ವಿಷಯದ ವಿವರಗಳಿಗೆ ದಾಟಿರಿ

ಜನವರಿ 18, 2014

101

ನಿಮ್ಮ ನಿಲುಮೆಗೆ ನಾಲ್ಕರ ಸಂಭ್ರಮ

‍ನಿಲುಮೆ ಮೂಲಕ

ನಿಲುಮೆ - ನಾಲ್ಕರ ಸಂಭ್ರಮದಲ್ಲಿ

“ ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…

ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ.ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು…”

ಮೇಲಿನ ಮಾತುಗಳು ’ನಿಲುಮೆಯ ನಿಲುವಿನಲ್ಲಿ’ ನಾವು ಬರೆದುಕೊಂಡಿರುವುದು.ನಿಲುಮೆ ಮೂರು ವರುಷ ಪೂರೈಸಿ ನಾಲ್ಕನೇ ವರುಷಕ್ಕೆ ಕಾಲಿಟ್ಟಿರುವ ಈ ಅವಧಿಯಲ್ಲಿ ಮೇಲಿನ ಮಾತುಗಳಿಗೆ ನ್ಯಾಯ ಸಲ್ಲಿಸಿದ್ದೇವೆ ಅನ್ನುವ ಭಾವನೆ ನಮ್ಮದು.ಇದುವರೆಗೂ ನಿಲುಮೆಗೆ ಕಳಿಸಲ್ಪಟ್ಟ ಲೇಖನಗಳನ್ನು, ನಾವು ನಮ್ಮ ವಾದ,ನಂಬಿಕೆ,ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಅನ್ನುವ ಕಾರಣಕ್ಕೆ ಪ್ರಕಟಿಸದೇ ತಡೆ ಹಿಡಿದವರಲ್ಲ.ವಿಭಿನ್ನ ಸಂಸ್ಕೃತಿ,ಆಚಾರ,ವಿಚಾರ,ನಂಬಿಕೆಗಳನ್ನು ಗೌರವಿಸಬೇಕು ಅನ್ನುವುದು ಕೇವಲ ನಮ್ಮ ಮಾತಲ್ಲ,ಅದನ್ನು ಕಾರ್ಯಗತಗೊಳಿಸಿದ್ದೇವೆ ಕೂಡ.ಆದರೆ ಒಂದು ಮಾತು ನಿಜ.ಕೆಲವೊಂದು ಲೇಖನಗಳು ಯುನಿಕೋಡ್ನಲ್ಲಿರದ ಕಾರಣ, ಇನ್ನು ಕೆಲವು ಸಾಂಧರ್ಭಿಕ ಲೇಖನಗಳನ್ನ ನಾವು ನೋಡುವಷ್ಟರಲ್ಲೇ ತಡವಾಗಿದ್ದರಿಂದ ಕೆಲವು ಪ್ರಕಟವಾಗಿಲ್ಲ.(ನಿಲುಮೆ ನಮ್ಮ ಹವ್ಯಾಸದ ಭಾಗವಾಗಿರುವುದರಿಂದ, ಕೆಲವೊಮ್ಮೆ ಕೆಲಸದ ಒತ್ತಡದಲ್ಲಾಗುವ ತಪ್ಪುಗಳಿವು, ಮನ್ನಿಸಿ).ಇವಿಷ್ಟು ಕಾರಣ ಬಿಟ್ಟರೆ ನಮಗೆ ಕಳಿಸಲ್ಪಟ್ಟ ಎಲ್ಲ ಲೇಖನಗಳನ್ನು ನಾವು ಪ್ರಕಟಿಸಿದ್ದೇವೆ.

೨೦೧೩ ನಿಲುಮೆಯ ಪಾಲಿಗೆ ಗಮನಾರ್ಹವಾಗಿಯೇ ಇತ್ತು.೨೦೧೩ ರಲ್ಲಿ ನಿಲುಮೆಯಲ್ಲಿ ನಡೆದ ಪ್ರಮುಖ ಚರ್ಚೆಗಳು/ಬರಹಗಳಿವು.

೧.ಕಾಮುಕರಿಗೆ ಬಲಿಯಾದ ಉಜಿರೆಯ ಸೌಜನ್ಯಪರವಾಗಿ ಮತ್ತು ದೌರ್ಜನ್ಯಕ್ಕೊಳಗಾದ ಛತ್ತೀಸಗಢದ ಆದಿವಾಸಿ ಮಹಿಳೆ ಸೋನಿ ಸೂರಿಯ ಬಗ್ಗೆ
೨.ವಚನ ಸಾಹಿತ್ಯ ಮತ್ತು ಜಾತಿ ಪದ್ಧತಿ
೩.ಶಂಕರ ಭಟ್ಟರ ಎಲ್ಲರ ಕನ್ನಡ
೪.ಬೌದ್ಧ ಧರ್ಮ ಮತ್ತು ಶಂಕರಚಾರ್ಯ
೫.ಟಿಪ್ಪು ವಿವಿಯ ವಿವಾದ
೬.ಮೂಡನಂಬಿಕೆ ವಿರೋಧಿ ಕರಡು
೭.ಜಮ್ಮು-ಕಾಶ್ಮೀರ ಮತ್ತು ಆರ್ಟಿಕಲ್ ೩೭೦ ಚರ್ಚೆ
೮.ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ
೯.ರಾಜಕೀಯ ಸುದ್ದಿಗಳು

೨೦೧೩ರಲ್ಲಿ ನಡೆದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ ಕರ್ನಾಟಕದ ಬುದ್ದಿಜೀವಿ ವಲಯದಲ್ಲಿ ದೊಡ್ಡ ಸಂಚಲವನ್ನುಂಟು ಮಾಡಿತ್ತು.ರಾಜ್ಯದ ಪ್ರಗತಿಪರ ಪತ್ರಿಕೆಯೊಂದರಲ್ಲಿ ಶುರುವಾದ ಈ ಚರ್ಚೆ ಏಕಮುಖವಾಗಿ ಸಾಗಿ ಒಂದು ಕಡೆಯವರ ಲೇಖನಗಳಿಗೆ ಮಾತ್ರ ಮನ್ನಣೆ ನೀಡಿ ಇನ್ನೊಂದು ಗುಂಪಿನ ವಾದವನ್ನೂ ಆಲಿಸುವ ನಿಲುವನ್ನು ತೋರಿಸದಿದ್ದಾಗ ಸಿ.ಎಸ್.ಎಲ್.ಸಿ ತಂಡದ ಜೊತೆ ನಿಂತು, ನಿಲುಮೆಯ ನಿಲುವಿಗೆ ಬದ್ಧವಾಗಿ ನಡೆದುಕೊಂಡು ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ ಅನ್ನುವ ಭಾವ ನಮ್ಮದು.ಆದರೆ, ಈ ಚರ್ಚೆಯ ಅವಧಿಯಲ್ಲಿ ಮತ್ತು ಆ ನಂತರ ಕರ್ನಾಟಕದ ಬುದ್ಧಿಜೀವಿ ವಲಯ ನಡೆದುಕೊಂಡ ರೀತಿ ಆಘಾತಕಾರಿಯಾಗಿತ್ತು. ಹೀಗೆ ಒಂದೇ ರೀತಿಯ ಅಥವಾ ತಮಗೇ ಹೇಗೆ ಬೇಕೋ ಅಂತ ವಾದಗಳಿಗೆ,ಅಂತ ವಾದವನ್ನು ಮುಂದಿಡುವ ಜನರೆಲ್ಲ ಒಂದಾಗಿ ಉಳಿದವರನ್ನು ಅಸ್ಪೃಷ್ಯರನ್ನಾಗಿ ನೋಡುವ ಆರೋಗ್ಯಕರ ಸಮಾಜದ ನಿರ್ಮಾಣ ಮಾಡುವುದಿಲ್ಲ.ದುರಾದೃಷ್ಟವಶಾತ್ ನಮ್ಮಲ್ಲಿ ಈಗ ಇದೇ ರೀತಿಯ ಗುಂಪುಗೂಡುವಿಕೆ ನಡೆಯುತ್ತಿದೆಯೆನ್ನುವುದು.ಭಿನ್ನ ವಾದ,ಅಭಿಪ್ರಾಯಗಳನ್ನು ಹೀಗೆ ದೂರ ಮಾಡಿಕೊಳ್ಳುತ್ತ ನಾವೆಂತ ಸಮಾಜವನ್ನು ಕಟ್ಟಲು ಹೊರಟಿದ್ದೇವೆ ಅನ್ನುವ ಆತ್ಮವಾಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದೆ ಅನ್ನುವುದು ನಿಲುಮೆಯ ಕಳಕಳಿ.

ಕೆಲವು ಲೇಖನಗಳಿಂದಾಗಿ, ಕೆಲವರು ನಮ್ಮನ್ನು ಬಲಪಂಥೀಯರನ್ನಾಗಿಯೂ ಮಾಡಿದರು. ಆದರೆ,ಎಡಪಂಥೀಯರನ್ನಾಗಿ ಮಾಡಿದ್ದು ಸ್ವಲ್ಪ ಕಡಿಮೆಯೇ ಅನ್ನಬಹುದು.ಇದಕ್ಕೆ ನಿಲುಮೆ ಕಾರಣರಲ್ಲ. “ನಿಲುಮೆ ಅನ್ನುವುದು ಒಂದು ವೇದಿಕೆ” ಎಂದು ನೋಡಿದಾಗ, ಈ ರೀತಿ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಅನ್ನುವುದು ತಿಳಿಯುತ್ತದೆ.ನಿಲುಮೆಯ ನಿಲುವಿನಂತೆ ನಾವು ಎಲ್ಲಾ ರೀತಿಯ ಬರಹಗಳಿಗೂ ದನಿಯಾಗಿದ್ದೇವೆ,ದನಿಯಾಗುತ್ತಿದ್ದೇವೆ ಮತ್ತು ದನಿಯಾಗುತ್ತಲೇ ಇರುತ್ತೇವೆ.ಈ ಮೇಲೆ ಹೇಳಿದ ಹಾಗೆ ಬಂದಿದ್ದನ್ನೆಲ್ಲಾ ಯಾವುದೇ ಫಿಲ್ಟರ್ ಇಲ್ಲದೆ ನಿಮ್ಮ ಮುಂದೆ ಇಡುತ್ತಲೇ ಬಂದಿದ್ದೇವೆ. ಇನ್ನೂ ನಮ್ಮನ್ನ ಯಾವ ಪಂಥಕ್ಕೆ ಸೇರಿಸಬೇಕು ಅನ್ನುವುದು ನಿಮಗೇ ಬಿಟ್ಟದ್ದು.ಇದ್ದಿದ್ದು ಇದ್ದ ಹಾಗೇ ಹೇಳಿದ್ದರಿಂದಾಗಿಯೇ, ಕೆಲವು ಜನರ ಪಾಲಿಗೆ ನಾವು ಅಸ್ಪೃಷ್ಯರು ಆಗಿದ್ದೇವೆ, ಹಾಗೆಯೇ ಹಲವು ಜನರ ಸ್ನೇಹವು ನಮಗೆ ಸಿಕ್ಕಿದೆ. ಆ ಮಟ್ಟಿಗಿನ ತೃಪ್ತಿಯು ನಮಗಿದೆ. ಕೆಲವು ಬ್ಲಾಗುಗಳು ನಾವು ಅವರ ಬಗ್ಗೆ ಪ್ರೀತಿಯಿಂದ ಮಾತಾಡಿದ್ದನ್ನು ಪ್ರಕಟಿಸಿದರು. ನೇತ್ಯಾತ್ಮಕ ಅಂಶಗಳನ್ನು ಹೇಳಿದಾಗ ಮನಿಸಿಕೊಂಡಿದ್ದು ಉಂಟು. ಅದು ಅವವರ ಭಕುತಿಗೆ ಬಿಟ್ಟ ವಿಷಯ.ಇನ್ನು, ಇದುವರೆಗೂ ನಿಲುಮೆ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು.ಯಾವುದೇ ಹಿಡನ್ ಅಜೆಂಡವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ,ಅದಕ್ಕೆ ಕಾರಣ ನಾವು ಮೊದಲೇ ಹೇಳಿದಂತೆ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು.ಅಡ್ಮಿನ್ ತಂಡವಿಲ್ಲಿ ನಿಮಿತ್ತ ಮಾತ್ರ.

ನಿಲುಮೆ ಮೂರು ವರ್ಷ ಮುಗಿಸಿ ನಾಲ್ಕನೇ ವರ್ಷದ ಶುಭಾರಂಭವನ್ನು ಮಾಡಿದೆ.ಕನ್ನಡ ಯುವ ಸಮುದಾಯದ ವೈಚಾರಿಕ, ಸಾಹಿತ್ಯಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ವೇದಿಕೆಯ ರೂಪದಲ್ಲಿ ನಿಲುಮೆ ನಿಮ್ಮ ಮುಂದಿದೆ.ನಾಡಿನ ಅನೇಕ ಮಹತ್ವದ ವಿಷಯಗಳನ್ನು ಚರ್ಚಿಸುವಲ್ಲಿ, ಚಿಂತನೆಗಳನ್ನು ರೂಪಿಸುವಲ್ಲಿ ಇನ್ನೂ ಸಕ್ರಿಯವಾಗಿ ಪಾಲ್ಗೊಳ್ಳುವ ಆ ಮೂಲಕ ಸಮಾಜದ ಧನಾತ್ಮಕ ಮೌಲ್ಯಗಳನ್ನು ವೃದ್ಧಿಸುವಲ್ಲಿ ತನ್ನದೇ ಕೊಡುಗೆಗಳನ್ನು ನೀಡುವ ಮತ್ತು ಯಾವುದೇ ಪಂಥ,ವಾದ,ವಿಚಾರಗಳಿಗೆ ಅಂಟಿಕೊಳ್ಳದೇ ಎಲ್ಲ ನಿಲುವಿನ ವಿಚಾರಗಳಿಗೂ ಸಮಾನ ಪ್ರಾತಿನಿಧ್ಯ ನೀಡುತ್ತೇವೆ ಅನ್ನುವುದು ಓದುಗ ದೊರೆಗಳಿಗೆ ನಿಲುಮೆಯ ವಾಗ್ಧಾನ.

ನಿಲುಮೆಗೆ ನಾಡಿನ ಹಿರಿಯರು, ಗಣ್ಯರು ತಮ್ಮ ಸಲಹೆ, ಸಹಕಾರಗಳನ್ನು ನೀಡುತ್ತಾ ಬಂದಿದ್ದಾರೆ. ಅಷ್ಟರಮಟ್ಟಿಗೆ ನಿಲುಮೆಯು ಬೆಳೆದುನಿಂತಿದೆ. ಆದರೆ ತಲುಪಬೇಕಾದ ಗಮ್ಯವು ಇನ್ನೂ ಬಹಳ ದೂರದಲ್ಲಿದೆ.

ಇದೆಲ್ಲ ಹೇಳಿದ ಮೇಲೆ ನಿಮ್ಮ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ. ನೀವು ನಮ್ಮ ಬೆನ್ನಿಗೆ ನಿಂತವರು. ನಿಮ್ಮಗಳ ಪ್ರೋತ್ಸಾಹ ನಿಲುಮೆಯನ್ನು ಈ ಮಟ್ಟಕ್ಕೆ ಬೆಳೆಸಿದೆ. ಹಿರಿಯರ ಮಾರ್ಗದರ್ಶನ,ಕಿರಿಯರ ಪ್ರೀತಿ ಎರಡು ನಿಲುಮೆಯನ್ನು ಸಾಕಷ್ಟು ಪ್ರೋತ್ಸಾಹಿಸಿವೆ. ಅದಕ್ಕೆ ನಿಲುಮೆ ನಿಮಗೆ ಚಿರರುಣಿ. ಹಾಗೆ ಮತ್ತೊಮ್ಮೆ ನಿಮ್ಮನ್ನು ನಿಲುಮೆ ಭಿನ್ನವಿಸುವುದು ಏನೆಂದರೆ ಹೇಗೆ ನಿಲುಮೆಯನ್ನು ಇನ್ನಷ್ಟು ಜನರಿಗೆ ತಲುಪಿಸಬಹುದು ಎಂಬ ನಿಮ್ಮ ಅಭಿಪ್ರಾಯಕ್ಕಾಗಿ. ಇದರಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಏನು ಎಂಬ ಪ್ರೀತಿಯ ಒತ್ತಾಯಕ್ಕಾಗಿ. ನಿಮ್ಮಗಳ ಪ್ರೀತಿಯೇ ನಿಲುಮೆಯ ಹರುಷ.ನಿಲುಮೆಯ ಸಂಕ್ರಮಣದ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ. ನಿಲುಮೆಯ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯ, ಟೀಕೆ ಟಿಪ್ಪಣಿಗಳನ್ನು(baraha@nilume.netಗೆ) ಕಳಿಸಿಕೊಡಿ. ಸಹ್ಯ ಭಾಷೆಯಲ್ಲಿರುವ ಟೀಕೆ-ಟಿಪ್ಪಣಿಗಳನ್ನೂ, ಪ್ರೀತಿಯ ಮಾತುಗಳನ್ನೂ ಎಲ್ಲವನ್ನು ನಾವು ಇಲ್ಲೇ ಪ್ರಕಟಿಸುತ್ತೇವೆ.

ನಿಮ್ಮೊಲುಮೆಯ,

ನಿಲುಮೆ

101 ಟಿಪ್ಪಣಿಗಳು Post a comment
  1. ವಸಂತ್'s avatar
    ವಸಂತ್
    ಜನ 18 2014

    ನಾಲ್ಕರ ಹರೆಯದ ಈ ನಿಲುಮೆ
    ಇರುವುದು ಸದಾ ನಮ್ಮ ಒಲುಮೆ

    ಉತ್ತರ
  2. Nagshetty Shetkar's avatar
    Nagshetty Shetkar
    ಜನ 18 2014

    “ಯಾವುದೇ ಹಿಡನ್ ಅಜೆಂಡವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ.” ನಿಮ್ಮ ಘೋಡ್ಸೆ ಪಡೆಯ ಮುಖವಾಡ ಬಯಲಾಗಿದೆ. ಅಜೆಂಡಾ ಏನು ಅಂತ ಎಲ್ಲರಿಗೂ ಗೊತ್ತಾಗಿದೆ. ಆದರೂ ಭಂಡತನ ಬಿಡುವವರಲ್ಲ ನೀವು!

    ಉತ್ತರ
    • ನಿಲುಮೆ ಓದುಗ...'s avatar
      ನಿಲುಮೆ ಓದುಗ...
      ಜನ 18 2014

      ಹಳದಿ ರೋಗ ಬಂದವರಿಗೆ ಊರೆಲ್ಲಾ ಹಳದಿಯಾಗಿಯೇ ಕಾಣುವುದಂತೆ … ಅದೇಮನಸ್ಥಿತಿ ತಮ್ಮದು

      ಉತ್ತರ
      • Nagshetty Shetkar's avatar
        Nagshetty Shetkar
        ಜನ 18 2014

        “ಹೌದು ಸ್ವಾಮಿ. ನಾನು ಔರಂಗ್ ಜೇಬ, ಟಿಪ್ಪುವಿನ ಬಾಲವಲ್ಲ ನಿಮ್ಮ ಹಾಗೆ. ನಾನು ಘೊಡ್ಸೆ ಕಡೆಯವನೆ!. ನನಗೆ ಘೊಡ್ಸೆ ಬಗ್ಗೆ ಹೆಮ್ಮೆಯಿದೆ. ” ಇದು ಯಾವ ರೋಗದ ಪರಿಣಾಮ ಹೇಳಿ ಸ್ವಾಮಿ?

        ಉತ್ತರ
        • Manohar's avatar
          Manohar
          ಜನ 18 2014

          Babar is one of the finest human beings ಅನ್ನುವ, ಔರಂಗಜೇಬನನ್ನು ಮಹಾಮಾನವತಾವಾದಿಯೆಂದು ನಾವು ನಂಬಬೇಕು ಎಂದು ಬಯಸಿ ಎಲ್ಲಿಂದಲೋ ಕಿತ್ತುಹೋಗಿರೊ ಲಿಂಕೊಂದನ್ನು ತಂದು ಹಾಕುವ ಮಹಾನುಭಾವರಿಗೆ ಇದನ್ನು ಕೇಳುವ ಹಕ್ಕಿದೆಯೆ??? ಇವರಿಗ್ಯಾವ ರೋಗ ಬಡೆದಿದೆ ಎಂದು ಯಾವಾಗಲಾದರೂ ಪರೀಕ್ಷೆ ಮಾಡಿಕೊಂಡಿದ್ದಾರೆಯೆ?

          ಉತ್ತರ
          • Nagshetty Shetkar's avatar
            Nagshetty Shetkar
            ಜನ 18 2014

            ಬಾಬರ್ ಹಾಗೂ ಔರಂಗಜೇಬರ ಬಗ್ಗೆ ನಿಮಗಿರುವ ಪೂರ್ವಗ್ರಹವನ್ನು ತ್ಯಜಿಸಿ ವಸ್ತುನಿಷ್ತವಾಗಿ ಅವರ ಸಾಧನೆಗಳ ಮೌಲ್ಯಮಾಪನ ನಡೆಸಿ.

            ಉತ್ತರ
            • Manohar's avatar
              Manohar
              ಜನ 19 2014

              ಹೌದೆ? ನಿಮ್ಮ ಕಕ್ಕಸವೇದಿಕೆಯವರ ಮೌಲ್ಯಮಾಪನವನ್ನೇ ಕೊಟ್ಟಿದೆಯಲ್ಲ ಇನ್ನೊಂದು ಲೇಖನದಲ್ಲಿ. ಅದನ್ನು ನೀವು ಓದಿಕೊಳ್ಳಿ.
              ಇನ್ನೊಂದು ಮಾತು. ವಸ್ತು ನಿ‍ಷ್ಠತೆಯ ಬಿಟ್ಟಿ ಪಾಠ ಮಾಡುವ ಮಹಾನುಭಾವರೆ, ನೀವೆಂದಾದರೂ ಪೂರ್ವಗ್ರಹಪೀಡಿತ ಅಧ್ಯಯನ ಮಾಡಿದ್ದೀರಾ? ನಿಮ್ಮ ಬಾಯಲ್ಲಿ ಬರುವ ಈ ಮಾತಿಗೆ ಏನಾದರೂ ಬೆಲೆ ಇದೆಯೆ?? ಸುಮ್ಮನೆ ಕಲ್ಲು ಹೊಡೆದು ಓಡಿ ಹೊಗುವ, ಕಂಡ ಕಂಡಲ್ಲಿ ರಾಡಿ ಮಾಡುವ ಚಟ ಬಿಟ್ಟು, ನಿಮ್ಮಲ್ಲಿ ನೈತಿಕತೆ ಅನ್ನುವುದು ಸ್ವಲ್ಪವಾದರೂ ಇದ್ದಲ್ಲಿ, ಗೊಡ್ಸೆ , ಮೋದಿಯನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿ, ಅವರ ತಪ್ಪಗಳನ್ನು ಇಲ್ಲಿ ಬರೆಯಿರಿ. ನೋಡೋಣ.

              ಉತ್ತರ
              • Nagshetty Shetkar's avatar
                Nagshetty Shetkar
                ಜನ 19 2014

                ಕೊಲೆಗಡುಕ ಘೋಡ್ಸೆಯನ್ನು ವೈಭವೀಕರಿಸುವ ನೀಚ ಪ್ರಯತ್ನ ಬಿಡಿ ಮಿ. ಮನೋಹರ್.

                ಉತ್ತರ
                • Manohar's avatar
                  Manohar
                  ಜನ 19 2014

                  ವಾವ್ ವರಸೆ ಚೆನ್ನಾಗಿದೆ. ಅತ್ತ ಆ ನೀಚ ಔರಂಗಜೇಬ್, ಬಾಬರನನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಬೇಕು ಎಂಬ ಉಪದೇಶ. ಇತ್ತ ಘೋಡ್ಸೆಯ ವಸ್ತುನಿಷ್ಢ ಅಧ್ಯಯನ ಮಾಡಿ, ಆಮೇಲೆ ಬರೆಯಿರಿ ಎಂದರೆ ಅದು ವೈಭವಿಕರಣ!!. ನಿಮ್ಮ ಈ ಎಡಬಿಡಂಗಿ ಎರವಲು ದರಿದ್ರತನ (ಅಥವಾ ಹುಟ್ಟುಗುಣ) ಯಾವಾತ್ತಾದರೂ ಕಡಿಮೆಯಾಗಬಹುದೆ ಬೋಧನಾಪ್ರಿಯ ಮಾನವತಾವಾದಿ ಮಹಾನುಭಾವರೆ?? ನಿಮ್ಮ ಗುಂಪಿನವರಿಗ್ಯಾಕೆ ಜನ ಉಗಿತಾರೆ ಅಂತ ಈಗ ಅರ್ಥವಾಗಿದೆಯಲ್ಲವೆ?

                  ಉತ್ತರ
                  • Nagshetty Shetkar's avatar
                    Nagshetty Shetkar
                    ಜನ 19 2014

                    ಪ್ರಗತಿಪರರ ಧೀಮಂತಿಕೆ ಬಗ್ಗೆ ಅನೇಕರಿಗೆ ಈರ್ಷ್ಯೆ, ಮತ್ಸರ, ಹಗೆತನವಿದೆ. ಪ್ರಗತಿಪರರು ಅಸತ್ಯಕ್ಕೆ ಅಂಜುವವರಲ್ಲ, ಸತ್ಯವನ್ನು ಹೇಳದೇ ಸುಮ್ಮನಿರುವವರಲ್ಲ. ಸತ್ಯ ಎದುರಿಸಲಾರದ ಹೇಡಿಗಳು ಕೆಳಮಟ್ಟದ ಟೀಕೆ ನಿಂದನೆ ಮೂಲಕ ಪ್ರಗತಿಪರರ ಮೇಲೆ ಹಗೆ ಸಾಧಿಸುತ್ಟಾರೆ. ದರ್ಗಾ ಸರ್ ಅವರು ವಚನಗಳ ಬಗ್ಗೆ ಬರೆದ ಸತ್ಯಗಳನ್ನು ಘೆಂಟ್ ಬಾಲಂಗೋಚಿಗಳು ಎದುರಿಸಲು ಧೈರ್ಯ ಸಾಲದೆ ಫೇಕ್ ಐಡಿ ಮೂಲಕ ಸ್ನೈಪರ್ ಅಟಾಕ್ ಮಾಡಿದರು. ಆದರೆ ದರ್ಗಾ ಸರ್ ಅವರು ಯಾವ ಸತ್ಯಗಳ ಪರವಾಗಿ ನಿಂತರೋ ಆ ಸತ್ಯಗಳಿನ್ನೂ ಅಳಿದಿಲ್ಲ. ಪ್ರಗತಿಪರರ ಧೀಮಂತಿಕೆಗೆ ಅಂತ್ಯವಿಲ್ಲ.

                    ಉತ್ತರ
                    • Manohar's avatar
                      Manohar
                      ಜನ 19 2014

                      ೧) “ಪ್ರಗತಿಪರರ ಧೀಮಂತಿಕೆ ಕಂಡು ಈರ್ಷ್ಯೆ, ಮತ್ಸರ, ಹಗೆತನ”!! ಮತ್ತೆ ನಗೆಹನಿ ನಮ್ಮ ಮಾನವತಾವಾದಿಗಳಿಂದ. ಸ್ವಾಮಿ, ಇವತ್ತು ಪ್ರಗತಿಪರರು ಅಂತ ಕರೆದುಕೊಳ್ಳುವುದೇ ಅವಮಾನವಾಗಿದೆ ನಿಮ್ಮಂತವರೆಲ್ಲ ಅಲ್ಲಿ ಸೇರಿಕೊಂಡಿರುವುದರಿಂದ. ಏನಾದ್ರೂ ಅನ್ನಿ, ಪ್ರಗತಿಪರ ಅಂತ ಮಾತ್ರ ಕರೆಯಬೇಡಿ ಅನ್ನುವಂತಾಗಿದೆ. ನಿಮಗೆ ಧೀಮಂತಿಕೆ ಬೇರೆ ಕೇಡು.
                      ೨) ವಿಷಯ ಬಿಟ್ಟು ಮತ್ತೇನೊ ಸುರುಮಾಡಿ ಪಲಾಯನ ಮಾಡುವ ನಿಮ್ಮ ಈ ತಂತ್ರ ಹೊಸದೇನಲ್ಲ. ಶಿಷ್ಯನ ಹೆಸರಿನಲ್ಲಿ ಗುರು ಬರೆದರೂ ಈ ತಂತ್ರದಲ್ಲಿ ವ್ಯತ್ಯಾಸವಿಲ್ಲ. ಮೊದಲು ನಾನು ಬರೆದ ವಿಷಯದ ಬಗ್ಗೆ ಮಾತನಾಡುವ ಧೈರ್ಯ ತೋರಿ. ಆಮೇಲೆ ನಿಮ್ಮ ಹಳೆ ಪುರಾಣ ಬಿಚ್ಚಿ.
                      ೩) ಎಲ್ಲದಕ್ಕೂ ಈ ದರ್ಗಾ, ದರ್ಗಾ ಎಂಬ ಹಳಸಲು ಪುರಾಣ ಬಿಚ್ಚಿ, ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ.

                    • Manohar's avatar
                      Manohar
                      ಜನ 19 2014

                      :ಆದರೆ ದರ್ಗಾ ಸರ್ ಅವರು ಯಾವ ಸತ್ಯಗಳ ಪರವಾಗಿ ನಿಂತರೋ ಆ ಸತ್ಯಗಳಿನ್ನೂ ಅಳಿದಿಲ್ಲ.”

                      ಈಗ ನಿಮ್ಮ ದರ್ಗಾ ಸಾಹೇಬರಿಗೆ ಔರಂಗಜೇಬ್, ಬಾಬರನ ಧೀಮಂತಿಕೆ ತಿಳಿಸಿಕೊಟ್ಟು ಜಗತ್ತಿನ ಕಣ್ತೆರೆಸಲು ಹೇಳಿ. ‘ಪ್ರಗತಿಪರ’ರ ಮುಂದಿನ ಭಾಷಣಗಳಲ್ಲಿ ಜನರು “ಔರಂಗಜೇಬ್, ಬಾಬರಂತಹ ಧೀಮಂತರು ಆಳಿದ ಭೂಮಿಯಲ್ಲಿ” ಎಂಬುದನ್ನು ಕೇಳುವಂತಾಗಲಿ.

                    • ಶ್ರೀಕಾಂತ್'s avatar
                      ಶ್ರೀಕಾಂತ್
                      ಜನ 20 2014

                      ದರ್ಗಾ ಸರ್ ಅವರ ಕರ್ಮಭೂಮಿಯು ಇಂದು ಇಸ್ಲಾಮೀಕರಣವಾಗುತ್ತಿರುವುದಕ್ಕೆ ಸಾಕ್ಷಿ ಇಲ್ಲಿದೆ ಮುಟ್ಟಿ ನೋಡಿಕೊಳ್ಳಿ ಶೆಟ್ಕರ್ ಮಹಾಶಯರೆ, ಇದೇ ನಿಮ್ಮ ಅಭಿನವ ಬಸವಣ್ಣನ ಕೊಡುಗೆ. ಬಸವನ ಸೋಗಿನಲ್ಲಿ ಇಸ್ಲಾಮಿಕರಿಸುವ ದರ್ಗಾನಂತಹ ಗುಳ್ಳೆನರಿಗಳು ಈ ದೇಶದಲ್ಲಿ ತುಂಬಾ ಆಗಿ ಹೋಗಿದ್ದಾರೆ. ಚಿತ್ರದುರ್ಗದಲ್ಲಿ ಸೂಫಿಯ ಹೆಸರಲ್ಲಿ ನಾಯಕನನ್ನು ಬಲಿತೆಗೆದುಕೊಂಡಿದ್ದು ಒಂದು ಸ್ಯಾಂಪಲ್ ಅಷ್ಟೇ. ಇಂತಹ ಕುರಿ ವೇಷದ ನಿಗಳ ಹುನ್ನಾರ ನಿಮ್ಮಂತ ಬಸವಾದ್ವೈತಿಗಳಿಗೆ ಅರಿವಾಗುವಷ್ಟರಲ್ಲಿ ಗುಲ್ಬರ್ಗದಲ್ಲಿ ಬಸವನ ಹೆಸರು ಹೇಳಲು ಒಬ್ಬರೂ ಉಳಿದಿರುವುದಿಲ್ಲ

                      http://tinyurl.com/pnmgv5z

                    • ಶ್ರೀಕಾಂತ್'s avatar
                      ಶ್ರೀಕಾಂತ್
                      ಜನ 20 2014
                    • Nagshetty Shetkar's avatar
                      Nagshetty Shetkar
                      ಜನ 20 2014

                      ಶ್ರೀಕಾಂತ್ ಅವರೇ, ರಿಯಾಜ್ ಭಟ್ಕಳ್ ನಿಗೂ ರಂಜಾನ್ ದರ್ಗಾ ಅವರಿಗೂ ಎಲ್ಲಿಯ ಸಂಬಂಧ?!! ರಿಯಾಜನ ಉಗ್ರ ಚಟುವಟಿಕೆಗಳಿಗೂ ದರ್ಗಾ ಸರ್ ಅವರ ಬಸವದ್ವೈತಕ್ಕೂ ಏನು ಸಂಬಂಧ?!! ನೀವು ದರ್ಗಾ ಸರ್ ಅವರ ಮೇಲೇಕೆ ” ದರ್ಗಾನಂತಹ ಗುಳ್ಳೆನರಿ” ಅಂತೆಲ್ಲ ಹೊಲಸು ಎರಚುತ್ತಿದ್ದೀರಿ???

                    • ಶ್ರೀಕಾಂತ್'s avatar
                      ಶ್ರೀಕಾಂತ್
                      ಜನ 20 2014

                      ಏನ್ ಸ್ವಾಮಿ ಅಲ್ಲಾನಿಗೂ ಮೊಹಮ್ಮದನಿಗೂ ಏನ್ ಸಂಬಂಧ ಅಂತ ಕೇಳ್ತಿದಿರಾ? ಅಭಿನವ ಬಸವಣ್ಣನ ಕಲ್ಬುರ್ಗಿ ಇಸ್ಲಾಮೀಕರಣ ಆದ ನಂತರ ಮೊದಲೆ ಹಿಂಬದಿಯ ಏಟು ಬೀಳುವುದು ನಿಮಗೇ 😀 ನೆನಪಿರಲಿ 😉

                    • Nagshetty Shetkar's avatar
                      Nagshetty Shetkar
                      ಜನ 20 2014

                      ಕಾರಣವಿಲ್ಲದೆ ದರ್ಗಾ ಸರ್ ಅವರನ್ನು ದ್ವೇಷಿಸುತ್ತಿದ್ದೀರಲ್ಲ! ಅವರು ಯಾಸೀನ್ ಭಟ್ಕಲನ ಜೊತೆ ಸೇರಿ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆಯೇ? ದರ್ಗಾ ಸರ್ ಅವರು ಇಸ್ಲಾಮೀಕರಣದಲ್ಲಿ ತೊಡಗಿದ್ದಾರೆಯೇ? ಸುಮ್ಮನೆ ದರ್ಗಾ ಸರ್ ಅವರ ಬೆಇಜ್ಜತಿ ಮಾಡುತ್ತಿದ್ದೀರಲ್ಲ!

                    • KP Bolumbu's avatar
                      ಜನ 28 2014

                      ಓಹೋ ಈಗ ಅದು ಬಸವದ್ವೈತ? ಅದ್ವೈತವಲ್ಲ…

            • sharu's avatar
              sharu
              ಜನ 27 2014

              [ಬಾಬರ್ ಹಾಗೂ ಔರಂಗಜೇಬರ ಬಗ್ಗೆ ನಿಮಗಿರುವ ಪೂರ್ವಾಗ್ರಹವನ್ನು ತ್ಯಜಿಸಿ ವಸ್ತುನಿಷ್ತವಾಗಿ ಅವರ ಸಾಧನೆಗಳ ಮೌಲ್ಯಮಾಪನ ನಡೆಸಿ.] ಶೆಟ್ಕರ್ ಸಾರ್ ಅವರ ಈ ಹೇಳಿಕೆ ನನ್ನ ಬರಹಕ್ಕೆ ಸ್ಪೂರ್ತಿ.
              ಪೂರ್ವಾಗ್ರಹ ಬಿಡಬೇಕಾದವರು ಯಾರು?? ಅವರ ಬಗ್ಗೆ ವಸ್ತುನಿಷ್ಟವಾಗಿ ಓದಬೇಕಾದವರು ಯಾರು?? ಔರಂಗಜೇಬನ ಇತಿಹಾಸವನ್ನು ಬರೆದ ಸಾಕಿ ಮುಸ್ತಾದ್ ಖಾನ್ ಎಂಬುವವನು ಮಾಸಿರ್ -ಇ-ಆಲಂಗೀರಿ ಎಂಬ ಕೃತಿಯಲ್ಲಿ ಔರಂಗಜೇಬನ ಕುರಿತು ಬೆಳಕು ಚಲ್ಲಿದ್ದಾನೆ. ಔರಂಗಜೇಬನು ಮಥುರಾದ ದೇವಾಲಯ ನಾಶ ಮಾಡಿದ್ದು ಕಾಶಿಯಲ್ಲಿನ ವಿಶ್ವನಾಥ ದೇಗುಲ ನಾಶಗೊಳಿಸಿರುವ ಕುರಿತು ಹೇಳಿದ್ದಾನೆ. ೧೬೬೯ರಲ್ಲಿ ಕಾಶಿ ದೇವಾಲಯ ನಾಶ ಮಾಡಿದರೆಂದು ಹಾಗೂ ೧೬೭೦ರಲ್ಲಿ ಮಥುರಾದ ದೇವಾಲಯ ನಾಶ ಮಾಡಿದರೆಂದು ಬರೆದಿದ್ದಾನೆ. ಇನ್ನು ಬಾಬರನು ತನ್ನ ಆತ್ಮ ಕಥೆಯಲ್ಲಿಯೇ ತಾನು ಜಿಹಾದದ ಅಂಗವಾಗಿ ಹಿಂದೂ ರಾಜರೊಡನೆ ಯುದ್ಧ ಮಾಡಿದೆನೆಂದು ಹೇಳಿಕೊಂಡಿದ್ದಾನೆ. ಮತ್ತು ಔರಂಗಜೇಬನು ಉದಯಪುರ ಅರಮನೆಯ ಮುಂದಿನ ಗುಡಿ , ಉದಯ ಸಾಗರ ದಂಡೆಯ ಮೂರು ಮಂದಿರ, ಉದಯಪುರದ ಸುತ್ತಮುತ್ತ೧೭೨ ಮಂದಿರಗಳು ಚಿತ್ತೂರಿನಲ್ಲಿ೬೩ ಮಂದಿರಗಳು,ಅಂಬೇರಿನಲ್ಲಿ ೬೬ ಮಂದಿರಗಳು, ಇವನ್ನು ನಾಶಪಡಿಸಿದ್ದ್ದಾಗಿ ಮಾಸಿರ್-ಇ-ಆಲಂಗೀರಿಯಲ್ಲಿ ಹೇಳಿದೆ. ಈಗ ಹೇಳಿ ಯಾರು ಪೂರ್ವಾಗ್ರಹ ಪೀಡಿತರು??

              ಇನ್ನು ಸದಾ ಮನುವನ್ನು ಬೈಯ್ಯುವ ತಾವು . ಔರಂಗಜೇಬನ ಆಡಳಿತದಲ್ಲಿ ಅವನು ಹಿಂದುಗಳ ಕುರಿತು ಏನು ಹೇಳಿದ್ದಾನೆ ವೀಕ್ಷಿಸಿ. ಜೆಸಿಯಾ ಸ್ವೀಕರಿಸುವ ಮುಸಲ್ಮಾನನು ಎತ್ತರವಾದ ಪೀಠದ ಮೇಲೆ ಕುಳಿತಿರಬೇಕು. ಮುಸಲ್ಮಾನನು ಕ್ಯಾಕರಿಸಿದರೆ ಅವನ ಎಂಜಲನ್ನು ಭಕ್ತಿಯಿಂದ ಸೇವಿಸಬೇಕು. ಅಸಹ್ಯ ಪಡಬಾರದು. ಮುಸಲ್ಮಾನನಲ್ಲದವನನ್ನು ಕೊಂದರೆ ಅದು ಅಪರಾಧವಲ್ಲ.

              ಮುಸ್ಲಿಂ ಅಲ್ಲದವನು ಉತ್ತಮ ಬಟ್ಟೆ ತೊಡುವಂತಿಲ್ಲ. ಕುದುರೆ ಏರುವಂತಿಲ್ಲ. ಆಯುಧ ಇಟ್ಟುಕೊಳ್ಳುವಂತಿಲ್ಲ.ನ್ಯಾಯಾಲಯದಲ್ಲಿ ಇವನ ಸಾಕ್ಷಿಗೆ ಬೆಲೆ ಇಲ್ಲ. ಯೋಧನಾಗುವ ಅವಕಾಶವಿಲ್ಲ.ಪ್ರತಿ ಮುಸಲ್ಮಾನನ ಎದಿರು ಬಗ್ಗಿ ನಡೆಯಬೇಕು. ವಿಶೇಷ ಭೂಕಂದಾಯ ತೆರಬೇಕು.(ಖರಜ್ ) ಜಾತ್ರೆ ಉತ್ಸವಗಳಿಗಾಗಿ ಒಂದುಗೂಡುವಂತಿಲ್ಲ. ಹೊಸ ದೇವಾಲಯ ನಿರ್ಮಿಸುವಂತಿಲ್ಲ. ದುರಸ್ತಿ ಮಾಡುವಂತಿಲ್ಲ. ಮುಸಲ್ಮಾನ ವ್ಯಾಪಾರಿಗಳಿಗೆ ತೆರಿಗೆ ಮನ್ನಾ ನೀಡಿದರೆ ಹಿಂದೂ ವ್ಯಾಪಾರಿಗಳು ಶೆ ೫ರಷ್ಟು ತೆರಿಗೆ ನೀಡಬೇಕು. ಮುಖ್ಯ ಗುಮಾಸ್ತೆ ಮತ್ತು ಲೆಕ್ಕದ ಗುಮಾಸ್ತೆ ಯಾಗಿರುವ ಎಲ್ಲ ಹಿಂದೂಗಳನ್ನು ವಜಾ ಗೊಳಿಸಿ ಮುಸಲ್ಮಾನರನ್ನು ನೇಮಿಸಿದಾ. ಇದು ಔರಂಗಜೇಬನ ಸಾಧನೆ.!??

              ಸದಾ ಮನುವನ್ನು ಬೈಯ್ಯುವ ಶೆಟ್ಕರ್ ಸಾಬರೆ ಒಂದೇ ಒಂದು ಸಲ ಪ್ರಾಂಜಲ ಮನದಿಂದ ಈ ಕುರಿತು ಮಾತನಾಡಿದ್ದೀರಾ? ನೀವು ಕೇಳಬಹುದು ಔರಂಗಜೇಬನ ಆದೇಶಗಳೆಲ್ಲಾ ಕಟ್ಟು ನಿಟ್ಟಿನಿಂದ ಪಾಲಿಸಲ್ಪಡುತ್ತಿದ್ದವೆ? ಹಾಗಾದರೆ ಮನುವಿನ ಮಾತುಗಳೆಲ್ಲಾ ಕಟ್ತುನಿಟ್ಟಿನಿಂದ ಆಚರಿಸಲ್ಪಡುತ್ತಿದ್ದವೆ?? ಶೂದ್ರರೆಂದರೆ ಕೇವಲ ದಲಿತರಲ್ಲ. ಒಕ್ಕಲುತನ ಮಾಡುವ ಒಕ್ಕಲಿಗನಿಂದ ಹಿಡಿದು ದಲಿತರವರೆಗೆ ಎಲ್ಲರೂ ಶೂದ್ರರೆ. ಕರ್ನಾಟಕದಲ್ಲಿ ರಾಜ್ಯವಾಳಿದ ಹೆಚ್ಚಿನ ಅರಸರೆಲ್ಲಾ ಶೂದ್ರರೇ ಆಗಿದ್ದರು. ಒಂದು ವೇಳೆ ಮನುವಿನ ಸ್ಮೃತಿಯಲ್ಲಿ ಹೇಳಿದಂತೆ ನಡೆಯುತ್ತಿದ್ದರೆ ಈ ಅರಸರೆಲ್ಲ ಹೇಗಿರುತ್ತಿದ್ದರು?? ಕೇವಲ ಮನು ಹೇಳಿದ ಮಾತ್ರಕ್ಕೆ ಅವನನ್ನು ದೂಷಿಸುವ ನೀವು ಅವನಂತೆಯೇ ಹೇಳಿದ ಔರಂಗಜೇಬನ ಬಗ್ಗೆ ಏಕೆ ಮಾತನಾಡುವದಿಲ್ಲ? ಔರಂಗಜೇಬನ ಬಗ್ಗೆ ಯಾಕೆ ತೆಗಳುವದಿಲ್ಲ?? ಇಲ್ಲಿ ಮನು ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ನ್ಯಾಯ ಇಬ್ಬರಿಗೂ ಒಂದೇ ತೆರನಾಗಿರಬೇಕಲ್ಲವೆ?? ಒಂದು ವೇಳೆ ಔರಂಗಜೇಬನ ಕಾನೂನು ಸರಿ ಎಂದು ನೀವು ಹೇಳಿದರೆ ಮನುವಿನ ಹೇಳಿಕೆಯನ್ನೂ ಒಪ್ಪಬೇಕು. ಮನುವಿನದು ತಪ್ಪಾದರೆ ಔರಂಗಜೇಬನದು ತಪ್ಪಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ???

              ಜಗತ್ತಿಗೆ ಗಣಿತವನ್ನು, ತತ್ವಜ್ಞಾನವನ್ನು, ಆಧ್ಯಾತ್ಮವನ್ನು, ಆಯುರ್ವೇದವನ್ನು, ವಿಜ್ಞಾನವನ್ನು, ಭಾಷೆಯನ್ನು, ಬರವಣಿಗೆಯನ್ನು, ವ್ಯಾಕರಣವನ್ನು , ಅಂಕಿಗಳನ್ನು, ಭೂಗರ್ಭ ಶಾಸ್ತ್ರ, ಖಗೋಳ ಶಾಸ್ತ್ರ, ಗ್ರಹನಕ್ಷತ್ರಗಳ ಚಲನೆ , ಸಾಗರಯಾನಶಾಸ್ತ್ರ, ಕಲೆ, ಸಂಗೀತ, ಸಾಹಿತ್ಯ ಮುಂತಾದ ಅನೇಕಾನೇಕ ಕಾಣಿಕೆ ನೀಡಿದ ಭಾರತ ೭ನೇ ಶತಮಾನದಿಂದ ೧೭ ನೇ ಶತಮಾನದವರೆಗೆ ಒಂದಾದರೂ ಸಾಧನೆ ಮಾಡಿತಾ?? ಇಲ್ಲ!! ಯಾಕಿಲ್ಲ?? ಮುಸಲ್ಮಾನ ದೊರೆಗಳ ಕ್ರೂರ ಆಡಳಿತವೇ ಕಾರಣ. ಭಕ್ತಿಯಾರ ಖಿಲ್ಜಿ ಹಾಳು ಮಾಡಿದ ವಿಶ್ವ ವಿದ್ಯಾಲಯಗಳೆಷ್ಟು?? ಸುಮಾರು ೨೫. ಮುಂದಿನ ಯಾವ ಮುಸಲ್ಮಾನ ಅರಸನೂ ಒಂದೇ ಒಂದು ವಿಶ್ವವಿದ್ಯಾಲಯ ಸ್ಥಾಪಿಸಲಿಲ್ಲ. ಕೆಲವರು ಹೇಳುವದುಂಟು: ಯುದ್ಡಮಾಡಲು ಬಂದವನು ಲೂಟಿ ಮಾಡುವದು ಸಹಜ . ದೇವಾಲಯಗಳು ಸಂಪತ್ತಿನ ಆಗರಗಳಾಗಿದ್ದವು. ಆದ್ದರಿಂದ ಅವುಗಳ ಮೇಲಿನ ದಾಳಿ ಸಹಜ ಎಂದು. ಆದರೆ ವಿಶ್ವವಿದ್ಯಾಲಯಗಳಲ್ಲಿ ಎಂಥ ಸಂಪತ್ತಿರುತ್ತಿತ್ತು?? ಗ್ರಂಥ ಭಾಂಡಾರಗಳಲ್ಲಿ ಯಾವ ಸಂಪತ್ತಿತ್ತು?? ಬ್ರಿಟಿಶ್ಷರಂತೆ ಆ ಗ್ರಂಥಗಳನ್ನು ತಮ್ಮ ದೇಶಕ್ಕೆ ಒಯ್ದು ಅಧ್ಯಯನ ಮಾಡಿ ಮನುಕುಲಕ್ಕೆ ಹಿತವಾದುದನ್ನು ಮಾಡಿದರಾ ಅದೂ ಇಲ್ಲ. ಸಾವಿರ ಸಾವಿರ ವರ್ಷಗಳ ಭಾರತೀಯರ ಸತತ ಪರಿಶ್ರಮದ ಫಲವಾದ ಅಪಾರ ಬೌದ್ಡಿಕ ಸಂಪತ್ತನ್ನು ಕೆಲವೇ ಕೆಲವು ತಾಸುಗಳಲ್ಲಿ ಉರಿದು ಬೂದಿ ಮಾಡಿದರು. ಇಷ್ಟಾದರೂ ಕಾಶಿಯಲ್ಲಿ ಪುನಃ ಸ್ಥಾಪಿಸಿದ ಸಂಸ್ಕೃತ ವಿಶ್ವ್ವವಿದ್ಯಾಲಯವನ್ನು ಔರಂಗಜೇಬ ಪುನಃ ಹಾಳು ಮಾಡಿದ. ತಾವುಗಳಾದರೂ ಆ ಬೌದ್ಡಿಕ ಸಂಪತ್ತನ್ನು ಉಪಯೋಗಿಸಿ ಕೊಂಡರೆ??? ಅದೂ ಇಲ್ಲ. ಜಗತ್ತು ಜ್ಞಾನ, ವಿಜ್ಞಾನ, ಸಾಗರಯಾನ ಶೊಧನೆ , ಮುಂತಾದ ಹತ್ತು ಹಲವು ಸಂಶೋಧನೆಯಲ್ಲಿ ತೊಡಗಿಕೊಂಡಾಗ ಭಾರತೀಯರೇನು ಮಾಡುತ್ತಿದ್ದರು ಗೊತ್ತಾ?? ತಮ್ಮ ಬೀಜ ಒಡೆಸಿಕೊಂಡು ತಮ್ಮ ಹೆಣ್ಣು ಮಕ್ಕಳನ್ನು ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆ ಮಾಡಿ ಮುಸ್ಲೀಂ ಸರದಾರರು ಹಂಚಿಕೊಳ್ಳುವದನ್ನು ಕಾಣುತ್ತಾ, ತಮ್ಮ ದೇವರ ಮೂರ್ತಿಯನ್ನು ಉಚ್ಚೆ ಹೇಲು ಮಾಡುವ ಸ್ಥಳದಲ್ಲಿ ಹೂತು ಹಾಕುವದನ್ನು ಕಾಣುತ್ತಾ, (ಮುಸ್ಲೀಂ ಇತಿಹಾಸಕಾರರೇ ಈ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ) ಜೆಸಿಯಾ ಕಂದಾಯ ಕೊಡುತ್ತಾ ಅಸ್ತಿತ್ವವನ್ನೇ ಕಳೆದುಕೊಂಡಿದ್ದರು.

              ಇವೆಲ್ಲವನ್ನು ಹೇಳಿದಾಗ ಈ ಬುದ್ದು ಜೀವಿಗಳು ಏನು ಹೇಳುತ್ತಾರೆ ಗೊತ್ತಾ?? ಬೌದ್ಧರನ್ನು ಭಾರತದಿಂದ ಓಡಿಸಿದ್ದು, ಅವರ ಸ್ತೂಪ ವಿಹಾರಗಳನ್ನು ಹಾಳು ಮಾಡಿದಂತೆ ಮುಸಲ್ಮಾನರೂ ಮಾಡಿದ್ದಾರೆ ಅದರಲ್ಲೇನು ತಪ್ಪು?? ಎನ್ನುತ್ತಾರೆ. ಆದರೆ ಬೌದ್ಧರನ್ನು ಭಾರತದಿಂದ ಓಡಿಸಿದ್ದು ಯಾರು ?? ಅಂಬೇಡ್ಕರ್ ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ. ” ಭಾರತದಲ್ಲಿ ಬೌದ್ಧಮತದ ಅಳಿವಿಗೆ, ವಿನಾಶಕ್ಕೆ ಮುಸ್ಲಿಂರ ಆಕ್ರಮಣಗಳೇ ಕಾರಣ. ‘ಬುತ್ ‘ ಎಂದರೆ ಅರೇಬಿಕ ಭಾಷೆಯಲ್ಲಿ ‘ಬುದ್ಧ’ ಇಸ್ಲಾಂ ಹೆಜ್ಜೆ ಇಟ್ಟಲ್ಲೆಲ್ಲ ಬೌದ್ಧ ಮತ ನಾಶವಾಯಿತು.ಮುಸ್ಲಿಂರಿಗೆ ವಿಗ್ರಹಾರಾಧನೆ ಎಂದರೆ ಬೌದ್ಧ ಮತವೇ ಕಣ್ಣಿಗೆ ಕಾಣುತ್ತಿತ್ತು. ಬ್ಯಾಕ್ಟ್ರಿಯಾ , ಪಾರ್ಥಿಯಾ, ಅಪಘಾನಿಸ್ತಾನ ಗಾಂಧಾರ , ಚೈನಾದ್, ಟರ್ಕಿಸ್ತಾನ, ಅಷ್ತೇ ಅಲ್ಲ ಇಡೀ ಏಶ್ಯಾ ಖಂಡವೇ ಬೌದ್ಧಮತವಾಗಿತ್ತು. ಇಸ್ಲಾಂ ಕಾಲಿಡುವ ಮೊದಲು. ನಳಂದಾ ತಕ್ಷಶಿಲಾ ಇವುಗಳ ಮೇಲೆ ದಾಳಿ ಮಾಡಿ ಬೌದ್ಧರನ್ನು ಕೊಚ್ಚಿ ಹಾಕಿದರು. ತಲೆ ಬುರುಡೆ ಬೋಳಿಸಿದ ಬೌದ್ಧ ಸನ್ಯಾಸಿಗಳ ಅದೆಷ್ಟು ರಾಶಿ ಬಿದ್ದಿತ್ತೆಂದರೆ ಆ ಪುಸ್ತಕಗಳಲ್ಲಿ ಏನಿದೆ ಎಂದು ಓದಿ ಹೇಳಲು ಒಬ್ಬನೇ ಒಬ್ಬ ಬೌದ್ಧ ಸನ್ಯಾಸಿ ಉಳಿದಿರಲಿಲ್ಲ. ಬೌದ್ಧ ಸನ್ಯಾಸಿಗಳ ಮೂಲೋತ್ಪಾಟನೆ ಆಗಿತ್ತು. ಭಾರತದಲ್ಲಿ ಬೌದ್ಧ ಮತ ಮೂಲೋತ್ಪಾಟನೆ ಆಗಲು ನಿಸ್ಸಂಶಯವಾಗಿ ಇಸ್ಲಾಂ ಕಾರಣ.”

