ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 15, 2012

2

ಮೊಬೈಲಿನಲ್ಲಿ ಕನ್ನಡ ಒಂದು ಸರ್ವೇ

‍ನಿಲುಮೆ ಮೂಲಕ

-ರವಿ ಸಾವ್ಕರ್

ಕೆಲ ದಿನಗಳ ಹಿಂದೆ ಮೊಬೈಲುಗಳಲ್ಲಿ ಕನ್ನಡದ ಬೆಂಬಲಕ್ಕೆ ಬೇಡಿಕೆ ಹೇಗಿದೆ ಅನ್ನುವುದರ ಬಗೆಗೆ ಒಂದು ಆನ್ಲೈನ್  ಸರ್ವೆ ಮಾಡಲಾಗಿತ್ತು. ಸರ್ವೇಯಲ್ಲಿ ನಮಗೆ ಸಿಕ್ಕ ಕೆಲವು ಮುಖ್ಯ ಅಂಶಗಳು ಹೀಗಿವೆ.

ಸರ್ವೆಯಲ್ಲಿ 564 ಜನರು ಭಾಗವಹಿಸಿದ್ದರು . 31%  ಜನರ ಮೊಬೈಲುಗಳಲ್ಲಿ ಕನ್ನಡ SMS  ಅನ್ನು  ಓದಬಹುದು ಎಂದು ತಿಳಿಸಿದ್ದಾರೆ .

45% ಜನರ ಮೊಬೈಲುಗಳ ಬ್ರೌಸರ್ ಗಳಲ್ಲಿ ಕನ್ನಡದ ಬೆಂಬಲ ಇರುವುದಾಗಿ ತಿಳಿಸಿದ್ದಾರೆ.
6% ಜನರ ಮೊಬೈಲುಗಳಲ್ಲಿ ಕನ್ನಡದ ಕೀಲಿಮಣೆ ಇದ್ದು , 10% ಜನರ ಮೊಬೈಲುಗಳಲ್ಲಿ Softkeyboard ನಲ್ಲಿ ಕನ್ನಡದ ಆಯ್ಕೆ ಇರುವುದಾಗಿ ತಿಳಿಸಿದ್ದಾರೆ. ಅಂದರೆ 84% ಅಷ್ಟು ಜನಕ್ಕೆ  ಕನ್ನಡದಲ್ಲಿ ಟೈಪಿಸಲು ಆಗುವುದಿಲ್ಲ.

ಹೀಗಿರುವಾಗ ಮೊಬೈಲ್ ನಲ್ಲಿ ಕನ್ನಡದ ಸಪೋರ್ಟ್ ಬಗೆಗೆ ನಿಮ್ಮ ನಿಲುವೇನು ಎಂದು ಕೇಳಿದಾಗ 14% ತಮಗೆ ಮೊಬೈಲಿನಲ್ಲಿ ಕನ್ನಡದ SMS ಓದುವ ಹಾಗೆ ಇರಬೇಕು ಅಂತಲೂ , 25% ಜನ ಬ್ರೌಸರ್ ನಲ್ಲಿ ಕನ್ನಡ ಓದುವ ಹಾಗೆ ಇರಬೇಕು ಅಂತಲೂ 57% ಜನರು  ಕನ್ನಡದ Font ಬೆಂಬಲ ಇದ್ದರೆ  ಮಾತ್ರ ಮೊಬೈಲನ್ನು ಕೊಳ್ಳುವುದಾಗಿ ಹೇಳಿದ್ದಾರೆ. ಅಂದರೆ 96% ಅಷ್ಟು ಜನ ತಮ್ಮ ಮೊಬೈಲ್  ಒಂದಲ್ಲ ಒಂದು ಬಗೆಯಲ್ಲಿ ಕನ್ನಡ ಸಪೋರ್ಟ್ ಮಾಡಬೇಕು ಎಂದು ಅಪೇಕ್ಷಿಸುತ್ತಾರೆ.  ಇದನ್ನು ನೋಡಿದರೆ ಮೊಬೈಲುಗಳಲ್ಲಿ ಕನ್ನಡದ ಬೆಂಬಲಕ್ಕೆ ಸಾಕಷ್ಟು ಬೇಡಿಕೆ ಇದೆ ಎಂದು ತಿಳಿಯಬಹುದು. 

ಬೇಡಿಕೆ ಹೀಗಿದ್ದರೂ ಸಹ , ಮಾರುಕಟ್ಟೆಯಲ್ಲಿ ಕನ್ನಡ ಸಪೋರ್ಟ್ ಮಾಡುವ ಮೊಬೈಲ್ ಗಳು ಕಮ್ಮಿಯಿರುವುದು ವಿಪರ್ಯಾಸವೇ ಸರಿ. ಮೊಬೈಲುಗಳಲ್ಲಿ ಕನ್ನಡ ತರಿಸುವಲ್ಲಿ ನಾವು ಮಾಡಬಹುದಾದ ಕೆಲಸ ಏನೆಂದರೆ  ಮೊಬೈಲನ್ನು ಕೊಳ್ಳುವಾಗ ಕನ್ನಡದ ಸಪೋರ್ಟ್ ಇದೆಯೇ ಎಂದು ನೋಡಿಯೇ ಮೊಬೈಲ್ನನ್ನು ಕೊಂಡುಕೊಳ್ಳುವುದು ಹಾಗೂ  ಕನ್ನಡದ ಸಪೋರ್ಟ್ ಇಲ್ಲವಾದರೆ  ಕನ್ನಡದ ಸಪೋರ್ಟ್ ಕೊಡಿ ಎಂದು ಮೊಬೈಲ್ ತಯಾರಕರಿಗೆ  ಒತ್ತಾಯಿಸುವುದು. ತಂತ್ರಜ್ಞಾನದಲ್ಲಿ ನಮ್ಮ  ಭಾಷೆ ಹಿಂದೆ ಬೀಳದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅಲ್ಲವೆ?
* * * * * * * * *
ಚಿತ್ರಕೃಪೆ : ರವಿ ಸಾವ್ಕರ್
2 ಟಿಪ್ಪಣಿಗಳು Post a comment
  1. Pramod's avatar
    ನವೆಂ 15 2012

    ಪದ ಉಪಯೋಗಿಸಿ. ಚೆನ್ನಾಗಿದೆ.
    http://www.pada.pro/download/

    ಉತ್ತರ
  2. nagaraju's avatar
    ನವೆಂ 18 2012

    ಪೀ ಕಾಕ್ ಬ್ರ್ವಸರ್ ನಲ್ಲಿ ಕನ್ನಡ ಓದಬಹುದು.
    2 ನಾನಾ ,ಕೊಳ್ಳೆೇಗಾಲ !

    ಉತ್ತರ

Leave a reply to nagaraju ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments