ವಿಷಯದ ವಿವರಗಳಿಗೆ ದಾಟಿರಿ

Archive for

11
ಏಪ್ರಿಲ್

ಬರದ ಸೀಮೆಯಿಂದ ಹೊರಟ ನೆನಪಿನ ಬಂಡಿ

-ಕಾಲಂ ೯

ಇದೆಲ್ಲವೂ ೧೯೮೦ರ ದಶಕದ ಮಾತು. ಹೈದ್ರಾಬಾದ್ ಕರ್ನಾಟಕ ಸೀಮೆಯಲ್ಲಿ ಆಗಷ್ಟೇ ಎಂಎಸ್ಸಿ ಪೂರ್ಣಗೊಳಿಸಿದ ತರುಣನೊಬ್ಬ ಕೆಲಸ ಅರಸಿಕೊಂಡು ಬೆಂಗಳೂರಿನ ಶಾಸಕರ ಭವನಕ್ಕೆ ಬಂದಿಳಿಯುತ್ತಾನೆ. ತನ್ನೂರಿನ ಶಾಸಕನನ್ನು ಹಿಡಿದುಕೊಂಡು ನೌಕರಿ ಗಿಟ್ಟಿಸಿಕೊಳ್ಳುವ ಇರಾದೆ ಹೊಂದಿದ್ದ ಆ ಯುವಕ, ರಾಜ್ಯದ ಯಾವುದಾದರೊಂದು ಕಾಲೇಜಿನಲ್ಲಿ ಉಪನ್ಯಾಸಕನಾಗಬೇಕೆಂಬ ಮಹಾ ಗುರಿಯನ್ನೂ ಮನಸ್ಸಿನಲ್ಲಿ ಹಾಕಿಕೊಂಡಿದ್ದ !

ಆದರೆ, ಯುವಕ ಹುಡುಕಿಕೊಂಡು ಬಂದಿದ್ದ ಆ ದಲಿತ ಶಾಸಕನ ಯೋಜನೆಯೇ ಬೇರೆ ಆಗಿತ್ತು. ಏನಾದರೂ ಮಾಡಿ ಯುವಕನನ್ನು ಪತ್ರಕರ್ತನನ್ನಾಗಿಸಬೇಕು ಎಂಬುದು ಆತನ ಗುರಿ. ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಓದುವ ಹುಡುಗರೇ ಕಡಿಮೆ. ಅದರಲ್ಲಿಯೂ ಓದಿದವರೆಲ್ಲರೂ ಮೇಷ್ಟ್ರು-ಕ್ಲರ್ಕ್ ಎಂದು ಕೆಲಸ ಹುಡುಕಿಕೊಂಡು ಹೋದರೆ, ಆ ಭಾಗದ ಸಂಕಟಗಳನ್ನು , ನೋವುಗಳನ್ನು ರಾಜ್ಯದ ಜನರಿಗೆ ಅರ್ಥೈಸುವವರು ಯಾರು ಎಂಬುದು ಶಾಸಕನ ಕಳಕಳಿ. ಹಾಗಾಗಿಯೇ ಏನೋ, ಕೆಲಸ ಹುಡುಕಿಕೊಂಡು ಬಂದಿದ್ದ ಯುವಕನಿಗೆ ತನ್ನ ಶಾಸಕರ ಕಚೇರಿಯಲ್ಲಿಯೇ ಅಶನ-ವಶನ ನೀಡಿದ್ದಲ್ಲದೇ, ತಲೆಯಲ್ಲಿ ಪತ್ರಕರ್ತನ ಕನಸನ್ನೂ ಬಿತ್ತಿದ. ಇದೊಂದು ನನಸಾಗದ ಕನಸು ಎಂದು ಕಲ್ಯಾಣ ಕರ್ನಾಟಕದ ಯುವಕ ಅಂದುಕೊಳ್ಳುತ್ತಿರುವಾಗಲೇ, ರಾಜಕಾರಣಿಯೊಬ್ಬರು ಇಂಗ್ಲಿಷ್ ಪತ್ರಿಕೆಯೊಂದನ್ನು ಆರಂಭಿಸಿದರು. ಕನಸು ಸಾಕಾರಗೊಂಡಿತು ಎನ್ನುವಷ್ಟರಲ್ಲಿ, ಪತ್ರಿಕೆಯೇ ಕಣ್ಮುಚ್ಚಿತು ! ಯುವಕನ ನಿರುದ್ಯೋಗ ಮುಂದುವರಿಯಿತು.

ಆ ದಿನಗಳಲ್ಲಿಯೇ ಟೈಂಸ್ ಆಫ್ ಇಂಡಿಯಾ ಪತ್ರಿಕೆ ವರದಿಗಾರರು ಬೇಕಿದ್ದಾರೆ ಎಂದು ತನ್ನ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿತು. ಪತ್ರಿಕೆ ಆಹ್ವಾನಿಸಿದ್ದ ಬಿಡಿ ವರದಿಗಾರ, ಹಿರಿಯ ವರದಿಗಾರ, ಉಪ ಸಂಪಾದಕ ಎಂಬ ಮೂರು ಹುದ್ದೆಗಳಿಗೂ ಕಲ್ಯಾಣ ಕರ್ನಾಟಕದ ಕಲಿ ಅರ್ಜಿ ಗುಜರಾಯಿಸಿದ. ಎಲ್ಲವಕ್ಕೂ ಅರ್ಜಿ ಹಾಕಲೇಬೇಕು ಎಂಬುದು ಶಾಸಕನ ಒತ್ತಾಯವಾಗಿತ್ತು. ಯಾವುದಾದರು ಒಂದು ಹುದ್ದೆಗಾದರೂ ಸಂದರ್ಶನ ಬರಲಿ ಎಂಬುದು ಒತ್ತಾಯದ ಹಿಂದಿನ ತಂತ್ರ. ಮತ್ತಷ್ಟು ಓದು »