ವಿಷಯದ ವಿವರಗಳಿಗೆ ದಾಟಿರಿ

ಜೂನ್ 4, 2012

1

((((((?)))))))

‍ನಿಲುಮೆ ಮೂಲಕ
 -ಪ್ರಕಾಶ್ ಶ್ರೀನಿವಾಸ್

ನಾಳೆ ಬೆಳಗ್ಗೆ 6ಕ್ಕೆ ನನ್ನ ಗೆಳೆಯನ ಮದುವೆ..

ಹೇಗಾದರೂ ಮಾಡಿ  ಬೇಗ ಹೊರಡ ಬೇಕು ಅಂತ ಅಂದು ಕೊಂಡು
ಎಲ್ಲ ಕೆಲಸಗಳನ್ನೂ ಮಾಡಿ ಹೊರಡಲು ನಿರ್ಧರಿಸಿದೆ …
ದಿಡೀರ್ ಅಂತ ಒಂದು ಕೆಲಸ ಬಂತು ಸರಿ ಮಾಡಿ ಮುಗಿಸಿ ಹೋಗೋಣ ಬೇಗ ಅಂತ ..
ಕೆಲಸ ಶುರು ಮಾಡಿದೆ ಕೆಲಸ ಮುಗಿಸಿ ಟೈಮ್ ನೋಡಿದರೆ ರಾತ್ರಿ 9 ಆಗಿದೆ ..
ಅಯ್ಯೋ ಈಗಲೇ ಬಿಟ್ಟರೆನೆ ಬೇಗ ಅಲ್ಲಿಗೆ ತಲುಪಲು ಆಗೋದು ಅಂತ
ಮನೆಗೆ ಬಂದು ರೆಡಿ ಆಗಿ ಹೊರಟೆ,
ಹೋಗುವ ಮೊದಲು ಅಮ್ಮನಿಗೆ ಒಂದು ಮಾತು ಹೇಳಿ ಹೋಗೋಣ ಅಂತ.
ಅಮ್ಮನ ರೂಮಿಗೆ ಹೋದೆ ಅಮ್ಮ ಬೆಳಗ್ಗೆ ರಮೇಶ್ ಮದುವೆ ಇದೆ ನಾನು ಹೋಗ್ತೀನಿ
ಅಮ್ಮ ಲೋ ಹೋಗಿ ಬರ್ತೀನಿ ಅನ್ನೋ ಅಂತ ಹೇಳಿದ್ರು ..
ಸರಿ ಅಮ್ಮ ಹೋಗಿ ಬರ್ತೀನಿ ….
ಸಮಯ ಆಗಲೇ 9:30 ಆಗಿತ್ತು ….
ಬಸ್ ಸ್ಟಾಪ್ ಗೆ ಬಂದೆ ಅಲ್ಲಿ ನೋಡಿದರೆ ನಾನು ಹೊರಡಬೇಕಾದ ಊರಿನ ಎಲ್ಲ ಬಸ್ಗಳು
ಆಗಲೇ ಹೊರಟಾಗಿತ್ತು…

ಸರಿ ಒಂದೊಂದು ಬಸ್ ನ ಬದಲಾಯಿಸಿಯಾದರೂ

ನಾನು ಹೋಗಲೇ ಬೇಕು ಅಂತ ಯೋಚಿಸುತ್ತ  ಇದ್ದಾಗ ………

ಹೇಗೋ ಒಂದು ಬಸ್ ಸಿಕ್ಕಿತು
ಸರಿ ಇದರಲ್ಲಿ ಅರ್ಧ ದಾರಿ ಹೋಗಬಹುದು ನಂತರ ಬೇರೆ ಬಸ್ ಹಿಡಿದು ಮುಂದೆ ಹೋಗೋಣ ಅಂತ ನಿರ್ಧರಿಸಿ ಬಸ್ ಹತ್ತಿದೆ ..
ಮನೆಯಲ್ಲಿ ಹೊರಡುವ ಅವಸರದಲ್ಲಿ ಊಟ ಮಾಡಿರಲಿಲ್ಲ
ಹಾಗಾಗಿ ಹೊಟ್ಟೆ ಹಸಿವು ಬೇರೆ …
ಸರಿ ಬಸ್ ಮುಂದೆ ಒಂದು ಡಾಬದಲ್ಲಿ ನಿಲ್ಲಿಸುತ್ತಾರೆ ಅಂತ conductor ಹೇಳಿದರು
ಡಾಬ ಬರೋದನ್ನೇ ಕಾಯುತ್ತ ಕೂತ್ತಿದ್ದೆ…..
ಕೊನೆಗೂ ಡಾಬ ಬಂದೆ ಬಿಟ್ಟಿತು.
ಹಸಿವು ಬೇರೆ, ಓಡಿ ಹೋಗಿ ಮೊದಲು ಹೊಟ್ಟೆ ತುಂಬಾ ಊಟ  ..
ಸರ್ ಕೈ ಹೊರಗೆ ತೊಳೆದುಕೊಳ್ಳಿ ಅಂತ ಸರ್ವರ್ ಹೇಳಿದ
ಹೊರಗೆ ಕೈ ತೊಳೆಯಲು ಹೋದೆ …
ಅಲ್ಲಿಂದ ಸ್ವಲ್ಪ ದೂರದಲ್ಲಿ ಬಾತ್ ರೂಂ ಇದೆ ಅಂತ ಬೋರ್ಡ್ ಇತ್ತು  
ತುಂಬಾ ಕತ್ತಲೆ ಬೇರೆ ನನ್ನ ಮೊಬೈಲ್ ನಲ್ಲಿ ಇದ್ದ TOURCH ಆನ್ ಮಾಡಿ ಒಳಗೆ ಹೋದೆ..
ಬಾತ್ ರೂಂ ಇಂದ ಹೊರಗೆ ಬಂದು ನನ್ನ ಬಸ್ ನ ಕಡೆ ನಡೆಯುತ್ತಾ ಬರುವಾಗ
ಆ ಕತ್ತಲಲ್ಲಿ ನನ್ನ ಮುಂದೆ ಏನೋ
ತುಂಬಾ ಪ್ರಕಶವಾಗಿ ಒಂದು ಆಕೃತಿ ಹೋದಾ ಹಾಗೆ ಅನ್ನಿಸಿತು
ಆ ಪ್ರಕಶವಾದ ಬೆಳಕಿಗೆ ಸ್ವಲ್ಪ ಕ್ಷಣಗಳು ಮಬ್ಬಾಗಿ ಕಾಣುತ್ತಿತ್ತು  ..
ನನಗೆ ತಲೆ ಹಾಗೆ ಸುತ್ತಲು ಪ್ರಾರಂಭಿಸಿತು …
ನನ್ನ ಕೈಯಲ್ಲಿ ತಡಿಯಲು ಆಗದೆ ಅಲ್ಲೇ ಬಿದ್ದು ಬಿಟ್ಟೆ ..