              ಯಾರೋ ಮಾಡಿದ ತಪ್ಪಿಗೆ ಇವತ್ತಿನ ಜನ ಹೊಣೆಗಾರರಲ್ಲ. ಹಳೆ ಗಾಯವನ್ನು ಏಕೆ ಕೆದಕಬೇಕು?? ಎನ್ನುವದು ಕೆಲವರ ವಾದ . ಆದರೆ ಮನುವಿನ ವಿಷಯ ಬಂದಾಗ ಈ ಮಾತು ಇವರಿಗೆ ನೆನಪಿಗೆ ಬರುವದಿಲ್ಲ. ಇನ್ನು ಮಾನ್ಯ ರಂಜಾನ್ ದರ್ಗಾ ಅವರು ಒಂದು ಪುಸ್ತಕದಲ್ಲಿ ಔರಂಗಜೇಬನು ಕಾಶಿ ವಿಶ್ವನಾಥ ಮಂದಿರ ಕೆಡವಲು ಕಾರಣವನ್ನು ಕಾಮ್ರೇಡರು ಹೀಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅದೇನೆಂದರೆ ಒಬ್ಬ ಹಿಂದೂ ರಾಣಿಯ ಶೀಲ ಹರಣವಾದದ್ದರಿಂದ ದೇವಾಲಯ ಅಪವಿತ್ರವಾಯಿತೆಂದು ಅದರಲ್ಲಿನ ಮೂರ್ತಿ ಸ್ಥಳಾಂತರಿಸಿ ದೇವಾಲಯ ನೆಲಸಮ ಮಾಡಲಾಯಿತು. ಕಾರಣ ಇದರಲ್ಲಿ ಔರಂಗಜೇಬನ ತಪ್ಪೇನು ಇಲ್ಲ ಎಂದಿದ್ದಾರೆ. ಮಾನ್ಯ ಭೈರಪ್ಪನವರು ಈ ಕುರಿತು ಒಂದು ಪ್ರಶ್ನೆಯನ್ನು ತಮ್ಮ ‘ಆವರಣ’ ಕಾದಂಬರಿಯ ಮುಖಾಂತರ ಕೇಳುತ್ತಾರೆ . ಏನೆಂದರೆ ಅಲ್ಲಿ ಶೀಲ ಹರಣವಾಗಿದ್ದರಿಂದ ದೇವಾಲಯ ನಾಶ ಸರಿ. ಆದರೆ ಅದೇ ಅಪವಿತ್ರಗೊಂಡ ಸ್ಥಳದಲ್ಲಿ ಜ್ಞಾನವ್ಯಾಪೀ ಮಸೀದೆಯನ್ನು ಅವೇ ಕಲ್ಲು ಇಟ್ಟಿಗೆ ಗೋಡೆ ಬೊದಿಗೆ ಉಪಯೋಗಿಸಿ ಕಟ್ಟಿದರಲ್ಲ?? ಮಸೀದೆ ನಿರ್ಮಾಣಕ್ಕೆ ಈ ಅಪವಿತ್ರತೆ ಅಡ್ಡ ಬರಲಿಲ್ಲವೆ?!! ಮಥುರಾದ ಹಾಗೂ ಉದಯಪುರ ಅರಮನೆಯ ಮುಂದಿನ ಗುಡಿ , ಉದಯ ಸಾಗರ ದಂಡೆಯ ಮೂರು ಮಂದಿರ, ಉದಯಪುರದ ಸುತ್ತಮುತ್ತ ೧೭೨ ಮಂದಿರಗಳು ಚಿತ್ತೂರಿನಲ್ಲಿ ೬೩ ಮಂದಿರಗಳು,ಅಂಬೇರಿನಲ್ಲಿ ೬೬ ಮಂದಿರಗಳನ್ನು ನೆಲ ಸಮ ಮಾಡಿದರಲ್ಲ ಇಲ್ಲೆಲ್ಲ ಯಾವ ಮೈಲಿಗೆ ಬೆನ್ನು ಹತ್ತಿತ್ತು??!! ಆದರೆ ಈ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಯಾವ ಬುದ್ಧಿಜೀವಿಯು ಹೋಗಿಲ್ಲ. ವಾದವು ತಮ್ಮಂತೆ ಇಲ್ಲ ಎಂದಾಗ ಕೆಸರೆರಚಾಟ ಇಲ್ಲವೇ ಪಲಾಯನವಾದ ಇವು ಬುದ್ಧಿಜೀವಿಗಳ ವರಸೆಗಳೇ ಆಗಿವೆ.

              ಉತ್ತರ
              • Nagshetty Shetkar's avatar
                Nagshetty Shetkar
                ಜನ 27 2014

                “ರಂಜಾನ್ ದರ್ಗಾ ಅವರು ಒಂದು ಪುಸ್ತಕದಲ್ಲಿ ಔರಂಗಜೇಬನು ಕಾಶಿ ವಿಶ್ವನಾಥ ಮಂದಿರ ಕೆಡವಲು ಕಾರಣವನ್ನು ಕಾಮ್ರೇಡರು ಹೀಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅದೇನೆಂದರೆ ಒಬ್ಬ ಹಿಂದೂ ರಾಣಿಯ ಶೀಲ ಹರಣವಾದದ್ದರಿಂದ ದೇವಾಲಯ ಅಪವಿತ್ರವಾಯಿತೆಂದು ಅದರಲ್ಲಿನ ಮೂರ್ತಿ ಸ್ಥಳಾಂತರಿಸಿ ದೇವಾಲಯ ನೆಲಸಮ ಮಾಡಲಾಯಿತು. ಕಾರಣ ಇದರಲ್ಲಿ ಔರಂಗಜೇಬನ ತಪ್ಪೇನು ಇಲ್ಲ ಎಂದಿದ್ದಾರೆ. ”

                Darga Sir is a scholar. He speaks only truth.

                ಉತ್ತರ
                • sharu's avatar
                  sharu
                  ಜನ 27 2014

                  ದಾಖಲೆಗಳ ಸಮೇತ ನಿಮಗೆ ನಾಳೆ ಉತ್ತರಿಸುವೆ. ಅದು ಮಾನ್ಯ ದರ್ಗಾ ಅವರ ಹೇಳಿಕೆ ಅಲ್ಲ. ತಮ್ಮ ಒಂದು ಪುಸ್ತಕದಲ್ಲಿ ಒಬ್ಬ ಕಾಮ್ರೆಡರು ಹೀಗೆ ಹೇಳಿದ್ದನ್ನು ಅವರು ಉದಾಹರಿಸಿದ್ದಾರೆ( ಔರಂಗಜೇಬನ ಕುರಿತು ಒಳ್ಳೆಯ ಹೇಳಿಕೆಗಾಗಿ) ಆ ಪುಸ್ತಕ ಗ್ರಂಥಾಲಯದಲ್ಲಿದೆ ಕಾರಣ ಸಧ್ಯದಲ್ಲೆ ಹೇಳಲು ತೊಂದರೆ ಇದೆ. ಖಂಡಿತ ನಾಳೆ ಹೇಳಲು ಪ್ರಯತ್ನಿಸುವೆ.

                  ಉತ್ತರ
                • ಶಾರು's avatar
                  ಶಾರು
                  ಜನ 28 2014

                  “ರಂಜಾನ್ ದರ್ಗಾ ಅವರು ಒಂದು ಪುಸ್ತಕದಲ್ಲಿ ಔರಂಗಜೇಬನು ಕಾಶಿ ವಿಶ್ವನಾಥ ಮಂದಿರ ಕೆಡವಲು ಕಾರಣವನ್ನು ಕಾಮ್ರೇಡರು ಹೀಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅದೇನೆಂದರೆ ಒಬ್ಬ ಹಿಂದೂ ರಾಣಿಯ ಶೀಲ ಹರಣವಾದದ್ದರಿಂದ ದೇವಾಲಯ ಅಪವಿತ್ರವಾಯಿತೆಂದು ಅದರಲ್ಲಿನ ಮೂರ್ತಿ ಸ್ಥಳಾಂತರಿಸಿ ದೇವಾಲಯ ನೆಲಸಮ ಮಾಡಲಾಯಿತು. ಕಾರಣ ಇದರಲ್ಲಿ ಔರಂಗಜೇಬನ ತಪ್ಪೇನು ಇಲ್ಲ ಎಂದಿದ್ದಾರೆ. ” ಮಾನ್ಯ ದರ್ಗಾ ಸರ ಅವರಲ್ಲಿ ನಾನು ಕ್ಷಮೆ ಕೇಳಿಕೊಳ್ಳುತ್ತೇನೆ. ಹಾಗು ಓದುಗರಲ್ಲೂ ಮತ್ತು ಸಂಪಾದಕರಲ್ಲೂ ಕ್ಷಮೆ ಕೇಳುತ್ತೇನೆ . ಏಕೆಂದರೆ ಮೇಲಿನ ವಾಕ್ಯ ದರ್ಗ ಅವರ ಪುಸ್ತಕದಲ್ಲಿ ಇಲ್ಲ. ಅದು ಶ್ರೀ ನಯೀಂ ಸುಳಕೋಡ್ ಎನ್ನುವವರು ಪಾಂಡೆ ಎನ್ನುವವರ ಹಿಂದೀ ಪುಸ್ತಕ ಅನುವಾದದಲ್ಲಿ ಹೀಗೆ ಹೇಳಲ್ಪಟ್ಟಿದೆ. ಲೋಹಿಯಾ ಪ್ರಕಾಶನ ಈ ಪುಸ್ತಕ ಹೊರತಂದಿದೆ. ತಪ್ಪಾದದ್ದಕ್ಕೆ ವಿಷಾದಿಸುತ್ತೇನೆ.

                  ಉತ್ತರ
                  • Nagshetty Shetkar's avatar
                    Nagshetty Shetkar
                    ಜನ 28 2014

                    “ಮಾನ್ಯ ದರ್ಗಾ ಸರ ಅವರಲ್ಲಿ ನಾನು ಕ್ಷಮೆ ಕೇಳಿಕೊಳ್ಳುತ್ತೇನೆ.”

                    +1

                    ಉತ್ತರ
                    • Manohar's avatar
                      Manohar
                      ಜನ 28 2014

                      “ರಂಜಾನ್ ದರ್ಗಾ ಅವರು ಒಂದು ಪುಸ್ತಕದಲ್ಲಿ ಔರಂಗಜೇಬನು ಕಾಶಿ ವಿಶ್ವನಾಥ ಮಂದಿರ ಕೆಡವಲು ಕಾರಣವನ್ನು ಕಾಮ್ರೇಡರು ಹೀಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅದೇನೆಂದರೆ ಒಬ್ಬ ಹಿಂದೂ ರಾಣಿಯ ಶೀಲ ಹರಣವಾದದ್ದರಿಂದ ದೇವಾಲಯ ಅಪವಿತ್ರವಾಯಿತೆಂದು ಅದರಲ್ಲಿನ ಮೂರ್ತಿ ಸ್ಥಳಾಂತರಿಸಿ ದೇವಾಲಯ ನೆಲಸಮ ಮಾಡಲಾಯಿತು. ಕಾರಣ ಇದರಲ್ಲಿ ಔರಂಗಜೇಬನ ತಪ್ಪೇನು ಇಲ್ಲ ಎಂದಿದ್ದಾರೆ. ” ಎಂಬುದಕ್ಕೆ , ತಮ್ಮ ಗುರು ಇದನ್ನೆಲ್ಲ ಬರೆದಿದ್ದರೂ ಬರೆದಿರಬಹುದು ಎಂದುಕೊಂಡು
                      “Darga Sir is a scholar. He speaks only truth.” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

                      ಆಮೇಲೆ
                      “ಏಕೆಂದರೆ ಮೇಲಿನ ವಾಕ್ಯ ದರ್ಗ ಅವರ ಪುಸ್ತಕದಲ್ಲಿ ಇಲ್ಲ. ಅದು ಶ್ರೀ ನಯೀಂ ಸುಳಕೋಡ್ ಎನ್ನುವವರು ಪಾಂಡೆ ಎನ್ನುವವರ ಹಿಂದೀ ಪುಸ್ತಕ ಅನುವಾದದಲ್ಲಿ ಹೀಗೆ ಹೇಳಲ್ಪಟ್ಟಿದೆ.” ಎಂಬ ಕಮೆಂಟಿಗೆ +೧ ಎಂದಿದ್ದಾರೆ. ಅಂದರೆ ಈ ಶಿಷ್ಯ ಮಹೋದಯರಿಗೆ ಗೊತ್ತಿಲ್ಲ. ತಮ್ಮ ಗುರು ಏನು ಮಾತನಾಡಿರಬಹದು, ಬರೆದಿರಬಹುದು ಅಂತ! ಆಹಾ ಗುರು, ಆಹಾ ಶಿಷ್ಯ! 🙂

                    • Nagshetty Shetkar's avatar
                      Nagshetty Shetkar
                      ಜನ 28 2014

                      ೧) ಶಾರು ಅವರ ಅಚಾತುರ್ಯಕ್ಕೆ ಅವರೇ ಹೊಣೆ.

                      ೨) ದರ್ಗಾ ಸರ್ ಅವರು ಹೀಗೆ ಹೇಳಿದ್ದಾರೆ ಹೇಳಿಲ್ಲ ಅಂತ ದಿನವೂ ಕೆಲವರು ಕಿಡಿಗೇಡಿಗಳು ತಗಾದೆ ತೆಗೆಯುತ್ತಲೇ ಇರುತ್ತಾರೆ. ಅವರಿಗೆಲ್ಲ ನಾನು ಹೇಳುವುದು ಇಷ್ಟನ್ನೇ: ದರ್ಗಾ ಸರ್ ಅವರು ಸಂತನಷ್ಟೇ ಅಲ್ಲ ಒಬ್ಬ ಅಸಾಧಾರಣ ಪ್ರತಿಭೆಯ ವಿದ್ವಾಂಸ ಕೂಡ. ಅವರೆಂದಿಗೂ ಸತ್ಯವನ್ನೇ ಹೇಳುವವರು. ಶಾರು ಅವರಿಗೂ ಇದನ್ನೇ ಹೇಳಿದೆ.

                • vidya's avatar
                  vidya
                  ಜನ 28 2014

                  ಕೇವಲ ಮನು ಹೇಳಿದ ಮಾತ್ರಕ್ಕೆ ಅವನನ್ನು ದೂಷಿಸುವ ನೀವು ಅವನಂತೆಯೇ ಹೇಳಿದ ಔರಂಗಜೇಬನ ಬಗ್ಗೆ ಏಕೆ ಮಾತನಾಡುವದಿಲ್ಲ? ಔರಂಗಜೇಬನ ಬಗ್ಗೆ ಯಾಕೆ ತೆಗಳುವದಿಲ್ಲ?? ಇಲ್ಲಿ ಮನು ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ನ್ಯಾಯ ಇಬ್ಬರಿಗೂ ಒಂದೇ ತೆರನಾಗಿರಬೇಕಲ್ಲವೆ?? ಒಂದು ವೇಳೆ ಔರಂಗಜೇಬನ ಕಾನೂನು ಸರಿ ಎಂದು ನೀವು ಹೇಳಿದರೆ ಮನುವಿನ ಹೇಳಿಕೆಯನ್ನೂ ಒಪ್ಪಬೇಕು. ಮನುವಿನದು ತಪ್ಪಾದರೆ ಔರಂಗಜೇಬನದು ತಪ್ಪಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ??? ಶಾರೂರ ಈ ಪ್ರಶ್ನೆಗೆ ನೀವು ಉತ್ತರಿಸದೇ ಬೇರೆ ಯಾವುದೋ ವಿಷಯ ಪ್ರಸ್ತಾಪ ಮಾಡಿರುವಿರಲ್ಲಾ?

                  ಉತ್ತರ
                  • Nagshetty Shetkar's avatar
                    Nagshetty Shetkar
                    ಜನ 29 2014

                    Where is the proof?

                    ಉತ್ತರ
                    • ಶಾರು's avatar
                      ಶಾರು
                      ಜನ 29 2014

                      ಔರಂಗಜೇಬನ ಇತಿಹಾಸ ಕುರಿತು ಬರೆದ ಗ್ರಂಥ ಮಾಸಿರ್-ಇ-ಆಲಂಗೀರಿ ಗ್ರಂಥದಲ್ಲಿ ಹೆಳಲ್ಪಟ್ತಿದೆ ಸೀತಾರಾಮ್ ಗೋಯೆಲ್ ಇಂಗ್ಲೀಷಿನಲ್ಲಿ ಅನುವಾದಿಸಿದ್ದಾರೆ.

                    • Nagshetty Shetkar's avatar
                      Nagshetty Shetkar
                      ಜನ 29 2014

                      ಔರಂಗಜೀಬನಂತ ಮಹಾನ್ ವ್ಯಕ್ತಿ ಹಾಗೆಲ್ಲ ಬರೆದಿರುವುದು ಸಾಧ್ಯವೇ ಇಲ್ಲ. ಈ ವೈಧಿಕಶಾಹಿಗಳು ತಿರುಚಿ ತಮಗೆ ಬೇಕಾದಂತೆ ಅನುವಾದಿಸಿಕೊಂಡಿದ್ದಾರಷ್ಟೇ. ನೀವು ಮೂಲ ಗ್ರಂಥದಿಂದಲೇ ಪ್ರೂಫ್ ಕೊಡಿ.

                    • Nagshetty Shetkar's avatar
                      Nagshetty Shetkar
                      ಜನ 29 2014

                      “ಔರಂಗಜೀಬನಂತ ಮಹಾನ್ ವ್ಯಕ್ತಿ ಹಾಗೆಲ್ಲ ಬರೆದಿರುವುದು ಸಾಧ್ಯವೇ ಇಲ್ಲ. ಈ ವೈಧಿಕಶಾಹಿಗಳು ತಿರುಚಿ ತಮಗೆ ಬೇಕಾದಂತೆ ಅನುವಾದಿಸಿಕೊಂಡಿದ್ದಾರಷ್ಟೇ. ನೀವು ಮೂಲ ಗ್ರಂಥದಿಂದಲೇ ಪ್ರೂಫ್ ಕೊಡಿ.”

                      dear moderator, someone has posted this comment using my name. This is cheap and disgusting.

                    • Nagshetty Shetkar's avatar
                      Nagshetty Shetkar
                      ಜನ 29 2014

                      {“ಔರಂಗಜೀಬನಂತ ಮಹಾನ್ ವ್ಯಕ್ತಿ ಹಾಗೆಲ್ಲ ಬರೆದಿರುವುದು ಸಾಧ್ಯವೇ ಇಲ್ಲ. ಈ ವೈಧಿಕಶಾಹಿಗಳು ತಿರುಚಿ ತಮಗೆ ಬೇಕಾದಂತೆ ಅನುವಾದಿಸಿಕೊಂಡಿದ್ದಾರಷ್ಟೇ. ನೀವು ಮೂಲ ಗ್ರಂಥದಿಂದಲೇ ಪ್ರೂಫ್ ಕೊಡಿ.”

                      dear moderator, someone has posted this comment using my name. This is cheap and disgusting.}

                      ನನ್ನ ತೀಕ್ಷ್ಣ ಪ್ರಶ್ನೆಗಳನ್ನು ಸವಾಲಗಳನ್ನು ತಡೆಯಲಾರದೇ ಹೀಗೆ ನಿಲುಮೆಯವರೇ ನನ್ನ ಹೆಸರಿನಲ್ಲಿ ಯಾರೋ ಬರೆಯುತ್ತಿದ್ದಾರೆ ಎನ್ನುವ ಹುನ್ನಾರ ಮಾಡುತ್ತಿದ್ದೀರಿ. ನನಗೆ ಪ್ರೋಫ್ ಕೊಡಿ ಸುಮ್ಮನೆ ನಾಟಕ ಬೇಡ. ಔರಂಗ ಜೇಬನ ಮೂಲ ಗ್ರಂಥದಿಂಲೇ ಪ್ರೂಫ್ ಬೇಕು.

                    • ಶಾರು's avatar
                      ಶಾರು
                      ಜನ 29 2014

                      dear moderator, someone has posted this comment using my name. This is cheap and disgusting.“ಔರಂಗಜೀಬನಂತ ಮಹಾನ್ ವ್ಯಕ್ತಿ ಹಾಗೆಲ್ಲ ಬರೆದಿರುವುದು ಸಾಧ್ಯವೇ ಇಲ್ಲ. ಈ ವೈಧಿಕಶಾಹಿಗಳು ತಿರುಚಿ ತಮಗೆ ಬೇಕಾದಂತೆ ಅನುವಾದಿಸಿಕೊಂಡಿದ್ದಾರಷ್ಟೇ. ನೀವು ಮೂಲ ಗ್ರಂಥದಿಂದಲೇ ಪ್ರೂಫ್ ಕೊಡಿ.” ಇದು ನೀವು ಬರೆದ ಕಮೆಂಟ ಅಲ್ಲವೆ?? ನಿಮಗೆ ಏನು ಹೇಳಬೇಕಿದೆ ಇನ್ನೊಮ್ಮೆ ತಿಳಿಸಿ.

                    • Nagshetty Shetkar's avatar
                      Nagshetty Shetkar
                      ಜನ 29 2014

                      “ಇದು ನೀವು ಬರೆದ ಕಮೆಂಟ ಅಲ್ಲವೆ??”

                      no, some one faked my id and wrote that comment. Nilume is plagued by rogues who use fake ids. I’ll complain to DIG.

                    • ಶಾರು's avatar
                      ಶಾರು
                      ಜನ 29 2014

                      {“ಔರಂಗಜೀಬನಂತ ಮಹಾನ್ ವ್ಯಕ್ತಿ ಹಾಗೆಲ್ಲ ಬರೆದಿರುವುದು ಸಾಧ್ಯವೇ ಇಲ್ಲ. ಈ ವೈಧಿಕಶಾಹಿಗಳು ತಿರುಚಿ ತಮಗೆ ಬೇಕಾದಂತೆ ಅನುವಾದಿಸಿಕೊಂಡಿದ್ದಾರಷ್ಟೇ. ನೀವು ಮೂಲ ಗ್ರಂಥದಿಂದಲೇ ಪ್ರೂಫ್ ಕೊಡಿ.”
                      dear moderator, someone has posted this comment using my name. This is cheap and disgusting.}
                      ನನ್ನ ತೀಕ್ಷ್ಣ ಪ್ರಶ್ನೆಗಳನ್ನು ಸವಾಲಗಳನ್ನು ತಡೆಯಲಾರದೇ ಹೀಗೆ ನಿಲುಮೆಯವರೇ ನನ್ನ ಹೆಸರಿನಲ್ಲಿ ಯಾರೋ ಬರೆಯುತ್ತಿದ್ದಾರೆ ಎನ್ನುವ ಹುನ್ನಾರ ಮಾಡುತ್ತಿದ್ದೀರಿ. ನನಗೆ ಪ್ರೋಫ್ ಕೊಡಿ ಸುಮ್ಮನೆ ನಾಟಕ ಬೇಡ. ಔರಂಗ ಜೇಬನ ಮೂಲ ಗ್ರಂಥದಿಂಲೇ ಪ್ರೂಫ್ ಬೇಕು. ನೀವು ಏನು ಬರೆಯುತ್ತಿದ್ದೀರೆಂದು ನನಗಂತೂ ಅರ್ಥವಾಗುತ್ತಿಲ್ಲ. ಇರಲಿ ಮನು ತನ್ನ ಸ್ಮೃತಿಯಲ್ಲಿ ಹೀಗೆ ಬರೆದಿದ್ದಾನೆಂದು ನೀವು ಎಡಚರು ಹುನ್ನಾರ ನಡೆಸಿದ್ದೀರಿ ನನಗೆ ಮನು ಬರೆದ ಮನುವಿನ ಹಸ್ತ ಪ್ರತಿ ಇರುವ ಪ್ರೂಫ್ ಕೊಡಿ. ಎಂದು ನಾನಂದರೆ ಹೇಗಿರುತ್ತೆ ?? ವಿತಂಡ ವಾದ ಮಾಡಿದರೆ ಎಲ್ಲಿಂದ ಉತ್ತರ ತರಬೇಕು??

                    • Nagshetty Shetkar's avatar
                      Nagshetty Shetkar
                      ಜನ 29 2014

                      ಶಾರು, why are you misusing my id? You are a,criminal and you have been caught red hand. Now face police music.

                    • Nagshetty Shetkar's avatar
                      Nagshetty Shetkar
                      ಜನ 29 2014

                      “ಶಾರು, why are you misusing my id? You are a,criminal and you have been caught red hand. Now face police music.”
                      ಇದು ಬೇರೆಯವರು ಯಾರೋ ನನ್ನ ಹೆಸರಲ್ಲಿ ಬರೆದಿರುವುದು, ನಾನಲ್ಲ. ಗಟ್ಸ್ ಇದ್ರೆ ಬಂದು ಉತ್ತರಿಸಿ ಏಕೆ ನನ್ನ ಹೆಸರಲ್ಲಿ ಕಮೆಂಟು ಹಾಕುತ್ತಿದ್ದೀರಿ.

                    • ಶಾರು's avatar
                      ಶಾರು
                      ಜನ 29 2014

                      ಶಾರು, why are you misusing my id? You are a,criminal and you have been caught red hand. Now face police music. ನನಗೆ ನಿಮ್ಮ ಐ ಡಿ ಹೇಗೆ ಗೊತ್ತಾಗುತ್ತೆ?? ನೀವು ಮೇಲೆ ತಿಳಿಸಿರುವಂತೆ ಇದೂ ನಿಮ್ಮ ಕಮೆಂಟ ಅಲ್ಲವೋ??

                    • Nagshetty Shetkar's avatar
                      Nagshetty Shetkar
                      ಜನ 29 2014

                      “music. ನನಗೆ ನಿಮ್ಮ ಐ ಡಿ ಹೇಗೆ ಗೊತ್ತಾಗುತ್ತೆ??” you can tell that to police.

                    • Nagshetty Shetkar's avatar
                      Nagshetty Shetkar
                      ಜನ 29 2014

                      {“music. ನನಗೆ ನಿಮ್ಮ ಐ ಡಿ ಹೇಗೆ ಗೊತ್ತಾಗುತ್ತೆ??” you can tell that to police.}
                      ನಿಲುಮೆಯ ಫೇಕುಗಳು ನನ್ನ ಫೇಕಿನ ಹುಯಿಲೆಬ್ಬಿಸಿ ಪೋಲೀಸ ಭಯ ಬಿತ್ತು ವ್ಯರ್ಥ ಪ್ರಯತ್ನ ಮಾಡ್ತಿದ್ದಾರೆ. ನೀವೇನೇ ಮಾಡಿದರೂ ನಮ್ಮ ಕಾಯಕವನ್ನು ತಡೆಯಲಾರರಿ, ಅಭಿನವ ಚೆನ್ನಬಸವಣ್ಣನವರಾದ ದರ್ಗಾರವರ ಶಿಷ್ಯ ಈ ರೀತಿಯ ಕಣ್ಕಟ್ಟಿಗೆ ಹೆದರುವುದಿಲ್ಲ.

                    • ಶಾರು's avatar
                      ಶಾರು
                      ಜನ 30 2014

                      ಸುಮ್ಮನೆ ನಾಟಕ ಬೇಡ. ಔರಂಗ ಜೇಬನ ಮೂಲ ಗ್ರಂಥದಿಂಲೇ ಪ್ರೂಫ್ ಬೇಕು. ನೀವು ಏನು ಬರೆಯುತ್ತಿದ್ದೀರೆಂದು ನನಗಂತೂ ಅರ್ಥವಾಗುತ್ತಿಲ್ಲ. ಇರಲಿ ಮನು ತನ್ನ ಸ್ಮೃತಿಯಲ್ಲಿ ಹೀಗೆ ಬರೆದಿದ್ದಾನೆಂದು ನೀವು ಎಡಚರು ಹುನ್ನಾರ ನಡೆಸಿದ್ದೀರಿ ನನಗೆ ಮನು ಬರೆದ ಮನುವಿನ ಹಸ್ತ ಪ್ರತಿ ಇರುವ ಪ್ರೂಫ್ ಕೊಡಿ. ಎಂದು ನಾನಂದರೆ ಹೇಗಿರುತ್ತೆ ?? ವಿತಂಡ ವಾದ ಮಾಡಿದರೆ ಎಲ್ಲಿಂದ ಉತ್ತರ ತರಬೇಕು?? ನನ್ನ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗದೇ ಫೇಕ್ ಐ.ಡಿಯ ನಾಟಕವಾಡಿದ್ದು ಯಾರು??

                    • Nagshetty Shetkar's avatar
                      Nagshetty Shetkar
                      ಜನ 30 2014

                      ಶಾರು ಅವರೆ, ನಿಮ್ಮ ಅಸಲಿಯತ್ ಏನು ಅಂತ ಸದ್ಯದಲ್ಲೇ ಬಯಲಾಗಲಿದೆ. ವೈಟ್ ಆಂಡ್ ವಾಚ್.

                    • ಶಾರು's avatar
                      ಶಾರು
                      ಜನ 31 2014

                      Where is the proof? ಇದು ನಿಮ್ಮ ಪ್ರಶ್ನೆ ಆಗಿತ್ತು.
                      ಅದಕ್ಕೆ ನನ್ನಉತ್ತರ ಇದಾಗಿತ್ತು. [ ಔರಂಗಜೇಬನ ಇತಿಹಾಸ ಕುರಿತು ಬರೆದ ಗ್ರಂಥ ಮಾಸಿರ್-ಇ-ಆಲಂಗೀರಿ ಗ್ರಂಥದಲ್ಲಿ ಹೆಳಲ್ಪಟ್ತಿದೆ ಸೀತಾರಾಮ್ ಗೋಯೆಲ್ ಇಂಗ್ಲೀಷಿನಲ್ಲಿ ಅನುವಾದಿಸಿದ್ದಾರೆ.]
                      {“ಔರಂಗಜೀಬನಂತ ಮಹಾನ್ ವ್ಯಕ್ತಿ ಹಾಗೆಲ್ಲ ಬರೆದಿರುವುದು ಸಾಧ್ಯವೇ ಇಲ್ಲ. ಈ ವೈಧಿಕಶಾಹಿಗಳು ತಿರುಚಿ ತಮಗೆ ಬೇಕಾದಂತೆ ಅನುವಾದಿಸಿಕೊಂಡಿದ್ದಾರಷ್ಟೇ. ನೀವು ಮೂಲ ಗ್ರಂಥದಿಂದಲೇ ಪ್ರೂಫ್ ಕೊಡಿ.” ನೀವು ನನಗೆ ಹೇಳಿದ ಉತ್ತರ ಇದಾಗಿತ್ತು.
                      ನನಗೆ ಮನು ಬರೆದ ಮನುವಿನ ಹಸ್ತ ಪ್ರತಿ ಇರುವ ಪ್ರೂಫ್ ಕೊಡಿ. ಎಂದು ನಾನಂದರೆ ಹೇಗಿರುತ್ತೆ ?? ವಿತಂಡ ವಾದ ಮಾಡಿದರೆ ಎಲ್ಲಿಂದ ಉತ್ತರ ತರಬೇಕು?? ನನ್ನ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗದೇ ಫೇಕ್ ಐ.ಡಿಯ ನಾಟಕವಾಡಿದ್ದು ಯಾರು? ನಾನು ಈ ರೀತಿ ಪ್ರಶ್ನಿಸಿಸಿದೆ.
                      ಶಾರು ಅವರೆ, ನಿಮ್ಮ ಅಸಲಿಯತ್ ಏನು ಅಂತ ಸದ್ಯದಲ್ಲೇ ಬಯಲಾಗಲಿದೆ. ವೈಟ್ ಆಂಡ್ ವಾಚ್. ಅಂತಾ ಉತ್ತರ ಕೊಡುತ್ತೀರಿ. ನಾನು ಕೇಳಿದ ಪ್ರಶ್ನೆಗೆ ಪ್ರತಿ ಸಲವೂ ಏನೋ ಉತ್ತರ ನೀಡಿ ಚರ್ಚೆಯ ಹಾದಿ ತಪ್ಪಿಸುತ್ತಿದ್ದೀರಿ ವಿನಃ ಕೇಳಿದ ಪ್ರ‍ಶ್ನೆಗೆ ಉತ್ತರವೇ ಇಲ್ಲ. ಇಲ್ಲಿ ನಿಮ್ಮ ಅಸಲಿಯತ್ ಅಂದರೆ ಏನು?? ನಾನೇನು ನಕಲಿ ಹೇಳಿರುವೆ? ಯಾವುದಕ್ಕಾಗಿ ನಾನು ಕಾಯಬೇಕು? ವಿಚಿತ್ರ ಉತ್ತರ ನಿಮ್ಮದಾಗಿರುತ್ತದೆ. ಚರ್ಚೆಗೆ ಸಂಭಂಧಿಸಿದಂತೆ ನೀವ್ಯಾಕೆ ಉತ್ತರಿಸುವದಿಲ್ಲ?? ಏನೋ ಹೇಳಿ ಎತ್ತಲೋ ಚರ್ಚೆಯನ್ನು ಒಯ್ಯುತ್ತೀರಲ್ಲಾ ಯಾಕೆ??

              • Akash's avatar
                Akash
                ಜನ 27 2014

                ನಿಮ್ಮ ದೀರ್ಘ ಕಮೆಂಟ್ ಓದಿ ಅನೇಕ ವಿಷಯಗಳು ತಿಳಿದವು ಅವುಗಳಲ್ಲಿ ಕಾಶೀ ವಿಶ್ವನಾಥ ಮಂದಿರದ ಧ್ವಂಸ ಕುರಿತಂತೆ ಕಾಮ್ರೆಡರು ಹರಡಿದ ಕಥೆ ನಾನು ಕೇಳಿದ್ದೆ. ಆದರೆ ನಾನು ಭೈರಪ್ಪ ಎತ್ತಿದ ಪ್ರ‍ಶ್ನೆ ಬಗ್ಗೆ ತಿಳಿದುಕೊಂಡಿರಲಿಲ್ಲ. ಅನೇಕ ವಿಚಾರ ಕುರಿತು ತಿಳಿಸಿದ ನಿಮಗೆ ಅನಂತಾನಂತ ಧನ್ಯವಾದಗಳು. ಕಣ್ಣು ತೆರೆಸುವ ಲೇಖನ ಇದಾಗಿದೆ.

                ಉತ್ತರ
              • vidya's avatar
                vidya
                ಜನ 27 2014

                ನಿಮ್ಮ ಕಮೆಂಟು ಒಂದು ಲೇಖನದಂತಿದೆ. ಲೆಖನವಾಗಿ ಇದನ್ನು ನೀವು ಸಂಪಾದಕರಿಗೆ ಕಳಿಸಬಹುದಿತ್ತಲ್ಲಾ?? ಇರಲಿ, ಇದರಲ್ಲಿನ ಅಂಬೇಡ್ಕರರು ಹೇಳಿದ್ದಾರೆನ್ನುವ (ಬೌದ್ಧ ಧರ್ಮದ ಬಗ್ಗೆ) ವಾಕ್ಯಗಳು ಬುದ್ಧಿಜೀವಿಗಳಿಗೆ ಬುದ್ಧಿ ಹೇಳುವಂತಿವೆ.

                ಉತ್ತರ
                • sharu's avatar
                  sharu
                  ಜನ 27 2014

                  [[ನಿಮ್ಮ ಕಮೆಂಟು ಒಂದು ಲೇಖನದಂತಿದೆ. ಲೆಖನವಾಗಿ ಇದನ್ನು ನೀವು ಸಂಪಾದಕರಿಗೆ ಕಳಿಸಬಹುದಿತ್ತಲ್ಲಾ??]] ನಾನು ಕಳಿಸಿರುವೆ ಸಂಪಾದಕರು ಲೈಕ್ ಮಾಡಿದಂತಿಲ್ಲ??

                  ಉತ್ತರ
              • Akash's avatar
                Akash
                ಜನ 27 2014
        • akash's avatar
          akash
          ಜನ 19 2014

          ನೀವು ಅಷ್ಟೊಂದು ಗಾಂಧಿಯನ್ನು ಹೊಗಳುವಿರಲ್ಲಾ ಈ ಮನುಷ್ಯ ಹೇಗಿದ್ದ ಗೊತ್ತಾ?? ತನ್ನ ಬ್ರಹ್ಮಚರ್ಯ ಪರೀಕ್ಷಿಸಿಕೊಳ್ಳಲು ಕಂಡವರ ಮನೆ ಹೆಣ್ಣು ಮಕ್ಕಳನ್ನು ಬೆತ್ತಲು ಮಲಗಿಸಿಕೊಳ್ಲುತ್ತಿದ್ದ. ಈ ಕುರಿತು ಗಾಂಧಿಜಿಯವರ ಮೊಮ್ಮಗಳಾದ ಮನು ಬೆನ್ ಅವರೇ ತಮ್ಮ ಡೈರಿಯಲ್ಲಿ ಬೆಳಕು ಚಲ್ಲಿದ್ದಾರೆ. ಇನ್ನು ನ್ಯಾಯಯುತವಾಗಿ ಕಾಂಗ್ರೆಸ್ ನಿಂದ ಪಟೇಲರು ಆರಿಸಿ ಬಂದಿದ್ದರೂ ಅವರನ್ನು ಬಿಡಿಸಿ ನೇಹರು ಅವರನ್ನು ಕಾಂಗ್ರೆಸ್ ನ ಅದ್ಯಕ್ಷ ಗಾದಿಯ ಮೇಲೆ ಕೂಡಿಸಿದರು. ಸುಭಾಸರಿಗೂ ಸಹಕರಿಸಲಿಲ್ಲ. ಭಗತ್ ಸಿಂಗ್ ನಂತಹ ದೇಶ ಭಕ್ತರು ಗಲ್ಲಿಗೇರುವದನ್ನು ತಪ್ಪಿಸಲಿಲ್ಲ. ಯುದ್ಧಕ್ಕಾಗಿ ಪಾಕಿಗಳು ತಾವು ಕೊಟ್ಟ ಹಣ ಖರ್ಚು ಮಾಡುವರೆಂದು ಗೊತ್ತಿದ್ದರೂ ಕೂಡ 52 ಕೋಟಿ ರೂಪಾಯಿ ಕೊಡಲೇ ಬೆಕೆಂದು ಹಟಹಿಡಿದು ಉಪವಾಸ ಕುಳಿತರು. ಇನ್ನೂ ಸಾಕಷ್ಟು ಈ ಮನುಷ್ಯನ ಪುರಾಣಗಳಿವೆ. ಈಗ ಇಷ್ಟೇ ಸಾಕು.

