ವಿಷಯದ ವಿವರಗಳಿಗೆ ದಾಟಿರಿ

Archive for

3
ಫೆಬ್ರ

ಟಾರ್ಗೆಟ್ ನಿಲುಮೆ : ಪರದೆಯ ಹಿಂದಿನ ಕತೆ

– ರಾಕೇಶ್ ಶೆಟ್ಟಿ

freedomofspeechಸುವರ್ಣ ಸುದ್ದಿ ವಾಹಿನಿಯಲ್ಲಿ ನಡೆದ “ನಿಲುಮೆಯ ಮೇಲಿನ ದೌರ್ಜನ್ಯ” ಕುರಿತ ಚರ್ಚೆಯಲ್ಲಿ,ನಾನು ಕೊಂಚ ಆಕ್ರಮಣಕಾರಿಯಾಗಬೇಕಿತ್ತು ಎನ್ನುವುದು ನನ್ನ ಕೆಲ ಗೆಳೆಯರ ಅನಿಸಿಕೆಯಾಗಿತ್ತು.ಚರ್ಚೆಯನ್ನು ಮತ್ತೊಮ್ಮೆ ನಾನೇ ನೋಡಿದಾಗ ಕೆಲವೊಂದು ಕಡೆ ನಾನು ಆಕ್ರಮಣಕಾರಿಯಾಗಿದ್ದರೆ ಚೆನ್ನಾಗಿತ್ತು ಅಂತಲೇ ಅನಿಸಿತು.ಆದರೇನು ಮಾಡುವುದು,ಮಧ್ಯೆ ಬಾಯಿ ಹಾಕಿ ಮಾತನಾಡುವುದು ಮತ್ತು ಜೋರು ದನಿಯಲ್ಲಿ ಮಾತನಾಡುವುದೆಲ್ಲ “ಚರ್ಚೆ”ಯಲ್ಲ ಎನ್ನುವುದು ನಾನು ಬೆಳೆದು ಬಂದ ಹಾದಿ ಮತ್ತು ರೀತಿ ನನಗೆ ಕಲಿಸಿದೆ.ಹ್ಮ್ ಅದೆಲ್ಲ ಇರಲಿ.ಆವತ್ತು ಚರ್ಚೆಯ ಗದ್ದಲದಲ್ಲಿ ನಾನು ಹೇಳದೇ ಉಳಿದ ಬಹುಮುಖ್ಯ ವಿಷಯಗಳನ್ನು ದಾಖಲಿಸಬೇಕಿದೆ.ಆ ಕಾರಣಕ್ಕಾಗಿ ಈ ಲೇಖನ…

