ಒಂದು ಸಾವು ತೋರಿಸಿದ ಜಗತ್ತಿನ ಕರಾಳ ಮುಖಗಳು!
– ಸಂಕೇತ್ ಡಿ ಹೆಗಡೆ
ಆವತ್ತು ಗೆಲೆಲಿಯೋ ಹೇಳಿದ್ದಿಷ್ಟೆ… “ನೀವು ಅಂದುಂಕೊಂಡಂಗೆ ಭೂಮಿ ಚಪ್ಪಟೆ ಇಲ್ರಪಾ.. ಅದು ಗೋಳಾಕಾರವಾಗಿದೆ” ಅಂತ. ಅವತ್ತಿನ ಕ್ಯಾಥೋಲಿಕ್ ಚರ್ಚ್ ಕೆಂಡಾಮಂಡಲವಾಯಿತು. ಏನು ಹೇಳಿದ್ದೇಯೊ ಆ ನಿನ್ನ ಥಿಯರಿಯನ್ನ ಮುಚ್ಚಿಕೊಂಡು ವಾಪಸ್ ತಗಂಬಿಡು ಅಂದಿತು. ಹಿಂದೊಬ್ಬ ಹೀಗೆಯೇ ಹೇಳಿ ಕೊನೆಗೆ ಹೆದರಿಸಿಕೊಂಡು ಸುಮ್ಮನಾಗಿದ್ದ. ಆದರೆ ಗೆಲೆಲಿಯೋ ಸುಮ್ಮನಿರುವ ಜಾಯಮಾನದವನಲ್ಲ. ತನ್ನದೇ ಸರಿ ಅಂದ. ತಾನು ಸಾಕ್ಷ್ಯ ಒದಗಿಸಬಲ್ಲೆ ಅಂದ. “ಈವಯ್ಯ ವಸಿ ಜಾಸ್ತಿ ಹಾರಾಡ್ತಿದಾನೆ” ಅಂತ ಆತನನ್ನು ಗೃಹಬಂಧನದಲ್ಲಿರಿಸಿದರು. ಶಿಕ್ಷೆ ಕೊಟ್ಟರು. ಆದರೆ ಕೊನೆಗೇನಾಯಿತು ಹೇಳಿ, ಸತ್ಯ ಸತ್ತುಹೋಯಿತಾ? ಒಂದಿಷ್ಟು ಅಜ್ಞಾನಿಗಳ ಗುಂಪು ಸುಳ್ಳನ್ನು ನಂಬಿ, ಇತರರನ್ನೂ ನಂಬಿಸಹೊರಟರು ಅಂತ ಭೂಮಿಯೇನಾದರೂ ಪುಸಕ್ಕಂತ ಚಪ್ಪಟೆಯಾಗಿಬಿಟ್ಟಿತಾ? ಇಲ್ಲ. ವಿಷಯಕ್ಕೆ ಬರುವ ಮುನ್ನ ತಮ್ಮನ್ನು ತಾವು ಎಡ ಅಥವಾ ಬಲಪಂಥದವರು ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರಿಗೆ ಈ ಘಟನೆಯನ್ನ ಮತ್ತೊಮ್ಮೆ ಓದಲು ರೆಕಮೆಂಡ್ ಮಾಡುತ್ತೇನೆ. ಅಂದಹಾಗೆ ನೀವು ನಿಮ್ಮ ಪೂರ್ವಗ್ರಹಗಳನ್ನ ಈ ದೇಶದ, ದೇಶದ ಜನರ ಮೇಲೆ ಹೇರಹೊರಟರೆ, ಅದರಲ್ಲಿ ನಿಮಗೆ ಯಶಸ್ಸು ಅಂತ ಸಿಕ್ಕರೆ, ಅದು ತಾತ್ಕಾಲಿಕ ಅಷ್ಟೆ. ಸತ್ಯವೇನು ಅಂತ ದೇಶವಾಸಿಗಳಿಗೆ ಒಂದಲ್ಲ ಒಂದು ದಿನ ಗೊತ್ತಾಗೇ ತೀರುತ್ತೆ!
ಭಾರತದ ಬಗ್ಗೆಯೊಂದು ಓಬಿರಾಯನ ಕಾಲದ ಪೂರ್ವಗ್ರಹವಿದೆ. “ಭಾರತದಲ್ಲಿ ದಲಿತರನ್ನು ತೀರಾ ಹೀನಾಯವಾಗಿ ನಡೆಸಿಕೊಳ್ಳಲಾಗತ್ತೆ. ಸಮಾಜದ ಸ್ತರಸ್ತರದಲ್ಲೂ ತಾರತಮ್ಯದ ಕಬಂಧಬಾಹುಗಳು ಕಾಣಸಿಗುತ್ತವೆ” ಅಂತ! ನಾನು ಒಪ್ಪಿಕೊಂಡು ಬಿಡುತ್ತೇನೆ. ಭಾರತದಲ್ಲಿ ತಾರತಮ್ಯ ಇತ್ತು. ಯಾಕೆ, ಅಸ್ಪೃಶ್ಯತೆ ಎಂಬ ನಾಚಿಗೇಡಿನ ಆಚರಣೆಯೂ ಇತ್ತು. ಯೆಸ್, ಮೇಲ್ವರ್ಗದವರು ಕೆಳವರ್ಗದವರನ್ನ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದ, ಅವರನ್ನು ಹಿಂಸಿಸುತ್ತಿದ್ದ ಕಾಲವೊಂದು ಇತ್ತು. ಒಬ್ಬ ಮೇಲ್ವರ್ಗದಲ್ಲಿ ಜನಿಸಿದ ಹುಡುಗನಾಗಿ ಇವತ್ತು ನಾನು ಆ ಕಾಲದಲ್ಲಿ ನಡೆದುಹೋದ ಆ ಕೊಳಕು ಆಚರಣೆಗಳ ಓದಿ ನಾಚಿಕೆಯಿಂದ ತಲೆತಗ್ಗಿಸುತ್ತೇನೆ! ಇವತ್ತಿಗೂ ತಾರತಮ್ಯ ಸಂಪೂರ್ಣವಾಗಿ ತೊಲಗಿಲ್ಲ ಬಿಡಿ. ನಗರ ಭಾರತದಲ್ಲಿ ತೊಲಗಿದೆ. ಮುಂದುವರಿದ ಗ್ರಾಮೀಣ ಭಾರತದಲ್ಲೂ ಬಹುತೇಕ ಸತ್ತಿದೆ. ಆದರೆ ಹಿಂದುಳಿದ ಪ್ರದೇಶಗಳಲ್ಲಿ ಇನ್ನೂ ಜೀವಂತವಿದೆ. ಆದರೆ ಈ ಪ್ರಗತಿಪರರು ಅನಿಸಿಕೊಂಡಿರುವವರು ಇವತ್ತು ಬೀದಿಬೀದಿಯಲ್ಲಿ ಬೊಂಬ್ಡಾ ಬಜಾಯಿಸುತ್ತಿರುವಂತೆ ಕತ್ತು ಹಿಸುಕುವ ತಾರತಮ್ಯವೇನು ಸಮಾಜದ ಮುಖ್ಯವಾಹಿನಿಯಲ್ಲಿ ಇಲ್ಲ. ಇವತ್ತು ದಲಿತರಿಗೆ ಪ್ರತಿಯೊಂದರಲ್ಲೂ ಸಾಕುಬೇಕಷ್ಟು ಮೀಸಲಾತಿ ಒದಗಿಸಿ, ಅವರು ಸಮಾಜದಲ್ಲಿ ಎಲ್ಲಾ ಸ್ಥಾನಗಳಲ್ಲೂ ಮಿಂಚುವಂತೆ ಈ ಸಮಾಜ ನೋಡಿಕೊಂಡಿದೆ. ಇವತ್ತೇನು ನಡೆಯುತ್ತಿದೆ ಅಂತ ನಾವು ಓದಿ ತಿಳಿಯಬೇಕಿಲ್ಲ. ಕಣ್ಣಿದ್ದವರಿಗೆಲ್ಲ ಕಾಣಿಸುತ್ತೆ. ಇದೇ ‘ಜಾತ್ಯತೀತ’ ರಾಷ್ಟ್ರದಲ್ಲಿ ಚಿಕ್ಕವನಿದ್ದಾಗಿನಿಂದ ಇಲ್ಲಿಯವರೆಗೂ ನನ್ನ ಜಾತಿಯ ಕಾರಣಕ್ಕಾಗಿ ಅರ್ಹತೆಯಿದ್ದರೂ ಅನೇಕ scholarshipಗಳಿಂದ ವಂಚಿತನಾದವನು ನಾನು.ಆತ ಅನುಕೂಲಸ್ಥ ಕುಟುಂಬದವನೇ ಆದರೂ, ಓದುವ ಸಕಲ ಸುವರ್ಣಾವಕಾಶಗಳಿದ್ದರೂ ಓದದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನನಗಿಂತ ಬಹಳ ಕೆಟ್ಟ rank ತೆಗೆದವ ನನ್ನದೇ ಕಾಲೇಜಿನಲ್ಲಿ ಓದುವುದನ್ನು ಕಂಡೂ ಕಾಣದಂತೆ ಸುಮ್ಮನಿರುವವ ನಾನು. ನನ್ನಷ್ಟೇ ಅಂಕಗಳನ್ನು ಪಡೆದರೂ, ನನ್ನ ಕಾಲೇಜಿನ ಹತ್ತುಪಟ್ಟು ಒಳ್ಳೆಯ ಸ್ಥಾನವಿರುವ ಕಾಲೇಜಿನಲ್ಲಿ, ನಾನು ಕೊಡುವ ಅರ್ಧ ಫೀಯನ್ನೂ ಕೊಡದೆ ಓದುವವರ ಕಂಡು ಆದ ಬೇಸರವ ಹೊಟ್ಟೆಯಲ್ಲಿ ನುಂಗಿಕೊಂಡು ಓದುತ್ತಿರುವವನು ನಾನು. ನನ್ನ ಜಾತಿಯ ಕಾರಣಕ್ಕಾಗಿ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತವಾದ ಕುಟುಂಬಕ್ಕೆ ಸೇರಿದವನು ನಾನು. So, for your kind information ಭಾರತದಲ್ಲಿ ದಲಿತರ ಮೇಲೆ ಮಾತ್ರ “ಅಮಾನವೀಯ” “ಸೋ”ಸಣೆಯಾಗುತ್ತಿದೆ ಅಂತ ನನ್ನ ಮುಂದೆ ಪುಂಗಿ ಓದುವ ಅವಶ್ಯಕತೆ ಇಲ್ಲ.
ಮತ್ತಷ್ಟು ಓದು