ಸ್ವಲ್ಪ ಹೊತ್ತು ಆದಮೇಲೆ ಎದ್ದು ನೋಡುತ್ತೇನೆ ಸುತ್ತಲೂ ಬರೀ ಕತ್ತಲು
ನನ್ನ ಮೊಬೈಲ್ TOURCH ಆನ್ ಮಾಡಿ ಮುಂದೆ ಮೆಲ್ಲನೆ ನಡೆದು ಬಂದೆ …
ಆಗ ಸಮಯ 12ಘಂಟೆ …
ಅಲ್ಲಿಂದ ಡಾಬದಲ್ಲಿ ವಿಚಾರಿಸಿದೆ .
ಸರ್ ನಿಮ್ಮ ಬಸ್ ಹೋಗಿ ಅದಾಗಲೇ ಅರ್ಧಘಂಟೆ ಆಗಿದೆ ಅಂತ ಹೇಳಿದರು
ನನಗೆ ಏನು ಮಾಡಬೇಕು ಅಂತಾನೆ ತೋಚದಂತ ಸ್ಥಿತಿ …
ಅಯ್ಯೋ ಏನಪ್ಪಾ ಮಾಡೋದು ಅಂತ ಅಲ್ಲಿದವರನ್ನೇ ಕೇಳಿದೆ
ಸರ್ ಇಲ್ಲಿ ಮತ್ತೆ ಯಾವದರೂ ಬಸ್ ಬರುತ್ತಾ ಅಂತ?
ಅವರು ಸರ್ ಇಲ್ಲಿ ತುಂಬಾ ಅಪರೂಪ ಸರ್ ಈ ಟೈಮ್ ನಲ್ಲಿ ಬಸ್ ಎಲ್ಲ ಸಿಗೋದು .
ಮುಂದೆ ಹೋಗುತ್ತಾ ಇರಿ ಯಾವುದಾರೂ ಬಸ್ ಸಿಕ್ಕರೆ ನಿಮ್ಮ ಅದೃಷ್ಟ ಅಷ್ಟೇ ಅಂತ ಹೇಳಿದರು
ಸರಿ ನೋಡೋಣ ನನ್ನ ಲಕ್ ಸಿಕ್ಕರೆ ಸಿಗಲಿ ಅಂತ ಮುಂದೆ ನಡೆದು ಹೋಗುತ್ತಾ ಇದ್ದೆ
ದೂರದಲ್ಲಿ ಎಲ್ಲೋ ನನ್ನ ಹಿಂದೆ ಬಸ್ ಬರುತ್ತಿರುವ ಸೌಂಡ್ ಕೇಳಿತು ಮನಸಿನಲ್ಲಿ ಏನೋ ಸಂತಸ..
ತಿರುಗಿ ನೋಡಿದೆ ತುಂಬಾ ದೂರದಲ್ಲಿ ಒಂದು ಬಸ್ ಬರುತ್ತಾ ಇತ್ತು ಅಪ್ಪ ಸಾಕಪ್ಪ ಅಂತ ಮನಸಲ್ಲಿ ಅಂದು ಕೊಂಡು ಅಲ್ಲೇ   ಆ ಬಸ್ ಹತ್ತಿರ ಬರೋದನ್ನೇ  ಕಾಯುತ್ತ ನಿಂತೇ…
ಬಸ್ ಹತ್ತಿರ ಬರುತ್ತಿರುವಾಗಲೇ ಕೈಯಾಡಿಸುತ್ತಾ  ಇದ್ದೆ..
ನನ್ನ ಮುಂದೆ ಬಂದು ನಿಂತಿತು  ನಂ.1841 ನಂಬರಿನ  ಬಸ್
ನಾನು ಖುಷಿಯಿಂದಲೇ ಒಳಗೆ ಹತ್ತಿದೆ.
ಒಳಗೆ ಹೊಗುತ್ತ ಇದಂತೆ ಏನೋ  ಒಂದು ರೀತಿಯ ಅಮಾನುಷವಾದ

