ವಿಷಯದ ವಿವರಗಳಿಗೆ ದಾಟಿರಿ

Archive for

30
ಡಿಸೆ

ಕೇಜ್ರಿವಾಲ್ ಮತ್ತು ಮೋದಿ – ಹೀಗೊಂದು ಮುನ್ನೋಟ

– ಗಣೇಶ್ ಕೆ. ದಾವಣಗೆರೆ

ಮೋದಿ Vs ಕೇಜ್ರಿವಾಲ್ರಾಹುಲ ಗಾಂಧೀ ಮತ್ತು ಅರವಿಂದ ಕೇಜ್ರಿವಾಲ್ ಒಂದೇ ವಯಸ್ಸಿನವರು. ಇಬ್ಬರಿಗೂ ಎಷ್ಟು ವ್ಯತ್ಯಾಸಗಳಿವೆ. ಒಬ್ಬವ ತೀರಾ ಎಳಸು. ಇನ್ನೊಬ್ಬವ ಜನರ ಗಮನವನ್ನ ತನ್ನ ಮಾತುಗಳತ್ತ ಸೆಳೆದ ಯುವಕ. ಹೊಸ ಹೊಸ ಚಿಂತನೆಗಳನ್ನ ಹರಿಯಬಿಟ್ಟವ. ಆಡಳಿತದಲ್ಲಿ ಪಳಗಿದ ಮೋದಿಗೆ ರಾಹುಲ ಯಾವ ರೀತಿಯಲ್ಲೂ ಸರಿಸಮನಲ್ಲ. ಜೊತೆಗೆ, ಪ್ರತಿಸ್ಪರ್ಧಿಯೂ ಅಲ್ಲ. ರಾಹುಲಗಾಂಧೀ ವಯಸ್ಸಿನವನೇ ಆದ ಕೇಜ್ರಿವಾಲ್ ಯಾವ ರಾಜಕೀಯ ಅನುಭವವೂ ಇಲ್ಲದೇ ಪಕ್ಷವೊಂದನ್ನ ಕಟ್ಟಿ ಆರು ತಿಂಗಳಲ್ಲಿ ಆಧಿಕಾರದ ಹೊಸ್ತಿಲತ್ತ ತಂದು ನಿಲ್ಲಿಸುವುದು ಸಾಮಾನ್ಯ ಸಂಗತಿಯಲ್ಲ.

ನಮ್ಮೆಲ್ಲ ಪೂರ್ವಾಗ್ರಹಗಳನ್ನ ಬದಿಗಿಟ್ಟು ಈ ಯಶಸ್ಸನ್ನ ಗಮನಿಸಬೇಕಾದ ಅಗತ್ಯವಿದೆ. ಕೆಲವರಿಗೆ ಕೇಜ್ರಿವಾಲನನ್ನ ಹೊಗಳಿದರೆ, ಮೆಚ್ಚಿಕೊಂಡರೆ, ಮೋದಿ ಗತಿಯೇನು ಅನ್ನುವ ಚಿಂತೆ. ದೆಹಲಿಯಲ್ಲಿ ಕಾಂಗ್ರೇಸ್ ವಿರೋಧಿ ಅಲೆ ಇತ್ತು ಅನ್ನೋದು ಸರ್ವವಿದಿತವಾದ ಸಂಗತಿ. ಆದರೆ, ಆ ಅಧಿಕಾರ ವಿರೋಧಿ ಅಲೆಯ ಸಂಪೂರ್ಣ ಲಾಭ ಪಡೆಯಲಿಕ್ಕೆ ಬಿಜೆಪಿಗೆ ಏಕೆ ಸಾಧ್ಯವಾಗಲಿಲ್ಲ? ಮೋದಿಯೂ ಕೂಡಾ ಬಂದು ಹೋಗಿದ್ದರಲ್ಲ? ಕಾಂಗ್ರೇಸ್ ಆಡಳಿತ ವಿರೋಧಿ ಅಲೆಯಿರುವಾಗ ಮೋದಿಯವರ ಭಾಷಣಕ್ಕೆ ಸರಳ ಬಹುಮತ ಕೊಡಿಸುವಷ್ಟೂ ಶಕ್ತಿ ಸಾಮರ್ಥ್ಯಗಳಿಲ್ಲವೇ? ಹಾಗಾದರೆ, ಬಿಜೆಪಿ ಎಡವಿದ್ದೆಲ್ಲಿ?
ಮತ್ತಷ್ಟು ಓದು »

29
ಡಿಸೆ

ಸರ್ವಾಧಿಕಾರಿ ಧೋರಣೆಯ ಪ್ರಗತಿಪರರು ಮತ್ತು ಮೋದಿ

– ಪ್ರಸನ್ನ,ಬೆಂಗಳೂರು

Modiಅಹಮದಾಬಾದಿನ ಮೆಟ್ರೊಪಾಲಿಟನ್ ನ್ಯಾಯಾಲಯ ಪ್ರಗತಿಪರರಿಗೆ ಒಂದು ತಡೆಯಲಾರದ ಆಘಾತ ನೀಡಿದೆ. ಈ ಆಘಾತವನ್ನು ಸಹಿಸಿಕೊಂಡು ಈಗಲಾದರೂ ಈ ಬುದ್ದಿಗೇಡಿಗಳು ತಮ್ಮ ಮಾರ್ಗ ಸರಿ ಪಡಿಸಿಕೊಳ್ಳುತ್ತರೇನೋ ಎಂಬ ನಮ್ಮ ನಿರೀಕ್ಷೆ ಹುಸಿಯಾಗುವಂತಿದೆ, ಯಥಾ ಪ್ರಕಾರ ಅವರು ತಮ್ಮ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಲ್ಲೇ ಇನ್ನೂ ಬಿದ್ದು ಒದ್ದಾಡುತ್ತಿದ್ದಾರೆ. ನಾನಂತೂ ಇವರನ್ನು ಪ್ರಜಾಪ್ರಭುತ್ವ ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತದ ಕಾನೂನಗಳನ್ನು ಗೌರವಿಸದ ದೇಶದ್ರೋಹಿಗಳೆಂದೆ ಪರಿಗಣಿಸುತ್ತೇನೆ. ಹೇಗೆಂದಿರಾ?

ನೀವೆ ಗಮನಿಸಿ ೨೦೦೨ದಿಂದೀಚೆಗೆ ಇವರು ಹಾಡುತ್ತಿದ್ದುದು ಒಂದೇ ರಾಗ ಅದು ಮೋದಿ ನರಹಂತಕ ಎಂಬುದು, ಇವರ ಅಧಿನಾಯಕಿಯಂತೂ ಆತನನ್ನು ಸಾವಿನ ವ್ಯಾಪಾರಿಯೆಂದು ಜರೆದು ನಾಲಿಗೆ ಕುಲ ಹೇಳುತ್ತದೆಂಬುವುದನ್ನು ತೋರಿಸಿಕೊಟ್ಟುಬಿಟ್ಟಿದ್ದಲ್ಲದೇ ತನ್ನ ನಾಲಿಗೆಯನ್ನು ತಾನೆ ಕಚ್ಚಿ ಕೊಳ್ಳುವಂತಾಯ್ತು. ಗುಜರಾತಿನ ಜನರು ಸತತ ೩ ಬಾರಿ ಇವರ ತಲೆಯ ಮೇಲೆ ಕಲ್ಲು ಹಾಕಿದ್ದೂ ಆಯ್ತು. ಆದರೂ ನಮ್ಮ ಕರ್ನಾಟಕದ ಪ್ರಗತಿಪ್ರರು ಮಾತ್ರ ಇನ್ನೂ ಆ ರೋಗದಿಂದ ಹೊರಬರಲೇ ಇಲ್ಲ.

ಮತ್ತಷ್ಟು ಓದು »

27
ಡಿಸೆ

ಗೊಂಬೆಯಾಟವಯ್ಯಾ…

ಮೂಲ ಲೇಖಕರು : ತನ್ಯರಾಜ್ ಪುರೋಹಿತ್
ಕನ್ನಡಕ್ಕೆ : ಪ್ರಶಾಂತ್ ಭಟ್

Chessಅಧಿಕಾರದ ಮೇಲಿನ ಹಂತಗಳಲ್ಲಿ ನಡೆಯುವ ಒಳಸಂಚುಗಳ ಮತ್ತು ತಂತ್ರಗಳ ಕತೆ ಯಾವತ್ತಿಗೂ ಕುತೂಹಲ ಹುಟ್ಟಿಸುತ್ತದೆ. ನಮಗೆಲ್ಲ ಅಂತಹ ವಿಷಯಗಳನ್ನು ಕೇಳಲು ಮತ್ತು ಇನ್ನೊಬ್ಬರಿಗೆ ಹೇಳಲು ತುಂಬಾ ಆಸಕ್ತಿ; ಅವು ನಮ್ಮ ಅರಿವನ್ನೂ ಮೀರಿ ನಮ್ಮನ್ನ ದಂಗು ಬಡಿಸುತ್ತದೆ! ಯಾಕೆಂದರೆ ಅಧಿಕಾರ ಪಡೆಯಲು ವ್ಯಕ್ತಿ/ಸಂಘಟನೆಗಳು ಮಾಡುವ, ಹೂಡುವ ಆಟಗಳು ನಾವೆಲ್ಲ ಕಲ್ಪನೆ ಮಾಡಲೂ ಅಸಾಧ್ಯವಾದದ್ದು!

ಈಗ ನೋಡಿ, ರಾಜಕೀಯದಲ್ಲಿ ಮೋದಿಯವರ ಮುಂದಿನ ದೊಡ್ಡ ನಡೆ ಏನು? ಅಥವಾ ಬಿ.ಜೆ.ಪಿ. ಗೆಗಂಡಾಂತರ ತಂದೊಡ್ಡಲು ರಾಹುಲ್ ಹೆಣೆಯುತ್ತಿರುವ ತಂತ್ರವೇನು? ಇಂತಹ ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗುವುದು ಇವೆಲ್ಲಾ ಸಂಪೂರ್ಣವಾಗಿ ಕಾರ್ಯಗತವಾದ ಮೇಲೇ. ನಾವು ಅಂದುಕೊಳ್ಳುತ್ತೇವೆ ಏನೆಂದರೆ ಈ ರಾಜಕಾರಣಿಗಳಿಗೆ, ಮಂತ್ರಿಗಳಿಗೆ ಎಲ್ಲವೂ ತಿಳಿದಿದೆ ಯಾಕೆಂದರೆ ಅವರು ಈ ಆಟವನ್ನೆಲ್ಲಾ ಹತ್ತಿರದಿಂದ ನೋಡಿರುತ್ತಾರೆ ಅಂತ; ಈ ಮಾತು ಸಂಪೂರ್ಣ ನಿಜವಲ್ಲ. ಮೇಲಿನ ಹಂತಗಳಲ್ಲಿ ನಡೆಯುವ ದೊಡ್ಡ ದೊಡ್ಡ ಆಟಗಳ ಬಗ್ಗೆ ಅವರಿಗೆಅರಿವೇ ಇರುವುದಿಲ್ಲ ಮತ್ತು ತಾವು ಪಾನ್ ಗಳಾಗಿ ನಡೆಸಲ್ಪಡುವುದೂ ಗೊತ್ತಿರುವುದಿಲ್ಲ.ಈ ಆಟಗಳು ಕೇವಲ ದೊಡ್ಡವರ ಮೇಲೆ  ಕೇಂದ್ರೀಕೃತವಾಗಿರುತ್ತದೆ. ಕೆಲವು ನಂಬಿಕಸ್ಥ ದಳಪತಿಗಳ ಹೊರತು ಮತ್ತಾರಿಗೂ ಇದರ ಸಳುಹೂ ಸಿಕ್ಕಿರುವುದಿಲ್ಲ ನಮ್ಮ ನಿಮ್ಮೆಲ್ಲರಂತೆ!

ರಾಜಕಾರಣಿಗಳು ನಾವಂದುಕೊಂಡಿರುವುದಕ್ಕಿಂತ ಬುದ್ಧಿವಂತರಾಗಿರುತ್ತಾರೆ. ಅವರಿಗೆ ಒಂದು ಸಾಮಾನ್ಯ ಗಣಿತದ ಲೆಕ್ಕಾಚಾರ ತಿಳಿಯದಿರಬಹುದು ಆದರೆ ಎದುಗಿರುವ ವ್ಯಕ್ತಿಯ ಆಳ, ಅಗಲವ ಕ್ಷಣಾರ್ಧದಲ್ಲಿ ಅಳೆಯಬಲ್ಲರು; ಒಂದು ವಿಷಯವನ್ನ ಹತ್ತಾರು ವರ್ಷಗಳಿಗೆ ಧಕ್ಕೆ ಬಾರದಂತೆ ತಂತ್ರ ಹೆಣೆಯುವ ಚಾತುರ್ಯ ಅವರದ್ದು, ಆ ತಂತ್ರವನ್ನು ಜಾರಿಗೊಳಿಸುವುದರಲ್ಲಂತೂ ಅವರ ಮೀರಿಸಿದವರಿಲ್ಲ! ರಾಹುಲ್ ಗಾಂಧಿ ಎಂಬ ಹೆಸರು ನಗುವ ಸರಕಾಗಿ ತುಂಬ ಕಾಲವಾಯ್ತು. ‘ಪಪ್ಪು’, ‘ಬುದ್ಧು’ ನಂತಹ ಹೆಸರುಗಳು ಆ ಹೆಸರೊಂದಿಗೇ ಸೇರಿ ಹೋಗಿದೆ. ಮೋದಿ ಮಾತ್ರವಲ್ಲ ಯಾವ ಪ್ರೊಫ಼ೆಷನಲ್ ರಾಜಕಾರಣಿಗೂ ಸರಿದೂಗದ, ಜನರಲ್ಲಿ ಉತ್ಸಾಹ ತುಂಬಲಾರದ ನಾಯಕ(?) ರಾಹುಲ್ ಎಂದು ನಮಗೆಲ್ಲಾ ಅಗತ್ಯಕ್ಕಿಂತ ಸ್ಪಷ್ಟವಾಗೇ ಗೊತ್ತಾಗಿ ಹೋಗಿದೆ. ಹಾಗಾದರೆ ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲವೇ? ಅಥವಾ ಇದನ್ನೂ ಕಾಣಲಾರದಷ್ಟು ಅವರು ಮೂರ್ಖರಾಗಿದ್ದಾರೆಯೆ? ಅಥವಾ ಕಾಂಗ್ರೆಸ್ ಅದಾಗಲೇ ತನ್ನ ‘ಪ್ಲಾನ್ ಬಿ’ ಯನ್ನ ಜಾರಿಗೊಳಿಸಿದೆಯೇ?
ಮತ್ತಷ್ಟು ಓದು »

25
ಡಿಸೆ

ಆಪ್ ಎಂಬ ನೀರಮೇಲಣ ಗುಳ್ಳೆ …

– ಅವಿನಾಶ್ ಹೆಗ್ಡೆ

AAPಒಂದು ರಾಜಕೀಯ ಪಕ್ಷಕ್ಕೆ ಸೈದ್ದಾಂತಿಕ ಹಿನ್ನೆಲೆ ಇಲ್ಲದೆ ಇದ್ದರೆ, ಮತ್ತು ಸ್ಪಷ್ಟ ಗುರಿಯಿಲ್ಲದೆ ಇದ್ದರೆ ಏನಾಗಬಹುದು ಅನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಆಮ್ ಆದ್ಮಿ ಪಾರ್ಟಿ …. ಆಪ್ ರಾಜಕೀಯಕ್ಕೆ ಪ್ರವೇಶ ಕೊಡುತ್ತೇವೆ ಅಂದಾಗ ಅವರನ್ನ ಗಂಭೀರವಾಗಿ ಪರಿಗಣಿಸಿದವರ ಸಂಖ್ಯೆ ತುಂಬಾ ಕಡಿಮೆ.ಆದರೆ ದೆಹಲಿ ಚುನಾವಣಾ ಆಪ್ ಕಡೆ ದೇಶ ನೋಡುವಂತೆ ಮಾಡಿದ್ದು ಸುಳ್ಳಲ್ಲ ..

ಆದರೆ ಬಂಗಾಳದಲ್ಲಿ ೩೪ ವರ್ಷದ ಸರಕಾರವನ್ನ ಬೇರು ಸಮೇತ ಕಿತ್ತು ಹಾಕಿದ್ದ ಮಮತಾ ಬ್ಯಾನರ್ಜಿಗೆ ಕೂಡ ಕೊಡದ ಪ್ರಚಾರವನ್ನ ಮಾಧ್ಯಮಗಳು ಆಪ್ ಗೆ ಕೊಟ್ಟಿದ್ದವು ಮತ್ತು  ಅದರ ಹಿಂದೆ ಮಾದ್ಯಮಗಳ ಸ್ಪಷ್ಟ ಕಮ್ಯುನಿಸ್ಟ್ ಹಿತಾಸಕ್ತಿ ಇತ್ತು,ಬಿಜೆಪಿಯ ಗೆಲುವನ್ನ ಮರೆಮಾಚುವ ಉದ್ದೇಶ ಸ್ಪಷ್ಟವಾಗಿತ್ತು. ಲೋಕಪಾಲ್ ಚಳುವಳಿಯ ಹೋರಾಟವನ್ನ ಮತ್ತು ಅಣ್ಣ ಹಜಾರೆಯವರನ್ನ ಬಳಸಿಕೊಂಡಿದರ ಬಗ್ಗೆ ಮಾಧ್ಯಮಗಳು ಈ ಸಂದರ್ಭದಲ್ಲಿ ಯಾಕೆ ಕಣ್ಣು ಮುಚ್ಚಿಕೊಂಡವು ಅನ್ನುವುದು ಎಲ್ಲರಿಗು ಗೊತ್ತಿರುವಂತದೆ.ಇರಲಿ …..

ಮತ್ತಷ್ಟು ಓದು »

24
ಡಿಸೆ

ಕೇವಲ ಬ್ರಾಹ್ಮಣರ ಟೀಕೆಗೆ ಮಾತ್ರ ಮೀಸಲೇ ಈ ಪತ್ರಿಕೆ?

– ವಿದ್ಯಾ ಕುಲಕರ್ಣಿ

ಬ್ರಾಹ್ಮಣನವೆಂಬರ್ 18 ನೇ ತಾರೀಖಿನಿಂದ ಇವತ್ತಿನ ವರೆಗೆ ವಾತಾ೯ಭಾರತಿ ಪತ್ರಿಕೆಯಲ್ಲಿನ ಅಂಕಣಗಳನ್ನು ನಾನು ಓದುತ್ತಿದ್ದೇನೆ. ಸುಮಾರು ನಾಲ್ಕೈದು ಅಂಕಣಗಳು ಕಾರಣವಿಲ್ಲದೇ ಬ್ರಾಹ್ಮಣರ ಟೀಕೆಯನ್ನು ಮಾಡಿವೆ. ಯಾಕೆ ಹೀಗೆ ಇವರೆಲ್ಲ ಕಾರಣವಿಲ್ಲದೇ ಬ್ರಾಹ್ಮಣರನ್ನು ಹುರಿದು ಮುಕ್ಕುತ್ತಿದ್ದಾರೆ ? ಮನನೊಂದು ಈ ಲೇಖನ ಬರೆಯುತ್ತಿದ್ದೇನೆ.

ಯಾವ ಲೇಖನಗಳಲ್ಲಿ ಬ್ರಾಹ್ಮಣರನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲವೋ ಅಲ್ಲೆಲ್ಲ ವಿನಾಕಾರಣ ಬ್ರಾಹ್ಮಣರನ್ನು ಎಳೆದು ತಂದು ಗೂಬೆ ಕೂರಿಸಿದ್ದಾರೆ . ಕೆಳಗಿನ ಉಧಾಹರಣೆಗಳಿಂದ ನೀವಿದನ್ನು ತಿಳಿಯಬಹುದು.

