ಶಿಕಾರಿ ಮಿಸ್ ಆಯ್ತು..!
– ಶ್ರೀಧರ್ ಜಿ.ಸಿ ಬನವಾಸಿ

`ಗುಬ್ಬಚ್ಚಿಗಳು’ಸಿನಿಮಾ ಖ್ಯಾತಿಯ ಅಭಯಸಿಂಹ ನಿರ್ದೇಶಕರು. ಚಿತ್ರ ನೋಡಿಬಂದ ಮೇಲೆ ನನಗೆ ಚಿತ್ರದ ಬಗ್ಗೆ ನನಗನಿಸಿದ ಅಂಶಗಳು:
ಮಂಕು ತಿಮ್ಮನ ಕಗ್ಗ – ರಸಧಾರೆ (೧೪)
– ರವಿ ತಿರುಮಲೈ
ಲೋಕಜೀವನ ಮಂಥನ
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು I
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು II
ಒಂದೇ ಗಾಳಿಯನುಸಿರ್ವ ನರಜಾತಿಯೋಳಗೆಂತು I
ಬಂದುದೀ ವೈಷಮ್ಯ? – ಮಂಕುತಿಮ್ಮ ಈ
ಉಣ್ಣು = ತಿನ್ನು,ಉಸಿರ್ವ= ಉಸಿರಾಡುವ , ನರಜಾತಿ = ಮಾನವ ಜನಾಂಗ. ವೈಷಮ್ಯ = ದ್ವೇಷ . ಎಂತು- ಹೇಗೆ.
ಒಂದೇ ಆಕಾಶವ ಕಾಣುತ, ಒಂದೇ ನೆಲವನ್ನು ತುಳಿಯುತ ಒಂದೇ ಧಾನ್ಯವನ್ನು ಉಣ್ಣುತ ಒಂದೇ ಗಾಳಿಯನು ಉಸಿರಾಡುವ ಮಾನವಜಾತಿಯ ಒಳಗೆ ಈ ದ್ವೇಷ ಹೇಗೆ ಬಂತು ಎಂದು ತಮಗೆ ತಾವೇ ಪ್ರಶ್ನಿಸುತ್ತ
ಈ ವಿಚಾರವನ್ನು ಓದುಗರ ಮುಂದಿಟ್ಟಿದ್ದಾರೆ, ಶ್ರೀ ಗುಂಡಪ್ಪನವರು.
ಈ ಜಗತ್ತಿನಲ್ಲಿರುವ ಮಾನವರೆಲ್ಲರಿಗೂ, ಮಾನವರಿಗಷ್ಟೇ ಏನು ಸಕಲ ಜೀವಿ ಸಂಕುಲಕ್ಕೂ ತಲೆಯ ಮೇಲಿನ ಆಕಾಶ ಒಂದೇ. ಇರುವ ಭೂಮಿಯೂ ಒಂದೇ, ಎಲ್ಲರೂ ತಿನ್ನುವುದು ಒಂದೇ ರೀತಿಯ ಆಹಾರ, ಕುಡಿಯುವ ನೀರಿಗೂ ಒಂದೇ ಮೂಲ, ಹಾಗಿದ್ದರೂ ಏಕೆ ಈ ವೈಷಮ್ಯ, ಈ ದ್ವೇಷ ಎಂಬ ಪ್ರಶ್ನೆ ಕಾಲಾನುಕಾಲಕ್ಕೆ ಎಲ್ಲ ಚಿಂತಕರ ಮನಗಳಲ್ಲೂ ಸುಳಿದು, ಉತ್ತರ ಕಂಡು ಕೊಳ್ಳಲು ಪ್ರಯತ್ನ ಆಗಿದೆ.
ಮತ್ತಷ್ಟು ಓದು
ರಸ್ತೆಯ ಪಕ್ಕ ನಿಂತಿತ್ತು ದೆವ್ವ!?
