ಭಾರತದ ಎಡಪಂಥೀಯರು ದೇಶವಿರೋಧದತ್ತೇಕೆ ಸಾಗುತ್ತಾರೆ?
– ವಿನಾಯಕ್ ಹಂಪಿಹೊಳಿ
ಭಾರತದಲ್ಲಿ ಇಂದು ಎಡಪಂಥವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಪಡೆದರೂ, ಶಿಕ್ಷಣ ಕ್ಷೇತ್ರದ ಎಲ್ಲ ಆಯಕಟ್ಟಿನ ಜಾಗಗಳನ್ನು ಆವರಿಸಿದರೂ, ಸೋಶಿಯಲ್ ಮೀಡಿಯಾ ಹೊರತುಪಡಿಸಿ ಬಹುತೇಕ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಎಡಪಂಥೀಯ ಚಿಂತನೆಯನ್ನೇ ಪ್ರಸಾರ ಮಾಡಿದ್ದರೂ, ಸರ್ಕಾರೀ ಪ್ರಶಸ್ತಿಗಳಲ್ಲಿ ಬಹುತೇಕ ಪಾಲನ್ನು ಎಡಪಂಥೀಯರಿಗೆ ಮೀಸಲಿಟ್ಟಿದ್ದರೂ, ಹಲವಾರು ಜನಪರ ಸರ್ಕಾರೀ ಯೋಜನೆಗಳು ಎಡಪಂಥೀಯ ಚಿಂತನೆಯನ್ನೇ ಅವಲಂಬಿಸಿಕೊಂಡಿದ್ದರೂ ಅದೇಕೋ ಬಹುತೇಕ ಭಾರತೀಯರು ಮಾತ್ರ ಎಡಪಂಥವನ್ನು ಒಪ್ಪಿಕೊಂಡೇ ಇಲ್ಲ.
ಎಡಪಂಥ ಶಬ್ದವು ಫ್ರೆಂಚ್ ಕ್ರಾಂತಿಯ ಅವಧಿಯಲ್ಲಿ ಹುಟ್ಟಿರುವ ಶಬ್ದವಾದರೂ ಕಾಲಕ್ರಮದಲ್ಲಿ, ಸೋಶಿಯಾಲಿಸಂ, ಕಮ್ಯುನಿಸಂ ಮುಂತಾದ ಕಲ್ಪನೆಗಳನ್ನು ಒಳಗೊಳ್ಳುತ್ತ ಹೋಯಿತು. ಸಮಾಜದಿಂದ ಹೆಚ್ಚು ಪ್ರಯೋಜನ ಪಡೆಯಲಾಗದವರ ಕುರಿತು ವಿಶೇಷ ಕಾಳಜಿಯನ್ನು ತೋರಿಸುವದು ಎಡಪಂಥದ ತತ್ತ್ವ. ಬಹುಸಂಖ್ಯಾತ ರಿಲಿಜನ್ನಿನವರಿಂದ ತುಳಿತಕ್ಕೊಳಗಾಗುವ ಅಲ್ಪಸಂಖ್ಯಾತ ರಿಲಿಜನ್ನಿನ ಜನರ ಕುರಿತು ಕಾಳಜಿ ತೋರಿಸುತ್ತದೆ. ಶ್ರೀಮಂತರಿಂದ ಅನ್ಯಾಯಕ್ಕೊಳಗಾದ ಬಡವರ ಪರವಾಗಿ ನಿಲ್ಲುತ್ತದೆ. ಒಟ್ಟಿನಲ್ಲಿ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಎಂಬ ಆದರ್ಶ ಸ್ಥಾಪಿಸುವದೇ ಇದರ ಉದ್ದೇಶ.
ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗೆ ಕಾರಣವಾಗುವ ಪ್ರತಿಯೊಂದನ್ನೂ ಎಡಪಂಥವು ವಿರೋಧಿಸುತ್ತದೆ. ಬಹುಸಂಖ್ಯಾತರಿರುವ ರಿಲಿಜನ್ನಿನ ಜನರಿಂದ ಅಲ್ಪಸಂಖ್ಯಾತರ ರಿಲಿಜನ್ನಿನ ಜನರಿಗೆ ಸಾಮಾಜಿಕ ಅನ್ಯಾಯಗಳಾಗುವದರಿಂದ ರಿಲಿಜನ್ನುಗಳನ್ನು ವಿರೋಧಿಸುತ್ತದೆ. ಖಾಸಗೀ ಉದ್ಯಮಗಳಿಂದಾಗಿ ಆರ್ಥಿಕ ಸಂಪತ್ತುಗಳು ಉದ್ದಿಮೆದಾದರಲ್ಲಿಯೇ ಕ್ರೋಢೀಕರಣಗೊಳ್ಳುವದರಿಂದ ಖಾಸಗೀಕರಣವನ್ನು ವಿರೋಧಿಸುತ್ತದೆ. ರೈತರು ಬೆಳೆಯುವ ಬೆಳೆಯನ್ನು ಸಂಗ್ರಹಿಸಿಟ್ಟುಕೊಳ್ಳುವ ಜಮೀನುದಾರರನ್ನು ವಿರೋಧಿಸುತ್ತದೆ.
ವೋಟ್ ಬ್ಯಾಂಕ್ ಮದ್ದಾನೆಗೆ ಸಿಲುಕಿ ನರಳಿದ ಸಿಸಿಸಿ
– ಅನಿರುದ್ಧ ವಸಿಷ್ಟ,ಭದ್ರಾವತಿ
ಏಕರೂಪ ನಾಗರಿಕ ಸಂಹಿತೆ – ಸುಪ್ರೀಂ ಕೋರ್ಟ್ V/S ಜಮಾತೆ ವಿಚಾರಧಾರೆ
ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆದದ್ದು ಮಾತ್ರವಲ್ಲದೇ, ದೇಶವನ್ನು ದಾಸ್ಯದ ಸಂಕೋಲೆಯಲ್ಲಿ ಬೀಳಿಸಿ, ಅಬ್ಬರಿಸಿದ ಬ್ರಿಟೀಷರ ಒಡೆದಾಳುವ ನೀತಿಯ ಮನಸ್ಥಿತಿ, ಭಾರತೀಯ ವಂಶವಾಹಿಯಲ್ಲಿ ಸೇರಿಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಆದರೆ,ಇವರನ್ನು ಓಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವೆಂದು ಬೀಗುವ ಅಹಿಂಸಾವಾದಿ(?)ಗಳ ಕಾಂಗ್ರೆಸ್, ಎಲ್ಲ ಕ್ರೆಡಿಟ್‌ನ್ನು ತನ್ನ ತೆಕ್ಕೆಗೆ ಹಾಕಿಕೊಂಡದ್ದು ಮಾತ್ರವಲ್ಲದೇ, ಬ್ರಿಟೀಷರ ಒಡೆದಾಳುವ ನೀತಿಯನ್ನೇ ಮೈಗೂಡಿಸಿಕೊಂಡಿತು. ಭಾರತೀಯ ಸ್ವಾತಂತ್ರ್ಯದ ಜನಕ ಮಹಾತ್ಮ ಗಾಂಧಿಯವರ ಮಾತನ್ನು ಧಿಕ್ಕರಿಸಲು ಆರಂಭಿಸಿದ ಜವಹರಲಾಲ್ ನೆಹರೂ,ತಮ್ಮಿಚ್ಚೆಗೆ ಬಂದಂತೆ ಸರ್ಕಾರ ನಡೆಸಲು ಆರಂಭಿಸಿದ್ದು ಮಾತ್ರವಲ್ಲದೇ, ದೇಶದ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿ, ಶಾಶ್ವತಗೊಳಿಸಲು ಯೋಚಿಸಿ, ವೋಟ್ ಬ್ಯಾಂಕ್ ಎಂಬ ಅನಿಷ್ಟ ಪದ್ದತಿಯನ್ನು ಭಾರತದ ರಾಜಕಾರಣಕ್ಕೆ ಕೊಡುಗೆಯನ್ನಾಗಿ ನೀಡಿದರು.
ಇದರ ಪರಿಣಾಮ, ಬ್ರಿಟೀಷರಂತೆ ಒಡೆದಾಳುವ ನೀತಿಯನ್ನು ೬೦ ವರ್ಷಗಳ ಕಾಲ ಕಾಂಗ್ರೆಸ್ ಅನುಸರಿಸಿಕೊಂಡು ಬಂದದ್ದಲ್ಲದೇ, ಜಾತ್ಯತೀತ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕೇವಲ ಸಂವಿಧಾನದ ಪೀಠಿಕೆಗೆ ಮಾತ್ರ ಸೀಮಿತವಾಗಿಸಿ, ಓಲೈಕೆ ರಾಜಕಾರಣದ ವಿಷಬೀಜವನ್ನು ಬಿತ್ತಿ, ಹೆಮ್ಮರವನ್ನಾಗಿ ಬೆಳೆಸಿದೆ. ಪರಿಣಾಮ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿ, ಧರ್ಮಗಳೇ ಇಂದು ಎಲ್ಲ ಕ್ಷೇತ್ರಗಳ ಪ್ರಮುಖ ವಿಚಾರ ಹಾಗೂ ವಿವಾದಗಳಾಗಿ ಪರಿವರ್ತನೆಯಾಗಿದ್ದು, ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರಿದ ಭಾರತದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿತ್ತು. ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಈ ವಿಚಾರಗಳು ಸಂವಿಧಾನದ ಮೂಲ ಆಶಯ ಹಾಗೂ ಈ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಉಲ್ಲಂಘಿಸುವ ಮಟ್ಟಕ್ಕೆ ಧರ್ಮಾಧಾರಿತ ಕಾನೂನು ಹಾಗೂ ವ್ಯವಸ್ಥೆಗಳನ್ನು ರೂಪಿಸಿ, ಬೀಗಲು ಅವಕಾಶ ಮಾಡಿಕೊಟ್ಟಿದೆ.ಅಭಿವೃದ್ಧಿಶೀಲ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು, ಭಾರತವನ್ನು ವಿಶ್ವಗುರುನ್ನಾಗಿಸುವತ್ತ ಹೊರಳಿಸುತ್ತಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಈ ವಿಚಾರಕ್ಕೆ ದೇಶದೊಳಗಿರುವ ಇಂತಹ ಅನಿಷ್ಟ ಪದ್ದತಿಗಳು ತೊಡಕಾಗುತ್ತವೆ.ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಮಾನ ನ್ಯಾಯ ಒದಗಿಸಲು ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ಭಾರತ ಸಂವಿಧಾನ ಪೀಠಿಕೆಯಲ್ಲಿ ಹೇಳಿರುಂತೆ ಜಾತ್ಯತೀತ ಹಾಗೂ ಸಮಾನತೆಯನ್ನು ದೇಶದಲ್ಲಿ ವಾಸ್ತವವಾಗಿ ಜಾರಿಗೊಳಿಸಬೇಕಾದರೆ, ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಲೇಬೇಕು.
ಮತ್ತಷ್ಟು ಓದು