ಅನುಭವ ನನಗೆ

ಅಲ್ಲಿ ಒಬ್ಬರ ಮುಖದಲ್ಲೂ ಸಹ ಒಂದು ಚೂರೂ ನಗುವಿರಲಿಲ್ಲ! ,
ಎಲ್ಲರೂ ನನ್ನನ್ನೇ ನೋಡುತ್ತಾ ಇದ್ದರು ..
ಯಾಕೆ ಹೀಗೆ ನನ್ನೇ ನೋಡುತ್ತಾ ಇದ್ದಾರೆ ಅಂತ ನನಗೆ ಅರ್ಥವೇ ಆಗಲಿಲ್ಲ
ಕೊನೆಯಲ್ಲಿ ಇದದ್ದೆ ಒಂದೇ ಸೀಟ್ ಅಲ್ಲಿ ಹೋಗಿ ಕೂತೆ …
ಬಸ್ ಮುಂದೆ ಚಲಿಸಲು ಪ್ರಾರಂಭಿಸಿತು
ಅಲ್ಲಿದ್ದ conductor ನನ್ನ ಟಿಕೆಟ್ ಕೇಳಲೇ ಇಲ್ಲ
ನನಗೆ ಏನೋ ಭಯ ನಾನು ಸುಮ್ಮನೆ ಆ ಸೀಟ್ ನಲ್ಲೆ ಕುಳಿತು ಬಿಟ್ಟೆ ..
ಒಮ್ಮೆ ಎಲ್ಲರನ್ನೂ ನೋಡುತ್ತಾ ಬಂದೆ ಎಲ್ಲರೂ ಮುಂದೆ ನೋಡುತ್ತಾ ಕುಳಿತಿದ್ದರು ..
ಒಬ್ಬರು ಸಹ ನಗುತ್ತ ಇಲ್ಲ ಬೇರೆ ಏನೂ ಮಾಡುತ್ತಾ ಇರಲಿಲ್ಲ
ನನಗೆ ಆತಂಕ ಇನ್ನೂ ಜಾಸ್ತಿ ಆಗ ತೊಡಗಿತು ..
ಏನೋ  ಒಂದು ಅಮಾನುಷವಾದ

ಜಾಗದಲ್ಲಿ ನಾನು ಸಿಕ್ಕಿದ್ದೇನೆ ಅಂತ ಮಾತ್ರ ಮನಸು ಆಗಾಗ ಹೇಳುತ್ತಲೇ ಇತ್ತು ..

watch  ನೋಡಿದ ಸಮಯ 1:30ಘಂಟೆ,
ನಾನು ಆ ಭಯದಲ್ಲೇ ಇರುವಾಗ ಯಾಕೋ ಗೊತ್ತಿಲ್ಲ ದಿಡೀರ್ ಅಂತ ಬಸ್ ನಿಂತು ಬಿಟ್ಟಿತು
ಆ conductor ನನ್ನ ನೋಡಿ ನೀನು ಇಲ್ಲೇ ಇಳಿದುಕೋ ಅಂತ ಹೇಳಿದ ..
ನನಗೂ ಅದೇ ಬೇಕಿತ್ತು .
ಅವರು ಹೇಳಿದ ಕೂಡಲೇ ಇಳಿದು ಬಿಟ್ಟೆ ಅಲ್ಲಿಂದ ಬಸ್ ಹೊರಟೆ ಬಿಟ್ಟಿತು.
ಯಪ್ಪಾ ಸಾಕಪ್ಪ ಏನ್ ಜನಗಳೋ  ಹುಚ್ಚರೂ ಸಹ ಮೇಲು ಇವರಿಗಿಂತ ಅಂತ ಬೈಕೊಂಡೆ ಆ ಕತ್ತಲ ರಾತ್ರಿಯಲ್ಲಿ ಮಾತಾಡುತ್ತ  ಹೋಗುತ್ತಿದ್ದೆ

ನನಗೆ ಆಗಲೇ ಒಬ್ಬ ದಾರಿಹೋಕ ಸಿಕ್ಕ ….

ನಾನು ಅವನನ್ನೇ ಕರೆದು ಮಾತಾಡಿಸಿದೆ ಏನು ನೀವು ಈ ಹೊತ್ತಿನಲ್ಲಿ ಇಲ್ಲಿ ಒಬ್ಬರೇ ಹೋಗುತ್ತಾ ಇದ್ದಿರಲ್ಲ ಅಂತ
ಅವನು ..
ಸ್ವಾಮಿ ನಮ್ಮ ಹಾಲಿನ ಡೈರಿ ತೆಗೆಯಬೇಕು 4ಘಂಟೆಗೆ ಹಾಗಾಗಿ ಈಗ ಅಲ್ಲಿಗೆ ಹೋಗುತ್ತಾ ಇದ್ದೇನೆ ಅಂದ…
ನಂತರ ನನ್ನನ್ನು ನೋಡಿ ಪ್ರಶ್ನೆ ಕೇಳಿದ
ಯಾರು ನೀವು ? ನಮ್ಮ ಊರಿನವರ ಹಾಗೆ ಕಾಣಲ್ವಲ್ಲ?
ನಾನು ನಡೆದ ಎಲ್ಲವನ್ನೂ ಅವನಿಗೆ ಹೇಳಿದ..
ಎಲ್ಲವನ್ನೂ ಕೇಳಿ ಅವನು ಒಂದು ಕ್ಷಣ ನನ್ನ ಮೇಲಿಂದ ಕೆಳಗೆ ನೋಡಿ ನಿಜಕ್ಕೂ ನೀನು
ಅದೃಷ್ಟವಂತ ಕಣಯ್ಯ ಅಂದ..
ನಾನು ಯಾಕೆ ?
ಇಲ್ಲಿ ಕೆಲವು ದಿನಗಳ ಹಿಂದೆ ಒಂದು ಅಪಘಾತವಾಗಿತ್ತು!
ಬಸ್ ನದಿ ಗೆ ಬಿದ್ದು ಅದರಲ್ಲಿ ಇದ್ದ  ಅಷ್ಟೂ ಜನ ಸತ್ತರು
 ಅವರ ಆತ್ಮಗಳು ಈಗಲೂ ಇಲ್ಲಿ ಓಡಾಡುತ್ತ ಇದೆ..
ಆ ಆತ್ಮಗಳು ರಾತ್ರಿಯ ವೇಳೆಯಲ್ಲಿ ಅವರು
ಸತ್ತ ದಿನ ಯಾವ ಬಟ್ಟೆ ಹಾಕಿದ್ದರೋ ಅದೇ ಬಟ್ಟೆಯಲ್ಲೇ ಇದ್ದಾರೆ
ಅವರಿಗೆ ಈಗಲೂ ತಮ್ಮ ಜೊತೆ ಮತ್ತಷ್ಟು ಆತ್ಮಗಳು ಬೇಕು ಅನ್ನೋ ಆಸೆ ಹಾಗಾಗಿ ಈಥರ ಬಸ್ ನಲ್ಲಿ  ಕರ್ಕೊಂಡು ಹೋಗಿ ಅವರನ್ನ ಸಾಯಿಸುತ್ತಾರೆ ಅಂತೆಲ್ಲ ಕೇಳಿದ್ದೆ ,
ಹೋದವಾರ ನಮ್ಮ ಮನೆ ಪಕ್ಕದ ರಾಮೇಗೌಡ  ಕೂಡ ಕಾಣೆ ಆಗಿದ್ದಾನೆ ಅವನನ್ನು ಆ ದೆವ್ವಗಳೇ ಸಾಯಿಸಿದೆ  ಅಂತ ಜನ  ಮಾತಾಡಿಕೊಳ್ಳುತ್ತ ಇದ್ದಾರೆ.
ನಾನು ಸಹ ಕೆಲವೊಂದು ಸಾರಿ ಯಾರೋ ನೀರಲ್ಲಿ ಚೀರಾಡೋ ಹಾಗೆಲ್ಲ ಧ್ವನಿ ಕೇಳಿದ್ದೀನಿ ,
ಅದಕ್ಕೆ ಯಾವುದೇ ಬಸ್ ನನ್ನ ಎದುರಿಗೆ ಬಂದರೂ ನಾನು ನೋಡುವುದಿಲ್ಲ
