ಸುಳ್ಸುದ್ದಿ : ಹಿಂದೂಪರ ಸಂಘಟನೆಗಳಿಂದಲೇ ಇನ್ನು ಬುದ್ಧಿಜೀವಿಗಳ ರಕ್ಷಣೆ !!
– ಪ್ರವೀಣ್ ಕುಮಾರ್ ಮಾವಿನಕಾಡು
ರಾಜ್ಯದಲ್ಲಿ ವಿಚಾರವಾದಿಯೆಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಗೆ ಏನೇ ಆದರೂ ಅದಕ್ಕೆ ಯಾವುದೇ ಆಧಾರವಿಲ್ಲದೆಯೂ ಹಿಂದೂಪರ ಸಂಘಟನೆಗಳೇ ನೇರ ಹೊಣೆ ಹೊರಬೇಕಾಗಿದ್ದು, ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಿಂದೂಪರ ಸಂಘಟನೆಗಳೇ ನೇರವಾಗಿ ಅವರುಗಳ ರಕ್ಷಣೆಯ ಹೊಣೆಯನ್ನು ಹೊರಲು ಮುಂದಾಗಿವೆ!
ಎಲ್ಲಿ ಯಾರಿಗೆ ಏನೇ ಆಗಲೀ,ಸ್ಥಳಕ್ಕೆ ಪೊಲೀಸರು ಬರುವ ಮುನ್ನವೇ ಉಳಿದ ಬುದ್ಧಿಜೀವಿಗಳು ಮತ್ತು ಕೆಲವು ಪಕ್ಷಗಳು ಹಿಂದೂಪರ ಸಂಘಟನೆಗಳನ್ನೇ ಹೊಣೆ ಮಾಡಿ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸಿಯಾಗಿರುತ್ತದೆ! ಆದ್ದರಿಂದ ಹಿಂದೂ ಸಂಘಟನೆಗಳಿಗೆ ಈ ಬುದ್ಧಿಜೀವಿಗಳು ‘ಬದುಕಿದ್ದರೂ ಕಷ್ಟ-ಸತ್ತರೂ ಕಷ್ಟ’ ಎಂಬಂತಾಗಿದೆ. ಈ ಸಂಕಟದಿಂದ ಪಾರಾಗಲು ಈ ಬೇಜವಬ್ದಾರಿ ಅವರುಗಳ ಒಂದು ಕೂದಲೂ ಕೊಂಕದಂತೆ ರಕ್ಷಣೆ ಮಾಡುವ ಜವಾಬ್ಧಾರಿಯನ್ನು ಇನ್ನು ಮುಂದೆ ನಮ್ಮ ಸಂಘಟನೆಗಳೇ ಹೊರಲಿವೆ ಎಂದು ಹೆಸರು ಹೇಳಲಿಚ್ಚಿಸದ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಬ್ಬರು ತಿಳಿಸಿದರು.
“ವಿಚಾರವಾದಿಗಳ ರಕ್ಷಣಾ ಪಡೆ” ಎನ್ನುವ ಗಟ್ಟಿಮುಟ್ಟಾದ ಯುವಕರ ತಂಡವೊಂದನ್ನು ರಚಿಸಿದ್ದು,ಸುಮಾರು 2000 ಯುವಕರಿಗೆ ಈ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ.ಇನ್ನು ಕೆಲವೇ ದಿನಗಳಲ್ಲಿ ಅವರನ್ನು ವಿಚಾರವಾದಿಗಳ ರಕ್ಷಣೆಗೆ ನೇಮಿಸಲಾಗುತ್ತದೆ.ಹಿರಿಯ “ಮಾಜಿ ಪತ್ರಕರ್ತ,ಹಾಲಿ ಬುದ್ದಿಜೀವಿ ಕಮ್ ರಾಜಕಾರಣಿ”ಯೊಬ್ಬರು ನೀಡಿದ, ಪ್ರಾಣಾಪಾಯವನ್ನೆದುರಿ -ಸುತ್ತಿರುವ ವಿಚಾರವಾದಿಗಳ ಜ್ಯೇಷ್ಠತಾ ಪಟ್ಟಿಯನ್ನಾಧರಿಸಿ ಮೇಲ್ವರ್ಗದ ಬುದ್ಧಿಜೀವಿಗಳಿಂದ ಹಿಡಿದು ಅತ್ಯಂತ ಕೆಳ ಹಂತದ ಬುದ್ಧಿಜೀವಿಗಳವರೆಗೂ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಇನ್ನು,ತಾವು ರೂಪಿಸಿದ ರಕ್ಷಣಾ ಪಡೆಯ ಕರ್ತವ್ಯಗಳ ಬಗ್ಗೆ ಮುಖಂಡರೊಬ್ಬರು ವಿವರಿಸಿದ್ದು ಹೀಗೆ….
ನಾವು ಆಯ್ಕೆ ಮಾಡಿದ ಪ್ರತಿಯೊಬ್ಬ ವಿಚಾರವಾದಿಗೂ ಹತ್ತರಿಂದ ಇಪ್ಪತ್ತು ಜನ ಕಾರ್ಯಕರ್ತರು ಮೂರು ಪಾಳಿಯಲ್ಲಿ ವರ್ಷದ 365 ದಿನವೂ ರಕ್ಷಣೆ ನೀಡುತ್ತಾರೆ,
ಪ್ರತೀ ಸಾರಿಯೂ ದೊಡ್ಡ ಮೊತ್ತದ ಪ್ಯಾಕೇಜ್ಗಳನ್ನು ಪಡೆದ ನಂತರ ಅವರು ಹೆಂಡತಿಯರ ಜೊತೆ ಶಾಪಿಂಗ್ ಗೆ ಹೋಗುವುದು ಸಾಮಾನ್ಯ.ಹೀಗೆ ಶಾಪಿಂಗ್ ಗೆ ಹೋದಾಗ ಪಿಕ್ ಪಾಕೆಟ್ ಆದರೆ ಅದಕ್ಕೂ ಹಿಂದೂಪರ ಸಂಘಟನೆಗಳೇ ಹೊಣೆ ಎನ್ನಬಾರದು ಎನ್ನುವ ಉದ್ದೇಶದಿಂದ ನಮ್ಮ ರಕ್ಷಣಾ ಕಾರ್ಯಕರ್ತರು ಅಲ್ಲಿಯೂ ಅವರ ಜೊತೆಯೇ ಇರುತ್ತಾರೆ,
ಅವರು ಬಚ್ಚಲು ಮನೆಗೆ ಹೋದಾಗ ಜಾರಿ ಬಿದ್ದು ಕೈಕಾಲು ಮುರಿದುಕೊಂಡರೆ ಅದಕ್ಕೂ ಹಿಂದೂಪರ ಸಂಘಟನೆಗಳೇ ಹೊಣೆ ಎನ್ನಬಾರದು ಎನ್ನುವ ಉದ್ದೇಶದಿಂದ ಬಚ್ಚಲುಮನೆಯಲ್ಲೂ ನಮ್ಮವರು ಅವರ ರಕ್ಷಣೆಗಿರುತ್ತಾರೆ,
ಪರಸ್ಪರ ಅವರದೇ ಬೇರೆ ಬೇರೆ ಬಣಗಳ ನಡುವೆ ಬೆಂಗಳೂರಿನ ಬಾರುಗಳಲ್ಲಿ ವಾಗ್ವಾದ ನಡೆಯುವುದು ತೀರಾ ಸಾಮಾನ್ಯವಾಗಿದ್ದು,ವಾಗ್ವಾದ ವಿಕೋಪಕ್ಕೆ ಹೋಗಿ ಜೀವಪರರ ಜೀವಕ್ಕೆ ಕುತ್ತಾಗದಂತೆ ತಡೆಯುವುದೂ ನಮ್ಮ ರಕ್ಷಣಾ ಪಡೆಯ ಕರ್ತವ್ಯವಾಗಿದೆ.
