ಕಾನೂನಿನಂಗಳ ೬ : ಕಾನೂನಿನ ಕಣ್ಣಲ್ಲಿ ವಿವಾಹ
ಉಷಾ ಐನಕೈ ಶಿರಸಿ
ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಅಂದರೆ ಒಂದು ಪವಿತ್ರ ಬಂಧನ. ಈ ಮೂಲಕ ಮಾತ್ರ ಮನುಷ್ಯ ಪರಿಪೂರ್ಣತೆಯತ್ತ ಹೋಗಲು ಸಾಧ್ಯ ಎಂಬ ನಂಬಿಕೆಯಿದೆ. ಈ ವೈವಾಹಿಕ ಜೀವನ ಸುಸಂಬದ್ಧವಾಗಿ ಸಾಗಲು ಅನುಕೂಲವಾಗುವಂತೆ ಕಾನೂನುಗಳನ್ನು ರಚಿಸಲಾಗಿದೆ. ಈ ಕಾನೂನುಗಳು ವಿವಾಹ ಅಂದರೇನು? ವಿವಾಹವನ್ನು ಯಾವಾಗ ಅನೂರ್ಜಿತಗೊಳಿಸಬಹುದು? ಗಂಡ-ಹೆಂಡತಿಯ ಹಕ್ಕು-ಬಾಧ್ಯತೆಗಳು ಹಾಗೂ ಅದನ್ನು ಚ್ಯುತಿಗೊಳಿಸಿದಲ್ಲಿ ಪಡೆಯಬಹುದಾದ ಶಿಕ್ಷೆಗಳು ಮುಂತಾದವುಗಳನ್ನೆಲ್ಲ ವಿವರಿಸುತ್ತದೆ.
ಹಿಂದೂ ಸಂಪ್ರದಾಯದಲ್ಲಿ ವಿವಾಹಕ್ಕೆ ಒಂದು ವಿಶೇಷ ಅರ್ಥವಿದೆ. ಇಲ್ಲಿ ವಿವಾಹ ಒಂದು ಪವಿತ್ರ ಬಂಧನ. ಹೆಣ್ಣು-ಗಂಡು ಪರಸ್ಪರ ಅಗ್ನಿಸಾಕ್ಷಿಯಾಗಿ ಕೈಹಿಡಿದು ನೆಮ್ಮದಿಯ ಬದುಕಿಗೆ ಸಂಕಲ್ಪ ಕಟ್ಟಿಕೊಳ್ಳುವ ಸಂದರ್ಭ ಇದು. ವಿವಾಹವಿಲ್ಲದ ಜೀವನ ಅಪೂರ್ಣ ಎಂಬ ಭಾವನೆ ನಮ್ಮಲ್ಲಿದೆ. ‘ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿ ಚರಿತವ್ಯಾ ತ್ವಯೀಯಮ್ ನಾತಿ ಚರಾಮಿ’ ಎನ್ನುತ್ತ ಧರ್ಮ, ಅರ್ಥ, ಕಾಮ ಈ ಮೂರರಲ್ಲೂ ಇಬ್ಬರೂ ಒಂದಾಗಿ ಬಾಳೋಣ ಎನ್ನುವ ಪ್ರತಿಜ್ಞೆಯೊಂದಿಗೆ ವಿವಾಹ ಸಂಸ್ಕಾರ ನಡೆಯುತ್ತದೆ. ಹಾಗಾಗಿ ಹಿಂದೂ ಪದ್ಧತಿಯಲ್ಲಿ ವಿವಾಹ ಒಂದು ಧಾರ್ಮಿಕ ಸಂಸ್ಕಾರ.
