ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 15, 2015

9

ಗೋಮಾಂಸ ನಿಷೇಧ : ಜೈನರನ್ನು ಅಲ್ಪಸಂಖ್ಯಾತರು ಎಂದು ಒಪ್ಪಿಕೊಳ್ಳಲಾಗುತ್ತಿಲ್ಲವೇ..?

‍ನಿಲುಮೆ ಮೂಲಕ

– ಪ್ರವೀಣ ಕೊಂಬೆಮನೆ

ಎಂ.ಎನ್.ಎಸ್ಜೈನ ಸಮುದಾಯದವರ ಪರ್ಯೂಶನ್ ವ್ರತ ಪ್ರಯುಕ್ತ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿರುವುದು ಎಲ್ಲಿರಿಗೂ ಗೊತ್ತಿರುವ ವಿಷಯವೇ.! ಆದ್ರೆ ಸ್ನೇಹಿತರೇ.. ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಜೈನರ ಎದುರು ರಸ್ತೆಯಲ್ಲಿ ಚಿಕನ್ ಸುಟ್ಟು ಪ್ರತಿಭಟನೆ ನಡೆಸುವ ಮೂಲಕ ಅತಿರೇಕದ ವರ್ತನೆ ತೋರಿಸಿದೆ.  ಮಹಾರಾಷ್ಟ್ರದಲ್ಲಿ ಜೈನರು ಸಭೆ ಸೇರಿದ ಪ್ರದೇಶದ ತೀರಾ ಹತ್ತಿರದಲ್ಲಿಯೇ ಆ ಸಮುದಾಯದ ಎದುರಿಗೇ ಮಾಂಸ ಸುಡುವ ಮೂಲಕ ನವ ನಿರ್ಮಾಣ ಸೇನೆ ಅತೀ ಧೂರ್ತತನ ಪ್ರದರ್ಶಿಸಿದೆ. ಆದರೆ ಜೈನರು ಇದನ್ನೆಲ್ಲಾ ಕಡೆಗಣಿಸಿ ಮೌನವಾಗಿ ಅಲ್ಲಿಂದ ಹೊರ ನಡೆದಿದ್ದಾರೆ.

ಸಾವಿರಾರು ವರ್ಷಗಳಿಂದ ಜೈನ ಸಮುದಾಯದಲ್ಲಿ ಆಚರಣೆಯಲ್ಲಿ ಬಂದ ಸಲ್ಲೇಖನಾ ವ್ರತವನ್ನು ಈ ಹಿಂದೆ ಆತ್ಮಹತ್ಯೆ ಎನ್ನುವ ಮೂಲಕ ಜೈನರ ಆಚರಣೆಗಳಿಗೆ ತೊಂದರೆ ನೀಡಲಾಯಿತು. ಈಗ ಜೈನರು ಮಾಂಸಾಹಾರಿಗಳಲ್ಲ, ಗೋ ಮಾಂಸ ಭಕ್ಷಣೆಗೆ ಬೆಂಬಲಿಸಿಲ್ಲ ಎನ್ನುವ ಕಾರಣಕ್ಕೆ ಅವರ ಎದುರು ಮಾಂಸಗಳನ್ನಿಟ್ಟು ಸುಡುವುದು, ಸಾರ್ವಜನಿಕವಾಗಿ ಮಾಂಸ ಮಾರಾಟ ಮಾಡುವುದು ಮಾಡಲಾಗುತ್ತಿದೆ. ಇದನ್ನೆಲ್ಲ ಗಮನಿಸಿದರೆ ಭಾರತದ ನ್ಯಾಯಾಲಯವೂ ಸೇರಿದಂತೆ ವಿವಿಧ ರೀತಿಯಲ್ಲಿ ಜೈನರ ಧಾರ್ಮಿಕ ಹಕ್ಕುಗಳನ್ನು ತುಳಿಯಲಾಗುತ್ತಿದೆಯೇ..? ಎನ್ನುವ ಅನುಮಾನಕ್ಕೆ ಕಾರಣವಾಗಿದೆ.