ಇವರಲ್ಲಿ ಕೆಲವರಿಗೆ ಸ್ವಂತ ಪತ್ನಿಯ ಜೊತೆ ಹಲವಾರು ಉಪ ಪತ್ನಿಯರುಗಳಿರುವುದೂ ಸರ್ವೇ ಸಾಮಾನ್ಯವಾಗಿದ್ದು ಅವರುಗಳ ನಡುವೆ ಪರಸ್ಪರ ಹೊಡೆದಾಟಗಳು ನಡೆದು ಗಾಯಗೊಂಡಲ್ಲಿ ಅಥವಾ ಪ್ರಾಣಹಾನಿಯಾದಲ್ಲಿ ಅದನ್ನೂ ಹಿಂದೂ ಪರ ಸಂಘಟನೆಗಳ ತಲೆಗೆ ಕಟ್ಟುವ ಸಂಭವ ಇರುತ್ತದೆ! ಆದ್ದರಿಂದ ಪತ್ನಿ V/S ಉಪಪತ್ನಿಯರ ಕಾದಾಟಗಳನ್ನು ತಡೆದು ಅವರುಗಳ ಮನೆಯ ಶಾಂತಿಯನ್ನು ಕಾಪಾಡುವುದೂ ರಕ್ಷಣಾ ಪಡೆಯ ಕರ್ತವ್ಯವಾಗಿದೆ!
ಮಾವ ಸೊಸೆಯರ ಕಾಳಗ,ಅಕ್ಕ ತಮ್ಮರ ಕಾಳಗ ಹೀಗೆ ಹಲವಾರು ಬಾರಿ ಹಲವು ಕಾರಣಗಳಿಗಾಗಿ ತಾವು ತಾವೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರುವುದು ಇವರುಗಳಿಗೆ ಹೊಸತೇನಲ್ಲ! ಅಂತಹಾ ಸಂದರ್ಭದಲ್ಲೂ ಅದಕ್ಕೆಲ್ಲಾ ಹಿಂದೂಪರ ಸಂಘಟನೆಗಳೇ ಕಾರಣ ಎನ್ನಬಾರದು ಅನ್ನುವ ದೃಷ್ಠಿಯಿಂದ ಅವರದ್ದೇ ಕುಟುಂಬದ ಶತ್ರುಗಳಿಂದಲೂ ಅವರುಗಳನ್ನು ರಕ್ಷಿಸುವುದು ನಮ್ಮ ಪಡೆಯ ಕರ್ತವ್ಯವಾಗಿದೆ!
ಈ ಬುದ್ದಿಜೀವಿಗಳು ನೂರಾರು ಯುವಕ ಯುವತಿಯರ ಮೆದುಳನ್ನು ತೊಳೆದು ನಕ್ಸಲರನ್ನಾಗಿಸಿ ಅವರುಗಳ ಜೀವನವನ್ನೇ ಅತಂತ್ರಗೊಳಿಸಿದ್ದಾರೆ. ಹೀಗೆ ಇವರಿಂದ ಮೆದುಳು ತೊಳೆಸಿಕೊಂಡು,ಮಾಡಬಾರದ್ದನ್ನು ಮಾಡಿ ಈಗ ಅತಂತ್ರ ಸ್ಥಿತಿ ಅನುಭವಿಸುತ್ತಿರುವ ನಕ್ಸಲರು ಹತಾಶಗೊಂಡು ಇವರೇ ಕೊಡಿಸಿದ ಆಯುಧಗಳಿಂದ ಇವರನ್ನೇ ಕೊಲ್ಲುವ ಸಾಧ್ಯತೆಗಳೂ ಇಲ್ಲದಿಲ್ಲ! ಇಂತಹಾ ಸಂದರ್ಭಗಳಲ್ಲಿ ಇವರೇ ಸೃಷ್ಟಿಸಿದ ನಕ್ಸಲರಿಂದ ಈ ವಿಚಾರವಾದಿಗಳನ್ನು ರಕ್ಷಿಸುವುದೂ ರಕ್ಷಣಾ ಪಡೆಯ ಕರ್ತವ್ಯವಾಗಿದೆ.
ಈ ಪ್ರಗತಿಪರರಿಗೆ ಆಗಾಗ ವಿವಿಧ ಮೂಲಗಳಿಂದ ಬಿರಿಯಾನಿ ಭಾಗ್ಯದ ಅವಕಾಶ ದೊರೆಯುತ್ತಿರುತ್ತದೆ! ಹೀಗೆ ಎಲ್ಲೆಂದರಲ್ಲಿ ಕಳಪೆ ಗುಣಮಟ್ಟದ ಬಿರಿಯಾನಿಯನ್ನು ಸೇವಿಸಿ ಅನಾರೋಗ್ಯಪೀಡಿತರಾದಲ್ಲಿ ಅದಕ್ಕೂ ಹಿಂದೂಪರ ಸಂಘಟನೆಗಳೇ ಹೊಣೆ ಎನ್ನಬಾರದು ಎನ್ನುವ ಉದ್ದೇಶದಿಂದ ಅವರು ತಿನ್ನುವ ಬಿರಿಯಾನಿಯನ್ನು ಪರೀಕ್ಷಿಸಿ ಉತ್ತಮ ಗುಣಮಟ್ಟದ್ದೆಂದು ಖಾತ್ರಿಯಾದ ನಂತರ ಅವರಿಗೆ ತಿನ್ನಲು ಅವಕಾಶ ನೀಡುವುದೂ ಈ ರಕ್ಷಣಾ ಪಡೆಯ ಕರ್ತವ್ಯವಾಗಿದೆ.
ಇನ್ನು ನಮ್ಮ ರಕ್ಷಣಾ ಪಡೆಯ ಕಾರ್ಯಕರ್ತರಿಗೆ ಸಂಬಳ ನೀಡುವ ಸಲುವಾಗಿ ವರ್ಷಕ್ಕೆ ಸುಮಾರು 2 ಕೋಟಿ ರೂ.ಗಳಷ್ಟು ಹಣದ ಅಗತ್ಯವಿದ್ದು ಅದನ್ನು ಸಮಾಜ ಬಾಂಧವರು ನೀಡಬಹುದಾದ ದೇಣಿಗೆಯ ಮೂಲಕ ಹೊಂದಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಇನ್ನೊಬ್ಬ ಮುಖಂಡರು ಮಾದ್ಯಮಗಳಿಗೆ ತಿಳಿಸಿದರು.
*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಇತ್ತೀಚಿಗೆ ನಡೆದ ಕೊಲೆಯೊಂದರಲ್ಲಿ ಯಾವುದೇ ಆಧಾರವಿಲ್ಲದೆಯೂ ಹಿಂದೂಪರ ಸಂಘಟನೆಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಸೂತಕದ ಮನೆಯಲ್ಲಿ ರಾಜಕೀಯ ಮಾಡುತ್ತಿರುವ ಮೂರ್ಖರನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.
ಒಬ್ಬ ಅವಿವೇಕಿ ಮಾತ್ರ ಈ ಲೇಖನ ಬರೆಯಲು ಸಾಧ್ಯ
ಇದರಲ್ಲಿ ಅಡಗಿರುವ ಅವಿವೇಕವನ್ನು ತಮ್ಮ ವಿವೇಕವನ್ನು ಬಳಸಿ ಎಳೆ ಎಳೆಯಾಗಿ ಬಿಡಿಸಿ ಇಟ್ಟರೆ ತಮ್ಮ ದು ವಿವೇಚನಾತ್ಮಕ ಕಮೆಂಟ ಅನ್ನಬಹುದು. ಇಲ್ಲದಿದ್ದರೆ ಮು.ಮ.ಮಾ.ಸ ಅವರದೇ ಬುಡಬುಡಿಕೆ ಅನ್ನಬಹುದು.
ಮೂದಲನೇಯದಾಗಿ ನಿಮ್ಮ ಪೂರ್ತಿ ಲೇಖನ ಓದುವುದು ತುಂಬ ಕಷ್ಟ…ಏಕೆಂದರೆ ಅದರಲ್ಲಿ ಅಸಹ್ಯವೆ ತುಂಬಿದೆ… ದಯವಿಟ್ಟು ಇಂತಹ ಸುಳ್ಸುದ್ದಿ ಬಲಪಂಥಿಯರ ಮೇಲೆ ಬರೆಯುತ್ತಿರ
ಸುಳ್ಸುದ್ದಿಯನ್ನೇ ಓದಲು ಕಷ್ಟವೆನ್ನುವ ತಾವು,ಯಾವುದೇ ಆಧಾರವೂ ಇಲ್ಲದೇ ಕೊಲೆ ನಡೆದ ಕ್ಷಣದಿಂದಲೇ ತಮ್ಮ ಸಂಘಟನೆಗಳನ್ನು ಹೊಣೆಯಾಗಿಸಿ ಪ್ರಕಟವಾಗುತ್ತಿರುವ ಸತ್ಯದ ಸುದ್ದಿಗಳನ್ನೋದಲು ನೀವು ಹೇಳುವ ಆ ಬಲಪಂಥೀಯರಿಗೆ ಇನ್ನೆಷ್ಟು ಕಷ್ಟವಾಗಬಹುದು ಯೋಚಿಸಿದ್ದೀರಾ?
ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕ ಎಂದು ಸ್ಪಷ್ಟವಾಗಿ ಬರೆದಿದ್ದರೂ ನೀವು ಇಷ್ಟೊಂದು ಕೋಪಗೊಂಡಿದ್ದೀರೆಂದರೆ ಖಂಡಿತ ನಿಮ್ಮೊಳಗೊಬ್ಬ ಇದೇ ಮನೋಭಾವದ ಬುದ್ದಿಜೀವಿ ಅಡಗಿದ್ದಾನೆಂದೇ ಅರ್ಥ!
ಹೊಣೆಗೇಡಿ,ಕೀಳು ಅಭಿರುಚಿಯ ಲೇಖನ . ಪ್ರಗತಿಪರರೇ ಆಗಿರಲಿ,ಬಲಪಂಥಿ ಯರೇ ಆಗಿರಲಿ ಅವರ ವಿದ್ವ್ತತನ್ನು ಕೀಳಾಗಿ ಚಿತ್ರೀಕರಿಸುವ ಕ್ರತ್ಯ ಖಂಡನೀಯ !
“ವಿದ್ವತ್ತು ” ಅಂದರೆ ಬರೀ ಓದಿಬರೆಯುವುದಲ್ಲವೋ
ಅದೊಂದು ಜ್ಞಾನದ ವಿವೇಚನಾತ್ಮಕ ಬಳಕೆ
ಓದಿ ಬರೆದವರೆಲ್ಲ ವಿದ್ವಾಂಸರಲ್ಲವೋ
ಬಹುಬಗೆಯ ಇವರಲ್ಲಿ ತುಂಬಿಹುದು ಕೊಳಕೆ.
ಯಾವುದೇ ಆಧಾರವಿಲ್ಲದೆಯೂ ಹಿಂದೂಪರ ಸಂಘಟನೆಗಳನ್ನು ನೇರ ಹೊಣೆ ಮಾಡಿ ಮಾತಾಡುವುದು ಅವರ ವಿದ್ವತ್ತಾ?
Praveen,
my comments were a poke to the two wasters who have commented without due analysis. Your article is truly hilarious.
Does this article worth analysing?
If you want to rubbish something, then do it with a counter points or highlight why it is do.
Otherwise it will be. ದಾರಿಹೋಕನ ಬಡಬಡಿಕೆ ಆಗತ್ತೆ.
Sudharsanj, I don’t understand how you call it a article, leave alone points and counter points.Are you thrilled with jokes?
ವಿನಾ ಕಾರಣ ತಮ್ಮ ಮೇಲೆ ಆರೋಪ ಬರಬಾರದೆನ್ನುವ ಕಾರಣಕ್ಕಾಗಿ ಇತರರಿಗೂ ತೊಂದರೆಯಾಗದ ರೀತಿಯಲ್ಲಿ,ಇಂತಹಾ ಉಪಾಯವೊಂದರ ಬಗ್ಗೆ ಆ ಸಂಘಟನೆಗಳು ಯೋಚಿಸಿದ್ದರೆ ತಪ್ಪೇನು?
ಕೇವಲ ಮನರಂಜನೆಗಾಗಿ ಮಾತ್ರ ಬರೆದ ಲೇಖನದ ಬಗ್ಗೆ ಇಷ್ಟೊಂದು ಕೋಪಗೊಂಡಿರುವವರನ್ನು ನೋಡಿದರೆ ಅವರುಗಳು ತಮ್ಮನ್ನೇ ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆನೋ ಅನ್ನುವ ಅನುಮಾನ!
ಕಲ್ಪನೆಯಲ್ಲೂ ತಮ್ಮ ವಿರುದ್ಧ ಟೀಕೆಯನ್ನು ಸಹಿಸಲಾರದವರು ಇದ್ದಾರೆ ಎಂಬುದನ್ನು ಇಲ್ಲಿನ ಕಮೆಂಟುಗಳಲ್ಲಿನ ಅಸಹನೆ ತೋರಿಸುತ್ತದೆ. ಸಂದರ್ಭವೊಂದರ ಸೃಜನಶೀಲ ರೂಪ ಇದು ಅಂದೇಕೆ ಈ ಕಾಲ್ಪನಿಕ ಬರಹವನ್ನು ಪರಿಗಣಿಸಬಾರದು? ಸಹನೆ, ವಿವೇಕದ ಬಗ್ಗೆ ಮಾತನಾಡುವವರಿಗೆ ನಿಷ್ಠುರ ಟೀಕೆಯನ್ನು ಕೂಡ ಗುಣಾತ್ಮಕವಾಗಿ ಸ್ವೀಕರಿಸುವ ಮನಸ್ಸಿರಬೇಕಲ್ಲವೇ? ಯಾರು ಯಾವುದನ್ನು ಹೇಗೆ ಬರೆಯಬೇಕು ಎಂದು ಕೆಲವರ ನಿರ್ದೇಶನ ಅನುಸರಿಸಬೇಕೆ? ಮತ್ತೆ ಅಭಿವ್ಯಕ್ತಿ ಸ್ವಾತಂತ್ರ್ಯ?
– Right of expression: that is only for the self styled intellectuals not for any one else.
Pramod on September 4, 2015 at 4:15 pm
Sudharsanj, I don’t understand how you call it a article, leave alone points and counter points.Are you thrilled with jokes?
ಪ್ರಮೋದ್,
It is nit a question of being thrilled or not:
It is nit a serious article: it is a ridicule on the stance, the so called intellectuals gave taken as if they know everything.
To counter such ludicrous humans if Praveen takes a lighter approach what us wrong with it?
Have you seen the articles by one in a responsible Govt position?
All it takes for evil to triumph is the silence of the good.
No one is condoning the act of killings : but the frustration is against how people ate making a meal out if it.
Hope you understand.
In whichever form you try to justify the article but only sickened minds write & endorse it.Don’t try to equate issue based intellectual differences & cheap down the belt jokes.
Agree to disagree.
Oh sorry…now I get it!
Right of expression is only for Leftists!!