ಯಕ್ಷಗಾನ ಕರಾವಳಿಯ ಜನರ ತಲೆಕೆಡಿಸಿ ವಾತಾವರಣ ಕಲುಷಿತಗೊಳಿಸಿದೆಯೇ?
ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
ಈ ಪ್ರಶ್ನೆ ಬಂದಿದ್ದು ತಮ್ಮನ್ನು ತಾವು ಮಹಾನ್ ಲೇಖಕ ಎಂದು ಬಿಂಬಿಸಿಕೊಂಡು ಪ್ರಚಾರಕ್ಕಾಗಿ ಹಾತೊರೆಯುವ ವ್ಯಕ್ತಿಯೊಬ್ಬನ ಪೇಸ್ಬುಕ್ ಗೋಡೆ ಬರಹದಿಂದಾಗಿ. ಕೆಲವರು ತಾನು ಬರೆದ ಕೆಲ ಪುಸ್ತಕಗಳಿಗೆ ಬಿಟ್ಟಿ ಪ್ರಚಾರಕೊಡಲು ಅಥವಾ ಅವಾರ್ಡು ಬಾಚಿಕೊಳ್ಳಲು ಮುಖ್ಯ ಅಸ್ತ್ರವಾಗಿ ಬಳಸುವುದು ಹಿಂದೂ ಧರ್ಮ ಅಥವಾ ಈ ನೆಲದ ಕಲೆ, ಸಂಸ್ಕೃತಿಯ ಅವಹೇಳನ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಅದೇ ರೀತಿ ಅದಕ್ಕೆ ಪೂರಕವಾದ ಧೋರಣೆ ಹೊಂದಿರುವ ಸರಕಾರವೂ ಇರುವುದರಿಂದ ಇದು ಅವರನ್ನು ಮೆಚ್ಚಿಸುತ್ತೆ . ಧಾರ್ಮಿಕ ಭಾವನೆಯನ್ನು ಕೆರಳಿಸಿ ಪ್ರಚಾರ ಪಡೆಯುವುದು ಬಹಳ ಸುಲಭದ ದಾರಿ .ಯಾಕೆಂದರೆ ಮೊನ್ನೆ ತಾನೆ ಪ್ರೊಫೆಸರ್ ಭಗವಾನರು ಮಾಡಿದ್ದು ಇದನ್ನೇ ,ಇಲ್ಲದೇ ಹೋದಲ್ಲಿ ಅತ್ಯಂತ ಕೆಟ್ಟದಾಗಿ ಅನುವಾದ ಮಾಡಿದ ಲೇಖಕನೊಬ್ಬನಿಗೆ ಪ್ರಶಸ್ತಿ ಬರುವುದು ಸಾಧ್ಯವಿತ್ತೇ? ಇರಲಿ ಬಿಡಿ ಇಲ್ಲಿ ಋಣಾತ್ಮಕ ವಿಚಾರಗಳಿಗೆ ಮಹತ್ವ ಜಾಸ್ತಿನೇ ಸಿಗೋದು ಆದರೆ ಕರಾವಳಿಯ ಗಂಡುಕಲೆ ಯಕ್ಷಗಾನದ ಬಗೆಗಿನ ಮೂರ್ಖತನದ ಹೇಳಿಕೆಗೆ ಪ್ರತಿಕ್ರಿಯೆ ಕೊಡಬೇಕೆನಿಸಿತು.ಯಾಕೆಂದರೆ ನಾನೊಬ್ಬ ಯಕ್ಷಗಾನದ ಅಭಿಮಾನಿ.
ನನ್ನ ಊರು ಕೊಣಾಜೆ, ನನ್ನ ಮನೆಯ ಪಕ್ಕದಲ್ಲಿ ವರ್ಷಂಪ್ರತಿ ಯಕ್ಷಗಾನ ನಡೆಯುತ್ತೆ. ಅದನ್ನು ನಡೆಸುವುದು ದುರ್ಗಾಪರಮೇಶ್ವರಿ ಸೇವಾ ಸಮಿತಿಯವರು ಅಲ್ಲಿರುವ ಸದಸ್ಯರು ಎಲ್ಲರೂ ಸೇರಿ ದುಡ್ಡು ಹಾಕಿ ಆ ಯಕ್ಷಗಾನ ನಡೆಸುವಂತದ್ದು. ಆ ಸಮಿತಿಯಲ್ಲಿ ೬೦ ಜನ ಹಿಂದೂಗಳ ಜೊತೆ ಮೂರು ಮಂದಿ ಮುಸ್ಲಿಂ ಸದಸ್ಯರು ಸೇರಿ, ನಮ್ಮ ಜೊತೆ ಕೂಡಿಕೊಂಡು ಕೆಲಸ ಮಾಡಿ ಯಕ್ಷಗಾನ ಮಾಡಿಸುವುದು ಹಲವು ವರ್ಷದಿಂದ ನಡೆದುಕೊಂಡು ಬಂದದ್ದು .ಇದೇ ರೀತಿ ಮಂಗಳೂರು ನಗರಭಾಗದಲ್ಲಿ ಕ್ರಿಶ್ಚನ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ವರು ಅತೀ ವೈಭವಯುತವಾಗಿ ನಡೆಸುವ ಯಕ್ಷಗಾನವು ಕೂಡಾ ಕರಾವಳಿಯ ಸೌಹಾರ್ದತೆಗೆ ಹಿಡಿದ ಕನ್ನಡಿ. ಆಟ ನಡೆಯುವ ಬಯಲಿನಲ್ಲಿ ವ್ಯಾಪಾರಿಗಳು ನಡೆಸುವ ಬುರ್ಜಿ ,ಸುಕುನಪ್ಪ ,ನೈಯಪ್ಪ ,ಸೋಜಿ ,ಕುರ್ಲಾರಿ ಮಾರಾಟದಲ್ಲಿ ಅನ್ಯಮತೀಯರೇ ಜಾಸ್ತಿ .ಇಲ್ಲಿ ಯಾವ ವಾತಾವರಣ ಹೇಗೆ ಕಲುಷಿತ ವಾಯಿತು ? ಎಂದು ಆ ‘ಲೇಖಕ’ರೇ ಹೇಳಬೇಕು
ಅಂಬಿಕಾತನಯದತ್ತರ “ ಬೆಳಗು” – ಶ್ರೀ ಅರವಿಂದರ “ ಚಿನ್ಮಯದ ಆತ್ಮದೀಪ ”
– ಪುಟ್ಟು ಕುಲಕರ್ಣಿ,ಕುಮಟಾ
ವರಕವಿ ಅಂಬಿಕಾತನಯದತ್ತರು , ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾಡಿದ ಭಾಷಣದಲ್ಲಿ ಒಂದು ಸಾಲು ಹೀಗಿದೆ, ‘ ನನ್ನ “ಬೆಳಗು” ಮತ್ತು “ಹಕ್ಕಿ ಹಾರುತಿದೆ” ಕವನಗಳನ್ನು ಮುಗ್ಧ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಲಾಗುತ್ತಿದೆ. ಆದರೆ ಅದನ್ನು ಕಲಿಸುತ್ತಿರುವ ಶಿಕ್ಷಕರು ಆ ವಿದ್ಯಾರ್ಥಿಗಳಿಗಿಂತ ಮುಗ್ಧರಾಗಿದ್ದಾರೆ….. “ . ಈ ಸಾಲುಗಳನ್ನು ಓದಿದಾಗ , ಇಲ್ಲಿಯವರೆಗೂ “ಬೆಳಗು” ಕವನದ ಬಗೆಗೆ ಬಂದ ವಿಶ್ಲೇಷಣೆಗಳ ಕುರಿತು ಕವಿಗೆ ತೃಪ್ತಿ ಇಲ್ಲವೆಂದು ತೋರುತ್ತಿದೆ. ಹಾಗಾದರೆ ಈ “ಬೆಳಗು” ಮತ್ತು “ಹಕ್ಕಿ ಹಾರುತಿದೆ ನೋಡಿದಿರಾ” ಕವನಗಳನ್ನು ಬೇರೊಂದು ಆಯಾಮದಿಂದ ವಿಶ್ಲೇಷನೆ ಮಾಡಬೇಕೆ? ಹಾಗಿದ್ದಲ್ಲಿ ಅದಕ್ಕೆ ಇರುವ ಮಾನಕಗಳೇನು? ಯಾವ ಅಥವಾ ಯಾರ ಪ್ರಭಾವದಲ್ಲಿ ಈ ಕವನಗಳು ರೂಪಿತಗೊಂಡಿವೆ? ಬೌದ್ಧಿಕ ಹಂತದ ಶಬ್ದಜಾಲದ ಹೊರತಾಗಿಯೂ , ಪ್ರಜ್ಞಾ ವಲಯದ ಆಚೆಯಲ್ಲಿ ಸಾಗಿ ಅನಂತಾನಂತದ ಜೊತೆಗೆ ಜೋಡಣೆಯಾಗಬಲ್ಲ ಅನೂಹ್ಯವಾದದು ಏನಾದರೂ ಇಲ್ಲಿ ಹೇಳಲ್ಪಡುತ್ತಿದೆಯೋ?
ಇಲ್ಲಿರುವ ಶಬ್ದಮಾಧುರ್ಯದ ಆಚೆ ಇರುವ “ ಏನನ್ನೋ” ಕವಿ ಈ “ಬೆಳಗು” ಕವನದಲ್ಲಿ ಅಡಗಿಸಿದ್ದಾನೆ. ಈ “ಬೆಳಗು” ಕೇವಲ ನಾಮಪದವೋ, ಕ್ರಿಯಾಪದವೋ ಅಥವಾ ವಿಶೇಷಣವೋ ಅಥವಾ ಎಲ್ಲವೂ ಆಗಿ ಅರ್ಥಗರ್ಭಿತವಾಗಿದೆಯೋ?
“ಬೆಳಗು” ನಾಮಪದವಾಗಿ ಉಷೆಯ ಕಾಲವೆಂದು ಸರ್ವವಿದಿತ. ಆದರೆ ಅದೇ ಬೆಳಗು ಕ್ರಿಯಾಪದವಾಗಿ ಹೊಳೆ, ಆರತಿಯೆತ್ತು ಎನ್ನುವ ಅರ್ಥವನ್ನೂ ಹೇಳುತ್ತಿದೆ. ಹೊಳೆಯುವ , ಮಿನುಗುವ ವಿಶೇಷಣದಲ್ಲೂ ಸಹಿತ ಮಿಂಚುತ್ತಿದೆ. ಹಾಗಾದರೆ ಇಲ್ಲಿರುವ ಬೆಳಗು ಯಾವುದು? ಚುಮುಚುಮು ಬೆಳಗೇ? ಪೆರ್ವೆಳಗೆ ? ಬಳ್ಳಿವೆಳಗೆ ? ಬೆರಕೆವೆಳಗೆ? ಬೆಳ್ವೆಳಗೆ? ಹೀಗೆ ಹತ್ತಾರು ಹಂತದ ಪ್ರಶ್ನೆಗಳನ್ನು ನಿಲ್ಲಿಸುತ್ತಿದೆ. ಬೆಳಗೊಂದಿಸು ಎನ್ನುವದಕ್ಕೆ ಕಾಂತಿಗೊಳಿಸು ಎನ್ನುವ ಅರ್ಥವೂ ಇದೆ ಈ ಎಲ್ಲ ಹಂತದ ಸ್ವಾನುಭವವನ್ನು ಆ ಉಷೆಯ ಸಮಯದ ತೋಷದಲ್ಲಿ ಕಂಡೇ ಅನುಭವಿಸಬೇಕು. ಯಾವ ಶಬ್ದದದಲ್ಲಿ ಹೇಳಿದರೂ ಆ ಅನುಭಾವ ಸಿಕ್ಕಲಾರದು.