ಕಲಾವಿದರೊಳಗಿನ ವಿವಾದಗಳ ಬ್ರಾಂಡ್ ಅಂಬಾಸಿಡರ್
–ಮಂಸೋರೆ ಬೆಂಗಳೂರು
ಈ ಲೇಖನವನ್ನು ನಾನೊಬ್ಬ ಕಲಾವಿದ ಎಂಬ ದೃಷ್ಟಿಕೋನದಿಂದಲೇ ಓದುತ್ತಾರೆ ಎಂಬ ಅರಿವಿನೊಂದಿಗೆ ಬರೆಯುತ್ತಿದ್ದೇನೆ.
ನಾನೀಗ ಬರೆಯುತ್ತಿರುವ ವಿಷಯದ ವ್ಯಕ್ತಿಯ ಕುರಿತಂತೆ ಸಾಕಷ್ಟು ಚರ್ಚೆಗಳಾಗಿವೆ. ಈ ಲೇಖನ ಆ ಚರ್ಚೆ, ಲೇಖನಗಳನ್ನು ವಿರೋದಿಸುವುದೂ ಅಲ್ಲ, ಸಮರ್ಥಿಸಿಕೊಳ್ಳುವುದು ಅಲ್ಲ. ಇದು ನನ್ನ ಸ್ವವಿಚಾರವಷ್ಟೇ.
ಹುಸೇನ್ ನನಗೆ ಈ ಕಲಾವ್ಯಾಸಂಗಕ್ಕೆ ಬರುವ ಮೊದಲಿಂದಲೂ ಗೊತ್ತು. ಈ ವ್ಯಕ್ತಿಯ ಜೊತೆ ಜೊತೆಗೆ ನನಗೆ ಗೊತ್ತಿದ್ದ ಇನ್ನಿತರ ಕಲಾವಿದರೆಂದರೆ ಕೆ.ಕೆ.ಹೆಬ್ಬಾರ್ ಮತ್ತು ರವಿವರ್ಮ ಬಿ.ಕೆ.ಎಸ್.ವರ್ಮ. ಈ ನಾಲ್ವರ ಪರಿಚಯ ನನಗೆ ನಾಲ್ಕು ವಿಭಿನ್ನ ಕಾರಣಗಳಿಂದಾಗಿ ಪರಿಚಿತರಾಗಿದ್ದರು, ಹುಸೇನ್ ಪತ್ರಿಕೆಗಳಲ್ಲಿ ಆಗಾಗ ಬರುತ್ತಿದ್ದ ಸುದ್ದಿಗಳಿಂದಾಗಿ, ಬಿ.ಕೆ.ಎಸ್ ವರ್ಮ ದೂರದರ್ಶನದಲ್ಲಿ ಚಿತ್ರ ಗೀತೆ(ಹಿನ್ನಲೆಯಲ್ಲಿ ಪರಿಸರ ಕುರಿತಾದ ಹಾಡು ಬರುತ್ತಿದ್ದರೆ ಅದಕ್ಕೆ ತಕ್ಕಂತೆ ಪ್ರಾತ್ಯಕ್ಷಿಕೆ ನೀಡುವಂತೆ ಚಿತ್ರ ರಚಿಸುತ್ತಿದ್ದರು), ಕೆ.ಕೆ ಹೆಬ್ಬಾರ್ ಕುರಿತಂತೆ ಪಠ್ಯವೊಂದಿದ್ದ ಕಾರಣದಿಂದಾಗಿ, ರವಿವರ್ಮ ಹಾಡಿನ ಮೂಲಕ(ರವಿವರ್ಮನ ಕುಂಚದ ಕಲೆ). ಇವಿಷ್ಟೇ , ಇವರಿಷ್ಟೇ ನನಗೆ ಗೊತ್ತಿದ್ದ ಕಲಾವಿದರು ಕಲಾಕೃತಿಗಳು.
ಮುಂದೆ ಕಲಾ ಶಿಕ್ಷಣಕ್ಕೆ ಬಂದ ಮೇಲೆ ಬಿ.ಕೆ.ಎಸ್ ವರ್ಮ ರವರ್ನ್ನು ಹೊರತುಪಡಿಸಿ ಉಳಿದ ಮೂರ್ವರ್ ಬಗ್ಗೆಯು ನಮ್ಮ ಕಲಾ ಶಿಕ್ಷಣದಲ್ಲಿ ತಿಳಿದುಕೊಳ್ಳಲೇ ಬೇಕಾದ ಅನಿವಾರ್ಯತೆ ಒದಗಿ ಬಂತು. ಅದೇ ಸಮಯಕ್ಕೆ ಸರಿಯಾಗಿ ಆರೆಸ್ಸ್ ಸ್ಸಿಗರ ಒಡನಾಟದಿಂದಾಗಿ ಹುಸೇನ್ ನ ವಿವಾದಗಳ ಪರಿಚಯವೂ ಆಗಿತ್ತು. ಬಿ.ಕೆ.ಎಸ್ ವರ್ಮರವರ ಬಗ್ಗೆ ಇದ್ದ ರೋಚಕ ಕಥೆಗಳಿಂದಾಗಿ ಅವರ ಪರಿಚಯವೂ ಆಗಾಗ ತಿಳಿಯುತ್ತಿತ್ತು. ಮೊದಲನೇ ವರ್ಷದ ಕಲಾ ಶಿಕ್ಷಣ ಕೆ.ಜಿ.ಎಫ್ ನಲ್ಲಿ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ… ನನಗಿದ್ದ ಕಲಾ ಇತಿಹಾಸದ ವಿಷಯದಿಂದಾಗಿ ಬಿ.ಕೆ.ಎಸ್.ವರ್ಮರವರನ್ನು ಹೊರತುಪಡಿಸಿ ಉಳಿದ ಮೂರ್ವರ ಕುರಿತಾಗಿ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿದಂತೆಲ್ಲ ಹುಸೇನ್ ವಿವಾದಾತ್ಮಕ ಕಲಾವಿದನಾಗೇ ಹೆಚ್ಚು ಪರಿಚಿತನಾಗ ತೊಡಗಿದ. ಅದರ ಜೊತೆ ಜೊತೆಗೆ ಅವರ ಬಹು ಮುಖೀ ಚಟುವಟಿಕೆಗಳು ಅವರ ಕುರಿತಂತೆ ಸದಾ ಆಕರ್ಷಣೆಯನ್ನು ಕಾಯ್ದಿಸಿರಿಕೊಂಡು ಸಾಗಿತ್ತು. ಸ್ನಾತಕೋತ್ತರ ಪದವಿಗೆ ಬಂದ ಮೇಲೆ ಕಲೆಯ ಆಳ-ವಿಸ್ತಾರದ ಅರಿವು ಹೆಚ್ಚಾದಂತೆಲ್ಲ ಹುಸೇನ್ ರ ಗಿಮಿಕ್ ಗಳ ಮುಖವಾಡದ ಪರಿಚಯವಾಯಿತು. ವಿವಾದಗಳಿಂದ ಹೊರಗಿದ್ದ ಆ ಮೂವರು ಕಲಾವಿದರಿಗಿಂತ ಹುಸೇನ್ ಎಂಬ ಕಲಾವಿದರೊಳಗಿನ ವಿವಾದಗಳ ಬ್ರಾಂಡ್ ಅಂಬಾಸಿಡರ್ ಹುಸೇನ್ ರ ಕುರಿತಂತೆ ಈ ಲೇಖನ ಬರೆಯಲು ಕಾರಣ ಈ ಹಿಂದೆ ನಡೆದ ಹುಸೇನ್ ಕುರಿತಾದ ಚರ್ಚೆ ವಾದ-ವಿವಾದಗಳಲ್ಲಿ ನಾನು ಹೇಳಿದ್ದ ನನ್ನದೇ ಕೆಲವು ವಿಚಾರಗಳಲ್ಲಿ ನನಗೆ ಬೇರೆಯೇ ಆದ ಹೊಳಹು ಕಂಡಿದ್ದರಿಂದ ಈ ಲೆಖನ ಬರೆಯುವಂತಾದದ್ದು.
ಇನ್ನು ಮುಖ್ಯ ವಿಷಯಕ್ಕೆ ಬರುವುದಾದರೆ ಹುಸೇನ್ ರ ನಗ್ನ ಚಿತ್ರಗಳು, ವಿವಾದಗಳು ಮತ್ತು ವ್ಯಕ್ತಿತ್ವ .
ಹುಸೇನ್ ರ ಈ ಮೂರು ವಿಭಿನ್ನ ವಿಷಯಗಳ ಮೂರ್ತ ರೂಪ ಸ್ವತಃ ಹುಸೇನ್ ಮಾತ್ರ.
ನಗ್ನ ಚಿತ್ರಗಳ ವಿವಾದದಿಂದಾಗಿ ಹುಸೇನ್ ವ್ಯಕ್ತಿತ್ವ ವನ್ನು ಗುರುತಿಸುವಂತಾದದ್ದು ಭಾರತದ ಮಟ್ಟಿಗೆ ದೊಡ್ಡ ದುರಂತ. ಕಾರಣ ಮತ್ತು ರ ನಗ್ನ ಚಿತ್ರಗಳ ವಿವಾದಕ್ಕು ಹುಸೇನರ ವ್ಯಕ್ತಿತ್ವಕ್ಕು ಯಾವುದೇ ಸಂಭಂದವಿಲ್ಲ. ಆದರೆ ಅವರ ಮೇಲಿನ ಆರೋಪಗಳಿಗೆ ಪೂರಕವಾಗಿ ಅವರ ವ್ಯಕ್ತಿತ್ವವನ್ನು ಗುರುತಿಸುವ ಕಾರ್ಯ ಅವರ ಮೇಲೆ ಆರೋಪ ಮಾಡುವವರಿಂದ ಜೋರಾಗೆ ನಡೆಯಿತು. ಇದು ಕಲಾವಲಯದ ಹೊರಗಿನ ವಿಚಾರವಾದರೆ ಕಲಾವಲಯದೊಳಗೆ ಹುಸೇನ್ ರ ಕುರಿತಂತೆ ಮಾತಾಡಿರುವಷ್ಟರಲ್ಲಿ ಕಾಲು ಭಾಗದಷ್ಟೂ ಸಹ ಅವರ ಕೃತಿಗಳ ಕುರಿತಂತೆ ಗಂಭೀರ ಚರ್ಚೆ ನಡೆದಿಲ್ಲದಿರುವುದು ಗಮನಾರ್ಹ ಸಂಗತಿ. ಅದರಿಂದ ಅಕಾಡೆಮಿಕ್ ಪಠ್ಯಕ್ರಮಗಳೂ ಹೊರತಲ್ಲ.
ಅಷ್ಟೆಲ್ಲಾ ವಿವಾದ, ಖ್ಯಾತಿಗಳ ನಂತರವೂ ತನ್ನ ಅಂತ್ಯದ ದಿನ ಹುಸೇನ್ ಭಾರತದ ಪಿಕಾಸೋ ಆದರೆ ಹೊರತು ಭಾರತದ ಹುಸೇನ್ ಆಗಲೇ ಇಲ್ಲ.
ಹಾಗಾದರೆ ಹುಸೇನ್ ಎಲ್ಲಿ ಎಂದು ಹುಡುಕಲು ಹೊರಟರೆ ಅವರು ಸಿಗುವುದು ಬಹುತೇಕವಾಗಿ ಬಲಪಂಥೀಯರ ಅಥವ ಸೋ ಕಾಲ್ಡ್ ಹಿಂದೂ ರಕ್ಷಕರ ಬುದ್ದಿಮಟ್ಟದಲ್ಲಿ ಮಾತ್ರ ಅವರು ಶಾಶ್ವತವಾಗಿ ನೆಲೆಯೂರಿದ್ದರು. ಮಾಧ್ಯಮಗಳ ಮುಖಾಂತರ ಪ್ರಚಾರಪ್ರಿಯರಾಗಿದ್ದ ಹುಸೇನ್ ಅಷ್ಟೆಲ್ಲಾ ಪ್ರಖ್ಯಾತಿ ಹೊಂದಿದ್ದರು ಕಲಾವಲಯದೊಳಗೆ ಅವರ ಕಲಾಕೃತಿಗಳು ಚರ್ಚೆಗೆ ಅರ್ಹತೆಗಿಟ್ಟಿಸಿಕೊಳ್ಲಲಿಲ್ಲ ಎಂಬುದಕ್ಕೆ ಸ್ವತಃ ಹುಸೇನ್ ಬಳಿಯೇ ಉತ್ತರ ಸಿಗಬಹುದೇನೋ ಅಥವ ಸಿಗದೇ ಕೂಡ ಇರಬಹುದು. ಕಾರಣ ಅವರಿಗಿದ್ದ ಪ್ರಸಿದ್ದಿ.
ಹುಸೇನ್ ರ ಕಲಾಕೃತಿಗಳನ್ನು ಗಮನಿಸಿದಲ್ಲಿ ಅವು ರೊಮ್ಯಾಂಟಿಕ್ ಎಕ್ಸ್ ಪ್ರೆಷನಿಸಂ ಶೈಲಿಯಲ್ಲಿ ನೋಡುಗನಿಗೆ ಮೊದಲ ನೋಟಕ್ಕೆ ಇಷ್ಟವಾಗುವಂತಹ ಕ್ಷಣಿಕ ಮಾತ್ರ ಉದ್ದೀಪಿಸುವಂತ ಚಿತ್ರಗಳಾಗಿ ಮಾತ್ರ ನಿಲ್ಲತ್ತವೆಯೆ ಹೊರತು ಪೂರ್ಣ ಪ್ರಮಾಣವಾಗಿ ರೊ.ಎಕ್ಸ್ ಪ್ರೆಷನಿಸಂ ಶೈಲಿ ಕೃತಿಗಳಾಗಿ ಅಲ್ಲ.. ಅದನ್ನೂ ದಾಟಿದ ರಸಗ್ರಹಣ, ವಿಚಾರ, ಬೌದ್ದಿಕ ಚರ್ಚೆ ಹುಟ್ಟು ಹಾಕುವಂತಹ ಅಂಶಗಳು ಅವರ ಚಿತ್ರಗಳಲ್ಲಿ ಕಾಣುವುದು ಅಪರೂಪ.
ಇವಿಷ್ಟು ಅಂಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅವರ ವಿವಾದಿತ ಕಲಾಕೃತಿಗಳನ್ನು ಕುರಿತು ಹೇಳುವುದಾದರೆ ಅವರ ಕಲಾಕೃತಿಗಳಲ್ಲಿನ ನಗ್ನತೆ ಹಿಂದೂ ಎಂಬ ಧರ್ಮದ ಸೋಕಾಲ್ಡ್ ರಕ್ಷಕರಿಗೆ ಅದು ಬೆತ್ತಲಾಗಿ ಗೋಚರಿಸುತ್ತದೆ.
ಆದರದು ಜೈನ ಧರ್ಮದ ಬೆತ್ತಲೆ ಬದುಕೇ ಸಾರ್ಥಕ ಎಂಬ ತತ್ವದ ಹಿನ್ನಲೆಯಲ್ಲೂ ಇದನ್ನು ಸ್ವೀಕರಿಸದ ಮನಸ್ಥಿತಿಯನ್ನು ಹಿಂದೂ ಧರ್ಮದ ರಕ್ಷರಲ್ಲಿ ಕಾಣಬಹುದಾದಲ್ಲಿ ವಿವಾದಿತ ಅಂಶಗಳು ಹುಸೇನ್ ನ ಕೃತಿಯಲ್ಲಿತ್ತಾ ಅಥವ ಅದನ್ನು ನೋಡುವ, ಗ್ರಹಿಸುವ ವ್ಯಕ್ತಿಗಳಲ್ಲಿತ್ತಾ ಎಂದು ನಿರ್ಧರಿಸಬಹುದು.
ಬೆತ್ತಲೆಗೆ ಕಲೆಯ ಸ್ಪರ್ಶ ನೀಡಿದಲ್ಲಿ ಅದು ನಗ್ನ ವಾಗುತ್ತದೆ ಎಂದು ಭಾರತೀಯ ಕಲಾಮೀಮಾಂಸೆ ಹೇಳುತ್ತದೆ. ಬೆತ್ತಲೆಗೆ ನೈಜತೆಯ ಸ್ಪರ್ಶವಿರುತ್ತದೆ, ಆ ನೈಜತೆಯನ್ನು ದಿಕ್ಕರಿಸುವ ಕ್ರಿಯಾತ್ಮಕತೆ ಕಲಾಕೃತಿಯೆಡೆಗೆ ಸಾಗುತ್ತದೆ.
ಹುಸೇನ್ ರ ಮೊದಲ ವಿವಾದಿತ ಕೃತಿಯಾದ ಸರಸ್ವತಿ ಚಿತ್ರ ವಿವಾದವಾಗುವಷ್ಟರಲ್ಲಿ ಅದರ ರಚನೆಯಾಗಿ ಹತ್ತುವರ್ಷಗಳಾಗಿತ್ತು ಎಂಬುದು ಅಷ್ಟೇ ಸತ್ಯ. ಹುಸೇನ್ ರವರಿಗಿಂತಲೂ ಹುಸೇನ್ ಎಂಬ ಹೆಸರು ಅವರಿಗೆ ಬಿಡಿಸಲಾಗದ ವ್ಯಕ್ತಿತ್ವ ಕಟ್ಟಿಕೊಟ್ಟಿದ್ದು , ಅದನ್ನು ಬಿಡಿಸಿಕೊಂಡು ಹೊರಬರಲಾಗದೇ ಅದರದೇ ಬಲೆಯೊಳಗೆ ಸಿಕ್ಕಿ , ಅದರೊಳಗೇ ಕಳೆದು ಹೋದವರು ಹುಸೇನ್. ಹುಸೇನ್ ರಂತಹುದೇ ವಿವಾದದ ಗಾಳಿಯೂ ಸೋಕಲಾಗದ ಬೌದ್ದಿಕವಾಗಿ ಆಳವಾದ ಚರ್ಚೆಗಳನ್ನು ಹುಟ್ಟುಹಾಕುವಂತಹ ನಗ್ನ ಲೈಂಗಿಕ ಕಲಾಕೃತಿಗಳನ್ನು ಭಾರತದ ಇನ್ನಿತರ ಕಲಾವಿದರು ರಚಿಸಿದ್ದರೂ ಹುಸೇನ್ ಚಿತ್ರಗಳಿಗೆ ಮಾತ್ರ ಈ ವಿವಾದಗಳ ಬ್ರಾಂಡ್ ಲೇಬಲ್ ಹಚ್ಚಿಕೊಂಡಿದ್ದು ಅವರ ಜನಪ್ರಿಯರೆಂಬ ಬ್ರಾಂಡ್ ಇಮೇಜಿನಿಂದಾಗೆ ಹೊರತು ಅವರ ಕಲಾಕೃತಿಗಳಲ್ಲಿನ ಅಂಶಗಳಿಂದಲ್ಲ ಎಂಬುದು ಗಮನಿಸಬಹುದಾದ ಅಂಶ.
ಜಾನ್ ಬರ್ಜರ್ ನ ಹೇಳಿಕೆಯನ್ನು ಇಲ್ಲಿ ಉದಾಹರಿಸುವುದಾದರೆ we only see what we look at. ಹುಸೇನ್ ರ ಕಲಾಕೃತಿಗಳಲ್ಲಿಯ ವಿವಾದಾತ್ಮಕ ಅಂಶಗಳೆಂಬ(?) ’ಕಾರಣಗಳ’ ನೋಡುವ ದೃಷ್ಟಿ ಕೋನದ ಮೆಲೆ ಆಧಾರವಾಗಿರುತ್ತದೆಯೇ ಹೊರತು ಆ ಕಲಾಕ್ರುತಿಯಲ್ಲಲ್ಲ.
ಖ್ಯಾತ ಕಲಾವಿದರೊಬ್ಬರ ಮಾತನ್ನು ಇಲ್ಲಿ ಉಲ್ಲೇಖಿಸುವುದಾದರೆ ಹುಸೇನ್ ಅಷ್ಟೆಲ್ಲಾ ಜನಪ್ರಿಯತೆಯನ್ನು ಹೊಂದಿದ್ದು , ಕಲೆಯ ಹೊಸ ಮಾಧ್ಯಮಗಳಲ್ಲಿ ಕಲಾಕೃತಿ ರಚಿಸಲು ವಿಫುಲ ಸಾಧ್ಯತೆಗಳಿದ್ದು ಸಹ, ಬೇರೆ ಧರ್ಮಗಳ ಬಗ್ಗೆ ಇದ್ದ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತನ್ನದೆ ಧರ್ಮದಲ್ಲಿ ಮೀರಲಾಗದ್ದು ಅವರ ಇಡೀ ಜೀವಮಾನದ ಸಾಧನಾ ಪಟ್ಟಿಯಲ್ಲಿ ಎದ್ದು ಕಾಣಬಹುದಾದ ದೊಡ್ಡ ಕೊರತೆ.
***********
ಚಿತ್ರಕಪೆ :funenclave.com





ಹುಸೇನರ ಕಲಾಕೃತಿಗಳು ಜನರನ್ನು ಮುಟ್ಟಲಿಲ್ಲ, ಮುಟ್ಟಿದ್ದು ನಗ್ನಚಿತ್ರಗಳು ಮಾತ್ರ. ಅವರ ಕಲಾಕೃತಿಗಳು ನನಗೆ ಸುತಾರಾಂ ಅರ್ಥವಾಗುವುದಿಲ್ಲ. ನನ್ನಂತೆಯೇ ಬಹುತೇಲರಿಗೂ ಸಹ. ಇದು ಕಲೆ ಅಂತಲೂ ಅನ್ನಿಸುವುದಿಲ್ಲ. ಕೆಲವೇ ಜನರಿಗಾಗಿ ಕಲೆಯಾದರೆ ಅಂಥ ಕಲೆಯೇ ವ್ಯರ್ಥ.
ಸರಿಯಾಗಿ ಹೇಳಿದಿರಿ ಶ್ರೀ ಹರ್ಷರವರೆ ,
ಹಾಗೆ ನೋಡಿದರೆ “ಲಾಡೆನ್ನು” ಕೂಡ ಮಹಾನ್ ವ್ಯಕ್ತಿ ???!!! ಅಲ್ಲದಿದ್ದರೆ ಅಷ್ಟೊಂದು ಜನರು ತಮ್ಮ ಜೀವನವನ್ನೇ ಅವನಿಗೆ(ಅವನ ಸಿದ್ದಾಂತಕ್ಕೆ) ಅರ್ಪಿಸುತ್ತಿದ್ದರೆ? ಅಷ್ಟೊಂದು ಜನರು ಮೂರ್ಖರಾಗಿರೋದಿಕ್ಕೆ ಸಾಧ್ಯವಾ?
ಹಿ ಹ್ಹಿ ಹ್ಹಿ ಏನಂತೀರಿ?
ಬೆತ್ತಲ ಬದುಕೇ ಸಾರ್ಥಕ ಎಂಬ ತತ್ವವನ್ನು ಅನುಸರಿಸುತ್ತಾ ತಾನೇ ಸರ್ವಸ್ವವನ್ನು ತ್ಯಜಿಸಿ ಬೆತ್ತಲಾಗಿ ಬದುಕುವುದು ಹಾಗೂ ಅನ್ಯರ ಬೆತ್ತಲೆ ಚಿತ್ರಗಳನ್ನು ರಚಿಸಿ ಬೆತ್ತಲ ಬದುಕೇ ಸಾರ್ಥಕ ಎನ್ನುವ ಅರ್ಥ ನೀಡಲು ಪ್ರಯತ್ನಿಸುವುದು, ಇವೆರಡರ ನಡುವೆ ಇರುವ ವ್ಯತ್ಯಾಸ, ಬಹುಷಃ ,ಇಲ್ಲಿ ಗೌಣವಾದಂತಿದೆ.
ಎಲ್ಲರೂ ಎಲ್ಲರಿಗೂ ಇಷ್ಟವಾಗುವುದಿಲ್ಲ, ಎಲ್ಲರೂ ಎಲ್ಲರಿಗೂ ಇಷ್ಟವಾಗಬೇಕೆಂದೇ ಇಲ್ಲ.
ಹಾಗಿದ್ದಿದ್ದಲ್ಲಿ, ಈ ಭೂಮಿಯ ಮೇಲೆ ಒಂದೇ ಧರ್ಮ ನೆಲೆಯೂರುತ್ತಿತ್ತು ಹಾಗೂ ಈ ನೂರೆಂಟು ಧರ್ಮ ಪಂಥಗಳು ಹುಟ್ಟಿಕೊಳ್ಳುತ್ತಲೇ ಇದ್ದಿರಲಿಲ್ಲ.
@ಆಸು ಹೆಗ್ಡೆ : ಈ ಲೇಖನ ಎಲ್ಲರನ್ನು ಎಲ್ಲರಿಗೂ ಇಷ್ಟಪಡಿಸುವುದೂ ಅಲ್ಲ. ಇಷ್ಟಪಡಿಸಲೇಬೇಕೆಂಬುದೂ ಅಲ್ಲ. ಈ ಲೇಖನದ ಉದ್ದೇಶ ಬೆತ್ತಲು ಮತ್ತು ನಗ್ನತೆಯ ಮಧ್ಯೆ ಇರುವ ಸೂಕ್ಷ್ಮತೆಯ ಕುರಿತಂತೆ ಚರ್ಚಿಸುತ್ತಾ.. ವಿವಾದದೊಂದಿಗೆ ಥಳಕು ಹಾಕಿಕೊಂಡ ಕಲಾಕೃತಿಯೊಂದಿಗಿನ ಕಲಾವಿದನ ವ್ಯಕ್ತಿತ್ವವನ್ನು ಚರ್ಚಿಸುವುದಷ್ಟೇ.
ಲೇಖನದ ಉದ್ದೇಶ ಚರ್ಚಿಸುವುಷ್ಟೇ ಆಗಿದೆಯಾದರೂ, ತಾವು ನನ್ನೊಬ್ಬನನ್ನುಳಿದು ಇಲ್ಲಿ ಇನ್ನಾರೊಂದಿಗೂ ಚರ್ಚಿಸಿದುದು ಅದ್ಯಾಕೋ ನನಗೆ ಕಂಡುಬಂದಿಲ್ಲ! ಏಕಮುಖವಾದ ಅಭಿಪ್ರಾಯ ಮಂಡನೆಯನ್ನು ಚರ್ಚೆ ಎನ್ನಲಾದೀತೇ?
🙂
ಇನ್ನೊಂದು ಮಾತು, ಈ ಲೇಖನದಲ್ಲಿ ಆ ಕಲಾವಿದನ ಕಲಾಕೃತಿಗಳ ಬಗ್ಗೆ ಒಂದಷ್ಟು ವಿಚಾರಗಳು ಕಂಡುಬಂದದಷ್ಟು … ಕಲಾವಿದನ ವ್ಯಕ್ತಿತ್ವದ ಬಗೆಗಿನ “ಚರ್ಚೆ” ಅದ್ಯಾಕೋ ಎಲ್ಲೂ ಕಂಡುಬಂದಿಲ್ಲ ನನಗೆ.
ಲೇಖನ ನನ್ನಲ್ಲಿದ್ದ ಕೆಲವು ಸಂಶಯಗಳಿಗೆ ಆಂಶಿಕ ಪರಿಹಾರ ನೀಡಿದೆ.ಉದಾಹರಣೆಗೆ, ಹುಸೇನರ ಕಲಾಕೃತಿಗಳ ಬಗ್ಗೆ ಕಲೆಯ ಅಕಡೆಮಿಕ್ ವಲಯದಲ್ಲಿ ಕಲೆಯ ಕೋರ್ಸುಗಳ ಸಿಲೇಬಸ್ ನಲ್ಲಿ ಎಷ್ಟು ಮಹತ್ವ ಇದೆ ಅನ್ನುವ ಬಗ್ಗೆ ನನಗೆ ತುಂಬ ಕುತೂಹಲ ಇತ್ತು. ಈ ಲೇಖನದಲ್ಲಿ ಈ ಬಗ್ಗೆ ನನಗೆ ಸ್ಪಷ್ಟ ಉತ್ತರ ಸಿಗದಿದ್ದರೂ ಹುಸೇನರಿಗೆ ತುಂಬ ಮಹತ್ವ ಆ ದೃಷ್ಟಿಯಿಂದ ಇಲ್ಲ ಎಂಬ ಅಭಿಪ್ರಾಯ ಬಂದಂತೆ ಕಾಣುತ್ತೆ. ಲೇಖಕರು ಇದನ್ನು ಇನ್ನಷ್ಟು ಸ್ಪಷ್ಟ ಮಾಡಿದ್ದರೆ ನನ್ನಂಥ, ಕಲೆಯ ಬಗ್ಗೆ ಹೆಚ್ಚು ಗೊತ್ತಿಲ್ಲದವರಿಗೆ ಉಪಕಾರವಾಗುತ್ತದೆ. ಇನ್ನು ಅವರ, ನಗ್ನ ಚಿತ್ರಗಳು ನಗ್ನ ಅನ್ನುವುದು ಬಿಟ್ಟರೆ ಅದರಲ್ಲಿನ ನನಗೆ ಬೇರೇನೂ ವಿಶೇಷ ಕಾಣುವುದಿಲ್ಲ. ಅದರಲ್ಲಿ ಅದು ಇದು ಸಂಕೇತ ಅಂತೆಲ್ಲ ಕಲೆಬಗ್ಗೆಗೊ ತ್ತಿದ್ದವರು ಹೇಳಬಹುದಾದರೂ ಆಗ ಅದರ ಬಹುಮಟ್ಟಿನ ಕ್ರೆಡಿಟ್ ಆ ಕಲಾವಿಮರ್ಶಕರಿಗೆ ಹೋಗಬೇಕು ಹೊರತು ಒಟ್ಟಾರೆ ಬಣ್ಣ ಚೆಲ್ಲಿದ ಕಲಾವಿದನಿಗಲ್ಲ. ಹಾಗೆ ನೋಡಿದರೆ ಮಾಡರ್ನ್ ಆರ್ಟ್ ಅನ್ನೋದೇ ಇಂಥ ಒಂದು ,ವಿಮರ್ಶಕರನ್ನು ಮತ್ತು ಕಲಾಕೃತಿ ಕೊಳ್ಳುವ ಶೋಕಿ ಇರುವ ಶ್ರೀಮಂತರನ್ನು ಅವಲಂಬಿಸಿದೆ ಹೊರತು ಕಲಾವಿದರ ಸೂಕ್ಷ್ಮತೆಯನ್ನಲ್ಲ ಅಂತ ನನ್ನ ಕಲಾ ಅಜ್ಞಾನಿ ತಲೆಗೆ ಅನ್ನಿಸುತ್ತೆ. ಹೋಲಿಸುವುದಾದರೆ ಮನುಷ್ಯರ ವ್ಯಂಗ್ಯ ಭಾವಚಿತ್ರ ಮಾಡುವ ಪ್ರಕಾಶ್ ಶೆಟ್ತಿಯವರ ಕಲೆ ನೋಡಿ. ವ್ಯಕ್ತಿಯ ಮುಖ ನೋಡುತ್ತ ಮೂರುನಾಲ್ಕು ನಿಮಿಷಗಳಲ್ಲಿ ಅವರು ಮಾಡುವ ಕ್ಯಾರಿಕೇಚರ್ ಗಳನ್ನು ನೋಡಿದರೆ ಇದು ಇಂಥವ ವ್ಯಕ್ತಿಯದು ಅಂತ ಹೇಳಬಲ್ಲಿರಿ ನೀವು. ಗಮನಿಸಿ, ಫೋಟೋ ನೋಡಿ ಅವರು ಮಾಡುವುದಲ್ಲ. ಹಾಗಾಗಿ ಅವರದು ಸೂಕ್ಷ್ಮ ಕಲೆ ಅಮ್ತ ನನಗನ್ನಿಸುತ್ತೆ. ಅಂಥಸ ಸೂಕ್ಷ್ಮತೆ ಎದುರು ಹೇಗೆ ಬೇಕಾದರೂ ನೀವು ಅರ್ಥೈಸಬಲ್ಲ ಹಾಗೆ ಬಣ್ನ ಎರಚಿ ಹೊಗಳಿಸಿಕೊಳ್ಳುವುದು ದೊಡ್ಡದು ಅಂತ ನನಗೆ ಕಾಣೊಲ್ಲ.
ಮತ್ತೆ ಮಾಡರ್ನ್ ಕಲೆ ಅರ್ಥಆಗಿಲ್ಲ ಅಂದರೆ ಇವನಿಗೆ ಕಲೆ ಬಗ್ಗೆ ಏನೂ ಗೊತ್ತಿಲ್ಲ ಅಂತ ಎಲ್ಲರೂ ಹೇಳುತ್ತಾರೆ. ಹಾಗಾಗಿ ಇಂಥಚಿತ್ರಗಳನ್ನು ನೋಡಿದವರೆಲ್ಲ ಓ ಗ್ರೇಟ್ ಅಂತ ಸುಮ್ಮನೇ ಹೇಳುತ್ತಾರೆ ಅಂತ ನನ್ನ ಅನುಮಾನ. ಏನೇ ಇರಲಿ ನಾನಂತೂ ಕಲೆ ಬಗ್ಗೆ ನನ್ನ ಅಜ್ಞಾನವನ್ನು ಈ ಮೂಲಕ ನಾಚಿಕೆಯಿಲ್ಲದೆ ತೋರಿಸಿದ್ದೇನೆ.
ಭಾರತದಲ್ಲಿರುವ ನಗ್ನಶಿಲ್ಪಗಳ ಮೂಲಕ ಹುಸೇನರ ನಗ್ನ ಚಿತ್ರಗಳನ್ನು ಸಮರ್ಥಿಸುವುದು ಸರಿಯಾಗದು ಅಂತ ನನ್ನ ಅನಿಸಿಕೆ. ಮುಂದೆ ಅವಕಾಶವಿದ್ದರೆ ಆಬಗ್ಗೆ ಚರ್ಚಿಸಬಹುದು.