1) ವಿಜಯಾ ಮಹೇಶ್ ಎಂಬುವವರು ‘ ರಾಜ ಕನಕನಾಯಕ ಕನಕದಾಸನಾದ ಕಥೆ’ ಎಂಬ ಅಂಕಣದಲ್ಲಿ ಕನಕದಾಸರ ಕೃತಿಗಳ ಬಗ್ಗೆ ವಿಮಶಾ೯ತ್ಮಕವಾಗಿ ಬರೆಯಬಹುದಿತ್ತು. ಆ ಮೂಲಕ ಕನಕರ ಕೆಲವು ಕೃತಿಗಳ ಬಗ್ಗೆ ಸಾಮಾನ್ಯ ಜನತೆಗೆ ವಿಷಯ ತಿಳಿಯುತ್ತಿತ್ತು. ಹೆಚ್ಚಿನ ಜನ ಕನಕರ ಕೃತಿಯಾದ ‘ರಾಮಧಾನ್ಯ ಚರಿತೆ’ಯನ್ನು ‘ರಾಮಧ್ಯಾನ ಚರಿತೆ’ ಎಂದು ತಪ್ಪಾಗಿ ಓದುತ್ತಾರೆ. ಇನ್ನು ಈ ಕೃತಿಗೆ ಅಷ್ಟಾಗಿ ವಿಮಶೆ೯ ಬಂದಿಲ್ಲವೆಂದು ಓದುಗ ವಲಯದಲ್ಲಿ ಅಪಸ್ವರವಿದೆ. ಈ ಎಲ್ಲವನ್ನು ಲೇಖಕಿ ಈ ಅಂಕಣದಲ್ಲಿ ವಿಮಶಿ೯ಸಬಹುದಿತ್ತು. ಆದರೆ ಇವರು ತಮ್ಮ ಲೇಖನವನ್ನು ಕನಕರ ಕೃತಿ ವಿಮಶೆ೯ಗೆ ಅಥವಾ ಅವರ ಜೀವನ ವಿಮಶೆ೯ಗೆ ಮೀಸಲಿಡದೇ ಕೇವಲ ಬ್ರಾಹ್ಮಣರ ಟೀಕೆಗೆ ಮೀಸಲಾಗಿರಿಸಿದ್ದಾರೆ. ಅವರು ಹೇಳುತ್ತಾರೆ ; ಕೃಷ್ಣದೇವರಾಯನ ಒಂದು ಯುದ್ಧದಲ್ಲಿ ಕನಕರ ಅಪಾರ ಶ್ರಮದಿಂದ ಸೋಲುವ ಹಂತದಲ್ಲಿದ್ದ ರಾಯ ಗೆಲುವು ಸಾಧಿಸಿದನಂತೆ.ಗೆಲುವಿನ ಸುದ್ದಿ ಕೇಳಿದ ವ್ಯಾಸರಾಯರು ಕನಕನನ್ನು ಯಾವುದೇ ರೀತಿಯಿಂದ ಗೌರವಿಸದೇ ಇತ್ತ ಕೃಷ್ಣದೇವರಾಯನೂ ಗೌರವಿಸದೆ ಕನಕರು ಬುದ್ಧಿಭ್ರಮಣರಾದರಂತೆ.

ಮತ್ತಷ್ಟು ಓದು »

23
ಡಿಸೆ

Dr.GSS

23
ಡಿಸೆ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩

ದಾಟು ಮತ್ತು ಭಾರತೀಪುರ
—————————–
ಯು ಆರ್ ಅನಂತಮೂರ್ತಿ ಅವರ “ಭಾರತೀಪುರ” ಕಾದಂಬರಿಯ ನಾಯಕ ಜಗನ್ನಾಥನ ‘fickle minded personality’ ನಮ್ಮ ನವ್ಯ ಸಾಹಿತ್ಯದ  ಆಧುನಿಕ ಪ್ರಜ್ಞೆಗೆ ತುಂಬ ಹತ್ತಿರವಾಗಿದೆ. ಇದು ಮೊದಲು ಪ್ರಕಟವಾಗಿದ್ದು ೧೯೭೩ರಲ್ಲಿ. ಸುಮ್ಮನೆ “ಇದೂ ಒಂದು  ಮಾಮೂಲಿ ಕಾದಂಬರಿ” ಎಂದು ಓದಿಕೊಂಡು ಹೋಗುವ ಹಾಗಿದ್ದರೆ ಯಾವ ಜಿಜ್ಞಾಸೆಯೂ ಬೇಕಾಗುವುದಿಲ್ಲ. ಆದರೆ ಜಗನ್ನಾಥ ತನ್ನ ಊರಾದ ಭಾರತೀಪುರದಲ್ಲಿ ತಾನು ತರಬೇಕೆಂದುಕೊಳ್ಳುವ ಬದಲಾವಣೆಗೆ ತಕ್ಕ ತಯಾರಿ ನಡೆಸಿದ್ದನೆ? ನಡೆಸಿದ್ದರೆ ಅದು ಯಾವ ಮಾದರಿಯದ್ದು ಎಂದು ಯೋಚಿಸಲು ಹೊರಟಾಗ ನಿರಾಸೆಯಾಗುತ್ತದೆ. ಜತೆಗೆ ಈ ಕಾದಂಬರಿಯಲ್ಲಿ ಈತನಿಗಿಂತ ಶಕ್ತಿಶಾಲಿಯಾದ, ಗಟ್ಟಿ ಮನಸ್ಸಿನ ಸಾಕಷ್ಟು ವ್ಯಕ್ತಿಗಳಿದ್ದಾರೆ.

ಮತ್ತಷ್ಟು ಓದು »

22
ಡಿಸೆ

ಅದೆಷ್ಟು ಸುಂದರ ಹಾಸ್ಟೆಲ್ ಜೀವನ

– ತುಳಜಪ್ಪ ಬುಧೇರ

ಹಾಸ್ಟೆಲ್ ಜೀವನಹಾಸ್ಟೆಲ್ ಹುಡಗ್ರೆಲ್ಲಾ ಕೆಟ್ಟವರು, ಟಪೋರಿಗಳು ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುತ್ತಿರುತ್ತಾರೆ. ಅವರಲ್ಲಿ ಜೀವನ ಸುಧಾರಿಸಿಕೊಳ್ಳಬೇಕೆಂಬುದರ ಬಗ್ಗೆ ಸಿರಿಯಸ್‍ನೆಸ್ಸೇ ಇರಲ್ಲಾ, ಅನ್ನೋ ಮಾತುಗಳು ಆಗಾಗ ಕೇಳುತ್ತಿರುತ್ತೇವೆ. ತಂದೆ ತಾಯಂದಿರಂತೂ ತಮ್ಮ ಮಕ್ಕಳಿಗೆ ಹಾಸ್ಟೆಲ್ ಹುಡುಗರ ಸಹವಾಸ ಮಾಡಬೇಡ ಎಂಬ ಸ್ಟ್ರಿಕ್ಟ್ ಆದೇಶ ಮಾಡಿರುವುದನ್ನು ನೋಡಿರುತ್ತೇವೆ. ಇದೇ ಪಾಠವನ್ನು ಚಿಕ್ಕವನಿದ್ದಾಗ ನನ್ನ ಗೆಳೆಯ ಮಾಡಿದ್ದ. ಅವನಿಗೆ ಯಾರು ಹೇಳಿದ್ದರೋ ಅವನೇ ಬಲ್ಲ.

ಪಕ್ಕದೂರಾದ ಮನ್ನಳ್ಳಿಯಲ್ಲಿ ಹೈಸ್ಕೂಲ್ ಇದ್ದಿದ್ದರಿಂದ ಪ್ರೌಢ ಶಿಕ್ಷಣ ಯಾವುದೇ ಚಿಂತೆಯಿಲ್ಲದೇ ಆರಾಮಾಗಿ ಮುಗಿಯಿತು. ಮುಂದೆ ಕಾಲೇಜ್‍ಗೆ ಸೇರಲೇಬೇಕಲ್ಲವೆ, ಬೀದರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆದಾಯಿತು. ದಿನಾಲು ಹೋಗಿ ಬರಬೇಕೆಂದರೆ ನಮ್ಮೂರಿಗೆ ಸರಿಯಾಗಿ ಬಸ್ಸುಗಳೇ ಇಲ್ಲ. ಇದ್ದರೂ ಅಮಾಸೆಗೋ ಹುಣ್ಣಿಮೆಗೋ ಎಂಬಂತೆ ಅಪರೂಪ. ಸಮಯದ ಪಾಲನೆಯಂತು ಅವರಪ್ಪನಾಣೆಗೂ ಇಲ್ಲವೇ ಇಲ್ಲ. ಹೀಗಾಗಿ ಕಾಲೇಗೆ ಹೋಗಿ ಬರೋದೆ ಒಂದ್ ದೊಡ್ಡ ಸಮಸ್ಯೆಯಾಯಿತು. ಆಗ ಅಪ್ಪನ ತಲೆಯಲ್ಲಿ ಬಂದ ಐಡಿಯಾನೆ ಹಾಸ್ಟೆಲ್. ಈ ಶಬ್ದ ಕಿವಿಗೆ ಬಿದ್ದೊಡನೆ ಕಾಲಿನಿಂದ ತಲೆಯವರೆಗೂ ಜುಮ್ ಎಂದು ರಕ್ತ ಸಂಚಾರವೇ ನಿಂತಂತಾಗಿ ನಿಸ್ತೇಜನಾಗಿ ನಿಂತಲ್ಲೇ ಕುಸಿದು ಬಿಟ್ಟೆ. ಆದರೆ ಅನ್ಯ ಮಾರ್ಗವೇ ಇರಲಿಲ್ಲ. ಅಲ್ಲಿಗೆ ಹೋಗಲೇಬೇಕಾಯಿತು.

ಮತ್ತಷ್ಟು ಓದು »

20
ಡಿಸೆ

ವಿಡಂಬನೆ:ಪೊರೆ ಪೊರೆ ಪೊರಕೆ..!

–  ತುರುವೇಕೆರೆ ಪ್ರಸಾದ್

ಪೊರಕೆದೆಹಲಿಲಿ ಆಮ್ ಆದ್ಮಿ ಪಕ್ಷ ‘ಹಾಥ್ ಕಾ ಸಫಾಯಾ’ ಮಾಡಾದ ಮೇಲೆ ದೇಶದ ಎಲ್ಲಾ ಪಕ್ಷಗಳನ್ನೂ ಗುಡಿಸಿ ಗುಂಡಾಂತರ ಮಾಡುತ್ತೆ ಅನ್ನೋ ಹಸಿ ಬಿಸಿ ಸುದ್ದಿ ಹಿನ್ನಲೆಯಲ್ಲಿ ಧೂಮಕೇತು ಸಂಪಾದಕ ಪರ್ಮೇಶಿ ಕನ್ನಡ ನಾಡಿನ ಖ್ಯಾತ ನಾಮರು ಹಾಗೂ ಆಮ್ ಆದ್ಮಿಗಳಿಗೆ ಕೇಜ್ರಿವಾಲ್, ಅವರ ಪೊರಕೆ ಗೊತ್ತಾ? ಪೊರಕೆ ಎಫೆಕ್ಟ್  ಸಿಕ್ಕಾಪಟ್ಟೆ ಡ್ಯಾಮೇಜ್ ಮಾಡಿದೆ ಅಲ್ವಾ? ಕರ್ನಾಟಕದಲ್ಲೂ ಜನ ಪೊರಕೆ ಹಿಡ್ಕಂಡ್ರೆ ಏನ್ಮಾಡ್ತೀರ? ಇತ್ಯಾದಿ ಪ್ರಶ್ನೆಹಾಕಿ ಮಾಡಿದ ಸಂದರ್ಶನದ ಗಿಳಿಪಾಠ ಇಲ್ಲಿದೆ.

ಮುದ್ದುರಾಮಯ್ಯ: ಕ್ರೇಜಿ ಪೊರಕೆಗೆ ನೋ ಛಾನ್ಸ್! ನಮ್ಮನೆ ಕಸ ನಾವೇ ಗುಡಿಸ್ಕಂಡ್ರೆ ಬೇರೆಯವರು ಪರಕೆ ಹಿಡ್ಕಂಡು ಅಲ್ಲಾಡಿಸೋ ಛಾನ್ಸೇ ಇರಲ್ಲ..ನಾನು  ಮೊದ್ಲೇ ಎಲ್ಲ ಕಾಂಗ್ರೆಸ್ ಕಳೆ ಬೆಳೀದಂಗೆ ಔಷ್ಧಿ ಹೊಡ್ದಿದ್ದೆ. ಎಲ್ಲೋ ಒಂದು ಸೇರ್ಕಂಡು ಬಿಟ್ಟಿತ್ತು.ಅದ್ನೂ ಗುಡಿಸಿ ಕ್ಲೀನ್ ಮಾಡಿದೀನಿ. ಮೊನ್ನೆ ಮೊನ್ನೆ ಇನ್ನೂ ಅಲ್ಲಾಡ್ತಿದ್ ಕೂಳೆನೂ ಕಿತ್ ಎಸ್ದಿದೀನಿ..! ದೊಡ್ ಮಠದೋರಿಗೆ ಎಲ್ಲಾ ಗುಡಿಸಿ ಹಾಕೋ ಕಾಂಟ್ರಾಕ್ಟ್ ಕೊಟ್ಟಿದೀನಿ. ಇಷ್ಟಕ್ಕೂ ನಮ್ದು ಹೈಟೆಕ್ ರಾಜ್ಯ..! ಪೊರಕೆ, ಗಿರಕೆ ಎಲ್ಲಾ ನಮ್ ಹತ್ರ ನಡೆಯಲ್ಲ..ನಮ್ದೇನಿದ್ರೂ ವಾಕ್ಯೂಮ್ ಕ್ಲೀನರ್ ಸಂಸ್ಕೃತಿ..! ಹಾಗೂ ಬೇಕು ಅಂದ್ರೆ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದೀ ಭಾಗ್ಯದ ತರ ಪೊರಕೆ ಭಾಗ್ಯ ಅಂತ ಮನೆ ಮನೆಗೆ ಇಂಪೋರ್ಟೆಡ್ ಪೊರಕೆ ಸಪ್ಲೈ ಮಾಡ್ತೀವಿ..ನಾವು ಪೊರಕೆ ಹಿಡಿಯೋ ಹೆಣ್ ಮಗಳು ಹೇಳ್ದಂಗೆ ಕೇಳ್ಕಂಡಿರೋ ಮಂದಿ..ಏನೋ ಆ ಶೀಲಮ್ಮ, ಸ್ವಲ್ಪ ಏಮಾರುದ್ರು ಅಂದ್ರೆ ನಾವೂ ಏಮಾರ್ತೀವಾ ?’ಕೈಯ್ಯೇ’ಇಲ್ಲದೆ ಪೊರಕೆ ಹಿಡಿಯೋದು ಹೆಂಗೆ? ಇವತ್ತಲ್ಲ ನಾಳೆ ಆ ಪೊರಕೆನ ನಾವು ಹಿಡ್ಕೊತೀವಿ ಅನ್ನೋ ನಂಬಿಕೆ ನನಗಿದೆ..

ಮತ್ತಷ್ಟು ಓದು »

19
ಡಿಸೆ

ಭಗವದ್ಗೀತೆಯ ನೈತಿಕ ಜಿಜ್ಞಾಸೆ

– ರಮಾನಂದ ಐನಕೈ

ಭಗವದ್ಗೀತೆಭಗವದ್ಗೀತೆ ಭಾರತೀಯರ ಅತ್ಯಂತ ಪವಿತ್ರವಾದ ಗ್ರಂಥ. ಆದರೆ ಕಳೆದ ಅನೇಕ ವರ್ಷಗಳಿಂದ ಈ ಗ್ರಂಥ ವಿವಾದಕ್ಕೆ ಎಡೆಯಾಗುತ್ತಲಿದೆ. ಭಗವದ್ಗೀತೆಯನ್ನು ಟೀಕಿಸುವ ಬಹುತೇಕ ಜನ ಅದನ್ನು ಓದಿಯೇ ಇಲ್ಲ. ಇನ್ನೂ ಕೆಲವು ಓದಿದವರಿಗೆ ಅದು ಅರ್ಥವೇ ಆಗಿಲ್ಲ. ಅದನ್ನು ಓದಿ ಅರ್ಥಮಾಡಿಕೊಂಡವರಿಗೆ  ಈ ವಿವಾದ ಎಬ್ಬಿಸಿದವರು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ. ಇಷ್ಟೆಲ್ಲ ಗೊಂದಲವಾಗಲು ಮುಖ್ಯ ಕಾರಣವೆಂದರೆ ನಾವು ಭಗವದ್ಗೀತೆಯನ್ನು ಗೃಹಿಸುತ್ತಿರುವ ರೀತಿ. ಭಗವದ್ಗೀತೆಯನ್ನುವುದು ಒಂದು ಕತೆಯಲ್ಲ. ಅಥವಾ ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ. ಅದು ಸಾಮಾಜಿಕ ವ್ಯವಸ್ಥೆಯನ್ನು ನಿರ್ದೇಶಿಸಲು ಹುಟ್ಟಿಕೊಂಡ ಸಂವಿಧಾನವೂ ಅಲ್ಲ. ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿತೋರಿಸುವ ಮಾರ್ಗದರ್ಶಿ. ಹೀಗೆ ಅರ್ಥೈಸಿಕೊಂಡಾಗ ಭಗವದ್ಗೀತೆ ಪ್ರತಿಯೊಬ್ಬರಿಗೆ ನೀತಿಪಾಠವಾಗಿ ತೆರೆದುಕೊಳ್ಳುತ್ತದೆ.

ವಸಾಹತುಶಾಹಿ ಆಳ್ವಿಕೆಯ ಜೊತೆಗೇ ಭಗವದ್ಗೀತೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಚಿಂತನಾಪರಂಪರೆ ಬೆಳೆದುಬಂತು. ಏಕೆಂದರೆ ಪಾಶ್ಚಾತ್ಯರು ಪ್ರೊಟೆಸ್ಟಾಂಟ್ ವಿಚಾರಧಾರೆಯ ನೆಲೆಯಲ್ಲಿ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಭಗವದ್ಗೀತೆ ರಿಲಿಜನ್ನಿನ ಜಿಜ್ಞಾಸೆಯಾಯಿತೇ ವಿನಃ ಬದುಕಿನ ಜಿಜ್ಞಾಸೆಯಾಗಿ ಕಾಣಲೇಇಲ್ಲ. ಅದಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ವೈರುದ್ಧ್ಯತೆ. ಇದೇ ಮುಂದೆ ಸೆಕ್ಯುಲರ್ ಚಿಂತನಾ ವಿಧಾನದಲ್ಲೂ ಮುಂದುವರಿಯುತ್ತಾ ಬಂತು. ಇದು ಇಂದು ಆಧುನಿಕ ಭಾರತದಲ್ಲಿ ಭಗವದ್ಗೀತೆಯ ಕುರಿತಾಗಿ ಅಖಾಡವನ್ನೇ ನಿರ್ಮಾಣ ಮಾಡುತ್ತಲಿದೆ. ಹಾಗಾಗಿ ಭಗವದ್ಗೀತೆಯಲ್ಲಿ ಏನಿದೆ ಮತ್ತು ಅದು ಏನು ಹೇಳುತ್ತಲಿದೆ ಎಂಬುದನ್ನು ಈ ಶತಮಾನದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಮತ್ತಷ್ಟು ಓದು »