ಅಲ್ಪ ಸಂಖ್ಯಾತರಿಗೆ ನೋವುಂಟಾಗಂದತೆ ನೋಡಿಕೊಳ್ಳಬೇಕು. ಹಾಗೇ ಹೀಗೆ ಎಂದು ಅಲ್ಪ ಸಂಖ್ಯಾತರ ಹಿತರಕ್ಷಣೆಯೇ ತಮ್ಮ ಗುರಿ ತೋರಿಕೆಗೆ ಬಿಂಬಿಸಿಕೊಂಡು ಮಾರುದ್ದ ಭಾಷಣ ಬಿಗಿಯುವ ಸೋ ಕಾಲ್ಡ್ ಅಲ್ಪ ಸಂಖ್ಯಾತ ರಕ್ಷಣಾ ರಾಜಕೀಯ ಪಕ್ಷದ ಯಾವೊಬ್ಬ ಮುಖಂಡನೂ ಇಂದು ತುಟಿ ಬಿಚ್ಚಿಲ್ಲ. ಇಲ್ಲಿ ಜೈನರೂ ಅಲ್ಪಸಂಖ್ಯಾತರೇ ಅಲ್ಲವೇ. ಸೋ ಕಾಲ್ದ್‌ ಕಾಜಕೀಯ ಪಕ್ಷಗಳ ಪ್ರಕಾರ ಅಲ್ಪ ಸಂಖ್ಯಾತರು ಎಂದರೆ ಕೇವಲ ಒಂದೇ ಸಮುದಾಯವೇ..? ಅಲ್ಪ ಸಂಖ್ಯಾತರ ಬಗ್ಗೆ ನಿಜವಾಗಿ ಕಾಳಜಿ ಇದ್ದಿದ್ದರೆ ಜೈನರಿಗೆ ಮಹಾರಾಷ್ಟ್ರದಲ್ಲಿ ನವನಿರ್ಮಾಣ ಸೇನೆ ಮಾಡಿದ ಅತಿರೇಕದ ವರ್ತನೆಯ ವಿರುದ್ಧ ದನಿ ಎತ್ತಬಹುದಾಗಿತ್ತು. ಆದರೆ ಕಾಂಗ್ರೆಸ್‌ ಪಕ್ಷವಾಗಲೀ ಅಲ್ಪಸಂಖ್ಯಾತರ ಹಿತವೇ ತಮ್ಮ ಹಿತ ಎನ್ನುವ ಯಾವುದೇ ಪಕ್ಷವೂ ಇಂಥ ಅತಿರೇಕದ ವರ್ತನೆ ವಿರುದ್ಧ ಮಾತನಾಡದೇ ಇರುವುದು ಶೋಚನೀಯ ಎನಿಸುತ್ತಿದೆ.

ಸೋಜಿಗ ಎಂದರೆ ಇಲ್ಲೂ ಬಿಜೆಪಿ ಹಾಗೂ ಹಿಂಧೂ ಸಂಘಟನೆಗಳನ್ನೇ ಬೊಟ್ಟುಮಾಡಿ ತೋರಿಸುತ್ತಿರುವುದು ವಿಚಿತ್ರ ಎನಿಸುತ್ತಿದೆ. ಜೈನ ಸಮುದಾಯದವರ ಪರ್ಯೂಶನ್ ವ್ರತ ಪ್ರಯುಕ್ತ ಗೋ ಮಾಂಸ ನಿಷೇಧಿಸುತ್ತಿರುವುದು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅಷ್ಟೇ…ಉಳಿದ ಯಾವ ರಾಜ್ಯದಲ್ಲಿಯೂ ನಿಷೇಧ ಮಾಡಿಲ್ಲ ಎಂದು ಕಾಂಗ್ರೆಸ್‌ ಹಾಗೂ ಅಲ್ಪಸಂಖ್ಯಾತ ರಕ್ಷಣಾ ಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ ಇಲ್ಲಿ ಜೈನರು ಅಲ್ಪ ಸಂಖ್ಯಾತರಲ್ಲವೇ. ಎನ್ನುವ ಪ್ರಶ್ನೆ ಮತ್ತೆ ಉದ್ಭವವಾಗುತ್ತದೆ. ಅವರ ಧಾರ್ಮಿಕ ಭಾವನೆಗಳನ್ನೂ ಗೌರವಿಸಬೇಕಲ್ಲವೇ. ಅಂದರೆ ಜೈನರು ಸಸ್ಯಹಾರಿಗಳು ಎನ್ನುವ ಕಾರಣಕ್ಕೇ ಅವರನ್ನು ಅಲ್ಪಸಂಖ್ಯಾತರು, ಹಿಂದೂ ಪರ ನಿಲುವು ತೋರಿದ್ದಾರೆ ಎಂದು ಭಾವಿಸಿ ಒಪ್ಪಿಕೊಳ್ಳದೇ ದೂರ ಇಟ್ಟರು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತಿದೆ.

ಬಿಜೆಪಿ ಜೈನದ ಭಾವನೆಗಳಿಗೆ ಸ್ಪಂದಿಸಿ ಅವರ ವ್ರತಾಚರಣೆಗೆ ಧಕ್ಕೆ ಉಂಟಾಗದಂತೆ ಗೋ ಮಾಂಸ ನಿಷೇಧಿಸುವ ಮೂಲಕ ಗೌರವಿಸಿದೆ. ಆದರೆ ಇಲ್ಲಿಯೂ ಕಾಂಗ್ರೆಸ್‌ ಹಾಗೂ ಕೆಲವರು ಕೆಟ್ಟ ರಾಜಕೀಯ ಮಾಡಲಾಗುತ್ತಿದೆ. ಈ ಮೂಲಕ ಜೈನರ ಸಂಪ್ರದಾಗಕ್ಕೆ ಧಕ್ಕೆ ಉಂಟಾಗುವಂತೆ ಸಾರ್ವಜನಿಕವಾಗಿ ಮಾಂಸ ಹಂಚುವುದು, ಸುಡುವುದು ಮಾಡುವಂಥ ಅತಿ ರೇಕರ ವರ್ತನೆಗೆ ಬೆಂಬಲಿಸುತ್ತಿದೆ. ಆದರೆ ಬೊಟ್ಟು ಮಾಡುವುದು ಮಾತ್ರ ಬಿಜೆಪಿ ಹಾಗೂ ಹಿಂಧೂ ಸಂಘಟನೆಯನ್ನು. ಗೋ ಮಾಂಸ ನಿಷೇಧಿಸುವ ಮೂಲಕ ಬಿಜೆಪಿ ದುರಾಡಳಿತ ತೋರುತ್ತಿದೆ. ಮಾಂಸಾಹಾರಿಗಳ ಆಹಾರ ಕಿತ್ತುಕೊಂಡು ಅನ್ಯಾಯ ಮಾಡಿದೆ ಎನ್ನುವ ಟೀಕೆ ಬೇರೆ. ಗಾಂಧಿ ಜಯಂತಿ, ಸ್ವಾತಂತ್ರ ದಿನಾಚರಣೆ ಮುಂತಾದ ದಿನಗಳು ಸೇರಿದಂತೆ ಕಾಂಗ್ರೆಸ್‌ ಗುಲಾಮಶಾಹಿ ಕಾಲದಿಂದಲೂ ಇಂಥ ಮದ್ಯ ಮಾಂಸದ ನಿಷೇಧ ಒಂದು ದಿನದ ಮಟ್ಟಿಗೆ ಇಡೀ ದೇಶದಲ್ಲಿ ಇದೆ ಹಾಗೂ ಇಂದಿಗೂ ನಡೆಯುತ್ತಾ ಬಂದಿದೆ. ಎರಡು ದಿನ ಅದನ್ನು ಆಚರಿಸಿ ಜೈನ ಸಮುದಾಯದವರ ಧಾರ್ಮಿಕ ಭಾವನೆಗೆ ಗೌರವ ಕೊಟ್ಟಿದ್ದರೆ ಅದನ್ನು ನಿಜವಾದ ಮನುಷ್ಯತ್ವ ಅನ್ನಬಹುದಾಗಿತ್ತು. ಈ ದೂರ್ಥ ಜನ ಕ್ರೂರ ಮೃಗ ಗಳಿಗಿಂತ ತಾವು ಕೀಳು ಅನ್ನೋದನ್ನು ನವನಿರ್ಮಾಣ ಸೇನೆ ತೋರಿಸಿಕೊಟ್ಟಿದೆ. ತಮ್ಮ ಪ್ರತಿಭಟನೆಯ ಕ್ರೂರತನಕ್ಕೆ ಪಾಪ ಆ ಮೂಕ ಪ್ರಾಣಿಗಳನ್ನು ಬಲಿಕೊಟ್ಟರು.