          ಉತ್ತರ
          • Nagshetty Shetkar's avatar
            Nagshetty Shetkar
            ಜನ 19 2014

            ಆಕಾಶ್, ಗಾಂಧಿ ಈ ನಾಡು ಕಂಡ ಅತ್ಯಂತ ದೊಡ್ಡ ಮಾನವತಾವಾದಿ. ಆದರೆ ನಿಮಗೆ ಮಾನವತಾವಾದಕ್ಕಿಂತ ಮತೀಯತೆಯನ್ನು ಮೆರೆಯುವ ಘೊಡ್ಸೆ ಅಂತಹ ಕೊಲೆಗಡುಕನೇ ಆದರ್ಶ. ಗಾಂಧಿಮಾರ್ಗ ಹಿಡಿಯುವ ಬದಲು ಘೊಡೆ ಮಾರ್ಗ ಹಿಡಿದಿದ್ದೀರಿ.

            ಉತ್ತರ
            • Akash's avatar
              Akash
              ಜನ 20 2014

              ಈ ನಿಮ್ಮ ಮಾನವತಾ ವಾದಿಗೆ ಕೇವಲ ನೆಹರು ಮಾತ್ರ ಮನುಷ್ಯರಂತೆ ಕಂಡರೆ?? ಭಗತರು ಸುಭಾಸರು ಪಟೇಲರು ಮನುಷ್ಯರೇ ಅಲ್ಲವೇನು!!!!? ನಿಮ್ಮ ಮಾನವತಾವಾದಿಗೆ???!!!

              ಉತ್ತರ
              • Nagshetty Shetkar's avatar
                Nagshetty Shetkar
                ಜನ 20 2014

                ಆಕಾಶ್, ಗಾಂಧಿಯಂತಹ ಮಹಾನ್ ವ್ಯಕ್ತಿ ಬಗ್ಗೆ ಚೀಪಾಗಿ ಮಾತಾಡಿ ನಿಮ್ಮ ಹೃದಯದಲ್ಲಿ ನಂಜು ಬಿಟ್ಟರೆ ಬೇರೆ ಏನೂ ಇಲ್ಲ ಅಂತ ಸಾಬೀತು ಪಡಿಸುತ್ತಿದ್ದೀರಿ. ಗಾಂಧಿ ಎಷ್ಟು ದೊಡ್ಡವ ಅಂತ ತಿಳಿದುಕೊಳ್ಳಲು ಅನಂತಮೂರ್ತಿ ಗಾಂಧೀ ಬಗ್ಗೆ ಬರೆದಿರುವುದನ್ನು ಓದಿ.

                ಉತ್ತರ
    • Manohar's avatar
      Manohar
      ಜನ 18 2014

      ನಿಲುಮೆಗೆ ಅಭಿನಂದನೆಗಳು. ಇನ್ನು ಮುಂದೆ ಈ ಮಹಾಮಾನವತಾವಾದಿ ಯಪ್ಪನನ್ನು ಕೇಳಿಯೇ ಏನನ್ನು ಪ್ರಕಟಿಸಬೇಕು, ಏನನ್ನು ಪ್ರಕಟಿಸಬಾರದು ಎಂದು ನಿರ್ಧರಿಸಬೇಕೆಂದು ನಿಲುಮೆಯ ನಿರ್ವಾಹಕರಲ್ಲಿ ಕೋರಿಕೆ.

      ಉತ್ತರ
  3. ಶುಭಹಾರೈಕೆಗಳು!

    ಉತ್ತರ
  4. akash's avatar
    akash
    ಜನ 18 2014

    ಅತ್ಯಂತ ಹೃತ್ಫೂರ್ವಕ ಅಭಿನಂದನೆಗಳು ನಿಲುಮೆ ಬಳಗಕ್ಕೆ. ನಮ್ಮ ಗೋಡ್ಸೆ ಬಳಗದ ಕಡೆಯಿಂದ .(ನಾಗಶೆಟ್ಟಿ ಅವರು ನಮಗೆ ಗೋಡ್ಸೆ ಸೇನೆ ಎಂದು ಕರೆದಿದ್ದಾರೆ.)

    ಉತ್ತರ
  5. Deepak Kamath's avatar
    Deepak Kamath
    ಜನ 18 2014

    All the best. Nilume is doing very nice job.

    ಉತ್ತರ
  6. M.A.Sriranga's avatar
    M.A.Sriranga
    ಜನ 18 2014

    ನಿಲುಮೆಗೆ ನಾಲ್ಕು ವರ್ಷಗಳಾದ ಈ ಶುಭ ದಿನಕ್ಕೆ ನನ್ನ ಅಭಿನಂದನೆಗಳನ್ನು ದಯವಿಟ್ಟು ಸ್ವೀಕರಿಸಿ. ತಮ್ಮ ಇತರ ಕೆಲಸಗಳ ನಡುವೆಯೇ ಒಂದು ಹವ್ಯಾಸವಾಗಿ ನಿಲುಮೆಯನ್ನು ತಾವು ಪ್ರತೀ ದಿನ ಓದುಗರಿಗೆ ತಲುಪಿಸುತ್ತಿದ್ದೀರಿ. ತಮ್ಮ ತಾಳ್ಮೆ,ಸಾಹಸ ದೊಡ್ಡದು. ನಿಲುಮೆಯಲ್ಲಿ ನಡೆದ ೨೦೧೩ರ ಮುಖ್ಯ ಚರ್ಚೆಗಳ ಪಟ್ಟಿಯಲ್ಲಿ ನನ್ನ ಲೇಖನಗಳಮಾಲೆಯೊಂದನ್ನು(ಭೈರಪ್ಪನವರ ಕಾದಂಬರಿಗಳ ……. ) ಕಂಡು ಸಂತೋಷವಾಗಿದೆ. ಜತೆಗೆ ತಾವು ಓದುಗರ ಪ್ರತಿಕ್ರಿಯೆಗಳನ್ನು ಸೆನ್ಸಾರ್ ಮಾಡದೆ ಪ್ರಕಟಿಸುತ್ತಿದ್ದೀರಿ. ಇದು ಮೆಚ್ಚಬೇಕಾದ ಅಂಶ. “ಎಲ್ಲ ತತ್ವಗಳ ಎಲ್ಲೆ ಮೀರಿ” ಎಂಬ ಧ್ಯೇಯ ವಾಕ್ಯಕ್ಕೆ ನಿಲುಮೆಯೇ ಸಾಕ್ಷಿ .
    –ಮು ಅ ಶ್ರೀರಂಗ ಬೆಂಗಳೂರು

    ಉತ್ತರ
    • Nagshetty Shetkar's avatar
      Nagshetty Shetkar
      ಜನ 18 2014

      “ಓದುಗರ ಪ್ರತಿಕ್ರಿಯೆಗಳನ್ನು ಸೆನ್ಸಾರ್ ಮಾಡದೆ ಪ್ರಕಟಿಸುತ್ತಿದ್ದೀರಿ.” ಇದು ಸತ್ಯವಲ್ಲ! ನನ್ನ ಅನೇಕ ಕಮೆಂಟುಗಳನ್ನು ನಿರ್ವಾಹಕರು ಪ್ರಕಟಿಸಿಲ್ಲ. ನಾನು ಪ್ರತಿಭಟಿಸಿದಾಗ ಏನೇನೋ ಸಬೂಬು ಕೊಟ್ಟರು.

      ಉತ್ತರ
      • Manohar's avatar
        Manohar
        ಜನ 19 2014

        ನಿಮ್ಮ ಕಮೆಂಟಗಳು ಮತ್ತು ಅವನ್ನು ಪ್ರಕಟಿಸದಿರುವುದು!. ಸಾಧ್ಯವೇ ಇಲ್ಲ. ನಿಮ್ಮ ಇಲ್ಲಿಯ ಕಮೆಂಟುಗಳ ‘ಗುಣಮಟ್ಟ, ವಿಷಯನಿಷ್ಠತೆ’ ಎಲ್ಲ ನೋಡಿದರೆ ಮತ್ತು ಅವೂ ಕೂಡ ಪ್ರಕಟವಾಗಿರುವುದನ್ನು ಗಮನಿಸಿದರೆ, ಹಾಗಾಗಿರುವುದು ಸಾಧ್ಯವಿದೆ ಎಂದು ಅನಿಸುತ್ತದೆಯೆ? ಬಹುಶ: ನೀವು ಎಂದಿಗಿಂತ ಹೆಚ್ಚಿನ ಹಾಸ್ಯ ಸೇರಿಸಿದ್ದಿರೇನೊ. ಓದಿ, ನಕ್ಕು ನಕ್ಕು ನಿಲುಮೆಯ ಓದುಗರಿಗೆ ಆಲ್ಸರ್ ಆಗದಿರಲಿ ಎಂಬ ಮುಂಜಾರೂಗತೆಯಿಂದ ನೀವೇ ಪ್ರಕಟಿಸಿರಲಿಕ್ಕಿಲ್ಲ :ನೆನಪು ಮಾಡಿಕೊಳ್ಳಿ.

        ಉತ್ತರ
  7. Nagshetty Shetkar's avatar
    Nagshetty Shetkar
    ಜನ 18 2014

    ನಿಲುಮೆ ಇನ್ನಾದರೂ ಸುಧಾರಿಸಲಿ. ಮನುವಾದಿಗಳ ಆಶ್ರಯತಾಣವಾಗುವುದನ್ನು ಬಿಟ್ಟು ಮಾನವೀಯತೆಯ ಬೀಡಾಗಲಿ. ರಕ್ತಪೀಪಾಸುಗಳ ಧ್ವನಿಪೆಟ್ಟಿಗೆಯಾಗದೆ ದಮನಿತರ ಧ್ವನಿಯಾಗಲಿ. ನಮೋಸುರನ ಅಟ್ಟಹಾಸವನ್ನು ಬಿತ್ತರಿಸುವ ವಾಹಿನಿಯಾಗದೆ ಶೋಷಿತರ ಬೆವರಹನಿಯ ಪರಿಮಳವನ್ನು ಪಸರಿಸುವ ಗಾಳಿಯಾಗಲಿ. ಮತೀಯ ದ್ವೇಷ ಬೆಳೆಸುವ ಬೆಂಕಿಯಾಗದೆ ಮಮತೆಯ ಬೆಣ್ಣೆಯಾಗಿ ಕರಗಲಿ. ಬಾಲಗ್ರಹಪೀಡಿತರ ಬಾಲಂಗೋಚಿಯಾಗುವ ಬದಲು ದರ್ಗಾ ಸರ್ ಅವರ ವಿವೇಕದ ವಾಣಿಯನ್ನು ಆಲಿಸಲಿ.

    ನಿಲುಮೆಗೆ ನಮಸ್ಕಾರ!

    ಉತ್ತರ
    • ಕಾರ್ತಿಕ್ ಸುಬ್ಬಯ್ಯ's avatar
      ಕಾರ್ತಿಕ್ ಸುಬ್ಬಯ್ಯ
      ಜನ 18 2014

      ನೀವು ಅದು ಮಾಡಿ ಇದು ಮಾಡಿ ಅನ್ನುವ ಬದಲು ನೀವೆ ಯಾಕೆ ನೀವೇಳಿದ್ದೆಲ್ಲದರ ಬಗ್ಗೆಯೂ ನಿಲುಮೆಗೆ ಬರೆದು ಕಳಿಸಬಾರದು? ಅವರು ಪ್ರಕಟಿಸದಿದ್ದಾಗ ಮಾತನಾಡಿ.ಅದು ಬಿಟ್ಟು ಸುಮ್ಮನೇ ಹೀಗೆ ಮಾತನಾಡುವುದು ತರವಲ್ಲ

      ಉತ್ತರ
    • Manohar's avatar
      Manohar
      ಜನ 19 2014

      ಎಡಬಿಡಂಗಿಯ ಹಳಹಳಿಕೆ ಎಂದಿನಂತೆ!. ಮೊದಲು ತಲೆ, ಮಿದುಳನ್ನು ಒಳ್ಳೆ ಕ್ವಾಲಿಟಿಯ ಫಿನಾಯಿಲ್ ಹಾಕಿ ತೊಳೆದುಕೊಳ್ಳಿ. ಸುಧಾರಿಸುತ್ತಿರಿ.

      ಉತ್ತರ
      • Nagshetty Shetkar's avatar
        Nagshetty Shetkar
        ಜನ 19 2014

        ನೀವು ದಿನಾ ಫಿನಾಯಿಲ್ ಹಾಕಿ ತೊಳೆದುಕೊಂಡು ನಿಮ್ಮ ಸ್ವಂತ ಅನುಭವದ ಮೇಲೆ ಹೀಗೆ ಸಲಹೆ ನೀಡ್ತಿದ್ದೀರಾ?

        ಉತ್ತರ
        • Manohar's avatar
          Manohar
          ಜನ 19 2014

          ಅವಶ್ಯಕತೆಯಿದ್ದವರು ಮಾಡಬೇಕು. ನಿಮ್ಮ ಪರಿಸ್ಥಿತಿ ನೋಡಿದರೆ, ಡಾಕ್ಟರ್ ಹತ್ತಿರ ಹೋದರೂ ನಿಮಗೆ ಇದೇ ಸಲಹೆ ಸಿಗುತ್ತದೆ. ನಿಮ್ಮ ಪ್ರತಿಕ್ರಿಯೆಗಳು, ಆಲೋಚನಾ ಸರಣಿಯನ್ನು ಡಾಕ್ಟರಿಗೆ ತೋರಿಸಿ, ಆಮೇಲೆ ಸಲಹೆ ಕೇಳಿ ನೋಡಿ.

          ಉತ್ತರ
          • Nagshetty Shetkar's avatar
            Nagshetty Shetkar
            ಜನ 19 2014

            ಡಾಕ್ಟರ್ ಫೀಸು ಔಷಧಿ ಖರ್ಚು ನೀವು ಕೊಡ್ತೀರಾ?

            ಉತ್ತರ
            • Manohar's avatar
              Manohar
              ಜನ 19 2014

              ಪಾಪ. ಎಲ್ಲವನ್ನೂ ಬಿಟ್ಟಿಯಲ್ಲೇ ಮಾಡಿಕೊಂಡು ರೂಢಿ ಬಿದ್ದು ಬಿಟ್ಟಿದೆ!. ಅವಕಾಶಮೂರ್ತಿಗಳಿಗೆ ಕೇಳಿದ್ದಿದ್ದರೆ ಮೊನ್ನೆ ಕೊಟ್ಟ ಪ್ರಶಸ್ತಿ ಹಣದಲ್ಲಿ ಸ್ವಲ್ಪ ದುಡ್ಡು ಕೊಡುತ್ತಿದ್ದರೇನೊ ಚಿಕಿತ್ಸೆಗೆ ಮತ್ತು ಫಿನಾಯಲ್ ಗೆ.

              ಉತ್ತರ
              • Nagshetty Shetkar's avatar
                Nagshetty Shetkar
                ಜನ 19 2014

                ನಿಮ್ಮ ಪ್ರತಿಕ್ರಿಯೆಗಳು, ಆಲೋಚನಾ ಸರಣಿಯನ್ನು ಡಾಕ್ಟರಿಗೆ ತೋರಿಸಿ.

                ಉತ್ತರ
    • ಮಹೇಶ's avatar
      ಜನ 21 2014

      ನಾಗಶೆಟ್ಟಿ ಶೆಟ್ಕರ್ ರವರಂತೆ 2191 ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡದ ರಕ್ತಪೀಪಾಸುಗಳ ಧ್ವನಿಪೆಟ್ಟಿಗೆಯಾಗದೆ ದಮನಿತರ ಧ್ವನಿಯಾಗಲಿ. ನೆಲ್ಲಿ ಹತ್ಯಾಕಾಂಡ ಮಾಡಿದವರ ಅಟ್ಟಹಾಸವನ್ನು ಬಿತ್ತರಿಸುವ ವಾಹಿನಿಯಾಗದೇ ಶೋಷಿತರ ಬೆವರಹನಿಯ ಪರಿಮಳವನ್ನು ಪಸರಿಸುವ ಗಾಳಿಯಾಗಲಿ. ಮತೀಯ ದ್ವೇಷ ಬೆಳೆಸುವ ಬೆಂಕಿಯಾಗದೆ ಮಮತೆಯ ಬೆಣ್ಣೆಯಾಗಿ ಕರಗಲಿ.

      ಉತ್ತರ
      • SSNK's avatar
        ಜನ 22 2014

        “ಹಿಟ್ಲರನ ಮೊಟ್ಟೆಗಳು” ಇತ್ಯಾದಿ ಬರಹಗಳನ್ನು ಬರೆಯುವ ಲಡಾಯಿ ಬ್ಲಾಗು, ಅದನ್ನು ಟೀಕಿಸುವಂತಹ ಪ್ರತಿಕ್ರಿಯೆಗಳನ್ನು ಪ್ರಕಟಿಸುವುದೇ ಇಲ್ಲ. ವಿರೋಧವನ್ನು ಮೆಟ್ಟಿಹಾಕುವ ಇಂತಹ ಮನೋಭಾವ ಹೊಂದಿರುವವರೇ ಹಿಟ್ಲರ್, ಸ್ಟಾಲಿನ್, ಲೆನಿನ್, ಮಾವೋಗಳ ಮೊಟ್ಟೆಗಳನ್ನಿಡುವವರು.
        ಇಂತಹ ಹಿಟ್ಲರ್, ಲೆನಿನ್, ಸ್ಟಾಲಿನ್, ಮಾವೋಗಳ ಹಿಂಬಾಲಕರು ಇಲ್ಲಿ ಬಂದು “ನಿಲುಮೆ”ಯಲ್ಲಿ ಎಗರಾಡುತ್ತಾರೆ, ಬಾಯಿಗೆ ಬಂದಂತೆ ಹರಡುತ್ತಾರೆ.
        ಲಡಾಯಿ ಬ್ಲಾಗಿನ ಕೊಂಡಿಯನ್ನು ಇಲ್ಲಿ ಹಾಕುವವರು, ಮೊದಲು ತಾವು ಮೆಚ್ಚುವ ಆ ಬ್ಲಾಗಿನಲ್ಲಿ, ಎಲ್ಲ ರೀತಿಯ ಪ್ರತಿಕ್ರಿಯೆಗಳು ಬರುವಂತೆ ಹೋರಾಟ ನಡೆಸಲಿ; “ಹಿಟ್ಲರನ ಮೊಟ್ಟೆಗಳು” ಬರೆದವರ ಹಿಟ್ಲರ್ ಮನೋಭಾವವನ್ನು ಸರಿಪಡಿಸಲಿ; ಅವರ ಮನೋಭಾವ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬುದನ್ನು ಮನಗಾಣಿಸಲಿ.

        ಉತ್ತರ
        • Nagshetty Shetkar's avatar
          Nagshetty Shetkar
          ಜನ 22 2014

          ಲಡಾಯಿ ಪತ್ರಿಕೆ ಬಹಳ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದೆ. ದಮನಿತ ವರ್ಗದ ಧ್ವನಿಯಾಗಿ ಅಂತರ್ಜಾಲದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಋಣಾತ್ಮಕ ಧೋರಣೆಯ ಕಾಮೆಂಟುಗಳನ್ನು ಲಡಾಯಿ ಎಂದಿನಿಂದಲೂ ಪ್ರಕಟಿಸುತ್ತಲೇ ಬಂದಿದೆ. ಮೇಲ್ವರ್ಗದ ಅಟ್ಟಹಾಸವನ್ನು ಮೆರೆಯುವ ಪ್ರತಿಕ್ರಿಯೆಗಳಿಗೆ ಕಡಿವಾಣ ಹಾಕಿದೆ.

          ಉತ್ತರ
          • SSNK's avatar
            ಜನ 22 2014

            [[ಮೇಲ್ವರ್ಗದ ಅಟ್ಟಹಾಸವನ್ನು ಮೆರೆಯುವ ಪ್ರತಿಕ್ರಿಯೆಗಳಿಗೆ ಕಡಿವಾಣ ಹಾಕಿದೆ.]]
            ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯಕ್ಕೆ ಸ್ವಾತಂತ್ರ್ಯವಿದೆ.
            ಮತ್ತೊಬ್ಬರ ಅಭಿಪ್ರಾಯಕ್ಕೆ ಕಡಿವಾಣ ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಮನೋಭಾವ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

            ಮತ್ತೊಬ್ಬರ ಅಭಿಪ್ರಾಯ ಸರಿಯಿಲ್ಲ ಅಥವಾ ಅದು ಮೇಲ್ವರ್ಗದವರ ಅಟ್ಟಹಾಸ ಎನ್ನಿಸಿದರೆ, ಅದನ್ನು ವೈಚಾರಿಕ ಚರ್ಚೆಯ ಮೂಲಕ ಹೊಡೆದು ಹಾಕಬೇಕೇ ಹೊರತು ಪ್ರತಿಕ್ರಿಯೆಯನ್ನೇ ಮುಚ್ಚಿ ಹಾಕುವುದರಿಂದ ಅಲ್ಲ.

            ಸ್ಟಾಲಿನ್ ತನಗೆ ಬಂದ ವಿರೋಧವನ್ನು ಮೆಟ್ಟಿ ಹಾಕಿದ್ದು ಹೇಗೆ ಗೊತ್ತೇ?
            ತನ್ನ ವಿರೋಧಿಗಳನ್ನೇ ನಾಶ ಮಾಡುವ ಮೂಲಕ ವಿರೋಧವನ್ನು ಮೆಟ್ಟಿಹಾಕಿದ ಆತ!!

            ವಿರೋಧಿಗಳ ಧ್ವನಿ ಕೇಳದಂತೆ, ಅವರ ಪ್ರತಿಕ್ರಿಯೆಯನ್ನೇ ಪ್ರಕಟಿಸದ ಲಡಾಯಿ ಪ್ರಕಾಶನದ ಬ್ಲಾಗು, ಸ್ಟಾಲಿನ್ ಮನೋಭಾವದ ಸೂಚಕವಾಗಿದೆ.
            ಅದನ್ನು ಸಮರ್ಥಿಸುವುದರ ಮೂಲಕ ನೀವು ಸ್ಟಾಲಿನ್ ಮತ್ತು ಹಿಟ್ಲರ್ ಅವರನ್ನೇ ಸಮರ್ಥಿಸುತ್ತಿರುವಿರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

            ಉತ್ತರ
  8. turuvekereprasad's avatar
    ಜನ 19 2014

    ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ನಿಲುಮೆ ತಂಡಕ್ಕೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು. ಬರಹಗಾರರ ಸೀರಿಯಸ್ ಚಿಂತನೆಗಳ ಮಧ್ಯೆ ನನ್ನ ವಿಡಂಬನೆಗಳಿಗಿಷ್ಟು ಅವಕಾಶ ಮಾಡಿಕೊಟ್ಟಿದ್ದಕ್ಕೆ ವಿಶೇಷ ಧನ್ಯವಾದಗಳು
    ~ತುರುವೇಕೆರೆ ಪ್ರಸಾದ್

    ಉತ್ತರ
  9. Balachandra Bhat's avatar
    ಜನ 19 2014

    ಶುಭಾಶಯಗಳು. ನಾನು ಯಾವತ್ತಿಗೂ ನಿಲುಮೆಯ ಮೆಚ್ಚಿನ ಓದುಗನಾಗಿದ್ದರೂ, ವಚನ ಸಾಹಿತ್ಯದ ಬಗೆಗೆ ನಡೆದ ಚರ್ಚೆ ಎಲ್ಲಕ್ಕಿಂತಲೂ ಭಿನ್ನವಾಗಿಯೆ ತೋರಿತು. ಯಾಕೆಂದರೆ ಆ ಚರ್ಚೆ ಬಹಳಷ್ಟು ಆಯಾಮಗಳನ್ನು ತಿಳಿದುಕೊಳ್ಳುವಲ್ಲಿ ಸಹಾಯ ಮಾಡಿತು. ಪ್ರಜಾವಾಣಿಯ ಪ್ರಗತಿಪರರ ಭಂಡತನ ಬೆತ್ತಲಾದದ್ದಲ್ಲದೆ, ಕನ್ನಡ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವ ಚಿಂತಕರ(!) ಪೂರ್ವಾಗ್ರಹಪೀಡಿತನ, ಕಾಲೇಜ್ ಗಳಲ್ಲಿ ವಿಧ್ಯಾರ್ಥಿನಿಯರ ಮೇಲೆ ನಡೆಯುವ ಸೆಕ್ಸುವಲ್ ಹರಾಸ್ಮೆಂಟ್ ನಷ್ಟೆ ಗಂಭೀರ ವಿಷಯ ಎಂಬ ಸತ್ಯ ಬೆಳಕಿಗೆ ಬಂತು.

    ಉತ್ತರ
    • Nagshetty Shetkar's avatar
      Nagshetty Shetkar
      ಜನ 19 2014

      ಈ ಮನುಷ್ಯ ಇಸ್ಲಾಮ್ ಬಗ್ಗೆ ತೀರ ಕೀಳುದರ್ಜೆಯ ಆರೋಪಗಳನ್ನು ಮಾಡಿದ್ದ. ಇಂತಹವರು ನಿಲುಮೆಯ ಪೋಷಕರು. ಇನ್ನಾದರೂ ನಿಲುಮೆ ಸುಧಾರಿಸಲಿ.

      ಉತ್ತರ
      • Balachandra Bhat's avatar
        ಜನ 19 2014

        Mr. Shetkar have u ever showed prudence to talk rationally and been argumentative? All you have done was escaping out of debate exposing your sheer cowardice and hypocrisy just by mud-slinging. If you have guts or conscience left with you, come to debate and face the truth instead of hiding behind fairy tales woven by phonies like you. Shame on you.

        ಉತ್ತರ
        • Nagshetty Shetkar's avatar
          Nagshetty Shetkar
          ಜನ 19 2014

          ಕನ್ನಡದಲ್ಲಿ ಬರೆಯಿರಿ.

          ಉತ್ತರ
          • ವಿಶ್ವಾಸ್ ಮಹಾಂತೇಶ್'s avatar
            ವಿಶ್ವಾಸ್ ಮಹಾಂತೇಶ್
            ಜನ 20 2014

            ರೀ ನಾಗಶೆಟ್ಟಿ, ನಿಮ್ಮ ಮುಖಾರವಿಂದಕ್ಕೆ ಕನ್ನಡದಲ್ಲಿ ಬರೆದರೂ ಅಷ್ಟೇ, ಇಂಗ್ಲೀಶ್ ನಲ್ಲಿ ಬರೆದರೂ ಅಷ್ಟೇ 😛

            ತಗೊಳ್ಳಿ…ನಿಮಗೋಸ್ಕರ ಬಾಲಚಂದ್ರ ಹೇಳಿದ್ದನ್ನು ಕನ್ನಡಕ್ಕೆ ಅನುವಾದಿಸಿ ಹೇಳುತ್ತೇನೆ:

            “ಮಿ.ಶೆಟ್ಕರ್, ನೀವು ಎಂದಾದರೂ ವಿಚಾರಪರರಾಗಿ ವಾದಮಂಡಿಸುವ ವಿವೇಕ ಅಥವಾ ದೂರದೃಷ್ಟಿ ತೋರಿದ್ದೀರಾ? ನೀವು ಯಾವಾಗಲೂ ಇನ್ನೊಬ್ಬರ ಮೇಲೆ ಕೆಸರೆರಚುವ ಮೂಲಕ ನಿಮ್ಮ ಹೇಡಿತನ ಹಾಗೂ ಕಪಟತನವನ್ನು ಮತ್ತೆ ಮತ್ತೆ ತೋರಿಸಿ ತಪ್ಪಿಸಿಕೊಂಡು ಓಡಿದ್ದೀರಿ, ಅಷ್ಟೇ! ನಿಮ್ಮಲ್ಲಿ ಧೈರ್ಯ ಹಾಗೂ ಆತ್ಮಸಾಕ್ಷಿಯಿದ್ದರೆ ಚರ್ಚೆಗೆ ಬನ್ನಿ ಹಾಗೂ ನಿಮ್ಮಂಥವರೇ ಇನ್ನೊಂದಿಷ್ಟು ವಂಚಕರು ಹೆಣೆದಿರುವ ಯಕ್ಷಕಥೆಗಳ ಸುಳ್ಳಿನ ಹಿಂದೆ ಅಡಗಿ ಕೂರುವುದು ಬಿಟ್ಟು ಸತ್ಯವನ್ನು ಎದುರಿಸಿ. ನಾಚಿಕೆಯಾಗಬೇಕು ನಿಮಗೆ 😛 ”

            ಇಷ್ಟೇ! ಈಗೇನಾದರೂ ಹೇಳುವುದಿದೆಯೇ!? 🙂 😛

            ಉತ್ತರ
            • Balachandra Bhat's avatar
              ಜನ 20 2014

              @Vishwas, 🙂 ಧನ್ಯವಾದಗಳು ಕನ್ನಡಕ್ಕೆ ಅನುವಾದಿಸಿದ್ದಕ್ಕೆ. ನೀವು ಹೇಳಿದಂತೆ ಅವರಿಗೆ ಯಾವ ಭಾಷೆಯಲ್ಲಿ ಹೇಳಿದರೂ ಅಷ್ಟೆ. ಬುದ್ಧಿ ಬರದು

              ಉತ್ತರ
              • Nagshetty Shetkar's avatar
                Nagshetty Shetkar
                ಜನ 21 2014

                ಈ ಮನುಷ್ಯ ಇಸ್ಲಾಮ್ ಬಗ್ಗೆ ತೀರ ಕೀಳುದರ್ಜೆಯ ಆರೋಪಗಳನ್ನು ಮಾಡಿದ್ದ. ಈತನಿಗೆ ಬುದ್ಧಿ ಎಂದು ಬರುವುದು?

                ಉತ್ತರ
      • ಶ್ರೀಕಾಂತ್'s avatar
        ಶ್ರೀಕಾಂತ್
        ಜನ 20 2014

        ಇಸ್ಲಾಂ ಅಲ್ಲಿ ಕೀಳು ದರ್ಜೆ ಆರೋಪ ಮಾಡುವಂತಹ ಯಾವ ವಿಚಾರಗಳಿವೆ? ಅವೆಲ್ಲಾ ಕೀಳುಮಟ್ಟಕ್ಕೂ ಅರ್ಹತೆ ಇಲ್ಲದವು. ಅದೇಕೆ ಉನ್ನತ ಮೌಲ್ಯಗಳನ್ನು ಹೊಂದಿದ ಬಸಾದ್ವತಿಗಳು ಇಸ್ಲಾಂ ಹಿಂದೆ ಬಿದ್ದು ಬಸವಣ್ಣನ ಹೆಸರು ಕೆಡಿಸುತ್ತಿದ್ದಾರೋ ತಿಳಿಯುತ್ತಿಲ್ಲ. :p

        ಉತ್ತರ
        • ನವೀನ's avatar
          ನವೀನ
          ಜನ 23 2014

          ಶ್ರೀಕಾಂತ್, ನೀವು ಈ ಶೆಟ್ಕರ್ ಅವರೆ ಜೊತೆ ವಾದ ಮಾಡುತ್ತ ಅವರನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ಅವರಂತೆ ಲೂಸ್ ಟಾಕ್ ಮಾಡುತ್ತಿರುವುದು ಅಪಾಯಕಾರಿಯಾಗಿದೆ.ಇದನ್ನು ನಿಲ್ಲಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಸೂಕ್ತವಾದುದಾಗಿದೆ

          ಉತ್ತರ
          • Nagshetty Shetkar's avatar
            Nagshetty Shetkar
            ಜನ 23 2014

            ಅಲ್ಪಸಂಖ್ಯಾತರ ಬಗ್ಗೆ ಅಗ್ಗದ ಮಾತುಗಳನ್ನಾಡುವುದೇ ನಿಲುಮೆಯ ನಮೋಸೇನೆಯವರ ಹವ್ಯಾಸ. ತಪ್ಪಿಗೆ ತಕ್ಕ ಶಾಸ್ತಿ ಆಗಲಿದೆ ಸದ್ಯದಲ್ಲೇ.

            ಉತ್ತರ
            • ನವೀನ's avatar
              ನವೀನ
              ಜನ 23 2014

              ಶೆಟ್ಕರ್ ಸರ್,
              ನೀವು ಈ ರೀತಿಯ ’ಬೆದರಿಕೆಯನ್ನು/ಭಯೋತ್ಪಾದನೆ’ ನಿಲ್ಲಿಸುವುದು ಒಳ್ಳೆಯ ನಿರ್ಧಾರವಾಗುತ್ತದೆ.ಶರಣರೆಂದು ಕರೆಸಿಕೊಳ್ಳುವವರು ಧಮಕಿ ಹಾಕುವುದು ಸೋಜಿಗವಾದ ವಿದ್ಯಾಮಾನವೇ ಆಗಿದೆ

              ಉತ್ತರ
              • Nagshetty Shetkar's avatar
                Nagshetty Shetkar
                ಜನ 23 2014

                ಶರಣರಾಗಿರುವುದಕ್ಕೆ ನಿಮ್ಮ ಜೊತೆ ಇಷ್ಟೊಂದು ಸಹನೆ ತಾಳ್ಮೆಯಿಂದ ಮಾತನಾಡುತ್ತಿರುವುದು. ನಿಮ್ಮ ಸೈಬರ್ ಸೇನೆಯವರಂತೂ ನಾನು ಶರಣನೆಂಬ ಪರಿಜ್ಞಾನವೂ ಇಲ್ಲದವರಂತೆ ಅಸಹ್ಯವಾಗಿ ಟೀಕೆ ಮಾಡುತ್ತಲೇ ಬಂದಿದ್ದಾರೆ. ಅವರನ್ನೇಕೆ ನೀವು ತರಾಟೆಗೆ ತೆಗೆದುಕೊಳ್ಳುತ್ತಿಲ್ಲ?

                ಉತ್ತರ
                • ನವೀನ's avatar
                  ನವೀನ
                  ಜನ 23 2014

                  ಬುದ್ದಿ ಕಲಿಸಲು ಶರಣರು ಸೈನ್ಯವೊಂದನ್ನು ಕಟ್ಟಿಕೊಂಡಿರುವಂತಿದೆ.ಶರಣರೇ ದಂಡೆತ್ತಿ ಹೊರಟು ನಿಂತಾಗ ನಿಮ್ಮೆದುರು ನಿಂತ ಆ ಸಾಮಾನ್ಯರು (ಆಮ್ ಆದ್ಮಿಗಳು) ಮಾತು ಕೇಳಬಹುದು ಅನ್ನುವ ನಂಬಿಕೆ ನನಗಿಲ್ಲವಾಗಿದೆ

                  ಉತ್ತರ
  10. Umesh's avatar
    Umesh
    ಜನ 19 2014

    ನಾಲ್ಕರ ನಿಲುಮೆಗೆ ಶುಭಾಶಯಗಳು. ಇದೇ ರೀತಿ ದಿಟ್ಟ ನಿಲುವಿನಿಂದ “ಹುಸಿ ಹಾಗು ಸ್ವಯಂಗೋಷಿತ” ಪ್ರಗತಿಪರರ ಬಣ್ಣ ಬಯಲು ಮಾಡುತ್ತ ಬನ್ನಿ.

    ಉತ್ತರ
  11. Shanmukha A's avatar
    Shanmukha A
    ಜನ 19 2014

    ಶುಭಾಯಗಳ ಜೊತೆಗೆ ನಮ್ಮ ಸಂಶೋದನಾ ತಂಡದ ಪರವಾಗಿ ಕೃತಜ್ಞತೆಗಳೂ ಸಹ. ಒಂದು ಐಡಿಯಾಲಜಿಯನ್ನು ಗಟ್ಟಿಯಾಗಿ ಅಪ್ಪಿಕೊಂಡವರಿಗೆ ಆ ನಂಬಿಕೆಗಳಿಗೆ ಹೊರತಾಗಿ ವಾದಿಸುವವರೆಲ್ಲರೂ ತಮ್ಮ ವಿರೋಧಿಗಳು ಮಾತ್ರವಲ್ಲ ನಿರ್ನಾಮ ಮಾಡಬೇಕಿರುವ ಶತ್ರುಗಳು ಎನ್ನುವ ಕ್ರೌರ್ಯ ಬೌದ್ದಿಕ ವಲಯದಲ್ಲಿ ಬೆಳೆಯುತ್ತಿದೆ. ಈ ಸಂಧರ್ಭದಲ್ಲಿ ನಿಲುಮೆಯಂತಹ ವೇಧಿಕೆ ದೊಡ್ಡ ಆಶಾ ಕಿರಣ. ಬೌದ್ದಿಕ ಸ್ಥಿತ್ಯಂತರದ ಈ ಸನ್ನಿವೇಶದಲ್ಲಿ ಈ ವೇಧಿಕೆ ಗುರುತರವಾದ ಹೊಣೆಗಾರಿಕೆ ವಹಿಸಲಿದೆ ಎನಿಸುತ್ತಿದೆ.

    ಷಣ್ಮುಖ ಎ

    ಉತ್ತರ
    • Nagshetty Shetkar's avatar
      Nagshetty Shetkar
      ಜನ 19 2014

      ’ವೇದಿಕೆ’ಯ ಜಾಗದಲ್ಲಿ ’ವೇಧಿಕೆ’ ಬಳಸಿರುವುದನ್ನು ಕಂಡು ವೇದನೆ ಆಗುತ್ತಿದೆ, ಷಣ್ಮುಖ ಅವರೆ.

      ಉತ್ತರ
    • Nagshetty Shetkar's avatar
      Nagshetty Shetkar
      ಜನ 19 2014

      ಷಣ್ಮುಖ ಅವರದ್ದು ಜಾಣ ಕುರುಡು. ಬಾಲು ಅವರ ಕ್ರೌರ್ಯದ ಕತೆಗಳು ಜನಜನಿತವಾಗಿವೆ. ಡಿ ಎಸ್ ನಾಗಬೂಷಣ ಬಾಲು ಅವರ ಕ್ರೌರ್ಯದ ಬಗ್ಗೆ ಬರೆದ ಲೇಖನ ಬಾಲಂಗೋಚಿಗಳ ವಲಯದಲ್ಲಿ ಶಾಕ್ ವೇವ್ಸ್ ಉಂಟು ಮಾಡಿತ್ತು. ಚೆನ್ನಿ ಸರ್ ಅವರು academic obscenity ಎಂದು ಕರೆದದ್ದು ಬಾಲು ಅವರ ಕ್ರೌರ್ಯವನ್ನಲ್ಲವೆ?

      ಉತ್ತರ
      • Mukhesha's avatar
        Mukhesha
        ಜನ 19 2014

        ಈ ತಾಣದಲ್ಲಿ (ಕೆಲಸವೇ ಇಲ್ಲದೇ ಹತಾಶಗೊಂಡಿದ್ದಾಗ) ಕಾಯಕವನ್ನು ಕಂಡುಕಂಡಿರುವ ಮಾನ್ಯ ‘ನಾಗಶೆಟ್ಟ ಶೆಟ್ಕರ್’ ರವರಿಗೆ “ಹಾಸ್ಯಶ್ರೀ…..” “ವಿಧೂಷಕಶ್ರೀ…” ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುತ್ತಿದ್ದೇನೆ. ಎಲ್ಲರೂ ಅನುಮೋದಿಸಿ ಅವರನ್ನು ಗೌರವಿಸಬೇಕಾಗಿ ವಿನಂತಿ……

        ಉತ್ತರ
        • Mukhesha's avatar
          Mukhesha
          ಜನ 19 2014

          ತಿದ್ದುಪಡಿಯೊಂದಿಗೆ:

          ಈ ತಾಣದಲ್ಲಿ (ಕೆಲಸವೇ ಇಲ್ಲದೇ ಹತಾಶಗೊಂಡಿದ್ದಾಗ) ಕಾಯಕವನ್ನು ಕಂಡುಕೊಂಡಿರುವ ಮಾನ್ಯ ‘ನಾಗಶೆಟ್ಟಿ ಶೆಟ್ಕರ್’ ರವರಿಗೆ “ಹಾಸ್ಯಶ್ರೀ…..” “ವಿಧೂಷಕಶ್ರೀ…” ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುತ್ತಿದ್ದೇನೆ. ಎಲ್ಲರೂ ಅನುಮೋದಿಸಿ ಅವರನ್ನು ಗೌರವಿಸಬೇಕಾಗಿ ವಿನಂತಿ……

          ಉತ್ತರ
          • akash's avatar
            akash
            ಜನ 19 2014

            nimma salahege modalu nannade anumodane ide.

            ಉತ್ತರ
        • Nagshetty Shetkar's avatar
          Nagshetty Shetkar
          ಜನ 19 2014

          ಏನ್ಬೇಕಾದ್ರೂ ಮಾಡಿ. ಘೆಂಟ್ ಕಡೆ ತಿರುಗಿ ಗಂಟೆಗೊಮ್ಮೆ ನಮಾಜು ಮಾಡುವ ಬಾಲಂಗೋಚಿಗಳಿಗೆ ನಾನು ಹೆದ್ರೋದಿಲ್ಲ.

          ಉತ್ತರ
          • akash's avatar
            akash
            ಜನ 19 2014

            ನೀವು ಮೆಕ್ಕಾ ಕಡೆಗೆ ತಿರುಗಿ ನಮಾಜು ಮಾಡ್ತೀರಿ. ನಾವು ಘೆಂಟ್ ಕಡೆ ತಿರುಗಿ ನಮಾಜ್ ಮಾಡ್ತೇವೆ?? ತಪ್ಪೇನು ಸಾರ್.

            ಉತ್ತರ
  12. naveennayak799's avatar
    ಜನ 19 2014

    ಶುಭವಾಗಲಿ ನಿಲುಮೆಗೆ ಮತ್ತು ನಿರ್ವಾಹಕರಿಗೆ. ಎಲ್ಲರಿಗೂ ಸಮಾನ ಅವಕಾಶ ನೀಡುವುದರಿಂದ ನನಗೆ ಹೆಚ್ಚು ಇಷ್ಟವಾಗಿರುವ ತಾಣವಿದು. ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾದ್ಯಮಗಳ ಬಗ್ಗೆ ಭ್ರಮನಿರಸನಗೊಂಡಾಗ ನನಗೆ ಉಪಯುಕ್ತವಾಗಿ ಕಂಡಿದ್ದೊಂದೆ ಸಾಮಾಜಿಕ ತಾಣ ಮತ್ತು ಕೆಲವು ಬ್ಲಾಗ್ ಗಳು. ಇಲ್ಲಿ ಬರುವ ವಿಚಾರಗಳು ನನಗೆ ವೈಯಕ್ತಿವಾಗಿ ಬೆಳವಣಿಗೆಯಲ್ಲಿ ಸಹಕಾರಿಯಾಗಿದೆ ಎಂಬುದೂ ನನಗೆ ಖುಷಿಯ ಸಂಗತಿ. ಕೆಲವೊಂದೆ ಚರ್ಚೆಗಳು ಸಹ ಉತ್ತಮವಾಗಿ ಮೂಡಿ ಬರುತ್ತಿದೆ. ಹೀಗೆ ಮುಂದೆ ಬೆಳೆಯುತ್ತಾ ಸಮಾಜದ ಉತ್ತಮ ಸಂದೇಶ ನೀಡುವತ್ತ ಮಹತ್ತರ ಸಾಧನೆಗೈಯಲ್ಲಿ ಎಂಬುದು ನನ್ನ ಆಸೆ. ನನ್ನ ಲೇಖನಗಳಿಗೂ ನೀವು ಬೆಂಬಲಿಸುತ್ತಿರುವುದರಿಂದ ಈ ತಾಣದಲ್ಲಿ ನನಗೂ ಭಾಗವಹಿಸಲು ಅವಕಾಶ ಕೊಟ್ಟ ನಿಮಗೆ ಧನ್ಯವಾದಗಳು.

    ಉತ್ತರ
    • ನಿಲುಮೆ's avatar
      naveennayak799
      ಜನ 19 2014

      ತಿದ್ದುಪಡಿ – ಕೆಲವೊಂದು ಚರ್ಚೆಗಳು ಸಹ ಉತ್ತಮವಾಗಿ ಮೂಡಿ ಬರುತ್ತಿದೆ. ಹೀಗೆ ಮುಂದೆ ಬೆಳೆಯುತ್ತಾ ಸಮಾಜಕ್ಕೆ ಉತ್ತಮ ಸಂದೇಶ ನೀಡುವತ್ತ ಮಹತ್ತರ ಸಾಧನೆಗೈಯಲ್ಲಿ ಎಂಬುದು ನನ್ನ ಆಸೆ.

      ಉತ್ತರ
  13. SSNK's avatar
    ಜನ 20 2014

    ನಾಲ್ಕು ವರ್ಷ ಪೂರೈಸಿದ್ದಕ್ಕಾಗಿ ಅಭಿನಂದನೆಗಳು.
    ಅಂತರ್ಜಾಲದಲ್ಲಿ ನಮಗಿಷ್ಟ ಬಂದಂತೆ ಲೇಖನಗಳನ್ನು ಬರೆಯಬಹುದು, ಬ್ಲಾಗಿಸಲೂಬಹುದು.
    ಆದರೆ, ಒಂದು ತಾಣವನ್ನು ಮಾಡಿ, ಅದಕ್ಕೆ ಬರಹಗಾರರನ್ನೂ ಮತ್ತು ಓದುಗರನ್ನೂ ಕರೆತರುವುದು ಸುಲಭದ ಮಾತಲ್ಲ.
    ಯಾವುದೇ ಲಾಭದ ಅಪೇಕ್ಷೆಯಿಲ್ಲದೆ, ಜಾಹಿರಾತುಗಳನ್ನೂ ಹಾಕದೇ, ಕೇವಲ ‘ಚರ್ಚಾ ವೇದಿಕೆ’ಯಾಗಿ ಕೆಲಸ ಮಾಡುತ್ತಿರುವುದು ಇಂದಿನ ಕಾಲದಲ್ಲಿ ಅಪರೂಪದ ಸಂಗತಿ.

    ಕೆಲವರು ನಿಮ್ಮನ್ನು ಎಡಂಥೀಯರೆಂದಿರುವುದನ್ನು ಓದಿದ್ದೇನೆ; ಕೆಲವರು ನಿಮ್ಮನ್ನು ಬಲಪಂಥೀಯರೆಂದು ಪದೇಪದೇ ಹೇಳುತ್ತಿರುತ್ತಾರೆ. ನೀವು ಪ್ರಕಟಿಸುವ ಲೇಖನಗಳು ಮತ್ತು ಪ್ರತಿಕ್ರಿಯೆಗಳು ನಿಮ್ಮ ‘ಸ್ವಂತದ್ದಲ್ಲ’ ಎನ್ನುವ ತಿಳುವಳಿಕೆಯಿಲ್ಲದೇ ಹೀಗಾಗಿರಬಹುದು ಎಂದು ತಿಳಿಯುತ್ತೇನೆ. ಎಲ್ಲ ರೀತಿಯ ವಾದಗಳಿಗೂ ಸಮಾನ ವೇದಿಕೆಯಾಗಿ, ಎಲ್ಲರಿಗೂ ಬರೆಯಲು ಅವಕಾಶ ಮಾಡಿಕೊಡುತ್ತಿರುವುದಕ್ಕಾಗಿ ಧನ್ಯವಾದಗಳು.

    ‘ನಿಲುಮೆ’ ಇದೇ ರೀತಿ ದಶಕವನ್ನೂ ಪೂರೈಸಲಿ, ಇನ್ನೂ ಹೆಚ್ಚು ಓದುಗರು-ಬರಹಗಾರರು ‘ನಿಲುಮೆ’ಗೆ ಬಂದು ತಮ್ಮ ನಿಲುಮೆಯನ್ನು ತೋರಲಿ ಎಂದು ಹಾರೈಸುವೆ.

    ಉತ್ತರ
  14. ASHOK KUMAR VALADUR's avatar
    ASHOK KUMAR VALADUR
    ಜನ 21 2014

    ಶುಭವಾಗಲಿ ನಿಲುಮೆಗೆ ಮತ್ತು ನಿರ್ವಾಹಕರಿಗೆ.ನಾಲ್ಕು ವರ್ಷ ಪೂರೈಸಿದ್ದಕ್ಕಾಗಿ ಅಭಿನಂದನೆಗಳು.

    ಉತ್ತರ
  15. KP Bolumbu's avatar
    ಜನ 28 2014

    ನಿಲುಮೆಯ ಸಂಭ್ರಮ ನಮ್ಮೆಲ್ಲರದು. ನಿಲುಮೆಗೆ ಒಳಿತಾಗಲಿ.

    ಉತ್ತರ
  16. Nagshetty Shetkar's avatar
    Nagshetty Shetkar
    ಜನ 31 2014

    [[{“ಔರಂಗಜೀಬನಂತ ಮಹಾನ್ ವ್ಯಕ್ತಿ ಹಾಗೆಲ್ಲ ಬರೆದಿರುವುದು ಸಾಧ್ಯವೇ ಇಲ್ಲ. ಈ ವೈಧಿಕಶಾಹಿಗಳು ತಿರುಚಿ ತಮಗೆ ಬೇಕಾದಂತೆ ಅನುವಾದಿಸಿಕೊಂಡಿದ್ದಾರಷ್ಟೇ. ನೀವು ಮೂಲ ಗ್ರಂಥದಿಂದಲೇ ಪ್ರೂಫ್ ಕೊಡಿ.” ನೀವು ನನಗೆ ಹೇಳಿದ ಉತ್ತರ ಇದಾಗಿತ್ತು.]]

    ಕ್ಷಮಿಸಿ ಇದು ನಾನು ಹೇಳಿದ ಉತ್ತರವಲ್ಲ, ಯಾರೋ ನನ್ನ ಹೆಸರಿನಲ್ಲಿ ಕೊಟ್ಟ ಉತ್ತರ. ನೀವೇ ನನ್ನ ಹೆಸರಿನಲ್ಲಿ ಕಾಮೆಂಟ್ ಬರೆದದ್ದು ಅಂತ ಅನುಮಾನ.

    [[ಶಾರು ಅವರೆ, ನಿಮ್ಮ ಅಸಲಿಯತ್ ಏನು ಅಂತ ಸದ್ಯದಲ್ಲೇ ಬಯಲಾಗಲಿದೆ. ವೈಟ್ ಆಂಡ್ ವಾಚ್. ಅಂತಾ ಉತ್ತರ ಕೊಡುತ್ತೀರಿ. ]]

    ಹೌದು, ನೀವೇಕೆ ನನ್ನ ಹೆಸರಿನಲ್ಲಿ ಕಾಮೆಂಟ್ ಮಾಡಿರಿ? ಅದು ತಪ್ಪಲ್ಲವೇ? ಅಥವಾ ತಪ್ಪು ಅಂತ ನಿಮಗೆ ಗೊತ್ತಿಲ್ಲವೇ?

    [[ನಾನು ಕೇಳಿದ ಪ್ರಶ್ನೆಗೆ ಪ್ರತಿ ಸಲವೂ ಏನೋ ಉತ್ತರ ನೀಡಿ ಚರ್ಚೆಯ ಹಾದಿ ತಪ್ಪಿಸುತ್ತಿದ್ದೀರಿ ವಿನಃ ಕೇಳಿದ ಪ್ರ‍ಶ್ನೆಗೆ ಉತ್ತರವೇ ಇಲ್ಲ. ಇಲ್ಲಿ ನಿಮ್ಮ ಅಸಲಿಯತ್ ಅಂದರೆ ಏನು?? ನಾನೇನು ನಕಲಿ ಹೇಳಿರುವೆ? ಯಾವುದಕ್ಕಾಗಿ ನಾನು ಕಾಯಬೇಕು? ವಿಚಿತ್ರ ಉತ್ತರ ನಿಮ್ಮದಾಗಿರುತ್ತದೆ. ಚರ್ಚೆಗೆ ಸಂಭಂಧಿಸಿದಂತೆ ನೀವ್ಯಾಕೆ ಉತ್ತರಿಸುವದಿಲ್ಲ?? ಏನೋ ಹೇಳಿ ಎತ್ತಲೋ ಚರ್ಚೆಯನ್ನು ಒಯ್ಯುತ್ತೀರಲ್ಲಾ ಯಾಕೆ??]]

    ಅಸಲಿಯತ್ ಅಂದರೆ ನಿಮ್ಮ ನಿಜವಾದ ಬಣ್ಣ.

    ಉತ್ತರ
    • ಶೆಟ್ಕರ್ ಅವರೇ,

      ನಿಮ್ಮ ಹೆಸರಿನಲ್ಲಿ ಇನ್ಯಾರೋ ಬರೆಯುತಿದ್ದಾರೆ ಅನ್ನುತಿದ್ದೀರಿ.ನೀವು ಈಗ ಬರೆಯುತ್ತಿರುವ ರೀತಿಯಲ್ಲಿ, ಅಸಲಿ ಶೆಟ್ಕರ್ ಯಾರು,ನಕಲಿ ಶೆಟ್ಕರ್ ಯಾರು ಅಂತ ಗೊತ್ತಾಗುತ್ತಿಲ್ಲ,ಅದನ್ನು ಪತ್ತೆಹಚ್ಚುವಷ್ಟು ಪುರುಸೊತ್ತು ನಮಗಿಲ್ಲ.

      ಯಾರೋ ಕೆಲಸವಿಲ್ಲದವರು ನಿಮ್ಮ ಹೆಸರಿನಲ್ಲಿ ಬರೆಯದಂತೆ ತಡೆಯಲು ನಿಮಗೊಂದು ದಾರಿಯಿದೆ.ನೀವು ಇಲ್ಲಿ ಕಮೆಂಟು ಮಾಡುವಾಗ ನಿಮ್ಮ ಫೇಸ್ಬುಕ್ ಅಥವಾ ಗೂಗಲ್ ಅಕೌಂಟ್ ಮೂಲಕ ಮಾಡಬಹುದು.ಆಗ ಯಾರು ನಿಮ್ಮ ಹೆಸರನ್ನು ನಕಲು ಮಾಡಲಾರರು(ಯಾರದರೂ ಮಾಡುತಿದ್ದರೆ).

      ಉತ್ತರ
      • Nagshetty Shetkar's avatar
        Nagshetty Shetkar
        ಫೆಬ್ರ 3 2014

        ಮಿ. ರಾಕೇಶ್ ಶೆಟ್ಟಿ, ನಿಮ್ಮ ಸಲಹೆ ಸಾಧುವಾದದ್ದು. ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸುತ್ತೇನೆ. ಅಸಲಿ ಯಾರು ಅಂತ ಕಮೆಂತುಗಳಲ್ಲಿ ಮಂಡಿತವಾದ ವಿಚಾರಗಳ ಪ್ರಖರತೆಯೇ ಹೇಳುತ್ತದೆ. ನಕಲಿಗಳ ಹಾಸ್ಯಾಸ್ಪದ ವಿಚಾರಗಳು ಎಂತಹ ಮೂರ್ಖನಿಗೂ ಹೊಡೆದು ಕಾಣುತ್ತವೆ, ತಮಗೂ. ಅಲ್ಲವೇ?

        ಉತ್ತರ
  17. ಶಾರು's avatar
    ಶಾರು
    ಜನ 31 2014

    ನಿಮ್ಮ ಹೆಸರಲ್ಲಿ ಕಮೆಂಟ ನನ್ಯಾಕೆ ಬರೆಯಲಿ? ಬರೆಯಬೇಕೆಂದರೆ ನಿಮ್ಮ ಈ ಮೇಲ್ ಐ.ಡಿ ಬೇಕಲ್ಲವೆ?? ಇನ್ನು ನಿಮ್ಮನ್ನು ಪ್ರಶ್ನೆ ಕೇಳುತ್ತಿರುವ ನಾನೇ ಏಕೆ ಪ್ರಶ್ನೆ ಸೃಷ್ಟಿಸುತ್ತೇನೆ?? ನಿಮ್ಮ ವಾದ ವಿಚಿತ್ರವಾಗಿದೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments