೨೦೦೦೦೦ ಲಕ್ಷ ಹೆಜ್ಜೆಗಳ ದಾಟಿದ ನಿಮ್ಮ ನಿಲುಮೆ.. !
ಪ್ರೀತಿಯ ಗೆಳೆಯರೇ,
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…
ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ.ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು.
ಇಲ್ಲಿ ಒಂದಿಷ್ಟು ಹಾಸ್ಯ,ಹತಾಶೆ,ನೋವು,ಸಿಟ್ಟು,ಸೆಡವು,ಪ್ರಚಲಿತ ವಿದ್ಯಮಾನಗಳು,ಕಥೆ-ವ್ಯಥೆಗಳು,ಇತಿಹಾಸ, ದೇಶ, ಭಾಷೆ,ಧರ್ಮ,ಸಿನೆಮ,ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ.
ನಮ್ಮ ನಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಈ ನಿಲುಮೆ.ನಿಲುಮೆಯೊಳಗೆ ಒಂದು ಸುತ್ತು ಹೊಡೆದು ಬನ್ನಿ,ನಿಮ್ಮ ಅಭಿಪ್ರಾಯ ತಿಳಿಸಿ.ಸಾಧ್ಯವಾದಲ್ಲಿ ನಿಮ್ಮ ಒಂದು ಲೇಖನ ಯಾ ಕವನಗಳನ್ನು ನಮಗೆ ಕಳುಹಿಸಿದರೆ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸೇರಿದಂತಾಗುತ್ತದೆ. ನಿಮ್ಮ ಲೇಖನಗಳನ್ನು nilume@sify.com ಇ-ಮೇಲ್ ವಿಳಾಸಕ್ಕೆ ಕಳುಹಿಸಿ.ಹನಿಹನಿ ಸೇರಿದರೆ ಹಳ್ಳ- ತೆನೆತೆನೆಗೂಡಿದರೆ ಬಳ್ಳ ಅನ್ನೋ ಮಾತಿದೆಯಲ್ಲ ಹಾಗೆಯೇ,
ಇಂದು ನಿಮ್ಮ ಪ್ರೀತಿಯ ನಿಲುಮ ಒಂದು ಸಾಧನೆಯ ಮೆಟ್ಟಿಲ ಬಳಿ ಬಂದು ನಿಂತಿದೆ, ೨೦೦೦೦೦ ಹಿಟ್ಸ್ ಇಂದು ದಾಟಿದೆ. ಹಾಗೆಯೆ ೧೦೦೦ ಲೇಖನದ ಗಡಿಯಲ್ಲಿ ನಿಂತಿದೆ, ನೂತನವಾಗಿ ನಿರ್ಮಿಸಿದ ನಿಲುಮೆಯ ಫೇಸ್ಬುಕ್ ಪುಟ ೫೦೦ ರ ಹೊಸ್ತಿಲಲ್ಲಿದೆ, ಇಂತಹ ಸಮಯದಲ್ಲಿ ಎಲ್ಲ ಓದುಗರಿಗೂ ನಮ್ಮ ಕನ್ನಡ ಗೆಳೆಯರಿಗೂ ನಿಲುಮೆ ತಂಡದ ಕಡೆಯಿಂದ ಪ್ರೀತಿಯ ಧನ್ಯವಾದಗಳನ್ನು ತಿಳಿಯ ಬಯಸುತ್ತೇವೆ. ನೀವೆ ಇಲ್ಲದಿದ್ದರೆ ಇದು ಸಾಧ್ಯವೇ ಇರಲಿಲ್ಲ, ನಿರಂತರ ೨ ವರ್ಷಗಳು ನಮ್ಮನ್ನು ನಾವು ಇಂತಹ ಸಾಹಿತ್ಯ ಸೇವೆಗೆ ತೊಡಗಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ.
‘ನಿಲುಮೆ’ಯನ್ನ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ.ಈ ನಿಲುಮೆ ಬರಿ ನಮ್ಮದಲ್ಲ ಇದು ನಿಮ್ಮದು,ಪ್ರತಿಯೊಬ್ಬ ಕನ್ನಡಿಗನದು.
ಮತ್ತೊಮ್ಮೆ ಎಲ್ಲ ಓದುಗರಿಗೂ, ನಿಮ್ಮ ಅತ್ಯಮೂಲ್ಯ ಬರಹಗಳನ್ನು ನಮ್ಮಲ್ಲಿ ಪ್ರಕಟಿಸಲು ಮಿಂಚಂಚೆ ಮಾಡಿ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ ಬರಹಗಾರರಿಗೂ ನಮ್ಮ ಧನ್ಯವಾದಗಳು.
ನಿಲುಮೆ
ಎಲ್ಲ ತತ್ವದ ಎಲ್ಲೆ ಮೀರಿ
***************************************