ಭಾರತ ದೇಶದಲ್ಲಿ ಶೇ 70 ರಷ್ಟು ಮಾಂಸಾಹಾರಿಗಳಿದ್ದಾರೆ. ಅವರ ಆಹಾರಕ್ಕೆ ನಿಷೇಧ ವಿಧಿಸಲು ಬಿಜೆಪಿಗೆ ಏನು ಅಧಿಕಾರವಿದೆ ಎಂದು ನವನಿರ್ಮಾಣ ಸೇನೆ ಪ್ರಶ್ನಿಸಿದೆ. ಆದರೆ ನಮ್ಮ ಭಾರತದಲ್ಲಿ ಅತ್ಯಾಚಾರ ಮಾಡೋರು ಕಳ್ಳತನ ಮಾಡೋರು, ಉಗ್ರವಾದ ಮಾಡೋರು, ಸ್ವೇಚ್ಚಾಚಾರ ಮಾಡೋರು ಮುಂತಾದವರು ಸಾಕಷ್ಟು ಇದ್ದಾರೆ. ಅದು ಅವರ ಹ್ಯಾಬಿಟ್‌ ಅಂತಲೇ ಇಟ್ಟುಕೊಳ್ಳೋಣ. ಅಷ್ಟು ಜನರ ಹ್ಯಾಬಿಟನ್ನು ಕಂಟ್ರೋಲ್ ಮಾಡೋಕೆ ಸರಕಾರ ಯಾರು? ಅಂತಲೂ ಮುಂದೆ ಕೇಳೋ ಕಾಲ ಬರುತ್ತದೆಯೇ ಎಂಬ ಅನುಮಾನ ಬರುತ್ತಿದೆ.

ಕೆಲ ಕೋಮಿನವರು ಕೆಲವು ಪ್ರಾಣಿಯನ್ನು ತಿನ್ನುವುದಿಲ್ಲ. ಅವರಿಗೂ ವ್ರತ ಆಚರಣೆಗಳಿವೆ. ಅವರ ವ್ರತ ಆಚರಣೆಗಳ ಸಂದರ್ಭದಲ್ಲಿ ಅದನ್ನು ಗೌರವಿಸದೇ ಅವರೆದುರು ಇಂಥ ಅತಿರೇಕದ ವರ್ತನೆ ಮಾಡಿದರೆ ಕಾಂಗ್ರೆಸ್‌ ಆಗಲೀ ಸೋ ಕಾಲ್ಡ್‌ ಅಲ್ಪ ಸಂಖ್ಯಾತ ರಕ್ಷಣೆಗೆ ಇರುವ ರಾಜಕೀಯ ಪಕ್ಷಗಳು ಸುಮ್ಮನಿರುತ್ತಿದ್ದರಾ..? ಹಾಗಾದರೆ ಇಂಥ ಅತಿರೇಕದ ವರ್ತನೆಯ ವಿರುದ್ಧ ದನಿಯತ್ತದ ಪಕ್ಷಗಳು ಕೇವಲ ಗೋಮಾಂಸ ನಿಷೇಧಿಸಿದ್ದೇ ದೊಡ್ಡದಾಗಿಸಿ ಬೆಜೆಪಿಯನ್ನು ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ಹಾಗಂತ ಬಿಜೆಪಿಯ ಎಲ್ಲ ಸದಸ್ಯರು ಸಸ್ಯಾಹಾರಿಗಳೂ ಅಲ್ಲವಲ್ಲ. ಬಿಜೆಪಿಯಲ್ಲಿಯೂ ಮಾಂಸಾಹಾರಿಗಳಿಲ್ಲವೇ. ಇಲ್ಲಿ ಬಿಜೆಪಿ ಜೈನರ ವ್ರತ ಆಚರಣೆಗೆ ದಕ್ಕೆ ಉಂಟಾಗದಂತೆ ಗೋ ಮಾಂಸಕ್ಕೆ ನಿಷೇಧವಿಧಿಸಿದೆ ಅಷ್ಟೆ. ಅಲ್ಲದೇ ಇದು ಕೇಲವ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಷ್ಟೇ ಆಗಿದೆ ಅಂದರೆ, ಉಳಿದ ಪಕ್ಷಗಳು ಕೇವಲ ಅಲ್ಪಸಂಖ್ಯಾತರ ರಕ್ಷಣೆ ಎಂದು ಭಾಷಣಕ್ಕಷ್ಟೇ ಸೀಮಿತವಾಗಿ ಮಾಡಿಕೊಂಡಿದ್ದಾರೆ ಎನಿಸುತ್ತಿದೆ. ಆದರೆ ಬಿಜೆಪಿ ಬಿಜೆಪಿ ಅನ್ಯ ಸಮುದಾಯದ ಆಚರಣೆಗಳಿಗೂ ಸಮಾನ ಗೌರವ ನೀಡುತ್ತದೆ ಎನ್ನುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಒಟ್ಟಾರೆ ಒಂದು ಸಮುದಾಯದ ಆಚರಣೆಗೆ ದಕ್ಕೆ ಉಂಟಾಗುವಂತೆ ನವನಿರ್ಮಾಣ ಸೇನೆ ಧೂರ್ಥತನ ಪ್ರದರ್ಶಿಸಿದೆ. ಇದಕ್ಕೆ ಕಾಂಗ್ರೆಸ್‌ ಕೂಡ ಬೆಂಬಲ ನೀಡಿದಂತೆ ಕಾಣುತ್ತಿದೆ. ಆದರೆ ಜೈನರು ಇಲ್ಲಿ ಧೂರ್ತ ಮನಸ್ಸಿನ ಜನರಿಗೂ ಹಾಗು ಉತ್ತಮ ಉದಾತ್ತ ಮನಸ್ಸಿನ ಜನರಿಗೂ ಇರೋ ವ್ಯತ್ಯಾಸವನ್ನು ತೋರಿಸಿಕೊಟ್ಟಿದ್ದಾರೆ.