ನನಗೆ ಅವನ ಮಾತುಗಳನ್ನ ಕೇಳಿ,
ಕೈ ಕಾಲು ನಡುಗಲು ಶುರು ಮಾಡಿತು.
ಅವನನ್ನೇ ಕೇಳಿದೆ ಸ್ವಾಮಿ ನಾನು ಊರಿಗೆ ಹೋಗಬೇಕು ಬೆಳಗ್ಗೆವರೆಗೂ ಇರುವುದಕ್ಕೆ ಒಂದು ಜಾಗ ಏನಾದರೂ ಇಲ್ಲಿ ಇದೆಯಾ ?
ಅವನು ಅತರ ಜಾಗ  ಇಲ್ಲಿ ಎಲ್ಲೂ  ಇಲ್ಲ
ಮುಂದೆ ಒಂದು ಬಂಕ್ ಇದೆ ಅದು ಇಲ್ಲಿ ಓಡಾಡೋ ಗಾಡಿ ಗಳು ಏನಾದರೂ ಮಧ್ಯದಲ್ಲೇ ಪೆಟ್ರೋಲ್ ಇಲ್ಲ ಅಂತ ನಿಂತರೆ ಅವರಿಗೆ ಪೆಟ್ರೋಲ್ ಮಾರಾಟ  ಮಾಡೋ ಅಂಗಡಿ,
ಅಲ್ಲಿ ಹೋಗಿ ಮಲಗಿಕೋ
ನೀನು ಇನ್ನೂ ಆ ಆತ್ಮಗಳ ಎಲ್ಲೆನ ದಾಟಿಲ್ಲ!!
ಆ ಆತ್ಮಗಳು ಅಷ್ಟು ಬೇಗ ಯಾರ ಕಣ್ಣೀಗೂ ಕಾಣಲ್ಲ !
ನಿನಗೆ ಕಂಡಿದೆ ಅಂದರೆ ನೀನು
ಹುಷಾರಾಗಿರು ಸ್ವಲ್ಪ ಹೊತ್ತು ಅಷ್ಟೇ ಬೆಳಗಾಗುತ್ತೆ ಆಮೇಲೆ
ಬೇಗ ಮನೆ ಸೇರಿಕೋ !
ಮುಂದೆ ಯಾವುದೇ ಬಸ್ ಬಂದರೂ ಹತ್ತ ಬೇಡ ..
ಇಲ್ಲ ಇಲ್ಲ ನನಗೆ ಈಗಲೇ ಸಾಕಾಗಿ ಹೋಗಿದೆ ..
ಅಂತ ಹೇಳಿ ಮುಂದೆ ನಡೆಯುತ್ತಾ ಹೋದೆ ಅವನು ಹಿಂದೆಯೇ ಬಂದ
ಕೆಲವು ದೂರದಲ್ಲಿ ಆ ಬಂಕ್ ಸಿಕ್ಕಿ ಬಿಡ್ತು ಸರಿ ನೀನು ಇಲ್ಲಿ  ಮಲಗಿಕೋ ಅಂತ ಹೇಳಿ ಅವನು ಹೊರಟು ಹೋದ ..
ನಾನು ಅಲ್ಲೇ ಉಳಿದು ಕೊಂಡೆ ಆಗ ಸಮಯ 2ಘಂಟೆ !
ಅಲ್ಲಿ ಮಲಗಲು ಪ್ರಯತ್ನಿಸಿದೆ ನಿದ್ದೆ ಬರಲೇ ಇಲ್ಲ ಆ ಬಸ್ ನ ಭಯ ಮನದಲ್ಲೇ ಮನೆ ಮಾಡಿತ್ತು
ದೂರದಲ್ಲಿ ಎಲ್ಲೋ  ಸ್ಮಶಾನ ಬೇರೆ,
ಹೆಣಗಳನ್ನು ಸುಟ್ಟ ವಾಸನೆ ..
ನಾಯಿಗಳ ಬೋಗೊಳೊ ಶಬ್ದ !!
ಅದೊಂದು ಭಯಾನಕವಾದ ರಾತ್ರಿ
ಹೇಗೋ ಅಲ್ಲಿಂದ ಬೋರ್ಡ್ ಎಲ್ಲ ನೋಡುತ್ತಾ ನೋಡುತ್ತಾ ಇದ್ದೆ
ಆಗಲೇ ನನಗೆ ನಿದ್ದೆ
ಬರಲು ಪ್ರಾರಂಭಿಸಿತು
ಮಲಗಿ ಕೊಂಡೆ …ಸ್ವಲ್ಪ ಸಮಯ ಒಳ್ಳೆಯ ನಿದ್ದೆ ,
ಕನಸಿನಲ್ಲಿ ಏನೋ ಭಯಾನಕವಾದ ಮುಖಗಳೇ ಕಾಣುತ್ತ ಇತ್ತು ಆ ಬಸ್ ನಲ್ಲಿ ಇದ್ದವರ ಮುಖಗಳೇ ಮತ್ತೆ ಮತ್ತೆ ಬರುತ್ತಾ ಇತ್ತು ..
ಏನೋ ಆಗಿ ದಿಡೀರ್ ಅಂತ ಎದ್ದು ಕೂತೆ…
ಫುಲ್ ಬೆವತು ಹೋದೆ….
ಉಸಿರಾಟ ಜಾಸ್ತಿ ಆಗತೊಡಗಿತು ….
ನಾನು ಮಧ್ಯ ರಸ್ತೆಗೆ ಬಂದೆ ನೋಡಿದೆ ಯಾವುದಾದರೂ
ಗಾಡಿ ಸಿಕ್ಕರೆ ಈಗಲೇ ಇಲ್ಲಿಂದ ಹೊರತು ಬಿಡೋಣ ಅಂತ’
ನನ್ನ ಹಿಂದೆ ಯಾರೋ ನಡೆದು ಬರುವ ಶಬ್ದ ಕೇಳುತ್ತಿತ್ತು ..
ಈ ರೀತಿಯ ವೇಳೆಯಲ್ಲಿ ನಮ್ಮ ಹಿಂದೆ ಮಲ್ಲಿಗೆಯ ಪರಿಮಳ ,ಗೆಜ್ಜೆ ಸದ್ದು ಯಾರೋ ನಮನ್ನು ಕರೆಯುವ ಕೂಗು ಕೇಳಿದರೆ ನಾವು ಹಿಂದೆ ತಿರುಗಿ ನೋಡಬಾರದು ಅಂತ ಜನ ಹೇಳಿರೋದನ್ನ ಕೇಳಿದ್ದೀನಿ  ..
ಹಾಗಾಗಿ ಸುಮ್ಮನೆ ಇದ್ದೆ,,
ಆ ನಡೆದಾಡೋ ಶಬ್ದ ನನ್ನ ಪಕ್ಕದಲ್ಲೇ  ಬರುವ ಹಾಗೆ ಕೇಳಿಸಲು
ಶುರು ಮಾಡಿತು ನನಗೆ ಭಯ ಜಾಸ್ತಿಯಾಗುತ್ತ ಇತ್ತು
ಆಗ  ಬೆನ್ನ ಹಿಂದೆ ಬಂದು ನನ್ನ
ತೋಳ ಮೇಲೆ ಯಾರೋ ಕೈ ಇಟ್ಟರು ನಾನು ತಿರುಗಿ ನೋಡಿದೆ………

ಕಥೆ ಮುಗಿತು……….!!

Read more from ಕಥೆ
1 ಟಿಪ್ಪಣಿ Post a comment
  1. Banavasi Somashekhar.'s avatar
    ಜೂನ್ 7 2012

    sundaravaagi kattalagide.

    ಉತ್ತರ

Leave a reply to Banavasi Somashekhar. ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments