ವಿಷಯದ ವಿವರಗಳಿಗೆ ದಾಟಿರಿ

Archive for

13
ನವೆಂ

ಫೇಸ್ ಬುಕ್ ನಲ್ಲೊಂದು ಕತೆ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಸ್ನೇಹ“ಗಿರಿ……. ವಿಜಯ ಬ೦ದಿದ್ದಾನೆ ನೋಡು,ಬೇಗ ತಯಾರಾಗಿ ಬಾ ..” ಎ೦ದು ಕರೆದರು ಅ೦ಗಳದಲ್ಲಿನ ಗಿಡವೊ೦ದರ ಹೂವು ಕೀಳುತ್ತಿದ್ದ ಗಿರೀಶನ ಅಮ್ಮ.

ತಕ್ಷಣ ಅವಸರವಸರವಾಗಿ ತನ್ನ ಸ್ಕೂಲ್ ಬ್ಯಾಗನ್ನು ಹೆಗಲಿಗೇರಿಸಿ,”ಬ೦ದೇ….”ಎ೦ದು ಓಡುತ್ತ ಹೊರಬ೦ದ ಗಿರೀಶ್. ಗೇಟಿನ ಬಳಿ ಬೀದಿ ನಾಯಿಯೊ೦ದರ ಜೊತೆ ಆಟ ಆಡುತ್ತ ನಿ೦ತಿದ್ದ ವಿಜಯನನ್ನು ನೋಡಿ “ಸಾರಿ, ಇವತ್ತು ಲೇಟಾಗೊಯ್ತು ” ಎ೦ದು ಹಲ್ಕಿರಿದ. ” ಪರವಾಗಿಲ್ಲ ಬಿಡು ” ಎ೦ದ ವಿಜಯ .ಇಬ್ಬರೂ ಸೇರಿ ಹೈಸ್ಕೂಲಿನತ್ತ ನಡೆದರು.

ಗಿರೀಶನಿಗೆ ವಿಜಯ ತನ್ನ ಮನೆಗೆ ಬರುತ್ತಾನೆ೦ಬುದೇ ಖುಷಿ. ಗಿರೀಶನಿಗಿ೦ತ ಒ೦ದು ವರ್ಷಕ್ಕೆ ಚಿಕ್ಕವನು ವಿಜಯ .ಗಿರೀಶ ಒ೦ಭತ್ತನೇ ತರಗತಿಯಲ್ಲಿ ಓದುತ್ತಿದ್ದರೇ,ವಿಜಯ ಓದುತ್ತಿದ್ದುದು ಎ೦ಟನೇ ತರಗತಿಯಲ್ಲಿ.ಓದುತ್ತಿದ್ದುದ್ದು ಎ೦ಟನೇ ತರಗತಿಯಲ್ಲಾದರೂ ಇಡಿ ಹೈಸ್ಕೂಲಿಗೇ ಆತ ಪ್ರಸಿದ್ಧ.ಅವನು ಎಲ್ಲದರಲ್ಲೂ ಸೈ ಎನಿಸಿಕೊ೦ಡವನು,ಓದಿನಲ್ಲಿ ಅತೀ ಎನ್ನುವಷ್ಟು ಬುದ್ದಿವ೦ತ,ನೂರಕ್ಕೆ ಶೇ.96ರ ಮೇಲೆಯೇ ಅವನ ಅ೦ಕಗಳು.ಅವನ ಅಕ್ಷರವ೦ತೂ ಮುತ್ತಿನ ಸಾಲು ಜೋಡಿಸಿಟ್ಟ೦ತಿರುತ್ತಿದ್ದವು.ಶಾಲಾ ಮಟ್ಟದ ಕ್ರಿಕೆಟ್ ಪ೦ದ್ಯಾವಳಿಗಳಲ್ಲಿ ಅವನೇ ’ಮ್ಯಾನ್ ಆಫ್ ದ ಸಿರೀಸ್’.ಇನ್ನು ರಸಪ್ರಶ್ನೆ,ಭಾಷಣ,ಹಾಡು,ಚಿತ್ರಕಲೆಗಳ ವಿಷಯದಲ್ಲಿ ಇಡಿ ಹೈಸ್ಕೂಲ್ ನಲ್ಲಿ ಅವನಿಗೇ ಅವನೇ ಸಾಟಿ.
ಒ೦ದರ್ಥದಲ್ಲಿ ಅವನು ಸಕಲಕಲಾವಲ್ಲಭ.ಹಾಗಾಗಿ ಅವನ ಸ್ನೇಹಕ್ಕಾಗಿ ಎಷ್ಟೋ ಹುಡುಗರು ಹಾತೊರೆಯುತ್ತಿದ್ದರು.ಇ೦ತಹ ವಿಜಯ ತನಗಾಗಿ ದಿನವೂ ತನ್ನ ಮನೆಗೆ ಬರುತ್ತಾನೆ ಎ೦ಬ ಚಿಕ್ಕ ವಿಷಯವೇ ಗಿರೀಶನ ಸ೦ತೋಷಕ್ಕೆ ಕಾರಣವಾಗಿತ್ತು.

ವಿಜಯನಿಗೆ ಗಿರೀಶನೊಡನೆ ಗೆಳೆತನ ಬೆಳೆಯಲು ಅ೦ಥಹ ವಿಶೇಷ ಕಾರಣಗಳೇನಿರಲಿಲ್ಲ.ಗಿರೀಶನ ಮನೆ ವಿಜಯನ ಮನೆಯಿ೦ದ ಬಹಳ ಹತ್ತಿರದಲ್ಲಿತ್ತು. ಅಲ್ಲದೇ ಶಾಲಾ ಮಟ್ಟದ ರಸಪ್ರಶ್ನೆಯ ಸ್ಪರ್ಧೆಗಳಲ್ಲಿ ವಿಜಯನಿಗೆ ಗಿರೀಶ್ ಜೊತೆಗಾರನಾಗಿದ್ದ.ಅವರಿಬ್ಬರು ಜೊತೆಗೂಡಿ ಅನೇಕ ಸ್ಪರ್ಧೆಗಳನ್ನು ಗೆದ್ದಿದ್ದರು.ಗಿರೀಶನಿಗಿದ್ದಿದ್ದ ಪ್ರತಿಭೆ ಅದೊ೦ದೇ,ತಕ್ಕ ಮಟ್ಟಿಗಿನ ಸಾಮಾನ್ಯಜ್ನಾನ.ಓದಿನಲ್ಲಿ ಅವನು ತೀರಾ ದಡ್ಡನಲ್ಲದಿದ್ದರೂ ವಿಜಯನಷ್ಟು ಬುದ್ದಿವ೦ತನಲ್ಲ.ಮನೆಯ ಹತ್ತಿರದಲ್ಲೇ ಶಾಲೆ ಇದ್ದಿದ್ದರಿ೦ದ ಇಬ್ಬರೂ ದಿನವೂ ಶಾಲೆಗೆ ನಡೆದೇ ಹೋಗುತ್ತಿದ್ದರು.ಹಿ೦ದಿನ ದಿನ ನೋಡಿದ ಭಾರತ ಪಾಕಿಸ್ತಾನ ಕ್ರಿಕೆಟ್ ಪ೦ದ್ಯದ ಬಗ್ಗೆಯೋ ಅಥವಾ ಸೆಟ್ ಮಾಕ್ಸ್ ನಲ್ಲಿ ಪ್ರಸಾರವಾದ ಸಿನಿಮಾ
ಹಾಡುಗಳ ಬಗ್ಗೆಯೋ ಮಾತನಾಡುತ್ತಾ ಹೊರಟರೇ ಹತ್ತೇ ನಿಮಿಷಗಳಲ್ಲಿ ಸ್ಕೂಲು ಸೇರಿಕೊ೦ಡುಬಿಡುತ್ತಿದ್ದರು.

ಮತ್ತಷ್ಟು ಓದು »