಾಹೀರಾತು ನೋಡಿ ಔಷಧಿ ಕೊಳ್ಳುವವರು, ಕೆಲಸಕ್ಕೆ ಹಣ ಕಟ್ಟುವವರು, ಅರ್ಧ ರೇಟಿಗೆ ಚಿನ್ನ ಕೊಳ್ಳಲು ಹಾತೊರೆಯುವವರು, ಕೆಲಸ ಕೊಡುತ್ತೇನೆ ಎಂದರೆ ಕರೆದಲ್ಲಿಗೆ ಹೋಗುವವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಮಾತಿಗೆ ಬಂದರೆ, ಅವರೂ ರಾಜಕಾರಣಿಗಳನ್ನು, ಜ್ಯೋತಿಷಿಗಳನ್ನು, ಸ್ವಾಮೀಜಿಗಳನ್ನು, ನಕಲಿ ವೈದ್ಯರನ್ನು, ವಂಚಕರನ್ನು ಬೈಯುವವರೇ. ಆದರೆ, ತಮಗೆ ಲಾಭವಾಗುತ್ತದೆ ಎಂದು ಅನಿಸಿದ ತಕ್ಷಣ ವಿವೇಚನೆ ಮರೆತುಬಿಡುತ್ತಾರೆ. ಕಣ್ಣು ಮುಚ್ಚಿಕೊಂಡು ಹಳ್ಳಕ್ಕೆ ಬೀಳುತ್ತಾರೆ.
ಕಸದಿಂದ ರಸ ತೆಗೆದ ವಿಲಿಯಂನ ಕತೆ !
– ವಸಂತ್ ಶೆಟ್ಟಿ
ಜಗತ್ತಿನೆಲ್ಲೆಡೆ ಎಲ್ಲೇ ಒಂದೊಳ್ಳೆ ಐಡಿಯಾ ಜನರ ಜೀವನದ ದಿಕ್ಕು ಬದಲಿಸುವಂತದ್ದಾಗಿದ್ದಲ್ಲಿ, ಎಷ್ಟೋ ಕಶ್ಟದ ಸಮಸ್ಯೆಗಳಿಗೆ ತಟ್ ಅಂತ ಪರಿಹಾರ ಕೊಡಿಸುವಂತದ್ದಾಗಿದಲ್ಲಿ ಅಂತಹ ಐಡಿಯಾ TED.com (Technology, Entertainment and Design) ನಲ್ಲಿ ಕಾಣಿಸಿಕೊಳ್ಳದೇ ಇರುವುದು ವಿರಳ ಅನ್ನಬಹುದು. ಎಲ್ಲೆಡೆ, ಎಲ್ಲರೊಡನೆ ಹಂಚಿಕೊಳ್ಳ ಬಹುದಾದಂತಹ ಐಡಿಯಾಗಳಿಗೆಂದೇ ಟೆಡ್ ಕಾನ್ಫರೆನ್ಸ್ ಗಳನ್ನು 1984ರಿಂದಲೇ ಸ್ಯಾಪಲಿಂಗ್ ಫೌಂಡೇಶನ್ ಅನ್ನುವ ಸಂಸ್ಥೆ ನಡೆಸಿಕೊಂಡು ಬಂದಿದೆ. 2006ರಿಂದಿಚೆಗೆ ಟೆಡ್.ಕಾಂ ತಾಣದಲ್ಲಿ 700ಕ್ಕೂ ಹೆಚ್ಚು ಇಂತಹ ಚರ್ಚೆಗಳ ವಿಡಿಯೋಗಳನ್ನು ಪುಕ್ಕಟ್ಟೆ ನೋಡಲು ಅನುಕೂಲ ಮಾಡಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ 290ಮಿಲಿಯನ್ ಬಾರಿ ಈ ತಾಣದಲ್ಲಿನ ವಿಡಿಯೋಗಳನ್ನು ನೋಡಲಾಗಿದೆ ಅನ್ನುವುದು ಇಲ್ಲಿ ನಡೆಯುವ ಚರ್ಚೆಗಳ ಗುಣಮಟ್ಟ ಮತ್ತು ವಿಷಯದಲ್ಲಿನ ವ್ಯಾಪ್ತಿಯನ್ನು ತೋರಿಸುತ್ತೆ ಅನ್ನಬಹುದು. ಇರಲಿ, ಇವತ್ತು ಟೆಡ್ ಬಗ್ಗೆ ಇಷ್ಟೆಲ್ಲ ಮಾತನಾಡಲು ಕಾರಣ, ಆಕಸ್ಮಿಕವಾಗಿ ಟೆಡ್ ನಲ್ಲಿ ಎಡತಾಕಿದ ಒಂದೊಳ್ಳೆ ವಿಡಿಯೋ !
ಗಾಳಿ ಗೋಪುರ ಕಟ್ಟಿದ ವಿಲಿಯಂನ ಕತೆ !
ಇಡೀ ಜಗತ್ತನ್ನೇ ಸಾಕಿ ಸಲುಹಬಲ್ಲ ಪ್ರಕೃತಿ ಸಂಪತ್ತುಳ್ಳ ಆಫ್ರಿಕಾದ ಹೆಚ್ಚಿನ ದೇಶಗಳು ತಮ್ಮ ಒಳಜಗಳ, ಜನಾಂಗೀಯ ಕಲಹಗಳಲ್ಲಿ ಮುಳುಗಿ, ಒಪ್ಪೊತ್ತಿನ ಕೂಳಿಗೂ ಗತಿಯಿಲ್ಲದ, ನಡೆದಾಡುವ ಅಸ್ತಿಪಂಜರವುಳ್ಳ ಜನರೇ ತುಂಬಿರುವ ದೇಶಗಳಿಂದ ತುಂಬಿದೆ. ಮಲಾವಿ ಅನ್ನುವ ಕಡು ಬಡ ದೇಶವೂ ಇದೇ ಆಫ್ರಿಕಾದಲ್ಲಿದೆ. ಭೂಮಿಯನ್ನೇ ನೆಚ್ಚಿಕೊಂಡು ಬದುಕುವ ಬಹು ಪಾಲು ಜನರಲ್ಲಿ ವಿಲಿಯಂ ಕಂಕವಾಂಬಾ ಎಂಬ 14ರ ಪೋರನು ಕೂಡಾ ಒಬ್ಬ. 2001ರಲ್ಲಿ ಬಂದ ಭೀಕರ ಬರಗಾಲ 6 ಜನ ಅಕ್ಕ-ತಂಗಿಯರಿದ್ದ ಅವನ ಕುಟುಂಬವನ್ನು ಹಸಿವಿನಿಂದ ನರಳುವಂತೆ ಮಾಡಿತ್ತು, ಆತನನ್ನು ಶಾಲೆಯಿಂದಲೂ ಬಿಡಿಸಿತ್ತು. Necessity is mother of all invention ಅನ್ನುವ ಎಂಬಂತೆ ತನಗೆರಗಿದ ಬರಕ್ಕೆ ಪರಿಹಾರ ಕಂಡುಕೊಳ್ಳಲು ಹೊರಟ ವಿಲಿಯಂನಿಗೆ ಕಂಡಿದ್ದು ತನ್ನೂರಿನಲ್ಲಿ ಬಿರುಸಿನಿಂದ ಬೀಸುತ್ತಿದ್ದ ಗಾಳಿ !. ಹತ್ತಿರದ ಹೊತ್ತಿಗೆಮನೆಯಿಂದ ತಂದ ಫಿಸಿಕ್ಸ್, ವಿಂಡ್ ಎನರ್ಜಿಯ ಹೊತ್ತಿಗೆಗಳನ್ನು ಓದಿ (ಚಿತ್ರ ನೋಡಿ ಅನ್ನುವುದು ಹೆಚ್ಚು ಸೂಕ್ತ), ಮುರಿದೋದ ಸೈಕಲ್ಲು, ಟ್ರಾಕ್ಟರ್ ಫ್ಯಾನ್, ಪಿವಿಸಿ ಪೈಪ್ ಹೀಗೆ ಗುಜರಿಯಲ್ಲಿ ಸಿಕ್ಕ ಹಲವು ವಸ್ತು ಬಳಸಿ ಗಾಳಿ ಯಂತ್ರ ತಯಾರಿಸಿದ ವಿಲಿಯಂ ಅದರಿಂದ ದೊರೆತ ವಿದ್ಯುತ್ ಶಕ್ತಿ ಬಳಸಿ ತನ್ನ ಜಮೀನಿಗೆ ನೀರಾವರಿ, ಮನೆಗೆ ಬಳಸುವಷ್ಟು ವಿದ್ಯುತ್ ಹುಟ್ಟಿಸಿದ ಕತೆಯನ್ನು ಆತನ ಬಾಯಲ್ಲೇ ಈ ವಿಡಿಯೋದಲ್ಲಿ ಕೇಳಬಹುದು.
ಗುರಿ ಬೆನ್ನತ್ತಿದ್ದ ಹಟಮಾರಿಗೆ ಗೆಲುವು ಕಟ್ಟಿಟ್ಟ ಬುತ್ತಿ !
ಕೊನೆಯಲ್ಲಿ ವಿಲಿಯಂ ತನಗೆ ತಿಳಿದಷ್ಟು ಇಂಗ್ಲಿಷಿನಲ್ಲಿ ಒಂದು ಮಾತು ಹೇಳುತ್ತಾನೆ.
I would like to say something to all the people out there like me, to the Africans and the poor who are struggling with your dreams, god bless. May be one day, you watch this on the Internet, I said to you ” trust yourself and believe”, whatever happen, don’t give it up”
ಗೆಲ್ಲಲೇಬೇಕು ಅನ್ನುವ ಹಟ ತೊಟ್ಟ ಕನಸುಗಾರನಿಗೆ ಬಡತನ, ಹಸಿವು ಯಾವುದು ಅಡ್ಡಿ ಮಾಡದು ಅನ್ನುವುದಕ್ಕೆ ವಿಲಿಯಂನಿಗಿಂತ ಒಳ್ಳೆಯ ಎತ್ತುಗೆ ಬೇಕಿಲ್ಲ. ಖ್ಯಾತ ಇಂಗ್ಲಿಷ್ ಲೇಖಕ ಪಾಲೊ ಕೊಯಿಲೊ ತನ್ನ “ದಿ ಅಲ್ಕೆಮಿಸ್ಟ್” ನಲ್ಲಿ ಹೇಳುವಂತೆ “When you want something, all the universe conspires in helping you to achieve it.” ಗುರಿ ಬೆನ್ನತ್ತಿದ್ದ ಹಟಮಾರಿ ತನ್ನ ಗುರಿ ತಲುಪುವಂತಾಗಲು ಇಡೀ ಜಗತ್ತೇ ಸಂಚು ರೂಪಿಸುತ್ತೆ. ಬಡತನ, ಹಸಿವು, ಅನಕ್ಷರತೆ, ದಾರಿದ್ರ್ಯ ನಮ್ಮ ಕರ್ನಾಟಕದಲ್ಲೂ ಇದೆ. ಇಲ್ಲಿರುವ ಪ್ರತಿ ಮಗುವೂ ಚಿನ್ನ. ಪ್ರತಿ ಮಕ್ಕಳಲ್ಲೂ ಅಡಗಿರುವ ಪ್ರತಿಭೆ ಹೊರ ತರುವಂತಹ ಕಲಿಕೆಯ ಏರ್ಪಾಡುಗಳು ಇಲ್ಲಿ ಹುಟ್ಟಬೇಕಿದೆ. ಸುಮ್ನೆ ಯೋಚ್ನೆ ಮಾಡಿ, ಒಂದು ದಿನ ಟೆಡ್ ಕಾನ್ಫರೆನ್ಸ್ ಅಲ್ಲಿ ನಿಂತು ರಾಯಚೂರಿನ ಬಸವರಾಜನೋ, ಇಲ್ಲ ಮೈಸೂರಿನ ಹನುಮೇಗೌಡನೋ ತನ್ನ ಯಶಸ್ಸಿನ ಕತೆ ಹೇಳಿಕೊಳ್ಳುತ್ತ ಕನ್ನಡಿಗರೆಲ್ಲರಲ್ಲಿ ಹೆಮ್ಮೆ ಹುಟ್ಟುಹಾಕುವಂತ ದಿನಗಳು ಬಂದಲ್ಲಿ ಎಷ್ಟು ಖುಶಿಯಾಗಬಹುದು ಅಲ್ವಾ? ಕನಸು ಕಾಣಬೇಕು, ಬೇತಾಳದಂತೆ ಅದರ ಬೆನ್ನತ್ತಬೇಕು, ಇಂತಹದೊಂದು ಹಟ ಕನ್ನಡಿಗರಲ್ಲಿ ಹುಟ್ಟಿದ ದಿನ ನಮ್ಮನ್ನು ತಡೆಯಲು ಯಾರಿಂದಲೂ ಆಗದು.
ಕೊನೆ ಹನಿ
ಟೆಡ್.ಕಾಂ ನಲ್ಲಿನ ವಿಡಿಯೋಗಳಿಗೆ ಜಗತ್ತಿನ 38 ಭಾಷೆಗಳಲ್ಲಿ ಸಬ್ ಟೈಟಲ್ ವ್ಯವಸ್ಥೆಯಿದೆ. ಮರಾಠಿ, ತಮಿಳಿನಂತಹ ನಮ್ಮ ದೇಶದ ನುಡಿಗಳಲ್ಲೂ ಈ ವ್ಯವಸ್ಥೆಯಿದೆ, ಆದರೆ ನಮ್ಮ ನುಡಿ ಕನ್ನಡದಲ್ಲಿ ಇದಾವುದು ಇಲ್ಲ. ಕನ್ನಡಕ್ಕೂ ಜಗತ್ತಿನ ಹಲವು ದೊಡ್ಡ ಭಾಷೆಗಳಿಗೆ ಸಿಗುವ ಎಲ್ಲ ಮರ್ಯಾದೆ ಕೊಡಿಸುವುದು ಕನ್ನಡದ ಹುಡುಗರ ಕೈಯಲ್ಲೇ ಇದೆ. ಇಲ್ಲಿನ ವಿಡಿಯೋಗಳಿಗೆ ಕನ್ನಡ ಸಬ್ ಟೈಟಲ್ ಸೇರಿಸಲು ಈ ಕೊಂಡಿಯನ್ನು ನೋಡಿ.
ಬ್ಯಾಂಕಿನ ಹೆಸರಲ್ಲಿ ಬರೋ ಸಂದೇಶಗಳ ಬಗ್ಗೆ ಎಚ್ಚರ..!!
– ಸತ್ಯ ಚರಣ
ಸಂದೇಶ ನನಗೆ ಬಂದು ಬಿದ್ದಿದ್ದ ಜಾಗವೇ.. ಸ್ಪ್ಯಾಮ್..! ಇದರ ಒಟ್ಟು ಕತೆ ಏನು ಗೊತ್ತಿದ್ದರೂ.. ಒಮ್ಮೆ ನೋಡಿ ಬಿಡೋಣ ಅಂತ ಅನ್ನಿಸಿತ್ತು.. ಹೆಚ್ಚಿನ ವಿಚಾರ, ಇದರ ಬಗ್ಗೆ ತಿಳಿಯುವುದು ಒಳ್ಳೆಯದೇ ಅನ್ನೋ ಉದ್ದೇಶದಿಂದ.. ಈ ಸಂದೇಶವನ್ನ ತೆರೆದು ನೋಡಿದೆ.. ಇದು ಒಂದು ಬ್ಯಾಂಕಿನ ಹೆಸರಿನಲ್ಲಿ ಬಂದ ಸ್ಪ್ಯಾಮ್..!
ಯಾವುದೇ ಸಂದೇಶ, “Netbanking Status”, “Need to update your netbanking account/password” ಅಥವಾ ಇದಕ್ಕೆ ಸಮೀಪದ/ಹೋಲಿಕೆಯ ವಿಷಯಗಳೊಂದಿಗೆ ಬಂದಾಗ, ಅದು ಖಂಡಿತ ಒಂದು “FAKE MAIL” “ಮೋಸದ ಸಂದೇಶ” ಅನ್ನೋದು ಖಚಿತ.. ಇದರ ಬಗ್ಗೆ ನನ್ನಲ್ಲಿದ್ದ ವಿಚಾರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಅನ್ನೋ ಯೊಚನೆ ಈ ಬರಹಕ್ಕೆ ಕಾರಣ..
HDFC ಹೆಸರಲ್ಲಿ ಬಂದಿದ್ದ ಮೇಲ್ ಗೂಗಲ್‌ನ ಕೃಪೆಯಿಂದ ಬಂದು ಬಿದ್ದದ್ದು “ಸ್ಪ್ಯಾಮ್ ತೊಟ್ಟಿ”ಯಲ್ಲಿ ಅಂದಾಗಲೇ, ಇದು ಎಡವಟ್ಟಿನ ಸಂದೇಶ ಅಂತ ತಿಳಿದರೂ.. ತೆರೆದು ನೋಡಿದಾಗ ಅದರ ವಿವರ ಇಂತಿತ್ತು..
ಅಬ್ಬಾ..! ಎಷ್ಟು ಹುಷಾರಾಗಿದಾರಪ್ಪ ಈ ಜನ, ಈಗ..! ಅಂತನ್ನಿಸಿತು.. ಯಾಕೆಂದರೆ, ಹಿಂದೊಮ್ಮೆ ಇದೇ ರೀತಿಯಲ್ಲಿ ಸಂದೇಶವೊಂದು ಬಂದಾಗ, ನಾನು ಮೊದಲು ಮಾಡಿದ ಕೆಲಸ.. “Show Details” ಅನ್ನೋ ಆಯ್ಕೆಯನ್ನ ಒತ್ತಿದ್ದು.. ಅಲ್ಲೇ ನನಗೆ ತಿಳಿದಿತ್ತು ಇದು, ಬ್ಯಾಂಕಿನವರ ಸಂದೇಶವಲ್ಲ ಅಂತ..! ಆದರೆ, ಇಲ್ಲಿ ತಿಳಿಯಲು ಸಾಧ್ಯವೇ ಇಲ್ಲ.. ಎಲ್ಲಾ ರೀತಿಯಲ್ಲೂ ಅವರು ಬ್ಯಾಂಕನ್ನ ಹೋಲುವ ರೀತಿಯಲ್ಲಿ ತಯಾರಿ ನಡೆಸಿದ್ದಾರೆ.. (ಕೆಂಪು ರೇಖೆಯೊಂದಿಗಿನ ವೃತ್ತವನ್ನ ಗಮನಿಸಿ)
ಹಾಗಾದರೆ, ಈ ಸಂದೇಶಗಳನ್ನ ಹೇಗಪ್ಪಾ ಪತ್ತೆ ಹಚ್ಚೋದು…?
ನಾನು ಫೋಟೋ ಕ್ಲಿಕ್ಕಿಸುವ ಆಸೆ!
-ಶಿವು.ಕೆ
ಫೋಟೊಗ್ರಫಿ ಎಂದರೇನು? ಅದು ಎಲ್ಲಿ ಹುಟ್ಟಿತು? ಮುಂದೆ ಹೇಗೆ ಅದು ಹೊಸ ಅವತಾರಗಳನ್ನು ಪಡೆಯಿತು? ಈಗ ಏನು ನಡೆಯುತ್ತಿದೆ ಎನ್ನುವುದನ್ನು ಮೊದಲು ಬರೆಯಬೇಕೆನಿಸಿದರೂ ಅವೆಲ್ಲಾ ಈಗ ಅಂತರಜಾಲದಲ್ಲಿ ಜಾಲಾಡಿದರೆ ಅನೇಕಭಾಷೆಗಳಲ್ಲಿ ಸಿಕ್ಕಿಬಿಡುವುದರಿಂದ ಅದರ ಬಗ್ಗೆ ಬರೆಯುವ ಅವಶ್ಯಕತೆಯಿಲ್ಲ. ವಿಶ್ವದಾದ್ಯಂತ ಪುಸ್ತಕಗಳಲ್ಲಿ ಮತ್ತು ಅಂತರಜಾಲದಲ್ಲಿ ಸಿಗುವ ಫೋಟೊಗ್ರಫಿಗಿಂತ ನಿಮ್ಮ ಮತ್ತು ನನ್ನ ಫೋಟೊಗ್ರಫಿ ಆಸೆಯ ಬಗ್ಗೆ ಅದರೆಡೆಗೆ ಮೂಡಿದ ಕುತೂಹಲದ ಬಗ್ಗೆ ಇತ್ಯಾದಿ ವಿಚಾರಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ. ಏಕೆಂದರೆ ಫೋಟೊಗ್ರಫಿ ಎನ್ನುವ ವಿಚಾರ ಎಷ್ಟು ದೊಡ್ಡದಾಗಿದ್ದರೂ ನಮ್ಮ ವೈಯಕ್ತಿಕ ವಿಚಾರಕ್ಕೆ ಬಂದಾಗ ಅದೊಂದು ಹವ್ಯಾಸ. ನಿಮಗೂ ಕೂಡ ಫೋಟೊಗ್ರಫಿ ಕಲಿಯಬೇಕೆನ್ನುವ ಮತ್ತು ಹವ್ಯಾಸವನ್ನಾಗಿ ಮಾಡಿಕೊಳ್ಳುವ ಆಸೆಯಿರುತ್ತದೆಯಲ್ಲವೇ…? ನಿಮ್ಮಲ್ಲಿ ಈಗ ಹುಟ್ಟಿದ ಆಸೆ ನನಗೆ ಯಾವಾಗ ಹುಟ್ಟಿತ್ತು? ಅದರ ಮುಂದಿನ ಹಂತಗಳೇನು ಎನ್ನುವುದನ್ನು ಸ್ವಲ್ಪ ವಿವರಿಸಿಬಿಡುತ್ತೇನೆ.
‘ಕಾಪ’ ಪಂಚಾಯಿತಿ!
– ಪ್ರಶಾಂತ್ ಯಾಳವಾರಮಠ
ಸುನೀತಾ(21) ಮತ್ತು ‘ಜಸ್ಸಾ’ ಉರ್ಫ್ ಜಸ್ಬೀರ್ ಸಿಂಗ(22) ಒಬ್ಬರನ್ನೊಬ್ಬರು ಪ್ರೀತಿಸಿ.. ’ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಅಂದು ಕೊಂಡು ಮನೆಯವರ ಮತ್ತು ಊರಿನವರ ವಿರೋಧದ ನಡುವೆ ಮದುವೆಯಾಗಿದ್ದರು! ತಮ್ಮ ಪುಟ್ಟ ಸಂಸಾರ, ಪುಟ್ಟ ಮನೆ ಮತ್ತೆ ತಮಗೆ ಒಂದು ಪುಟ್ಟ ಮಗುವಿನ ಬರುವಿಗೆ ಕಾಯ್ತಾ ಹಾಯಾಗಿದ್ದರು ಅಂದರೆ ಸುನೀತಾ ೫ ತಿಂಗಳ ಗರ್ಭಿಣಿ!.
ಹೀಗೆ ಎಲ್ಲವೂ ಚೆನ್ನಾಗಿರುವಾಗ ಒಂದು ದಿನ ಮುಂಜಾನೆ ಸುನಿತಾಳ ತಂದೆಯ ಮನೆ ಮುಂದೆ ಅತೀ ಕ್ರೂರತನಕ್ಕೆ ಸಾಕ್ಷಿಯಾಗಿ ಎರಡು ದೇಹಗಳು ಬಿದ್ದಿದ್ದವು! ಅಬ್ಬಾ ಎಂತಹ ರಾಕ್ಷಸರು ಅಂತೀರಾ ಗರ್ಭಿಣಿಯ ಹೊಟ್ಟೆಗೆ ಒದ್ದಿದ್ದರು, ಮುಖಕ್ಕೆ ಗುದ್ದಿದ್ದರು ಮತ್ತು ಎರಡು ದೇಹಗಳಿಗೆ ಇರಿದಿದ್ದರು!
ಗಂಡಿನ ದೇಹದ ಹೆಣ್ಣಿನ ಅಂತರಂಗ
ನಾನ್ಯಾರು? ಇಂದಿಗೂ ನನಗೆ ಇದೊಂದು ಬಗೆಹರಿಯದ ಸಂಗತಿ. ಸೇಲಮ್ ಬಳಿಯ ನಮಕಲ್ಲ್ ತಾಲೂಕಿನ ಪುಟ್ಟದೊಂದು ಹಳ್ಳಿಯಲ್ಲಿ ಹುಟ್ಟಿದ ನನಗೆ ಅಪ್ಪ ಅಮ್ಮ ಇಟ್ಟ ಹೆಸರು ದೊರೈಸ್ವಾಮಿ. ಆದರೆ ನನಗೆಂದಿಗೂ ಈ ನನ್ನ ಹೆಸರು ಆಪ್ತವೆನಿಸಲೇ ಇಲ್ಲ! ನನಗೆ ಇಬ್ಬರು ಅಣ್ಣಂದಿರು, ಒಬ್ಬಳು ಅಕ್ಕ. ನಾನೇ ಎಲ್ಲರಿಗಿಂತ ಕೊನೆಯವನಾದ ಕಾರಣ ಎಲ್ಲರ ಪ್ರೀತಿ, ಆದರ ನನಗೊಂದಿಷ್ಟು ಹೆಚ್ಚೇ ಸಿಗುತ್ತಿತ್ತು. ನಮ್ಮದೊಂದು ಹಳೆಯ ಎರಡಂತಸ್ತಿನ ಮನೆಯಲ್ಲಿ ನಮ್ಮ ವಾಸ. ನಮ್ಮಪ್ಪನ ಬಳಿ ಎರಡು ಲಾರಿಗಳು ಹಾಗೂ ೫ ಎಕರೆ ಒಣಭೂಮಿ ಇತ್ತು. ಅಪ್ಪ ಲಾರಿ ಡ್ರೈವರ್, ದೊಡ್ಡಣ್ಣ ಅವರ ಬಳಿ ಕ್ಲೀನರ್ ಆಗಿ ಸಂಸಾರ ನಡೆಸಲು ಸಹಾಯ ಮಾಡುತ್ತಿದ್ದ. ಅಪ್ಪ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹಾಲನ್ನು ಸಂಗ್ರಹಿಸಿ, ಹತ್ತಿರದ ಹಾಲಿನ ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದ. ಇದಕ್ಕಾಗಿ ಈತ ಮುಂಜಾನೆ ಐದಕ್ಕೆ ಹೊರಟರೆ ಮನೆಗೆ ರಾತ್ರಿ ಹತ್ತು ಗಂಟೆಯ ತನಕವೂ ಎಡೆಬಿಡದಂತೆ ದುಡಿಯುತ್ತಿದ್ದ. ಅಣ್ಣಂದಿರು ಕೂಡ ಈತನಿಗೆ ಸಹಾಯ ಮಾಡುತ್ತಿದ್ದರು. ಅವರು ಬರುವ ಹೊತ್ತಿಗೆ ನಾನು ಹಾಗೂ ನನ್ನಕ್ಕ ಇಬ್ಬರೂ ಆಗಲೇ ನಿದ್ರಾವಸ್ಥೆಯಲ್ಲಿರುತ್ತಿದ್ದೆವು. ಅಪ್ಪ ಬಂದೊಡನೆಯೇ ಊಟ ಮುಗಿಸಿ, ನನಗೊಂದಿಷ್ಟು ಮೊಸರನ್ನ ಕಲಿಸಿ, ನನ್ನನ್ನು ಅಕ್ಕರೆಯಿಂದ ಎಬ್ಬಿಸಿ ಉಣಿಸುತ್ತಿದ್ದ.ಮತ್ತಷ್ಟು ಓದು

ಅಂಕಿತಾರಾಣೆ – ಪಾನಿಪುರಿ ಪುರಾಣ…!
– ಉಮೇಶ ದೇಸಾಯಿ
ನೀವು ಪಾನಿಪೂರಿ ಪ್ರಿಯರೇ? ಹಾಗಿದ್ದರೆ ಇದನ್ನು ತಪ್ಪದೇ ಓದಿ…!
ಹೌದು ಇದೊಂಥರಾ ವಿಚಿತ್ರ ಟೈಟಲ್ಲು.ಹತ್ತು ನಿಮಿಷದ ತನ್ನ ಬೊಗಳೆಯಲ್ಲಿ ರಾಜಪುರೋಹಿತ್ ಎಂಬ ವ್ಯಕ್ತಿ ಸ್ವತಃ ಕೆಡುವುದಲ್ಲದೇ ತನ್ನ ಪಾರ್ಟಿ ಬಿಜೆಪಿಯ ವರ್ಚಸ್ಸನ್ನೂ ಹಾಳುಗೆಡವಿದ.ಅಂಕಿತಾಳ ವ್ಯಕ್ತಿತ್ವ ಮತ್ತು ಚಾರಿತ್ರ್ಯ ವಧೆ ಮಾಡುವ ಮಾತು ಆಡಿದ ರಾಜಪುರೋಹಿತ್ ಈಗ ಅವಳ ಕ್ಷಮೆ ಕೇಳಿದ್ದಾನೆ.
ನಮ್ಮಲ್ಲಿ ಒಂದು ಗಾದೆ ಇದೆ “ಗೋಡೆಯಲ್ಲಿರುವ ಮೊಳೆ ತಗೊಂಡು…ದಲ್ಲಿ ಚುಚ್ಚಿಕೊಂಡ” ಅಂತ.ಈ ಗಾದೆ ರಾಜಪುರೋಹಿತ ಸಾಹೇಬಗೆ ಅಕ್ಷರಶಃ ಅನ್ವಯವಾಗುತ್ತದೆ.
ಅಂಕಿತಾ ಮಾಡಿದ್ದು ಏನು.ತಾ ವಾಸಿಸುತ್ತಿರುವ ಬಿಲ್ಡಿಂಗಿನ ಹೊರಗೆ ಇರುವ ಪಾನಿಪುರಿ ಅಂಗಡಿಯವ ಹಾಡುಹಗಲಲ್ಲಿ ತನ್ನ ಗಾಡಿಯ ಕೆಳಗೆ ಶೆಲ್ಫನಲ್ಲಿಟ್ಟ ಜಗ್ನಲ್ಲಿ ಮೂತ್ರ ಉಯ್ಯುವುದನ್ನು ಅವಳ ಮೊಬೈಲಿನಲ್ಲಿ ಸೆರೆಹಿಡಿದಳು.ಪಾನಿಪುರಿ ಅದನ್ನು ತಿಂದು ಆಗಬಹುದಾದ ಅಪಾಯಗಳನ್ನು ಪುಷ್ಟಿಕರಿಸಲು ತಾ ತೆಗೆದ ವಿಡಿಯೋ ಸಹಾಯ ಆಗಬಹುದು ಇದು ಅವಳ ಹವಣಿಕೆ.ಅದೇ ಹಂಬಲದಲ್ಲಿ ಅವಳು ವಿಡಿಯೋ ನೆಟ್ನಲ್ಲಿ ಹರಿಯಬಿಟ್ಟಳು.
ಮತ್ತಷ್ಟು ಓದು 