9 ಟಿಪ್ಪಣಿಗಳು Post a comment
  1. Nagaraj hegde's avatar
    ಸೆಪ್ಟೆಂ 15 2015

    Edu india swami enmadakku baralla…
    Higella jasti matadidre neevu komuvadigalagtira husharrrr…

    ಉತ್ತರ
  2. ಭೀಮಗುಳಿ ಶ್ಯಾಮ್'s avatar
    ಭೀಮಗುಳಿ ಶ್ಯಾಮ್
    ಸೆಪ್ಟೆಂ 15 2015

    ಭಾರತ ದೇಶದಲ್ಲಿ ಶೇ 70 ರಷ್ಟು ಮಾಂಸಾಹಾರಿಗಳಿದ್ದಾರೆ.ಇದು ಮಾಂಸಾಹಾರಿಗಳು ಮಾಡುವ ವಾದ . ಆದರೆ ಮಾಂಸಾಹಾರಿಗಳು ಎಲ್ಲ ದಿನದಲ್ಲೂ ಮಾಂಸ ತಿನ್ನುವ ಪದ್ಧತಿ ಎಷ್ಟು ಕಡೆ ಇದೆ . ಆರೋಗ್ಯದ ದೃಷ್ಟಿಯಿಂದಲೋ ಅಥವಾ ಇನ್ನಾವುದೋ ಕಾರಣದಿಂದ ವಾರದ ಕೆಲವು ದಿನಗಳಲ್ಲಿ ಮಾಂಸಾಹಾರಿಗಳೇ ಮಾಂಸ ತಿನ್ನುವುದಿಲ್ಲ . ಹಳ್ಳಿಗಳಲ್ಲಿಯೂ ನಿತ್ಯ ಮಾಂಸ ತಿನ್ನುವವರು ಕಡಿಮೆ. ನಗರ ಪ್ರದೇಶದ ಕೆಲವರಿಗೆ ಮಾತ್ರ ದಿನಾ ಮಾಂಸ ಬೇಕು ಅಷ್ಟೇ . ಹಾಗಾಗಿ ಮಾಂಸಾಹಾರ ಬಹುಜನರ ಆಹಾರ ಪದ್ಧತಿ ಎಂದು ಭಾವಿಸುವುದು ಸರಿಯೇ ? ನಿತ್ಯ ಮಾಂಸ ಸಿಗಬೇಕೆನ್ನುವ ವಾದ ಸರಿಯೇ ?

    ಉತ್ತರ
    • sudarshanarao's avatar
      ಸೆಪ್ಟೆಂ 15 2015

      ಅವಕಾಶವಾದೀ ವಾದ ಎನ್ನಬಹುದು.

      ಉತ್ತರ
    • Praveen Hegde's avatar
      ಸೆಪ್ಟೆಂ 15 2015

      ಸರ್‌,, ನಿಜವಾಗಿಯೂ ನಿತ್ಯವೂ ಮಾಂಸ ತಿಂದೇ ಬದುಕಬೇಕು ಎನ್ನುವ ವಾದದಲ್ಲಿ ಹುರುಳಿಲ್ಲ. ಅಲ್ಲದೇ ನಾವು ಸರಿಯಾಗಿ ಯೋಚಿಸಿದರೆ,, ಮನುಷ್ಯರು ಮಾಂಸಾಹಾರಿಗಳೇ ಅಲ್ಲ. ಏಕೆಂದರೆ ಮಾನವರು ಸಸ್ಯವನ್ನೂ ತಿಂದು ಬದುಕಬಲ್ಲರು. ಹಾಗಾಗಿ ಮನುಷ್ಯರನ್ನು ಮಿಶ್ರಹಾರಿಗಳು ಎಂದು ಕರೆಯಬಹುದು. ಮಾಂಸಾಹಾರಿಗಳ ಕೆಟಗರಿಯಲ್ಲಿ ಹುಲಿ, ಸಿಂಹ, ಚಿರತೆ ಬರಬಲ್ಲವು..ಏಕೆಂದರೆ ಅವು ಮಾಂಸ ಬಿಟ್ಟು ಹುಲ್ಲನ್ನು ತಿನ್ನುವುದಿಲ್ಲ.

      ಉತ್ತರ
    • praveenhegdek's avatar
      ಸೆಪ್ಟೆಂ 15 2015

      ನಿಜ,,,ಮಾಂಸ ತಿನ್ನುವವರು ಕೆಲವು ದಿನಗಳಲ್ಲಿ ಪಥ್ಯ ಮಾಡುವುದುಂಟು..ಆದರೆ ನಿತ್ಯವೂ ಮಾಂಸ ತಿಂದರೇ ಬದುಕು,, ಎನ್ನುವ ವಾದದಲ್ಲಿ ಹುರುಳಿಲ್ಲ ಹುರುಳಿಲ್ಲ ಎನ್ನಬಹುದು. ನಾವು ಸರಿಯಾಗಿ ಯೋಚಿಸಿದರೆ,,,,ಮನುಷ್ಯರು ಮಾಂಸಹಾರಿಗಳೇ ಅಲ್ಲ…ಮಾನವ ಮಿಶ್ರಹಾರಿ,,,ಮಾಂಸವನ್ನು ತಿನ್ನದೆಯೇ ಬದುಕಬಲ್ಲ. ಆದರೆ ಮಾಂಸಹಾರಿಗಳು ಎಂದರೆ ಸಸ್ಯವನ್ನೇ ತಿನ್ನದೇ ಕೇವಲ ಮಾಂಸವನ್ನೇ ತಿಂದು ಬದುಕುವಂಥವು. ಉದಾಹರಣೆಗೆ,,,ಹುಲಿ, ಸಿಂಹ, ಚಿರತೆ ಹೇಳಬಹುದು…

      ಉತ್ತರ
  3. simha s n's avatar
    simha s n
    ಸೆಪ್ಟೆಂ 15 2015

    ಏಕೆಂದರೆ, ಇವರು ನಿಜಕ್ಕೂ ಅಲ್ಪಸಂಖ್ಯಾತರು ! ವೋಟ್ ಬ್ಯಾಂಕ್ ಗಳಲ್ಲ !

    ಉತ್ತರ
    • Praveen Hegde's avatar
      ಸೆಪ್ಟೆಂ 15 2015

      ನಿಜ,,,,ಜೈನರು ಓಟ್‌ ಬ್ಯಾಂಕ್‌ಗಳಾಗಿದ್ದರೆ ಅವರು ಅಲ್ಪ ಸಂಖ್ಯಾತರು ಎಂದು ಒಪ್ಪಿಕೊಳ್ಳುತ್ತಿದ್ದರೇನೊ…ಪ್ರತಿಭಟನೆಗೆ ಬೆಂಬಲಿಸಿದ್ದಾರೆ ಎಂದಾದ ಮೇಲೆ ಜೈನರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಿಲ್ಲ ಎಂದೇ ಅರ್ಥೈಸಿಕೊಳ್ಳಬೇಕಿದೆ

      ಉತ್ತರ
    • sudarshanarao's avatar
      ಸೆಪ್ಟೆಂ 15 2015

      Absolutely

      ಉತ್ತರ
  4. Srinivasaiah's avatar
    Srinivasaiah
    ಸೆಪ್ಟೆಂ 18 2015

    ಆಲ್ಪ್ ಸಂಖ್ಯಾತರಿರಲಿ ಬಹು ಸಂಖ್ಯಾತರಿರಲಿ, ಜನರ ಭಾವನೆಗಳನ್ನು ಗಮನಿಸ ಬೇಕು.

    ಉತ್ತರ

Leave a reply to Nagaraj hegde ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments