ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 23, 2015

31

ನಿಲುಮೆ ಪ್ರಕಾಶನ ಚೊಚ್ಚಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

‍ನಿಲುಮೆ ಮೂಲಕ

ನಿಲುಮೆಯ ಓದುಗರೇ,

ಮುಂದಿನ ಭಾನುವಾರ,ಮಾರ್ಚ್ ೧ರಂದು ಬೆಳಿಗ್ಗೆ ೧೦.೩೦ಕ್ಕೆ,ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ “ನಿಲುಮೆ ಪ್ರಕಾಶನ”ದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬಾಲಗಂಗಾಧರ,ಶತಾವಧಾನಿ ಗಣೇಶ್,ಪ್ರೊ.ಪ್ರಧಾನ್ ಗುರುದತ್ತ,ಪ್ರೊ.ರಾಜಾರಾಮ್ ಹೆಗಡೆ ಹಾಗೂ ಇನ್ನಿತರ ಗಣ್ಯರು ನಮ್ಮೊಂದಿಗಿರಲಿದ್ದಾರೆ.

Nilume Book Release Guests - Copy
ಪುಸ್ತಕ ಬಿಡುಗಡೆಗೆ ಸರ್ವರಿಗೂ ಸುಸ್ವಾಗತ.

ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಮುಗಿದ ನಂತರ “ನಿಲುಮಿಗರ ದಿನ”ವಿರಲಿದೆ. ನಿಲುಮಿಗರ ದಿನದಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವ-ವಿವರಗಳನ್ನು ಈ http://goo.gl/X981PX ಕೊಂಡಿಯಲ್ಲಿ ದಾಖಲಿಸಿ.ನಮಗೆ ಕಾರ್ಯಕ್ರಮದ ತಯಾರಿಗೆ ಇದು ಅವಶ್ಯಕ.ಈ ವಿವರಗಳನ್ನು ದಾಖಲಿಸಲು ಕಡೆಯ ದಿನ ೨೫ನೇ ತಾರೀಖು.ಅದರಾಚೆಗೆ ಈ ಕೊಂಡಿ ಲಭ್ಯವಿರುವುದಿಲ್ಲ.

ಮಿಥಿಕ್ ಸೊಸೈಟಿ,ನೃಪತುಂಗ ರಸ್ತೆ.ತಲುಪುವ ಮಾರ್ಗ : ಮೆಜೆಸ್ಟಿಕ್ ಕಡೆಯಿಂದ ಬರುವುದಾದರೆ ಕೆ.ಆರ್ ಸರ್ಕಲ್ ನಲ್ಲಿ ಬಲ ತಿರುವು (ಕಬ್ಬನ್ ಪಾರ್ಕಿನೊಳಗಿನಿಂದ ಬಂದರೆ,ಕಾರ್ಪೊರೇಶನ್ ಸರ್ಕಲ್ ಕಡೆಗೆ ಎಡತಿರುವು) ತೆಗೆದುಕೊಂಡು ರಸ್ತೆಯ ಬಲಭಾಗದಲ್ಲೆ ಮುಂದುವರೆದರೆ ಸರ್ಕಾರಿ ವಿಜ್ನಾನ ಕಾಲೇಜಿನ ನಂತರದ ಕಟ್ಟಡವೇ ಮಿಥಿಕ್ ಸೊಸೈಟಿ (ಎದುರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆ). ಬಸ್ಸಿನಲ್ಲಿ ಬರುವವರು ಬನ್ನಪ್ಪ ಪಾರ್ಕ್ ಬಸ್ ನಿಲ್ದಾಣದಲ್ಲಿ ಇಳಿದು ಸಿಟಿ ಸಿವಿಲ್ ಕೋರ್ಟ್ ರಸ್ತೆಯ ಕಡೆ ನಡೆದುಕೊಂಡು ಬಂದರೂ ತಲುಪಬಹುದು.(ಹತ್ತು-ಹದಿನೈದು ನಿಮಿಷದ ಹಾದಿ)

ನಿಮ್ಮ ಆಗಮನದ ನಿರೀಕ್ಷೆಯಲ್ಲಿ.

ನಿಮ್ಮೊಲವಿನ,
ನಿಲುಮೆ ಬಳಗ

31 ಟಿಪ್ಪಣಿಗಳು Post a comment
  1. Nagshetty Shetkar's avatar
    Nagshetty Shetkar
    ಫೆಬ್ರ 23 2015

    ‘ವೈದಿಕ ದಾಸ್ಯದಲ್ಲಿ ಭಾರತ ಹಾಗೂ ತತ್ಪರಿಣಾಮವಾಗಿ ಬೌದ್ಧಿಕ ದಾಸ್ಯದಲ್ಲಿ ಭಾರತ’ – ಇದು ಚರ್ಚೆ ಆಗತಕ್ಕ ವಿಷಯ.

    ಉತ್ತರ
  2. Shripad's avatar
    Shripad
    ಫೆಬ್ರ 23 2015

    ಅದನ್ನೆಲ್ಲ ದಾಸ್ಯ ಎಂದು ಗುರುತಿಸುವಷ್ಟು ಇನ್ನೂ ಬೆಳೆದಿಲ್ಲ. ಹಾಗಾಗಿ ಈ ಮಾತು ಅನ್ವಯಿಸುವುದಿಲ್ಲ.

    ಉತ್ತರ
  3. ಶ್ಯಾಮ್'s avatar
    ಶ್ಯಾಮ್
    ಫೆಬ್ರ 23 2015

    ….ಮುಂತಾದ ಪ್ರಮುಖ ಎಡಪಂಥೀಯ ಚಿಂತಕರನ್ನೂ ಆಹ್ವಾನಿಸಿ…
    ೧ ಎಡ ಪಂಥೀಯರ ಕಾರ್ಯಕ್ರಮದಲ್ಲಿ ಬಲಪಂಥೀಯರನ್ನು ಕಾಣಲಿಲ್ಲ
    ೨ ಅಷ್ಟಕ್ಕೂ, ಎಲ್ಲರು ಒಂದೇ ಎನ್ನುವಾಗ ಈ ಪಂಥಗಳೆಲ್ಲ ಬೇಕಾ ?

    ಉತ್ತರ
  4. ani's avatar
    ani
    ಫೆಬ್ರ 23 2015

    [[‘ವೈದಿಕ ದಾಸ್ಯದಲ್ಲಿ ಭಾರತ ಹಾಗೂ ತತ್ಪರಿಣಾಮವಾಗಿ ಬೌದ್ಧಿಕ ದಾಸ್ಯದಲ್ಲಿ ಭಾರತ’ ]] ನಿಮ್ಮ ಈ ಹೇಳಿಕೆಗೆ ಹಿಂದಿನ ಒಂದು ಲೇಖನದಲ್ಲಿ ಕಮೆಂಟ್ ಬರೆದಿರುವೆ. ಆದರೂ ನೀವು ಪದೇ ಪದೇ ನಿಮ್ಮ ರಾಗ ಹಾಡುವದು ನೋಡಿ ಇನ್ನೊಮ್ಮೆ ಬರೆಯುತ್ತಿರುವೆ.ಸಹಸ್ರಾರು ವರ್ಷ ಕಳೆದರೆ ಚಿಂಪಾಂಜಿ ಗೋರಿಲ್ಲಾ ಮಂಗಗಳ ಮೆದುಳೂ ವಿಕಾಸವಾಗುತ್ತಂತೆ ವಿಜ್ಞಾನದ ಪ್ರಕಾರ. ಆದರೆ ಭಾರತದಲ್ಲಿನ ಅವೈದಿಕರ ಮೆದಳು ಮಾತ್ರ ಸಹಸ್ರಾರು ವರ್ಷಗಳಾದರೂ ವಿಕಾಸವಾಗಲೇ ಇಲ್ಲ!!!! ಯಾಕೆ ಅವರು ಮಂಗ ಚಿಂಪಾಂಜಿಗಳಿಗಿಂತ ಕಡೆಯೇ??!!! ಅವರ ಮೆದುಳು ವಿಕಾಸವನ್ನು ಮರೆತೇ ಬಿಟ್ಟಿದೆಯೇ??!! ಇದು ನಿಜಕ್ಕೂ ವಿಜ್ಞಾನದ ವಿಸ್ಮಯವೇ ಸರಿ!!!!! ಹೀಗೆ ಭಾರತದ ಅವೈದಿಕರ ಮೆದುಳಿನ ವಿಕಾಸವನ್ನೇ ತಡೆಹಿಡಿದ ಬ್ರಾಹ್ಮಣನ ಮೆದುಳಿನ ವಿಕಾಸವೆಷ್ಟಿರಬೇಕು??!! ನಿಜಕ್ಕೂ ಆತ ಮನುಷ್ಯನಲ್ಲ. ಭೂಸರನೇ ಸರಿ . ಅಥವಾ ಅವರೆಲ್ಲಾ ಭೂಮಿಯ ಮೇಲಿನ ದೇವತೆಗಳಲ್ಲಾ ಅವರುಗಳೇ ದೇವರೆಂದರೆ ನಿಜಕ್ಕೂ ತಪ್ಪಾಗದು. ಯಾಕೆಂದರೆ ಇಂಥ ಅತಿ ಮಾನುಷ ಕಾರ್ಯವನ್ನು ಅವರು ಮಾಡುತ್ತಾರೆಂದರೆ ಅವರು ದೇವರಲ್ಲದೇ ಇನ್ನೇನು?? ಭಾರತದಲ್ಲಿ ಅವರು ಇರುವದೇ 3% . ಅಂಥವರು 97% ಜನರನ್ನು ಹತ್ತಿಪ್ಪತ್ತಲ್ಲಾ ಬರೋಬ್ಬರಿ ಸಹಸ್ರಾರು ವರ್ಷ ಮರಳು ಮಾಡಿ ತಾವು ಹೇಳಿದಂತೆ ಕೇಳಿಕೊಂಡಿರುವಂತೆ ಶೋಷಣೆ ಮಾಡಿದ್ದಾರೆಂದರೆ ಅಬ್ಬಾ!! ನಿಜಕ್ಕೂ ಅವರು ದೇವರೇ ಸರಿ. ಇಲ್ಲವೆಂದರೆ ವೈದಿಕೇತರರ ತಲೆಯಲ್ಲಿ ಕುರಿಯ ಮೆದುಳು ಇರಬೇಕಷ್ಟೇ. ನಿಜವಾಗಿಯೂ ಬ್ರಾಹ್ಮಣನ ಮೆದುಳನ್ನು ಮತ್ತು ವಿಜ್ಞಾನದ ಈ ಸೋಜಿಗವನ್ನು ಪರೀಕ್ಷೆಗೆ ಒಳಪಡಿಸಲೇ ಬೇಕು. ಇನ್ನು ವೈದಿಕೇತರರಿಗೆ ಮೂರು ದಾರಿಗಳಿವೆ. ಒಂದು ಬ್ರಾಹ್ಮಣರನ್ನು ದೇವರೆಂದು ತಿಳಿದು ಅವರನ್ನು ಆರಾಧಿಸಿ(ಇಂಥ ಅದ್ಭುತ ಕಾರ್ಯಕ್ಕಾಗಿ) ಇಲ್ಲವಾದರೆ ಬ್ರಾಹ್ಮಣ ಶೋಷಣೆಯ ಮಿಥ್ಯಾವಾದಕ್ಕೆ ಸಮಾಧಿ ಮಾಡಿ. ಅಥವಾ ನಾವು ಮಂಗ ಚಿಂಪಾಂಜಿಗಿಂತಲೂ ಹಿಂದುಳಿದಿದ್ದೇವೆ ಎಂದು ಒಪ್ಪಿಕೊಳ್ಳಿ. ಚಂಡು ನಿಮ್ಮ ಅಂಗಳದಲ್ಲಿದೆ ಯಾವುದನ್ನು ಆಯ್ದುಕೊಳ್ಳುತ್ತೀರೋ ನಿಮಗೆ ಬಿಟ್ಟಿದ್ದು.

    ಉತ್ತರ
    • Nagshetty Shetkar's avatar
      Nagshetty Shetkar
      ಫೆಬ್ರ 23 2015

      ಬೌದ್ಧಿಕ ವಿಕಾಸಕ್ಕೆ ಅಕ್ಷರ ಶಿಕ್ಷಣ ಅತ್ಯಗತ್ಯ. ವೈದಿಕರು ಅಕ್ಷರಜ್ಞಾನವನ್ನು ತಮ್ಮ ಸ್ವತ್ತಾಗಿ ಮಾಡಿಕೊಂಡು ಅವೈದಿಕರನ್ನು ನಿರಕ್ಷರಕುಕ್ಷಿಗಲಾಗಿಸಿದ್ದರು. ಶಿಕ್ಷಣ ವಂಚಿತರಾದುದರಿಂದ ಅವೈದಿಕ ಸಮುದಾಯಗಳು ಬೌದ್ಧಿಕವಾಗಿ ಸಂಘಟಿತರಾಗಿ ಶೋಷಣೆಯ ವಿರುದ್ಧ ಹೋರಾಡಲು ಅವಕಾಶವಾಗಲೇ ಇಲ್ಲ.