ವಿವಾಹ ಎಂದರೆ ಹೆಣ್ಣು-ಗಂಡು ಒಂದಾಗಿ ಬಾಳುವುದಕ್ಕೋ, ಸಂತಾನೋತ್ಪತ್ತಿಗೋ ಸೀಮಿತವಾಗಿಲ್ಲ. ಇದರ ಅರ್ಥ ಬಹು ವಿಶಾಲವಾಗಿದೆ. ಹೆಣ್ಣು-ಗಂಡು ಸೇರಿ ಒಂದು ಪೂರ್ಣತೆಯನ್ನು ಕಾಣುವುದು. ಈ ರೀತಿಯಾಗಿ ಇಡೀ ಬದುಕನ್ನೇ ಪೂರ್ಣತೆಯತ್ತ ಒಯ್ಯುವುದು. ಈ ಬದುಕಿನಲ್ಲಿ ಸಾವಿರಾರು ಕನಸುಗಳಿವೆ. ನೂರಾರು ಸವಾಲುಗಳಿವೆ. ಎರಡು ವಿಭಿನ್ನ ಮನಸ್ಸುಗಳು ಒಂದೇ ಬಿಂದುವಿನೊಂದಿಗೆ ಮುಂದುವರಿಯುವ ವಿಸ್ಮಯವಿದೆ. ಹೀಗೆ ವಿವಾಹದ ಅರ್ಥ ಮಾಡುತ್ತಹೋದರೆ ಅನಂತದೆಡೆಗೆ ಸಾಗುತ್ತದೆ. ಇದೇ ಭಾರತೀಯ ಸಂಸ್ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಬಂಧನ ಎನ್ನುವುದು ಅದ್ಭುತವಾದ ಲಕ್ಷಣ.
ಮನದರಸಿಯಾಗುವಾಸೆ
ಅನಾಮಿಕ ಸಿದ್ದಾಂತ್
ನಿನ್ನ ಬೆಚ್ಚಗಿನ ಶ್ವಾಸದಲಿ, ಹೆಪ್ಪುಗಟ್ಟಿದ
ದುಃಖ ದುಮ್ಮನಗಳ ಕರಗಿಸಿ
ಕಣ್ಣೀರಾಗಿ ಹರಿಸುವಾಸೆ
ಪರಿಸ್ಥಿತಿಗಳ ಹೊಡೆತಗಳಿಂದ ಬಳಲಿ, ಬೆಂಡಾಗಿರುವ
ನಿನ್ನ ತೋಳುಗಳ ಬಂಧನದಲ್ಲಿ
ದಣಿವಾರಿಸಿ ಕೊಳ್ಳುವಾಸೆ
ಎಲ್ಲರ ಕಣ್ತಪ್ಪಿಸಿ ನಿನ್ನ ಬರುವಿಕೆಯನ್ನೇ ಎದಿರುನೋಡುತಾ,
ನಿನ್ನಾಗಮನದ ಕನಸಿನ ರೋಮಾಂಚನದಲ್ಲಿ
ಮೈ ಮನಗಳ ಮೀಯಿಸುವಾಸೆ
ನಿನ್ನಯ ಮುಂದಿನ ಚಿಂತೆಗಳ ಹೊದಿಕೆಯಲಿ
ಇಂದಿನ ಅಸ್ಥಿರ ಬೆತ್ತಲ ದೇಹವನ್ನು ಮುಚ್ಚಲು,
ನಿನ್ನಾಸರೆಯ ದುಪ್ಪಟವನ್ನು ಹೊದೆಯುವಾಸೆ
ಇರುಳಿನಲಿ ನಿದ್ರಾದೇವಿಯು ಕೈಕೊಟ್ಟು ಕಾಮನ
ಕೈಗೆ ಜಾರಿಸಿದಾಗ, ನಕ್ಷತ್ರಗಳ ಬೆಳಕಿನಲಿ
ಅವನನ್ನೇ ಕಾಣುವಾಸೆ
ಹೊಟ್ಟೆತುಂಬಾ ಹಿಟ್ಟಿಲ್ಲದಿದ್ದರೂ ಮಲ್ಲಿಗೆ ಮುಡಿದು
ಲತಾಂಗಿಯಾಗಿ ಮನದನ್ನನ
ಮನದರಸಿಯಾಗುವಾಸೆ