– ರಾಜ್ ಕುಮಾರ್
ಇದೊಂದು ನಂಬಲಾಗದ ಘಟನೆ. ಬಹುಷಃ ತರ್ಕಗಳು ಏನಿದ್ದರೂ ನಾನು ನನ್ನ ಅನುಭವವನ್ನು ಮಾತ್ರವೇ ಹೇಳುವುದು. ಇದು ಪ್ರಚಾರಕ್ಕಾಗಿ ಅಗಲಿ ಅಥವಾ ಬೇರೆ ಸ್ವ ಸಾಧನೆಗಾಗಿ ಅಗಲಿ ಹೇಳಿಕೊಳ್ಳುವುದಲ್ಲ. ನಾನು ಸ್ವತಹ ಅನುಭವಿಸಿ ಮನಸ್ಸಿನ ಗೊಂದಲವನ್ನಷ್ಟೇ ಇಲ್ಲಿ ವಿವರಿಸುತ್ತ ಇದ್ದೇನೆ.
ಕಳೆದ ಮಂಗಳವಾರ ಅಂದರೆ ದಿನಾಂಕ ೧೭-೦೨-೨೦೦೯ ರಂದು ನಾನು ಮಂಗಳೂರಿನ ಬಂಧುಗಳ ಮನೆಗೆ ಚಂಡಿಕಾ ಹವನದ ನಿಮಿತ್ತ ಹೋಗಿ ಬರುವ ಸಂದರ್ಭ.ನಾನು ಹಾಗು ನನ್ನ ಸಂಬಂಧಿಗಳು ಒಟ್ಟು ನಾಲ್ಕು ಮಂದಿ ಮಾರುತಿ ಕಾರ್ ನಲ್ಲಿ ಬೆಂಗಳೂರು ಕಡೆಗೆ ಬರುತ್ತಾ ಇದ್ದೆವು. ಹೋಗುವಾಗ ಶಿರಾಡಿ ಘಾಟ್ ಮೂಲಕ ಹೋದವರು ಬರುವಾಗಲೂ ಅಲ್ಲೇ ಬರೋಣವೆಂದು ನೆಲ್ಯಾಡಿ ಕೊಕ್ಕಡ ಕ್ರಾಸ್ ತನಕ ಬಂದಾಗ ಘಟ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.ಮಾರುತಿ ಕಾರ್ ಸ್ವತಹ ನಾನೇ ಚಲಾಯಿಸುತ್ತಿದ್ದೆ. ನನ್ನ ಪಕ್ಕ ನನ್ನ ಭಾವ ಹಾಗೆ ಹಿಂದಿನ ಸೀಟಿನಲ್ಲಿ ಇಬ್ಬರು ಕುಳಿತಿದ್ದರು.ನನ್ನನ್ನು ಉಳಿದು ಅವರೆಲ್ಲ ವೃತ್ತಿಪರ ಪುರೋಹಿತರಾಗಿದ್ದರು. ರಸ್ತೆ ಬ್ಲಾಕ್ ನೋಡಿ ನಾವು ಚಾರ್ಮಾಡಿ ಮೇಲೆ ಹೋಗೋಣವೆಂದು ಧರ್ಮಸ್ಥಳ ಕಡೆಗೆ ಕಾರ್ ತಿರುಗಿಸಿ, ಚಾರ್ಮಾಡಿ ಮೇಲೆ ಬಂದೆವು.
ರಾತ್ರಿಯ ಸುಮಾರು ೧೧ ಗಂಟೆಯ ಸಮಯ .ಘಾಟಿ ತಿರುವುಗಳೆಲ್ಲ ಕಳೆದು ರಸ್ತೆ ನೇರವಾಗಿ ಹೋಗುತ್ತಾ ಇತ್ತು. ಗಾಢವಾಗಿ ಇರುಳು ಹಬ್ಬಿತ್ತು. ನಿರ್ಜನ ಪ್ರದೇಶ. ಅಲ್ಲೊಂದು ಇಲ್ಲೊಂದು ಮರ ವಿರಳವಾಗಿ ಇತ್ತು. ಕಾರು ಗಂಟೆಗೆ ೮೦ ಕಿ. ಮಿ. ವೇಗದಲ್ಲಿ ನಾನು ಚಲಾಯಿಸುತ್ತಿದ್ದೆ. ತುಂಬ ದೂರದಲ್ಲಿ ಲಾರಿಯೊಂದು ನಿಧಾನವಾಗಿ ಹೋಗುತ್ತಿತ್ತು.
ಮಂಕುತಿಮ್ಮನ ಕಗ್ಗ – ರಸಧಾರೆ (೧೩)
– ರವಿ ತಿರುಮಲೈ
ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು ?I
ಧರಣಿಗನುದಿನದ ರಕ್ತಾಭಿಷೇಚನೆಯೇ? II
ಕರವಾಲವನು ಪುಷ್ಪಸರವೆಂದು ಸೆಳೆದಾಡೆ I
ಪರಿಮಳವ ಸೂಸುವುದೆ ? – ಮಂಕುತಿಮಾ II
ಪುರುಷ=ಶಕ್ತಿ , ಪರಮ =ಸರ್ವೋಚ್ಚ, ಸಿದ್ಧಿ= ಪ್ರಯೋಜನ, ಧರಣಿ= ಭೂಮಿ, ಅನುದಿನ=ಪ್ರತಿನಿತ್ಯ ,
ಅಭಿಷೇಚನೆ = ಅಭಿಷೇಕ , ಕರವಾಲ=ಕತ್ತಿ, ಸೆಳೆದಾಡೆ = ಎಳೆದಾಡಿದರೆ, ಪರಿಮಳ = ಸುಗಂಧ.
ಪುರುಷ ಸ್ವತಂತ್ರತೆಯು ಪರಮ ಸಿದ್ಧಿಯದೇನು ಧರಣಿಗೆ ಅನುದಿನವೂ ರಕ್ತಾಭಿಷೇಚನೆಯೇ
ಕರವಾಲವನು ಪುಷ್ಪಸರವೆಂದು ಸೆಳೆದಾಡೆ ಪರಿಮಳವ ಸೂಸುವುದೆ-ಮಂಕುತಿಮ್ಮ.
ಆಗ ನಡೆಯುತ್ತಿದ್ದ ಯುದ್ದ, ಯುದ್ದದಿಂದ ಆಗುತ್ತಿದ್ದ ದುಷ್ಪರಿಣಾಮಗಳು, ಇವುಗಳ ಬಗ್ಗೆ ಮನಕರಗಿ ಭಾವುಕರಾದ ಮಾನ್ಯ ಗುಂಡಪ್ಪನವರು ಶಕ್ತಿಯ ಸ್ವಾತಂತ್ರದ ಸರ್ವೋಚ್ಚ ಗುರಿ, ಈ ಭೂಮಿಗೆ ಪ್ರತಿದಿನವೂ ರಕ್ತದ ಅಭಿಷೇಕವೇ, ಒರೆಯಿಂದ ಕತ್ತಿಯನ್ನು ಹೂವಿನ ಮಾಲೆ ಎಂದು ಎಳೆದರೆ ಅದರಿಂದ ಸುಗಂಧ ಬರಬಹುದೇ ಎನ್ನುತ್ತಾರೆ.
ನಿದಿಧ್ಯಾಸನ ಮಾಡಿ ಜಯಶೀಲರಾಗಿ !
ತಾಪತ್ರಯ-ವಿನಿರ್ಮುಕ್ತೋ ದೇಹತ್ರಯ-ವಿಲಕ್ಷಣಃ|
ಅವಸ್ಥಾತ್ರಯ-ಸಾಕ್ಷ್ಯಸ್ಮಿ ಅಹಮೇವಾಹಮವ್ಯಯಃ ||
ಈ ವಿದ್ಯೆಯನ್ನು ಅನೌಪಚಾರಿಕವಾಗಿ ಹೇಳಿಕೊಟ್ಟ ಗುರುವೃಂದಕ್ಕೆ ಮೊದಲು ಶಿರಬಾಗಿ ಕರಮುಗಿದು ಪ್ರಾರ್ಥಿಸಿ ನಿಮ್ಮಲ್ಲಿ ಈ ವಿಷಯ ಪ್ರಸ್ತಾವಿಸುತ್ತಿದ್ದೇನೆ. ಹೊಸದೊಂದು ವಿಷಯ ನನ್ನ ಗಮನ ಸೆಳೆದಿತ್ತು. ನಿದಿಧ್ಯಾಸನ ಕ್ರಿಯೆ ! ಹಾಗೆಂದರೇನು ? ಎಲ್ಲಿ ಹೇಗೆ ಅದನ್ನು ಆಚರಿಸುವುದು ? ಯಾರು ಮತ್ತು ಯಾವಾಗ ಮಾಡಬಹುದು ? ಅದರ ಪರಿಣಾಮಗಳೇನು ? ಈ ರೀತಿ ಒಂದರಮೇಲೊಂದು ಪ್ರಶ್ನೆಗಳು ಬರುತ್ತಲೇ ಇದ್ದವು; ಉತ್ತರ ಅಷ್ಟು ಸಲೀಸಾಗಿ ಸಿಗಲಿಲ್ಲ. ಹುಡುಕಿದೆ ಹುಡುಕಿದೆ ಹಲವು ಯೋಗಿಗಳಲ್ಲಿ ಹೋದರೂ ಅದೊಂದು ಸ್ವಾನುಭವ ಕ್ರಿಯೆಯಾಗಿರುವುದರಿಂದ ಅದನ್ನು ವಿವರಿಸುವುದು ಸ್ವಲ್ಪ ಕಷ್ಟ.
ಭಾರತೀಯ ಮೂಲದ ಯಾವುದೇ ತತ್ವಗಳನ್ನು ತೆಗೆದುಕೊಳ್ಳಿ ಅವು ಆದರ್ಶಪ್ರಾಯ. ಅವು ಮತಗಳ ಬಗ್ಗೆ ಹೇಳುವುದಿಲ್ಲ; ಆದರೆ ಧರ್ಮದ ಬಗ್ಗೆ ತಿಳಿಸುತ್ತವೆ, ಮಾನವ ಧರ್ಮದ ಬಗ್ಗೆ ವಿವರಿಸುತ್ತವೆ. ಅಲ್ಲಿಲ್ಲಿ ಆರ್ಟ್ ಆಫ್ ಲಿವಿಂಗ್ ಅಥವಾ ಇನ್ನೂ ಹಲವಾರು ಯೋಗ ಕೇಂದ್ರಗಳಿಂದ ಕೆಲವರು ಇದನ್ನು ತಿಳಿದುಕೊಂಡಿರಬಹುದು. ಅಷ್ಟಾಂಗ ಯೋಗದ ಬಗ್ಗೆಯೂ ಅಲ್ಪಸ್ವಲ್ಪ ಗೊತ್ತಾಗಿರಬಹುದು. ಆದರೆ ಅಷ್ಟಾಂಗಯೋಗದ ಉಪಯೋಗವನ್ನು ಅರಿತವರು ಭಾಗಶಃ ಯೋಗವನ್ನಾದರೂ ಕಲಿಯುತ್ತಾರೆ. ಯೋಗವೆಂಬುದು ಕೇವಲ ಯೋಗಾಸನವಲ್ಲ, ಅದು ಕೇವಲ ಭೌತಿಕ ಅಥವಾ ಶಾರೀರಿಕ ವ್ಯಾಯಾಮ ಕ್ರಿಯೆಯಲ್ಲ. ಅದು ದೇಹ ಮತ್ತು ಮನಸ್ಸುಗಳನ್ನು ಬಳಸಿ ಆತ್ಮಾನುಸಂಧಾನ ಮಾಡುವ ಕ್ರಿಯೆ! ಈ ಬ್ಲಾಗಿನ ಆರಂಭದಲ್ಲಿ ನಾನು ಬರೆದ ಹಾಡೊಂದು ನೆನಪಾಗುತ್ತಿದೆ. ಅದನ್ನು ಕೆಲವರು ಓದಿದರು; ಕೆಲವರು ತುಂಬಾ ಚೆನ್ನಾಗಿದೆಯೆಂದರು, ಇನ್ನೂ ಕೆಲವರು ತೀರಾ ವಿರಕ್ತ ಗೀತೆ ಎಂದರು. ಅದರ ಆಳವಾದ ಗಹನವಾದ ಅರ್ಥವನ್ನು ಯಾರೂ ಅರಿಯದಾದರು.
ಹಲವು ಸರ್ತಿ ನಾನು ಹೇಳಿದ್ದಿದೆ, ಶರೀರದ ಸ್ವಚ್ಛತೆಗಾಗಿ ಹೇಗೆ ಸ್ನಾನ ಮಾಡುತ್ತೇವೆಯೋ ಹಾಗೆಯೇ ಮನಸ್ಸಿನ ಸ್ವಚ್ಛತೆಗಾಗಿ ಧ್ಯಾನ ಮಾಡಿ ಎಂದು. ಮನಸ್ಸು-ಆತ್ಮ ಬೇರೇ ಬೇರೇ. ಆತ್ಮ ಶುದ್ಧವಾಗಿರುತ್ತದೆ; ಕಲ್ಮಶರಹಿತವಾಗುತ್ತದೆ. ಯಾವಾಗ ಆತ್ಮ ಶರೀರದೊಳಗೆ ಸೇರಿ ಮನಸ್ಸಿನ ಹತೋಟಿಯಲ್ಲಿ ಸಿಕ್ಕಿಬೀಳುತ್ತದೋ ಆಗ ಅದು ಗೌಣವಾಗಿ ಸುಪ್ತವಾಗಿ ಶರೀರದೊಳಗೆ ಹುದುಗಿರುತ್ತದೆಯೇ ವಿನಃ ತನ್ನಶಕ್ತಿಯನ್ನು ಅದು ಮರೆತಿರುತ್ತದೆ ! ಈ ಶರೀರದೊಳಗೆ ಆತ್ಮ ಎಂಬುದು ಮೊಬೈಲ್ ಹ್ಯಾಂಡ್ ಸೆಟ್ ನಲ್ಲಿ ಸಿಮ್ಮು ಇರುವಂತೇ. ನಮ್ಮಲ್ಲಿಯೂ ಡ್ಯೂಯಲ್ ಸಿಮ್ಮು! ಒಂದು ಒಳಗಿನ ನಾನು ಒನ್ನೊಂದು ಹೊರಗಿನ ನಾನು. ಆದರೆ ಇಲ್ಲಿ at a time both are functioning! ಆಗಾಗ ನನ್ನಜೊತೆಗಿರುವ ನಾನು ಒಳಗಿನ ನನ್ನನ್ನು ಬಿಟ್ಟು ಪರಸ್ಪರ ಕೆಲಸಮಾಡುತ್ತೇನೋ ಆ ಕೆಲಸ ಯಶಸ್ವಿಯಾಗುವುದಿಲ್ಲ ಅಥವಾ ಕೇಡಿನ ಕೆಲಸವಾಗಿರುತ್ತದೆ!
ಕುಲಾಂತರಿ ಚರ್ಚೆ: ಇನ್ನೊಂದು ಮುಖ
– ಪ್ರಸನ್ನ ಆಡುವಳ್ಳಿ,ಧಾರವಾಡ
ಕುಲಾಂತರಿಗಳ ಬಗ್ಗೆ “ಕನ್ನಡಪ್ರಭ” ಪತ್ರಿಕೆಯಲ್ಲಿ ಶಾಂತು ಶಾಂತಾರಾಮ್ ಹಾಗೂ ಎಮ್ ಮಹದೇವಪ್ಪ ಅವರು ಬರೆದ ಬರಹ ಓದುಗರನ್ನು ದಾರಿತಪ್ಪಿಸುವಂತಿದೆಯೇ ವಿನಹಾ ಅವುಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಕುಲಾಂತರಿಗಳನ್ನು ಅಭಿವೃದ್ದಿಯ ಹೆಸರಲ್ಲಿ, ಅಧಿಕ ಅಹಾರ ಉತ್ಪಾದನೆಯ ನೆಪದಲ್ಲಿ ರೈತರ ಹಾಗೂ ಗ್ರಾಹಕರ ಮೇಲೆ ಹೇರುವ ಪ್ರಯತ್ನದ ಒಂದು ಭಾಗವಾಗಿ ಈ ಬರಹಗಳು ಮೂಡಿಬಂದಿವೆಯಷ್ಟೇ.
ವಿಜ್ನಾನವು ಸತ್ಯ ಶೋಧನೆಯಿಂದ ರೂಪಗೊಳ್ಳುವುದೇ ವಿನಹ ಸಂಖ್ಯಾ ಬಲದಿಂದಲ್ಲ ಎಂಬ ಮಹದೇವಪ್ಪನವರ ಮಾತುಗಳು ಒಪ್ಪತಕ್ಕದ್ದೇ . ಆದರೆ ಬಿ.ಟಿ. ಬದನೆ ಕುರಿತ ಚರ್ಚೆ ಯಲ್ಲಿ ವಿಜ್ನಾನಿಗಳಿಗೆ ಸೂಕ್ತ ಕಾಲಾವಕಾಶ ಸಿಗಲಿಲ್ಲ ಎಂಬ ಮಾತು ಸತ್ಯಕ್ಕೆ ದೂರ. ತಾತ್ಕಾಲಿಕ ನಿಷೇಧ ಹೇರುವ ಮುನ್ನ ದೇಶದ ಹಲವೆಡೆಗಳಲ್ಲಿ ಪರ-ವಿರೋಧಗಳ ಬಗ್ಗೆ ಪರಿಸರ ಸಚಿವಾಲಯ ವಿಸ್ತೃತ ಚರ್ಚೆ ನಡೆಸಿತ್ತು. ಇಷ್ಟಲ್ಲದೇ ದೇಶದ ಪ್ರತಿಷ್ಟಿತ ಆರು ವಿಜ್ನಾನ ಅಕಾಡೆಮಿಗಳಿಂದ ಅಭಿಪ್ರಾಯ ಕೇಳಿತ್ತು. ಆದರೆ ಅಲ್ಲಿನ ವಿಜ್ನಾನಿಗಳು ಕೊಟ್ಟ ಬೇಜಾವಾಬ್ದಾರಿಯುತ ವರದಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದು ನೆನಪಿರಬಹುದು. ಎಲ್ಲದಕ್ಕೂ ವೈಜ್ನಾನಿಕ ಆಧಾರ ಕೇಳುವವರು ತಮ್ಮ ವರದಿಯ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ? ಅಲ್ಲೇಕೆ ಯಾವುದೇ ವೈಜ್ನಾನಿಕ ಆಧಾರ ನೀಡದೇ ತೀರ ಕಳಪೆ ಗುಣಮಟ್ಟದ ವರದಿ ಕೊಟ್ಟರು?
ಬಿ.ಟಿ. ಹತ್ತಿ ಬಂದ ಮೇಲೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಹತ್ತಿ ರಫ್ತು ಮಾಡುವ ದೇಶವಾಯ್ತೆಂದು ಹೆಮ್ಮೆಯಿಂದ ಹೇಳುವವರು ಇತ್ತೀಚೆಗೆ ಹತ್ತಿಯ ಒಟ್ಟಾರೆ ಉತ್ಪಾದನೆ ಕಡಿಮೆಯಾಗಿದೆಯೆಂದು ಕೇಂದ್ರ ರಫ್ತು ನಿಷೇಧ ಮಾಡಲು ಹೊರಟಿದ್ದನ್ನೇಕೆ ಪ್ರಜ್ನಾಪೂರ್ವಕವಾಗಿ ಮರೆಮಾಚುತ್ತಾರೆ? ದೇಶದ ಶೇಕಡಾ 93ರಷ್ಟು ಭಾಗದಲ್ಲಿ ಬಿ.ಟಿ.ಹತ್ತಿಯನ್ನೇ ಬೆಳೆಯುತ್ತಿದ್ದರೂ ಹೀಗಾಗಿದ್ದೇಕೆ?!
ಮಂಕುತಿಮ್ಮನ ಕಗ್ಗ – ರಸಧಾರೆ (೧೨)
– ರವಿ ತಿರುಮಲೈ
ಮಾನವರೋ ದಾನವರೋ ಭೂಮಾತೆಯನು ತಣಿಸೆ
ಶೋಣಿತವನೆರೆಯುವರು ಬಾಷ್ಪಸಲುವುದಿರೆ?
ಏನು ಹಗೆ! ಏನು ಧಗೆ!ಏನು ಹೊಗೆ! ಯೀ ಧರಿಣಿ
ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ
ಶೋಣಿತವನೆರೆಯುವರು= ಶೋಣಿತವನು+ ಎರೆಯುವರು/ಬಾಷ್ಪಸಲುವುದಿರೆ= ಭಾಷ್ಪ+ಸಲುವುದು+ಇರೆ
ಶೋಣಿತ= ರಕ್ತ, ಭಾಷ್ಪ = ಕಣ್ಣೀರು, ಎರೆಯುವುದು= ಸುರಿಸುವುದು, ಸಲುವುದಿರೆ= ಸುರಿಸಬೇಕಾದರೆ. ಸೌನಿಕ =
ಕಟುಕ, /ಕಟ್ಟೆ= ಜಗುಲಿ.
ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೀರು ಸುರಿಸುವ ಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಕಗ್ಗದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು ನೊಂದಿತ್ತೋ ಏನೋ? ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತಿತ್ತೆ.
ಮತ್ತಷ್ಟು ಓದು
ಜೋಡಿ ನಯನದ ಒಂಟಿ ನೋಟ
– ವಿಜಯಕುಮಾರ್ ಹೂಗಾರ್
ಹೀಗೊಂದು ನೋಟ.ವಿಚಿತ್ರ ನೋಟ.ಇಡಿ ಬೆಂಗಳೂರು ಒಂದೇ ನೋಟಕ್ಕೆ ನೋಡೋ ಹಟ.ಖೇಚರ ಜೀವಿಯಂತೆ ನಗರದ ತಲೆಯಮೇಲೆ ಹಾರಾಡೋ ಬಯಕೆ ಈ ಜೋಡಿ ನಯನಕ್ಕೆ.ಬಯಕೆ ಈಡೇರದೆ ಅದರ ಪಾದದಡಿ ನುಸುಳಿ ಸುತ್ತುತ್ತಿದೆ ನಿಘೂಡ ಮನಸ್ಸು ಭೇಧಿಸುವ ವ್ಯಾಧನ ಅಗೋಚರ ಬಿಲ್ಲಿನಂತೆ.ಬಯಕೆಯ ತೇವಕೆ ಸಮ್ಮತಿಸುವಂತೆ ಮಹಾನಗರ ಬಿಡಿ ಬಿಡಿಯಾಗಿ ನೀಗಿಸುತಿದೆ ನಯನದ ದಾಹ.ತುಂಡು ತುಂಡಾಗಿ ಚಲಿಸಲೋಲಿಸುತಿದೆ ಸೆಳೆಯುವ ದಾರಿಯ ಮೋಹ.
ಗಾಳಿಯ ರಭಸಕ್ಕೆ ನಯನ ಮನಬಂದಂತೆ ತೂರಿ ಹಾರಿದೆ,ಕುರುಡನ ಕೈ ಹಿಡಿದು.ನಯನದ ಜಾಡು ದಾರಿಗೆ ಹೆಜ್ಜೆಯ ಕುರುಹು ಹಾಕುತ್ತ ದೇಹ ಅದಕೆ ಹಿಂಬಾಲಿಸಿದೆ.ಕಣ್ಣು ಓಡಿದಲೆಲ್ಲ ಬಣ್ಣದ ಲೋಕದಲ್ಲಿ ಬಣ್ಣಗೆಟ್ಟ ಜನರ ಓಟ.ನಡೆದಾಡುವ,ಸರಿಸೋಡುವ ಜನ.ಚಲಿಸುವ ದಾರಿಯ ಮೇಲೆ ಇಟ್ಟ ಬೊಂಬೆಯಂತೆ.ಯಾವ ಕಾಲಕ್ಕೂ ಲೆಕ್ಕಿಸದೆ ಉಳಿಗಾಲದ ಜೀವಂತ ಜನ ಓಡುತ್ತಿದ್ದಾರೆ ನಡೆದ ದಾರಿ ಮತ್ತಷ್ಟು ಸವೆಯುವಂತೆ.ಓಡಾಟದಲ್ಲಿ ಭಾರ ಹೊತ್ತಿ ಚಲಿಸುವ ಪಾರಗನ್ ಚಪ್ಪಲಿ ಮೈ ಮರೆತು ನಿಲ್ಲುವಹಾಗಿಲ್ಲ.ಮರೆತರೆ ಮರೆಯಲಾಗದ ನೆನಪು ಕೊಡುಗೆ ನೀಡುವ ಜನರು ಹದ್ದಿನಂತೆ ಕಾಯುತ್ತಿದ್ದಾರೆ.ಅವರೂ ಕಾದು ಕಾದು ಸುಸ್ತಾಗಿದ್ದಾರೆ,ಹಸಿದ ಹುಲಿಯ ಹೊಟ್ಟೆಯಂತೆ.ಕೈಯಲ್ಲಿ ಮಹಾನಗರದ ನಕ್ಷೆ.ಪೆನ್ನು.ಗತ ಕಾಲದ ಹಳಸು ಡೈರಿ ಹಿಡಿದು ಹೊಂಚು ಹಾಕುತ್ತಿದ್ದಾರೆ. ಮತ್ತಷ್ಟು ಓದು
ಮಂಕುತಿಮ್ಮನ ಕಗ್ಗ – ರಸಧಾರೆ (೧೧)
– ರವಿ ತಿರುಮಲೈ
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ I
ಮೃತ್ಯುಕುಣಿಯುತಲಿಹನು ಕೇಕೆಹಾಕುತಲಿ II
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ I
ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ II
ಮುತ್ತಿರುವುದು ಇಂದು ಭೂಮಿಯನು ಅದೊಂದು ದುರ್ದೈವ
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ.
ಸುತ್ತಿಪುದು ತಲೆಯನು ಅನು ದಿನವು ಲೋಕದ ವಾರ್ತೆ
ಎತ್ತಲಿದಕೆಲ್ಲ ಮಂಕು ತಿಮ್ಮ
ಸುತ್ತಿಪುದು = ಸುತ್ತಿಸುತ್ತದೆ , ಅನುದಿನವು= ಪ್ರತಿನಿತ್ಯವು, ಎತ್ತಲಿದಕೆಲ್ಲ = ಇದಕ್ಕೆಲ್ಲ ಎಲ್ಲಿ.
ಕನ್ನಡಮ್ಮನ ಹೆಮ್ಮೆಯ ಪುತ್ರನೂ ಅಣ್ಣಾವರ ಮಗನೂ
– ಜಿ.ವಿ ಜಯಶ್ರೀ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ,
ಇದು ಎಂಬತ್ತರ ದಶಕದ ಹಾಡು. ತುಂಬಾ ಇಷ್ಟ ಪಟ್ಟು ಈಗಲೋ ಕೇಳುವಂತಹ ಸುಂದರ ಗೀತೆ.ಈ ಚಿತ್ರದಲ್ಲಿ ನಟಿಸಿದ ಪುನೀತ್ ರಾಜ್ ಕುಮಾರ್ ನಟನೆಯಷ್ಟೇ ಮನಸೆಳೆದ ಸಂಗತಿ ಅಂದ್ರೆ ಅವರು ಹಾಡಿದ ಈ ಹಾಡು .
ಮೊದಲಿನಿಂದ ವೀಕ್ಷಕ ದೇವರ ಮನ ಸೆಳೆದ ಕಲಾವಿದ ಪುನೀತ್. ಅವರ ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಖುದ್ದು ಪುನೀತ್ ವಿಷಯದಲ್ಲಿ ತೋರುವ ಅಭಿಮಾನ ಅಪಾರ.
ಈತನ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ. ಅಪ್ಪಾಜಿಯ ನಂತರ ಬಣ್ಣ ಹಚ್ಚಿದ (ಪೂರ್ಣಿಮಾ ಸಹ ಹಚ್ಚಿದ್ದಾರೆ ) ಪುನೀತ್ ತಮಗೆ ಮಾದರಿ ಎನ್ನುವ ಮಾತು ಹೇಳಿರುವುದು ಅವರು ತಮ್ಮನ ಮೇಲೆ ಇಟ್ಟಿರುವ ಪ್ರೀತಿಯನ್ನು ಎತ್ತಿ ತೋರುತ್ತದೆ.
ಶಿವಣ್ಣ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಾಗ ಅಪಾರ ಸಂಖ್ಯೆಯ ವೀಕ್ಷಾಕಾಭಿಮಾನ ಹೊಂದಿದ್ದರು.ಆ ಕಾರ್ಯಕ್ರಮದ ಮೂಲಕ ಹೆಚ್ಚು ಗೊತ್ತಾದರೂ ಶಿವಣ್ಣ. ಕಾರಣ ಇಷ್ಟೇ ಸಿನಿಮಾದಲ್ಲಿ ಗಿಣಿಗೆ ಕಲಿಸಿದ ಪಾಠದಂತೆ ಡೈಲಾಗ್ ಹೇಳುವ ಶಿವಣ್ಣನಿಗಿಂತ ತನ್ನ ಹೃದಯದಿಂದ ಮಾತನಾಡಿದ ಶಿವಣ್ಣ ಇಷ್ಟ ಆಗಿತ್ತು.. ಮಾತಲ್ಲಿ ಯಾವುದೇ ರೀತಿಯ ನಾಟಕೀಯತೆ, ಕಲಿತ ಮಾತು ಇರದೇ ಸಾಮಾನ್ಯ ಮನೆಕನ್ನಡ ಮಾತಾಡಿ , ತಮ್ಮ ಸರಳತೆ, ವಿಶೇಷ ವ್ಯಕ್ತಿತ್ವ್ದದಿಂದ ಗೆದ್ದಿದ್ದರು.