ಸುಳ್ಸುದ್ದಿ : ಭಯೋತ್ಪಾದಕಿಯನ್ನು ವರಿಸಲಿರುವ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷ!
– ಪ್ರವೀಣ್ ಕುಮಾರ್ ಮಾವಿನಕಾಡು
ಕಳೆದ ಹಲವು ದಶಕಗಳಿಂದ ಭಾರತದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎನಿಸಿಕೊಂಡಿದ್ದ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷರೊಬ್ಬರು ಭಯೊತ್ಪಾದಕಿಯೊಬ್ಬಳನ್ನು ವಿವಾಹವಾಗಲಿರುವುದಾಗಿ ಆ ಪಕ್ಷದ ಹಿರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಇತ್ತೀಚಿಗೆ ಪಕ್ಷ ಕೈಗೊಂಡ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಭಯೋತ್ಪಾದಕರು ಅಥವಾ ಭಯೋತ್ಪಾದಕರ ಬೆಂಬಲಿಗರು ಸುಮಾರು 15 ರಿಂದ 20 ಪ್ರತಿಶತ ಇದ್ದು,ಅವರೆಲ್ಲರೂ ಈ ಮೊದಲು ನಮ್ಮ ಪಕ್ಷದ ಖಾಯಂ ಮತದಾರರಾಗಿದ್ದರು,ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಪಕ್ಷದಂತೆಯೇ ಹಲವು ಮೂಲಭೂತವಾದೀ ಪಕ್ಷಗಳು ಉದಯಿಸಿದ್ದು, ಇನ್ನು ಕೆಲವು ಪಕ್ಷಗಳು ವೋಟಿಗಾಗಿ ತಮ್ಮ ತತ್ವ-ಸಿದ್ದಾಂತ ಗಳನ್ನು ಬದಲಾಯಿಸಿಕೊಂಡಿದ್ದು,ಇದರಿಂದಾಗಿ ಭಯೋತ್ಪಾದಕರ ಓಟಿಗಾಗಿ ದೇಶದಲ್ಲಿ ತೀವ್ರ ಸ್ಪರ್ದೆ ಏರ್ಪಟ್ಟಿದೆ.ಆದ ಕಾರಣ ಆಂಧ್ರ,ಪಶ್ಚಿಮ ಬಂಗಾಳ,ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿರುವ ನಮ್ಮ ಸಾಂಪ್ರದಾಯಿಕ ಭಯೋತ್ಪಾದಕರ ಮತಗಳನ್ನು ಮತ್ತೆ ಬುಟ್ಟಿಗೆ ಹಾಕಿಕೊಳ್ಳುವ ದೃಷ್ಠಿಯಿಂದಾಗಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಕಳೆದ ತಿಂಗಳು ಹೈದರಾಬಾದ್ ನಲ್ಲಿ ಬಾಂಬ್ ಇಟ್ಟಿದ್ದ ಯಾಕೂಬ್ ಮೆಮನ್ ಎನ್ನುವ ಉಗ್ರವಾದಿಯ ಬೆಂಬಲಿಗರ ಪರವಾಗಿ ಹೋರಾಟ ನಡೆಸಿದ ಆ ಯುವರಾಜನಿಗೆ ಸಿಕ್ಕ ಅಭೂತಪೂರ್ವ ಬೆಂಬಲವನ್ನು ಕಂಡು ಪುಳಕಗೊಂಡ ಪಕ್ಷದಿಂದ ನೇಮಿಸಲ್ಪಟ್ಟ ಹಲವು ಸಲಹೆಗಾರರು,ಆತನ ತಾಯಿಯೂ ಆದ ಪಕ್ಷದ ಅಧ್ಯಕ್ಷೆಯ ಮುಂದೆ ಈ ರೀತಿಯ ಸಲಹೆಯನ್ನಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.ನಂತರ ಪಕ್ಷಾಧ್ಯಕ್ಷೆ ಈ ಬಗ್ಗೆ ಸಕಾರಾತ್ಮಕ ತೀರ್ಮಾನವನ್ನು ಕೈಗೊಂಡು ಪಕ್ಷದ ನೀತಿ ನಿರೂಪಣಾ ಸಮಿತಿಯ ಮುಂದೆ ಮಂಡಿಸಿದ್ದು, ಸಮಿತಿ ತನ್ನ ಸರ್ವಾನುಮತದ ಒಪ್ಪಿಗೆ ಸೂಚಿಸಿದ ಬಳಿಕ ಪಕ್ಷ ಈ ಕುರಿತು ಅಂತಿಮ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಗುರುತ್ವದ ಅಲೆಗಳಲ್ಲಿ ಕೇಳುವ ಬ್ರಹ್ಮಾಂಡದ ಸಂಗೀತ
– ವಿನಾಯಕ ಹಂಪಿಹೊಳಿ
ನೀವು ಅಂತರಿಕ್ಷದ ಆಕಾಶನೌಕೆಯೊಂದರಲ್ಲಿದ್ದೀರಿ ಎಂದು ಭಾವಿಸಿ. ಆ ನೌಕೆಯು ೯.೮ ಮೀ/ಸೆ೨ ವೇಗೋತ್ಕರ್ಷದಿಂದ ಚಲಿಸಲಾರಂಭಿಸಿತು ಎಂದಿಟ್ಟುಕೊಳ್ಳಿ. ಆ ನೌಕೆಯ ಕಿಟಕಿ ಬಾಗಿಲುಗಳೆಲ್ಲವೂ ಮುಚ್ಚಿವೆ ಎಂದು ಊಹಿಸಿ. ಆಗ ಅದು ವೇಗೋತ್ಕರ್ಷದಿಂದ ಚಲಿಸುತ್ತಿರುವ ಅನುಭವ ನಿಮಗೆ ನೇರವಾಗಿ ಆಗುವದಿಲ್ಲ. ಅದನ್ನು ಹೇಗೆ ತಿಳಿಯುತ್ತೀರಿ? ಸುಲಭ. ಆಗ ನಿಮ್ಮ ಕೈಯಲ್ಲಿನ ಚೆಂಡನ್ನು ಬಿಟ್ಟು ಬಿಡಿ. ಒಂದು ವೇಳೆ ನೌಕೆಯು ಏಕವೇಗದಿಂದ ಹೋಗುತ್ತಿದ್ದರೆ ಆ ಚೆಂಡು ಅಲ್ಲೇ ಇರುತ್ತದೆ. ನೌಕೆ ವೇಗೋತ್ಕರ್ಷವನ್ನು ಹೊಂದುತ್ತಿದ್ದರೆ ಚೆಂಡು ಮತ್ತು ನೌಕೆಯ ತಳದ ಅಂತರ ಕಡಿಮೆಯಾಗುತ್ತ ಸಾಗಿ ಕೊನೆಗೆ ನಿಮ್ಮ ಕಾಲ ಬಳಿ ಬಂದು ನೌಕೆಯ ತಳ ಭಾಗಕ್ಕೆ ಬಡಿಯುತ್ತದೆ. ಆಗ ನಿಮಗೆ ಚೆಂಡು ಕೆಳಗೆ ಬಿದ್ದಂತೆ ಕಾಣುತ್ತದೆ.
ಸರಿ. ಈ ಕಾಲ್ಪನಿಕ ಪ್ರಯೋಗದ ಲಾಭವೇನು? ತುಂಬಾ ಇದೆ. ಹೊರಗಡೆಯ ಸಂಪರ್ಕವೇ ಇಲ್ಲದ ಅಂಥ ನೌಕೆ ೯.೮ ಮೀ/ಸೆ೨ ವೇಗೋತ್ಕರ್ಷದಿಂದ ಮುನ್ನುಗ್ಗುತ್ತಿದ್ದರೆ, ನಿಮಗೆ ಭೂಮಿಯ ಮೇಲೆ ಇದ್ದ ಅನುಭವವೇ ಆಗುತ್ತಿರುತ್ತದೆ. ಎಲ್ಲಿಯವರೆಗೆ ನೀವು ಕಿಟಕಿ ತೆರೆದು ಹೊರಜಗತ್ತನ್ನು ನೋಡುವದಿಲ್ಲವೋ ಅಲ್ಲಿಯವರೆಗೂ ನಿಮಗೆ ಆಕಾಶದಲ್ಲಿದ್ದೇವೆ ಎಂದೇ ಅನಿಸುವದಿಲ್ಲ. ಹಾಗೆ ಅನ್ನಿಸಬೇಕಾದರೆ ನೀವು ಮುಚ್ಚಿರುವ ನೌಕೆಯಿಂದ ಆಚೆಗಿನ ಜಗತ್ತಿನೆಡೆ ಕಣ್ಣು ಹಾಯಿಸಬೇಕು. ಆಗಲೇ “ಒಹೋ! ಭೂಮಿಯ ಮೇಲಿಲ್ಲ!!” ಎಂಬ ಅನುಭವ ಬರುತ್ತದೆ. ಕನಸನ್ನು ಕಾಣುತ್ತಿರುವಾಗ ಈ ಕನಸು ಸುಳ್ಳು ಎಂದು ಎಂದಾದರೂ ಅನಿಸಿದೆಯೇ? “ಒಹೋ! ಕನಸಾ!!” ಎಂಬ ಸುಳ್ಳಿನ ಅರಿವು ಉಂಟಾಗುವದು ಎಚ್ಚರವಾದ ಮೇಲೇ ಅಲ್ಲವೇ? ಹಾಗೇ ಇದು.