******************************************
ಕೆಟ್ಟ ಹೆಣ್ಣಿರಬಹುದು, ಕೆಟ್ಟ ಅಮ್ಮನಿರಲಿಕ್ಕಿಲ್ಲ
ಚೇತನ್ ಹೊನ್ನವಿಲೆ
ಅಮ್ಮಭಕ್ತಿಗೀತೆಗಳನ್ನೂ, ಅಮ್ಮಸ್ತುತಿ ಮಾಡುವ ನುಡಿಮುತ್ತುಗಳನ್ನು ಕೇಳುತ್ತಾ ಬೆಳೆದಿರುವ ನಮಗೆ “ಅಮ್ಮ” ಅ೦ದ್ರೆ ತು೦ಬಾ ಗ್ರೇಟು ಅನ್ನೋ ಭಾವನೆ ಇದೆ. ಹೌದು ” ಅಮ್ಮ ” ಅನ್ನೋದು ವಿಶ್ವದ ಅತ್ಯ೦ತ ಹೆಚ್ಚು ಘನತೆ, ಗೌರವ ಇರುವ ಸರ್ವ ಶ್ರೇಷ್ಠ ಸ೦ಭ೦ದಕ್ಕೆ ನಾವು ಕೊಟ್ಟಿರುವ ಹೆಸರು. ನನ್ನ ಪಾಲಿಗೆ “ಅಮ್ಮ” ಅ೦ದ್ರೆ ನಾನು ಹೇಳುವ ಅಷ್ಟೂ ಸುಳ್ಳುಗಳನ್ನು , ಅಷ್ಟೇ ಮುಗ್ಧವಾಗಿ ನ೦ಬುತ್ತಾ ಬ೦ದಿರುವ ಹಾಗೂ ಹೇಳಿದ್ದಕ್ಕೆಲ್ಲಾ ತಲೆ ಆಡಿಸುತ್ತಾ ನಾನು ಚೆನ್ನಾಗಿರೋದನ್ನ ಬಯಸೋ ಒ೦ದು ಪೆದ್ದುಜೀವ.
ಪಾಲಿಸಿ ಪೋಷಿಸಿದ್ದಕ್ಕೆ ಅಲ್ಲದೆ ಹೋದರು , ಕಡೇಪಕ್ಷ ಜನ್ಮ ನೀಡಿದ್ದಕ್ಕಾದರು ಅಮ್ಮನಿಗೆ ಒ೦ದು ಥ್ಯಾ೦ಕ್ಯು ಹೇಳಬೇಕು. ಈ ಅದ್ಭುತ ವಿಶ್ವದಲ್ಲಿ ಅವತರಿಸುವ೦ತೆ ಮಾಡಿದ್ದಕ್ಕಾದರೂ…
ಇಲ್ಲಿ ಪ್ರಶ್ನೆ ಇರೋದು ಅಮ್ಮ ನಮಗೆ ಯಾಕೆ.? ಇಷ್ಟ ಅನ್ನೋದಲ್ಲ. ಅಮ್ಮಂಗೆ ನಾವು ಅ೦ದ್ರೆ ಯಾಕೆ ಅಷ್ಟು ಇಷ್ಟ ಅನ್ನೋದು. ಹಿ೦ಗೆ ಸ೦ಶೋಧನೆ ಮಾಡುತ್ತಿದ್ದೆ. ” ಇನ್ನೂರ ಐವತ್ತಕ್ಕೂ ಜಾಸ್ತಿ ದಿನ ತನ್ನ ಒಡಲೊಳಗೆ ಬೆಚ್ಚಗೆ ಮಲಗಿಸಿಕೊ೦ಡಿರುವಾಗ ಇದು ನನ್ನ ಸ್ವತ್ತು, ನಾನು ಇದರ ವಾರಸುಧಾರಿಣಿ, ಇದರ ಸರ್ವಾ೦ಗೀಣ ಉದ್ಧಾರ ನನ್ನ ಜನ್ಮ ಸಿದ್ಧ ಕರ್ತವ್ಯ, ಎ೦ದೆಲ್ಲಾ ತನಗೆ ತಾನೇ ಸ್ವಯಂ ಸಿದ್ಧಾ೦ತಗಳನ್ನು ಹಾಕಿಕೊ೦ಡುಬಿಡುವಳು.ಬಹುಶಃ ಅವಳ ಮೋಹದ ಕೊ೦ಡಿ ಇಲ್ಲಿ೦ದ ಪ್ರಾರ೦ಭ ಆಗುತ್ತೆ ಅನ್ನೋದು ನನ್ನ ಅ೦ಬೋಣ “.
ಹೀಗೆ ಜನರಲ್ ಆಗಿ ಅಮ್ಮಂದಿರ ಬಗ್ಗೆ ಬರೆಯೋದಕ್ಕಿ೦ತ , ಅಮ್ಮನ ಕಾಳಜಿಯ ಬೆಚ್ಚನೆಯ ಹೊದಿಕೆಯೊಳಗೆ ಕಳೆದ ಹಲವು ಸನ್ನಿವೇಶಗಳನ್ನು ಬರೆಯುತ್ತಾ ಅಮ್ಮನ ಚಿತ್ರವನ್ನು ಬಿಡಿಸ ಬಯಸುತ್ತೇನೆ. ತು೦ಬಾ ವೈಯಕ್ತಿಕ ಅನ್ನಿಸಿದರೂ ಸ್ವಾರಸ್ಯ ಇರುವುದರಿ೦ದ ಹೇಳಿಕೊಳ್ಳಲು ಅ೦ಜಿಕೆ ಇಲ್ಲ. ಮು೦ದುವರೆಯೋಣ
********** 1**********
೨೦೦೦೦೦ ಲಕ್ಷ ಹೆಜ್ಜೆಗಳ ದಾಟಿದ ನಿಮ್ಮ ನಿಲುಮೆ.. !
ಪ್ರೀತಿಯ ಗೆಳೆಯರೇ,
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…
ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ.ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು.
ಇಲ್ಲಿ ಒಂದಿಷ್ಟು ಹಾಸ್ಯ,ಹತಾಶೆ,ನೋವು,ಸಿಟ್ಟು,ಸೆಡವು,ಪ್ರಚಲಿತ ವಿದ್ಯಮಾನಗಳು,ಕಥೆ-ವ್ಯಥೆಗಳು,ಇತಿಹಾಸ, ದೇಶ, ಭಾಷೆ,ಧರ್ಮ,ಸಿನೆಮ,ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ.
ಅಕೌಂಟ್ಸ್ ಮತ್ತು ಫ್ಯೆನಾನ್ಸ್ – ಅನುಭವಿಗಳು – ಕನ್ನಡಿಗರಿಗೆ ಆದ್ಯತೆ
-ಅರವಿಂದ್
ಅಕೌಂಟ್ಸ್ ಮತ್ತು ಫ್ಯೆನಾನ್ಸಿನಲ್ಲಿ ಕನಿಷ್ಟ ೩ ರಿಂದ ೪ ವರ್ಷಗಳ ಅನುಭವಿಗಳು ಬೇಕಾಗಿದ್ದಾರೆ.
ಶಿಕ್ಷಣ ಅರ್ಹತೆ : ಬಿ,ಕಾಂ, ಎಂ.ಕಾಂ.
ಪತ್ರಿಕಾ ಪ್ರಕಟಣೆ : ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ
(ಬೆಂಗಳೂರು, ಮೆ ೨೯, ೨೦೧೨): ವಿಕಿಪೀಡಿಯ ವಿಶ್ವಕೋಶದ ಕನ್ನಡದ ಅವತರಣಿಕೆಯಾದ ಕನ್ನಡ ವಿಕಿಪೀಡಿಯವು (http://kn.wikipedia.org) ಇದೇ ಜೂನ್ ೧೨ ರಂದು ೯ ವರ್ಷಗಳನ್ನು ಪೂರೈಸಲಿದೆ. ಈ ವಿಶೇಷ ದಿನವನ್ನು ಆಚರಿಸಲು ವಿಕಿಪೀಡಿಯನ್ನರ ಸಮ್ಮಿಲನ ಹಮ್ಮಿಕೊಳ್ಳಲಾಗಿದೆ.
ವಿಕಿಪೀಡಿಯವು ವಿವಿಧ ವಿಷಯಗಳ ಬಗ್ಗೆ ೪೦ ಲಕ್ಷಕ್ಕಿಂತ ಹೆಚ್ಚು ಲೇಖನಗಳನ್ನು ಹೊಂದಿರುವ, ೪೮.೯ ಕೋಟಿ ಜನರಿಂದ ಓದಲ್ಪಡುತ್ತಿರುವ ಒಂದು ಆನ್ಲೈನ್ ಸ್ವತಂತ್ರ ವಿಶ್ವಕೋಶ. ಇದು ವಿಶ್ವದಲ್ಲೇ ಅತಿ ಹೆಚ್ಚು ಜನರು ಭೇಟಿ ಕೊಡುವ ತಾಣಗಳಲ್ಲಿ ೫ನೆಯದು. ಇದು ಕನ್ನಡವೂ ಸೇರಿದಂತೆ ೨೦ ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಕನ್ನಡ ವಿಕಿಪೀಡಿಯವು ೧೨,೦೦೦ಕ್ಕಿಂತ ಹೆಚ್ಚು ಲೇಖನಗಳನ್ನು ಹೊಂದಿದ್ದು, ಪ್ರತಿ ತಿಂಗಳು ೧೧.೫ ಲಕ್ಷ ಜನ ಸಂದರ್ಶಕರನ್ನು ಹೊಂದಿದೆ. ಬಹಳಷ್ಟು ಜನರಿಗೆ ತಿಳಿಯದ ವಿಷಯವೆಂದರೆ ವಿಕಿಪೀಡಿಯವು ಯಾವುದೇ ಪ್ರತಿಫಲಾಪೇಕ್ಷೆ ಬಯಸದ ಸ್ವಯಂಸೇವಕರ ಕಾಣಿಕೆಯಿಂದ ಕೂಡಿದೆ. ಪ್ರಸ್ತುತ, ವಿಶ್ವಾದ್ಯಂತ ೨೭ ಸ್ವಯಂಸೇವಕರು ಕನ್ನಡ ವಿಕಿಪೀಡಿಯಕ್ಕೆ ಕಾಣಿಕೆ ಸಲ್ಲಿಸುತ್ತಿದ್ದಾರೆ.
ಚುಟುಕು ಕ್ರಿಕೆಟ್ ನೈತಿಕತೆಯ ಕೊನೆಗುಟುಕು

ಅಣ್ಣಾಬಾಂಡ್ ‘ನಲ್ಲಿ `ಪ್ರೇಮ್ ‘ಗಿಮಿಕ್ಸ್
ಶ್ರೀಧರ್ ಜಿ ಸಿ ಬನವಾಸಿ
ಇತ್ತೀಚೆಗೆ ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ಅಭಿನಯದ `ಅಣ್ಣಾ ಬಾಂಡ್’’ ಸಿನಿಮಾವನ್ನು ಎಲ್ಲರೂ ನೋಡಿರಬಹುದು. ಇಡೀ ಸಿನಿಮಾದಲ್ಲಿ ಪುನೀತ್ , ರಂಗಾಯಣ ರಘು, ಜೊತೆಗೆ ಒಬ್ಬ ಸಿನಿಮಾ ನಿರ್ದೇಶಕನ ಒಂದು ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ. ಆ ಪಾತ್ರವನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದಾಗ ಕನ್ನಡದಲ್ಲಿ ಗಿಮಿಕ್ಸ್ ಮಾಡಿ ಸದಾ ಪಬ್ಲಿಸಿಟಿ ಮಾಡೋ ನಿರ್ದೇಶಕ ಪ್ರೇಮ್ ನೆನಪಾಗುತ್ತಾನೆ.
ಚಿತ್ರದ ಒಪನಿಂಗ್ ನಲ್ಲಿ ಇಡೀ ನಗರದಾದ್ಯಂತ ಅಣ್ಣಾಬಾಂಡ್ ನ ಹವಾ ಏರುತ್ತಿದ್ದಾಗ, ಜನರೆಲ್ಲಾ ಅಣ್ಣಾ ಬಾಂಡ್ ಈ ಸಮಾಜಕ್ಕೆ ಬೇಕು ಅಂತೆಲ್ಲಾ ಕೂಗುತ್ತಿರುತ್ತಾರೆ. ಆಗ ಟೀವಿ ಚಾನೆಲ್ನವರು ಒಂದು ಸಂವಾದ ಮಾಡುತ್ತಾರೆ. ಆ ಸಂವಾದಕ್ಕೆ ಒಬ್ಬ ನಿರ್ದೇಶಕನನ್ನು ಕರೆಯುತ್ತಾರೆ. ತುಂಬಾ ಆತುರ ಸ್ವಭಾವದ, ಪಕ್ಕಾ ಮಂಡ್ಯಾ ಭಾಷೆಯಲ್ಲಿ, ಮಾತ್ ಮಾತಿಗೆ ಅಣ್ಣಾಬಾಂಡ್ ಮೇಲೆ ಸಿನಿಮಾ ಮಾಡ್ತೀನಿ, 3ಡಿ, 4ಡಿ, 6ಡಿ ಸಿನಿಮಾ ಮಾಡ್ತೀನಿ, ಇಡೀ ಕರ್ನಾಟಕದವ್ರೆಲ್ಲಾ ಈ ಸಿನಿಮಾ ನೋಡೋ ಹಾಗೆ ಪಬ್ಲಿಸಿಟಿ ಮಾಡ್ತೀನಿ ಅಂತ ಟೀವಿ ಸ್ಟುಡಿಯೋದಲ್ಲಿ ಪುಂಕಾನುಫುಂಕವಾಗಿ ಕೊರೆಯುತ್ತಿರುತ್ತಾನೆ. ಇದಾದ ನಂತರ ಈ ನಿರ್ದೇಶಕನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋದಾಗ ನಾಯಕನಿಗೆ ಮಾತ್ ಮಾತಿಗೆ `ಬಾಸು..ಬಾಸು..’ ಅಂತ ಸಂಬೋಧಿಸುತ್ತಿರುತ್ತಾನೆ.
ಲೇಖನಿ ದುರ್ಯೋಧನನ ಗದೆಯಾಗದಿರಲಿ

ಇಂದು ರಾಜಕೀಯ ಪಕ್ಷಗಳ ಚೇಲಾ ಆಗಿರುವ ಅದೆಷ್ಟೋ ಪತ್ರಿಕೆಗಳು, ಟಿ.ವಿ. ಚಾನೆಲ್ ಗಳು ತಮ್ಮ ಸ್ವಾರ್ಥಸಾಧನೆಗಾಗಿ ವೃತ್ತಿ ಧರ್ಮವನ್ನೇ ಮರೆತು ತಾಂಡವವಾಡುತ್ತಿವೆ. ದೇಶವನ್ನು ಮೇಯುತ್ತಿರುವ ರಾಜಕಾರಣಿಗಳನ್ನು ಹೊಗಳಿ ಬರೆಯುವ ಈ ಬುದ್ಧಿ ಜೀವಿಗಳು, ಇರುವೆಯಂತಹ ವಿಷಯವನ್ನು ಆನೆ ಮಾಡಿ ತೋರಿಸಿ ತನ್ಮೂಲಕ ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿಸುವಲ್ಲಿ ಪರಿಣಿತರಾಗಿದ್ದಾರೆ. ಸಮಾಜದ ಆಗು ಹೋಗುಗಳನ್ನು, ತೊಡಕುಗಳನ್ನು ಬಿಂಬಿಸಬೇಕಾದ ಮಾಧ್ಯಮಗಳು ತಮಗೆ ಬೇಕಾದ ರೀತಿಯಲ್ಲಿ ವಿಷಯವನ್ನು ತಿರುವು ಮುರುವು ಮಾಡಿ ಬಿತ್ತರಿಸಿ ಜನರನ್ನು ನಂಬಿಸುತ್ತಿದ್ದಾರೆ. ಮಾಧ್ಯಮಗಳೇ ದುಸ್ಶ್ಯಾಸನರಾಗಿ ನಿಂತಾಗ ಸಮಾಜದ ಸ್ವಾಸ್ಥ್ಯ ಬೆತ್ತಲಾಗುವುದರಲ್ಲಿ ಮತ್ತೇನು ಸಂಶಯ?
ಹುಣಸೆಮರ ಮತ್ತು ಪ್ರವೀಣ
ಪವನ್ ಪಾರುಪತ್ತೇದಾರ
ಯಾಕೋ ಈ ನಡುವೆ ಪ್ರವೀಣನಿಗೆ ದುಗುಡಗಳೇ ಹೆಚ್ಚಾಗಿತ್ತು, ಏನು ಕೆಲಸ ಮಾಡಬೇಕಾದರೂ ಭಯ, ಉತ್ಸಾಹವಿಲ್ಲ, ಜಗತ್ತಿನಲ್ಲಿ ತಾನೇನನ್ನೋ ಕಳೆದುಕೊಂಡವನ ಹಾಗೆ ಇರುತಿದ್ದ. ಯಾವಾಗಲೂ ಮನೆಯ ಜಗುಲಿಯ ಮೇಲೆ ಕೂತು ಮನೆ ಮುಂಭಾಗದ ಕಂಬವನ್ನೇ ದಿಟ್ಟಿಸಿ ನೋಡುತಿದ್ದ.ಅಕ್ಕ ಪಕ್ಕದ ಮನೆಯವರೆಲ್ಲ ಇವನಿಗ್ಯಾವುದೇ ಗರ ಬಡಿದಿರಬಹುದು ಎಂದುಕೊಂಡರು, ಬರು ಬರುತ್ತಾ ಮನೆಯವರಿಗೂ ಚಿಂತೆ ಅತಿಯಾಗಿ ಏನು ಮಾಡಲು ತೋಚದ ಸ್ಥಿತಿಯಲ್ಲಿರುವಾಗ ದೂರದ ನೆಂಟರೊಬ್ಬರು ಸಲಹೆ ಕೊಟ್ಟರು, ತಮ್ಮೂರಿನಲ್ಲೊಬ್ಬ ಭೂತ ಬಿಡಿಸುವವನಿದ್ದಾನೆ, ನಿಮ್ಮ ಮಗನಿಗೆ ಯಾವುದೋ ಭೂತ ಮೆಟ್ಟಿದೆ ಆದ್ದರಿಂದಲೇ ಹೀಗೆ ಇರುವುದು ಎಂದರು. ಹೆದರಿದ ಅಪ್ಪ ಅಮ್ಮ ಮಗನ ಭೂತ ಬಿಡಿಸಲು ಆ ನೆಂಟರ ಊರಿಗೆ ಹೊರಟರು.
ಭೂತ ಬಿಡಿಸುವ ಮಂತ್ರವಾದಿ ಬೇವಿನೆಲೆ, ತಲೆಬುರುಡೆ ಮುಂತಾದವುನೆಲ್ಲ ಹಿಡಿದು ವಿಚಿತ್ರವಾದ ಮಂತ್ರಗಳನ್ನೊದುರುತಿದ್ದ. ಈ ಮಂತ್ರವಾದಿಗಿಂತ ಪ್ರವೀಣನೆ ಮೇಲು ಸುಮ್ಮನೆ ಶಾಂತನಾಗಿ ಒಂದು ಕಡೆ ಕುಳಿತುಬಿಡುತಿದ್ದ ಅಂತ ಪ್ರವೀಣನ ಅಪ್ಪ ಗೊಣಗಿಕೊಂಡರು. ಪ್ರವೀಣನ ಅಮ್ಮ ಭಕ್ತಿ ಭಾವದಿಂದ ಮತ್ತು ಭಯದಿಂದ ಸ್ವಾಮಿ ನನ್ನ ಮಗ ತುಂಬಾ ಮಂಕಾಗಿ ಬಿಟ್ಟಿದ್ದಾನೆ, ಈ ನಡುವೆ ಯಾರ ಬಳಿಯೂ ಸರಿಯಾಗಿ ಮಾತಾಡೋಲ್ಲ. ಸುಮ್ಮನೆ ಕುಳಿತಿರುತ್ತಾನೆ, ಕೆಲಸಕ್ಕೂ ಹೋಗ್ತಿಲ್ಲ. ಏನಾದ್ರು ಬೈದರೂ ಸುಮ್ಮನೇ ಕೂರುತ್ತಾನೆ, ಏನು ಮಾಡೋದೋ ಗೊತ್ತಾಗ್ತಿಲ್ಲ ದಯವಿಟ್ಟು ನೀವೇ ಏನಾದ್ರು ಪರಿಹಾರ ಕೊಡಿ ಅಂತ ಬೇಡಿಕೊಂಡರು. ಮಂತ್ರವಾದಿ ಆಆಹಹಹ ಅಂತ ಅರಚುತ್ತಾ, ಬೇವಿನ ಸೊಪ್ಪನ್ನು ಒಂದೆರಡು ಬಾರಿ ಪ್ರವೀಣನೆ ಮೇಲೆ ಒದರಿ, ಕಪಾಲದಲ್ಲಿಂದ ತೀರ್ಥವನು ಪ್ರೋಕ್ಷಣೆ ಮಾಡಿ, ಪ್ರವೀಣನನ್ನೆ ದಿಟ್ಟಿಸಿ ನೋಡುತ್ತ, ನಿಮ್ಮ ಮಗನ ಮೇಲೆ ಯಾವುದೋ ಭೂತ ಹತ್ತಿದೆ, ಅವನ ಮುಖ ನೋಡಿದ್ರೆ ಗೊತ್ತಾಗುತ್ತೆ, ಖಂಡಿತ ಇದು ಮೋಹಿನಿಯೇ ಅಂದ. ಹೆದರಿದ ಪ್ರವೀಣನ ಅಪ್ಪ, ಸ್ವಾಮಿಗಳೇ ಈಗೇನು ಇದಕ್ಕೆ ಪರಿಹಾರ, ನಮಗಿರೋವ್ನು ಒಬ್ಬನೇ ಮಗ ನೀವೇ ದಾರಿ ತೋರಿಸ್ಬೇಕು ಅಂದ್ರು. ಆಗ ಮಂತ್ರವಾದಿ ಮನದಲ್ಲೇ ಏನೋ ಲೆಕ್ಕಾಚಾರ ಹಾಕಿಕೊಳ್ಳುತ್ತ, ಕಣ್ಣು ಗುಡ್ಡೆಯ ಮೇಲೆ ಮಾಡಿ ಯಾರ ಬಳಿಯೋ ಮಾತನಾಡಿದಂತೆ ಮಾಡಿ, ನಿಮ್ಮ ಮನೆ ಹತ್ರ ಯಾವುದಾದ್ರು ದೊಡ್ಡ ಮರ ಇದ್ಯ ಅಂದ. ಅದಕ್ಕೆ ಪ್ರವೀಣನ ಅಪ್ಪ ಹೌದು ಸ್ವಾಮಿ ನಮ್ಮ ತಾತನವರು ಹಾಕಿದ ಹುಣಸೆ ಮರ ಇದೆ, ನಮ್ಮ ಜಮೀನಲ್ಲೆ ಇದೆ ಅಂದ. ಥಟ್ಟನೆ ಮಂತ್ರವಾದಿ ಆ ಮರದಲ್ಲಿ ಅಡಗಿರೋ ದೆವ್ವಾನೆ ನಿಮ್ಮ ಮಗನ ಮೈ ಮೇಲೆ ಹೊಕ್ಕಿರೋದು. ಈಗ ಪರಿಹಾರ ಅಂದ್ರೆ ನಾನು ನಿಮ್ಮ ಮಗನಲ್ಲಿರುವ ದೆವ್ವಾನ ಮತ್ತೆ ಆ ಮರಕ್ಕೆ ಓಡುಸ್ತೀನಿ ಆಮೇಲೆ ನೀವು ಆ ಮರಾನ ಕಡಿದು ಹಾಕ್ಬೇಕು ಅಂದ.