ಚರ್ಚೆಯ ನಡುವೆ,ದಿನೇಶ್  ಅಮೀನ್ ಮಟ್ಟು ಅವರು “ನಿಲುಮೆ ಗುಂಪನ್ನು ಮುಚ್ಚಬೇಕು” ಎಂದಿದ್ದನ್ನು ನೀವೆಲ್ಲರೂ ಕೇಳಿದ್ದೀರಿ.ಮಾತು ತೆಗೆದರೆ ಮುಚ್ಚಿಸಬೇಕು ಎನ್ನುವ ಈ ಪ್ರಗತಿಪರ ಚಿಂತನೆಯ ಹಿಂದಿನ ಕತೆಯೇನು? ಇವರಿಗೇಕೆ ನಿಲುಮೆಯನ್ನು ಮುಚ್ಚಿಸಲೇಬೇಕೆಂಬ ಹಟ?ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ನಾವು ೨೦೧೩ರ ಮಾರ್ಚ್ ನಲ್ಲಿ  ರಾಜ್ಯದ ಪ್ರತಿಷ್ಟಿತ ಪತ್ರಿಕೆಯೊಂದರಲ್ಲಿ ಶುರುವಾದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ” ಕುರಿತ ಚರ್ಚೆಯತ್ತ ನೋಡಬೇಕು.ಈ ಚರ್ಚೆ ಆರಂಭವಾಗಿದ್ದು  CSLC ಎಂಬ  ಸಮಾಜ ವಿಜ್ಞಾನ ಸಂಶೋಧನಾ ತಂಡದವರ “ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?” ಎಂಬ ಸಂಶೋಧನಾ ಪ್ರಬಂಧದೊಂದಿಗೆ.ಆ ಪತ್ರಿಕೆಯಲ್ಲಿ ಶುರುವಾದ ಚರ್ಚೆಯಲ್ಲಿ ಕೇವಲ ಒಂದು ಕಡೆಯವರ ವಾದಗಳಿಗೆ ಮಾತ್ರ ವೇದಿಕೆಯೊದಗಿಸಿ, CSLC ತಂಡದವರಿಗೆ ವಾದಕ್ಕೂ ಜಾಗ ಕೊಡದಿದ್ದಾಗ ಅವರಿಗೆ ಜೊತೆಯಾಗಿ ನಿಂತಿದ್ದು ನಿಲುಮೆ.ನಿಲುಮೆಯಲ್ಲಿ ಸಿ.ಎಸ್.ಎಲ್.ಸಿ  ತಂಡದವರ ಲೇಖನಗಳು ಪ್ರಕಟವಾಗಿ ಅದು ಫೇಸ್ಬುಕ್ಕಿನಲ್ಲೂ ವ್ಯಾಪಕ ಚರ್ಚೆಗೆ ಒಳಪಟ್ಟಿತು.ಕಡೆಗೆ ಒತ್ತಡಕ್ಕೆ ಬಿದ್ದವರು ಅನಿವಾರ್ಯವಾಗಿ ಸಿ.ಎಸ್.ಎಲ್.ಸಿಯವರ ಒಂದೆರಡು ಲೇಖನಗಳನ್ನು ಪ್ರಕಟಿಸಿ,ಆ ಚರ್ಚೆಗೆ ಅಂತ್ಯ ಹಾಡಿಸಿದರು.ಆದರೆ,ಅಷ್ಟಕ್ಕೆ ನಮ್ಮ ಪ್ರಗತಿಪರರ ಸಿಟ್ಟು ಕಮ್ಮಿಯಾದೀತೇ? ಅವರು ತಮ್ಮ ಅಧಿಕಾರದ ಜೊತೆಗಿನ ಸ್ನೇಹ(ಪುರೋಹಿತಶಾಹಿ!?) ವನ್ನು ಬಳಸಿಕೊಂಡು ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಇದ್ದ CSLC ಸಂಶೋಧನಾ ಕೇಂದ್ರವನ್ನೇ ಮುಚ್ಚಿಸಿಬಿಟ್ಟರು! ಆಗಲಾದರೂ ನಾವು ಇವರಿಗೆ ಬೆದರಿಕೊಂಡು ಸುಮ್ಮನಾಗಬಾರದೇ? ಊಹೂಂ! ಸುಮ್ಮನಿರಲಿಲ್ಲ.ಈ ಫ್ಯಾಸಿಸ್ಟ್ ಧೋರಣೆಯ ಬಗ್ಗೆ ನಿಲುಮೆಯ ವೇದಿಕೆಯಲ್ಲಿ ಬರೆಯಲಾಯಿತು.ನಾನು ಈ ಬಗ್ಗೆ ನಿಲುಮೆಯಲ್ಲಿ,ಅಸೀಮಾ ಮಾಸಿಕದಲ್ಲಿ ಮತ್ತು ಕನ್ನಡ ಪ್ರಭ ಪತ್ರಿಕೆಯಲ್ಲಿ ಮಾನ್ಯ ಅನಂತ ಮೂರ್ತಿಯವರಿಗೆ ಬರೆದ ಬಹಿರಂಗ ಪತ್ರದಲ್ಲೂ ಪ್ರಗತಿಪರರ ಫ್ಯಾಸಿಸ್ಟ್ ಧೋರಣೆಯನ್ನು ಪ್ರಶ್ನಿಸಿದೆ.ನಿಲುಮೆಯ ಮೇಲೆ ಫ್ಯಾಸಿಸಂನ ಕರಾಳ ಛಾಯೆ ಆವರಿಸುತ್ತಲೇ ಹೋಯಿತು.

ಮತ್ತಷ್ಟು ಓದು »

3
ಫೆಬ್ರ

ದಿನೇಶ್ ಅಮಿನ್ ಮಟ್ಟು ಅವರಿಗೊಂದು ಬಹಿರಂಗ ಪತ್ರ

– ಡಾ.ಟಿ.ಎನ್ ವಾಸುದೇವ ಮೂರ್ತಿ

Amin Mattuನಿಂದಂತಿ ತುಣ್ಹೀಮಾಸೀನಙï ನಿಂದಂತಿ ಬಹುಭಾಣೀನಙï |

ಮಿತಭಾಣಿನಂ ಪಿ ನಿಂದಂತಿ ನತ್ಥಿ ಲೋಕೇ ಅನಿಂದಿತೋ ||

(ಧಮ್ಮಪದ, ಕೋಧವಗ್ಗ 227)

(ಲೋಕದ ಜನ ಸುಮ್ಮನಿರುವವರನ್ನೂ ನಿಂದಿಸುವರು, ಹೆಚ್ಚು ಮಾತನಾಡುವವರನ್ನೂ ನಿಂದಿಸುವರು, ಮಿತಭಾಷಿಗಳನ್ನೂ ನಿಂದಿಸುವರು ಲೋಕದ ಜನರಿಂದ ನಿಂದನೆಗೆ ಒಳಗಾಗದವರೇ ಇಲ್ಲ)

ಮುಖವಿಲ್ಲದವರ ನಿಂದನೆಯ ಮಾತುಗಳಿಂದ ವಿಚಲಿತರಾಗಿರುವ ದಿನೇಶ್ ಅಮಿನ್ ಮಟ್ಟು ಅವರು ‘ನಿಲುಮೆ’ ಜಾಲತಾಣದ ಮೇಲೆ ದೂರು ನೀಡಿರುವುದಲ್ಲದೆ ಅದನ್ನು ಮುಚ್ಚಿಸಲು ಮುಂದಾಗಿರುವುದು ದುರದೃಷ್ಟಕರ. ಅವರ ಈ ಅಸಹನೆ ‘ಸಂತೆಯೊಳಗೆ ಮನೆಯ ಮಾಡಿ ಶಬ್ದಕ್ಕೆ ನಾಚಿದರೆಂತಯ್ಯ’ ಎಂಬ ಅಕ್ಕನ ಮಾತುಗಳನ್ನು ನೆನಪಿಸುತ್ತದೆ.

ದಿನೇಶ್ ಅಮೀನ್ ಮಟ್ಟು “ಪತ್ರಿಕೋದ್ಯಮವು ಜಾಹಿರಾತಿನ ಹಂಗಿಗೊಳಗಾಗಿರುವುದರಿಂದ ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳು ಭರವಸೆಯ ಅಭಿವ್ಯಕ್ತಿ ಮಾಧ್ಯಮವಾಗಬಲ್ಲದು” ಎಂಬ ಆಶಾವಾದ ವ್ಯಕ್ತಪಡಿಸುತ್ತಾರೆ.

ಆದರೆ ಸಾಮಾಜಿಕ ಜಾಲತಾಣ ವೃತ್ತಿಪರ ಪತ್ರಿಕೋದ್ಯಮಕ್ಕೆ ಪರ್ಯಾಯವಾಗಬಲ್ಲದೇ ಎಂಬ ಪ್ರಶ್ನೆ ಇನ್ನೂ ಬಗೆಹರಿಯದೆ ಅದೊಂದು ಚರ್ಚೆಯ ವಿಷಯವಾಗಿದೆ. ಸದ್ಯಕ್ಕೆ ಮುಖವಿಲ್ಲದವರಿಂದ ತಮಗಾದ ತೇಜೋವಧೆಯನ್ನು ಮರೆಮಾಚಿ, ತಾವು ನೀಡಿರುವ ಪೊಲೀಸ್ ದೂರಿನ ಸಮರ್ಥನೆಗೆ ಒಂದು ಗುರಾಣಿಯಂತೆ ಅವರು ಸದರಿ ಅಭಿಪ್ರಾಯವನ್ನು ಪ್ರಚಾರ ಮಾಡಿಕೊಂಡಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಅಷ್ಟಕ್ಕೂ ಅದೇನೂ ತೇಜೋವಧೆಯಲ್ಲ, ವಿವೇಕಾನಂದರ ಕುರಿತು ಅವರು ಬರೆದದ್ದು ಅನ್ಯ ಲೇಖಕನೊಬ್ಬನ ಅನುವಾದಿತ ಸಾಲುಗಳೇ ವಿನಾ ಅದೇನೂ ಅವರ ವ್ಯಕ್ತಿಗತ ಅಭಿಪ್ರಾಯವಲ್ಲ ಎಂಬ ಅರಿವಿರದ ಓದುಗರು ಮಾಡುವ ಬುಡವಿರದ ಆರೋಪಗಳನ್ನು ತೇಜೋವಧೆ ಎಂದೇಕೆ ಭಾವಿಸಬೇಕು? “ಒಂದು ಜಾಲತಾಣವನ್ನು ವಾಮಮಾರ್ಗದಿಂದಲೇ ಹೊಸಕಬಲ್ಲೆನಾದರೂ ನೇರವಾಗಿಯೇ ಅದರ ವಿರುದ್ಧ ಧ್ವನಿಯೆತ್ತಿದ್ದೇನೆ” ಎಂಬರ್ಥದ ಅವರ ಮಾತುಗಳಲ್ಲಿ ಅವರ ಪ್ರಾಮಾಣಿಕತೆ ಮತ್ತು ಸಾಚಾತನ ವಾಚ್ಯವಾಗಿ ಪ್ರದರ್ಶಿತವಾಗುತ್ತಿದ್ದರೂ ಆ ಮಾತುಗಳ ಹಿಂದೆ ಕ್ರೌರ್ಯವೇ ಇಣುಕುತ್ತಿರುವಂತೆ ಕಾಣಿಸುತ್ತದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ “ನಿನ್ನ ಅಭಿಪ್ರಾಯದೊಂದಿಗೆ ನನ್ನ ಸಹಮತವಿಲ್ಲದಿದ್ದರೂ ನಿನ್ನ ಅಭಿಪ್ರಾಯವನ್ನು ಹತ್ತಿಕ್ಕುವ ಶಕ್ತಿಗಳ ವಿರುದ್ಧ ಪ್ರಾಣವನ್ನೇ ಪಣವಿತ್ತು ಹೋರಾಡುತ್ತೇನೆ” ಎಂಬ ವೋಲ್ಟೈರ್‍ನ ಮಾತುಗಳನ್ನು ಕಲಿಸುವ ಹಿರಿಯರು ಇಂತಹ ಕಠಿಣಕ್ರಮಕ್ಕೆ ಮುಂದಾಗುವಂತೆ ಪ್ರೇರೇಪಿಸಿರುವ ಬೆಳವಣಿಗೆಗಳನ್ನು ಕಂಡು ದಿಗಿಲಾಗುತ್ತದೆ.

ಮತ್ತಷ್ಟು ಓದು »

3
ಫೆಬ್ರ

ದೇಹ ದಾನ…

– ಭರತೇಶ ಅಲಸಂಡೆಮಜಲು

ದೇಹದಾನಈವಂಗೆ ದೇವಂಗೆ ಅವುದಂತರವಯ್ಯಾ
ದೇವನು ಜಗಕೆ ಕೊಡಲಿಹನು | ಕೈಯಾರೆ
ಇವನೇ ದೇವ ಸರ್ವಜ್ಞ.

ಪ್ರಪಂಚದಲ್ಲಿ ದಾನ ಮಾಡುವವನು ದೇವರಿಗೆ ಸಮಾನನು, ಪೂಜೆಗೆ ಯೋಗ್ಯನು ಸಮಾಜದ ಉನ್ನತಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ಸ್ಪೂರ್ತಿಯಿಂದ ಕೊಡುಗೆ ನೀಡುವವನೇ ಮಹಾದಾನಿ ಎಂದು ಒಟ್ಟಾರೆ ತಾತ್ಪರ್ಯ.

ದಾನಕ್ಕೆ ಎಲ್ಲ ಧರ್ಮಗಳಲ್ಲೂ ಉಚ್ಚ ಸ್ಥಾನವಿದೆ, ಈ ದಾನವೆಂಬುವುದು ದೇವಸ್ಥಾನದಲ್ಲಿ ಕೊಡುವ ಎಣ್ಣೆಯಿಂದ ಹಿಡಿದು, ಬಲಿವಾಡುಗಳಿಂದ ಹಿಡಿದು, ಗೋದಾನ, ವಸ್ತ್ರದಾನ, ಅನ್ನದಾನ, ರಾಜರು ಕೊಡುತಿದ್ದ ಭೂದಾನ, ರಕ್ತದಾನ, ದೇಹದಾನ,ಕನ್ಯಾದಾನ, ವಿದ್ಯಾದಾನ ಹೀಗೆ… ಕರ್ಣನ ದಾನ, ಶಿಭಿ ಚಕ್ರವರ್ತಿಯ ದಾನ, ಬಲಿ ಚಕ್ರವರ್ತಿ ದಾನ ಎಲ್ಲವೂ ಉಲ್ಲೇಖನಿಯ.

ಮತ್ತಷ್ಟು ಓದು »