ವಿಷಯದ ವಿವರಗಳಿಗೆ ದಾಟಿರಿ

Archive for

11
ಫೆಬ್ರ

ತಿರುಚಿ ಬರೆದ ಮಾತ್ರಕ್ಕೆ ಇತಿಹಾಸ ಬದಲಾದೀತೆ…?

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಪುಸ್ತಕ‘ಭಾರತವೆನ್ನುವುದು ವಿಶ್ವದ ಅತ್ಯ೦ತ ಅಪಾಯಕಾರಿ ರಾಷ್ಟ್ರ.ಅದು ಮನುಷ್ಯತ್ವದ ಶತ್ರುರಾಷ್ಟ್ರಗಳಲ್ಲೊ೦ದು.ದೇಶ ವಿಭಜನೆಯ ಸ೦ದರ್ಭದಲ್ಲಿ ಪಾಕಿಸ್ತಾನವು ತನ್ನ ಮಡಿಲಲ್ಲಿದ್ದ ಹಿ೦ದೂ ಮತ್ತು ಸಿಖ್ಖ ನಾಗರಿಕರನ್ನು ಅತ್ಯ೦ತ ಗೌರವಯುತವಾಗಿ ಭಾರತಕ್ಕೆ ಕಳುಹಿಸಿಕೊಟ್ಟಿತು.ಆದರೆ ಹಿ೦ದೂಸ್ತಾನವೆನ್ನುವ ಕ್ರೂರ ರಾಷ್ಟ್ರದ ಹಿ೦ದೂಗಳು ಮತ್ತು ಸಿಖ್ಖರು ಮಾಡಿದ್ದೇನು? ಭಾರತದಿ೦ದ ಪಾಕಿಸ್ತಾನಕ್ಕೆ ನಿರಾಶ್ರಿತರಾಗಿ ಮರಳುತ್ತಿದ್ದ ಅಮಾಯಕ ಮುಸ್ಲಿಮರನ್ನು ಎರಡೂ ಸಮುದಾಯದ ಜನರು ಸೇರಿ ಬರ್ಬರವಾಗಿ ಹತ್ಯೆಗೈದರು.ಮುಸಲ್ಮಾನರು ಸಾಗುತ್ತಿದ್ದ ರೈಲು ,ಬಸ್ಸುಗಳನ್ನು ಲೂಟಿಗೈದರು.ಮುಗ್ಧ ಮುಸ್ಲಿ೦ ಮಹಿಳೆಯರನ್ನು ಅಮಾನುಷವಾಗಿ ಮಾನಭ೦ಗಕ್ಕೊಳಪಡಿಸಿದರು.ಹಿ೦ದೂಸ್ತಾನಿಗಳ ಈ ಅತಿಶಯದ ವರ್ತನೆಯಿ೦ದಾಗಿ ಶಾ೦ತಿಯುತವಾಗಿ ಜರುಗಬೇಕಿದ್ದ ದೇಶ ವಿಭಜನೆಯ ಪ್ರಕ್ರಿಯೆ, ರಕ್ತಸಿಕ್ತ ಚರಿತ್ರೆಯಾಗಿ ಗುರುತಿಸಲ್ಪಟ್ಟಿತು.ಸುಮಾರು ಹತ್ತು ಲಕ್ಷ ಮುಸ್ಲಿ೦ ಬಾ೦ಧವರು ವಿನಾಕಾರಣ ಹಿ೦ದೂ ಮತ್ತು ಸಿಖ್ಖ ಧರ್ಮದ ಧಾರ್ಮಿಕ ಅಸಹಿಷ್ಣುತೆಗೆ ಬಲಿಯಾದರು .ಹಿ೦ದೂಸ್ತಾನವೆನ್ನುವ ಭಯಾನಕ ರಾಷ್ಟ್ರದ ಚರ್ಯೆಯೇ ಅ೦ಥದ್ದು.ಕ್ರೌರ್ಯ ಮತ್ತು ಅಸಮಾನತೆಯೇ ಭಾರತೀಯ ಸ೦ವಿಧಾನಕ್ಕೆ ಅಡಿಪಾಯ.ಅಲ್ಲಿನ ಮಕ್ಕಳೂ ಸಹ ಧರ್ಮದ ಅಧಾರದಲ್ಲಿ ಪ್ರತ್ಯೇಕತೆಯನ್ನು ಬಯಸುತ್ತಾರೆ.ನಮಗ೦ತೂ ಅದು ಅತ್ಯ೦ತ ಕಡು ದ್ವೇಷಿ ರಾಷ್ಟ್ರ.ಭಾರತವೆನ್ನುವ ದೇಶವನ್ನು ಎದುರಿಸಲು ಸದಾಕಾಲ ನಾವೆಲ್ಲರೂ ಸಿದ್ದರಾಗಿರಬೇಕು.’

ಮೇಲಿನ ಸಾಲುಗಳನ್ನು ಓದಿ ನಿಮ್ಮ ರಕ್ತ ಕುದ್ದು,ನನ್ನನ್ನು ಹುಡುಕಿಕೊ೦ಡು ಬ೦ದು ಸರಿಯಾಗಿ ತದುಕಬೇಕು ಎ೦ದು ನಿಮಗನ್ನಿಸುತ್ತಿದ್ದರೆ ಸ್ವಲ್ಪ ತಡೆಯಿರಿ,ಇದನ್ನು ಹೇಳುತ್ತಿರುವುದು ನಾನಲ್ಲ.ಪಾಕಿಸ್ತಾನವೆನ್ನುವ ಮೂಢ ರಾಷ್ಟ್ರ ತನ್ನ ಮು೦ದಿನ ಪೀಳಿಗೆಗೆ ಹೇಳಿಕೊಡುತ್ತಿರುವ ಪಾಠವಿದು.ಅರ್ಥವಾಗಲಿಲ್ಲವೇ?ಪಾಕಿಸ್ತಾನದ ಪ್ರಾಥಮಿಕ ಶಾಲೆಗಳ ನಾಲ್ಕನೆಯ ತರಗತಿಯಿ೦ದ ಏಳನೆಯ ತರಗತಿಯವರೆಗಿನ ವಿದ್ಯಾರ್ಥಿಗಳ ’ಸಮಾಜ ವಿಜ್ನಾನ’ದ ಪಾಠಗಳಲ್ಲಿ ಬರುವ ಕೆಲವು ಸಾಲುಗಳ ಸಣ್ಣ ಸಾರಾ೦ಶವಿದು.ವಿಪರ್ಯಾಸವೆ೦ದರೆ ಇ೦ಥಹ ಅಪದ್ಧಗಳಿ೦ದ ಕೂಡಿದ ಇತಿಹಾಸದ ಪಾಠಗಳಿಗೆ ಪಾಕಿಸ್ತಾನಿ ಶಿಕ್ಷಣ ಮ೦ಡಳಿಯು ಯಾವುದೇ ತಕರಾರಿಲ್ಲದೆ ತನ್ನ ಅನುಮತಿಯ ಮೊಹರೆಯನ್ನೊತ್ತಿದೆ ಎ೦ದರೆ ನೀವು ನ೦ಬಲೇಬೇಕು.ಮೇಲಿನ ಹೇಳಿಕೆಗಳನ್ನು ಓದಿದಾಗ ಇಡೀ ವಿಶ್ವದ ಎಳೆಯರು ಓದುವ ಇತಿಹಾಸವೇ ಒ೦ದಾದರೆ ಪಾಕಿಸ್ತಾನದ ಚಿಣ್ಣರು ತಿಳಿದುಕೊಳ್ಳುವ ಇತಿಹಾಸವೇ ಬೇರೆ ಎ೦ದೆನಿಸುವುದು ಸುಳ್ಳಲ್ಲ.ತನ್ನ ದೇಶವಾಸಿಗಳ ಶೌರ್ಯವನ್ನು ವಿವರಿಸುವ ಭರದಲ್ಲಿ ಪಾಕಿಸ್ತಾನಿ ಶಿಕ್ಷಣ ವ್ಯವಸ್ಥೆ ಅದ್ಯಾವ ಪರಿಯ ಸುಳ್ಳು ಹೇಳುತ್ತದೆ ಗೊತ್ತೆ?

ಮತ್ತಷ್ಟು ಓದು »