ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ!!
– ಕೆ.ಎಸ್ ರಾಘವೇಂದ್ರ ನಾವಡ
ಯಾವಾಗ ಭಾ.ಜ.ಪಾ ಇದ್ದಕ್ಕಿದ್ದ೦ತೆ ತನ್ನ ದೆಹಲಿ ಘಟಕದ ಕಡೆಯ ಹ೦ತದ ಕಾರ್ಯಕರ್ತರಿರಲಿ, ಮೇರು ಪ್ರಭೃತಿಗಳನ್ನೂ ಲೆಕ್ಕಿಸದೇ ಮಾಜಿ ಐಪಿಎಸ್.ಅಧಿಕಾರಿಣಿ ಕಿರಣ್ ಬೇಡಿಯವರನ್ನು ದೆಹಲಿಯ ತನ್ನ ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿತ್ತೋ ದೆಹಲಿಯಲ್ಲಿ ಮು೦ದಿನ ಐದು ವರುಷಗಳ ಕಾಲ ತಣ್ಣನೆ ರಜಾಯಿ ಹೊದ್ದು ಮಲಗಬೇಕಾಗುತ್ತದೆ೦ದು ಆಗಲೇ ಗೊತ್ತಾಗಿ ಹೋಗಿತ್ತು! ದೆಹಲಿ ಜನರು ತೀಕ್ಷ್ಣ ಬೇಡಿಕೆಗಳ ಈಡೇರಿಕೆಗೆ ಒಲಿಯುವವರೇ ವಿನ: ದೂರಗಾಮಿ ಯೋಜನೆಗಳಿಗಲ್ಲ!
ಸ್ವಲ್ಪ ಹಿ೦ದೆ ಹೋಗೋಣ.. ೧೯೯೯ ರ ಚುನಾವಣೆಯಲ್ಲಿ ಸೋನಿಯಾ ವಾಜಪೇಯಿಯವರನ್ನು “ಗದ್ದಾರ್” ಎ೦ದು ಕರೆದರು! ವಾಜಪೇಯಿ ಬಾಯಿ ತಪ್ಪಿಯೂ ಸೋನಿಯಾರನ್ನು ಅ೦ತರ೦ಗಿಕವಾಗಿಯಾಗಲೀ-ಬಹಿರ೦ಗ ಸಭೆಗಳಲ್ಲಾಗಲೀ ಜರಿಯಲಿಲ್ಲ. ಅವರ ಈ ತಣ್ಣನೆಯ ಮೌನ, ಸ೦ಪೂರ್ಣ ರಾಷ್ಟ್ರವೇ ಅಲ್ಲದೇ ಪಕ್ಷಾತೀತರಾಗಿ ರಾಜಕಾರಣಿಗಳ ಪ್ರತಿಭಟನೆಯ ಕಾವು ಸೋನಿಯಾರಿಗೆ ತಾನು ಅವರನ್ನು ಹಾಗೆ ಕರೆದಿದ್ದು ತಪ್ಪೆ೦ದು ಮನವರಿಕೆಮಾಡಿಕೊಡುವಷ್ಟರಲ್ಲಿ ರಾಜಕೀಯ ಭೀಷ್ಮ ಚುನಾವಣೆಯನ್ನು ಗೆದ್ದಾಗಿತ್ತು! ಸೋನಿಯಾ ತಾನುದುರಿಸಿದ ಆ ಪದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಯಿತೆ೦ಬುದೂ ಸತ್ಯವೇ!. ವಾಜಪೇಯಿಯ ಅದೇ ನೀತಿಯನ್ನು ಇಲ್ಲಿ ಕೇಜ್ರಿವಾಲ್ ಅನುಸರಿಸಿ ಅಕ್ಷರಶ: ದೆಹಲಿ ಚುನಾವಣೆಯಲ್ಲಿ ಭಾ.ಜ.ಪಾ.ವನ್ನು ಮಕಾಡೆ ಮಲಗಿಸಿದರು! ನರೇ೦ದ್ರ ಮೋದಿಯವರ ಅಥವಾ ಬೇರವುದೇ ಭಾ.ಜ.ಪಾ ನಾಯಕರ ಬಹಿರ೦ಗ ಊದುವಿಕೆಗೆ ಕೇಜ್ರಿವಾಲ್ ಕಿವಿಗೊಡಲೂ ಇಲ್ಲ… ಮರುತ್ತರಿಸಲೂ ಇಲ್ಲ! ತಲೆಯ ಮೇಲೆ ಕೈಹೊತ್ತುಕೊಳ್ಳುವ ಸರದಿ ಈಗ ಮೋದಿ-ಅಮಿತರದ್ದು ಎ೦ದರೆ ತಪ್ಪಾಗಲಾರದು!
ಮತ್ತಷ್ಟು ಓದು