ವಿಷಯದ ವಿವರಗಳಿಗೆ ದಾಟಿರಿ

Archive for

31
ಮಾರ್ಚ್

ಸಾವರ್ಕರ್ ಬಗ್ಗೆ ಮಾತಾಡುವುದಕ್ಕೂ ಯೋಗ್ಯತೆ ಬೇಕು

-ಡ್ಯಾನಿ ಪಿರೇರಾ
ಹಳ್ಳಿಮೈಸೂರು-573210

355-Vinyaka-Damodar-Savarkar1123-03-2016 ರಂದು ಭಗತ್ ಸಿಂಗ್, ರಾಜಗುರು ಸುಖದೇವರ ಬಲಿದಾನದ ದಿನ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಒಂದು ಸುದ್ಧಿ ಕಾಣಿಸಿತು. ಅದು ಕಾಂಗ್ರೆಸ್ಸಿನ ಅಧಿಕೃತ ಐಎನ್‍ಸಿ ಟ್ವಿಟರ್ ನಲ್ಲಿ ಪ್ರಕಟವಾದ ಸಂದೇಶ ವಾಗಿತ್ತು. ಅದರಲ್ಲಿ ಹೇಳುತ್ತಿರುವುದೇನು?! ಭಗತ್ ಸಿಂಗ್, ಸ್ವಾತಂತ್ರ್ಯವೀರ ಸಾವರ್ಕರ್‍ರ ಭಾವಚಿತ್ರದಡಿಯಲ್ಲಿ ಒಬ್ಬರನ್ನು ದೇಶಭಕ್ತ ಮತ್ತೊಬ್ಬರನ್ನು ದೇಶದ್ರೋಹಿ ಎಂದು ಟ್ವಿಟ್ ಮಾಡಲಾಗಿರುವ ಸಂದೇಶವದು! ಈ ದೇಶದ ಸ್ವಾತಂತ್ರ್ಯ ಯೋಧರ ಬಗೆಗಿನ ಕಾಂಗ್ರೆಸ್ಸಿನ ಮಾನಸೀಕತೆಯನ್ನು ಬಲ್ಲವರಿಗೆ ಈ ಹೇಳಿಕೆಯನ್ನು ನೋಡಿದಾಗ ಆಶ್ಚರ್ಯವಾಗುವುದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಒಂದಷ್ಟು ಹುಡುಕಾಟ ನಡೆಸುವ ಯುವ ಮನಸ್ಸುಗಳಿಗೆ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಾತ್ರವಲ್ಲದೇ ಇಡೀ ಜೀವನವನ್ನೇ ದೇಶ ಮಾತೆಯ ಸೇವೆಗಿಟ್ಟ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ಪ್ರೇರಣೆ ಕೊಡಬೇಕಾಗುವ ವಿಷಯವಾಗಬೇಕಾದ ಹಿನ್ನೆಲೆಯಲ್ಲಿ ಅವರ ಬಗೆಗಿನ ಕಾಂಗ್ರೆಸ್ ಪಕ್ಷದ ಮಾತು ನಿಜಕ್ಕೂ ತಪ್ಪು ಸಂದೇಶ ಕೊಡುವಂತದ್ದು! ಇವರೇಕೆ ಹೀಗೆ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ನಡುವೆ ಭಿನ್ನಾಭಿಯವಿದ್ದೊಡನೇ ಆ ವ್ಯಕ್ತಿ ವಿದ್ರೋಹಿ ಆಗಬಲ್ಲನೇ?! ಮತ್ತಷ್ಟು ಓದು »

30
ಮಾರ್ಚ್

ಪೇಪರು ಔಟಾಗಿ, ಎಂಟ್ರೆನ್ಸು ಬೇಕಾಗಿ..

– ನಾಗೇಶ ಮೈಸೂರು

chemistry-paper-leak-305_032216115714ಅದು ಸುಮಾರು ೮೨-೮೩ ರ ಕಾಲ. ನಾವು ಅಗ ಎರಡನೆ ಪೀಯೂಸಿಯಲ್ಲಿ ಓದುತಿದ್ದೆವು. ಆಗಿನ್ನೂ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳಿಗೆ ಪ್ರವೇಶ ಪರೀಕ್ಷೆ ಇರಲಿಲ್ಲ – ಪೀಯೂಸಿ ಅಂಕೆ, ದರ್ಜೆಯ ಮೇಲೆ ಸೀಟು ನಿರ್ಧಾರವಾಗುತ್ತಿದ್ದ ಕಾಲ. ‘ಸೈನ್ಸ್ ತೆಗೆದುಕೊಂಡರೆ ಕೆಲಸ ಸುಲಭ ಸಿಗುತ್ತೆ’ ಅನ್ನುವ ಜನಪ್ರಿಯ ನಂಬಿಕೆಯನುಸಾರ ಪೀಸಿಎಂಬಿ ತೆಗೆದುಕೊಡಿದ್ದ ನನಗಂತೂ ಕೂತಲ್ಲಿ, ನಿಂತಲ್ಲಿ ಅದೇ ಧ್ಯಾನ, ಆತಂಕ, ಕಳವಳ.

ಫೇಲಾಗಿ ಬಿಟ್ಟರೆ ಎಲ್ಲರ ಎದುರು ಮುಖವೆತ್ತಿ ತಿರುಗುವುದು ಹೇಗೆ ಅನ್ನುವುದಕ್ಕಿಂತ, ಸುತ್ತ ಮುತ್ತಲಿನವರೆಲ್ಲ ಇಟ್ಟುಕೊಂಡಿರುವ ‘ಮಹಾ ಬುದ್ಧಿವಂತ, ಗ್ಯಾರಂಟಿ ಎಂಜಿನಿಯರೋ, ಡಾಕ್ಟರೋ ಆಗ್ತಾನೆ’ ಅನ್ನೋ ನಂಬಿಕೆ ಸುಳ್ಳಾಗಿಬಿಟ್ರೆ ಏನು ಕಥೆಯಪ್ಪ ? ಅನ್ನೋ ಅಳುಕೇ ಹೆಚ್ಚಾಗಿ ಕಿತ್ತು ತಿನ್ನುತ್ತಿತ್ತು. ಇನ್ನು ಮಿಕ್ಕಿದ್ದೆಲ್ಲ ಹೇಳುವ ಹಾಗೆ ಇಲ್ಲಾ ಬಿಡಿ – ಬೆಳಗಿನಿಂದ ಕಾಲೇಜು ಕ್ಲಾಸು, ಮುಗಿಯುತ್ತಿದ್ದಂತೆ ಸೈಕಲ್ ಏರಿ ಹೊರಟರೆ ಒಂದು ಕಡೆಯಿಂದ ಟ್ಯೂಶನ್ನಿನ ಪರಿಭ್ರಮಣನೆ.. ಎಂಜಿನಿಯರಿಂಗೋ, ಮೆಡಿಕಲ್ಲೋ ಆನ್ನೋ ಸಂದಿಗ್ದಕ್ಕೆ ಎಲ್ಲಾ ನಾಲ್ಕು ಸಬ್ಜೆಕ್ಟ್ಟಿಗೂ ಟ್ಯೂಷನ್.. ಮನೆಗೆ ಬಂದ ಮೇಲೆ ಮತ್ತೆ ರಿವಿಷನ್, ಸ್ಟಡಿ ನಡುರಾತ್ರಿಯವರೆಗೆ. ಇವಿಷ್ಟು ಬಿಟ್ಟರೆ ಬೇರೆ ಬದುಕೇ ಇಲ್ಲ ಅನ್ನೋ ತರಹದ ಜೀವನ. ಮತ್ತಷ್ಟು ಓದು »

29
ಮಾರ್ಚ್

ಬಣ್ಣದ ಬದುಕಿಗೆ ಮರುಳಾಗುವ ಮುನ್ನ

– ರಾಜೇಶ್ ನರಿಂಗಾನ

Sad_Brown_Eyes_With_Tears-6ಕಳೆದ ವಾರ ನಮ್ಮ ಕಂಪೆನಿಯ ಮಾರ್ಕೆಟಿಂಗ್ ವಿಸ್ತರಣೆಗಾಗಿ ಪೂಂಜಾಲಕಟ್ಟೆಗೆ ಹೋಗಿದ್ದೆ. ಮೊದಲೇ ಬಿರುಬಿಸಿಲು. ಬಸ್ಸಿನಿಂದ ಇಳಿಯುತ್ತಿದ್ದಂತೆ ಅಲ್ಲೇ ಬಸ್ ಸ್ಟ್ಯಾಂಡ್ ಪಕ್ಕದಲ್ಲಿದ್ದ ಅಂಗಡಿಗೆ ಹೋಗಿ ಎಳನೀರು ಕುಡಿದು ಹೊರಬಂದಾಗ ಬಸ್ ಸ್ಟ್ಯಾಂಡ್’ನಲ್ಲಿ ಒಬ್ಬಾಕೆ ಮೂವತ್ತು ಮೂವತ್ತೈದರ ಹರೆಯದ ಮಹಿಳೆ ನಾನು ಹೋಗಬೇಕಾಗಿದ್ದ ಗೇರುಬೀಜದ ಕಾರ್ಖಾನೆಯ ಕಡೆಯಿಂದ ಬರುತ್ತಿದ್ದರು. ತನ್ನ ಕೈಯಲ್ಲಿ ಒಂದು ಪುಟ್ಟ ಮಗುವನ್ನು ಎತ್ತಿಕೊಂಡಿದ್ದರೆ, ಇನ್ನಿಬ್ಬರು ಮಕ್ಕಳು ನಡೆದುಕೊಂಡು ಬಸ್ ಸ್ಟ್ಯಾಂಡ್ ನ ಕಡೆಗೆ ಬರುತ್ತಿದ್ದರು. ಅವರು ನನ್ನ ಕಣ್ಣಿಗೆ ಹತ್ತಿರವಾಗುತ್ತಿದ್ದಂತೆ ಆಕೆಯನ್ನು ಎಲ್ಲೋ ನೋಡಿದ ನೆನಪು ಕಾಡತೊಡಗಿತು. ಕಡೆಗೂ ನೆನಪು ಮರುಕಳಿಸಿತು… ಹೌದು…!!!! ಅದು ಅವಳೇ…..!!!!!! ಈಗ ಮತ್ತಷ್ಟು ನೆನಪಾಯಿತು. ನನ್ನ ನೆನಪು ಹತ್ತು ವರ್ಷಗಳ ಹಿಂದಕ್ಕೆ ಹೋಯಿತು….. ಮತ್ತಷ್ಟು ಓದು »

28
ಮಾರ್ಚ್

ಮರೆತೇಬಿಟ್ಟಿರುವ ನವಿಲುಗರಿ ಮರಿ ಹಾಕಿದೆಯೋ ಏನೋ!

-ರೋಹಿತ್ ಚಕ್ರತೀರ್ಥ

12421710_10208313626414840_70687296_nಅದೊಂದು ಅನೂಹ್ಯ ಪ್ರಪಂಚ. ನನ್ನ ಅಜ್ಜಿ ವಾರ, ಎರಡು ವಾರಕ್ಕೊಮ್ಮೆ ಅಲ್ಲಿ ಹೋಗುವುದಿತ್ತು. ಶ್ರಾದ್ಧಕ್ಕೆ ಗಿಂಡಿಗಳು ಬೇಕಾದವೆಂದೋ ಭರಣಿಯಲ್ಲಿಟ್ಟ ಉಪ್ಪಿನಕಾಯಿ ಖರ್ಚಾಯಿತೆಂದೋ ಅಥವಾ ದಿನದಲ್ಲಿಪ್ಪತ್ತೈದು ಗಂಟೆ ಬೇಡುತ್ತಿದ್ದ ಕೆಲಸಗಳು ಅಂದು ತುಸು ಬೇಗನೆ ಮುಗಿದು ಜೇಡರ ಬಲೆ ತೆಗೆಯುವುದಕ್ಕೆ, ಬಾವಲಿಗಳ ಹಿಕ್ಕೆ ತೆಗೆದು ಹೊರಹಾಕುವುದಕ್ಕೆ ಸಮಯ ಮಿಕ್ಕಿತೆಂದೋ, ಅಂತೂ ಅಲ್ಲಿಗೆ ಹೋಗಲು ಯಾವುದಾದರೊಂದು ಕಾರಣ ಅಜ್ಜಿಗೆ ಸಿಕ್ಕರೆ ನಮಗೆ ಸ್ವರ್ಗದ ಬಾಗಿಲು ತೆರೆದುಕೊಂಡಷ್ಟೇ ಖುಷಿ. “ಅಜ್ಜಿ, ನಾನೂ ಬತ್ತೆ” ಅಂತಿದ್ದೆವು. ನಮ್ಮ ವಿನಂತಿಗೆ ಪ್ರತಿಯಾಗಿ ಆಕೆಯಿಂದ ಅರ್ಧಗಂಟೆ ಪ್ರವಚನ ಹೇಳಿಸಿಕೊಂಡು, ಕೋಪದಿಂದ ಮುಖ ಊದಿಸಿಕೊಂಡರೆ ಅದೂ ಒಂದು ಲಾಭವೇ. ಯಾಕೆಂದರೆ ಅಷ್ಟೆಲ್ಲ ಬಯ್ದು ಗುಡ್ಡೆ ಹಾಕಿ ಕೊನೆಗೆ ನಮ್ಮ ಗಂಟುಮುಖ ನೋಡಲಾಗದೆ ಮೊಸರವಲಕ್ಕಿ ಮಾಡಿ ತಿನ್ನಿಸಿ, “ಬಾ ಬಾ ಆದರೆ ಹನುಮಂತನ ಹಾಗೆ ಕುಣೀಬೇಡ ಅಲ್ಲಿ” ಎಂಬ ಎಚ್ಚರಿಕೆ ಕೊಟ್ಟು ಒಯ್ಯುತ್ತಿದ್ದಳು ಆಕೆ ಆ ಅಟ್ಟವೆಂಬ ನಿಗೂಢ ವಿಸ್ಮಯ ಪ್ರಪಂಚಕ್ಕೆ.
ಅಟ್ಟವೇ? ಹಾಗೆಂದರೇನು? ಎಂದು ಕೇಳುವ ಕಾಲ ಬಂದಿದೆ. ಮತ್ತಷ್ಟು ಓದು »

26
ಮಾರ್ಚ್

ಬಾಜಿರಾಯನ ಉತ್ತರದ ದಂಡಯಾತ್ರೆ

-ರಂಜನ್ ಕೇಶವ

3542284598_ea990137ddಏಪ್ರಿಲ್ 9, 1737

ಬಾಜಿರಾಯನ ಅಶ್ವದಳ ತಲ್ಕತೋರಾ ಎಂಬಲ್ಲಿ ಕೆಂಪುಕೋಟೆ ತೋರುವಲ್ಲೇ ಡೇರೆ ಹಾಕಿತ್ತು. ಮರಾಠರ ಖಡ್ಗಗಳನ್ನು ಹೊತ್ತ ಈ ಅಶ್ವಬಲ ದಿನಕ್ಕೆ ನಲವತ್ತು ಕಿಲೋಮೀಟರ್ ವೇಗದಲ್ಲಿ ಒಂದೇ ಸಮನೇ ಯಾವ ಮುನ್ಸೂಚನೆಯಿಲ್ಲದೇ ಒಂದೇ ರಭಸಕ್ಕೆ ದೆಹಲಿಯ ಸರಹದ್ದನ್ನು ತಲುಪಿತ್ತು. ಇದರ ಸುದ್ದಿ ಹಬ್ಬಿದಂತೆ ಮೊಘಲ್ ಸಿಂಹಾಸನ ಗಡ ಗಡ ನಡುಗಿ ಅಲ್ಲಿಂದ ಕಾಲ್ಕೀಳಲು ದೋಣಿಗಳನ್ನು ಸಿದ್ಧಪಡಿಸಿದರು. ಅದರಲ್ಲೂ ಬಾಜಿರಾಯನ ಸೋಲಿಲ್ಲದ ಜಯಭೇರಿ ಭಾರತದುದ್ದಗಲಕ್ಕೂ ಹಬ್ಬಿತ್ತು. ಅವನ ಪರಾಕ್ರಮವನ್ನೆದುರಿಸುವ ಧೈರ್ಯ ಇವರಿಗೆಲ್ಲಿಂದ ಬರಬೇಕು ಪಾಪ. ಸಾವಿರ ವರ್ಷದ ಹಿಂದೆ ಇಮ್ಮಡಿ ಪುಲಕೇಶಿ ದಕ್ಷಿಣದಿಂದ ಉತ್ತರಕ್ಕೆ ಜಯಭೇರಿ ಬಾರಿಸಿದ್ದ. ಅದರ ನಂತರ ಈಗ ಬಾಜಿರಾಯ ಎರಡನೆಯ ಬಾರಿ ಉತ್ತರ ಭಾರತವನ್ನು ರಕ್ಷಿಸಲು ಕುದುರೆಯೇರಿ ಬಂದಿದ್ದ. ಮತ್ತಷ್ಟು ಓದು »

25
ಮಾರ್ಚ್

ಕಾಂಗ್ರೆಸ್-ಕಮ್ಯುನಿಷ್ಟರ ಮೈತ್ರಿ, ಬಂಗಾಳಕ್ಕೆ ಸಿಕ್ಕಿದ್ದು ಕರಾಳ ರಾತ್ರಿ

-ಶ್ರೀನಿವಾಸ ರಾವ್

bengalಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಕೊಲೆ, ದಾಳಿ – ಭಯೋತ್ಪಾದನೆಗೆ ಧರ್ಮವಿಲ್ಲ- ಕಮ್ಯುನಿಷ್ಟರು
26/11ರ ಮುಂಬೈ ದಾಳಿ, ದಾಳಿ ಮಾಡಿದ್ದು ಇಸ್ಲಾಮ್ ನ ಭಯೋತ್ಪಾದಕರು -ಭಯೋತ್ಪಾದನೆಗೆ ಧರ್ಮವಿಲ್ಲ- ಬುದ್ಧಿಜೀವಿಗಳು, ಕಮ್ಯುನಿಷ್ಟರು. ಉಗ್ರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ – ಭಯೋತ್ಪಾದನೆಗೆ ಧರ್ಮವಿಲ್ಲ!

ಭಾರತದಲ್ಲಾಗಲೀ ಅಥವಾ ವಿದೇಶಗಳಲ್ಲಿ ಇಸ್ಲಾಂ ನ ಮೂಲಭೂತವಾದಿಗಳು, ಮತಾಂಧ ಉಗ್ರರು ದಾಳಿ ನಡೆಸಿದಾಗಲೆಲ್ಲಾ ’ಭಯೋತ್ಪಾದನೆಗೆ ಧರ್ಮವಿಲ್ಲ’ವೆಂಬ ಹೇಳಿಕೆ (ready made statement) ಸಿದ್ಧವಾಗಿರುತ್ತದೆ. ಇಂಥದ್ದೊಂದು ಹೇಳಿಕೆಯನ್ನು coin(ಪರಿಚಯಿಸಿದ್ದೇ)ಮಾಡಿದ್ದೇ ಈ ಕಮ್ಯುನಿಷ್ಟರು ಹಾಗೂ ಕಮ್ಯುನಿಷ್ಟರ ಕೃಪಾಪೋಷಿತ ಬುದ್ಧಿಜೀವಿಗಳು. ಭಯೋತ್ಪಾದಕರ ದಾಳಿ ನಡೆದಾಗಲೆಲ್ಲಾ ಇವರಿಂದ ಇಂಥಹ ಹೇಳಿಕೆ ಬರುವುದಾದರೂ ಯಾಕೆ ಅಂದುಕೊಂಡಿದ್ದೀರಿ? ಇಸ್ಲಾಮ್ ಗೆ ಪರ್ಯಾಯವಾದ, ಅಂಥಹದ್ದೇ ಒಂದು ಭಯೋತ್ಪಾದನೆಯನ್ನು ಇವರೂ ಪರಿಚಯಿಸಿದ್ದಾರೆ ಆದ್ದರಿಂದ…
ಮತ್ತಷ್ಟು ಓದು »

24
ಮಾರ್ಚ್

ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’! (ಲಘು ಹರಟೆ)

– ನಾಗೇಶ ಮೈಸೂರು

12722114_1039179789476357_283084984_nಗುಬ್ಬಣ್ಣ ಅವತ್ಯಾಕೋ ತುಂಬಾ ‘ಖರಾಬ್ ಅಂಡ್ ಗರಂ’ ಮೂಡಿನಲ್ಲಿ ಮರಿ ಹಾಕಿದ ಬೆಕ್ಕಿನ ತರ ಬೀಟ್ ಹೊಡಿತಿದ್ದ ಲಿಟಲ್ ಇಂಡಿಯಾ ಒಳಗಿರೋ ಕರ್ಬಾವ್ ಸ್ಟ್ರೀಟಲ್ಲಿ.. ಅದೂ ಬೆಳ್ಳಂಬೆಳಿಗ್ಗೆ ಯಾರೂ ಓಡಾಡದೆ, ಬರಿ ಪಾರಿವಾಳಗಳು ಮಾತ್ರ ಅಕ್ಕಿಕಾಳು ಹೆಕ್ಕೋ ಹೊತ್ನಲ್ಲಿ..

ಈ ‘ಬೀದಿನಾಮ’ಗಳು ಎಲ್ಲೂ ಕೇಳಿದ ಹಾಗಿಲ್ಲವಲ್ಲ ಅಂತ ಅನ್ಸಿದ್ರೆ ಅದರಲ್ಲೇನು ವಿಶೇಷ ಇಲ್ಲ ಬಿಡಿ – ಯಾಕೆಂದ್ರೆ ಗುಬ್ಬಣ್ಣನ ಠಿಕಾಣೆ ಇರೋದೇ ಸಿಂಗಪುರ ಅನ್ನೋ ಪುಟ್ಟ ‘ರೆಡ್ ಡಾಟ್ನಲ್ಲಿ’. ಸಿಂಗಪುರವೇ ರೆಡ್ ಡಾಟ್ ಆದ ಮೇಲೆ ಇನ್ನು ಅದರಲ್ಲಿರೋ ‘ಲಿಟಲ್ ಇಂಡಿಯಾ’ ಅನ್ನೋ ಮೈಕ್ರೋ ಡಾಟ್ ಕೇಳಬೇಕೆ ? ಸಿಂಗಪುರ ಮ್ಯಾಪಲ್ಲೇ ಲೆನ್ಸ್  ಹಾಕ್ಕೊಂಡು ಹುಡುಕಬೇಕು ಅನ್ನೋ ಹಾಗಿರುತ್ತೆ. ಇನ್ನು ಅದರೊಳಗಿರೊ ‘ಕರ್ಬಾವ್ ಸ್ಟ್ರೀಟ್’ ಅನ್ನೋ ‘ನ್ಯಾನೋ ಡಾಟ್’ ಬಗ್ಗೆ ಹೇಳೊ ಹಾಗೆ ಇಲ್ಲ ಅಂತ ಮೂಗು ಮುರಿಬೇಡಿ. ಸುತ್ತಮುತ್ತಲ ಜಾಗದ ಸಿಂಗಪುರದಲ್ಲಿ ‘ಕಲ್ಚರಲ್ ಹೆರಿಟೇಜ್ ಸೈಟ್’ ಅಂತ ಗುರ್ತಿಸಿರೋದ್ರಿಂದ ಇದೊಂದು ಇಂಪಾರ್ಟೆಂಟ್ ಟೂರಿಸ್ಟ್ ಸ್ಪಾಟ್.. ಅದರ ಪಕ್ಕದಲ್ಲೇ ಮನೆ ಇರೋ ನನಗೆ ‘ರಿಯಲ್ ಎಸ್ಟೇಟ್’ ಪಾಯಿಂಟಿನಿಂದ ಈ ‘ನ್ಯಾನೋ ಡಾಟ್’ ಇನ್ನೂ ತುಂಬಾ ಇಂಪಾರ್ಟೆಂಟು..! ಮತ್ತಷ್ಟು ಓದು »

22
ಮಾರ್ಚ್

ನಿಜವಾದ ಹೀರೋಗಳಿವರು

 ಮಯೂರಲಕ್ಷ್ಮೀ.

Bhagat-Singh-Factsಅವರು ಯುವಕರು… ಅಪ್ರತಿಮ ಧೈರ್ಯ, ಸಾಹಸ ಪ್ರವೃತ್ತಿ, ತೇಜಸ್ಸು ಮತ್ತು ಸದ್ಗುಣಗಳು ಅವರಲ್ಲಿತ್ತು.. ಅವರಲ್ಲಿದ್ದ ನಾಯಕತ್ವ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತ ಜ್ಞಾನದಿಂದ ಅವರು ಏನನ್ನಾದರೂ ಸಾಧಿಸಬಹುದಿತ್ತು.. ಅದು ಬ್ರಿಟಿಷರು ಭಾರತೀಯರನ್ನು ದಾಸ್ಯದಲ್ಲಿಟ್ಟು ಆಳುತ್ತಿದ್ದ ಕಾಲ. ಆ ಮೂವರೂ ಯಾವುದೇ ಅಧಿಕಾರದ ಆಮಿಷಕ್ಕೆ ಒಳಗಾಗಲಿಲ್ಲ, ತಾವೇ ವಿಧಿಸಿಕೊಂಡ ದೇಶರಕ್ಷಣೆಯ ಕಟ್ಟುಪಾಡುಗಳನ್ನು ಮೀರದೆ ಆಂಗ್ಲರಿಂದ ದೇಶವನ್ನು ಮುಕ್ತಗೊಳಿಸಲು ಯಾವ ತ್ಯಾಗವನ್ನಾದರೂ ಮಾಡಲು ಸಿದ್ಧರಾದರು. ಅಂತೆಯೇ ತಮ್ಮ ಪ್ರಾಣವನ್ನೂ ದೇಶಕ್ಕಾಗಿ ಅರ್ಪಿಸಿದರು. ಈ ದೇಶ ಎಂದೂ ಮರೆಯದ ಮರೆಯಲಾಗದ ಯುವಚೇತನರು ಈ ಮೂವರು.. ನಮ್ಮ ಇಂದಿನ ಯುವಶಕ್ತಿಗೆ ನಿಜವಾದ ಮಾದರಿ ಇವರೇ…!

ಮತ್ತಷ್ಟು ಓದು »

22
ಮಾರ್ಚ್

ಸಾವರ್ಕರ್ ಉಗ್ರಗಾಮಿ ಅಂದವರನ್ನು ಇತಿಹಾಸ ಹೇಗೆ ತಾನೆ ಕ್ಷಮಿಸೀತು?

-ಸಂಕೇತ್ ಡಿ ಹೆಗಡೆ, ಸಾಗರ

45ಅಹಿಂಸೆಯ ಪ್ರತಿಪಾದಕರಿಗೆ ಸಂಪೂರ್ಣ ಗೌರವದಿಂದ ನಾನೊಂದು ಮೂಲಭೂತ ಪ್ರಶ್ನೆ ಕೇಳಬಯಸುತ್ತೇನೆ. ನಿಮಗ್ಯಾಕೆ ಹಿಂಸೆ ಮತ್ತು ಸ್ವರಕ್ಷಣೆಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ? ಎಂದು. ಹಿಂಸೆ ಅಪ್ರಚೋದಕವಾದ ಕ್ರೌರ್ಯ. ಸ್ವರಕ್ಷಣೆ ಹಿಂಸೆಯಲ್ಲ, ಅದೊಂದು ಅನಿವಾರ್ಯದ ಪ್ರತಿಕ್ರಿಯೆ. ಶಾರ್ಕ್ ಮೀನೊಂದು ಸಣ್ಣ ಮೀನುಗಳನ್ನು ತಿನ್ನಲು ಬಂದರೆ, ಸಣ್ಣ ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಶಾರ್ಕ್ ನ ಮೇಲೇ ದಾಳಿ ಮಾಡುತ್ತವೆ. ಅದು ಹಿಂಸೆಯೇನು? ಅಪರಿಚಿತನೊಬ್ಬ ಬೆಕ್ಕುಮರಿಯೊಂದನ್ನು ಬಲವಂತವಾಗಿ ಎತ್ತಿಕೊಳ್ಳಹೋದರೆ ಪರಚಿ ಹಾಕುತ್ತೆ. ಸುಂದರವಾಗಿ ಕಟ್ಟಿಕೊಂಡ ಜೆನೂಗೂಡಿಗೋ, ಕಷ್ಟಪಟ್ಟು ಕಟ್ಟಿಕೊಂಡ ಇರುವೆ ಗೂಡಿಗೋ ಹೋಗಿ ಒಂದು ಗುದ್ದು ಕೊಡಿ ನೋಡೋಣ. ಸಾಯುವಂತೆ ಕಚ್ಚಿ ಕಳಿಸುತ್ತವೆ. ಇವೆಲ್ಲ ನಿಮಗೆ ಹಿಂಸೆಯಂತೆ ಕಾಣುವುದೇನು? “Struggle For Existence” ಎಂದು ಡಾರ್ವಿನ್ ಹೇಳಿದ್ದು ಇಂಥವಕ್ಕೇ!

ಮತ್ತಷ್ಟು ಓದು »

21
ಮಾರ್ಚ್

ದೆವ್ವಗಳ ಊರಿನಲ್ಲಿ

– ರಾಕೇಶ್ ಶೆಟ್ಟಿ

Kuldhara-Source-musetheplace.com_Most Haunted Places in India ಎನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ರಾಜಸ್ಥಾನದಲ್ಲಿರುವ ಬಾಂಗ್ರಾ ಕೋಟೆ.

ಬಾಂಗ್ರಾ ಕೋಟೆಯಲ್ಲಿ ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತದ ನಂತರ ಯಾರಿಗೂ ಪ್ರವೇಶವಿಲ್ಲ ಎಂಬ ಬೋರ್ಡನ್ನು ಭಾರತೀಯ ಪುರಾತತ್ವ ಇಲಾಖೆಯೇ ತಗುಲಿಹಾಕಿದೆಯಂತೆ. ಈ ಎಚ್ಚರಿಕೆಯನ್ನು ಮೀರಿ ಸೂರ್ಯಾಸ್ತದ ನಂತರ ಕೋಟೆಯಲ್ಲಿಯೇ ಉಳಿಯಲೆತ್ನಿಸಿದವರು ಮರಳಿಬಂದಿಲ್ಲವೆಂಬುದು ಅಲ್ಲಿನ ಗ್ರಾಮಸ್ಥರ ಅಂಬೋಣ. ಸತ್ಯವೋ,ಸುಳ್ಳೋ ಗೊತ್ತಿಲ್ಲ. ಈ ಭೂತದ ಕೋಟೆಯ ಹಿಂದೆ ಎರಡು ಮೂರು ಕತೆಗಳಿವೆ. ಮತ್ತಷ್ಟು ಓದು »