      ಉತ್ತರ
      • ani's avatar
        ani
        ಫೆಬ್ರ 24 2015

        [[ಬೌದ್ಧಿಕ ವಿಕಾಸಕ್ಕೆ ಅಕ್ಷರ ಶಿಕ್ಷಣ ಅತ್ಯಗತ್ಯ. ವೈದಿಕರು ಅಕ್ಷರಜ್ಞಾನವನ್ನು ತಮ್ಮ ಸ್ವತ್ತಾಗಿ ಮಾಡಿಕೊಂಡು ಅವೈದಿಕರನ್ನು ನಿರಕ್ಷರಕುಕ್ಷಿಗಲಾಗಿಸಿದ್ದರು. ಶಿಕ್ಷಣ ವಂಚಿತರಾದುದರಿಂದ ಅವೈದಿಕ ಸಮುದಾಯಗಳು ಬೌದ್ಧಿಕವಾಗಿ ಸಂಘಟಿತರಾಗಿ ಶೋಷಣೆಯ ವಿರುದ್ಧ ಹೋರಾಡಲು ಅವಕಾಶವಾಗಲೇ ಇಲ್ಲ.]] ನಿಮ್ಮ ಎಡಚರ ಪ್ರಕಾರ ವಾಲ್ಮೀಕಿ ಬೇಡರವನು. ಯಾಕೆಂದರೆ ಆತ ಬೇಡನಲ್ಲವೆಂದು ತಿಳಿಸಿದ ಪುಸ್ತಕ ಬ್ಯಾನ್ ಮಾಡಿಸಿದ್ದೀರಿ. ಅಂದ ಮೇಲೆ ಆತ ಬೇಡರವನೇ. ಅವನು ಅಷ್ಟೊಂದು ಪ್ರಭುದ್ಧ ಕಾವ್ಯ ಬರೆಯಬೇಕೆಂದರೆ ಅವನಿಗೆ ಯುನಿವರ್ಸಿಟಿ ಹಂತದವರೆಗಾದರೂ ಶಿಕ್ಷಣ ಆಗಿರಲೇ ಬೇಕಲ್ಲವೆ?? ಆ ಶಿಕ್ಷಣವನ್ನು ಅವನಿಗಾರು ನೀಡಿದರು? ಕೇವಲ ವಾಲ್ಮೀಕಿ ಎಂಬ ಅವೈದಿಕನಿಗೆ ಮಾತ್ರ ನೀಡಿ ಉಳಿದವರಿಗೆ ಏಕೆ ಬಿಟ್ಟರು?? ನಿಮ್ಮ ಪ್ರಕಾರ ವ್ಯಾಸ ಕಾಳಿದಾಸ, ಕೃಷ್ಣ ಇವರೂ ಅವೈದಿಕರೇ ಇವರು ಇಷ್ಟೊಂದು ಪ್ರಭುದ್ಧ ಮಟ್ಟದ ಕಾವ್ಯ , ನಾಟಕ ಬರೆಯಲು ಯಾರು ಕಲಿಸಿದರು? ಇನ್ನು ಭಾರತದ ವೈದಿಕರ ವಿರುದ್ಧ ಬಂಡಾಯವೆದ್ದು ಭಾರತದಲ್ಲಿ ಬೌದ್ಧ ಧರ್ಮ ಹುಟ್ಟಿದ್ದು ನೀವೇ ಎಡಚರೇ ಆಗಾಗ ಹೇಳುತ್ತಲೇ ಇರುತ್ತೀರಿ. ಅಷ್ಟೇ ಅಲ್ಲ ಅಶೋಕನೇ ಮೊದಲು ಅಕ್ಷರಾಭ್ಯಾಸಿ ಎಲ್ಲರಿಗೂ ಅಕ್ಷರ ಕಲಿಸಿದವನು ಎಂದೂ ಹೇಳಿರುತ್ತೀರಿ. ಅವನು ಕೇವಲ ವೈದಿಕರಿಗೆ ಮಾತ್ರ ಅಕ್ಷರ ಕಲಿಸಿದನೇ?? ಶೂದ್ರರಿಗೆ ಯಾಕೆ ಕಲಿಸಲಿಲ್ಲ?? ಅವನು ಹಾಗೂ ಅವನ ಧರ್ಮ, ಅವನ ಗುರು ಬುದ್ಧ ಇವರೆಲ್ಲಾ ವೈದಿಕರ ಆಚರಣೆ, ಕಂದಾಚಾರ ಇತ್ಯಾದಿಗಳ ವಿರುದ್ಧ ಬಂಡೆದ್ದವರಲ್ಲವೆ?? ಅಂಥವರು ವೈದಿಕರಿಗೆ ಮಾತ್ರ ವಿದ್ಯೆ ಯಾಕೆ ಕಲಿಸಿದರು?? ಶೂದ್ರರಿಗೆ ಯಾಕೆ ಕಲಿಸಲಿಲ್ಲ?? ಹಾಗೆ ನೋಡಿದರೆ ಅವರು ಕೇವಲ ಶೂದ್ರರಿಗೆ ಮಾತ್ರ ಕಲಿಸಬೇಕಾಗಿತ್ತಲ್ಲವೆ?? ಇನ್ನು ಅತ್ಯಂತ ಶ್ರೇಷ್ಟ ಮಟ್ಟದ ವಿಶ್ವವಿದ್ಯಾಲಯವೆಂದು ಖ್ಯಾತವಾದ ಭಾರತಲ್ಲೇ ಇದ್ದ ನಳಂದ ವಿಶ್ವ ವಿದ್ಯಾಲಯವು ಅತೀ ಹೆಚ್ಚು ಬೌದ್ಧ ವಿದ್ಯಾರ್ಥಿಗಳನ್ನು ಹೊಂದಿತ್ತು. ಬುದ್ಧನ ವಿಚಾರಗಳನ್ನು ಹೆಚ್ಚು ತಿಳಿಯಲು ವಿದ್ವಾಂಸರು ವಿದ್ಯಾರ್ಥಿಗಳು ದೇಶವಿದೇಶದಿಂದ ಈ ವಿಶ್ವ ವಿದ್ಯಾಲಯಕ್ಕೆ ಬರುತ್ತಿರುವದು ತಿಳಿದೇ ಇದೆ. ಇಲ್ಲೆಲ್ಲ ಅವೈದಿಕರಾದ ಶೂದ್ರ ಬೌದ್ಧ ವಿದ್ಯಾರ್ಥಿಗಳೇ ಇದ್ದರಲ್ಲವೆ? ಇವರೇಕೆ ತಮ್ಮವರನ್ನೆಲ್ಲಾ ಸುಶಿಕ್ಷಿತರನ್ನಾಗಿಸಲಿಲ್ಲ?? ಕೇವಲ ವೈದಿಕರಿಗೆ ಮಾತ್ರವೇನೇ ಅವರೂ ವಿದ್ಯೆ ಹೇಳಿಕೊಟ್ಟದ್ದೇಕೆ?? ಇನ್ನು ಹನ್ನೆರಡನೇ ಶತಮಾನಕ್ಕೆ ಬಂದರೆ ಶೂದ್ರ ಶರಣರ ಪರಂಪರೆಯೇ ಇದೆಯಲ್ಲಾ?? ಇವರಿಗೆಲ್ಲಾ ಅಕ್ಷರ ಯಾರು ಹೇಳಿಕೊಟ್ಟರು? ವಚನಗಳೆಂದರೆ ಪದ್ಯಗಳಲ್ಲ. ಅವು ಮಾತುಗಳು ಅವನ್ನು ಬರಹ ರೂಪದಲ್ಲಿಡದೇ ಅವು ಉಳಿಯುವದಿಲ್ಲ. ಬೇಡರವನಾದ ಅಲ್ಲಮ ಪ್ರಭು ಶೆಟ್ಟರ ಹೆಣ್ಣುಮಗಳಾದ ಅಕ್ಕಮಹಾದೇವಿ ಶೂದ್ರರಾಗಿದ್ದರೂ ಅದು ಹೇಗೆ ತಾನೆ ಸಂಸ್ಕೃತ ಶ್ಲೋಕಗಳ ಉದಾಹರಣೆ ನೀಡಿ ವಚನ ಬರೆದರು? ಅನುಭವ ಮಂಟಪದಲ್ಲಿ ವಯಸ್ಕರಿಗೆ ಶಿಕ್ಷಣ ನೀಡಿದರೆಂದು ನೀವು ಹೇಳಬಹುದು. ಆದರೆ ಒಂದು ಪ್ರಬುದ್ಧ ಮಟ್ಟದ ಕಾವ್ಯ ಬರೆಯುವಷ್ಟು ಈ ಶಿಕ್ಷಣದಿಂದ ಕಲಿಯಲು ಸಾಧ್ಯವಿದೆಯೇ? ಕೆಲವರು ಒಂದಿಬ್ಬರು ಅಪವಾದಿಗಳಿರಬಹುದು. ಆದರೆ ಎಷ್ಟೊಂದು ಕೆಳಜಾತಿಯವರೆಲ್ಲಾ ಕಾವ್ಯ ರಚಿಸಿದ್ದಾರೆ ಎಲ್ಲಾರೂ ವೈಯಸ್ಕ ಶಿಕ್ಷಣದಿಂದಲೇ ಇದನ್ನು ಸಾಧಿಸಿದರೆಂದರೆ ಖಂಡಿತ ನನಗಂತೂ ನಂಬಲು ಸಾಧ್ಯವಿಲ್ಲ. ಯಾಕೆಂದರೆ ನಾನು ವಯಸ್ಕ ಶಿಕ್ಷಣದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಒಬ್ಬಿಬ್ಬರಿಗೆ ಕಲಿಸುವಲ್ಲೇ ಉಫ್ ಅನ್ನಬೇಕಾಗುತ್ತಿತ್ತು. ಈಗಲೂ ನಿಮಗೆ ಎರಡು ಅವಕಾಶಗಳಿವೆ. ಒಂದು ಬೌದ್ಧ ಮತ್ತು ಲಿಂಗಾಯತ ಧರ್ಮಗಳು ವೈದಿಕ ಧರ್ಮದ ವಿರುದ್ಧ ಬಂಡೆದ್ದು ಸ್ಥಾಪನೆಯಾದವುಗಳಲ್ಲವೆಂದು ಒಪ್ಪಿಕೊಳ್ಳಿ ಅಥವಾ ವೈದಿಕರು ವಿದ್ಯೆಯನ್ನು ಕಲಿಸಲಿಲ್ಲ ಮುಚ್ಚಿಟ್ಟರೆಂಬ ಬೊಗಳೆಯನ್ನು ಬಿಡಿ. ನೀವು ಎರಡನೆಯದನ್ನು ಸಾಧಿಸಲು ಹೊರಟರೆ ನಳಂದದಲ್ಲಿ ಬೌದ್ಧರ ಶಿಕ್ಷಣ ನಡೆಯುತ್ತಿರಲಿಲ್ಲ. ನಡೆದರೂ ವೈದಿಕರ ಪ್ರಾಬಲ್ಯವೇ ಇತ್ತು. ಬೌದ್ಧರ ಚಿಂತನೆಗಳನ್ನು ವೈದಿಕರೇ ಕಲಿಯುತ್ತಿದ್ದರೆಂದು ಹೇಳಬೇಕಾಗುತ್ತದೆ. ಆಗ ವೈದಿಕರ ವಿರುದ್ಧ ಬಂಡಾಯವೆದ್ದು ಬೌದ್ಧ ಧರ್ಮ ಎಂಬ ವಾದ ಬಿದ್ದು ಹೋಗುತ್ತದೆ. ಇಲ್ಲವಾದರೆ ವೈದಿಕರು ವಿದ್ಯೆ ಮುಚ್ಚಿಟ್ಟರೆಂಬ ವಾದವನ್ನಾದರೂ ಬಿಡಬೇಕಾಗುತ್ತದೆ. ಯಾವುದನ್ನು ಬಿಡುತ್ತೀರೋ ನಿಮಗೆ ಬಿಟ್ಟದ್ದು.

        ಉತ್ತರ
        • ani's avatar
          ani
          ಫೆಬ್ರ 24 2015

          ಮೇಲಿನ ಕಮೆಂಟಿನಲ್ಲಿ ಒಂದೆರಡು ದೋಷಗಳಾಗಿವೆ. ದಯವಿಟ್ಟು ಸರಿಪಡಿಸಿಕೊಂಡು ಓದಿ. 1) ಕೃಷ್ಣ ಇವರೂ ಅವೈದಿಕರೇ ಇವರು ಇಷ್ಟೊಂದು= ಇವರಿಗೆ ಇಷ್ಟೊಂದು 2) ಶರಣರ ಬಗ್ಗೆ ಬರೆದಲ್ಲಿ ಕಾವ್ಯ ಎಂದು ಹೇಳಿದ್ದೇನೆ ಅದನ್ನು ವಚನ ಎಂದು ಓದಿಕೊಳ್ಳಿ. 3] ಬಂಡಾಯವೆದ್ದು= ಬಂಡಾಯವೆದ್ದ 4] ಬೌದ್ಧ ಧರ್ಮ ಹುಟ್ಟಿದ್ದು ನೀವೇ ಎಡಚರೇ= ಬೌದ್ಧ ಧರ್ಮ ಹುಟ್ಟಿದ್ದು ಎಂದು ನೀವೇ ಎಡಚರೇ

          ಉತ್ತರ
          • Nagshetty Shetkar's avatar
            Nagshetty Shetkar
            ಫೆಬ್ರ 24 2015

            ಒಂದೆರಡು = ೪?!! LoL

            ಉತ್ತರ
            • ani's avatar
              ani
              ಫೆಬ್ರ 24 2015

              ಶೆಟ್ಕರ್ ಮಹಾಶಯರೇ ನಾನೆತ್ತಿದ ಪ್ರಶ್ನೆಗಳಿಗೆ ಉತ್ತರಿಸಿರಿ. ನನ್ನ ದೋಷಗಳಿಗಲ್ಲಾ. ವೇಗವಾಗಿ ಬರೆಯುವಾಗ ಎಲ್ಲರಿಗೂ ದೋಷಗಳಾಗುವದು ಸಹಜ. “ನಡೆಯುವವರೆಡಹುವರಲ್ಲದೇ ಬರುಬರೆಡಹುವರೆ?” ನಿಮ್ಮ ಹತ್ತಿರ ನನ್ನ ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಕಾರಣ ನನ್ನ ದೋಷಗಳು ಕಣ್ಣಿಗೆ ಕಾಣುತ್ತಿವೆ. ನನ್ನ ದೋಷಗಳ ಪಟ್ಟಿ ನಾನೇ ಕೊಟ್ಟಿದ್ದಾಗ್ಯೂ ಅದನ್ನೆ ನೀವು ತೋರಿಸುತ್ತೀರೆಂದರೆ ಬೌದ್ಧಿಕ ದಿವಾಳಿ ಆಗಿದ್ದೀರೆಂದೇ ಅರ್ಥ.

              ಉತ್ತರ
              • Nagshetty Shetkar's avatar
                Nagshetty Shetkar
                ಫೆಬ್ರ 24 2015

                ಮೊದಲು ನೀವುಗಳು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಿ. ಸದರಿ ಫಂಕ್ಷನ್ನಿಗೆ ಏಕೆ ಯಾವ ಎಡಪಂಥೀಯ ಪ್ರಗತಿಪರ ಚಿಂತಕರನ್ನೂ ಅತಿಥಿ ಭಾಷಣಕಾರರಾಗಿ ಆಹ್ವಾನಿಸಿಲ್ಲ? ಹೇಳಿ.

                ಉತ್ತರ
            • Mratyunjaya's avatar
              Mratyunjaya
              ಫೆಬ್ರ 25 2015

              ನಾಗಶೆಟ್ಟಿ ಅವರದು ಬೌದ್ಧಿಕ ದಾರಿದ್ರ್ಯ. ಕೆಲವೊಮ್ಮೆ ಟೈಪ್ ಮಾಡುವಾಗ ತಪ್ಪುಗಳಾಗಬಹುದು. ಕಾಗುಣಿತ, ಒತ್ತಕ್ಷರ, ದೀರ್ಘ ಇಂಥವುಗಳನ್ನೇ ದೊಡ್ಡ ತಪ್ಪೆಂದು ಹೇಳುವ ನಾಗಶೆಟ್ಟಿ ಅವರ ವರ್ತನೆ ಹಾಸ್ಯಾಸ್ಪದವಾಗಿ ಕಾಣಿಸುತ್ತದೆ. ಬೇರೆಯವರ ವಿಚಾರಗಳು ಸರಿಯಿದ್ದರೂ ಅವರದು ಒಪ್ಪಿಕೊಳ್ಳದ ಮನಸ್ಥಿತಿ. ತೀರ ವಿತಂಡವಾದ ಎಂದೆನಿಸುತ್ತದೆ. ನಾಗಶೆಟ್ಟಿ ಅವರು ವ್ಯಕ್ತಿನಿಷ್ಠವಾಗಿ ಚಎಚಿಸಲು ಹೋಗದೆ ವಸ್ತುನಿಷ್ಠವಾಗಿ ಚರ್ಚಿಸುವ ಮನಸ್ಥಿತಿ ಬೆಳೆಸಿಕೊಂಡರೆ ಅವರಿಂದ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ದೊರೆಯಲಿದೆ.

              ಉತ್ತರ
              • Nagshetty Shetkar's avatar
                Nagshetty Shetkar
                ಫೆಬ್ರ 26 2015

                “ನಾಗಶೆಟ್ಟಿ ಅವರಿಂದ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ದೊರೆಯಲಿದೆ.”

                +1

                ಉತ್ತರ
                • shripad's avatar
                  shripad
                  ಫೆಬ್ರ 26 2015

                  ಜ್ನಾನಪೀಠಿಯೂ ಆಗಲಿದ್ದಾರೆ!?

                  ಉತ್ತರ
                  • Nagshetty Shetkar's avatar
                    Nagshetty Shetkar
                    ಫೆಬ್ರ 27 2015

                    ವಚನ ಸಾಹಿತ್ಯದ ಬಗ್ಗೆ ಬರೆದಿರುವ ಭಾಷ್ಯಕ್ಕೆ ದರ್ಗಾ ಸರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಮುಂದೊಂದು ದಿನ ದೊರೆಯಲಿದೆ ಎಂಬ ವಿಶ್ವಾಸ ಪ್ರಗತಿಪರ ಚಿಂತಕರಿಗಿದೆ. ಬಸವಪ್ರಜ್ಞೆಯನ್ನು ಬೆಳೆಸಲು ಅವರು ಮಾಡಿರುವ ಸೇವೆಗೆ ಸದ್ಯದಲ್ಲೇ ಅವರಿಗೆ ಪದ್ಮಶ್ರೀ ಕೂಡ ಸಿಗಲಿದೆ ಎಂಬ ನಂಬಿಕೆ ಇದೆ.

                    ಉತ್ತರ
                    • shripad's avatar
                      shripad
                      ಫೆಬ್ರ 27 2015

                      ಯಾವುದೇ ಖಾತರಿ ಇಲ್ಲದೆ ಮುಂದೆ ಹೀಗಾಗುತ್ತದೆ ಎಂದು ನಂಬುವುದು ಅವೈಜ್ನಾನಿಕ. ಹಾಗಾಗಿ ನಿಮ್ಮದು ಮೂಢನಂಬಿಕೆಯಲ್ವಾ? ವಚನವನ್ನು ಅಷ್ಟಿಷ್ಟು ಓದಿಯೂ ಮೂಢರಾಗ್ತೀರಲ್ಲಾ? ಯಾಕೆ?

                    • Nagshetty Shetkar's avatar
                      Nagshetty Shetkar
                      ಫೆಬ್ರ 28 2015

                      ದರ್ಗಾ ಸರ್ ಅವರನ್ನು ಕಂಡರೆ ಏಕೆ ಈ ಪಾಟಿ ಹೊಟ್ಟೆ ಉರಿ ಹಾಗೂ ಅಸಹನೆ? ಭೈರಪ್ಪ ನ್ಯಾಷನಲ್ ಪ್ರೊಫೆಸರ್ ಆಗಿದ್ದಾರೆ ಎಂದ ಮೇಲೆ ದರ್ಗಾ ಸರ್ ಇಂಟರ್ನ್ಯಾಷನಲ್ ಪ್ರೊಫೆಸರ್ ಆಗುವ ಯೋಗ್ಯತೆ ಇರುವವರು ಎಂಬ ಸರಳ ಸತ್ಯವನ್ನು ನಿಮ್ಮಿಂದ ಅರಗಿಸಿಕೊಳ್ಳಲಾಗದಾಗಿದೆಯೇ? ನಿಮ್ಮ ಸಮಸ್ಯೆ ಏನು?

      • shripad's avatar
        shripad
        ಫೆಬ್ರ 24 2015

        @ಶೆಟ್ಕರ್: ವೈದಿಕರು ಯಾವುದನ್ನು ಜ್ನಾನ ಎಂದು ಕರೆದರೋ ಅದನ್ನೇ ಯಾಕೆ ನೀವೂ ಅನುಸರಿಸಬೇಕು? ನೀವು ನಿಮ್ಮದೇ ಆದ ಜ್ನಾನಶಾಖೆಯನ್ನು ಆರಂಭಿಸಿ ಎಲ್ಲರಿಗೂ ಹಂಚಿ.

        ಉತ್ತರ
        • Nagshetty Shetkar's avatar
          Nagshetty Shetkar
          ಫೆಬ್ರ 24 2015

          ಸೈನ್ಸ್.

          ಉತ್ತರ
          • WITIAN's avatar
            WITIAN
            ಫೆಬ್ರ 28 2015

            ನಾಗಶೆಟ್ಟಿ ಶೇತ್ಕರ್ ಎಂಬ ಈ crack pot ಬರೆಯುವ ಪ್ರತಿಕ್ರಿಯೆಗಳಲ್ಲೇ ಗೊತ್ತಾಗುತ್ತದೆ..ಎಷ್ಟರ ಮಟ್ಟಿಗಿನ ‘ಸೈನ್ಸ್’ ತಿಳಿದಿದೆ ಈ ಮನುಷ್ಯನಿಗೆ ಅಂತ! ಅದೆಷ್ಟು ಸಾವಧಾನದಿಂದ ಉತ್ತರಿಸಿದರೂ ತನ್ನ ಮೊಂಡುವಾದಗಳನ್ನು ಮುಂದಿಡುವ ಈ ಹುಂಬ ಮನುಷ್ಯನ ಖಯಾಲಿ ಪುಲಾವ್ ಗಳನ್ನು ನೋಡಿ.. ಈ ಮನುಷ್ಯನ ‘ಅಸಾಧಾರಣ’ ಸಾಧನೆಗಳಿಗೆ ಜ್ಞಾನಪೀಠ ಸಿಗುತ್ತದಂತೆ! ಈತನ ಪರಮಗುರು ‘ದರ್ಗಾ’ಸರ್ ಗೆ ಪದ್ಮಶ್ರೀ ಸಿಗುತ್ತದಂತೆ! ನೆಟ್ಟಗೆ ನಾಲ್ಕು ಜನರಿಂದ ತೂಕದ ಕಮೆಂಟ್ ಬರೆದಿದ್ದಕೆ up vote ಸಿಗದಿದ್ದರೂ ತನ್ನ ಕಾಮೆಂಟುಗಳಿಗೆ ತಾನೇ ೧+ ಅಂತ ಒತ್ತಿಕೊಳ್ಳುವ ಆತ್ಮರತಿಯನ್ನು ನೋಡಿದರೆ ಮರುಕವಾಗುತ್ತದೆ. ನನಗಂತೂ ಈ ಜನ ಸುಧಾರಿಸುವ ಖಾತ್ರಿ ಇಲ್ಲ.. ಒಂದುವೇಳೆ ಸಹ ಓದುಗರೆಲ್ಲರ ಅದೃಷ್ಟ ಚೆನ್ನಾಗಿದ್ದು ಈ ಮನುಷ್ಯನಿಗೆ ತನ್ನದು ವಿತಂಡವಾದ ಎನ್ನುವುದು ಅರಿವಾದರೆ ಅಂದಿಗೆ ಈ trail of absurd comments ನಿಲ್ಲಬಹುದು. ಅಲ್ಲಿಯವರೆಗೆ ಈ ಹುಚ್ಚಾಸ್ಪತ್ರೆ ಕೇಸನ್ನು ಸಹಿಸಿಕೊಳ್ಳುವುದು ಅನಿವಾರ್ಯ!

            ಉತ್ತರ
            • shripad's avatar
              shripad
              ಫೆಬ್ರ 28 2015

              +11111111111111111………………………………………………………………………………………………….

              ಉತ್ತರ
            • Nagshetty Shetkar's avatar
              Nagshetty Shetkar
              ಫೆಬ್ರ 28 2015

              ದಿನೇಶ್ ಅಮೀನ್ ಮಟ್ಟು ಪ್ರಕರಣದಿಂದ ನಿಲುಮೆಯ ಮಾಡರೇಟರ್ ಇನ್ನೂ ಪಾಠ ಕಲಿತ ಹಾಗೆ ಕಾಣುವುದಿಲ್ಲ. ವೈಯಕ್ತಿಕ ನಿಂದನೆ ನಿಲ್ಲಿಸಿ ವಿಚಾರಪ್ರಧಾನವಾದ ಚರ್ಚೆಯನ್ನು ಪ್ರೋತ್ಸಾಹಿಸತಕ್ಕದ್ದು.

              ಉತ್ತರ
              • WITIAN's avatar
                WITIAN
                ಫೆಬ್ರ 28 2015

                ನಿಲುಮೆ ಮಾಡರೇಟರ್ ಗಳಿಗೆ ನನ್ನದೂ ಒಂದು ಸಲಹೆ.. ಕಟು ಶಬ್ದಗಳನ್ನು ಬಳಸಿ ಪ್ರತಿಕ್ರಿಯಿಸುವುದನ್ನು ತಡೆಯುವುದಕ್ಕೆ ಸುಲಭ ಮಾರ್ಗವೆಂದರೆ ವಿತಂಡವಾದ ಮಾಡುವ ನಾ.ಶೆ.ಶೇ. ರಂತಹ ಬರೀ ಸದ್ದು ಮಾಡುವ ಖಾಲಿ ಕೊಡಗಳನ್ನು block ಮಾಡುವುದು. ಇಲ್ಲದಿದ್ದರೆ ವಿದ್ವತ್ಪೂರ್ಣವಾದ, ಆರೋಗ್ಯಕರ ಚರ್ಚೆಯನ್ನು ಮಾಡಲು ಇಚ್ಛಿಸುವ ನನ್ನಂತಹ ಓದುಗರು ಈ ಮನುಷ್ಯನ ಅಸಂಬದ್ಧ ಕಮೆಂಟುಗಳಿಗೆ ಹೀಗೇ ಪ್ರತಿಕ್ರಿಯಿಸುತ್ತೇವೆ. ಸ್ವಾಮಿ, ನಿಮ್ಮ ದರ್ಗಾ ಸರ್ ಅವರನ್ನು ಕಂಡರೆ ನಮಗೆ ಹೊಟ್ಟೆ ಉರಿ ಇಲ್ಲ. ಆದರೆ ‘ಸರ್ವರೋಗಾನಿಕಿ ಸಾರಾಯಿ ಮಂದು’ ಎನ್ನುವ ತೆಲುಗು ಗಾದೆಯಂತೆ ಎಲ್ಲ ಚರ್ಚೆಗೂ ಅವರನ್ನು, ಅವರ ‘ಬಸವ ಪ್ರಜ್ಞೆ’ಯನ್ನು ಎಳೆತಂದು ಕೊಂಡಾಡುವ ನಿಮ್ಮ ಪ್ರವೃತ್ತಿಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ನಗು ಬಂದರೆ ಅಡ್ಡಿಯಿಲ್ಲ. ಆದರೆ ಅದು ಚರ್ಚೆಯ ಗಾಂಭೀರ್ಯಕ್ಕೆ ಕುಂದು ತರುತ್ತದೆ.

                ಉತ್ತರ
          • WITIAN's avatar
            WITIAN
            ಫೆಬ್ರ 28 2015

            “ಸೈನ್ಸ್” ಅಂತೆ! “ಸೈನ್ಸ್” ಪದದ ಸ್ಪೆಲ್ಲಿಂಗ್ ಗೊತ್ತಿದೆಯಾ..ಈ ಪ್ರಭೃತಿಗೆ? ಸ್ವಲ್ಪ ವೈಯುಕ್ತಿಕ ಪರಿಚಯವಿದ್ದವರು ಕೇಳಿ ನೋಡಿ.

            ಉತ್ತರ
            • Nagshetty Shetkar's avatar
              Nagshetty Shetkar
              ಫೆಬ್ರ 28 2015

              ಸೈನ್ಸ್ ವೈದಿಕರ ಖಾಸಗಿ ಸ್ವತ್ತೆ?

              ಉತ್ತರ
              • WITIAN's avatar
                WITIAN
                ಫೆಬ್ರ 28 2015

                ಜ್ಞಾನ – ವಿಜ್ಞಾನದ ಯಾವುದೇ ಶಾಖೆಯ ಮೇಲೆ (ವೇದ, ಶ್ರುತಿ, ಸ್ಮೃತಿಗಳನ್ನೂ ಒಳಗೊಂಡು) ಯಾರದ್ದೂ ಹಕ್ಕಿಲ್ಲ. ತಮ್ಮ ಪರಿಶ್ರಮ ಮತ್ತು ಕ್ಷಮತೆಗೆ ತಕ್ಕಂತೆ ಯಾರು ಎಷ್ಟು ವಿಷಯಗಳನ್ನಾದರೂ ಕಲಿಯಬಹುದು. ಇದು ಕಲಿಕೆಯ ಸ್ವತಃಸಿದ್ಧ ಸತ್ಯ. ಆದರೆ ನಾಶೆಶೇ ರಂತಹ ಢಂಭಾಚಾರಿ ‘ಚಿಂತಕ’ರಿಗೆ ವೇದದಲ್ಲಿನ ವಿಷಯಗಳು ವರ್ಜ್ಯ, ವಚನಗಳಲ್ಲಿರುವುದರಲ್ಲಿ ಅವರ ದರ್ಗಾ ಸರ್ ಹೇಳಿದ್ದಷ್ಟೇ ಸತ್ಯ, ಎಡಪಂಥೀಯ ಚಿಂತಕರು ಮಾತ್ರ ಪೂಜನೀಯರು, ಮಿಕ್ಕವರೆಲ್ಲರೂ ತಿರಸ್ಕಾರಯೋಗ್ಯರು! ನಿಲುಮೆಯಲ್ಲಿ ಯಾವುದೇ ಲೇಖನಗಳಿಗೆ ಅವರ ಪ್ರತಿಕ್ರಿಯೆ ಅತಿಶ್ರೇಷ್ಠವಾದದ್ದು, ಮತ್ತದನ್ನು WITIAN ನಂತಹ ಪಾಮರರು ಖಂಡಿಸಬಾರದು ಇತ್ಯಾದಿ superiority complex ಇದೆ.

                ಉತ್ತರ
  5. shripad's avatar
    shripad
    ಫೆಬ್ರ 23 2015

    @ಶೆಟ್ಕರ್- ಒಂದು: ತಾವು ಒಂದೇ ಮುಖ ಹೊತ್ತು ಬನ್ನಿ. ಒಂದೊಂದು ಕಡೆ ಒಂದೊಂದು ಹೆಸರಲ್ಲಿ ಕಮೆಂಟು ಎಸೆಯುವುದನ್ನು ಬಿಡಿ. ಇದು ಒಂದು ರೀತಿಯ ಮುಖೇಡಿತನ. ವೈದಿಕದವರಿಗೆ ಇಂಥ ಮುಖೇಡಿತನವಿಲ್ಲ.
    ಎರಡು: ತಾವು ಹಾಗೂ ತಮ್ಮ ಭಯಾನಕ ಗುರುಗಳು (ವೈದಿಕ ಪದ, ಕ್ಷಮಿಸಿ) ವೈದಿಕ ಪದಗಳ ದಾಸ್ಯದಿಂದ ಮೊದಲು ಹೊರಬನ್ನಿ. ತಾವು ಹೇಳಿದ “ದರ್ಗಾ ಸರ್ ಅವರು ಚಡಪಡಿಸುತ್ತಿದ್ದಾರೆ ಎಂಬುದು ನಿಮ್ಮ ಭ್ರಮೆ ಅಥವಾ ನೀವು ಅವರ ಬಗ್ಗೆ ಮಾಡುತ್ತಿರುವ ಅಪಪ್ರಚಾರ. ದರ್ಗಾ ಸರ್ ಅವರ ಬೌದ್ಧಿಕ ಪ್ರಖರತೆಯನ್ನು ಎದುರಿಸಲಾಗದೆ ಚಡಪಡಿಸುತ್ತಿರುವವರು ನೀವು. ಅವಧಿಯಲ್ಲಿ ನಡೆದ ಚರ್ಚೆಯಲ್ಲಿ ನೀವುಗಳು ಹಣ್ಣುಗಾಯಿ ನೀರುಗಾಯಿ ಆದವರು ನೀವು. ದರ್ಗಾ ಸರ್ ಅವರು ಬುದ್ಧನಂತೆ ಶಾಂತವಾಗಿ ಮಂದಹಾಸ ಬೀರುತ್ತಲೇ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಶೋಷಿತರ ಧ್ವನಿ ಆಗಿ ಪುರೋಹಿತಶಾಹಿಗಳ ಪಾಲಿನ ದುಃಸ್ವಪ್ನವಾಗಿದ್ದಾರೆ. ದರ್ಗಾ ಸರ್ ಅವರು ನಮಗೆಲ್ಲರಿಗೂ ಆದರ್ಶಪ್ರಾಯರು. ಅವರ ಮಾರ್ಗದರ್ಶನದಲ್ಲಿ ನೀವೂ ಸಮಾಜಮುಖಿಗಳಾಗಿ” ಎಂಬ ವಾಕ್ಯಗಳಲ್ಲಿ ಭ್ರಮೆ, ಅಪಪ್ರಚಾರ, ಬೌದ್ಧಿಕ, ಪ್ರಖರತೆ, ಅವಧಿ, ಚರ್ಚೆ, ಬುದ್ಧ, ಶಾಂತ, ಮಂದಹಾಸ, ಶೋಷಿತ, ಧ್ವನಿ, ಪುರೋಹಿತ, ದುಃಸ್ವಪ್ನ, ಆದರ್ಶಪ್ರಾಯ, ಮಾರ್ಗದರ್ಶನ, ಸಮಾಜಮುಖಿ-ಇವೆಲ್ಲವೂ ವೈದಿಕ ಪದಗಳು. ಇವನ್ನೆಲ್ಲ ಬಿಟ್ಟು ಮಾತಾಡಿ.
    ಮೂರು:”ಅವಧಿಯಲ್ಲಿ ನಡೆದ ಚರ್ಚೆಯಲ್ಲಿ ನೀವುಗಳು ಹಣ್ಣುಗಾಯಿ ನೀರುಗಾಯಿ ಆದವರು ನೀವು” ಇದೆಂಥ ವಾಕ್ಯರಚನೆ? ಗೊತ್ತಾಗಲಿಲ್ಲ.

    ಉತ್ತರ
    • Nagshetty Shetkar's avatar
      Nagshetty Shetkar
      ಫೆಬ್ರ 23 2015

      “ತಾವು ಒಂದೇ ಮುಖ ಹೊತ್ತು ಬನ್ನಿ. ಒಂದೊಂದು ಕಡೆ ಒಂದೊಂದು ಹೆಸರಲ್ಲಿ ಕಮೆಂಟು ಎಸೆಯುವುದನ್ನು ಬಿಡಿ.”

      don’t BS Mr. Bhat.

      ಉತ್ತರ
      • shripad's avatar
        shripad
        ಫೆಬ್ರ 24 2015

        What is this BS Shetkar? Can’t you speak openly? Why code words?

        ಉತ್ತರ
  6. bhatmahesht's avatar
    ಫೆಬ್ರ 23 2015

    ನಾಗಶೆಟ್ಟಿ ಶೆಟ್ಕರ್ ರವರೇ, ಅದೇ ರೀತಿ ಎಡಪಂಥೀಯರ ಕಾರ್ಯಕ್ರಮವಾದ.ಜನನುಡಿಯಲ್ಲಿ ಬಾಲಗಂಗಾಧರ, ಚಿದಾನಂದಮೂರ್ತಿಗಳು ಮತ್ತು ಭೈರಪ್ಪನವರನ್ನು ಕರೆಯಬೇಕು. ಪ್ರಜಾವಾಣಿಯಲ್ಲಿ ಸಿಎಸ್.ಎಲ್.ಸಿ ತಂಡದವರ ಲೇಖನಗಳಿಗೆ ಅವಕಾಶ ಕೊಡಬೇಕು.

    ಉತ್ತರ
  7. ವಾಸು.'s avatar
    ವಾಸು.
    ಫೆಬ್ರ 23 2015

    ವೈದಿಕ ರೆಂದರೆ ಯಾರು? ನನ್ನ ಅರ್ಥದಲ್ಲಿ ಯಾರು ವೇದಗಳನ್ನು ಯಥಾವತ್ ಪಾಲಿಸುತ್ತಾರೋ ಅವರು ವೈದಿಕರು. ವೇದಗಳಲ್ಲಿ ಸೋದರತೆ, ಮಾನವೀಯತೆ ಮತ್ತು ವೈಜ್ಞಾನಿಕತೆ ಇವೆ. ಅಲ್ಲಿ ಧರ್ಮವಿದೆ. ಪಂಥ ಅಥವಾ ಮತಗಳಿಲ್ಲ. ಎಡ ಪಂಥ ಮತ್ತು ಬಲ ಪಂಥಗಳು ಪಂಥಗಳೇ ಹೊರತು ಪರಮ ಸತ್ಯವಲ್ಲ. ನಿಜವಾಗಿ ನಮಗೆ ಬೇಕಿರುವುದು ಸತ್ಯಾನ್ವೇಷಣೆ. ಮತ್ತು ಕಹಿಯಿದ್ದರು ಸತ್ಯವನ್ನು ಒಪ್ಪಿಕೊಳ್ಳುವ ಸಹೃದಯತೆ. ಆದುದರಿಂದ ಈ ಕಾರ್ಯಕ್ರಮಕ್ಕೆ ಸತ್ಯವನ್ನು ಪ್ರೀತಿಸುವವರು ಬರಲಿ. ಅಸತ್ಯವನ್ನು ಒಪ್ಪದೆ ಸತ್ಯವನ್ನು ಮಾತ್ರ ಒಪ್ಪಲಿ, ಇದು ಎಲ್ಲರಿಗೂ ಅನ್ವಯ.

    ಉತ್ತರ
    • Nagshetty Shetkar's avatar
      Nagshetty Shetkar
      ಫೆಬ್ರ 24 2015

      “ಯಾರು ವೇದಗಳನ್ನು ಯಥಾವತ್ ಪಾಲಿಸುತ್ತಾರೋ ಅವರು ವೈದಿಕರು”

      ಬಾಬಾ ಸಾಹೇಬ್ ಪ್ರಣೀತ ಸಂವಿಧಾನವನ್ನು ಯಥಾವತ್ ಆಗಿ ಪಾಲಿಸಿ.

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments