ಪ್ರೀತಿಯ ನೆಹರೂಜಿ,ನೆಮ್ಮದಿಯಾಗಿರಬೇಕಲ್ಲ? ಕಂಗ್ರಾಜುಲೇಷನ್ಸ್!
– ಪಲ್ಲವಿ ರಾವ್
ಅಂತೂ ಭಾರತದ ಯುವ ಜನತೆಗೆ ದೇಶವೆಂದರೆ ಭೌಗೋಳಿಕ ಇರುವಿಕೆಯೇ ಅರ್ಥಹೀನ, ಇಲ್ಲಿನ ನಂಬಿಕೆಗಳೆಲ್ಲವೂ ಅವೈಜ್ನಾನಿಕ, ಆಚರಣೆಗಳೆಲ್ಲ ತುಚ್ಚ , ಹೆಮ್ಮೆ ಪಡುವಂತದ್ದೂ ಇಲ್ಲೇನೂ ಇಲ್ಲ , ದೇಶವೆಂದರೆ ತಾಯಿ ಅನ್ನುವ ಕಲ್ಪನೆಯೇ ಬುಲ್ಶಿಟ್ ಅನ್ನುವ ಮನೋಭಾವವನ್ನು ನಿಮ್ಮ ಕನಸಿನ ವೈಜ್ನಾನಿಕ ಆಧುನಿಕ ಪಾಶ್ಚಾತ್ಯ ಶಿಕ್ಷಣ ಬಹಳ ಯಶಸ್ವಿಯಾಗಿ ಬಿತ್ತಿದೆ. ನೀವು ಬಹಳವಾಗಿ ಆರಾಧಿಸಿದ ಇತಿಹಾಸ ತಜ್ನರಿಂದ ಬರೆಸಿದ ಇತಿಹಾಸ ಈ ದೇಶದ ತರುಣರಲ್ಲಿ ಸಿನಿಕತೆಯನ್ನು,ದೇಶ ಕಾಯುವ ಸೈನಿಕರ ಬಗ್ಗೆ ತಿರಸ್ಕಾರವನ್ನೂ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ದಾಳಿ ನಡೆಸಿದವರನ್ನೂ ಆರಾಧಿಸುವ ಮಟ್ಟಕ್ಕೆ ಬೆಳೆಸಿದೆ. ನೀವು ಇದನ್ನೇ ಬಯಸಿದ್ದೀರಿ ಅಲ್ವ? ಪ್ರತಿಯೊಂದನ್ನೂ ಪ್ರಶ್ನಿಸುವ, ತಿರಸ್ಕರಿಸುವ ಎಡಬಿಡಂಗಿ ಮನೋಭಾವವನ್ನೇ ವೈಜ್ನಾನಿಕ ಎಂದು ಅರ್ಥೈಸಿದ್ದವರಿಗೆ ಇಂದಿನ ವಿಶ್ವವಿದ್ಯಾನಿಲಯಗಳ ದಿಕ್ಕುದೆಶೆ ಇಲ್ಲದ ಭವಿಷ್ಯದ ಬಗ್ಗೆ ಕನಸು, ದೇಶದ ಬಗ್ಗೆ ಕಾಳಜಿ ಎರಡೂ ಇಲ್ಲದ ಸಿನಿಕ ಯುವಭಾರತ ಹೆಮ್ಮೆ ತಂದಿರಬೇಕು ,
ಕಂಗ್ರಾಜ್ಯುಲೇಷನ್ಸ್!
ನೀವು ಮತ್ತು ನಿಮ್ಮ ಕುಟುಂಬದ ಸ್ವತ್ತಾಗಿ ಹೋದ ಪಕ್ಷಕ್ಕೆ ಭಾರತದ ಬಗ್ಗೆ ಪ್ರೀತಿ, ಹೆಮ್ಮೆ ಹುಟ್ಟುವುದಾದರೂ ಹೇಗೆ? ಸದಾ ಪಾಶ್ಚಾತ್ಯ ಚಿಂತನೆ, ಅಲ್ಲಿನ ವಿದ್ಯಾಲಯಗಳ ಓದು, ಅಲ್ಲಿನದೇ ಬದುಕನ್ನು ಕಂಡ ನಿಮ್ಮವರಿಗೆ ಈ ದೇಶ ಬರಿಯ ಮೂಢನಂಬಿಕೆಗಳ , ಜಾತಿಗಳ, ತಾರತಮ್ಯದ ಆಡೊಂಬೊಲವಾಗಿಯೇ ಕಂಡಿತ್ತು. ನೀವೇನೋ ಡಿಸ್ಕವರಿ ಆಫ್ ಇಂಡಿಯ ಬರೆದುಬಿಟ್ಟಿರಿ. ಆದರೆ ನಿಮ್ಮ ಮರಿ ಮಕ್ಕಳಿಗೆ ಅದರ ಕಲ್ಪನೆಯಾದರೂ ಇದೆ ಅಂದು ಕೊಂಡಿದ್ದೀರ? ನೀವು ಅಷ್ಟೆಲ್ಲ ಕಾಳಜಿಯಿಂದ ಜತನವಾಗಿ ಅತ್ಯಂತ ಚಾಣಾಕ್ಶತನದಿಂದ ಅಡೆತಡೆಗಳನ್ನು ನಿವಾರಿಸಿ , ಕಾದಿಟ್ಟ ದೇಶಾಡಳಿತದ ಕಿರೀಟ ಕೈ ತಪ್ಪಿದ ಸಂಕಟದಲ್ಲಿ ನಿಮ್ಮದೇ ವಂಶದ ಕುಡಿ ದೇಶದ್ರೋಹಿಗಳಿಗೂ ಜೈಕಾರ ಹಾಕುತ್ತಾನೆ. ನಮಗವನ ಬಗ್ಗೆ ನಿರೀಕ್ಶೆಗಳೇನೂ ಇಲ್ಲ ಬಿಡಿ. ಎಷ್ಟಾದರೂ ಏನೂ ಬೆಳೆಯದ ಹಿಮದ ಮರುಭೂಮಿಯನ್ನೂ ಬೇರೆ ದೇಶಕ್ಕೆ ಕೊಟ್ಟರೇನೂ ತೊಂದರೆ ಇಲ್ಲ ಅಂದವರಲ್ಲವೆ ನೀವೂ? ನಿಮ್ಮ ವಾರಸುದಾರರು ನಿಮ್ಮ ಜೀನ್ಗಳಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ ಬಿಡಿ. ಭಾರತದ ಸಾರ್ವಭೌಮತೆ ವಿಚ್ಛಿದ್ರವಾದರೂ ಚಿಂತೆ ಇಲ್ಲ, ಅವರ ಆಡಳಿತ ನಡೆಸಲು ತುಂಡು ಉಳಿದರೆ ಸಾಕು ಅನ್ನುತ್ತ ಭಾರತವನ್ನು ತುಂಡಾಗಿಸಲು ಹೋರಾಡುವವರ ಜತೆ ಧರಣಿ ಕೂರುತ್ತಿದ್ದಾರೆ. ನೀವು ಮಗಳನ್ನು ಪಟ್ಟಕ್ಕೇರಿಸಿದಾಗ ಇದನ್ನೇ ನಿರೀಕ್ಷಿಸಿದ್ದಿರೇನೋ ಅಲ್ವ?