-ಅಶೋಕ್ ಕೆ.ಆರ್

ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅದೇನೋ
ಬೀಫ್ ಫೆಸ್ಟಿವಲ್ ಅಂತ ಮಾಡ್ತಾರಂತೆ. ದನದ ಮಾಂಸ ಮಾಡಿ ಹಬ್ಬವನ್ನಾಚರಿಸುತ್ತಾರಂತೆ. ‘ಊಟ ನಮ್ಮಿಷ್ಟದಂತಿರಬೇಕು’ ಎಂಬುದ್ದಿಶ್ಯದಿಂದ ಆರಂಭವಾದ ಹಬ್ಬವಂತೆ. ಈ ಸಂದರ್ಭದಲ್ಲಿ ಹಬ್ಬದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!
ಭಾರತದಲ್ಲಿ ಗೋಮಾಂಸ ಸೇವನೆಯ ಬಗ್ಗೆ ಇರುವ ಇತಿಹಾಸ ಆಸಕ್ತಿಕರವಾಗಿದೆ. ಧರ್ಮದ ಇತಿಹಾಸಕಾರರ ಲೇಖನಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರಲ್ಲೂ ಮಾಂಸ ಸೇವನೆ ಸಾಮಾನ್ಯವಾಗಿತ್ತು. ಗೋಮಾಂಸವೂ ಅದಕ್ಕೆ ಹೊರತಾಗಿರಲಿಲ್ಲ (ಇತ್ತೀಚೆಗೆ ಬಲಪಂಥೀಯತೆಯ ಪಟ್ಟ ಹೊತ್ತಿರುವ ಎಸ್.ಎಲ್. ಭೈರಪ್ಪನವರ ಉತ್ತಮ ಕೃತಿಗಳಲ್ಲೊಂದಾದ ‘ಪರ್ವ’ದಲ್ಲೂ ಗೋಮಾಂಸ ಸೇವಿಸುವ ಹಿಂದೂಗಳಿದ್ದಾರೆ). ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆಗೆ ವಿರೋಧ ವ್ಯಕ್ತವಾಗಿ ನಿಷೇಧಕ್ಕೊಳಗಾಗಿದ್ದು ಬುದ್ಧ ಧರ್ಮದಿಂದ! ಅಹಿಂಸಾ ತತ್ವವನ್ನು ಭೋದಿಸುವ ಬುದ್ಧ ಧರ್ಮ ಹೆಚ್ಚೆಚ್ಚು ಪ್ರಚಲಿತಗೊಳ್ಳುತ್ತಿದ್ದಂತೆ ಗಾಬರಿಗೊಳಗಾದ ಹಿಂದೂ ಪಂಡಿತರು ಮಾಂಸ ಸೇವನೆ ನಿಷೇಧಿಸುವ ತೀರ್ಮಾನ ಕೈಗೊಳ್ಳುತ್ತಾರೆ. ಮಾಂಸದ ಸವಿಯಾದ ರುಚಿಯನ್ನುಂಡವರು ಅಷ್ಟು ಸುಲಭವಾಗಿ ಬಿಟ್ಟಾರೆಯೇ?! ಬ್ರಾಹ್ಮಣರು ಎಲ್ಲ ಮಾಂಸ ತೊರೆದು ಉಳಿದ ಕೆಲವರು ಗೋಮಾಂಸ ತೊರೆಯುತ್ತಾರೆ. ಹಿಂದೂ ಧರ್ಮದಿಂದ ಶೋಷಣೆಯನ್ನಷ್ಟೇ ಪಡೆದುಕೊಂಡಿದ್ದ ಬಹಳಷ್ಟು ಸಮುದಾಯಗಳು ಯಾವ ಮಾಂಸ ಸೇವನೆಯನ್ನೂ ತೊರೆಯುವುದಿಲ್ಲ.
ಮತ್ತಷ್ಟು ಓದು 
Like this:
Like ಲೋಡ್ ಆಗುತ್ತಿದೆ...